POLICE BHAVAN KALABURAGI

POLICE BHAVAN KALABURAGI

11 May 2015

KALABURAGI DISTRICT REPORTED CRIMES.

ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧಣ :
ಸ್ಟೇಷನ ಬಜಾರ ಠಾಣೆ : ದಿನಾಂಕ 09-05-2015  ರಂದು ಸ್ಟೇಷನ ಏರಿಯಾದ ಕನಕ ಲಾಡ್ಜ ಪಕ್ಕದಲ್ಲಿ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ಇಸ್ಪೆಟ್ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ  ಶ್ರೀ ರಾಜಶೇಖರ ಹಳಿಗೋಧಿ ಪಿ.ಐ ಸ್ಟೇಷನ ಬಜಾರ  ಕಲಬುರಗಿ ಮತ್ತು ಎಸ್.ಎಸ್. ದೊಡ್ಡಮನಿ ಪಿ.ಎಸ್.ಐ. ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಕನಕ ಲಾಡ್ಜ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ಕೆಲವು ಜನರು ಗುಂಪಾಗಿ ಕುಳಿತು ಇಸ್ಪೆಟ ಎಲೆಗಳ ಸಹಾಯದಿಂದ ಪಣಕ್ಕೆ ಹಣ ಹಚ್ಚಿ ಅಂದರ ಬಾಹರ ಎಂಬ ದೈವಲಿಲೆ ಇಸ್ಪೆಟ್ ಜೂಜಾಟ ಆಡುತ್ತಿದ್ದದ್ದು ಖಚಿತಪಡಿಸಿಕೊಂಡು ದಾಳಿ ಮಾಡಿ ಹಿಡಿದು ಅವರನ್ನು ವಿಚಾರಿಸಲು ತಮ್ಮ ಹೆಸರು 1. ಸಿದ್ದುಗೌಡ ತಂದೆ ಭೀಮರೆಡ್ಡಿ ಗೌಡ ಸಾಃ ಅಳ್ಳೋಳ್ಳಿ ತಾಃ ಚಿತ್ತಾಪೂರ 2. ಸದಾನಂದ ತಂದೆ ಶೇಖಣ್ಣ ಟೆಂಗಳಿ ಸಾಃ ಅಳ್ಳೋಳ್ಳಿ ತಾಃ ಚಿತ್ತಾಪೂರ ಕಲಬುರಗಿ  3. ಬಸವರಾಜ ತಂದೆ ಅಯ್ಯಣ್ಣ ಬೆಳಗೇರಿ ಸಾಃ ಅಳ್ಳೋಳ್ಳಿ ತಾಃ ಚಿತ್ತಾಪೂರ ಕಲಬುರಗಿ ಮತ್ತು ಇನ್ನೂ ಇಬ್ಬರೂ ಓಡಿ ಹೋಗಿದ್ದು ಅವರ ಹೆಸರು ವಿಚಾರಿಸಲು 1. ನಾಗರಾಜ ತಂದೆ ಬಾಬು ಸಂಗ್ಮಾ ಸಾಃ ನಾಲ್ವಾರ ತಾಃ ಚಿತ್ತಾಪೂರ, 2. ರವಿ ತಂದೆ ಮಲ್ಲಪ್ಪಾ ಮಡ್ಡಿ ಸಾಃ ಅಳ್ಳೊಳ್ಳಿ ತಾಃ ಚಿತ್ತಾಪೂರ ಅಂತಾ ಗೊತ್ತಾಯಿತು ಸದರಿ ಮೂರು ಜನರಿಂದ ಹತ್ತಿರ ಇದ್ದ ಹಣ ಮತ್ತು ನೆಲದ ಮೇಲೆ ಬಿದ್ದ ಹಣ ಹೀಗೆ ಒಟ್ಟು. 11.150/- ರೂ. ಮತ್ತು 52 ಇಸ್ಪೆಟ್ ಎಲೆಗಳನ್ನು ಜಪ್ತ ಮಾಡಿಕೊಂಡು ಸದರಿಯವರೊಂದಿಗೆ ಸ್ಟೇಷನ ಬಜಾರ ಠಾಣೆಗೆ ಬಂದು ಪ್ರಕರೆಣ ದಾಖಲಿಸಲಾಗಿದೆ.  
ಹಲ್ಲೆ ಪ್ರಕರಣಗಳು :
ಅಫಜಲಪೂರ ಠಾಣೆ : ದಿನಾಂಕ 10-05-2015 ರಂದು ದ್ಯಾವಪನಗರ ಮತ್ತು ಭೂಂಯಾರ ಬ್ರಿಡ್ಜ ಮದ್ಯ ಇರುವ ಬೋರಟಿ ಮುತ್ಯಾನ ಹೊಲದಲ್ಲಿ ಕೆಲಸ ಮಾಡಲು ಶ್ರೀ ಬಾಗಣ್ಣಾ ತಂದೆ ಈರಣ್ಣಾ ಕಲ್ಲೂರ ಸಾ|| ಸೊನ್ನ ಮತ್ತು ದೇವಿಂದ್ರ ರವರು ಕೂಡಿ ಜೇ.ಸಿ.ಬಿ ತೆಗೆದುಕೊಂಡು ಹೋಗಿದ್ದು, ಬೋರಟಿ ಮುತ್ಯಾನ ಹೊಲದ ಹತ್ತಿ ರಸ್ತೆಯ ಮೇಲೆ ಇದ್ದಾಗ ಅಲ್ಲೆ ರಸ್ತೆಯ ಮೇಲೆ 3 ಜನರು ಸರಾಯಿ ಕುಡಿದ ಅಮಲಿನಲ್ಲಿ ನಿಂತಿದ್ದು, ಅವರು ನಮ್ಮ ಜೇ.ಸಿ.ಬಿ ಗೆ ಅಡ್ಡಗಟ್ಟಿ ತಡೆದು ನಿಲ್ಲಿಸಿದರು, ಅವರಿಗೆ ನೋಡಲಾಗಿ ಅವರಲ್ಲಿ ಒಬ್ಬನು ಭೂಂಯಾರ ಗ್ರಾಮದ ಹುಚ್ಚಪ್ಪಾ ತಳವಾರ ಅನ್ನುವನಿದ್ದು ಅವನ ಕೈಯಲ್ಲಿ ಒಂದು ಕೊಡ್ಲಿ ಇತ್ತು, ಅವನೊಂದಿಗೆ ಇನ್ನು ಇಬ್ಬರು ಇದ್ದರು. ಅವರ ಹೆಸರುಗಳು ಗೊತ್ತಿರುವುದಿಲ್ಲಾ. ಸದರಿ ಹುಚ್ಚಪ್ಪಾ ಇವನು ನಮಗೆ ಏ ಸೂಳಿ ಮಕ್ಕಳ್ಯಾ ಜೇ.ಸಿ.ಬಿ ತಗೊಂಡು ಎಲ್ಲಿಗಿ ಹೋಗತಾ ಇದಿರಾ ಅಂತಾ ಅಂದನು, ಆಗ ನಾನು ಸರಿಯಾಗಿ ಮಾತಾಡು ಯಾಕ ಸುಮನೆ ಬೈತಿ ಅಂತಾ ಕೇಳಿದಾಗ ಹುಚ್ಚಪ್ಪಾ ಇವನು ಏನೋ ಸೂಳಿ ಮನಗಾ ನನಗೆ ಎದುರು ಮಾತಾಡತಿಯಾ ಇವತ್ತ ನೀನು ಸತ್ತಿ ಮಗನಾ ಅಂತಾ ಅಂದು ತನ್ನ ಕೈಯಲ್ಲಿದ್ದ ಕೊಡ್ಲಿ ತುಂಬಿನೀಂದ ನನ್ನ ಎಡ ಕಪಾಳ ಮೇಲೆ ಜೋರಾಗಿ ಹೊಡೆದಿದ್ದರಿಂದ ರಕ್ತಗಾಯವಾಗಿ ಭಾರಿ ಒಳಪೆಟ್ಟಾಗಿರುತ್ತದೆ. ನಂತರ ಸದರಿ ಕೊಡ್ಲಿ ಕಾವಿನಿಂದ ನನ್ನ ಬಲಮೊಳಕೈ ಹತ್ತಿರ ಹೊಡೆದು ಭಾರಿ ಒಳಪೆಟ್ಟು ಪಡಿಸಿರುತ್ತಾನೆ. ಆಗ ಅಲ್ಲಿ ಅಷ್ಟರಲ್ಲಿ ಒಂದು ಮೋಟರ ಸೈಕಲ ಬಂದಿದ್ದು ಅದನ್ನು ನೋಡಿ ಸದರಿ ಮೂರು ಜನರು ಅಲ್ಲಿಂದ ಓಡಿ ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಫಜಲಪೂರ ಠಾಣೆ : ದಿನಾಂಕ 10-05-2015 ರಂದು ಶ್ರೀ ಹಯ್ಯಾಳಸಿದ್ದ ತಂದೆ ಶರಣಪ್ಪಾ ಬಾದನಳ್ಳಿ ಸಾ|| ಮಂಗಳೂರ ಗ್ರಾಮ ರವರ ಅಣ್ಣತಮ್ಮಕಿಯವರಾದ ಯಲ್ಲಪ್ಪಾ ಬಾದನಳ್ಳಿ ರವರ ಹೊಲದ ಮದ್ಯ ಬಾಂದಾರಿ ಹತ್ತಿರ ಟ್ರ್ಯಾಕ್ಟರದಿಂದ ಗಳ್ಯಾ ಹೊಡೆಯುತ್ತಿದ್ದಾಗ, ಅಲ್ಲೇ ಹೊಲದಲ್ಲಿದ್ದ ಯಲ್ಲಪ್ಪಾ ಬಾದನಳ್ಳಿ ಮತ್ತು ಅವರ ತಮ್ಮ ಪುಂಡಪ್ಪಾ ಬಾದನಳ್ಳಿ ರವರು ನನ್ನ ಹತ್ತಿರ ಬಂದು ಯಲ್ಲಪ್ಪಾ ಇವನು ನನಗೆ ಏ ಸೂಳಿ ಮಗನಾ ಹಯ್ಯಾಳ್ಯಾ ನಮ್ಮ ಸೀಮ್ಯಾಗ ಯಾಕ ಗಳ್ಯಾ ಹೊಡಿತಾ ಇದ್ದಿಯಾ ಕಣ್ಣ ಕಾಣಲ್ಲೇನೋ ಮಗನಾ ಅಂತಾ ಅಂದನು, ಆಗ ನಾನು ಅವರಿಗೆ ನಮ್ಮ ಹೊಲದಲ್ಲೆ ಗಳ್ಯಾ ಹೊಡಿತಾ ಇದ್ದಿನಿ, ನಿಮಗ ಕಣ್ಣ ಕಾಣಲ್ಲೇನೋ ಅಂತಾ ಅಂದಾಗ ಯಲ್ಲಪ್ಪಾ ಇವನು ನನ್ನ ಎದೆಯ ಮೇಲಿನ ಬನಿಯಾನ ಹಿಡಿದು ನನಗೆ ಹೋಗದಂತೆ ತಡೆದುನಿಲ್ಲಿಸಿ ತನ್ನ ಕೈಯಿಂದ ಮುಷ್ಟಿ ಮಾಡಿ ನನ್ನ ಮೂಗಿನ ಮೇಲೆ ಹೊಡೆದು ರಕ್ತಗಾಯ ಮಾಡಿದನು, ನಂತರ ಅದೇ ಕೈಯಿಂದ ನನ್ನ ಎಡಗಣ್ಣಿನ ಮೇಲೆ ಹೊಡದನು, ಆಗ ಪುಂಡಪ್ಪಾ ಇವನು ಈ ಸೂಳಿ ಮಗನಿಗಿ ಇವತ್ತು ಹೊಡೆದು ಖಲಾಸ ಮಾಡು ಅಂತಾ ಅಂದು ಕಾಲಿಲೆ ನನ್ನ ಬೇನ್ನಿನ  ಮೇಲೆ ಒದ್ದು ಗಾಯಗೊಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಂಬರ್ಗಾ ಠಾಣೆ : ಶ್ರೀ ಶಿವಾನಂದ ತಂದೆ ಬಸಣ್ಣ ದೋತರೆ ಸಾ: ಮಾಡಿಯಾಳ ಇವರು ದಿನಾಂಕ 09/05/2015 ರಂದು ತನ್ನ ದೋಡಮ್ಮಳಾದ ಭೀಮಾಬಾಯಿ ಮತ್ತು ಚನ್ನಮ್ಮ ಇವರ ನಡುವೆ ಕುಳ್ಳು ಹಚ್ಚುವ ಸಂಬಂಧ ಬಾಯಿ ಮಾತಿನ ಜಗಳವಾಗಿದ್ದು ಇದನ್ನು ಕೇಳಲು ಅಂತಾ ಫೀರ್ಯಾದಿಯು ಅವರ ಮನೆಗೆ ಹೋದಾಗ ಚನ್ನಮ್ಮಳ ಮಕ್ಕಳಾದ  ಬಸವರಾಜ ಮತ್ತು ವಿಶ್ವನಾಥ ಇಬ್ಬರು ಸೇರಿ ಫೀರ್ಯಾದಿಗೆ ತಡೆದು ಅವಾಚ್ಯ ಬೈದು ಕೈಯಿಂದ ಮತ್ತು ಕಲ್ಲಿನಿಂದ ಹೊಡೆ ಬಡೆ ಮಾಡಿ ಭಾರಿ ರಕ್ತಗಾಯ  ಪಡೆಸಿದ್ದಲ್ಲದೇ ಜೀವ ಭಯ ಪಡೆಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಘವೇಂದ್ರ ನಗರ ಠಾಣೆ : ಶ್ರೀ ನಾಗರಾಜ ತಂದೆ ಭೀಮಾಶಂಕರ ಪಂಚುರ ಸಾಃಮಾಣಿಕೇಶ್ವರ ಕಾಲೋನಿ ಕಲಬುರಗಿ  ರವರು ಶಟ್ಟಿ ಟಾಕೀಜ ನಿಂದ ಹೊರಗೆ ರೋಡಿಗೆ ಬರಲು ಒಬ್ಬನು ತನ್ನ ಮೋಟಾರ ಸೈಕಲ ಮೇಲೆ ಅತೀವೇಗ ದಿಂದ ಬಂದು ನಮಗೆ ಡಿಕ್ಕಿ ಪಡಿಸುತ್ತಾನೆ ಅಂತಾ ಎಂಬಂತೆ ಬಂದು ನಿಲ್ಲಿಸಿದ ಅದಕ್ಕೆ ನಾನು ಹಾಸಿಯಪ್ಪ ಹೀಗೆಕೆ ನಡೆಸುತ್ತಿದ್ದ ಅಂತಾ ಅಂದಿದಕ್ಕೆ ಏ ಬೋಸಡಿ ಮಗನೆ ನೀನು ಹೇಗೆ ನಡೆಯಬೇಕು ಅಂತಾ ತಿಳಕೊ ಅಂತಾ ಅಂದನು ಅದಕ್ಕೆ ಬೈ ಬೇಡ ಅಂತಾ ಅನ್ನಲು ಅದಕ್ಕೆ ಅವನು ನಾನು ಯಾರೊ ಗೊತ್ತೆ ನಾನು ಹೀರಾನ  ತಮ್ಮ ಇದ್ದಿನಿ ಅಂತಾ ಯಾರಿಗೊ ಫೋನ ಮಾಡಿದ ಆಗ ಒಂದೆ ಮೋಟಾರ ಸೈಕಲ ಮೇಲೆ ಇಬ್ಬರು ಬಂದರು ಅವರು ಬಂದವರೆ ಮೋಟಾರ ಸೈಕಲ ಹಚ್ಚಿ ಇಬ್ಬರು ಕೈಮುಷ್ಠಿ ಮಾಡಿ ನನ್ನ ಮಾರಿ ಮೇಲೆ , ಹೊಟ್ಟೆಯ ಮೇಲೆ ಹೊಡೆ ಹತ್ತಿದರು ಆಗ ಹೀರಾನ ತಮ್ಮ ಅಲ್ಲಿಯೇ ಬಿದ್ದ ಒಂದು ಕಲ್ಲು ತೆಗೆದುಕೊಂಡು ನನ್ನ ಬಾಯಿಯ ಮೇಲೆ ಹೊಡೆದು ರಕ್ತಗಾಯ ಪಡಿಸಿದ ಮತ್ತು ನೆಲ್ಲಕೆ ಹಾಕಿ ಕಾಲಿನಿಂದ ವದ್ದು ಕೈಯಿಂದ ಹೊಡೆದು ಅವರವರ ಮೋಟಾರ ಸೈಕಲ ಮೇಲೆ ಹೊರಟು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ವಿಶ್ವನಾಥರೆಡ್ಡಿ ತಂದೆ ಸಿದ್ದಣ್ಣಗೌಡ ಪಾಟೀಲ್‌ ಸಾ.:  ದರಿಯಾಪುರ ಕೋಟನೂರ ಕಲಬುರಗಿ ರವರು ದಿನಾಂಕ:24/03/2015 ರಂದು ಬೆಳಗ್ಗೆ 11.00 ಗಂಟೆ ಸುಮಾರಿಗೆ ಕಲಬುರಗಿ ನಗರದ ಶ್ರೀ ಶರಣಬಸವೇಶ್ವರ ದೇವರ ದರ್ಶನ ಕುರಿತು ಹೋಗಿ ಗುಡಿಯ ಆವರಣದಲ್ಲಿ ತನ್ನ ಟಿವಿಎಸ್ ಸ್ಕೂಟಿ ನಂ ಕೆಎ-32 ಎಲ್‌‌-3052 ನೇದ್ದನ್ನು ನಿಲ್ಲಿಸಿ ನಾನು ದೇವರ ದರ್ಶನಮಾಡಿ ಮರಳಿ 11.30 ಗಂಟೆಗೆ ನನ್ನ ಮೋಟಾರ ಸೈಕಲ ಹತ್ತಿರ ಬಂದಿದ್ದು ಅಲ್ಲಿ ನನ್ನ ಮೋಟಾರ ಸೈಕಲ ಇರಲಿಲ್ಲ ಅಂದಿನಿಂದ ನನ್ನ ಮೋಟಾರ ಸೈಕಲ ಎಲ್ಲಾ ಕಡೆ ಹುಡುಕಾಡಿದರೂ ಸಿಗಲಾರದ ಕಾರಣ ನನ್ನ ಟಿ.ವಿ.ಎಸ್‌‌ ಸ್ಕೂಟಿ ಮೋಟಾರ ಸೈಕಲ ನಂ.ಕೆಎ-32 ಎಲ್‌‌-3052  ಅ.ಕಿ. 10,000/- ರೂ ನೇದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.