POLICE BHAVAN KALABURAGI

POLICE BHAVAN KALABURAGI

27 October 2014

Gulbarga District Reported Crimes

ಅಪಘಾತ ಪ್ರಕರಣಗಳು :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಅಬ್ದುಲ ರವುಫ ತಂದೆ ಅಬ್ದುಲ ಅಜೀಜ  ಸಾ: ವೆಟರನೆರಿ ಕ್ವಾಟರ್ಸ ಜಗತ   ಗುಲಬರ್ಗಾ ರವರು  ದಿನಾಂಕ:26/10/2014 ರಂದು ಸಾಯಂಕಾಲ ಸೂರ್ಯಕಾಂತ ಇತನು ಚಲಾಯಿಸುತ್ತಿರುವ ಮೋ/ಸೈಕಲ್ ನಂ: ಕೆಎ 32 ಇಎ 9973 ನೆದ್ದರ ಮೇಲೆ ಕುಳಿತು ವೆಂಕಟಗಿರಿ ಹೊಟೇಲ ಕಡೆಯಿಂದ ಕೋರ್ಟ ಕ್ರಾಸ್ ,ಲಾಹೋಟಿ ಪೆಟ್ರೋಲ್ ಪಂಪ್ ಕ್ರಾಸ್ ಮುಖಾಂತರ ಏಶಿಯಾನ ಮಹಲ್ ರೋಡ ಕಡೆಗೆ ಬರುತ್ತಿರುವಾಗ ಸೂರ್ಯಕಾಂತ ಈತನು ತನ್ನ ಮೋ/ಸೈಕಲ್ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಒಮ್ಮೇಲೆ ಕಟ್ಟ ಹೊಡೆದು ಬ್ರೇಕ್ ಹಾಕಿ ಸ್ಕೀಡ್ ಮಾಡಿ ಮೋ/ಸೈಕಲ್ ಕೆಳಗೆ ಕೆಡವಿ ನನಗೆ ಭಾರಿಗಾಯಗೊಳಿಸಿ ತಾನು ಗಾಯ ಹೊಂದಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ಅಫಜಲಪೂರ ಠಾಣೆ : ದಿನಾಂಕ 26-10-2014 ರಂದು 2;00 ಪಿ.ಎಂ ಸುಮಾರಿಗೆ ಶ್ರೀ ರಮೇಶ ತಂದೆ ಶಂಕ್ರೇಪ್ಪಾ ಮಂಗಳೂರೆ ಸಾ : ಮಂಗಳೂರ ತಾ : ಅಫಜಲಪೂರ ಮತ್ತು ಮಾವ ಮಲ್ಲಿಕಾರ್ಜುನ ತಂದೆ ರಾಮಣ್ಣ ಮಂಗಳೂರ ರವರು ಕೂಡಿಕೊಂಡು ನಮ್ಮ ಮೋಟರ ಸೈಕಲ ಮೆಲೆ ಹಿಂಚಗೇರಿ ಗ್ರಾಮಕ್ಕೆ ಹೋಗಿದ್ದು ನಮ್ಮ ಕೆಲಸ ಮುಗಿಸಿಕೊಂಡು ಮರಳಿ ನಮ್ಮೂರಿಗೆ ಹೊಗುತ್ತಿದ್ದಾಗ ಅಫಜಲಪೂರ ಪಟ್ಟಣದಲ್ಲಿ ತಹಸೀಲ್ದಾರ ಕಾರ್ಯಲಯದ ಮುಂದೆ ರಸ್ತೆಯ ಮೇಲೆ ಹೋಗುತ್ತಿದ್ದಾಗ, ಎದುರುಗಡೆಯಿಂದ ಒಂದು ಕಮಾಂಡರ ಜೀಪ ಬರುತ್ತಿದ್ದು, ಅದರ ಚಾಲಕನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸುತ್ತಾ ಬಂದು ನಮ್ಮ  ಮೋಟರ ಸೈಕಲಗೆ ಒಮ್ಮೇಲೆ ಡಿಕ್ಕಿ ಪಡಿಸಿದನು, ಆಗ ನಾನು ಮತ್ತು ನಮ್ಮ ಮಾವ ಇಬ್ಬರು ರಸ್ತೆಯ ಮೇಲೆ ಬಿದ್ದಿದ್ದು, ನನಗೆ ಎಡಗೈ ಮೊಳಕೈ ಹತ್ತಿರ ಭಾರಿ ರಕ್ತಗಾಯವಾಗಿದ್ದು, ಮುಖಕ್ಕೆ ಮತ್ತು ಮೈಕೈಗೆ ತರಚಿದ ಗಾಯಗಳು ಆಗಿರುತ್ತವೆ. ನಮ್ಮ ಮಾವನಿಗೆ ತುಟಿಯ ಮೇಲೆ ರಕ್ತಗಾಯವಾಗಿದ್ದು, ಮೈಕೈಗೆ ಸಾದಾ ಗಾಯಗಳು ಆಗಿರುತ್ತವೆ. ನಂತರ ಸದರಿ ಜೀಪಿನ ಚಾಲಕ ಕೆಳಗೆ ಬಂದು ನಮಗೆ ವಿಚಾರಿಸಿದನು, ನಂತರ ನಾನು ಅವನ ಹೆಸರು ಕೇಳಲಾಗಿ ಶರಣು ತಂದೆ ಸಾತಪ್ಪ ಹಳಿಮನಿ ಸಾ|| ಬಮ್ಮನಳ್ಳಿ ತಾ|| ಸಿಂದಗಿ ಅಂತಾ ಹೇಳಿದನು, ನಂತರ ಅವನ ಜೀಪಿನ ನಂ ನೋಡಲಾಗಿ ಎಮ್.ಹೆಚ್-14/ಜಿ-4133 ಅಂತಾ ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.