POLICE BHAVAN KALABURAGI

POLICE BHAVAN KALABURAGI

18 December 2018

KALABURAGI DISTRICT REPORTED CRIMES

ಆಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದ ಮಧ್ಯ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 17-12-2018 ರಂದು ಉಡಚಾಣ ಗ್ರಾಮದಲ್ಲಿ ಎರಡು ಜನರು ಅನದಿಕೃತವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದಾರೆ,  ಅಂತಾ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಉಡಚಾಣ ಗ್ರಾಮದಲ್ಲಿ ಶ್ರೀ ಹುಚ್ಚಲಿಂಗೇಶ್ವರ ದೇವಸ್ಥಾನಕ್ಕೆ ಹೋಗುವ ರಸ್ತೆಗೆ ನಮ್ಮ ವಾಹನವನ್ನು ನಿಲ್ಲಿಸಿ ನಡೆದುಕೊಂಡು ಸ್ವಲ್ಪ ಮುಂದೆ ಹೋಗಿ ನೊಡಲು ಒಂದು ಪಾನಶಾಪ್ ಮುಂದೆ  ಎರಡು ಜನರು ತಮ್ಮ ಹತ್ತಿರ ರಟ್ಟಿನ ಬಾಕ್ಸಗಳನ್ನು ಇಟ್ಟುಕೊಂಡು, ಜನರಿಂದ ಹಣ ಪಡೆದು ತಮ್ಮ ಹತ್ತಿರವಿದ್ದ ರಟ್ಟಿನ ಬಾಕ್ಸದಲ್ಲಿ ಕೈ ಹಾಕಿ ಜನರಿಗೆ ಮದ್ಯವನ್ನು ಮಾರಾಟ ಮಾಡಿ, ಬಂದ ಹಣವನ್ನು ರಟ್ಟಿನ ಬಾಕ್ಸನಲ್ಲಿ ಇಡುತ್ತಿದ್ದುದನ್ನು ಖಚಿತಪಡಿಸಿಕೊಂಡು ದಾಳಿ ಮಾಡಲು  ಸದರಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯೆಕ್ತಿಗಳು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಓಡಿ ಹೊದರು, ಆಗ ನಾವು ಸದರಿಯವರನ್ನು ಬೆನ್ನಟ್ಟಿದರೂ ಸಹ ನಮ್ಮಿಂದ ತಪ್ಪಿಸಿಕೊಂಡು ಹೋಗಿರುತ್ತಾರೆ. ಸದರಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯೆಕ್ತಿಗಳು ಸ್ಥಳದಲ್ಲಿ ಬಿಟ್ಟು ಹೋದ ರಟ್ಟಿನ ಬಾಕ್ಸನ್ನು ಪರಿಶೀಲಿಸಿ ನೋಡಲು ಬಾಕ್ಸದಲ್ಲಿ 1)  180 ಎಮ್ ಎಲ್ ಅಳತೆಯ OLD  TAVERN  WHISKY ಕಂಪನಿಯ ಒಟ್ಟು 41 ಪೌಚಗಳು ಇದ್ದವು, ಅಂದಾಜು ಕಿಮ್ಮತ್ತು 3034/- ರೂ 2) 90 ಎಮ್ ಎಲ್ ಅಳತೆಯ Origanal Choice ಕಂಪನಿಯ ಒಟ್ಟು 39 ಪೌಚಗಳು ಇದ್ದವು, ಅಂದಾಜು ಕಿಮ್ಮತ್ತು 1170/- ರೂ 3) ಮದ್ಯ ಮಾರಾಟ ಮಾಡಿದ ನಗದು ಹಣ 340/- ರೂ ಇದ್ದವು. ಹಾಗೂ ಸದರಿ ಪಾನಶಾಪ ಮುಂದೆ ಜನರು ಸರಾಯಿ ಕುಡಿದು ಬಿಸಾಡಿ ಹೋಗುತ್ತಿದ್ದ ಖಾಲಿ ಪೌಚಗಳು ಇದ್ದವು. ನಂತರ ಬಾತ್ಮಿದಾರರಿಗೆ ಮದ್ಯ ಮಾರಾಟ ಮಾಡುತ್ತಿದ್ದವರ ಹೆಸರು ವಿಳಾಸ ವಿಚಾರಿಸಲು, 1) ಕಲ್ಯಾಣಿ ತಂದೆ ಸುಬ್ಬಣ್ಣ ನೆಲೋಗಿ ಸಾ|| ಉಡಚಾಣ 2) ಹುಚ್ಚಪ್ಪ ತಂದೆ ತುಕಾರಾಮ ಅವಟಿ ಸಾ|| ಉಡಚಾಣ ಎಂದು ಗೊತ್ತಾಗಿರುತ್ತದೆ. ಪಾನಶಾಪ್ ಬಗ್ಗೆ ವಿಚಾರಿಸಲು ಪಾನಶಾಪ್ ಮದ್ಯ ಮರಾಟ ಮಾಡುತ್ತಿದ್ದ ಕಲ್ಯಾಣಿ ನೆಲೋಗಿ ಈತನ ಪಾನ್ ಶಾಪ್ ಇರುತ್ತದೆ ಎಂದು ಗೊತ್ತಾಗಿರುತ್ತದೆ. ನಂತರ ಸದರಿ ಒಟ್ಟು 4204/- ರೂ ಕಿಮ್ಮತ್ತಿನ ಒಟ್ಟು 80 ಮದ್ಯದ ಪೌಚಗಳನ್ನು ವಶಕ್ಕೆ ತೆಗೆದುಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಶಿವಪುತ್ರ ತಂದೆ ಲಕ್ಕಣ್ಣ ಬುರಲಿ ಸಾ||ಅಮೋಘಿಸಿದ್ದ ಗುಡಿ ಹತ್ತಿರ ಅಫಜಲಪೂರ ರವರ  ತಂದೆಯ ಹೆಸರಿನಲ್ಲಿ 9 ಏಕರೆ 25 ಗಂಟೆ ಜಮೀನು ಇರುತ್ತದೆ ನನ್ನ ಮಗನಾದ ಸುನಿಲ ಈತನು ಒಕ್ಕಲುತನ ಕೆಲಸ ಮಾಡಿಕೊಂಡಿರುತ್ತಾರೆ ನನ್ನ ಮಗ ಒಕ್ಕಲುತನ ಕೆಲಸಕ್ಕೆ ಖಾಸಗಿಯಾಗಿ 50,000/-ರೂಪಾಯಿ ಸಾಲ ಮಾಡಿದ್ದು ಇರುತ್ತದೆ ಈ ವರ್ಷ ಮಳೆ ಇಲ್ಲದ ಕಾರಣ ನನ್ನ ಮಗ ನಮ್ಮ ಮನೆಯಲ್ಲಿ ನಮ್ಮ ಮುಂದೆ ಈ ಸಲ ಮಳೆ ಇಲ್ಲ ಬರಗಾಲ ಇದೆ ನಾನು ಒಕ್ಕಲುತನ ಕೆಲಸಕ್ಕೆ ಮಾಡಿದ ಸಾಲ ಹೇಗೆ ಮುಟ್ಟಿಸುವದು ಅಂತ ಹೆಳುತಿದ್ದ ನಾನು ನನ್ನ ಹೆಂಡತಿ ನನ್ನ ಮಗನಿಗೆ ನಾವು  ಸಾಲ ಮುಟ್ಟಿಸುತ್ತೇವೆ ನಿನು ಅದೇ ವಿಚಾರ ಮಾಡಬೇಡ ಅಂತ ತಿಳಿಸಿ ಹೇಳಿರುತ್ತೇವೆ ದಿನಾಂಕ 16/12/2018 ರಂದು ಬೆಳಿಗ್ಗೆ 10.00 ಗಂಟೆ ಸುಮಾರಿಗೆ ನನ್ನ ಮಗ ಸುನಿಲ ಈತನು ನಮಗೆ ತಿಳಿಸಿದ್ದೆನೆಂದರೆ ನಾನು ನನ್ನ ಗೆಳೆಯನಾದ ಪ್ರಕಾಶ ಮಡಿವಾಳ ರವರ ಮೋಟಾರ್ ಸೈಕಲ್ ಮೇಲೆ ನಾನು ಹಾಗು ಪ್ರಕಾಶ ಇಬ್ಬರು ಹೊಲಕ್ಕೆ ಹೋಗಿ ಬರುತ್ತೇವೆ ಅಂತ ಹೇಳಿ ಮನೆಯಿಂದ ಹೋಗಿರುತ್ತಾನೆ ನಂತರ 11.30 ಎಎಮ್ ಸುಮಾರಿಗೆ ಪ್ರಕಾಶ ಈತನು ಪೋನ ಮಾಡಿ ನಮಗೆ ತಿಳಿಸಿದ್ದೆನೆಂದರೆ ನಾನು ಹಾಗು ಸುನಿಲ ಇಬ್ಬರು ಹೊಲಕ್ಕೆ ಬಂದು ನಾನು ತಿರುಗಾಡುತ್ತಾ ಸ್ವಲ್ಪ ಮುಂದೆ ಹೋದಾಗ ಸುನಿಲನು ನಿಮ್ಮ ಹೊಲದಲಿದ್ದ ಕ್ರೀಮಿನಾಶಕ ಔಷದಿ ಸೇವನೆ ಮಾಡಿರುತ್ತಾನೆ ನಾನು ಸಧ್ಯ ಸುನಿಲನಿಗೆ ಮೋಟಾರ್ ಸೈಕಲ್ ಮೇಲೆ ಕುಡಿಸಿಕೊಂಡು ಅಫಜಲಪೂರ ಸರಕಾರಿ ಆಸ್ಪತ್ರೆಗೆ ಬರುತಿದ್ದೇನೆ ನೀವು ಬನ್ನಿ ಅಂತ ತಿಳಿಸಿದ ಬಳಿಕ ನಾನು ನನ್ನ ಹೆಂಡತಿ ನನ್ನ ತಮ್ಮಂದಿರಾದ ಸಿದ್ದರಾಮ ಬುರಲಿ, ಮಡಿವಾಳ ಬುರಲಿ ಹಾಗು ನಮ್ಮ ಓಣಿಯ ಭಾಗಣ್ಣ ಜಮಾದಾರ , ವಿಠ್ಠಲ ಇಂಗಳಗಿ ಎಲ್ಲರು ಕೂಡಿ ಆಸ್ಪತ್ರೆಗೆ ಬಂದು ನನ್ನ ಮಗನಿಗೆ ನೋಡಿ ವಿಚಾರಿಸಲಾಗಿ ನನ್ನ ಮಗ ತಾನು ಒಕ್ಕಲುತನ ಕೆಲಸ ಕ್ಕೆ ಖಾಸಗಿಯಾಗಿ ಮಾಡಿದ ಸಾಲ ಹೇಗೆ ತಿರಿಸುವದು ಈ ಸಲ ಮಳೆ ಇಲ್ಲ ಅಂತ ತನ್ನ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಹೊಲದಲ್ಲಿ ಕರ್ಕಿ ಹುಲ್ಲಿಗೆ ಸಿಂಪರಣೆ ಮಾಡುವ ಔಷದಿ ಸೇವನೆ ಮಾಡಿರುವ ಬಗ್ಗೆ ತಿಳಿಸಿದ್ದು ನಾವು ವೈದ್ಯರ ಸಲಹೆಯಂತೆ ನನ್ನ ಮಗನಿಗೆ ಹೆಚ್ಚಿನ ಚಿಕಿತ್ಸೆ ಕುರಿತು ಕಲಬುರಗಿಯ ಬಾಬಾ ಹಾರ್ಟ ಫೌಂಡೆಷನ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿರುತ್ತೆವೆ ನನ್ನ ಮಗನಿಗೆ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 17/12/2018 ರಂದು  3.30 ಎಎಮ್ ಸುಮಾರಿಗೆ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಘಾತ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀಮತಿ ಚಿನ್ನಮ್ಮಾ ಗಂಡ ಗುಂಡಪ್ಪಾ ಹೊನ್ನಡಿ ಸಾ: ಮನ್ನಳ್ಳಿ ತಾ:ಜಿ: ಬೀದರ ರವರ ಗಂಡ ಗುಂಡಪ್ಪಾ ಲಾರಿ ಚಾಲಕನಾಗಿದ್ದು ನಮ್ಮ ಗ್ರಾಮದ ಮುಜೊಬೊದ್ದಿನ್‌‌ ರವರ ಲಾರಿ ನಂ ಕೆಎ 39 – 6239 ನೇದ್ದರ ಮೇಲೆ ಚಾಲಕ ಅಂತಾ ಕೆಲಸ ಮಾಡುತ್ತಾ ಬಂದಿರುತ್ತಾನೆ. ದಿನಾಂಕ 16/12/2018 ರಂದು ನಮ್ಮ ಗ್ರಾಮದಿಂದ ಲಾರಿಯಲ್ಲಿ ಕಬ್ಬು ತುಂಬಿಕೊಂಡು ಆಳಂದ ತಾಲ್ಲೂಕಿನ ಭೂಸನೂರ ಕಬ್ಬಿನ ಪ್ಯಾಕ್ಟರಿಗೆ ಹೋಗಿ ಕಬ್ಬು ಹಾಕಿ ಮರಳಿ ಕಲಬುರಗಿ- ಹುಮನಾಬಾದ ಮಾರ್ಗವಾಗಿ ಬರುವಾಗ ಇಂದು ಬೆಳಗಿನ ಜಾವ ಅಂದಾಜು 01:00 ಗಂಟೆ ಸುಮಾರಿಗೆ ಕಪನೂರ ಬ್ರಿಡ್ಜದಾಟಿ ನಂದಿನಿ ರಗೋಜಿ ಪೈನ್ಸನ್ಸ ಎದುರುಗಡೆ ರೋಡಿನ ಬಲಮಗ್ಗಲಿಗೆ ಚಾರಿ ಚಾಲಕ ಅತಿವೇಗದಿಂದ ಮತ್ತು ನಿರ್ಲಕ್ಷತನದಿಂದ ಹೋಗುವಾಗ ಆತನ ನಿಯಂತ್ರ ತಪ್ಪಿ ರೋಡಿನ ಬಲ ತಗ್ಗಿಗೆ ಹೋಗಿ ಎದೆಗೆ ಬಡೆದು ಸ್ಥಳದಲ್ಲೆ ಮೃತಪಟ್ಟಿರುತ್ತಾನೆ ಅಂತಾ ರೋಡಿಗೆ ಹೋಗಿ ಬರುವರು ಯಾರೋ ಲಾರಿ ಮೇಲಿನ ನಂಬರ ನೋಡಿ ಲಾರಿ ಮಾಲಿಕನಿಗೆ ಹೇಳಿದಾಗ ಲಾರಿ ಮಾಲಿಕ ನಮಗೆ ತಿಳೀಸಿದ್ದರಿಂದ ನಾನು ಮತ್ತು ನನ್ನ ಮೈದುನ ಹಾಗು ಮಾವ ಹಾಗು ಲಾರಿ ಮಾಲಿಕ ಘಟನಾ ಸ್ಥಳಕ್ಕೆ ಬಂದು ನೋಡಲು ಘಟನೆ ನಿಜ ಇರುತ್ತದೆ. ನನ್ನ ಗಂಡನು ಲಾರಿಯನ್ನು ಅತಿವೇಗದಿಂದ ಮತ್ತು ನಿರ್ಲಕ್ಷತನದಿಂದ ಚಲಾಯಿಸಿದ್ದರಿಂದ ರೋಡಿನ ತಗ್ಗಿಗೆ ಹಾಯಿಸಿದ್ದರಿಂದ ಎದೆಗೆ ಗುಪ್ತಗಾಯವಾಗಿ ಸ್ಥಳದಲ್ಲೆ ಮೃತ ಪಟ್ಟಿದ್ದು ನಿಜ ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.