POLICE BHAVAN KALABURAGI

POLICE BHAVAN KALABURAGI

03 September 2018

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ 02/09/2018 ರಂದು ರಾತ್ರಿ 11-30 ಗಂಟೆ ಸುಮಾರಿಗೆ ಮೃತ ಮಲ್ಲಿಕಾರ್ಜುನ ಇತನು ಮಾರುತಿ ಶಿಫ್ಟ ಕಾರ ಕೆಎ 30 ಎಂ 7817 ರಲ್ಲಿ ಫಿರ್ಯಾದಿ ಮತ್ತು ಆತನ ಗೆಳೆಯರಾದ ವರುಣ, ಪ್ರವೀಣ ಎಲ್ಲರೂ ಕೂಡಿಕೊಂಡು ಊಟ ಮಾಡಲು ಕಲಬುರಗಿಯಿಂದ ಕಮಲಾಪೂರ ಪೆಟ್ರೋಲಿಂಗ ಪಂಪ ಹತ್ತಿರ ಇರುವ ದಾಬಾದಲ್ಲಿ ಊಟ ಮಾಡಿಕೊಂಡು ದಿನಂಕ 03/09/18 ರಂದು ರಾತ್ರಿ  3-30 ಗಂಟೆ ಸುಮಾರಿಗೆ ಕಲಬುರಗಿ ಕಡೆ ಹೊರಟಿದ್ದು, ಮಲ್ಲಿಕಾರ್ಜುನ ಇತನು Maruti Swift Car KA 30 M 7817 ನೇದ್ದು ಅತಿವೇಗದಿಂದ ಮತ್ತು ನಿಷ್ಕಾಳಿಜಿತನದಿಂದ ನಡೆಸುತ್ತಾ ಹೊರಟಿದ್ದನ್ನು ನೋಡಿ ಅವನಿಗೆ ಸಾವಕಾಶವಾಗಿ ಕಾರು ನಡೆಸು ಅಂತಾ ಹೇಳಿದರು ಕೂಡಾ ನಮ್ಮ ಮಾತಿಗೆ ಲಕ್ಷ್ಯ ಕೊಡದೇ ಅತಿವೇಗದಿಂದ ನಡೆಸುತ್ತಾ ಬೆಳಗಿನ ಜಾವ 03-30 ಗಂಟೆ ಸುಮಾರಿಗೆ ಬೇಲೂರ (ಜೆ) ಕ್ರಾಸ ದಾಟಿದ ನಂತರ ಸಫಾರಿ ದಾಬಾ ಹತ್ತಿರ ಬಂದಾಗ ಕಾರು ರೋಡಿನ ಎಡಭಾಗದಲ್ಲಿ ಇಳಿದಾಗ ಮಲ್ಲಿಕಾರ್ಜುನ ಒಮ್ಮಿಂದ ಒಮ್ಮೇಲೆ ವೇಗದಲ್ಲಿ ಕಾರನ್ನು  ಬಲಕ್ಕೆ ತಿರುಗಿಸಿದಾಗ ರೋಡಿನ ಬಲಭಾಗದಲ್ಲಿ ಇರುವ ಒಂದು ಆಲದ ಗಿಡಕ್ಕೆ ಜೋರಾಗಿ ಡಿಕ್ಕಿ ಹೊಡೆದು ಅಪಘಾತಪಡಿಸಿದಾಗ ಮಲ್ಲಿಕಾರ್ಜುನ ಇತನಿಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿ ಮೃತಪಟ್ಟಿದ್ದನು. ವರುಣ ಮತ್ತು ಪ್ರವೀಣ ಇವರಿಗೆ ಸಾದಾ ಮತ್ತು ಭಾರಿ ಸ್ವರೂಪದ ರಕ್ತಗಾಯ ಮತ್ತು ಗುಪ್ತಗಾಯಗಳಾಗಿರುತ್ತೇವೆ. ಪ್ರವೀಣ ಸಿರಗೊಂಡ ಇತನು ಎಲ್ಲಿ ಹೋಗಿರುತ್ತಾನೆ ಎಂಬುದು ಸಧ್ಯ ಗೊತ್ತಾಗಿರುವುದಿಲ್ಲಾ. ಸದರಿ ಅಪಘಾತವು ಈ ಮೇಲೆ ಹೇಳಿದಂತೆ Maruti Swift Car KA 30 M 7817 ಚಾಲಕ ನಮ್ಮ ಸೋದರ ಅತ್ತೆ ಮಗನಾದ ಮಲ್ಲಿಕಾರ್ಜುನ ತಂದೆ ಸಂಗಣ್ಣಾ ಸುಣ್ಣೂರು ಸಾ:ದೇವಿ ನಗರ ಕಲಬುರಗಿ ಇತನ ತಪ್ಪಿನಿಂದ ಅಪಘಾತ ಸಂಭವಿಸಿದ್ದರಿಂದ ಅವನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಶ್ರೀ ಪ್ರವೀಣ ತಂದೆ ಲಕ್ಷ್ಮಣ ವಾಣಿ ಸಾ:ದೇವಿ ನಗರ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣಗಳು :
ಗ್ರಾಮೀಣ ಠಾಣೆ : ದಿನಾಂಕ 31/8/2018 ರಂದು ರಾತ್ರಿ ಶ್ರೀ ಆನಂದ ತಂದೆ ರವಿ ಮದನಕರ ಸಾ ಖರ್ಗೆ ಕಾಲೂನಿ ಶರಣಶಿರಸಗಿ ಕಲಬುರಗಿ  ಮತ್ತು ನನ್ನ ಗೆಳೆಯ ವಿವೇಕ ಇಬ್ಬರು ಕೂಡಿಕೊಂಡು ನನ್ನ ಮೋಟಾರ ಸೈಕಲಗೆ ಪೆಟ್ರೋಲ್  ಹಾಕಿಕೊಂಡು ಬರಲು ಶರಣಸಿರಸಗಿ ಮಡ್ಡಿಯಲ್ಲಿ  ಇರುವ ಹೋಟೆಲ್ ಹತ್ತಿರ ಶರಣಸಿರಸಗಿ ಮಡ್ಡಿಯಲ್ಲಿರುವ ಪೆಟ್ರೋಲ್ ಪಂಪಿಗೆ ಹೋಗಿದ್ದು , ಪೆಟ್ರೋಲ್ ಪಂಪ ಹತ್ತಿರ ರುವ ಹೋಟೆಲ ಹತ್ತಿರ ಶರಣಸಿರಸಗಿ ಮಡ್ಡಿಯ ಅರುಣ ಭರಣಿ ಮತ್ತು ಆತನ ಗೆಳೆಯರು ನಿಂತಿದ್ದು ನಮ್ಮನ್ನು ನೋಡಿ ಅವರೆಲ್ಲರೂ ಗುಂಪು ಕಟ್ಟಿಕೊಂಡು ಬಂದು ನನಗೆ ತಡೆದು ನಿಲ್ಲಿಸಿ “ ಏನೋ ಸೂಳೆ ಮಗನೆ ನನ್ನ  ಶರಣಸಿರಸಗಿ ಮಡ್ಡಿ ಏರಿಯಾಕ್ಕೆ ಏಕೆ ಬಂದಿರುವೆ ನನ್ನ ಪರಮಿಶನ ಲ್ಲದೆ ಯಾರು ಬರುವದಿಲ್ಲಾ ನೀ ಹೇಗೆ ಬಂದಿ ಎಂದು ಕೈಯಿಂದ ಮುಖದ ಮೇಲೆ ಹೋಡೆದರು ಆಗ ನಾನು ವಿನಾಕಾರಣ  ಏಕೆ ನಮ್ಮೊಂದಿಗೆ ಜಗಳ ಮಾಡುತ್ತಿ ಎಂದು ಕೇಳಿದಕ್ಕೆ ಆಗ ಅರುಣ ಭರಣಿ   ಇತನು ಸೂಳೆ ಮಗನೆ ನಾನು ಏರಿಯಾದ ಡಾನ್ ಇರುತ್ತೇನೆ ನನಗೆ ಎದಿರು ವಾದಿಸುತ್ತಿ ಎಂದು ಕೈಯಿಂದ ಹೊಡೆಯಲು ಪ್ರಾರಂಭಿಸಿದ ಆಗ ನಾವಿಬ್ಬರು ಅವರಿಂದ ತಪ್ಪಿಸಿಕೊಂಡು ಪೆಟ್ರೋಲ್ ಪಂಪ ಕಂಪೌಡ ಕಡೆಗೆ ಹೋಗುತ್ತಿರುವಾಗ ಪುನಾ; ಅವರು ನಮಗೆ ತಡೆದು ಸೂಳೆ ಮಕ್ಕಳೆ ಈ ಮೊದಲು ಶಾಲೆಯ  ವಾರ್ಷೀಕೋತ್ಸವ ಸಮಯದಲ್ಲಿ ನಮ್ಮ ಹುಡುಗರೊಂದಿಗೆ ನೀವು ತಕರಾರು ಮಾಡಿರುತ್ತಿರಿ ಹೀಗೆ ನಿಮ್ಮನ್ನು  ಬಿಟ್ಟರೆ ಸರಿಯಾಗಿರುವದಿಲ್ಲಾ ಇವತ್ತು ನಿನನ್ನು ಮುಗಿಸೇ ಬಿಡುತ್ತೇವೆ ಎಂದು ಕೊಲೆ ಮಾಡುವ ದ್ದೇಶದಿಂದ ತನ್ನ ಹತ್ತಿರ ಇದ್ದ ಮಾರಕಾಸ್ತ್ರವಾದ ತಲವಾರದಿಂದ ತಲೆಯ ಮೇಲೆ ಹೊಡೆದನು ಮತ್ತು ಆತನ ಸಂಗಡ ಇದ್ದ ಹೆಸರು ಕೇಳಿ ಗೊತ್ತಾದ ಗೌತಮ ಮತ್ತು ವಿಶಾಲ ಇವರು ಬಡಿಗೆಗಳಿಂದ ನನ್ನ ಎರಡು ಮೊಳಕಾಲಿಗೆ  ಹಾಗೂ ನಾಯಿ ರಾಣ್ಯ ಇತನು ಒಂದು ಕಲ್ಲು ತೆಗೆದುಕೊಂಡು ನನಗೆ ಹೊಡೆದಾಗ ಬಲಗೈ  ಮೊಳಕೈ ಮತ್ತು ಕಿರುಬೆರಳಿಗೆ ಗಾಯಗಳಾಗಿರುತ್ತವೆ . ಇದರಿಂದ ನನ್ನ ತಲೆಗೆ ಭಾರಿ ರಕ್ತಗಾಯವಾಗಿದ್ದು ರಕ್ತಸ್ರಾವವಾಗುತಿತ್ತು ನನ್ನ ಸಂಗಡ ಇದ್ದ ವಿವೇಕ ಜಾನೆ ಇತನಿಗೆ ವಿಶಾಲ ಮತ್ತು ನಾಯಿರಾಣ್ಯಾ ಹೊಡೆದು ,ಬಡಿಗೆಯಿಂದ ಹೊಡೆದು ಭುಜಕ್ಕೆ ಮತ್ತು ಎಡಗಣ್ಣು ಹತ್ತಿರ ಗಾಯವಾಗಿರುತ್ತದೆ. ಆಗ  ಈ ವಿಷಯ ಗೊತ್ತಾಗಿ  ನನ್ನ ಚಿಕ್ಕಪ್ಪನಾದ ಬಾಬುರಾವ ಮದನಕ ಮತ್ತು ಪ್ರಕಾಶ ಹಾಗೂ ಇನ್ನೊಬ್ಬ ಕಿರಣಕುಮಾರ ಎಂಬುವವರು  ಬಂದು ಜಗಳ ಬಿಡಿಸಿಕೊಳ್ಳುವಾಗ ಆಗ ಅರುಣ ಭರಣಿ , ಗೌತಮ ಬ್ಬರು ಕೂಡಿಕೊಂಡು ಸೂಳೆ ಮಗನೆ ನಿನ್ನ ಉರುಣಿಗೆ ಬಹಳ ಆಗ್ಯಾದ ಎಂದು ಬಯ್ಯೂತ್ತಾ ಬಡಿಗೆಯಿಂದ ನಮ್ಮ ಚಿಕ್ಕಪ್ಪನ ತಲೆಗೆ, ಭುಜಕ್ಕೆ ಹಾಗೂ ಬಲಗಾಲು ಮೊಳಕಾಲಿಗೆ ಹೊಡೆದಿದ್ದು ನಾಯಿರಾಣ್ಯ ಕಾಲಿನಿಂದ ಹೊಟ್ಟೆಯಲ್ಲಿ ಒದ್ದಿರುತ್ತಾನೆ. ಹಾಗೂ ಕಿರಣ ಕಮಾರನಿಗೆ ವಿಶಾಲ ಮತ್ತು ವಿನೋದ ಇತರರು ಕೂಡಿಕೊಂಡು ಆತನಿಗೆಹೊಡೆಬಡಿ ಮಾಡಿರುತ್ತಾರೆ ಅಷ್ಟರಲ್ಲಿ ಜನ ಸೇರುವಷ್ಟರಲ್ಲಿ ಅವರೆಲ್ಲರೂ  ಸೂಳೆ ಮಕ್ಕಳೆ ಇವತ್ತು ನೀವು ಉಳಿದಿರಿ ಇನ್ನೊಂದು ಬಾರಿ ನಮ್ಮ ಏರಿಯಾದಲ್ಲಿ ನಮ್ಮ ತಂಟೆಗೆ ಬಂದರೆ ಖಲಾಸ ಮಾಡುತ್ತೇವೆ ಎಂದು ಬೆದರಿಕೆ ಹಾಕಿ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನರೋಣಾ ಠಾಣೆ : ಶ್ರೀ ವಿಜಯಕುಮಾರ ರವರ ಹೊಲ ತಮ್ಮೂರಿನ ಸೀಮೆಯಲ್ಲಿದ್ದು ನಮ್ಮ ಹೊಲದಿಂದ ದಾರಿ ಇಲ್ಲದೆ ಜಬರದಸ್ತಿಯಿಂದ ನಮ್ಮೂರಿನ ಉಸ್ಮಾನ ಮುಲ್ಲಾ ಇವರ ಸಂಗಡಿರು ಕೂಡಿ ತಮ್ಮ ಹೊಲಕ್ಕೆ ನಮ್ಮ ಹೊಲದಾಗಿನಿಂದ ಹೊಗುವಾಗ ನಮ್ಮ ಹೊಲದಿಂದ ಹೋಗಬೇಡಿ ನಮ್ಮ ಹೊಲದಲ್ಲಿ ಯಾವುದೇ ದಾರಿಯಿಲ್ಲ ಹೇಳಿದ್ದೇನು. ಅದಕ್ಕೆ ಉಸ್ಮಾನ ಮುಲ್ಲಾ ಸಂಗಡಿಗರು ಶಾಹಾಜಾಬಿ ಉಸ್ಮಾನ ಮುಲ್ಲಾ ನೂರಂಬಿ ಗಂಡ ಮೈಹೆಬೂಬಸಾಬ ಮುಲ್ಲಾ, ನಭಿಮುನ್ನಿಸಾಬಿ ಗಂಡ ಉಮರಸಾಬ ಮುಲ್ಲಾ, ಫತ್ರುಸಾಬ ತಂದೆ ಮಹಿಬೂಬ್ ಮುಲ್ಲಾ, ರಸೀಯಬಿ ಗಂಡ ಫತ್ರುಸಾಬ ಉಮರಸಾಬ ಮಹೆಬೂಬಸಾಬ ಮುಲ್ಲಾ, ಈರಣ್ಣಾ ತಂದೆ ಶರಣಪ್ಪಾ ಜಮಾದಾರ, ರಂಗಮ್ಮ ಗಂಡ ಈರಣ್ಣಾ ಜಮಾದರ, ಕಾಂತಪಾ ತಂದೆ ಈರಣ್ಣಾ ಜಮಾದಾರ, ರೇಣುಕಾ ಗಂಡ ಕಾಂತಪ್ಪಾ ಮತ್ತು ಶ್ರೀಪತಿ ಎಲ್ಲರೂ ನನ್ನೊಂದಿಗೆ ಅವಚ್ಯವಾಗಿ ಬೈದು ಜೀವದ ಭಯಹಾಕಿ ತಮ್ಮ ಹೊಲಕ್ಕೆ ಹೋದರು ನಾನು ಮತ್ತು ನನ್ನ ಮಕ್ಕಳು ಸುನ್ನೆ ಇದ್ದೇವು. ನಮ್ಮುರಿನ ಉಸ್ಮಾನ ತಂದೆ ಮಹಿಬೂಬ್ ಮುಲ್ಲಾ ಇವನು ನನ್ನ ಹಾಗೂ ನನ್ನ ತಾಯಿ ಅಕ್ಕ ಮತ್ತು ತಮ್ಮನ ಮೇಲೆ ಸುಳ್ಳು ಕೇಸು ದಾಖಲುಮಾಡಿಸಿದ್ದು ಗೊತ್ತಾಯಿತು. ಮತ್ತು ನನಗೆ ದಿನಾಂಕ:27/07/2018 ರಂದು ದಸ್ತಗಿರಿ ಮಾಡಿ ಕೊರ್ಟಗೆ ಹಾಜಪಿಸಿಸದ್ದು. ಅಲ್ಲದೇ ನಾನು ಜಾಮೀನು ಹೊಂದಿ ಮನೆಗೆ ಬಂದು ನನ್ನ ತಾಯಿ ಅಕ್ಕ ತಮ್ಮನೊಂದಿಗೆ ಜಾಮೀನು ಕುರಿತು ನ್ಯಾಯಾಲಯಕ್ಕೆ ಹಾಜರುಪಿಸಿದ್ದು, ಜಾಮೀನು ಕೊಟ್ಟಿರುತ್ತಾರೆ. ದಿನಾಂಕ:01/09/2018 ರಂದು ಬೆಳಿಗ್ಗೆ 11-00 ಗಂಟೆಗೆ ನಾನು ಮತ್ತು ನನ್ನ ತಾಯಿ, ಅಕ್ಕ ಹಾಗೂ ತಮ್ಮ ಎಲ್ಲರೂ ಕೂಡಿಕೊಂಡು ಮಾಡತಾಡುತ್ತಿರುವಾಗ ಈ ಮೇಲೆ ನಮೂದಿಸಿದ ನಮ್ಮೂರಿನ ಜನರು ಮತ್ತು ಗುಂಪುಮಾಡಿಕೊಂಡು ನಮ್ಮ ಮನೆಯಲ್ಲಿ ಅಕ್ರಮವಾಗಿ ಪ್ರವೇಶನಾಡಿ ಹಲ್ಲೆಮಾಡಿ ಹೊಡೆಯುತ್ತಾ ಈರಣ್ಣ ತಂದೆ ಶರಣಪ್ಫಾ ಜಮಾದಾರ, ಕಾಂತಪ್ಪಾ ತಂದೆ ಈರಣ್ಣಾ ಇವರು ಉಸ್ಮಾನನಿಗೆ ಈ ಭೋಸಡಿಮನಿಗೆ ಹಿಡಿದು ಅಪಹರಿಸಿಕೊಂಡು ಹೊಗಲು ಪ್ರಚೋದನೆ ಮಾಡಿದ ಎಲ್ಲರೂ ನನಗೆ ಮತ್ತು ನನ್ನ ತಾಯಿಗೆ ಕೈಯಿಂದ ಹೊಡೆದು ಗುಪ್ತಗಾಯ ಮಾಡಿರುತ್ತಾರೆ. ಉಸ್ಮಾನ ಈ ರಣ್ಣಾ ಕಾಂತಪ್ಪಾ ರವರು ನನ್ನ ಮೈಯಲ್ಲ ಕೈಯಿಂದ ಹೊಡೆದಿದ್ದು ಹಾಗೂ ನನ್ನ ತಮ್ಮನಿಗೆ ಉಸ್ಮಾನಸಾಬ, ಫತ್ರುಸಾಬ ಇವರು ಕೈಯಿಂದ ಮೈಮೇಲೆ ಹೊಡೆದಿರುತಾರೆ, ನನ್ನ ತಾಯಿಗೆ ಹಾಗೂ ಅಕ್ಕನಿಗೆ ಶಹಜಾಬಿ, ಸೂರಾನಬಿ, ನಜಮುನಿಸಾಬಿ ರಸೀದು ಬೇಗಂ, ರಂಗಮ್ಮ ಹಾಗೂ ರೇಣುಕಾ ಇವರೆಲ್ಲರೂ ಕೂದಲು ಹಿಡಿದು ಎಳೆದಾಡಿ ಕೈಯಿಂದ ಹೊಡೆದಿರುತ್ತಾರೆ. ನಮ್ಮ ತಾಯಿಗೆ ಒಳಪೆಟ್ಟಾಗಿರುತ್ತದೆ. ಅಕ್ಕಳಿಗೆ ಗಾಯವಾಗಿರುವುದಿಲ್ಲ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ವಿದ್ಯಾರ್ಥಿ ಅಪಹರಣ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ ಅಮೃತ ತಂದೆ ಶಿವಪ್ಪ ಬಾಲೂರ ಸಾ|| ಯಡ್ರಾಮಿ ರವರ ನನ್ನ ಮಗ ವೆಂಕಟೇಶ ವಯ; 16 ವರ್ಷ ಈತನಿಗೆ ದಿನಾಂಕ 27-08-2018 ರಂದು ಬೆಳಿಗ್ಗೆ 10;30 ಗಂಟೆಗೆ ಯಡ್ರಾಮಿ ಬಸ್ಸ ನಿಲ್ದಾಣದಲ್ಲಿ ಜೇವರ್ಗಿ ಬಸ್ಸಿನಲ್ಲಿ ಕೂಡಿಸಿ ದಂಡೋತಿ ಮುರಾರ್ಜಿ ದೇಸಾಯಿ ಶಾಲೆಗೆ ಕಳುಹಿಸಿದ್ದು, ಅವನಿಗೆ ಯಾರೋ ಅಪಹರಣ ಮಾಡಿಕೊಂಡು ಹೋಗಿರಬಹುದು, ನನ್ನ ಮಗನಿಗೆ ಇಲ್ಲಿಯವರೆಗೆ ಹುಡಕಾಡಿ ಸಿಕ್ಕಿರುವುದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.