POLICE BHAVAN KALABURAGI

POLICE BHAVAN KALABURAGI

21 August 2012

GULBARGA DISTRICT REPORTED CRIME


ಅಪಘಾತ ಪ್ರಕರಣ:
ಫರತಬಾದ ಪೊಲೀಸ್ ಠಾಣೆ: ದಿನಾಂಕ:20-08-=2012 ರಂದು ರಾತ್ರಿ ಸುಮಾರಿಗೆ ನಾನು ದೇವಪ್ಪಾ ಮತ್ತು ನಿಮ್ಮ ಮಗ ಶಿವಶರಣ್ಪಾ ಕೂಡಿ ಮದರಿ ಗ್ರಾಮಕ್ಕೆ ಹೋಗಿ ಸಾಯಂಕಾಲ 6-00 ಗಂಟೆಯ ಸುಮಾರಿಗೆ ಟ್ರಾಕ್ಟರ ಖಣಕಿ ಲೋಡ ಇಳಿಸಿ ಬರುತ್ತಿರುವಾಗ ಸದರಿ ಟ್ರಾಕ್ಟರವನ್ನು ಶಿವಶರಣಪ್ಪನು ನಡೆಸುತ್ತಿದ್ದು, ನಾನು ಟ್ರಾಲಿಯಲ್ಲಿ ಕುಳಿತ್ತಿದ್ದೇನೆ. ಮುಂದೆ ನಾವು ರಾಷ್ಟ್ರೀಯ ಹೆದ್ದಾರಿ 218 ರಸ್ತೆಯ ಹಸನಾಪೂರ ಕ್ರಾಸ ದಾಟಿ ಸ್ವಲ್ಪ ಮುಂದೆ ಬರುತ್ತಿದ್ದಾಗ ಎದುರುಗಡೆಯಿಂದ ಅಂದರೆ ಗುಲಬರ್ಗಾ ಕಡೆಯಿಂದ ಒಬ್ಬ ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕನು ತನ್ನ ಬಸ್ಸನ್ನು ಅತೀವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಅಂದಾಜು 8-45 ಪಿ.ಎಮ್‌ ಸುಮಾರಿಗೆ ನಮ್ಮ ಟ್ರಾಕ್ಟರಕ್ಕೆ ಎದುರುಗಡೆಯಿಂದ ಡಿಕ್ಕಿ ಪಡಿಸಿದ್ದರಿಂದ ಶಿವಶರಣಪ್ಪಾ ಈತನು ಕೆಳಗೆ ಬಿದ್ದಾಗ ಟ್ರಾಕ್ಟರದ ಟ್ರಾಲಿಯ ಹಿಂದಿನ ಗಾಲಿ ಎದೆಯ ಹಾಗೂ ತಲೆಯ ಮೇಲೆ ಹಾದು ಹೋಗಿದ್ದರಿಂದ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದ್ದರಿಂದ ನಾವು ಮನೆಯಲ್ಲರೇಲ್ಲರೂ ಸ್ಥಳಕ್ಕೆ ಬಂದು ನೋಡಲಾಗಿ ನನ್ನ ಮಗನು ಅಪಘಾತದಿಂದ ಟ್ರಾಕ್ಟರನಿಂದ ಕೆಳಗೆ ಬಿದ್ದು ಟ್ರಾಕ್ಟರದ ಟ್ರಾಲಿಯ ಹಿಂದಿನ ಗಾಲಿ ಎದೆಯ ಹಾಗೂ ತಲೆಯ ಮೇಲೆ ಹಾದು ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ನನ್ನ ಮಗನ ಸಂಗಡ ಇದ್ದ ದೇವಪ್ಪಾ ದಂಡೋತ್ತಿ ಈತನಿಗೆ ಯಾವುದೇ ಗಾಯಗಳಾಗಿರುವುದಿಲ್ಲ. ಅಲ್ಲೇ ನಿಂತ್ತಿದ್ದ ಬಸ್ ನಂಬರ ನೋಡಲು ಕೆಎ-32 ಎಫ್.-1084 ಇದ್ದು ಸದರಿ ಬಸ್ಸಿನ ಚಾಲಕನ ಹೆಸರು ಅಶೋಕ ತಂದೆ ಸೈದಪ್ಪಾ ಗಜಕೋಶ ಅಂತಾ ಗೊತ್ತಾಯಿತು. ಕಾರಣ ಸದರಿ ಬಸ್ಸಿನ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಶ್ರೀ ಶಿವಯೋಗೆಪ್ಪಾ ತಂದೆ ಸಾಯಿಬಣ್ಣ ಸಾ|| ನದಿಸಿನ್ನೂರ ತಾ|| ಜಿ|| ಗುಲಬರ್ಗಾ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 109/2012 ಕಲಂ 279 304 (ಎ) ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.