POLICE BHAVAN KALABURAGI

POLICE BHAVAN KALABURAGI

10 May 2016

Kalaburagi District Reported Crimes

ಅಪಹರಣ ಮಾಡಿ ಅತ್ಯಾಚಾರ ಮಾಡಿದ ಪ್ರಕರಣ :
ಮಾಡಬೂಳ ಠಾಣೆ : ಫಿರ್ಯಾದಿದಾರ ಮತ್ತು ಹೆಂಡತಿ ಇಬ್ಬರೂ ಕೂಡಿಕೊಂಡು  ದಿನಾಂಕ: 28/04/16 ರಂದು ಸಣ್ಣೂರನಲ್ಲಿ ಸಂತೆಯಿದ್ದ ಪ್ರಯುಕ್ತ ಬೆಳಿಗ್ಗೆ 7 ಗಂಟೆ ಸುಮಾರಿಗೆ ತರಕಾರಿ ಮಾರಾಟ ಮಾಡುವ ಸಲುವಾಗಿ ಸಂತೆಗೆ ಬಂದಿದ್ದು ಸಂತೆಯಿಂದ ಮರಳಿ ಮಧ್ಯಾಹ್ನ 2-30 ಗಂಟೆಯ ಸುಮಾರಿಗೆ ಮನೆಗೆ ಬರಲು ನನ್ನ ಮಗಳಾದ ಕುಮಾರಿ  ಇವಳು ಕಾಣಿಸಲಿಲ್ಲ ಇವಳು ಎಲ್ಲಿಗೆ ಹೋಗಿದ್ದಾಳೆ ಅಂತ ಮನೆಯಲ್ಲಿದ್ದ ನನ್ನ ಇನ್ನೊಬ್ಬ ಮಗಳಿಗೆ ವಿಚಾರಿಸಲು ಈಗ ಅರ್ಧ ತಾಸ ಹಿಂದೆ ಹೋಲಕ್ಕೆ ಹೋಗಿ ಬರುತ್ತೇನೆ ಅಂತ ಮನೆಯಿಂದ ಹೇಳಿ ಹೋಗಿದ್ದು ಅಂತಾ ತಿಳಿಸಿದ ಮೇರೆಗೆ ನಾವುಗಳು ಸುಮ್ಮನಾದೆವು ಸಾಯಂಕಾಲವಾದರೂ ಸದರಿ ನನ್ನ ಮಗಳು ಮನೆಗೆ ಬರಲಿಲ್ಲಾ. ನಾವು ಎಲ್ಲರೂ ಗಾಭರಿಗೊಂಡು ಹೋಲಕ್ಕೆ ಹೋಗಿ ನೋಡಲು ನನ್ನ ಮಗಳು ಅಲ್ಲಿವು ಸಹ ಇರುವುದಿಲ್ಲಾ  ನಾವು ಎಲ್ಲಾ ಕಡೆ ನಮ್ಮ ಸಂಬಂಧಿಕರಲ್ಲಿ ಹಾಗೂ ಇತರ ಕಡೆಗಳಲ್ಲಿ ಹುಡುಕಾಡಲು ನನ್ನ ಮಗಳ ಬಗ್ಗೆ ಯಾವುದೇ ಮಾಹಿತಿ ದೊರೆತ್ತಿರುವುದಿಲ್ಲಾ.  ನನ್ನ ಮಗಳು ದಿನಾಂಕಃ 29/4/2016 ರಂದು ಸಾಯಂಕಾಲ 7 ಪಿಎಂಕ್ಕೆ ನನ್ನ ಮೋಬಾಯಿಲ್ ಪೋನಿಗೆ 7303375677 ನೇದ್ದರ ನಂಬರದಿಂದ ಪೋನ ಮಾಡಿ  ನನಗೆ ಇಲ್ಲಿದ್ದ ವಿಳಾಸ ಗೂತ್ತಾಗುತ್ತಿಲ್ಲಾ  ಅಂತಾ ಹೇಳಿ ಪೋನ ಕಟ್ ಮಾಡಿದಳು ನಾವುಗಳು ಪುನಃ ಈ ನಂಬರಕ್ಕೆ ಪೋನ ಮಾಡಲು ಸ್ವಿಚ್ ಆಫ ಆಗಿರುತ್ತದೆ, ಈಗ ಕೇಲವು ದಿವಸಗಳಿಂದ ನಮ್ಮ ಗ್ರಾಮದವನಾದ ಶ್ರೀಕಾಂತ ತಂದೆ ಶಿವಲಿಂಗಪ್ಪಾ ಮಾಂಗ ಇತನೂ ನಮ್ಮ ಮನೆಯ ಆಸು  ಪಾಸು ತಿರುಗಾಡುತ್ತಿದ್ದ, ಸದರಿ ಶ್ರೀಕಾಂತ ಇತನೇ ನನ್ನ ಮಗಳಿಗೆ ಕರೆದುಕೊಂಡು ಹೋಗಿರಬಹುದು ಅಂತ ಸಂಶಯ ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸದರಿ ಪ್ರಕರಣದ ತನಿಖೆಯ ಕಾಲಕ್ಕೆ ಇಂದು ದಿನಾಂಕ 9/5/2016 ರಂದು ಬೇಳ್ಳಗೆ ಅಪಹರಣಕ್ಕೂಳಗಾದ ಕುಮಾರಿ ಹಾಗೂ ಆಪಾದಿತ ಶ್ರಿಕಾಂತ@ಚಂದ್ರಕಾಂತ ಇವರಿಬ್ಬರು ಕಲಬುರಗಿಯ ಬಸಸ್ಟ್ಯಾಂಡ ಹತ್ತಿರ ನಿಂತಿರುವ ಬಗ್ಗೆ ಬಾತ್ಮಿ ದೊರೆತಿದ್ದು  ಅಪಹರಣಕ್ಕೊಳಗಾದ ಕುಮಾರಿ ಇವಳ ತಂದೆ ತಾಯಿಗೆ ಕರೆಯಿಸಿ ಹಾಗೂ ಮಾಡಬೂಳ ಪೋಲಿಸ ಠಾಣೆಯ ಮಹಿಳಾ ಸಿಬಂಧಿಯವರ ಅವರ ಸಮಕ್ಷಮದಲ್ಲಿ ಸದರಿಯಳಿಗೆ ವಿಚಾರಿಸಲಾಗಿ ಹೇಳಿಕೆ ನೀಡಿದ್ದೆನೆಂದರೆ, ನಮ್ಮ ಹೊಲಕ್ಕೆ ಹೊಂದಿಕೊಂಡು ಬೆಣ್ಣೂರ ಗ್ರಾಮದ ಶ್ರೀಕಾಂತ @ ಚಂದ್ರಕಾಂತ ತಂದೆ ಶಿವಲಿಂಗಪ್ಪಾ ಮಾಂಗ ಇವರ ಹೊಲವಿದ್ದು ಈಗ ಸುಮಾರು ಎರಡು ವರ್ಷಗಳಿಂದ ನಾನು ನಮ್ಮ ಹೊಲಕ್ಕೆ ಹೋದಾಗ ಆಗ ನಮ್ಮ ಹೊಲದ ಪಕ್ಕದ ಹೊಲದವನಾದ ಶ್ರೀಕಾಂತ @ ಚಂದ್ರಕಾಂತ ಈತನು ಸಹ ಹೊಲಕ್ಕೆ ಬಂದು ನನಗೆ ನೋಡುವುದು ಕೈಸನ್ನೆ ಮಾಡಿ ಕರೆದಾಗ ಪರಿಚಯವಾಗಿ ಮಾತನಾಡುತ್ತಾ ಇರುತ್ತಿದ್ದೇವು ಈ ವಿಷಯ ನಮ್ಮ ಮನೆಯಲ್ಲಿ ಯಾರಿಗೋ ಗೋತ್ತಿರುವುದಿಲ್ಲಾ. ನಾನು ಆಗಾಗ ಹೊಲಕ್ಕೆ ಹೋದಾಗ ಆತನು ಸಹ ತಮ್ಮ ಹೊಲಕ್ಕೆ ಬಂದು ನನಗೆ ಬೇಟಿಯಾಗಿ ನಾನು ನಿನನ್ನು ಪ್ರೀತಿಸುತ್ತಿದ್ದೇನೆ ನಿನ್ನನ್ನು ಮದುವೆ ಆಗುತ್ತೇನೆ. ಅಂತಾ ಹೇಳುತ್ತಿರುತ್ತಿದ್ದ ಆಗ ನಾನು ಆಗ ನಾನು ಮುಂದೆ ನೊಡೋಣಾ ಅಂತಾ ಸುಮ್ಮನಾದೆ. ಹೀಗೆ ಸುಮಾರು ದಿವಸಗಳವರೆಗೆ ನಮ್ಮ ಮನೆಯಲ್ಲಿ ಯಾರಿಗೋ ಗೋತ್ತಾಗದೆ ಆತನೊಂದಿಗೆ ಫೋನಿನಲ್ಲಿ ಮಾತನಾಡುವುದು ಪರಸ್ಪರ ಬೇಟಿಯಾಗುತ್ತಾ ಬಂದಿದ್ದು ಈಗ ಸುಮಾರು 1 ತಿಂಗಳ ಹಿಂದೆ ಶ್ರೀಕಾಂತ @ ಚಂದ್ರಕಾಂತ ಈತನು ನನಗೆ ಹೊಲಕ್ಕೆ ಬಾ ನಿನ್ನ ಜೋತೆಯಲ್ಲಿ ಮಾತಾಡುವುದಿದೆ ಅಂತಾ ಹೇಳಿ ಪುಸಲಾಯಿಸಿ ನನಗೆ ತನ್ನ ಹೊಲಕ್ಕೆ ಕರೆದುಕೊಂಡು ಹೋಗಿ ಮದ್ಯಾಹ್ನದ ವೇಳೆಗೆ ಹೊಲದ ಹಳ್ಳದ ಹತ್ತಿರ ಇರುವ ಗಿಡದ ಕೆಳಗಡೆ ನಿನಗೆ ಪ್ರೀತಿಸುತ್ತೇನೆ ಅಂತಾ ಒಮ್ಮೆಲೆ ನನಗೆ ತೆಕ್ಕೆಯಲ್ಲಿ ಹಿಡಿದು ಮುದ್ದಾಡಿ ಕೆಳಗೆ ಮಲಗಿಸಿದಾಗ ಆಗ ನಾನು ಈ ರೀತಿ ಮಾಡುವುದು ಬೇಡ ನಾನು ಸಣ್ಣವಳಾಗಿದ್ದೇನೆ ಮದುವೆ ಆದ ನಂತರ ಮಾಡೋಣಾ ಅಂತಾ ಹೇಳಿದರು ಸಹ ಕೇಳದೆ ಒತ್ತಾಯ ಪೂರ್ವಕವಾಗಿ ಸಂಭೋಗ ಮಾಡಿದ್ದು ಶ್ರೀಕಾಂತ @ ಚಂದ್ರಕಾಂತ ಈತನು ಹೊಲಕ್ಕೆ ಹೋದಾಗ  ಭೇಟಿಯಾಗಿ ನಾವು ಎಲ್ಲಾದರು ಓಡಿ ಹೋಗಿ ಮದುವೆ ಆಗೋಣಾ ಅಂತಾ ಹೇಳುತ್ತಿದ್ದ. ಈಗ 10 ದಿವಸಗಳ ಹಿಂದೆ ಅಂದರೆ ದಿನಾಂಕ-28/04/2016 ರಂದು ಅಂದಾಜು 9 ಎ.ಎಮ್ ಗಂಟೆ  ಸುಮಾರಿಗೆ ಮನೆಯಿಂದ ಹೊರಗಡೆ ಇದ್ದಾಗ ಶ್ರೀಕಾಂತ @ ಚಂದ್ರಕಾಂತ ಈತನು ನನಗೆ ಬೇಟಿಯಾಗಿ ಹೇಳಿದೆನೆಂದರೆ ನಮ್ಮ ಊರಿನ ನನ್ನ ಗಳೆಯನಾದ ರೋಹಿತ ಈತನು ಈಗ ಕೆಲವು ದಿನಗಳಿಂದ ಬಾಂಬೆಯಿಂದ ಬಂದು ಊರಲ್ಲಿದ್ದಾನೆ ಆತನು ಬಾಂಬೆಗೆ ಹೋಗುತ್ತಿದ್ದಾನೆ ಆತನ ಜೋತೆಯಲ್ಲಿ ನೀನು ಹೋಗು ನಾನು ಆಮೇಲೆ ಹಿಂದುಗಡೆ ಬರುತ್ತೇನೆ ಬಾಂಬೆಯಲ್ಲಿ ಮದುವೆ ಮಾಡಿಕೊಳ್ಳಣಾ ಆತನು ಬೆಣ್ಣೂರ ಬಸ್ ಸ್ಟ್ಯಾಂಡ್ ಹತ್ತಿರ ಇರುತ್ತಾನೆ ಅಂತಾ ಹೇಳಿದಾಗ ಆಯ್ತಿ ಅಂತಾ ಹೇಳಿ ನಾನು ನಮ್ಮ ಮನೆಯಲ್ಲಿ ತಂದೆ ತಾಯಿಯವರು ಸಣ್ಣೂರ ಸಂತೆಗೆ ಹೋದಾಗ ನಮ್ಮ ಮನೆಯಲ್ಲಿ ನನ್ನ ತಂಗಿಗೆ ಹೋಲಕ್ಕೆ ಹೋಗಿ ಬರುವುದಾಗಿ ಹೇಳಿ ಮದ್ಯಾಹ್ನ 2 ಗಂಟೆ ಸುಮಾರಿಗೆ ಮನೆಯಿಂದ ಹೊರಟು  ಬೆಣ್ಣೂರ ಗ್ರಾಮದ ಬಸ್ ಸ್ಟ್ಯಾಂಡ್ ಹತ್ತಿರ ಹೋಗಿ ಅವನ ಜೋತೆಯಲ್ಲಿ ಅಲ್ಲಿಂದ ಬಸ್ ಮುಖಾಂತರ ಕಲಬುರಗಿಗೆ ಹೋಗಿ ಇಳಿದು ಅಲ್ಲಿಂದ ಸಾಯಂಕಾಲ ರೈಲ್ವೆ ಮುಖಾಂತರ ಬಾಂಬೆಗೆ ದಿನಾಂಕ-29/04/2016 ರಂದು ಬೆಳ್ಳಿಗೆ ಬಂದು ಇಳಿದು ಅವನು ಕೆಲಸ ಮಾಡುವ ಖಾರ ಸ್ಟೇಷನ್ ಹತ್ತಿರ ಇರುವ ಕಟ್ಟಡದಲ್ಲಿ ಉಳಿದುಕೊಂಡೇವು ನಂತರ ನಾನು ರೋಹಿತ ಈತನ ಮೋಬೈಲನಿಂದ ನನ್ನ ತಂದೆಯ ಮೋಬೈಲಕ್ಕೆ ಪೋನ್ ಮಾಡಿ ವಿಳಾಸ ಹೇಳುವಷ್ಟರಲ್ಲಿ ಪೋನ್ ಕಟ್ಟಾಗಿದರಿಂದ ಮುಂದೆ ಪೋನ್ ಮಾಡಲ್ಲಿಲ್ಲಾ. ನಾನು ಹೋದ ಎರಡು ದಿವಸಗಳ ನಂತರ ಶ್ರೀಕಾಂತ @ ಚಂದ್ರಕಾಂತ ಈತನು ನಮ್ಮ ಹತ್ತಿರ ಬಂದು ನನಗೆ ಬಾಂಬೆಯಲ್ಲಿ ಇತರ ಕಡೆಗೆ ತಿರುಗಾಡಿಸಿ ರಾತ್ರಿ ನಾವು ಉಳಿದುಕೊಂಡ ಕಟ್ಟದಲ್ಲಿ ಬಂದಾಗ ಮಲಗೋಣಾ ಬಾ ಅಂತಾ ಹೇಳಿದಾಗ ಆಗ ನಾನು ಬೇಡ ಬೇಡ ಮದುವೆ ಆದ ನಂತರ ಮಾಡೋಣಾ ಅಂದರು ಸಹ ಕೇಳದೆ ಒತ್ತಾಯ ಪೂರ್ವಕವಾಗಿ ಸಂಭೋಗ ಮಾಡಿರುತ್ತಾನೆ ಹಾಗೆ ಎರಡು ಮೂರು ದಿವಸಗಳ ವರೆಗೆ ನಿರಂತರ ಸಂಬೋಗ ಮಾಡಿರುತ್ತಾನೆ. ನಂತರ ನಾನು ಯಾರಿಗೋ ಹೇಳದೆ ಕೇಳದೆ ಬಂದಿದರ ಬಗ್ಗೆ ಪೊಲೀಸ್ ಠಾಣೆಯಲ್ಲಿ ನಮ್ಮ ವಿರುದ್ದ ನಮ್ಮ ತಂದೆ ತಾಯಿಯವರು ಕೇಸ ಮಾಡಿರುವುದಾಗಿ ಗೋತ್ತಾಗಿ ನಾವಿಬ್ಬರೂ ಅಲ್ಲಿಂದ ಊರಿಗೆ ಹೋಗುಣಾ ಅಂತಾ ದಿನಾಂಕ-07/05/2016 ರಂದು ರಾತ್ರಿ ರೈಲ್ವೆ ಮುಖಾಂತರ ದಿನಾಂಕ-08/05/2016 ರಂದು ಬೆಳ್ಳಿಗೆ 9ಗಂಟೆ ಸುಮಾರಿಗೆ ಕಲಬುರಗಿ ಸ್ಟೇಷನಕ್ಕೆ ಬಂದಿಳಿದು ಕಲಬುರಗಿಯಲ್ಲಿ ಸುತ್ತಾಡಿ ರಾತ್ರಿ ಕಲಬುರಗಿಯಲ್ಲಿ ಉಳಿದು ಇಂದು ದಿನಾಂಕ-09/05/2016 ರಂದು ಬೆಳ್ಳಿಗೆ 10 ಎ.ಎಮ್ ಕ್ಕೆ ಊರಿಗೆ ಹೋಗುವ ಸಲುವಾಗಿ ಬಸ್ ಸ್ಟ್ಯಾಂಡ ಹತ್ತಿರ ಬಂದಾಗ  ಪೋಲಿಸರು ನಮ್ಮನ್ನು ನೋಡಿ ಪೋಲಿಸ್ ಠಾಣೆಗೆ ಕೆರೆದುಕೊಂಡು ಬಂದಿರುತ್ತಿರಿ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ಜೇವರಗಿ ಠಾಣೆ : 08.05.2016 ರಂದು ಸಾಯಾಂಕಾಲ ಸಮಯದಲ್ಲಿ ನಾನು ಠಾಣೆಯಲ್ಲಿದ್ದಾದ ಪೊಲೀಸ್ ಬಾತ್ಮಿ ಬಂದಿದ್ದೆನಂದರೆ, ದಿನಾಂಕ 08.05.2016 ರಂದು ಎ.ಪಿ.ಎಮ್.ಸಿ ಯಾರ್ಡದ ಹನುಮಾನ ಗುಡಿಯ ಹತ್ತಿರ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ಜೂಜಾಟ ಆಡುತ್ತಿದ್ದಾರೆ ಅಂತ  ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಜೇವರಗಿ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಎ.ಪಿ.ಎಮ್.ಸಿ ಯಾರ್ಡದ ಕಂಪೌಂಡ ಗೊಡೆ ಮರೆಯಾಗಿ ನಿಂತು ನೋಡಲು ಎ.ಪಿ.ಎಮ್.ಸಿ ಹನುಮಾನ ಗುಡಿಯ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ಇಸ್ಪೇಟ ಎಲೆಗಳ ಸಹಾಯದಿಂದ ಪಣಕ್ಕೆ ಹಣ ಹಚ್ಚಿ ಅಂದರ ಬಾಹರ ಎಂಬ ಜೂಜಾಟ ಆಡುತ್ತಿರುವದನ್ನು ನೋಡಿ ಖಚಿತ ಪಡಿಸಿಕೊಂಡು. ದಾಳಿ ಮಾಡಿ ಹಿಡಿದು ಅವರಿಗೆ ವಿಚಾರಿಸಲು ಅವರು 1] ಸಿದ್ದಪ್ಪ ತಂದೆ ದೇವಿಂದ್ರಪ್ಪ ಪಾಟೀಲ ಸಾ: ಬಸವೇಶ್ವರ ಕಾಲೋನಿ ಜೇವರಗಿ 2] ಸಿದ್ದಣ್ಣಗೌಡ ತಂದೆ ಭಿಮಣಗೌಡ ಪಾಟೀಲ ಸಾ: ಓಂ ನಗರ 3] ರಾಘವೇಂದ್ರ ತಂದೆ ಹೂವಣ್ಣಾ ಹನ್ನೂರ 4] ರಾಜಕುಮಾರ ತಂದೆ ಚಂದ್ರಪ್ಪ ಗೊಡೆದ ಸಾ: ದತ್ತನಗರ ಜೇವರಗಿ  ಅಂಥಾ ಹೇಳಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ 5070/-ರೂ ಹಾಗೂ 52 ಇಸ್ಪೇಟ ಎಲೆಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವರೊಂದಿಗೆ ಜೇವರಿಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ ಜಪ್ತಿ :
ಜೇವರಗಿ ಠಾಣೆ : ದಿನಾಂಕ 08.05.2016 ರಂದು ಮದ್ಯಾಹ್ನ  ಕೋಳಕೂರ ಸಿಮಾಂತರದ ಬೀಮಾ ನದಿಯಿಂದ ಟ್ರ್ಯಾಕ್ಟರದಲ್ಲಿ ಮರಳು ಕಳ್ಳತನ ಮಾಡಿಕೊಂಡು ಜೇವರಗಿ ಕಡೆಗೆ ಹೋಗುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಜೇವರಗಿ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಹೊರಟ್ಟು ಕಲಬುರಗಿ–ಜೇವರಗಿ ಕೋಳಕೂರ ಕ್ರಾಸ ಹತ್ತಿರ ರೋಡಿನ ಪಕ್ಕದಲ್ಲಿ ನಮ್ಮ ಜೀಪ ನಿಲ್ಲಿಸಿ ನಾವು ಕೆಳಗೆ ಇಳಿದು ಟ್ರ್ಯಾಕ್ಟರ ಬರುವದನ್ನು ಕಾಯುತ್ತಾ ನಿಂತಾಗ, ಕೋಳಕೂರ ಕಡೆಯಿಂದ ಒಂದು ಕೆಂಪು ಬಣ್ಣದ ಟ್ರ್ಯಾಕ್ಟರ ಬರುತ್ತಿರುವದನ್ನು ನೋಡಿ ಅದಕ್ಕೆ  ಕೈ ಮಾಡಿ ನಿಲ್ಲಿಸಲು ಹೆಳಿದಾಗ ಅದರ ಚಾಲಕನು ಸ್ವಲ್ಪ ಮುಂದೆ  ಕ್ರಾಸ ಹತ್ತಿರ ರೋಡಿನಲ್ಲಿ ನಿಲ್ಲಿಸಿದಾಗ ಸದರಿ ಟ್ರ್ಯಾಕ್ಟರ್‌ ಚಾಲಕನನ್ನು ಹಿಡಿಯುವಸ್ಟರಲ್ಲಿ ಟ್ರ್ಯಾಕ್ಟರ್‌ ಅನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೋದನು, ನಂತರ ಸದರಿ ಟ್ರ್ಯಾಕ್ಟರ್‌ ಕಡೆಗೆ ಹೋಗಿ ನೋಡಲು ಟ್ರ್ಯಾಕ್ಟರ್‌ ಟ್ರಾಯಲಿಯಲ್ಲಿ 1 ಬ್ರಾಸ್‌ ಮರಳು ತುಂಬಿದ್ದು ಪರೀಶೀಲಿಸಲು ಅದು ಕೆಂಪು ಬಣ್ಣದ ಟೆಂಪೋ ಕಂಪನಿ ಟ್ರ್ಯಾಕ್ಟರ ಇದ್ದು ಅದರ ಮೇಲೆ ನಂಬರ ಇರಲಿಲ್ಲಾ. ಟ್ರ್ಯಾಕ್ಟರ ಚಸ್ಸಿ ನಂಬರ ನೋಡಲು ಅದು ಟಿ06005904ಡಿ05 ಇತ್ತು. ಅದರ ಟ್ರ್ಯಾಲಿ ನಂಬರ ಮತ್ತು ಅದರ ಚಸ್ಸಿ ನಂಬರ ಕೂಡಾ ಇರುವದಿಲ್ಲಾ. ಸದರಿ ಟ್ರ್ಯಾಕ್ಟರದಲ್ಲಿ ಒಂದು ಬ್ರಾಸ ಮರಳು ಅ.ಕಿ 1000/-ರೂ ಮತ್ತು ಟ್ರ್ಯಕ್ಟರ ಅ.ಕಿ 2,00,000/-ರೂ ಆಗಬಹುದು. ನಂತರ ಸದರಿ ಟ್ರ್ಯಾಕ್ಟರನ್ನು ವಶಪಡಿಕೊಂಡು ಜೇವರಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ 04/05/16 ರಂದು ರಾತ್ರಿ ಶ್ರೀ ರವಿ ತಂದೆ ಕುಪೇಂದ್ರ ನಂದಿಕೂರ ಸಾ : ವಿದ್ಯಾನಗರ ಕಪನೂರ ರವರು ಮತ್ತು ಆತನ ಗೆಳೆಯ ದೇವು ಕಜ್ಜಿ ಇಬ್ಬರು  ತಮ್ಮ ಗ್ರಾಮದ ದರ್ಗಾ ಜಾತ್ರೆ ಇದುದ್ದರಿಂದ  ದರ್ದಾ ಕಡೆ ಹೋಗುತ್ತಿರುವಾಗ  ಧರ್ಮಶಾಲೆ ಹತ್ತಿರ ರೋಡಿನ ಮೇಲೆ ಶರಣಬಸಪ್ಪ ತಂದೆ ಹಣಮಂತ ದ್ಯಾಗಾಯಿ ಇವನು  ತನ್ನ ಇಂಡಿಕಾ ಕಾರಿನಿಂದ ನಮ್ಮನ್ನು ಅಡ್ಡಕಟ್ಟಿ ದರ್ಗಾ ಕಡೆ ಹೋಗುವ ನನಗೆ ತಡೆದು ಕಾರಿನಿಂದ ಇಳಿದು ಬಂದವನೇ  ನನಗೆ ಎದೆಯ ಮೇಲಿನ ಅಂಗಿಯನ್ನು ಹಿಡಿದು ಎಳೆದಾಡಿ ಅವಾಚ್ಯ ಶಬ್ದಗಳಿಂದ  ಬೈದು ನೀವು ನಮ್ಮ ಅಣ್ಣ ತಮ್ಮಂದಿರರ ಮೇಲೆ ಕೆಸು ಮಾಡಿಸಿರುತ್ತೀರಿ ರಾಜಿ ಆಗಿರಿ ಎಂದು ಹೇಳಿದರೆ ಆಗುವುದಿಲ್ಲಾ ಎಂದು ಹೇಳುತ್ತೀರಿ ಭೋಸಡಿ ಮಕ್ಕಳೇ ಇವತ್ತು ನಿನಗೆ ಕೊಲೆ ಮಾಡಿ ನಿನ್ನ ದೇಹದ ಭಾಗವನ್ನು ಚಿದ್ರ ಚಿದ್ರ ಮಾಡಿ ಹಳ್ಳದಲ್ಲಿ ಬಿಸಾಡುತ್ತನೆ ಅಂತಾ ಬೈಯ್ಯುತ್ತಾ ಕೊಲೆ ಮಾಡಲು ಕಾರಿನ ಕಡೆಗೆ ಎಳೆದುಕೊಂಡು ಬಯ್ಯುದು ತನ್ನ ಕಾರಿನಲ್ಲಿ ಹಾಕಿಕೊಳ್ಳಲು ಕಾರಿನ ಒಳಗೆ ನನಗೆ ದಬ್ಬುತ್ತಿರುವಾಗ ನನ್ನ ಸಂಗಡ ಇದ್ದ ದೇವು ಕಜ್ಜಿ ಬಂದು ಹೀಗೆ ಎಳೆದಾಡಿ ಹೊಡೆಯುತ್ತಾ ಕಾರಿನ ಒಳಗಡೆ ದಬ್ಬುವುದು ಸರಿ ಅಲ್ಲಾ ಅಂತಾ ಹೇಳುತ್ತಾ ನನ್ನನ್ನು ಅವನಿಂದ ಬಿಡಿಸಿಕೊಮಡೆನು ಬಿಡಿಸಿಕೊಳ್ಳದಿದ್ದರೆ ನನ್ನನ್ನು ಕಾರಿನಲ್ಲಿ ಹಾಕಿಕೊಂಡು ಒಯ್ಯದು ಕೊಲೆ ಮಾಡುತ್ತಿದ್ದನು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣಗಳು :
ಯಡ್ರಾಮಿ ಠಾಣೆ : ಶ್ರೀಮತಿ ಲಕ್ಷ್ಮಿಬಾಯಿ ಗಂಡ ರೇವಣಸಿದ್ದಪ್ಪ ದಿಗ್ಗಾವಿ ಸಾ|| ಸುಂಬಡ ತಾ|| ಜೇವರಗಿ ಇವರ ಗಂಡ ಅವರ ಅಣ್ಣ ಸಿದ್ದು ಇವರ ಟ್ರಾಕ್ಟರ್ ಮೇಲೆ ಕೂಲಿ ಕೆಲಸ ಮಾಡಿಕೊಂಡಿರುತ್ತಾರೆ. ಆ ಟ್ರಾಕ್ಟರ್ ಮೇಲೆ ಮಲಕಣ್ಣ ಅಂತಾ ಚಾಲಕನಿರುತ್ತಾನೆ. ನಿನ್ನೆ ದಿನಾಂಕ 08-05-2016 ರಂದು ರಾತ್ರಿ 8 ಗಂಟೆಯ ಸುಮಾರಿಗೆ ನನ್ನ ಗಂಡ ನನಗೆ ಹೇಳಿದ್ದೆನೆಂದರೆ ನಮ್ಮೂರಿನ ಊರ ಕೇರೆಯಲ್ಲಿ ನನ್ನ ಅಣ್ಣ ಸಿದ್ದುನ ಟ್ರಾಕ್ಟರ್ ಹಾಗು ಇನ್ನು ಊರಿನ ಕೆಲವು ಟ್ರಾಕ್ಟರ್ಗಳು ಜೆ. ಸಿ. ಬಿ. ಮುಖಾಂತರ ಮಣ್ಣು ಟ್ರಾಕ್ಟರ್ ನಲ್ಲಿ ಹಾಕಿ ಹೂಳು ತೆಗೆಯುತ್ತಿದ್ದಾರೆ. ನನಗೂ ನನ್ನ ಅಣ್ಣ ಡ್ರೈವರನೊಂದಿಗೆ ಕೆಲಸಕ್ಕೆ ಹೋಗು ಅಂತಾ ಹೇಳಿದ್ದರಿಂದ ನಾನು ಅಲ್ಲಿಗೆ ಹೋಗುತ್ತಿದ್ದೆನೆ ಅಂತಾ ಹೇಳಿ ಹೋದರು. ನಾನು ಮನೆಯಲ್ಲಿ ಮಲಗಿಕೊಂಡಾಗ ರಾತ್ರಿ 3 ಗಂಟೆಯ ಸುಮಾರಿಗೆ ನನ್ನ ಬಾವನ ಟ್ರಾಕ್ಟರ ಮೇಲೆ ಡ್ರೈವರ್ ಅಂತಾ ಕೆಲಸ ಮಾಡುತ್ತಿದ್ದ ಮಲಕಪ್ಪ ಹಾಗು ನಮ್ಮೂರಿನ ಹಾಜಿಮಲಾಂಗ ಇಬ್ಬರೂ ನಮ್ಮ ಮನೆಗೆ ಬಂದು ಹೇಳಿದ್ದೆನೆಂದರೆ ನಮ್ಮ ಟ್ರಾಕ್ಟರ್ ಮಣ್ಣು ಬರಕಿ ಬಂದು ನಾನು ಮತ್ತು ನಿನ್ನ ಗಂಡ ಟ್ರಾಕ್ಟರದಿಂದ ಇಳಿದಾಗ ನಿನ್ನ ಗಂಡನು ಸ್ವಲ್ಪ ಮುಂದೆ ಕೆರೆಯಲ್ಲಿ ಹೊಗುತಿದ್ದಂತೆ ಜೆ ಸಿ ಬಿ ಡ್ರೈವರ್ ನು ಹಿಂದೆ ನೋಡದೆ ತನ್ನ ಜೆ ಸಿ ಬಿ ಯನ್ನು ಒಮ್ಮಲೆ ಜೋರಾಗಿ ಹಿಂದಕ್ಕೆ ತೆಗೆದುಕೊಳ್ಳುತ್ತಿದ್ದಾಗ ಜೆ ಸಿ ಬಿ ಯ ಹಿಂದಿನ ಬಕೀಟು ನಿನ್ನ ಗಂಡನ ಎಡ ಎದೆಗೆ ಬಡಿದು ಭಾರಿ ಗುಪ್ತ ಪೆಟ್ಟಾಗಿ ನೆಲೆಕ್ಕೆ ಬಿದ್ದನು ಆಗ ಜೆಸಿಬಿ ಯ ಹಿಂದಿನ ದೊಡ್ಡ ಗಾಲಿ ಎಡ ಮೆಲಕಿಗೆ ಒತ್ತಿದ್ದರಿಂದ ಮೂಗಿನಿಂದ, ಎರಡು ಕಿವಿಗಳಿಂದ, ಬಾಯಿಂದ ಭಾರಿ ಗಾಯವಾಗಿ ರಕ್ತ ಸೋರಿ ಮೃತ ಪಟ್ಟಿದ್ದು ಅಲ್ಲದೆ ಅವನ ಎಡ ಮುಂಡಿಗೆ, ಎಡ ಮೋಳಕಾಲಿನ ಹಿಂಬಡಿಗೆ, ಎಡ ತೋಡೆಗೆ ತೆರಚಿದ ಗಾಯಗಳಾಗಿರುತ್ತವೆ. ಜೆ ಸಿ ಬಿ ಚಾಲಕನು ನಿನ್ನ ಗಂಡನಿಗೆ ಡಿಕ್ಕಿ ಪಡಿಸಿ ಹೇಳದೆ-ಕೇಳದೆ ಓಡಿ ಹೋಗಿರುತ್ತಾನೆ. ಜೆಸಿಬಿಯ ನಂ ಕೆ ಎ 28 ಎಂ 7349 ಇದ್ದು ಚಾಲಕನ ಹೆಸರು ವಿಳಾಸ ಗೊತ್ತಿಲ್ಲ ಅವನನ್ನು ನೋಡಿದರೆ ಗುರುತಿಸುತ್ತೆವೆ. ಅಂತಾ ತಿಳಿಸಿದ್ದು  ನಾನು ಗಾಭರಿಗೊಂಡು ನನ್ನ ಬಾವ ಸಿದ್ದು, ಅತ್ತೆ ಸಾಬವ್ವ, ಮಾವ ಸಿದ್ದರಾಮಪ್ಪ ಹಿಗೇಲ್ಲರೂ ಕೂಡಿಕೊಂಡು ಸ್ಥಳಕ್ಕೆ ಹೋಗಿ ನೋಡಲಾಗಿ ನನ್ನ ಗಂಡನಿಗೆ ಎಡ ಎದೆಗೆ ಜೆಸಿಬಿ ಯ ಬಕೀಟು ಬಡಿದು ಎದೆಗೆ ಬಡಿದು ಭಾರಿ ಗುಪ್ತ ಪೆಟ್ಟಾಗಿದ್ದು ಜೆಸಿಬಿ ಯ ಹಿಂದಿನ ಗಾಲಿ ಎಡ ಮೆಲಕಿಗೆ ಒತ್ತಿದ್ದರಿಂದ ಮೂಗಿನಿಂದ, ಎರಡು ಕಿವಿಗಳಿಂದ, ಬಾಯಿಂದ ಭಾರಿ ಗಾಯವಾಗಿ ರಕ್ತ ಸೋರಿ ಮೃತ ಪಟ್ಟಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಫರತಾಬಾದ ಠಾಣೆ : ಶ್ರೀ ರಾಜು ತಂದೆ ರಾಮಚಂದ್ರ ಹಾಲು ಸಾ: ಪೇಠ ಪಿರೋಜಾಬಾದ ಇವರ ತಮ್ಮನಾದ ಬಸವರಾಜ ತಂದೆ ರಾಮಚಂದ್ರ ಹಾಲು ಈತನು ಕಲಬುರಗಿ ಸಿಮೇಂಟ ಕಂಪನಿಯಲ್ಲಿ ವಾಚಮೆನ್ ಅಂತಾ  ಕೆಲಸ ಮಾಡುತ್ತಿದ್ದು  ಕಲಬುರಗಿ ನಗರದಲ್ಲಿ ಮನೆ  ಮನೆ ಮಾಡಿ ಕೊಂಡು ಹೆಂಡತಿ ಮಕ್ಕಳೋಂದಿಗೆ ವಾಸವಾಗಿರುತ್ತಾನೆ.  ಹೀಗಿರುವಾಗ ನಿನ್ನೆ ದಿನಾಂಕ 7/5/2016 ರಂದು ಮದ್ಯಾಹ್ನ 2 ಗಂಟೆಯ ಸುಮಾರಿಗೆ ಸದರಿ ನನ್ನ ತಮ್ಮ ಬಸವರಾಜನು ಗುಲಬರ್ಗಾ ಸಿಮೇಂಟ ಕಂಪನಿಗೆ ಕೆಲಸಕ್ಕೆ  ನಮ್ಮೂರಿನ ಬಗವಂತ ತಂದೆ ಸೈದಪ್ಪಾ ಮಾಂಗ  ಇತನ ಮೋ/ಸೈ ನಂ ಎಮ್.ಹೆಚ್-12 ಡಿ.ಎನ್-1404 ಕಲಬುರಗಿಯಿಂದ ಹೋಗುತ್ತಿರುವಾಗ ಭಗವಂತ ಇತನು ಮೋ/ಸೈ ಚಲಾಯಿಸುತ್ತಿದ್ದು  ನನ್ನ ತಮ್ಮ ಬಸವರಾಜ ಇತನು  ಹಿಂದೆ ಕುಳಿತಿದ್ದನು ಭಗವಂತನು ಪೀರೊಜಾಬಾದ ಗ್ರಾಮದ  ಖಲಿಪತ ರಹಿಮಾನ ದರ್ಗಾದ ಹತ್ತಿರ ಎನ್.ಹೆಚ್-218 ರೋಡಿನ ಮೇಲೆ  ಮೊ/ಸೈ ಚಲಾಯಿಸಿ ಕೊಂಡು ಹೋಗುತ್ತಿದ್ದಂತೆ ಅತೀವೇಗ & ಅಜಾಗರೂಕತೆಯಿಂದ ಚಲಾಯಿಸಿಕೊಂಡು  ಹೋಗುತ್ತೀರುವಾಗ  ಮೋಟಾರ ಸೈಕಲಿನ ಹಿಂದಿನ ಗಾಲಿಯ ಟಾಯರ ಒಡೆದಿದ್ದರಿಂದ  ನಿಯಂತ್ರಣ ಕಳೆದುಕೊಂಡು ಇವರಿಬ್ಬರೂ ಮೊಟಾರ  ಸೈಕಲ ಸಮೇತ ವಾಗಿ  ಕೆಳಗೆ ಬಿದ್ದ ಪರಿಣಾಮವಾಗಿ ನನ್ನ ತಮ್ಮ ಬಸವರಾಜನಿಗೆ  ತಲೆಯ ಹಿಂಬಾಗದಲ್ಲಿ ಭಾರಿ ರಕ್ತಗಾಯ ವಾಗಿದ್ದು ಮತ್ತು ಭಗವಂತನಿಗೆ  ಕೈಗಳಿಗೆ ಹಾಗು ಕಾಲುಗಳಿಗೆ ರಕ್ತ, ಗುಪ್ತಗಾಯಗಳಾಗಿರುತ್ತವೆ. ಇದನ್ನು ನೋಡಿದ ದಾರಿಗೆ ಹೋಗುವವರು  108 ವಾಹನದಲ್ಲಿ ಹಾಕಿ ಇವರಿಬ್ಬರನ್ನು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆ ಕಲಬುರಗಿಗೆ ತಂದು ಸೇರಿಕೆ ಮಾಡಿರುತ್ತಾರೆ  ನಂತರ ವಿಷಯ ತಿಳಿದು ನಾನು ನಮ್ಮ  ಸಂಬಂದಿಕರೊಂದಿಗೆ ಸರ್ಕಾರಿ  ಆಸ್ಪತ್ರೆ ಕಲಬುರಗಿಗೆ ಬಂದು ನನ್ನ ತಮ್ಮ ಬಸವರಾಜನನ್ನು ಹೆಚ್ಚಿನ ಚಿಕಿತ್ಸೆಗಾಗಿ ಚಿರಾಯು ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಸೇರಿಕೆ ಮಾಡಿರುತ್ತೇನೆ . ಆದರೆ ನನ್ನ ತಮ್ಮ ಬಸವರಾಜನು ಚಿಕಿತ್ಸೆಯಲ್ಲಿ ಗುಣಮುಖನಾಗದೆ  ನಿನ್ನೆ ದಿನಾಂಕ 7/5/2016 ರಂದು ರಾತ್ರಿ 10-00 ಗಂಟೆಗೆ  ಮೃತ ಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಆತ್ಮ ಹತ್ಯೆ ಮಾಡಿಕೊಂಡ ಪ್ರಕರಣ :
ಆಳಂದ ಠಾಣೆ : ಶ್ರೀ ಮಾಹಾರುದ್ರಪ್ಪಾ ತಂದೆ ಹಣಮಂತಪ್ಪಾ ಬಲಸೂರೆ ಮು: ಜವಳಗಾ (ಜೆ) ಇವರ ಮಗ ಉಮೇಶ ನಮ್ಮೂರಲ್ಲಿ ಕೆಲವು ಜನರ ಹೊಲಗಳನ್ನು ಹಣ ಕೊಟ್ಟು ಕಡಿದು ಹಾಕಿಕೊಂಡಿದ್ದು ಬರಗಾಲ ಬಿದ್ದು ಮಳೆ ಬೆಳೆ ಆಗದಿದ್ದರಿಂದ ಹೊಲಗಳಿಗೆ ಗೊಬ್ಬರ , ಬೀಜ ಹಾಗು ಹೊಲ ಕಡಿದು ಹಾಕಿಕೊಂಡು ಮಾಲಕರಿಗೆ ದುಡ್ಡು ಕೊಟ್ಟು ನನ್ನ ಮಗನಿಗೆ 4-5 ಲಕ್ಷ ರೂಪಾಯಿ  ಸಾಲವಾಗಿದ್ದು  ಅದನ್ನು ತಿರಿಸುವುದು ಹೇಗೆ ಅಂತಾ ಚಿಂತಿಸುತ್ತಾ ಮನೆಯಲ್ಲಿ ಒಬ್ಬನೆ ಒಬ್ಬಂಟಿಗನಾಗಿ ಇರುತ್ತಾ ಕುಡುತ್ತಿದ್ದು ನಾನು ಹಾಗು ನನ್ನ ಹೆಂಡತಿ ಪುಲಾಬಾಯಿ , ಹಾಗು ನನ್ನ ಸೋಸೆ ಕವಿತಾ ಬಾಯಿ ಎಲ್ಲರೂ ಕೂಡಿ ದೈರ್ಯ ಹೇಳುತ್ತಾ ಹೇಗಾದರೂ ಮಾಡಿ ಸಾಲ ತಿರಿಸಿದರಾಯಿತು ಚಿಂತಿಸ ಬೇಡ ಅಂತಾ ಹೇಳುತ್ತಾ ಬಂದಿದ್ದು                       ದಿನಾಂಕ:08/05/2016 ರಂದು ರಾತ್ರಿ ಎಲ್ಲರೂ ಊಟ ಮಾಡಿ ಮನೆಯ ಹೊರಗಡೆ ಮಲಗಿಕೊಂಡಿದ್ದೇವು .ದಿನಾಂಕ 09/05/2016 ರಂದು ಬೆಳಿಗ್ಗೆ 6:00 ಗಂಟೆ ಸುಮಾರಿಗೆ ಎದ್ದು ನೋಡಲು ನನ್ನ ಮಗ ಉಮೇಶ ಕಾಣಿಸಲಿಲ್ಲಾ ನಂತರ ಮನೆಯ ಬಾಗಿಲು ತರೆಯಲು ಹೋದಾಗ ಮನೆಗೆ ಒಳಕೊಂಡಿದ್ದು ಇದ್ದು. ಉಮೇಶ ಬಾಗಿಲು ತೆರೆ ಎಂದು ಕೂಗಿದರೂ ಯಾವುದೆ ಪ್ರತಿಕ್ರಿಯೆ ಬರದೆ ಇರುವುದರಿಂದ ನಾವು ಅಕ್ಕಪಕ್ಕದವರಿಗೆ ಕರೆದು ಮನೆಯ ಹಿಂದಿನ ಕೀಟಕಿ ಹತ್ತಿರ ಹೋಗಿ ನೋಡಲು ನನ್ನ ಮಗನು ಪತ್ರಾ ಶೆಡ್ಡಿನ ಕಬ್ಬಿಣದ ಪೈಪಿಗೆ ಹಗ್ಗದಿಂದ ಉರಲು ಹಾಕಿಕೊಂಡು ಜೋತಾಡುತ್ತಿರುವುದು ನೋಡಿ ಮೇಲಿನ ಪತ್ರಾ ತೆಗೆದು ನೋಡಲು ನನ್ನ ಮೃತಪಟ್ಟಿದ್ದು ಈ ಘಟನೆ ದಿನಾಂಕ:08/05/2016 ರ ರಾತ್ರಿ 11:00 ಗಂಟೆಯಿಂದ ದಿನಾಂಕ 09/05/2016 ರಂದು ಬೆಳಗಿನ 6 ಗಂಟೆಯ ಮದ್ಯದ ಅವಧಿಯಲ್ಲಿ ತನಗಾದ ಸಾಲಭಾದೆ ತಾಳಲಾರದೆ ಸಾಲ ಹೇಗೆ ತಿರಿಸುವುದು ಅಂತಾ ಚಿಂತಿಸಿ ಮನನೊಂದು ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಉರಲು ಹಾಕಿಕೊಂಡು ಮರಣ ಹೊಂದಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗುಂಡು ಹಾರಿಸಿ ಕೊಲೆಮಾಡಲು ಪ್ರಯತ್ನ ಮಾಡಿದ ಪ್ರಕರಣ :
ಆಳಂದ ಠಾಣೆ : ಶ್ರೀ ರಾಜೇಂದ್ರ ತಂದೆ ಶಿವಬಾಳಪ್ಪಾ @ ಶಿವಲಿಂಗಪ್ಪಾ ಪಾಟೀಲ ಸಾ||ಪಡಸಾವಳಗಿ ತಾ|| ಆಳಂದ ರವರು ಹೆಂಡತಿ ಮಕ್ಕಳೊಂದಿಗೆ ಹಾಗೂ ನನ್ನ ಎರಡನೇ ತಾಯಿಯಾದ ವೆಂಕಟಮ್ಮ ವಯ:70 ವರ್ಷದವಳೊಂದಿಗೆ ಉಪಜೀವಿಸುತ್ತೇನೆ.ನಮ್ಮ ತಂದೆ 2006 ನಮ್ಮ ಖಾಸತಾಯಿ ಭೀಮಾಬಾಯಿ 1973ರಲ್ಲಿ ಮರಣ ಹೊಂದಿದ್ದು ನಮ್ಮ ತಂದೆಯ ಹೆಸರಿನಲ್ಲಿ 64 ಎಕರೆ ಜಮೀನು ಇದ್ದು ನಮ್ಮ ತಂದೆಗೆ 1) ನಾನು 2) ವಿಜಯಕುಮಾರ ಇಬ್ಬರೂ ಗಂಡು ಮಕ್ಕಳಿದ್ದು ನಮ್ಮ ತಂದೆಯವರು ಜೀವಂತವಿದ್ದಾಗ 18 ವರ್ಷದ ಹಿಂದೆ ನಾನು ನನ್ನ ತಮ್ಮ ಬೇರೆ ಬೇರೆಯಾಗಿದ್ದು ನನ್ನ ಪಾಲಿಗೆ 24 ಎಕರೆ ಜಮೀನು ನನ್ನ ತಮ್ಮನ ಪಾಲಿಗೆ 28 ಎಕರೆ ಜಮೀನು ಇದ್ದು ನಮ್ಮ ತಂದೆ-ತಾಯಿಯ ಪಾಲಿಗೆ 10 ಎಕರೆ ಜಮೀನು ಬಿಟ್ಟಿದ್ದು ನಮ್ಮ ತಂದೆಯವರು ಮರಣ ಹೊಂದಿದ ಮೇಲೆ ತಲಾ 5 ಎಕರೆ ಜಮೀನು ಹಂಚಿಕೊಂಡಿದ್ದು ಇದೆ ನನಗೆ 03 ಜನ ಮಕ್ಕಳಿದ್ದು 1) ರಾಹುಲ 2) ರೋಹನ ಮತ್ತು 3) ಪ್ರಿಯಾಂಕ ಅಂತಾ ಇದ್ದು ನನ್ನ ತಮ್ಮನಿಗೆ ಸಚೀನ್, ವಿಶಾಲ ಗಂಡು ಮಕ್ಕಳಿರುತ್ತಾರೆ. ನನ್ನ ತಮ್ಮ ವಿಜಯಕುಮಾರನು ತನ್ನ ಪಾಲಿಗೆ ಬಂದ ಹೊಲದಲ್ಲಿ 15 ಎಕರೆ ಜಮೀನು ಮಾರಾಟ ಮಾಡಿದ್ದು ಅದನ್ನು ನಾನೇ ತಗೆದುಕೊಂಡಿದ್ದು ಅದು ನೋಂದಣಿಯಾಗಿರುತ್ತದೆ. ಹಾಗೂ ಬೇರೆ 05 ಎಕರೆ ಜಮೀನು ಕಾಶಿನಾಥ ಬಿರಾದಾರರವರಿಗೆ ಮಾರಾಟ ಮಾಡಿರುತ್ತಾನೆ. ನಾನು 2013ನೇ ಸಾಲಿನಲ್ಲಿ ನನ್ನ ತಮ್ಮ ವಿಜಯಕುಮಾರನು ತನ್ನ ಹೆಂಡತಿ ಶೋಭಾಳ ಹೆಸರಿನಲ್ಲಿದ್ದ 05 ಎಕರೆ ಜಮೀನದಲ್ಲಿ 03 ಎಕರೆ ಜಮೀನು ಮಾರಾಟ ಮಾಡಿದ್ದಾಗ ಅದು ನಾನೇ ಎಕರೆಗೆ 4 ಲಕ್ಷ ರೂಪಾಯಿಯಂತೆ 12 ಲಕ್ಷ ರೂಪಾಯಿಗೆ ತಗೆದುಕೊಂಡಿದ್ದು ಸದರ ಹಣ ಹಂತ ಹಂತವಾಗಿ ನಮ್ಮ ತಂಗಿ ಪುಷ್ಪಾ ಕಣ್ಣಿ, ಶಿವಾನಂದ ಸ್ವಾಮಿ, ವಿಜಯಕುಮಾರನ ಮಗ ವಿಶಾಲ, ಬಸವರಾಜ ಪಾಟೀಲರವರ ಮುಖಾಂತರ 12 ಲಕ್ಷ ರೂಪಾಯಿ ಮುಟ್ಟಿಸಿದ ನಂತರ ಸದರ ಹೊಲ ನೋಂದಣಿ ಮಾಡಿ ಕೊಡುವಂತೆ ಕೇಳಿಕೊಂಡಾಗ ಮಾಡಿಸಿ ಕೊಡುವದಾಗಿ ಹೇಳಿದ್ದು ಇದೆ. ನಮ್ಮ ತಂದೆಯವರು 2ನೇ ತಾಯಿ ವೆಂಕಟಮ್ಮಳಿಗೆ ಗುಲಬರ್ಗಾದಲ್ಲಿದ್ದ ಪ್ಲಾಟ್ ಹೆಸರಿನಿಂದ ಮಾಡಿದ್ದು ಅದನ್ನು ಅವಳು 15 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದರಿಂದ ಸದರಿ ಪ್ಲಾಟದಲ್ಲಿ ತನಗೆ ಅರ್ಧ ಪ್ಲಾಟ್ ಕೊಡು ಎಂದು ವಿಜಯಕುಮಾರ ಕೇಳಿದಾಗ ಆಕೆ ತನ್ನ ಉಪಯೋಗಕ್ಕಾಗಿ ಬಳಸಿಕೊಂಡಿದರಿಂದ ಆಕೆಯ ಮೇಲೆ ವೈಮನಸ್ಸು ಹೊಂದಿ 2013ರಲ್ಲಿ ವಿಜಯಕುಮಾರನು ತನ್ನ ಹೆಂಡತಿ ಶೋಭಾಳ ಹೆಸರಿನಲ್ಲಿದ್ದ ಹೊಲ ಸರ್ವೇ ನಂ:42/2 ರಲ್ಲಿ 03 ಎಕರೆ ಜಮೀನು ಕಬ್ಜಾದಾರನಿದ್ದು ಉಳಿಮೆ ಮಾಡುತ್ತಾ ಬಂದಿರುತ್ತೇನೆ. ನಿನ್ನೆ ದಿ:06/05/2016 ರಂದು ನಮ್ಮ ಪಾಲಕಾರ ಇಮಾಮಸಾಬ ಗದಲೇಗಾಂವ ಇತನು ತಿಳಿಸಿದೆನೆಂದರೆ 03 ಎಕರೆ ಹೊಲದಲ್ಲಿ ನಿಮ್ಮ ತಮ್ಮ ವಿಜಯಕುಮಾರ ಟ್ರಾಕ್ಟರ್ ಹಚ್ಚಿ ನೇಗಿಲು ಹೊಡೆಸುತ್ತಿದ್ದಾನೆ ಎಂದು ತಿಳಿಸಿದನು. ದಿನಾಂಕ:07/05/2016 ರಂದು ಸದರಿ ಜಮೀನದಲ್ಲಿ ವಿಜಕುಮಾರನು ಟ್ರ್ಯಾಕ್ಟರ್ ದಿಂದ ನೇಗಿಲು ಹೊಡೆಸುತ್ತಿದ್ದ ವಿಷಯ ತಿಳಿದು ನಾನು ನನ್ನ ಮಗ ರೋಹಾನ, ಪಂಚಾಯತಿ ನಮ್ಮೂರ ದತ್ತಪ್ಪ ಸೋನಕಾಂಬಳೆ, ಮರೆಪ್ಪಾ ಗೂಳ್ಳೂರೆ, ಗನ್ನಿಸಾಬ ಹೈದ್ರಾಬಾದ, ಧೂಳಪ್ಪಾ ಜುಂಜೆ, ಮೈಹಿಬೂಬ ಬಡದಾಳೆ, ಕಲ್ಯಾಣಿ ಗಾಯಕವಾಡರೊಂದಿಗೆ ಮದ್ಯಾಹ್ನ ಹೊಲಕ್ಕೆ ಹೋದಾಗ ಅಲ್ಲಿ ನನ್ನ ತಮ್ಮ ಅಪರಿಚಿತ 8-10 ಜನರೊಂದಿಗೆ ವಾಹನದಲ್ಲಿ ಬಂದು ಹುಣಚಿ ಮರದ ಕೆಳಗೆ ಕುಳಿತಿದ್ದರು. ಅಪರಿಚಿತ ವಾಹನವಿದ್ದು ನಂಬರ್ ಗೊತ್ತಿಲ್ಲ ನೇಗಿಲು ಉಳಿಮೆ ಸಲುವಾಗಿ ಬಂದಿದ್ದ ಟ್ರ್ಯಾಕ್ಟರ್ ನಂ:AP:25 Q:2114 ಇದ್ದು ಚಾಲಕನ ಪಡಿಚಯವಿಲ್ಲಾ. ನನ್ನ ತಮ್ಮನ ಕಡೆಯಿಂದ ನಮ್ಮ ಕಡೆಯಿಂದ ಸದರಿ ಆಸ್ತಿಯ ವಿಷಯದ ಬಗ್ಗೆ ಚರ್ಚಿಸುತ್ತಿದ್ದಾಗ 03 ಎಕರೆ ಜಮೀನಿನ ಹಣ ಕೊಟ್ಟಿಲ್ಲಾ ನೀನು ಎಂದಾಗ ನಾನು ಕೊಟ್ಟಿರುತ್ತೇನೆ ಎಂದಾಗ ನಿನ್ನ ಮಗ ರೋಹಾನ ನನಿಗೆ ಮುಟ್ಟಿ ಹೇಳು ಎಂದಾಗ ನಾನು ನನ್ನ ಮಗನಿಗೆ ಮುಟ್ಟಿ 12 ಲಕ್ಷ ರೂಪಾಯಿ ಕೊಟ್ಟಿರುತ್ತೇನೆ ಎಂದಾಗ ರಂಡೀ ಮಗನೇ ಎಲ್ಲಿ ಕೊಟ್ಟಿದ್ದಿ ನಿಮ್ಮಗೆ ಒಂದು ಗತಿ ಕಾಣಿಸಿ ಬಿಡುತ್ತೇನೆಂದು ಅವನು ಕೊಲೆ ಮಾಡುವ ಉದ್ದೇಶದಿಂದ ತನ್ನ ಪ್ಯಾಂಟಿನ ಜೇಬಿನಿಂದ ರಿವಾಲ್ವಾರ ತೆಗೆದು ನನ್ನ ಬಲ ತೊಡೆಗೆ ಶೂಟ್ ಮಾಡಿದ್ದಾಗ  ಸದರಿ ಗುಂಡು ತಗಲಿ ತೊಡೆಯಿಂದ ದಾಟಿ ರಕ್ತ ಸೋರಿದ್ದು ನನ್ನ ಮಗ ರೋಹಾನನಿಗೆ ಬಲ ಎದೆಯ ಮೂಲೆಯ ಹತ್ತಿರ ಶೂಟ್ ಮಾಡಿದನು ನಾವು ನೆಲಕ್ಕೆ ಬಿದ್ದೇವು ಆಗ ಸಮಯ 03:30 ಗಂಟೆಯಾಗಿತ್ತು. ನಾವು ಬಿದ್ದಿರುವದು ನೋಡಿ ಅವನು ತನ್ನ ಮಗ ಹಾಗೂ ಬೆಂಬಲಿಗರೊಂದಿಗೆ ಅಲ್ಲಿಂದ ಓಡಿ ಹೋದರು ನಾವು ನೆಲಕ್ಕೆ ಬಿದ್ದಿರುವದು ನೋಡಿ ಪಂಚಾಯತಿ ಮಾಡಲು ಬಂದಿದ್ದ ದತ್ತಪ್ಪಾ ಸೋನಕಾಂಬಳೆ, ಇತರರು ಬಂದು ಜೀಪ್ ಊರಿಂದ ತರಿಸಿ ನಮ್ಮಗೆ ಹಾಕಿಕೊಂಡು ಊರಿಗೆ ಬಂದಾಗ ಗೊತ್ತಾಗಿದೆನೆಂದರೆ ನಮ್ಮ ತಾಯಿ ವೆಂಕಟಮ್ಮಳಿಗೆ ಸದರಿ ವಿಜಯಕುಮಾರನು ಮದ್ಯಾಹ್ನ 03:45 ಗಂಟೆಗೆ ನೀನು ಪ್ಲಾಟ್ ಮಾರಿದ್ದು ಅರ್ಧ ನನಗೆ ಕೊಡಬೇಕಿತ್ತು ಕೊಟ್ಟಿಲ್ಲಾ ರಂಡೀ ಎಂದು ಬೈದು ಆಕೆಯ ಮೇಲೆ ಅದೇ ರಿವಾಲ್ವರ್ ದಿಂದ ಗುಂಡು ಹಾರಿಸಿದರಿಂದ ಆಕೆಯ ಬಲಗಾಲಿನ ಮೊಳಕಾಲಿನ ಕೆಳಗೆ ಒಂದು ಗುಂಡು, ಇನ್ನೊಂದು ಗುಂಡು ಎಡತೊಡೆಯ ಮೇಲೆ ಹಾರಿಸಿ ರಕ್ತಗಾಯಗೊಳಿಸಿ ಕೊಲೆಗೆ ಯತ್ನಿಸಿದ್ದು ಗೊತ್ತಾಗಿ ಆಕೆಗೂ ದವಾಖಾನೆಗೆ ಒಂದು ವಾಹನದಲ್ಲಿ ಉಪಚಾರಕ್ಕಾಗಿ ಸರ್ಕಾರಿ ದವಾಖಾನೆ ಆಳಂದಕ್ಕೆ 03 ಜನರಿಗೆ ತಂದು ಸೇರಿಕೆ ಮಾಡಿದ್ದಾಗ ವೈದ್ಯರು ನೋಡಿ ಹೆಚ್ಚಿನ ಉಪಚಾರಕ್ಕಾಗಿ 108 ಅಂಬುಲೆನ್ಸ್ ದಲ್ಲಿ ಗುಲಬರ್ಗಾಕ್ಕೆ ಕಳುಹಿಸಿದ್ದು ನಾನು ಉಪಚಾರ ಪಡೆಯುತ್ತಿದ್ದೆನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.