POLICE BHAVAN KALABURAGI

POLICE BHAVAN KALABURAGI

19 August 2014

Gulbarga District Reported Crimes

ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ನಿಂಗಪ್ಪಾ ತಂದೆ ಹಣಮಂತ ಬಳಿಚಕರಿ ಸಾ: ಮರಗಮ್ಮ ಟೆಂಪಲ ಹತ್ತಿರ ಗಾಜಿಪೂರ  ಗುಲಬರ್ಗಾ ರವರು ದಿನಾಂಕ 19-08-2014 ರಂದು ಬೆಳಿಗ್ಗೆ 09-30 ಗಂಟೆಗೆ ತನ್ನ ಮನೆಯಿಂದ ಜಟಪಟ ಬಿಬಿ ದರ್ಗಾ ಹತ್ತಿರ ರಜನಿಕಾಂತ ಸೂರಪೂರಕರ ಇವರ ಮನೆಯಲ್ಲಿ ಗೌಂಡಿ ಕೆಲಸ ಮಾಡುವ ಕುರಿತು ಮರಗಮ್ಮ ಟೆಂಪಲ ರೋಡ ಮುಖಾಂತರ ಜಟಪಟ ಬಿಬಿ ದರ್ಗಾ ಕಡೆಗೆ ನಡೆದುಕೊಂಡು ಹೋಗುವಾಗ ಕಡಳ್ಳಿ ವಕೀಲರ ಇವರ ಮನೆಯ ಎದುರಿನ ರೋಡಿನ ಮೇಲೆ ಮಹಾನಗರ ಪಾಲಿಕೆಯ ಟ್ರ್ಯಾಕ್ಟರ ನಂಬರ ಕೆಎ-32 ಬಿ-9308 ನೇದ್ದರ ಚಾಲಕ ಮೋಹನ ಇತನು ತನ್ನ ಟ್ರಾಕ್ಟ್ರರನ್ನು  ಅತೀವೇಗ ಮತ್ತು ಅಲಕ್ಷತನ ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿದ್ದರಿಂದ ಎಡಗಡೆ ತಲೆಗೆ ರಕ್ತಗಾಯ, ಎಡಗಲ್ಲದ ಮೇಲೆ ರಕ್ತಗಾಯ, ಬಲ ಮುಂಗೈಗೆ ರಕ್ತಗಾಯ, ಎಡ ಎದೆಗೆ ಭಾರಿಗುಪ್ತಪೆಟ್ಟು ಮತ್ತು ತರಚಿದಗಾಯ ಹಾಗು ಗದ್ದಕ್ಕೆ ತರಚಿದಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ  ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಿಸಿ ಅತ್ಯಾಚಾರ ಮಾಡಿದ ಪ್ರಕರಣ :
ಮಾಡಬೂಳ ಠಾಣೆ : ಕುಮಾರಿ ರವರು ಚಿಕ್ಕವಳಿರುವಾಗ ಅಂದರೆ 11 ವರ್ಷಗಳ ಹಿಂದೆ  ತಂದೆಯವರು ತಿರಿಕೊಂಡಿದರಿಂದ ನನ್ನ ತಾಯಿ ತವರು ಮನೆಯಲ್ಲಿದ್ದು  ಒಂದನೇ ತರಗತಿಯಿಂದ 9 ನೇ ತರಗತಿಯವರೆಗೆ ಓದಿ ಈಗ 2 ವರ್ಷಗಳ ಹಿಂದೆ ಶಾಲೆ ಬಿಟ್ಟಿದ್ದು ನಾನು 9 ನೇ ತರಗತಿಯಲ್ಲಿ ಇದ್ದಾಗ ಶಾಲೆಗೆ ಹೋಗಿ ಬರುತ್ತಿರುವಾಗ ಅದೆ ಗ್ರಾಮದ ಜೈ ಭೀಮ ತಂದೆ ನಾಗಪ್ಪಾ ಹಿರೆಮನಿ ಈತನು ನನಗೆ ಚುಡಾಯಿಸುತ್ತಾ ನಿನಗೆ ಪ್ರೀತಿಸುತ್ತೇನೆ ಮತ್ತು ಲಗ್ನ ಸಹ ಮಾಡಿಕೊಳ್ಳುತ್ತೇನೆ ಅಂತಾ ಹೇಳುತ್ತಾ ಬಂದಿದ್ದು ಅದಕ್ಕೆ ನಾನು ಸುಮ್ಮನಿದ್ದೇನು. ನಾನು ಶಾಲೆ ಬಿಟ್ಟ 8-10 ದಿನಗಳಲ್ಲಿ ಸದರಿ ಜೈ ಭೀಮನು ನನಗೆ ತನ್ನ ಮನೆಗೆ ಕರೆಯಿಸಿ ನಿನಗೆ ಮದುವೆ ಮಾಡಿಕೊಳ್ಳುತ್ತೇನೆ ಅಂತಾ ಹಾಗೆ ಹೀಗೆ ಹೇಳಿ ಪುಸಲಾಯಿಸಿ ನನ್ನ ಮೈಮೇಲಿನ ಬಟ್ಟೆ ಬಿಚ್ಚುವಾಗ ನಾನು ಇನ್ನು ಚಿಕ್ಕವಳು ಈ ರೀತಿ ಮಾಡುವುದು ಸರಿಯಲ್ಲ ಅಂತ ಹೇಳಿದರೂ ಸಹ ನನ್ನ ಮೈ ಮೇಲಿನ ಎಲ್ಲಾ ಬಟ್ಟೆ ಬಿಚ್ಚಿ ನಾನು ವಿರೋಧ ಪಡಿಸಿದರೂ ಸಹ ಬಲವಂತವಾಗಿ ಬಲತ್ಕಾರ ಮಾಡಿದನು. ನಂತರ ಈ ವಿಷಯ ಯಾರಿಗಾದರೂ ಹೇಳಿದರೆ, ನಿನ್ನ ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿದನು. ಆದರಿಂದ  ನಾನು ಸುಮ್ಮನಾದೆ. ಆ ಸಮಯದಲ್ಲಿ ನಾನು ಉಟ್ಟಿಕೊಂಡ ಬಟ್ಟೆ ಎಲ್ಲಾ ಹರಿದು ಹೋಗಿರುತ್ತವೆ, ಹೀಗಿದ್ದು ದಿನಾಂಕ: 13-08-2014 ರಂದು ರಾತ್ರಿ 8 ಗಂಟೆಯ ಸುಮಾರಿಗೆ ನಾನು ಸಂಡಾಸಕ್ಕೆ ಹೋದಾಗ ಸದರಿ ಜೈ ಭೀಮ ಇತನೂ ಒಂದು ಮೋಟರ ಸೈಕಲನ್ನು ತೆಗೆದುಕೊಂಡು ಬಂದು ನನಗೆ ಕರೆದು ನಿನ್ನ ಜೊತೆಗೆ ಕೆಲಸವಿದೆ ನನ್ನ ಸಂಗಡ ಬಾ ಅಂತ ಮೋಟರ ಸೈಕಲ ಮೇಲೆ ಕೂಡಿಸಿಕೊಂಡು ವಜ್ರಗಾಂವಕ್ಕೆ ಒಯ್ದು ಅವರ ಸಂಬಂಧಿಕರ ಮನೆಯಲ್ಲಿ ಇರಿಸಿದನು. ಅಲಿಯೂ ಸಹ ಜೈ ಭೀಮ ಇತನೂ ಒಂದು ಸಲ ದೈಹಿಕ ಸಂಪರ್ಕ ಮಾಡಿರುತ್ತಾನೆ. ಅದಾದ ಬಳಿಕ ಜಗಪ್ಪ ಇತನೂ ಕುಡಿದ ನಸೆಯಲ್ಲಿ ನನಗೆ ಮೈ ಕೈ ಮುಟ್ಟುವುದು, ನನ್ನ ಎದೆ ಮತ್ತು ಮೊಲೆ ಹಿಡಿದು ಜಗ್ಗಾಡಿ  ಮಲಗಲು ಬಾ ಅಂತ ಜಬರದಸ್ತಿ ಮಾಡಹತ್ತಿದನು. ಆಗ ನಾನು ಕಾಲಿನಿಂದ ಒದ್ದು ಬಿಡಿಸಿಕೊಂಡು ಜೈ ಭೀಮನ ಹತ್ತಿರ ಹೋಗಿ ತಿಳಿಸಿದೆನು. ಆಗ ಆತನೂ ಸಹ ಹೀಗೆಲ್ಲಾ ಮಾಡುವುದು ಸರಿ ಅಲ್ಲ ಅಂತ ಆತನಿಗೆ ಹೇಳಿದನು. ನಂತರ ರವಿವಾರ ಮುಂಜಾನೆ 6-7 ಗಂಟೆಗೆ ಇಲ್ಲಿಂದ ಬಿಟ್ಟು ಸೇಡಂಕ್ಕೆ ಹೋಗಿ ಅಲ್ಲಿ ಒಂದು ಬಾಡಿಗೆ ಕೋಣೆಯಲ್ಲಿ ಇಟ್ಟು ನಾನು ಕೆಲಸ ನೋಡಿಕೊಂಡು ಪುನಃಹ ನಿನ್ನನು ಬಂದು ನೋಡುತ್ತೇನೆ ಅಂತ ಹೇಳಿ ಹೊರಟು ಹೋದನು. ನಾನು ಗ್ರಾಮ ಬಿಟ್ಟಾಗಿನಿಂದ ನನ್ನ ಮೈ ಮೇಲೆ ಇರುವ ಬಟ್ಟೆ ಇವೆ ಇದ್ದು ಇವುಗಳ ಮೇಲೆಯೇ ದೈಹಿಕ ಸಂಪರ್ಕ ಆಗಿರುತ್ತದೆ. ನಂತರ ನಾನು ಗಾಬರಿಗೊಂಡು ನಿನ್ನೆ ದಿನಾಂಕ: 18-08-2014 ರಂದು ನನ್ನ ತಾಯಿ ಊರಾದ ಚಿತ್ತಾಪೂರಕ್ಕೆ ಹೋಗಿ ಮನೆಗೆ ಹೋಗಿ ಎಲ್ಲಾ ವಿಷಯವನ್ನು ನನ್ನ ತಾಯಿ ಹಾಗೂ ನನ್ನ ಅಜ್ಜಿ (ತಂದೆಯ ತಾಯಿ) ತಿಳಿಸಿದೇನು. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀ ಸಿದ್ದಣ್ಣಾ ತಂದೆ ಪರಮೇಶ್ವರ ಪಾಟೀಲ ಸಾ: ಮಾಡಿಯಾಳ ಇವರ ತಂದೆ ಸುಮಾರು 6-7 ತಿಂಗಳ ಹಿಂದೆ ಮ್ರತಪಟ್ಟಿದ್ದು ಜೀವಂತ ಇದ್ದಾಗ ತಮ್ಮ ಹೊಲದ ಬಂದಾರಿಯ ಮೇಲಿರುವ ಬೇವಿನ ಮತ್ತು ಹುಣಸೆ ಮರಗಳನ್ನು ಅದೇ ಗ್ರಾಮದ ಲಕ್ಷ್ಮಿಕಾಂತ ಪ್ಯಾಟಿ ಇವರಿಗೆ ಮಾರಾಟ ಮಾಡಿದ್ದು ಸದರಿಯವರು 2-3 ದಿವಸಗಳಿಂದ ಗಿಡಗಳನ್ನು ಕಡಿಯುತ್ತಿದ್ದು ಫಿರ್ಯಾಧಿಯ ದೊಡ್ಡಪ್ಪನಾದ ಬಾಬುರಾವ ಹಾಗೂ ಇತರರು ಸದರಿ ಗಿಡಗಳು ತಮ್ಮ ಹೊಲದಲ್ಲಿ ಬರುತ್ತವೆ ಫಿರ್ಯಾದಿಗೆ ಯಾಕೆ ತಕರಾರು ಮಾಡಿರುವದಿಲ್ಲ ಅಂತ ಹೊಲಕ್ಕೆ ನುಗ್ಗಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ, ಕಲ್ಲಿನಿಂದ ಹೊಡೆ ಬಡೆ ಮಾಡಿ ಜೀವ ಭಯ ಹಾಕಿರುತ್ತಾರೆ. ಸದರಿ ಸಂದರ್ಭದಲ್ಲಿ ಫಿರ್ಯಾದಿಗೆ ಎಡ ಕಿವಿಗೆ ಭಾರಿ ರಕ್ತಗಾಯವಾಗಿ ಕಿವಿ ಹರಿದಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Gulbarga District Reported Crimes

ವರದಕ್ಷಣೆ ಕಿರುಕಳ ಪ್ರಕರಣ :
ಆಳಂದ ಠಾಣೆ : ಶ್ರೀಮತಿ  ರಾಜಶ್ರೀ ಗಂಡ ಶಿವರಾಯ ಉಜಳಾಂಬೆ ಸಾ|| ಚಿತಲಿ  ರವರಿಗೆ ದಿನಾಂಕ 24-04-2014 ರಂದು ಚಿತಲಿ ಗ್ರಾಮದಲ್ಲಿ ಧಾರ್ಮಿಕ ಪಧ್ಧತಿಯಂತೆ ಮದುವೆಯಾಗಿದ್ದು ಆಗ 3,51,000/- ರೂಪಾಯಿ ಹಾಗೂ 25 ಗ್ರಾಂ ಬಂಗಾರ ವರದಕ್ಷಿಣೆ ರೂಪದಲ್ಲಿ ಕೊಡಬೇಕು ಅಂತಾ ಮಾತುಕತೆ ಪ್ರಕಾರ 1,51,000/- ರೂಪಾಯಿ ಹಾಗೂ 35 ಗ್ರಾಂ ಬಂಗಾರ ಕೊಟ್ಟಿದ್ದು ಉಳಿದಿದ್ದು ಕೊಡಲಾರದಿಕ್ಕೆ ಸತತವಾಗಿ ಕಿರುಕುಳ ಕೊಡುತ್ತಾ ಬಂದು ನನ್ನ ಗಂಡ ಶಿವರಾಯ ತಂದೆ ಸಿದ್ರಾಮಪ್ಪಾ, ಅತ್ತೆ ಮಹಾದೇವಿ ಗಂಡ ಸಿದ್ರಾಮಪ್ಪಾ, ಮಾವ ಸಿದ್ರಾಮಪ್ಪಾ ತಂದೆ ಈರಣ್ಣಾ, ಮೈದುನ ಶರಣಬಸಪ್ಪಾ ತಂದೆ ಸಿದ್ರಾಮಪ್ಪಾ, ನಾದನಿ ಶ್ರೀದೇವಿ ತಂದೆ ಸಿದ್ರಾಮಪ್ಪಾ, ಮೈದುನ ನಾಗೇಂದ್ರಪ್ಪಾ ತಂದೆ ಸಿದ್ರಾಮಪ್ಪಾ, ರವರು ಸಾ|| ಎಲ್ಲರೂ ಚಿತಲಿ ರವರು ಹೊಡೆಬಡೆ ಮಾಡಿ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಿ ವರದಕ್ಷಿಣೆ ತರುವಂತೆ ಪೀಡಿಸಿ ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿ ಹೆಣ್ಣು ಮಗು ಹುಟ್ಟಿದೆ ಅಂತಾ ಕಿರುಕುಳ ಕೊಟ್ಟಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ತವ್ಯಕ್ಕೆ ಅಡೆ ತಡೆ ಮಾಡಿ ಹಲ್ಲೆ ಮಾಡಿದ ಪ್ರಕರಣ :
ಮಳಖೇಡ ಠಾಣೆ : ದಿನಾಂಕ 18-8-2014 ರಂದು ಸಾಯಂಕಾಲ 6-45 ಗಂಟೆಗೆ ಹಣಮಂತ ಹೋಮಗಾರ್ಡ 293 ಮಳಖೇಡ ಠಾಣೆ ರವರು ಮದ್ಯಾನ 2-00 ಗಂಟೆಯಿಂದ ಮಳಖೇಡ ಎಪಿಎಂಸಿ ಮುಂದುಗಡೆ ಟ್ರಾಪಿಕ ಕಂಟ್ರೋಲ ಕರ್ತವ್ಯ ನಿರ್ವಹಿಸುತ್ತಿರುವಾಗ ಅಟೋ ನಂ.ಕೆಎ-32ಬಿ-0901 ನೇದ್ದರ ಚಾಲಕನಿಗೆ ಅಟೋ ತೆಗೆಯಲು ಹೇಳಿದಾಗ ಬೈದಿದ್ದು ನಂತರ ಸ್ವಲ್ಪ ಸಮಯದಲ್ಲಿ ಒಬ್ಬ ಕುಡಿದ ಅಮಲಿನಲ್ಲಿ ಇದ್ದ ಮನುಷ್ಯನು ಬಂದು ರೋಡಿನ ನಡುವೆ ಕುಳಿತಾಗ ಅವನಿಗೆ ರಸ್ತೆಯ ಪಕ್ಕಕ್ಕೆ ಕೂಡಿಸಿದಾಗ ಅವನು ತಾನೆ ಬಿದ್ದು ತಲೆಗೆ ಗಾಯವಾದಾಗ ಅಟೋ ನಂ.ಕೆಎ-32ಬಿ-0901 ನೇದ್ದರ ಚಾಲಕನಾದ ನಾಗರಾಜ ಸಂಗಡ 2-3 ಜನರು ಬಂದು ತನಗೆ ನೀನು ನಮ್ಮ ಸಂಬಂಧಿಕರಿಗೆ ಹೊಡೆದಿದ್ದಿ ಮಗನೆ ಅಂತಾ ಜಗಳ ತೆಗೆದು ಕೈಯಿಂದ ಹೊಡೆಬಡೆ ಮಾಡಿ ಅವಾಚ್ಯವಾಗಿ ಬೈದು ತನಗೆ ಕರ್ತವ್ಯ ನಿರ್ವಹಿಸಲು ಅಡೆತಡೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ವಿಶ್ವವಿದ್ಯಾಲಯ ಠಾಣೆ : ಶ್ರೀ ಶಿವಾನಂದ ತಂದೆ ಶೇಶಪ್ಪ ವಿಶ್ವಕರ್ಮ ಸಾ: ಆಶಾ ನಗರ ಕುರಕುಂಟಾ ತಾ: ಸೇಡಂ ಜಿ:ಗುಲಬರ್ಗಾ ರವರ ತಮ್ಮ ವೀರಭದ್ರ ಇತನು ಸೇಡಂದಲ್ಲಿ ಕಾರ್ಪೆಂಟರ ಕೆಲಸ ಮಾಡುತ್ತಿದ್ದರಿಂದ ದಿನಾಂಕ: 18/08/14 ರಂದು ಬೆಳಿಗ್ಗೆ 7:00 ಗಂಟೆ ಸುಮಾರಿಗೆ ವಿಶ್ವವಿದ್ಯಾಲಯ ಠಾಣೆ ಸಿಬ್ಬಂದಿಯವರು ಪೋನ ಮಾಡಿ ವಿಷಯ ತಿಳಿಸಿದ್ದೆನೆಂದರೆ ಗುಲಬರ್ಗಾ-ಸೇಡಂ ಮುಖ್ಯ ರಸ್ತೆಯ ಶ್ರೀನಿವಾಸ ಸರಡಗಿ ಕ್ರಾ ದಾಟಿ 1 km ದೂರದಲ್ಲಿ ನಿಮ್ಮ ತಮ್ಮ ವೀರಭದ್ರ ಅಪಘಾತವಾಗಿ ಮೃತಪಟ್ಟಿರುತ್ತಾನೆ ಬಂದು ನೋಡಲು ತಿಳಿಸಿದ್ದರಿಂದ ನಾನು ಗಾಬರಿಗೊಂಡು ಸಂಗಡ ನಾಗರಾಜ ತಂದೆ ಬಾಲಪ್ಪ ದೇಗಲಮಡಿ ಇವರಿಗೆ ಕರೆದುಕೊಂಡು ಬಂದು ಸ್ಥಳಕ್ಕೆ ಬಂದು ನನ್ನ ತಮ್ಮನಿಗೆ ನೋಡಲು ಅಪಘಾತದಲ್ಲಿ ಮುಖ ಪೂರ್ತಿ ಜಜ್ಜಿ ಹಣೆಯ ಭಾಗ ಹೊಡೆದು ಹೋಗಿದ್ದು. ಎಡಗೈ ಮೊಳಕೈ ಹತ್ತಿರ ರಕ್ತಗಾಯವಾಗಿ ಮುರಿದು ಹೋಗಿರುತ್ತದೆ. ನನ್ನ ತಮ್ಮ ನಮ್ಮ ಮನೆಯ ಬಾಜು ಇರುವ ನಾಗರಾಜ ಇವರ ಮೊಟಾರ ಸೈಕಲ ನಂ. KA-32-EC-3268 ನೇದ್ದನ್ನು ತೆಗೆದುಕೊಂಡು ನಿನ್ನೆ ದಿನಾಂಕ: 17/08/14 ರಂದು ಸಾಯಂಕಾಲ 4-30 ಪಿಎಮಕ್ಕೆ ತೆಗೆದುಕೊಂಡು ನಂತರ ಸೇಡಂದಿಂದ ಗುಲಬರ್ಗಾಕ್ಕೆ ಹೋಗುತ್ತಿರುವಾಗ ರಾತ್ರಿ ಅಂದಾಜು 10:00 ಗಂಟೆಯಿಂದ ದಿನಾಂಕ: 18/08/14 ರಂದು 00:00 ಗಂಟೆಯ ಅವಧಿಯಲ್ಲಿ ಯಾವುದೊ ಭಾರಿ ವಾಹನ ನನ್ನ ತಮ್ಮನಿಗೆ ಡಿಕ್ಕಿಪಡಿಸಿ ಗಾಯಪಡಿಸಿ ವಾಹನ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ಧಾಖಲಾಗಿದೆ.