POLICE BHAVAN KALABURAGI

POLICE BHAVAN KALABURAGI

08 June 2017

Kalaburagi District Reported Crimes

ಕೊಲೆ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ 05/06/17 ರಂದು ರಾತ್ರಿ 08-00 ಗಂಟೆಯಿಂದ ದಿನಾಂಕ 07/06/17 ರಂದು ಸಂಜೆ 06-00 ಗಂಟೆ ಮಧ್ಯದ ಅವಧಿಯಲ್ಲಿ ಯಾರೋ ಅಪರಿಚಿತರು ಫಿರ್ಯಾದಿ  ತಮ್ಮ ಶ್ರೀಕಾಂತ @ ಪಿಂಟು ಮತ್ತು  ಅವನ ಗೆಳೆಯ ಆಕಾಶ ಜಮಾದಾರ ಇವರಿಬ್ಬರಿಗೆ ಪುಸಲಾಯಿಸಿ ಯಾವುದೋ ಒಂದು ಬಲವಾದ ಕಾರಣದಿಂದ ಮತ್ತು ಯಾವುದೋ ದುರದ್ದೇಶದಿಂದ ಅವರಿಬ್ಬರಿಗೆ ಕೊಲೆ ಮಾಡಬೇಕೆಂದು ಸೈಯ್ಯದ ಚಿಂಚೋಳಿ ಕ್ರಾಸ ದಾಟಿ ಇರುವ ತಾಜ ಸುಲ್ತಾನಪೂರ ಸೀಮಾಂತರದಲ್ಲಿ ಬರುವ ಒಂದು ಮಣ್ಣು ಕೆದರಿದ ತಗ್ಗು ಪ್ರದೇಶದಲ್ಲಿ  ಹೇಗೋ ಕರೆದುಕೊಂಡು ಹೋಗಿ ನನ್ನ ತಮ್ಮ ಶ್ರೀಕಾಂತನ  ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಮತ್ತು ಕುತ್ತಿಗೆ ಕೊಯಿದು ಕೊಲೆ ಮಾಡಿದ್ದು. ಮತ್ತು ಆಕಾಶ ಜಮಾದಾರ ಇತನಿಗೂ  ಕೂಡಾ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಸಾಕ್ಷಿ ಪುರಾವೆಗಳು ನಾಶಪಡಿಸುವ ಉದ್ದೇಶದಿಂದ  ಮುಖ ಗುರುತು ಸಿಗದಂತೆ ಕಲ್ಲಿನಿಂದ ಜಜ್ಜಿ ಗುರುತು ಹಾಳು ಮಾಡಿರುತ್ತಾರೆ. ಕಾರಣ ನನ್ನ ತಮ್ಮ ಶ್ರೀಕಾಂತ ಮತ್ತು ಆಕಾಶ ಜಮಾದಾರ ಇವರಿಗೆ ಕೊಲೆ ಮಾಡಿದ ಆರೋಪಿತರನ್ನು ಪತ್ತೆ ಹಚ್ಚಿ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಶ್ರೀ ಶಿವಾನಂದ ಅಷ್ಟಗಿ ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ನೆಲೋಗಿ ಠಾಣೆ : ದಿನಾಂಕ: 7/06/2017 ರಂದು. ಮಾವನೂರ  ಗ್ರಾಮದ ದ್ಯಾವಮ್ಮ  ಗುಡಿಯ  ಹತ್ತಿರ ಒಬ್ಬನು ಕುಳಿತು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಡುತ್ತಾನೆ ಅಂತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ನೇಲೋಗಿ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಮಾವನೂರ ಗ್ರಾಮದ ದ್ಯಾವಮ್ಮ ಗುಡಿಯ  ಹತ್ತಿರ ಹೋಗಿ ನೋಡಲಾಗಿ ಅಲ್ಲಿ ಒಬ್ಬನು  ಗುಡಿಯ ಕಟ್ಟೆಯ ಮೇಲೆ ಕುಳಿತು  ಸಾರ್ವಜನಿಕರಿಂದ ಹಣ ಪಡೆದು ಒಂದು ರೂಪಾಯಿಗೆ 80 ರೂಪಾಯಿ ಬರುತ್ತವೆ ಅಂತ ಒದರಿ ಹೇಳುತ್ತಿರುವಾಗ ನಾವು ಹೋಗಿ ಹಿಡಿದು ಅವನ ಹೆಸರು ವಿಚಾರಿಸಲಾಗಿ ಮಲ್ಲಕಾರ್ಜುನ ತಂದೆ ನಿಜಲಿಂಗಯ್ಯ ಹಿರೇಮಠ  ಸಾ|| ಮಾವನೂರ  ಅಂತ ಹೇಳಿದನು ಅವನ ಹತ್ತಿರ 420/-ರೂ ಮತ್ತು ಮಟಕಾ ಬರೆದ ಚೀಟಿ ಒಂದು ಬಾಲ ಪೆನ್ನ ವಶಪಡಿಸಿಕೊಂಡು ಸದರಿಯವನೊಂದಿಗೆ ನೆಲೋಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.