POLICE BHAVAN KALABURAGI

POLICE BHAVAN KALABURAGI

07 June 2012

GULBARGA DIST


:: ಪತ್ರಿಕಾ ಪ್ರಕಟಣೆ ::

       ಮಾನ್ಯ ಸರ್ವೋಚ್ಚ ನ್ಯಾಯಾಲಯವು ದಿನಾಂಕ:27-04-2012 ರಂದು ನೀಡಿದ ತಿರ್ಪಿನಂತೆ, ದೇಶದಲ್ಲಿ ಹೆಚ್ಚುತ್ತಿರುವ ಘೋರ ಅಪರಾಧಗಳ ಕುರಿತಂತೆ ವಾಹನಗಳ ಗಾಜುಗಳಿಗೆ ಬ್ಲ್ಯಾಕ್ ಪೀಲ್ಮನ್ನು ಉಪಯೋಗಿಸುವದು ಮೋಟಾರು ವಾಹನ ನಿಯಮ 1989 ರ ಅಡಿಯಲ್ಲಿ ಕಾನೂನಿಗೆ ವಿರುದ್ದವಾಗಿದ್ದು, ವಾಹನಗಳ ಮುಂಭಾಗ ಮತ್ತು ಹಿಂಭಾಗ ಹಾಗೂ ಎರಡು ಬದಿಯ ಗಾಜುಗಳಿಗೆ ಅನುಕ್ರಮವಾಗಿ 70% ಮತ್ತು 50% ಪಾರದರ್ಶಕತೆ ಹೊಂದಿರಬೇಕು. ಮತ್ತು ವಾಹನಗಳ ಗಾಜುಗಳ ಮೇಲೆ ಬ್ಲ್ಯಾಕ್ ಫೀಲ್ಮನ್ನು (ಸನ್ ಪೀಲ್ಮ ) ಅಥವಾ ಇತರೆ ವಸ್ತುಗಳನ್ನು ಅಂಟಿಸುವಂತಿಲ್ಲ ಎಂಬುದಾಗಿ ಆದೇಶಿಸಿರುವದಲ್ಲದೇ, ವಾಹನಗಳ ಗಾಜುಗಳ ಮೇಲೆ ಬ್ಲ್ಯಾಕ್ ಪೀಲ್ಮ ಅಂಟಿಸಿದಲ್ಲಿ ಅಥವಾ  ಮೇಲೆ ತಿಳಿಸಿದ ಗುಣಮಟ್ಟಕಿಂತ ಕಡಿಮೆ ಪಾರದರ್ಶಕತೆಯನ್ನು ಹೊಂದಿರುವ ಗಾಜುಗಳನ್ನು ಅಳವಡಿಸಿಕೊಂಡಿದಲ್ಲಿ, ಅಂತಹ ವಾಹನಗಳ ಮಾಲಿಕರ ವಿರುದ್ದ ನಿಯಾಮನುಸಾರ ದಂಡ ವಸೂಲಿ ಮಾಡುವದಲ್ಲದೇ, ನೊಂದಣಿ ಪುಸ್ತಕ (ಆರ್.ಸಿ ಪುಸ್ತಕ) ಅಮಾನತ್ತುಗೊಳಿಸಲು ಸಹ ಮೋಟಾರು ವಾಹನ ನಿಯಮ 1989 ರ ಅಡಿಯಲ್ಲಿ ಕ್ರಮ ಕೈಕೊಳ್ಳಲು ಮಾನ್ಯ ಉಚ್ಚ ನ್ಯಾಯಾಲಯವು ರಿಟ್ ಪೆಟಿಷನ್ (ಸಿವಿಲ್ ) ಸಂಖ್ಯೆ:265/2012 ರಲ್ಲಿ ಕಟ್ಟು ನಿಟ್ಟಾಗಿ ಕ್ರಮ ಕೈಕೊಳ್ಳಲು ಆದೇಶಿಸಿರುವದು.
        ಮಾಹನಗಳ ಮಾಲಿಕರು ಇನ್ನು ಮುಂದೆ ದಿನಾಂಕ:19-06-2012 ರೊಳಗಾಗಿ ತಮ್ಮ ವಾಹನಗಳ ಗಾಜುಗಳಿಗೆ ಅಂಟಿಸಿದ ಬ್ಲ್ಯಾಕ್ ಪೀಲ್ಮ ಗಳನ್ನು ತೆಗದು ಹಾಕಬೇಕು. ಮತ್ತು ದಿನಾಂಕ: 20-06-2012 ರಿಂದ ಪೋಲೀಸ್ ಹಾಗು ಸಾರಿಗೆ ಇಲಾಖೆ ಯವರಿಂದ ಜಂಟಿಯಾಗಿ ಮೋಟಾರು ವಾಹನ ಕಾಯಿದೆ 1988 ಹಾಗೂ ನಿಯಮ 1989 ರ ಅಡಿಯಲ್ಲಿ ಪ್ರವರ್ತನ ಕಾರ್ಯ ಕೈಕೊಂಡು ತಪ್ಪಿಸ್ಥರ ವಿರುದ್ದ ಕಾನೂನ್ವಯ ದಂಡ ವಿಧಿಸುವದಲ್ಲದೇ, ಅಂತಹ ವಾಹನಗಳ ನೊಂದಣಿ ಪುಸ್ತಕ ಸಹ ಅಮಾನತ್ತುಗೊಳಿಸಲಾಗುವದೆಂದು, ಶ್ರೀ ಪ್ರವೀಣ ಮಧುಕರ ಪವಾರ ಐಪಿಎಸ ಜಿಲ್ಲಾ ಪೊಲೀಸ್ ಅಧೀಕ್ಷಕರು, ಗುಲಬರ್ಗಾ ರವರು ಮತ್ತು ಶ್ರೀ ಈಶ್ವರ ಬಿ. ಅವಟಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಗುಲಬರ್ಗಾ ರವರು ಜಂಟಿಯಾಗಿ ಪತ್ರಿಕಾ ಪ್ರಕಟಣೆ ನೀಡಿರುವರು. 

GULBARGA DIST


ಗುಲಬರ್ಗಾ  ಜಿಲ್ಲಾ ಪೊಲೀಸ್ ರ ಕಾರ್ಯಚರಣೆ, ಆಳಂದ ತಾಲೂಕಿನ ದಲಿತ ಮುಖಂಡ ನಾಗೇಶ ಸಿಂಗೆ ಇತನನ್ನು ಕೊಲೆ ಮಾಡಿದ 9 ಜನ ಆರೋಪಿಗಳ ಬಂದನ:
ಶ್ರೀಮತಿ, ಸೀತಾಬಾಯಿ ಗಂಡ ನಾಗೇಶ ಅಲಿಯಾಸ ನಾಗೇಂದ್ರ ಸಿಂಗೆ ಸಾ||ಬಂಗರಗಾ ತಾ|| ಆಳಂದರವರು,  ನನ್ನ ಗಂಡ ನಾಗೇಶ @ ನಾಗೇಂದ್ರ ಇತನು ರುದ್ರವಾಡಿ ಗ್ರಾಮ ಪಂಚಾಯತಿಯಲ್ಲಿ ಪಂಪ ಅಪರೇಟರ ಅಂತ ಕೆಲಸ ಮಾಡುತ್ತಿದ್ದಾಗ ದಿನಾಂಕ:28-05-2012 ರಂದು ಪಂಪದಿಂದ ನೀರು ಬಿಡಲು ಹೋದಾಗ ತಮ್ಮ ಗ್ರಾಮದ ಧರ್ಮರಾಯ ಮತ್ತು ಸುಭಾಶ ಇವರು  ಅಪಹರಣ ಮಾಡಿರಿಬಹುದು ಅಂತಾ ಆಳಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.ಶ್ರೀ ಪ್ರವೀಣ ಮಧುಕರ ಪವಾರ ಐಪಿಎಸ ಪೊಲೀಸ್ ಅಧೀಕ್ಷಕರು, ಗುಲಬರ್ಗಾ ರವರು ಈ ಪ್ರಕರಣವನ್ನು ಬೇದಿಸಿ ಪತ್ತೆ ಹಚ್ಚಲು ಒಂದು ವಿಶೇಷ ತನಿಖಾ ತಂಡವನ್ನು ರಚಿಸಿದ್ದು, ಹಾಗು ಶ್ರೀ ಕಾಶಿನಾಥ ತಳಕೇರಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರವರ ಮಾರ್ಗದರ್ಶನದಲ್ಲಿ, ತನಿಖಾ ತಂಡದ ನೇತ್ರತ್ವವನ್ನು ಶ್ರೀ ಎಸ್.ಬಿ. ಸಾಂಬಾ ಡಿ.ಎಸ್.ಪಿ. ಆಳಂದ ಉಪ ವಿಭಾಗ, ಶ್ರೀ ರಾಜೇಂದ್ರ ಸಿ.ಪಿ.ಐ. ಅಫಜಲಪೂರ ವೃತ್ತ, ಶ್ರೀ ಹಾಲೇಶ ಪಿ.ಎಸ್.ಐ. ಆಳಂದ ಠಾಣೆ, ಶ್ರೀ ವಿನಾಯಕ ಪಿ.ಎಸ್.ಐ. ನರೋಣಾ ಠಾಣೆ ಮತ್ತು ಶ್ರೀ ಎಸ್.ಎಸ್. ದೊಡ್ಡಮನಿ ಪಿ.ಎಸ್.ಐ. ನಿಂಬರ್ಗಾ ಠಾಣೆ ರವರು ಈ ಪ್ರಕರಣವನ್ನು ಬೇದಿಸುವಲ್ಲಿ ಯಶ್ವಸಿಯಾಗಿದ್ದು, ಈ ಕೆಳಕಂಡ 9 ಜನ ಆರೋಪಿತರನ್ನು ದಸ್ತಗಿರಿ ಮಾಡಿರುತ್ತಾರೆ,  ಆರೋಪಿತರಾದ ಧರ್ಮರಾಯ ತಂದೆ ಗುರುಲಿಂಗಪ್ಪಾ ಚಿಚಕೋಟಿ,ಅರುಣ ತಂದೆ ಗುರುಲಿಂಗಪ್ಪಾ ಚಿಚಕೋಟಿ, ಸತೀಶ ತಂದೆ ಧರ್ಮರಾಯ ಚಿಚಕೋಟಿ,ನಿತೀಶ ತಂದೆ ಧರ್ಮರಾಯ ಚಿಚಕೋಟಿ,ಪರಮೇಶ್ವರ ತಂದೆ ಶರಣಪ್ಪಾ ಜಮಾದಾರ,ಸುಭಾಶ ತಂದೆ ಬಾಪುರಾವ ಚಿಚಕೋಟಿ, ಬಂಡೇಶ ತಂದೆ ದೂಳಪ್ಪಾ ಜಿಡಗೆ, ಶಿವಕುಮಾರ ತಂದೆ ಬಸವರಾಜ ಸಂಗೋಳಗಿ, ಬರಮಾಲಿಂಗ ತಂದೆ ಶರಣಪ್ಪಾ ಖಜೂರಿ ಸಾ|| ಎಲ್ಲರೂ ಬಂಗರಗಾ ಗ್ರಾಮದವರಾಗಿರುತ್ತಾರೆ. ಆರೋಪಿತರು  ನಾಗೇಶ  @ ನಾಗೇಂದ್ರ ತಂದೆ ಬಾಪುರಾವ ಸಿಂಗೆ ಇವನು ಪ್ರತಿಯೊಂದು ತಮ್ಮ ಕೆಲಸಕ್ಕೆ ವಿರೋಧಿಸುತ್ತಿದ್ದು, ಮತ್ತು ಇವರಲ್ಲಿ ಕೆಲವು ಆರೋಪಿತರು ಹರಿಜನ ಓಣಿಯ ಕೆಲವು ಹೆಣ್ಣುಮಕ್ಕಳೊಂದಿಗೆ ಸಂಬಂಧ ಇಟ್ಟ ಬಗ್ಗೆ ಇದಕ್ಕೆ ಮೃತ ನಾಗೇಶ ಇವನು ಪ್ರತಿಭಟಿಸುತ್ತಿದ್ದರಿಂದ ಕೊಲೆ ಮಾಡುವ ಸಲುವಾಗಿ ಸಂಚು ರೂಪಿಸಿ ಬಲತ್ಕಾರವಾಗಿ ಅಪಹರಣ ಮಾಡಿ ಕೊಲೆ ಮಾಡಿ ಶವವನ್ನು ಕರ್ನಾಟಕ ಮತ್ತು ಆಂದ್ರ ಗಡಿಯಲ್ಲಿರುವ ಬೀದರ ಜಿಲ್ಲೆಯ ಭೀಮಳಖೇಡ ಠಾಣೆ ವಾಪ್ತಿಯ ಕಾಯ್ದಿಟ್ಟ ಆರಣ್ಯದಲ್ಲಿ ಬಿಸಾಡಿರುತ್ತಾರೆ.  ತನಿಖಾ ತಂಡದ ಅಧಿಕಾರಿಗಳ ಕಾರ್ಯವನ್ನು ಶ್ರೀ ಪ್ರವೀಣ ಮಧುಕರ ಪವಾರ ಐಪಿಎಸ ಪೊಲೀಸ್ ಅಧೀಕ್ಷಕರು ಗುಲಬರ್ಗಾ ರವರು ಪ್ರಶಂಷಿಸಿ ಸೂಕ್ತ ಬಹುಮಾನವನ್ನು ಘೋಷಿಸಿರುತ್ತಾರೆ

GULBARGA DIST REPORTED CRIMES


ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ:ಶ್ರೀ ಬ್ರಹ್ಮಾನಂದ ತಂದೆ ಗುರುಶಾಂತಪ್ಪ ಧನ್ನಿಕರ ಸಾ: ಯಳವಂತಗಿ (ಕೆ) ಗ್ರಾಮ ತಾ||ಜಿ||ಗುಲಬರ್ಗಾ ರವರು ನಾನು ಮತ್ತು ನನ್ನ ಗೆಳೆಯನಾದ ಬಾಬುರಾವ ಮತ್ತುಅಣವೀರಪ್ಪಾ ಮೂವರು ಕೂಡಿಕೊಂಡು ಪಟ್ಟಣ ಕ್ರಾಸ ಹತ್ತಿರ ದಿನಾಂಕ. 06-6-2012 ರಂದು 1 ಮಧ್ಯಾಹ್ನ 1-00 ಗಂಟೆಗೆ ಮಾವಿನ ಹಣ್ಣು ಖರೀದಿ ಮಾಡುತ್ತಿದ್ದಾಗ ಗುಲಬರ್ಗಾ ಕಡೆಯಿಂದ ಕಾರ ಕೆಎ 32 ಬಿ-4464 ಚಾಲಕ ಅತೀವೇಗವಾಗಿ ನಡೆಸುತ್ತಾ ಬಂದು ಮಾವಿನ ಹಣ್ಣು ಖರೀದಿ ಮಾಡುತ್ತಿದ್ದ ನನಗೆ ಮತ್ತು ನನ್ನ ಗೆಳೆಯರಿಗೆ ಹಾಗೂ ಮಾವಿ ಬಂಡಿಗೆ ಮತ್ತು ಪಾನ ಡಬ್ಬಿಗೆ ಡಿಕ್ಕಿ ಹೊಡೆದು ರಕ್ತಗಾಯ ಮತ್ತು ಗುಪ್ತಗಾಯ ಪಡಿಸಿ ಓಡಿ ಹೋಗಿರುತ್ತಾನೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:187/12 ಕಲಂ 279,337,  ಐಪಿಸಿ ಸಂಗಡ 187 ಐಎಂವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ :ಶ್ರೀ ಕುಮಾರ ಸ್ವಾಮಿ ತಂದೆ ಮನ್ಮಥಯ್ಯಾ ಸ್ವಾಮಿ   ಉ:ಖಾಸಗಿ ಇಂಜನಿಯರ ಕೆಲಸ ಸಾ: ಕ್ರಿಷ್ಣಾ ನಗರ ಗುಲಬರ್ಗಾರವರು  ನಾನು ದಿನಾಂಕ 06-06-12 ರಂದು ಮದ್ಯಾಹ್ನ 3-00 ಗಂಟೆ ಸುಮಾರಿಗೆ ಲಾಹೋಟಿ ಪೆಟ್ರೋಲ್  ಬಂಕದಿಂದ ಐವಾನ ಈ ಶಾಹಿ ರೋಡಿನಲ್ಲಿ ಬರುವ ಹುಡಗಿಯರ ಹಾಸ್ಟೇಲ ಹತ್ತಿರ ರೋಡಿನ ಮೇಲೆ ನನ್ನ ಮೋಟಾರ ಸೈಕಲಗೆ ಕಾರ ನಂ:ಕೆಎ-32ಎಮ್-9473 ನೇದ್ದರ ಚಾಲಕ ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿ  ಭಾರಿಗಾಯಗೊಳಿಸಿ ಕಾರ ಸಮೇತ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 64/2012 ಕಲಂ 279, 338 ಐಪಿಸಿ ಸಂಗಡ 187 ಐ.ಎಮ.ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ