POLICE BHAVAN KALABURAGI

POLICE BHAVAN KALABURAGI

14 March 2016

Kalaburagi District Reported Crimes.

ಜೇವರ್ಗಿ ಠಾಣೆ : ದಿನಾಂಕ 13.03.2016 ರಂದು ಸಾಯಂಕಾಲ ನಾನು ಕಲಬುರಗಿ ಗಂಗಾ ಆಸ್ಪತ್ರೆಯಲ್ಲಿ ಅಪಘಾತದಲ್ಲಿ ಗಾಯಹೊಂದಿ ಉಪಚಾರ ಪಡೆಯುತ್ತಿದ್ದ ಫಿರ್ಯಾದಿದಾರಳಾದ ಶ್ರೀದೇವಿ ಗಂಡ ರಾಚಯ್ಯ ಹಿರೆಮಠ ಇವಳು ಕೊಟ್ಟ ಹೇಳಿಕೆಯನ್ನು ಪಡೆದುಕೊಂಡು ಮರಳಿ ರಾತ್ರಿ  21:30 ಗಂಟೆಗೆ ಠಾಣೆಗೆ ಬಂದಿದ್ದು ಸದರಿ ಫಿರ್ಯಾದಿ ಹೇಳಿಕೆ  ಸಾರಾಂಶವೆನೆಂದರೆ ಇಂದು ದಿನಾಂಕ 13.03.2016 ರಂದು ಮದ್ಯಾಹ್ನ  2.15  ಗಂಟೆ ಸುಮಾರಿಗೆ ಕಟ್ಟಿಸಂಗಾವಿ ಮದರಿ ಕ್ರಾಸ್  ಹತ್ತಿರ ಜೇವರಗಿ ಕಲಬುರಗಿ ರಸ್ತೆಯ ಮೇಲೆ ನನ್ನ ಗಂಡನು ನಡೆಸುತ್ತಿದ ಕಾರ್ ನಂ ಕೆ.ಎ -32ಎಮ್-8623  ನೆದ್ದರಲ್ಲಿ  ಕುಳಿತು ಮಾನವಿಗೆ ಹೋಗುತ್ತಿದ್ದಾಗ ಅದೇ ವೇಳೆಗೆ ಜೇವರಗಿ ಕಡೆಯಿಂದ ಒಂದು ಕ್ರೊಸರ್ ಜೀಪ ನಂ ಕೆ.ಎ18ಎ3507 ನೇದ್ದರ ಚಾಲಕನು ತನ್ನ ಜೀಪನ್ನು ಅತೀ ವೇಗೆ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ನನ್ನ ಗಂಡ ಚಲಾಯಿಸುತ್ತಿದ್ದ ಕಾರಿಗೆ ಎದುರಾಗಿ ಜೋರಾಗಿ ಡಿಕ್ಕಿ ಪಡಿಸಿದ್ದರಿಂದ ನನಗೆ ಮತ್ತು ಕಾರ ನಡೆಸುತ್ತಿದ ನನ್ನ ಗಂಡನಿಗೆ ಭಾರಿ ಮತ್ತು ಸಾದಾ ಗಾಯಗಳಾಗಿರುತ್ತವೆ. ಅಪಘಾತದ ನಂತರ ಕ್ರೊಸರ್ ಜೀಪ್  ಚಾಲಕನು ತನ್ನ ಜೀಪನ್ನು ಸ್ಥಳದಲ್ಲಿಯೆ ಬಿಟ್ಟು ಓಡಿ ಹೋಗಿದ್ದು ಕಾರಣ ಸದರಿ ಜೀಪ ಚಾಲಕನ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಕೊಳ್ಳಬೇಕುಅಂತಾ ಇತ್ಯಾದಿ ಫಿರ್ಯಾದಿ ಅರ್ಜಿ ಸಾರಾಂಶದ ಮೇಲಿಂದ ಪ್ರಕರಣ ವರದಿಯಾಗಿರುತ್ತದೆ.
ಜೇವರಗಿ ಠಾಣೆ: ದಿನಾಂಕ 13.03.2016 ರಂದು ರಾತ್ರಿ ನಾನು ಕಲಬುರಗಿ ನಗರದ ಕಾಮರೆಡ್ಡಿ ಆಸ್ಪತ್ರೆಯಲ್ಲಿ ಅಪಘಾತದಲ್ಲಿ ಗಾಯಹೊಂದಿ ಉಪಚಾರ ಪಡೆಯುತ್ತಿದ್ದ ಗಾಯಾಳು ರಂಜಿತ್ ಸಿಂಗ್ ಈತನ ಸಂಗಡ ಇದ್ದ ಫಿರ್ಯಾದಿದಾರ ನಿಂಗಪ್ಪ ಬುರಲಿ ಈತನು ಕೊಟ್ಟ ಹೇಳಿಕೆಯನ್ನು ಪಡೆದುಕೊಂಡು ಮರಳಿ ರಾತ್ರಿ 23:30 ಗಂಟೆಗೆ ಠಾಣೆಗೆ ಬಂದಿದ್ದು ಸದರಿ ಫಿರ್ಯಾದಿ ಹೇಳಿಕೆ  ಸಾರಾಂಶವೆನೆಂದರೆ ಇಂದು ದಿನಾಂಕ 13.03.2016 ರಂದು ಸಾಯಂಕಾಲ 04.45  ಗಂಟೆ ಸುಮಾರಿಗೆ ಕೋಳಕೂರ ಕ್ರಾಸ್ ಹತ್ತಿರ ಜೇವರಗಿ ಕಲಬುರಗಿ ರಸ್ತೆಯ ಮೇಲೆ ನಾನು ನನ್ನ ಮೋಟಾರು ಸೈಕಲ್‌ ನಂ ಕೆ.ಎ38ಆರ್‌5202 ನೇದ್ದರ ಮೇಲೆ ರಂಜೀತ ಸಿಂಗನಿಗೆ ಹಿಂದುಗಡೆ ಕೂಡಿಸಿಕೊಂಡು ವಿಜಯಪುರಕ್ಕೆ ಹೋಗುತ್ತಿದ್ದಾಗ ಅದೇ ವೇಳೆಗೆ ಎದುರಿನಿಂದ ಒಂದು ಟಾಟಾ ಎ.ಸಿ.ಇ ವಾಹನ ನಂ ಕೆ.ಎ32ಸಿ5091 ನೇದ್ದರ ಚಾಲಕನು ತನ್ನ ವಾಹನವನ್ನು ಅತೀ ವೇಗೆ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಒಮ್ಮೇಲೆ ನನ್ನ ಮೋಟಾರು ಸೈಕಲ್‌ ಕಡೆಗೆ ಬಂದು ನನ್ನ ಹಿಂದೆ ಕುಳಿತ ರಂಜಿತ ಸಿಂಗನಿಗೆ ಎದುರಿನಿಂದ ಡಿಕ್ಕಿ ಪಡಿಸಿ ಅಪಘಾತ ಪಡಿಸದ್ದರಿಂದ ರಂಜೀತ ಈತನಿಗೆ ಬಲಗಾಲಿನ ಮೊಳಕಾಲಿಗೆ ಭಾರಿ ರಕ್ತ ಗಾಯವಾಗಿದ್ದು ಅಪಘಾತದ ನಂತರೆ ವಾಹನ ಚಾಲಕನು ತನ್ನ ವಾಹನವನ್ನು ಸ್ಥಳದಲ್ಲಿಯೆ ಬಿಟ್ಟು ಓಡಿ ಹೋಗಿದ್ದು ಕಾರಣ ಸದರಿ ವಾಹನ ಚಾಲಕನ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಕೊಳ್ಳಬೇಕುಅಂತಾ ಇತ್ಯಾದಿ ಫಿರ್ಯಾದಿ ಅರ್ಜಿ ಸಾರಾಂಶದ ಮೇಲಿಂದ ಪ್ರಕರಣ ವರದಿಯಾಗಿರುತ್ತದೆ.
ಯಡ್ರಾಮಿ ಠಾಣೆ: ದಿನಾಂಕ: 13-03-2016 ರಂದು 3;00 ಪಿ.ಎಂ ಕ್ಕೆ ಫಿರ್ಯಾದಿ ಠಾಣೆಗೆ ಹಾಜರಾಗಿ ಹೇಳಿಕೆ ನೀಡಿದ್ದರ ಸಾರಾಂಶವೇನೆಂದರೆ, ನನ್ನದೊಂದು ಕ್ರೋಜರ ವಾಹನವಿದ್ದು. ಅದನ್ನು ಖಾಸಗಿಯಾಗಿ ಚಲಾಯಿಸಿಕೊಂಡಿರುತ್ತೇನೆ. ಕಳೆದ ಜಿಲ್ಲಾ ಪಂಚಾಯತ, ತಾಲೂಕ ಪಂಚಾಯತ ಚುನಾವಣೆಯಲ್ಲಿ ನನ್ನ ವಾಹನವನ್ನು ಬಾಡಿಗೆಯಾಗಿ ಕೊಟ್ಟಿದ್ದು, ಅದರ ಬಾಬತ್ತು 28,000/- ರೂ ಹಾಗು ಇತರೆ ಹಣ 17,000/- ರೂ ಹೀಗೆ ಒಟ್ಟು 45,000/- ರೂ ಗಳನ್ನು ಮತ್ತು ನಮ್ಮ ಮನೆಯಲ್ಲಿದ್ದ ಬಂಗಾರದ ಆಭರಣಗಳನ್ನು ಕಬ್ಬೀಣದ ಪೆಟ್ಟಿಗೆಯಲ್ಲಿ ಇಟ್ಟಿದ್ದು ಇರುತ್ತದೆ. ಹೀಗಿದ್ದು ನಿನ್ನೆ ದಿನಾಂಕ 12-03-2016 ರಂದು ರಾತ್ರಿ 10;00 ಗಂಟೆಗೆ ನಾನು ಮತ್ತು ನನ್ನ ತಾಯಿ ಗುಂಡಮ್ಮ ಹಾಗು ನ್ನನ ನಹೆಂಡತಿಯಾದ ರೂಪಾ ರವರು ಊಟ ಮಾಡಿ ಮನೆಗೆ ಕೀಲಿ ಹಾಕಿಕೊಂಡು ಮಾಳಗಿ ಮೇಲೆ ಮಲಗಿಕೊಂಡಿರುತ್ತೇವೆ. ದಿನಂತೆ ದಿನಾಂಕ 13-03-2016 ರಂದು ಬೆಳಿಗ್ಗೆ 05;00 ಗಂಟೆಗೆ ನಾವೆಲ್ಲರು ಎದ್ದು ಕೆಳಗೆ ಬಂದು ನೋಡಲಾಗಿ ನಮ್ಮ ಮನೆ ಬಾಗಿಲಿಗೆ ಹಾಕಿದ ಕೀಲಿಯನ್ನು ಮುರದಿತ್ತು, ನಂತರ ನಾವೆಲ್ಲರು ಒಳಗೆ ಹೋಗಿ ನೋಡಲಾಗಿ ಪೆಟ್ಟಿಗೆಯಲ್ಲಿದ್ದ 1] ನಗದು ಹಣ 45,000/- ರೂ, 2] 15 ಗ್ರಾಂ ಬಂಗಾರದ ಲಾಕಿಟ ಅ;ಕಿ; 30,000/- ರೂ, 3] 5 ಗ್ರಾಂ ಬಂಗಾರದ ಕಿವಿ ಓಲೆಗಳು ಅ;ಕಿ; 10,000/- ರೂ, 4] 3 ಗ್ರಾಂ ಬಂಗಾರದ ಬಿಳಿ ಹರಳಿನ ಉಂಗರ ಅ;ಕಿ; 6,000/- ರೂ, 5] 20 ಗ್ರಾಮಿನ 4 ಸುತ್ತುಂಗರಗಳು ಅ;ಕಿ; 40,000/- ರೂ, 6] 5 ಗ್ರಾಂ ಬಂಗಾರದ ಗುಂಡುಗಳು ಅ;ಕಿ; 10,000/- ರೂ ಹೀಗೆ ಒಟ್ಟು ನಗದು ಹಣ 45,000/- ರೂ ಮತ್ತು  96,000/- ರೂ ಕಿಮ್ಮತ್ತಿನ ಬಂಗಾರದ ಆಭರಣಗಳು ಇರಲಿಲ್ಲ. ದಿನಾಂಕ 12-03-2016 ರಂದು ರಾತ್ರಿ 11;00 ಗಂಟೆಯಿಂದ ದಿನಾಂಕ 13-03-2016 ರ ಬೆಳಗಿನ 04;00 ಗಂಟೆ ಅವಧಿಯಲ್ಲಿ ಯಾರೋ ಕಳ್ಳರು ನಮ್ಮ ಮನೆ ಬಾಗಿಲ ಕೀಲಿಯನ್ನು ಮುರಿದು ಒಳಗೆ ಪ್ರವೇಶ ಮಾಡಿ ಪೆಟ್ಟಿಗೆಯಲ್ಲಿದ್ದ ಬಂಗಾರ ಮತ್ತು ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಲ್ಲದೆ ನನ್ನಂತೆ ನಮ್ಮೂರಿನ ನರಸಪ್ಪ ತಂದೆ ಗುಂಡಪ್ಪ ಅಗಸರ ಈತನ ಮನೆಯು ಸಹ ಕಳ್ಳತನವಾಗಿದ್ದು ಅವನಿಗೆ ಕೇಳಲಾಗಿ ಅವರ ಮನೆಯ ಕೀಲಿ ಮುರಿದು  ಪೆಟ್ಟಿಗಿಲ್ಲಿಟ್ಟ  ನಗದು 20,000/- ರೂ ಗಳನ್ನು ಕಳ್ಳತನವಾಗಿದ್ದು ಇರುತ್ತದೆ, ಅದರಂತೆ ಶೋಭಾ ಗಂಡ ಶ್ರೀಶೈಲ ಸ್ಥಾವರಮಠ ವರ ಮನೆಯು ಕಳ್ಳತನವಾಗಿದ್ದು, ಇವರ ಮನೆಯಲ್ಲಿ 1] ನಗದು ಹಣ 8,000/- ರೂ, 2] 5 ಗ್ರಾಂ ಬಂಗಾರದ ಕಿವಿ ಓಳೆಗಳು ಅ;ಕಿ; 10,000/- ರೂ, 3] 80 ಗ್ರಾಂ ಬೆಳ್ಳಿಯ 4 ಲಿಂಗದಕಾಯಿ ಅ;ಕಿ; 1,600/- ರೂ, 4] 30 ಗ್ರಾಂ ಬೆಳ್ಳಿಯ ಕಾಲಚೈನ ಅ;ಕಿ; 600/- ರೂ ಹೀಗೆ ಒಟ್ಟು 8,000/- ರೂ ನಗದು ಹಣ ಮತ್ತು 12,200/- ರೂ ಕಿಮ್ಮತ್ತಿನ ಬಂಗಾರ ಹಾಗು ಬೆಳ್ಳಿಯ ಆಭರಣಗಳು ಕಳ್ಳತನವಾಗಿರುತ್ತವೆ ಅಂತಾ ಹೇಳಿದರು, ಮತ್ತು ಸಿದ್ದಣ್ಣ ತಂದೆ ಬಸಂವತ್ರಾಯ ಬಡಿಗೇರ ಇವರ ಮನೆಯು ಕಳ್ಳತನವಾಗಿದ್ದು, ಅವರ ಮನೆಯಲ್ಲಿ ವೈನಿಟಿ ಬ್ಯಾಗನಲ್ಲಿಟ್ಟ 5 ಗ್ರಾಂ ಬಂಗಾರದ ಕಿವಿ ಓಲೆಗಳು ಅ;ಕಿ 10,000/- ರೂ ಹಾಗು 3 ಗ್ರಾಂ ಬಂಗಾರದ ಮಾಟಿ ಅ;ಕಿ; 6,000/- ರೂ ಹೀಗೆ ಒಟ್ಟು 16,000/- ರೂ ಕಿಮ್ಮತ್ತಿನ ಬಂಗಾರದ ಆಭರಣಗಳು ಕಳ್ಳತನವಾಗಿರುತ್ತವೆ ಅಂತಾ ತಿಳೀಸಿರುತ್ತಾರೆ. ಹೀಗೆ ನಮ್ಮೆಲ್ಲರ ಒಟ್ಟು 1,97,200/- ರೂ ಕಿಮ್ಮತ್ತಿನ ಬಂಗಾರ ಮತ್ತು ಬೆಳ್ಳಿಯ ಆಭರಣಗಳು ಹಾಗು ನಗದು ಹಣವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ನನ್ನ ಬಂಗಾರದ ಆಭರಣಗಳು ಪತ್ತೆಯಾದಲ್ಲಿ ಅವುಗಳನ್ನು ನಾನು ಗುರುತಿಸುತ್ತೇನೆ. ಕಾರಣ ಮೇಲ್ಕಂಡ ವಸ್ತುಗಳನ್ನು ಹಾಗು ನಗದು ಹಣವನ್ನು ಕಳ್ಳತನ ಮಾಡಿದ ಕಳ್ಳರನ್ನು ಪತ್ತೆ ಮಾಡಿ ಅವರ ವಿರುದ್ದ ಕಾನೂನು ರೀತಿ ಕ್ರಮ ಕೈಕೊಳ್ಳಬೇಕು ಅಂತಾ ಹೇಳಿಕೆ ನೀಡಿದ್ದರ ಸಾರಾಂಶದ ಮೇಲಿಂದ ಪ್ರಕರಣ ವರದಿಯಾಗಿರುತ್ತದೆ.
ರೇವೂರ ಠಾಣೆ : ದಿನಾಂಕಃ13/03/2016  ರಂದು ಫಿರ್ಯಾದಿ ಶ್ರೀ ಜಟ್ಟೆಪ್ಪಾ ತಂದೆ ಸಂಗಪ್ಪ ಗೌರ ವಯಃ21 ಜಾಃ ಕುರುಬ ಉಃ ಕೂಲಿ ಸಾ|| ಇಂಗಳಗಿ(ಬಿ)  ಇವರು ಠಾಣೆಗೆ ಹಾಜರಾಗಿ  ನೀಡಿದ  ಟೈಫ್ ಮಾಡಿಸಿದ ದೂರೆನೆಂದರೆ  ನಮ್ಮ ತಂದೆ ತಾಯಿಗೆ 1)ಯಲ್ಲಪ್ಪಾ 2)ಸಾಬವ್ವ 3) ಲಕ್ಷ್ಮಿಬಾಯಿ 4)ಜಟ್ಟೆಪ್ಪಾ 5) ಕಾಮಣ್ಣಾ ವಯಃ18 6) ಪಾರ್ವತಿ ವಯಃ 14 ವರ್ಷ ಹೀಗೆ ಒಟ್ಟು ಮೂರುಜನ ಹೆಣ್ಣು ಮತ್ತು ಮೂರು ಜನ ಗಂಡು ಮಕ್ಕಳಿರುತೇವೆ, ನನ್ನ ಅಕ್ಕಂದಿರಾದ ಸಾಬವ್ವ ಮತ್ತು ಲಕ್ಷ್ಮಿಬಾಯಿ ರವರ ಮದುವೆಯಾಗಿದ್ದು ಗಂಡನ ಮನೆಯಲ್ಲಿ ಇರುತ್ತಾರೆ ನನ್ನ ತಂದೆ-ತಾಯಿ ತಿರಿಕೊಂಡಿದ್ದು ಈಗ ನಮ್ಮ ಮನೆಯಲ್ಲಿ ನಾನು ನನ್ನ ಅಣ್ಣ ಯಲ್ಲಪ್ಪಾ, ತಮ್ಮ ಕಾಮಣ್ಣಾ ತಂಗಿಯಾದ ಪಾರ್ವತಿ ಎಲ್ಲರೂ ವಾಸವಾಗಿರುತ್ತೇನೆ. ನನ್ನ ವಿವಾಹ ನಿಚ್ಶಿತಾರ್ಥವು ಈಗ ಆರು ತಿಳಗಳ ಹಿಂದೆ ಕಾರಭೋಸ್ಗಾ ಗ್ರಾಮದ ದುಂಡಪ್ಪಾ ಡಬ್ಬಿಗೋಳ ರವರ  ಮಗಳಾದ ಬಸಮ್ಮಳೋಂದಿಗೆ ಯಾಗಿರುತ್ತದೆ. ಶಿವರಾತ್ರಿ ಅಮವಾಸೆ ಪ್ರಯುಕ್ತ ನಮ್ಮ ಭೀಗರ ಗ್ರಾಮವಾದ ಕಾರಭೋಸಗಾ ಗ್ರಾಮದಲ್ಲಿ ಕಾಡಸಿದ್ದೇಶ್ವರ ಜಾತ್ರೆ ಇದ್ದ ನಿಮೀತ್ಯ ನಾನು. ನನ್ನ ತಂಗಿ ಪಾರ್ವತಿ, ನನ್ನ ಚಿಕ್ಕಮ್ಮಳಾದ ಭಾಗಮ್ಮ, ಹಾಗೂ ನನ್ನ ಅಣ್ಣನಾದ ಯಲ್ಲಪ್ಪಾ ಎಲ್ಲರೂ ದಿಃ09/03/2016 ರಂದು ಕಾರಬೋಸ್ಗಾ ಗ್ರಾಮಕ್ಕೆ ಹೋಗಿರುತ್ತೇವೆ. ಜಾತ್ರೆ ಮುಗಿದ ಮೇಲೆ ನಮ್ಮ ಬಿಗರು ಪಾರ್ವತಿ ಇವಳಿಗೆ ಎರಡು ದಿನಗಳ ನಂತರ ಕಳುಹಿಸುತ್ತೇವೆ ಅಂತಾ ಹೇಳಿದ್ದಕ್ಕೆ ಪಾರ್ವತಿಗೆ ಕಾರಭೋಸ್ಗಾ  ಗ್ರಾಮದಲ್ಲಿ ಬಿಟ್ಟು ಮರುದಿನ ದಿಃ10/03/2016 ಸಾಯಂಕಾಲ-7 ಗಂಟೆಗೆ ನಾನು ನನ್ನ ಚಿಕ್ಕಮ್ಮಳಾದ ಭಾಗಮ್ಮ, ಅಣ್ಣ ಯಲ್ಲಪ್ಪಾ ಎಲ್ಲರೂ ನಮ್ಮ ಊರಿಗೆ ಬಂದಿರುತ್ತೇವೆ.       ಹಿಗಿದ್ದು ನಿನ್ನೆ ದಿನಾಂಕಃ12/03/2016 ರಂದು 4 ಗಂಟೆ ಸುಮಾರಿಗೆ ನಾನು ನಮ್ಮ ಮಾವನಾದ ದುಂಡಪ್ಪನ ರವರಿಗೆ ಫೋನಮಾಡಿ ನಾನು ನಾಳೆ ಬಂದು ಪಾರ್ವತಿಗೆ ಕರೆದುಕೊಂಡು ಹೋಗುತ್ತೇನೆ ಅಂತಾ ಹೇಳಿದಾಗ ನಮ್ಮ ಮಾವ ದುಂಡಪ್ಪನವರು ತಿಳಿಸಿದೆನೆಂದರೆ ಈಗ 2-00ಪಿಎಮ್ ಕ್ಕೆ ನಾನು ನನ್ನ ಹೆಂಡತಿ ಭಾಗಮ್ಮ ಹಾಗು ಪಾರ್ವತಿ ಎಲ್ಲರೂ ಮನೆಯಲ್ಲಿದ್ದಾಗ ಒಬ್ಬ ವ್ಯಕ್ತಿ ನಮ್ಮ ಮನೆಗೆ ಬಂದು ನನ್ನ ಹೆಸರು ನಾಗಪ್ಪಾ ತಂದೆ ಭಾಗಪ್ಪಾ ಘತ್ತರಗಿ ಸಾಃ ದೇವಲ ಗಾಣಗಾಪೂರ ಅಂತಾ ಇದು.್ದ ನಾನು ನಿಮ್ಮ ಅಳಿಯ ಜಟ್ಟೆಪ್ಪ ಇಬ್ಬರೂ ಸ್ನೇಹಿತರಿದ್ದು ಇಂದು ಜಟೆಪ್ಪನು ನನ್ನ ತಂಗಿಗೆ ಕರೆದುಕೊಂಡು ಬರುವುದಿದೆ ಬಾ ಅಂತಾ ಹೇಳಿದಾಗ ಜಟ್ಟೆಪ್ಪಾ ನಾನು ಇಬ್ಬರೂ ನನ್ನ ಟಂ.ಟಂ ತೆಗದುಕೊಂಡು ಬರುತ್ತಿದ್ದಾಗ ಬಾದನಳ್ಳಿಯಲ್ಲಿ ಟಂ.ಟಂ ಪಂಚರಾಗಿದ್ದು. ಅಲ್ಲೆ ನಮ್ಮ ಸ್ನೇಹಿತನ ಮೋಟರ ತೆಗೆದುಕೊಂಡು, ಜಟ್ಟೆಪ್ಪನು ನನಗೆ ಮೋಟರ ಸೈಕಲ ನಡೆಸಲು ಬರುವುದಿಲ್ಲಾ ನೀನು ಮೋಟರ ಸೈಕಲ ಮೇಲೆ ಕಾರಬೋಸ್ಗಾ ಗ್ರಾಮಕ್ಕೆ ಹೋಗಿ ನಮ್ಮ ಸಂಬಂದಿಕರಾದ ದುಂಡಪ್ಪಾ ಡಬ್ಬಿ ರವರ ಮನೆಯಲ್ಲಿರುವ ನನ್ನ ತಂಗಿ ಪಾರ್ವತಿಯನ್ನು ಕರೆದುಕೊಂಡು ಬಾ ಅಂತಾ ಹೇಳಿದ್ದಾನೆ. ಅದಕ್ಕೆ ಬಂದಿದ್ದೇನೆ ಅಂತಾ ಹೇಳಿದಾಗ ನಾನು ಪಾರ್ವತಿ ಇವಳಿಗೆ ಆತನ ಪರಿಚಯ ಇದೆಯೋ ಹೇಗೆ ಅಂತಾ ವಿಚಾರಿಸಿದಾಗ ಅವಳು ಸದರಿಯವನು ನಮಗೆ ಪರಿಚಿತನಾಗಿದ್ದು ನಮ್ಮ ಅಣ್ಣನ ಸ್ನೇಹಿತನಿರುತ್ತಾನೆ .ಅಂತಾ ಹೇಳಿದಾಗ ನಾವು ನಂಬಿ ಪಾರ್ವತಿ ಇವಳಿಗೆ ಮಧ್ಯಾನ್ಹ 2-30 ಪಿಎಮ್ ಸುಮಾರಿಗೆ ಆತನ ಜೊತೆಗೆ ಮೋಟರ ಸೈಕಲ ಮೇಲೆ ಕಳಹಿಸಿಕೊಟ್ಟಿರುತ್ತೇವೆ.ಅಂತಾ ತಿಳಿಸಿದರು. ಆಗ ನಾನು ನಮ್ಮ ಮಾವನವರಿಗೆ ಸದರಿವನು ನನ್ನ ಸ್ನೇಹಿತನಾಗಿರುವದಿಲ್ಲಾ ನಾನು ಅವನಿಗೆ ಕಳುಹಿಸಿರುವುದಿಲ್ಲಾ ಅಂತಾ ಹೇಳಿ ನಂತರ ನಾನು ಕಾರಭೋಸ್ಗಾ ಗ್ರಾಮಕ್ಕೆ ಹೋಗಿ ನಾನು ನನ್ನ ಮಾವ ನನ್ನ ಅಣ್ಣ ಯಲ್ಲಪ್ಪಾ ಎಲ್ಲರೂ ಹುಡಕಾಡಿದರು ಎಲ್ಲಿಯೂ ನನ್ನ ತಂಗಿ ಸಿಕ್ಕಿರುವುದಿಲ್ಲಾ. ನನ್ನ ತಂಗಿಗೆ ತನ್ನ ಜೊತೆಗೆ ಕರೆದುಕೊಂಡ ಹೋದ ನಾಗಪ್ಪಾ ತಂದೆ ಭಾಗಪ್ಪಾ ಘತ್ತರಗಿ  ಉಃ ಟಂ,ಟಂ ಡ್ರೈವರ ಜಾಃ ಕಬ್ಬಲಿಗ ಸಾಃದೇವಲಗಾಣಗಾಪೂರದ ಈತನದ್ದು ಒಂದು ಟಂಟಂ ಇದ್ದು ಈತನು ಆಗಾಗ ನಮ್ಮೂರಿಗೆ ಬಂದು ಕೂಲಿ ಕೆಲಸಕ್ಕೆ ಹೋಗುವ ಹೆಣ್ಣ ಮಕ್ಕಳನ್ನು ತನ್ನ ಟಂ.ಟಂ ನಲ್ಲಿ ಕರೆದುಕೊಂಡು ಹೋಗುವುದು ಮತ್ತು ತಂದು ಬೀಡುವುದು ಮಾಡುತ್ತಿದ್ದನ್ನು. ನನ್ನ ತಂಗಿಯೂ ಸಹ ಆಗಾಗ ದೇವಲ ಗಾಣಗಾಪೂರಕ್ಕೆ ಕೂಲಿ ಕೆಲಸಕ್ಕೆ ಆತನ ಟಂ,ಟಂನಲ್ಲಿ ಹೋಗುವುದು ಬರುವುದು ಮಾಡುತ್ತಿದ್ದಳು. ಸದರಿಯವನು ಅಪ್ರಾಪ್ತ 14 ವರ್ಷದ ನನ್ನ ತಂಗಿಯನ್ನು ಯಾವುದೋ ದುರುದ್ದೇಶದಿಂದ ಪುಸಲಾಯಿಸಿ ನಮ್ಮ ಬೀಗರಿಗೆ ಸುಳ್ಳು ಹೇಳಿ ಕಾರಬೋಸ್ಗಾ ಗ್ರಾಮದ ನಮ್ಮ ಸಂಬಂಧಿಕರ ಮನೆಯಿಂದ ಅಪಹರಿಸಿಕೊಂಡು ಹೋಗಿರುತ್ತಾನೆ. ಎಲ್ಲಾ ಕಡೆಗೆ ಹುಡಕಾಡಿದರು ಸಿಗದ ಕಾರಣ ತಡವಾಗಿ  ಇಂದು ದೂರು ನೀಡುತ್ತಿದ್ದು. ಕಾರಣ ಸದರಿಯವನ ಮೇಲೆ ಕಾನೂನಿನ ಕ್ರಮ ಕೈಗೊಂಡು ನನ್ನ ತಂಗಿಯನ್ನು ಪತ್ತೆ ಮಾಡಿಕೊಡಲು ವಿನಂತಿ ಅಂತಾ ನೀಡಿದ  ದೂರಿನ ಸಾರಾಂಶದ ಮೇಲಿಂಶದ ಮೇಲಿಂದ ಪ್ರಕರಣ ವರದಿಯಾಗಿರುತ್ತದೆ.