ಹಲ್ಲೆ ಪ್ರಕರಣ:
ನಿಂಬರ್ಗಾ ಪೊಲೀಸ್ ಠಾಣೆ: ದಿನಾಂಕ
19/11/2015 ರಂದು
ಮನೆ ಗೋಡೆ ವಿಷಯದಲ್ಲಿ 1) ಸಿದ್ದರಾಮಪ್ಪ, 2) ಸುಂದರಾಬಾಯಿ, 3) ವೀರಪ್ಪಾ , 4) ಭಾಗೀರತಿ ಇವರೆಲ್ಲರೂ ಶ್ರೀ ಸಿದ್ರಾಮಯ್ಯ ತಂದೆ ರೇವಣಯ್ಯ ಮಠಪತಿ ಸಾ: ನಿಂಬರ್ಗಾ ಮತ್ತು
ಆತನ ಹೆಂಡತಿಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೇ ಮಾಡಿ ಜೀವ ಭಯ ಪಡೆಸಿದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಕ್ರಮ ಮರಳು ಸಾಗಿಸುತ್ತಿದ್ದ ಲಾರಿಗಳ ಜಪ್ತಿ:
ಫರಹತಾಬಾದ ಪೊಲೀಸ್ ಠಾಣೆ: ದಿನಾಂಕ:22/11/2015
ರಂದು ಸಿ.ಪಿ.ಐ ಎಮ್.ಬಿ.ನಗರ ರವರು ಪೆಟ್ರೋಲಿಂಗ
ಕರ್ತವ್ಯದಲ್ಲಿದ್ದಾಗ
ರಾಷ್ಟ್ರೀಯ
ಹೆದ್ದಾರಿ 218 ರಸ್ತೆಯ ಮೇಲೆ ಜೇವರ್ಗಿ ಕಡೆಯಿಂದ ಅನದೀಕೃತವಾಗಿ ಕಳ್ಳತನದಿಂದ ಮರಳು ತುಂಬಿದ ಲಾರಿಗಳು ಬರುತ್ತಿವೆ ಅಂತಾ ಭಾತ್ಮಿ ಬಂದಿದ್ದರಿಂದ ಪಂಚರಾದ 1) ಶ್ರೀ ಖಾಜಾಸಾಬ ತಂದೆ ಖಾಸಿಂಸಾಬ ಸಾ: ಫರಹತಾಬಾದ ತಾ:ಜಿ:ಕಲಬುರಗಿ
2) ಶ್ರೀ ಅಕ್ಬರ ತಂದೆ ಹೈದರಸಾಬ ನಧಾಫ ಸಾಃ ಫರಹತಾಬಾದ ಮತ್ತು ಫರಹತಾಬಾದ ಠಾಣೆಯ ನಾಗಬೂಷಣ
ಎಎಸ್ಐ,
ಪ್ರಭು ಸಿಪಿಸಿ 366, ಮತ್ತು ಜೀಪ ಚಾಲಕ ಅರ್ಜುನ ಸಿಹೆಚ್ ಸಿ 61 ರವರೊಂದಿಗೆ ಶಹಾಬಾದ ಕ್ರಾಸ ಹತ್ತಿರ ಹೋಗಿ ದಾಳಿ ಮಾಡಿ ಅನಧಿಕೃತವಾಗಿ ಮರಳು ಸಾಗಿಸುತ್ತಿದ್ದ ಲಾರಿ 1)
ಕೆಎ-32 ಸಿ-4434 ಮತ್ತು 2) ಕೆಎ-33 ಎ-4738 ಜಪ್ತಿ ಮಾಡಿ ಲಾರಿ ಚಾಲಕರಾದ 1)ಸೈಯಾದ
ತಂದೆ ಗುಡುಸಾಬ್ ಸೇಡಂ ಸಾ:ಗಂವ್ಹಾರ ತಾ:ಜೇವರ್ಗಿ 2) ಜಾವೀದ ಪಾಶಾ ತಂದೆ ಮಸ್ತಾನಸಾಬ ಸಾ: ಜಿಲಾನಾಬಾದ ಕಲಬುರಗಿ ಇವರುಗಳ ವಿರುದ್ದ ಪ್ರಕರಣ
ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಜೂಜುಕೋರರ ಬಂಧನ:
ಚೌಕ ಪೊಲೀಸ್ ಠಾಣೆ: ದಿನಾಂಕ 22/11/2015 ರಂದು ಪಿಎಸ್ಐ ಚೌಕ
ಪೊಲೀಸ್ ಠಾಣೆ ರವರು ಸಿಟಿ ಬಸ್ಸ್ ನಿಲ್ದಾಣ ಎದುರಗಡೆ ಇರುವ ಪಾಲ್
ಕಾಂಪ್ಲೇಕ್ಸ್ ಎದುರುಗಡೆ ಇರುವ
ಸಾರ್ವಜನಿಕ
ರಸ್ತೆಯ ದೀಪದ ಬೆಳಕಿನ ಖುಲ್ಲಾ ಸ್ಥಳದಲ್ಲಿ ಜೂಜಾಟ ಆಡುತ್ತಿದ್ದ 15 ಜನರನ್ನು ಠಾಣೆಯ ಸಿಬ್ಬಂದಿ ಜನರೊಂದಿಗೆ ದಾಳಿ ಮಾಡಿ
ಅವರನ್ನು ದಸ್ತಗೀರ ಮಾಡಿ ಜೂಜಾಟದಲ್ಲಿ ಪಣಕ್ಕಿಟ್ಟಿದ್ದ ನಗರದು ರೂ
14,570 ಮತ್ತು 52
ಇಸ್ಪೇಟ ಎಲೆಗಳು ಜಪ್ತಿ ಮಾಡಿ ಜೂಜಾಟದಲ್ಲಿ ತೊಡಗಿದ್ದವರ ವಿರುದ್ದ ಚೌಕ ಪೊಲೀಸ್ ಠಾಣೆಯಲ್ಲಿ
ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಜೂಜುಕೋರರ ಬಂಧನ:
ಶಹಾಬಾದ ನಗರ ಠಾಣೆ: ದಿಃ 22.11.2015 ರಂದು ಪಿಐ ಶಹಾಬಾದ ರವರು ಶಹಾಬಾದ ನಗರದ ಬಸವೆಶ್ವರ
ನಗರದ ರಂಗನಾಥ ಪಾಲೀಶ ಮಶೀನ ಎದುರು ಸಾರ್ವಜನಿಕ ಸ್ಥಳದಲ್ಲಿ ಇಸ್ಪೆಟ ಜೂಜಾಟದಲ್ಲಿ ತೊಡಗಿದ್ದ ಜೂಜುಕೋರರ
ಮೇಲೆ ಠಾಣೆಯ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಜೂಜಾಟದಲ್ಲಿ ತೊಡಗಿದ್ದ 14 ಜನರನ್ನು
ದಸ್ತಗೀರ ಮಾಡಿ ಜೂಜಾಟದಲ್ಲಿ ತೊಡಗಿಸಿದ್ದ ನಗದು ರೂ 15,110/- ಹಾಗೂ
52 ಇಸ್ಪೆಟ ಎಲೆಗಳು ಜಪ್ತಿ
ಪಡಿಸಿಕೊಂಡು
ಆರೋಪಿತರ ವಿರುದ್ದ ಶಹಾಬಾದ ನಗರ ಠಾಣೆಯಲ್ಲಿ ಪ್ರಕರಣ
ದಾಖಲಿಸಿ ತನಿಖೇ ಕೈಕೊಂಡಿರುತ್ತಾರೆ.