ಇಸ್ಪೀಟ ಜೂಜಾಟದಲ್ಲಿ ನಿರತವರ ಬಂದನ :
ಜೇವರ್ಗಿ ಠಾಣೆ : ದಿನಾಂಕ ೦2.08.2015 ರಂದು ಮಧ್ಯಾಹ್ನ ಜೇವರಗಿ ಪಟ್ಟಣದ ಸಿದ್ದು ಸಾಹುಕಾರ ಹೊಲದ ಕಚ್ಚಾ ರಸ್ತೆಯ ಪಕ್ಕದ
ಚಾಗದಲ್ಲಿ ಜನತಾ ಕಾಲೋನಿ ಎರಿಯಾದ ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ್ ಎಲೆಗಳ ಸಹಾಯದಿಂದ ಜೂಜು
ಆಡುತ್ತಿದ್ದ ಬಗ್ಗೆ ಬಾತ್ಮಿ ಬಂದ ಮೇರೆಗೆ
ಪಿ.ಎಸ್.ಐ. ಜೇವರ್ಗಿ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ 05 ಜನರನ್ನು ವಶಕ್ಕೆ ತೆಗೆದುಕೊಂಡು ಸದರಿವರ ಹೆಸರು
ವಿಚಾರಿಸಲು 1. ಶ್ರೀಮಂತ ತಂದೆ ಯಶವಂತರಾಯ
ಕೋಳಕೂರ 2. ಲಕ್ಷ್ಮಣ ತಂದೆ ರಾಮರಾವ್ ಕುಲಕರ್ಣಿ 3.
ರಾಜಶೇಖರ ತಂದೆ ರುದ್ರಗೌಡ ಆಲೂರ 4. ಸಂಗಣ್ಣ ತಂದೆ ಗುರಣ್ಣ ಹುಗಾರ 5. ಬಸವರಾಜ ತಂದೆ ಗುರಣ್ಣ ಲಾಡಿ ಸಾ : ಎಲ್ಲರು ಜೇವರಗಿ
ಅಂತಾ ತಿಳಿಸಿದ್ದು ಸದರಿಯವರಿಂದ ಜೂಜಾಟಕ್ಕೆ
ಬಳಸಿದ 52 ಇಸ್ಪೀಟ ಎಲೆಗಳು ಹಾಗು ನಗದು ಹಣ 2.830/- ರೂ ಗಳನ್ನು ಜಪ್ತಿ ಮಾಡಿಕೊಂಡು ಸದರಿ ಆರೋಪಿತರೊಂದಿಗೆ ಜೇವರ್ಗಿ
ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಜೇವರ್ಗಿ
ಠಾಣೆ : ದಿನಾಂಕ 02.08.2015 ರಂದು ಮಧ್ಯಾಹ್ನ ಬಿರಾಳ ಬಿ ಗ್ರಾಮದ ಮಸೂತಿ ಮುಂದಿನ ಖೂಲ್ಲಾ ಸಾರ್ವಜನಿಕ
ಸ್ಥಳದಲ್ಲಿ ಇಸ್ಪೇಟ್ ಎಲೆಗಳ ಸಹಾಯದಿಂದ ಜೂಜು ಆಡುತ್ತಿದ್ದ ಬಗ್ಗೆ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಜೇವರ್ಗಿ ಹಾಗು
ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ
ದಾಳಿ ಮಾಡಿ 10 ಜನರನ್ನು ವಶಕ್ಕೆ ತೆಗೆದುಕೊಂಡು ಅವರ ಹೆಸರು ವಿಳಾಸ ವಿಚಾರಿಸಲು 1.
ಈರಪ್ಪ ತಂದೆ ಚೆನ್ನಬಸಪ್ಪ ಮಳಗ 2. ಹಣಮಂತರಾಯ ತಂದೆ ಭೀಮರಾಯ ನಾಯ್ಕೋಡಿ 3. ಪರಮಣ್ಣ ತಂದೆ ಲಕ್ಕಪ್ಪ ಲಖಾಣಾಪೂರ 4. ಸಿದ್ದು ತಂದೆ ಮಲ್ಲಪ್ಪ ನಂದಹಳ್ಳಿ 5. ಮಲ್ಲಪ್ಪ ತಂದೆ ಪರಮೇಶ್ವರಾಯ ಲಖಾಣಾಪೂರ 6. ದೇವರಾಜ ತಂದೆ ಚಂದಣ್ಣ ದೊಡ್ಡಮನಿ 7. ವಿಶ್ವರಾದ್ಯ ತಂದೆ ರಾಮಣ್ಣ ಟಣಕೇದಾರ 8. ಸಾಯಿಬಣ್ಣ ತಂದೆ ಅಂಬಲಪ್ಪ ನಾಗನಟಗಿ 9. ಭೀಮರಾಯ ತಂದೆ ಸಾಯಿಬಣ್ಣ ನಾಯ್ಕೋಡಿ 10 ಕರೆಪ್ಪ ತಂದೆ ಕೃಷ್ಣಾ ಕಕಸಗೇರಿ ಸಾ: ಎಲ್ಲರು ಬಿರಾಳ (ಬಿ) ಅಂತಾ ಹೇಳಿದ್ದು ಸದರಿಯವರರಿಂದ ಜೂಜಾಟಕ್ಕೆ ಬಳಸಿದ 52 ಇಸ್ಪೀಟ ಎಲೆಗಳು ಹಾಗು ನಗದು ಹಣ 1260/- ರೂ ವಶಪಡಿಸಿಕೊಂಡು ಸದರಿಯವರೊಂದಿಗೆ ಜೇವರ್ಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಕಳವು ಪ್ರಕರಣ :
ಜೇವರ್ಗಿ ಠಾಣೆ : ದಿನಾಂಕ ೦1.08.2015 ರಂದು 23:30 ಗಂಟೆಯಿಂದ ದಿನಾಂಕ 02.08.2015 ರಂದು 05:00 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಜೇವರಗಿ ಪಟ್ಟಣದ ದತ್ತ ನಗರದಲ್ಲಿರುವ
ನನ್ನ ಮನೆಯ ಬಾಗಿಲ ಕೀಲಿ ಮುರಿದು ಮನೆಯ ಅಲಮಾರಿಯಲ್ಲಿದ್ದ ಒಟ್ಟು ಅಂ.ಕಿ 24.500 ರೂ ಕಿಮ್ಮತ್ತಿನ ಬಂಗಾರದ ಆಭರಣಗಳನ್ನು ಕಳ್ಳತನ
ಮಾಡಿಕೊಂಡು ಹೋಗಿರುತ್ತಾರೆ ಅಂತಾ ಶ್ರೀ ಭೀಮಪ್ಪ
ತಂದೆ ನಾಗಪ್ಪ ಲಂಬಾಣಿ ಸಾ : ದತ್ತ ನಗರ ಜೇವರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅತ್ಯಾಚಾರ
ಪ್ರಕರಣ :
ಮಹಿಳಾ
ಠಾಣೆ : ಶ್ರೀಮತಿ ಕಲಬುರಗಿ ಇವರ ಮಗಳಾದ ಕುಮಾರಿ ಇವಳನ್ನು 1) ರಾಚಯ್ಯಾ ಸ್ವಾಮಿ 2) ಜಗದೇವಿ 3)ಸುಜಾತಾ 4) ಬಸ್ಸಯ್ಯಾ ಇವರುಗಳು ಅಪಹರಣ
ಮಾಡಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ
ದಾಖಲಾಗಿದ್ದು ಅಪಹರಣಕೊಳಗಾದ sಕುಮಾರಿ ಇವಳು ದಿನಾಂಕ: 01.08.2015 ರಂದು ಪತ್ತೆಯಾಗಿದ್ದು ದಿನಾಂಕ: 07.07.2015
ರಂದು ಬೆಳಗ್ಗೆ 9.30 ಗಂಟೆಯ ಸುಮಾರಿಗೆ ಮನೆಯಿಂದ ಹೊರಗಡೆ ಬಂದು ಕಾಲೇಜಿಗೆ
ಹೋಗಕೇನ್ನುವಷ್ಟರಲ್ಲಿ ಬಸಯ್ಯ @ ಬಸಲಿಂಗಯ್ಯ ಇತನು ನನಗೆ ಜಬರದಸ್ತಿಯಿಂದ ಯಾವುದೋ ಒಂದು ಆಟೋದಲ್ಲಿ ಕರೆದುಕೊಂಡು ಬಸ್ಸ
ಸ್ಟ್ಯಾಂಡಿಗೆ ಹೋದನು ಅಲ್ಲಿಂದ ಬಸ್ಸ ಮುಖಾಂತರ ಬೆಂಗಳೂರಿಗೆ ಹೋಗಿ ಅಲ್ಲಿ ದಿನಾಂಕ 08.07.2015
ರಂದು ನಸುಕಿನ ಜಾವ ಬಸ್ಸ ಸ್ಟ್ಯಾಂಡದಲ್ಲಿ ಇಳಿದುಕೊಂಡೆವು. ನಂತರ ಬಸಯ್ಯ @ ಬಸಲಿಂಗಯ್ಯ ಇತನು ಮತ್ತೊಂದು ಬಸ್ಸಿನಲ್ಲಿ ಬೆಳಗಾವಿ
ಕರೆದುಕೊಂಡು ಹೋಗಿ ಅಲ್ಲಿಂದ ಮತ್ತೆ ಗೋವಾಕ್ಕೆ ಬಸ್ಸಿನಲ್ಲಿ ಕರೆದುಕೊಂಡು
ದಿನಾಂಕ 09.07.2015 ರಂದು ಗೋವಾದ ಬಿಚ್ ಸಮೀಪ ಇರುವ ತಿರುಮಲ ಲಾಡ್ಜಗೆ ಕರೆದುಕೊಂಡು ಹೋದನು
ಅಲ್ಲಿ ಬಸಯ್ಯ @ ಬಸಲಿಂಗಯ್ಯ ಇತನು ನಾನು ಬೇಡವೆಂದರು ನನಗೆ ಜಬರದಸ್ತಿಯಿಂದ ಸಂಬೋಗ ಮಾಡಿರುತ್ತಾನೆ.ಒಂದು
ವಾರದ ತನಕ ಅಲ್ಲಿಯೇ ನನಗೆ ಇಟ್ಟು ದಿನಾಲು ನನ್ನೊಂದಿಗೆ ಸಂಬೋಗ ಮಾಡಿರುತ್ತಾನೆ. ಅಂತಾ ಸಲ್ಲಿಸಿದ
ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆತ್ಮ ಹತ್ಯ
ಮಾಡಿಕೊಳ್ಳುವಂತೆ ಪ್ರಚೊದನೆ ಮಾಡಿದ ಪ್ರಕರಣ :
ನೆಲೋಗಿ
ಠಾಣೆ : ಶ್ರೀ ಸಾಹೇಬಗೌಡ ತಂದೆ
ಸಿದ್ದಪ್ಪ ಚಾಂದಕವಠೆ ಸಾ-
ಮುರಗಾನೂರ ತಾ-ಜೇವರ್ಗಿ ಜಿ- ಕಲಬುರ್ಗಿ ರವರ ಸಣ್ಣಮಗ ಮಲ್ಲಣ್ಣ ಇವನು ಮತ್ತು ನಮ್ಮ ಅಣ್ಣ
ಸಿದ್ರಾಮಪ್ಪನು ಹೊಲದಲ್ಲಿ ಇರುತ್ತಿದ್ದು ಈಗ ಸುಮಾರು ಒಂದು ತಿಂಗಳ ಹಿಂದೆ ನನ್ನ ಮಗ ಮಲ್ಲಣ್ಣನ
ಸಂಗಡ ನಮ್ಮೂರ ಶೇಖಸಾಬ ತಂದೆ ಕರಿಮಸಾಬ ಮುಲ್ಲಾ, ಬಂದೆನವಾಜ ತಂದೆ ಕರಿಮಸಾಬ ,ಸದ್ದಾಂ ತಂದೆ ಖಾಸಿಂಸಾಬ
,ಸಾಹೇಬಲಾಲ ತಂದೆ ನಬಿಸಾಬ ಮುಲ್ಲಾ , ಶಬ್ಬಿರ ತಂದೆ ಅಬದುಲ
ಸಾಬ ,ಸದ್ದಾಂ ತಂದೆ
ಶಾಹಾಬುದ್ದಿನ ಇವರು ಜಗಳ ಮಾಡಿ ನಮ್ಮ ಮನೆಯವರೆಗೆ ಬಂದು ನನ್ನ ಮಗನಿಗೆ ಹೊಡೆದು ಹೊಗಿದ್ದು ಅದ್ರೂ
ನಾವು ಸುಮ್ಮನೆ ಇದ್ದು ನಂತರ ದಿನಾಂಕ 07-07-2015 ರಂದು ಮುಂಜಾನೆ 7-8 ಎ.ಎಂ.ಕ್ಕೆ ಅವದಿಯಲ್ಲಿ ನನ್ನ
ಮಗ ಮಲ್ಲಣ್ಣನು ಹೊಲದಲ್ಲಿಯೆ ಮಾವಿನ ಗಿಡಕ್ಕೆ ಊರಲು
ಹಾಕಿಕೊಂಡು ಸತ್ತು ಹೊದನು ಅಂದು ನನ್ನ ಮಗನ ದುಃಖದಲ್ಲಿ ನಾನು ಏನೆನು ಅರ್ಜಿ ಸಲ್ಲಿಸಿದ್ದು ಅದರೂ
ನನ್ನ ಮಗನು ಊರಲು ಹಾಕಿಕೊಂಡು ಸತ್ತ ಸಂಶಯ ಇದೆ ಅಂತ ಹೇಳಿದ್ದು ಈಗ ನಂತರ ಊರಲ್ಲಿ ಜನರು
ಹೇಳಿದ್ದು ಏನೆಂದರೆ ಸಿದ್ದಣ್ಣ ತಂದೆಮಲ್ಲೇಶ ಬಿರೆದಾರ ಮತ್ತು ಶ್ರೀಮಂತರಾಯ ತಂದೆಬಸವಂತರಾಯ ,ಭಗವಂತರಾಯ ತಂದೆ ನಾಡಗೌಡ
ಇವರು ಹೇಳಿದರು ನಮ್ಮ ಮುಂದೆ ಈ ಮೇಲಿನ ಆರು ಜನರು ಇನ್ನು ಆ ಮಲ್ಲೆಗೆ ಬಿಡುತ್ತೆವಲ್ಲಿ ಅವನಿಗೆ
ಊರಲು ಹಾಕಿ ಸಾಯಿಸಿ ಬಿಡುತ್ತೇವೆ ಅನ್ನುತ್ತಿದ್ದರು ಅವರು ನಾವು ಕೇಳಿಸಿಕೊಂಡಿದ್ದೇವೆ ನಾವು
ಅವರು ಅನ್ನುವದನ್ನು ನೋಡಿದೇವೆ ಅಂತ ಹೇಳಿದ್ದು ನನ್ನ
ಮಗ ಮಲ್ಲಣ್ಣನು ಅವರು ಹೊಡೆದಿದ್ದರಿಂದ ಅವರು ಅನ್ನುವದನ್ನು ಕೇಳಿ ಅಂಜಿ ಭಯದಿಂದ ಊರಲು ಹಾಕಿ ಕೊಂಡು ಸತ್ತಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ನಿಂಬರ್ಗಾ ಠಾಣೆ : ಶ್ರೀಮತಿ ಮಲ್ಲಮ್ಮ ಗಂಡ
ಧರ್ಮಣ್ಣ ಶಿರೂರ ಸಾ|| ಹಿತ್ತಲಶಿರೂರ ಇವರು ದಿನಾಂಕ 02-08-2015 ರಂದು ಬೆಳಿಗ್ಗೆ ತಿಪ್ಪಿ ಜಾಗೆಯ ಸಂಭಂಧ ಹಿತ್ತಲಶಿರೂರ ಗ್ರಾಮದ
ಫಿರ್ಯಾದಿಯ ಮನೆಯು ಮುಂದೆ 1. ಶರಣಪ್ಪ ತಂದೆ ಹಾವಣ್ಣ ಪೂಜಾರಿ 2.ಶಿವಣ್ಣ ತಂದೆ ಹಾವಣ್ಣ ಪೂಜಾರಿ, 3. ಸಿದ್ದಪ್ಪ ತಂದೆ ಭೂತಾಳಿ ಪೂಜಾರಿ , 4. ಮಹಾಂತಪ್ಪ ತಂದೆ ಭೂತಾಳಿ ಪೂಜಾರಿ, 5. ಗಂಗಾಬಾಯಿ ಗಂಡ ಶರಣಪ್ಪ ಪೂಜಾರಿ, 6. ಪಾರ್ವತಿ ಗಂಡ ಶಿವಣ್ಣ
ಪೂಜಾರಿ 7. ಸಾಬವ್ವ ಗಂಡ ಭೂತಾಳಿ ಪೂಜಾರಿ, ಸಾ : ಎಲ್ಲರೂ ಹಿತ್ತಲಶಿರೂರ
ಗ್ರಾಮ. ಎಲ್ಲರು ಆಕ್ರಮ ಕೂಟ ಕಟ್ಟಿಕೊಂಡು ಜಗಳ
ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಕಲ್ಲಿನಿಂದ ಕೈಯಿಂದ ಹೊಡೆ ಬಡೆ ಮಾಡಿ ಜೀವ
ಭಯಪಡಿಸಿರುತ್ತಾರೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ನಿಂಬರ್ಗಾ
ಠಾಣೆ : ಶ್ರೀಮತಿ ಗಂಗಾಬಾಯಿ ಗಂಡ
ಶರಣಪ್ಪ ಪೂಜಾರಿ ಸಾ|| ಹಿತ್ತಲಶಿರೂರ ಇವರು ದಿನಾಂಕ 02/08/2014 ರಂದು ಬೆಳಿಗ್ಗೆ ತಿಪ್ಪಿ ಜಾಗೆಯ ಸಂಭಂಧ ಹಿತ್ತಲಶಿರೂರ ಗ್ರಾಮದ
ಫಿರ್ಯಾದಿಯ ಮನೆಯು ಮುಂದೆ 1. ಬರಗಾಲಿ ತಂದೆ ಧರ್ಮಣ್ಣ ಪೂಜಾರಿ 2. ಬೀರಣ್ಣ ತಂದೆ ಧರ್ಮಣ್ಣ ಪೂಜಾರಿ, 3. ವಿಠ್ಠಲ ತಂದೆ ಶ್ರೀಮಂತ ಪೂಜಾರಿ 4. ಮಂಗಲಾ ಗಂಡ ಬರಗಾಲಿ
ಪೂಜಾರಿ, 5. ಮಲ್ಲವ್ವ ಗಂಡ ಧರ್ಮಣ್ಣ ಪೂಜಾರಿ, 6. ಗಂಗಾಬಾಯಿ ಗಂಡ ಮಲಕಪ್ಪ
ಪೂಜಾರಿ 7. ಅರ್ಜುನ ತಂದೆ ಚಂದ್ರಾಮ ಪೂಜಾರಿ, ಸಾ|| ಎಲ್ಲರೂ ಹಿತ್ತಲಶಿರೂರ ಗ್ರಾಮ. ರವರು ಕುಡಿಕೊಂಡು ಆಕ್ರಮ ಕೂಟ ರಚಿಸಿಕೊಂಡು ಜಗಳ ತೆಗೆಯುವ
ಸಂಭಂಧ ಅವಾಚ್ಯ ಶಬ್ದಗಳಿಂದ ಬೈದು ಕಲ್ಲಿನಿಂದ ಕೈಯಿಂದ ಹೊಡೆ ಬಡೆ ಮಾಡಿ ಜೀವ ಭಯಪಡಿಸಿರುತ್ತಾರೆ.
ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾತಿ ನಿಂದನೆ ಮಾಡಿದ ಪ್ರಕರಣ :
ಶಾಹಾಬಾದ ನಗರ
ಠಾಣೆ : ಶ್ರೀ ದಿಲೀಪ ತಂದೆ ಬಸವರಾಜ ಹುಗ್ಗಿ ರವರು ದಿನಾಂಕಃ 31.07.2015 ರಂದು ಮಧ್ಯಾಹ್ನ ನಮ್ಮೂರಿನಲ್ಲಿ ಬಾವಿಗೆ ನೀರು
ತರಲು ಹೋಗಿದ್ದು ಆಗ ಬಾವಿಯ ಹತ್ತಿರ
ತುಂಬಿದ ಕೊಡ ಇಟ್ಟಿದ್ದರು ಬಾವಿಯಿಂದ
ನೀರು ತೆಗೆಯಲು ಆ ಕೊಡ ಅಡ್ಡವಿದ್ದ ಕಾರಣ ನಾನು ಆ ಕೊಡವನ್ನು ಪಕ್ಕಕ್ಕೆ
ಸರಿಸಿ ಇಟ್ಟೆ ಆಗ ಅಲ್ಲಿಗೆ
ಬರುತ್ತಿದ್ದ ವಸಂತಿ ಗಂಡ ಅಲ್ಲಮ ಪ್ರಭು ಸಿಭಾ ಅನ್ನೊ ಮೆಲ್ಜಾತಿಯ ಮಹಿಳೆ ಎ ಹಾಟ್ಯಾ ಯಾಕಲೇ
ನಮ್ಮ ಕೊಡ ಮುಟ್ಟಿದ್ದಿಯಾ
ನಿಮ್ಮಮ್ಮನ್ನ ಭೋಳಿ ಮಗನೆ ನೀ ನಮ್ಮ ಕೊಡಾ
ಮುಟ್ಟುತ್ತಿಯಾ ಸ್ವಲ್ಪ ತಡಿ ನನ್ನ ಗಂಡನಿಗೆ
ಕರೆದುಕೊಂಡು ಬಂದು ನಿನಗೆ ಹೊಡೆಸುತ್ತೇನೆ ಅಂತಾ ಹೇಳಿ ಅವರ ಮನೆಗೆ ಹೋದಳು ನಂತರ ಸ್ವಲ್ಪ ಸಮಯದ ನಂತರ ಅವಳ ಗಂಡ
ಬಂದು ಬಾವಿಯ ಹತ್ತಿ ನನಗೆ ಕೆಳಿದಾನೆ
ಅಂತೆ ಆಗ ಬಾವಿಯ ಹತ್ತಿರ ಇದ್ದ ಸಿವಪ್ಪನಿಗೆ ಕೆಳಿದಾನೆ ಆ ಭೊಸಿಕ್ಯಾ ದಿಲೀಪ ಎಲ್ಲ ಇದ್ದಾನೆ ಅಂತಾ
ಕೇಳಿದಾನೆ ಆಗ ಶಿವಪ್ಪಾ ಮನೆಯಲ್ಲಿ ಇದ್ದಾನೆ ಅಂತಾ
ಹೇಳಿದ್ದಾನೆ, ನೇರವಾಗಿ ಬಂದು ಏ ಬೋಸಡಿ ಮಗನೆ ದಿಲ್ಯಾ
ಯಾಕಲೇ ನಮ್ಮ ಕೊಡ ಮುಟ್ಟಿ ಮೈಲಿಗೆ ಮಾಡಿ ನನ್ನ ಹೆಂಡತಿಗೆ
ಜಗಳ ತೆಗೆದಿದ್ದಿಯಾ ಹಂಡ ಹೊಲೆಯ ಅಂತಾಬೈಯ್ದು
ಕೈಯಿಂದ ನನ್ನನ್ನು ಗೋಡಗೆ ಬಡಿಸಿದಾಗ ನನ್ನ
ತಲೆ ಗೋಡೆಗೆ ತಗುಲಿ ರಕ್ತಗಾಯವಾಗಿರುತ್ತದೆ
ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.