POLICE BHAVAN KALABURAGI

POLICE BHAVAN KALABURAGI

29 April 2013

GULBARGA DISTRICT REPORTED CRIMES


ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ:
ಸೇಡಂ ಪೊಲೀಸ್ ಠಾಣೆ: ಶ್ರೀ. ಎಮ್. ರಮೇಶ ಫ್ಲೈಯಿಂಗ್ ಸ್ಕ್ವಾಡ್ ಕೋಡ್ಲಾ ಹೋಬಳಿ ಸೇಡಂ-41 ವಿಧಾನಸಭಾ ಮತ ಕ್ಷೇತ್ರದ ಅಧಿಕಾರಿಯವರು ನಾನು ನಮ್ಮ ತಂಡದವರೊಂದಿಗೆ ದಿನಾಂಕ:28-04-2013 ರಂದು ಸಾಯಾಂಕಾಲ 7-30 ಗಂಟೆಗೆ ಕೊಡ್ಲಾ ಹೋಬಳಿಯ ಗೌಡನಳ್ಳಿ ಗ್ರಾಮದ ಕಡೆಗೆ ಹೋರಟಾಗ ಗ್ರಾಮದ ಮುಖ್ಯ ರಸ್ತೆಯ ಎರಡು ವಿದ್ಯುತ್ ಕಂಬಗಳ ಮೇಲೆ ಕೆ.ಜಿ.ಪಿ. ಪಕ್ಷದ ಅಭ್ಯಾರ್ಥಿಯಾಗಿ ಶ್ರೀ. ವೈಜನಾಥ ಪಾಟೀಲ್ ರವರು ಸ್ಪರ್ಧಿಸಿರುವ  ಪಕ್ಷದ ಸ್ಟಿಕರಗಳನ್ನು ಅಂಟಿಸಿರುವದು ಕಂಡು ಬಂದಿರುತ್ತದೆ. ಕಾರಣ ಈ ಘಟನೆಯು ಚುನಾವಣೆ ನೀತಿ ಸಂಹಿತೆಯ ಉಲ್ಲಂಘನೆಯಾಗಿರುತ್ತದೆ ಅಂತಾ ವರದಿ ಸಲ್ಲಿಸಿದ ಮೇರೆಗೆ ಠಾಣೆ ಗುನ್ನೆ ನಂ-105/2013 ಕಲಂ-[3] The Karnataka Open Places (Prevention of Disfigurement ) Act 1981  ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ:
ಸೇಡಂ ಪೊಲೀಸ್ ಠಾಣೆ:ದಿನಾಂಕ:28-04-2013 ರಂದು ರಾತ್ರಿ 8-00 ಗಂಟೆಗೆ ಕೊಡ್ಲಾ ಗ್ರಾಮದಲ್ಲಿ ಹೊರಟಾಗ ಗ್ರಾಮದ ರಸ್ತೆಯಲ್ಲಿ ಬಿ.ಎಸ್.ಆರ್ ಪಕ್ಷದ ಅಭ್ಯರ್ಥಿಯಾಗಿರುವ  ಶ್ರೀ. ಕನ್ನಯ್ಯ ಮದನಾ ದೇಶಮುಖ ರವರು ಬಿ.ಎಸ.ಅರ್. ಪಕ್ಷದ ಚಿಹ್ನೆಯಿರುವ ಸ್ಟಿಕರಗಳನ್ನು ಅಂಟಿಸಿರುವದನ್ನು ಕಂಡು ಬಂದಿರುತ್ತದೆ. ಆದ್ದರಿಂದ ಬಿ.ಎಸ್.ಆರ್. ಪಕ್ಷದ ಅಭ್ಯರ್ಥಿಯು ಚುನಾವಣೆ ನೀತಿ ಸಂಹಿತೆಯ ಉಲ್ಲಂಘನೆ ಮಾಡಿರುತ್ತಾರೆ ಅಂತಾ ಶ್ರೀ. ಎಮ್. ರಮೇಶ ಫ್ಲೈಯಿಂಗ್ ಸ್ಕ್ವಾಡ್ ಕೋಡ್ಲಾ ಹೋಬಳಿ ಸೇಡಂ-41 ವಿಧಾನಸಭಾ ಮತ ಕ್ಷೇತ್ರದ ಅಧಿಕಾರಿಗಳು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ-106/2013 ಕಲಂ- [3] The Karnataka Open Places (Prevention of Disfigurement ) Act 1981  ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ:
ಸೇಡಂ ಪೊಲೀಸ್ ಠಾಣೆ: ದಿನಾಂಕ:28-04-2013 ರಂದು ರಾತ್ರಿ 8-15 ಗಂಟೆಗೆ ಪ್ಲಾಯಿಂಗ್ ಸ್ಕ್ವಾಡ ಅಧಿಕಾರಿಗಳು ತಮ್ಮ ತಂಡದೊಂದಿಗೆ ಕರ್ತವ್ಯದ ಮೇಲೆ ಗಸ್ತು ತಿರುಗುತ್ತಿದ್ದಾಗ ಕೊಡ್ಲಾ ಗ್ರಾಮದ ಹುಲಗೋಳನ ಮುಖ್ಯರಸ್ತೆಯಲ್ಲಿಯ ಒಂದು ಅಂಗಡಿಯ ಮೇಲೆ ಕೆ.ಜಿ.ಪಿ. ಪಕ್ಷದ ಚಿಹ್ನೆ ಇರುವ ಸ್ಟಿಕರಗಳನ್ನು ಅಂಟಿಸಿದ್ದು ಗಮನಿಸಿರುತ್ತಾರೆ. ಕೆ.ಜಿ.ಪಿ ಪಕ್ಷದ ವತಿಯಿಂದ ಶ್ರೀ. ವೈಜನಾಥ ಪಾಟೀಲ್ ರವರು ಸ್ಪರ್ದಿಸಿರುವದರಿಂದ ಸದರಿಯವರು ಚುನಾವಣೆ ನೀತಿ ಸಂಹಿತೆಯ ಉಲ್ಲಂಘನೆ ಮಾಡಿರುತ್ತಾರೆ. ಅಂತಾ ಶ್ರೀ. ಎಮ್. ರಮೇಶ ಫ್ಲೈಯಿಂಗ್ ಸ್ಕ್ವಾಡ್ ಕೋಡ್ಲಾ ಹೋಬಳಿ ಸೇಡಂ-41 ವಿಧಾನಸಭಾ ಮತ ಕ್ಷೇತ್ರದ ಅಧಿಕಾರಿಗಳು ವರದಿ ಸಲ್ಲಿಸಿದ್ದರ ಮೇಲಿಂದ ಠಾಣೆ ಗುನ್ನೆ ನಂ-107/2013 ಕಲಂ-[3] The Karnataka Open Places (Prevention of Disfigurement ) Act 1981  ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ. 

GULBARGA DISTRICT REPORTED CRIME


ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ್ ಠಾಣೆ:ಶ್ರೀ, ಆನಂದ ತಂದೆ ಗಂಗಪ್ಪಾ ಯಳಸಂಗಿ ಸಾ;ಗುಡುರ ತಾ;ಆಫಜಲಪೂರ  ಜಿ;ಗುಲಬರ್ಗಾರವರು ನನ್ನ ತಮ್ಮನಾದ ಅಶೋಕ ತಂದೆ ಗಂಗಪ್ಪಾ ಯಳಸಂಗಿ ಇತನು  ಔರಂಗಾಬಾದನಲ್ಲಿ ಖಾಸಗಿ  ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಆಗಾಗ ಊರಿಗೆ ಬಂದು ಹೋಗುವದು ಮಾಡುತ್ತಿದ್ದ. ದಿನಾಂಕ:27-04-2013 ರಂದು ನನ್ನ ತಮ್ಮ ಅಶೋಕ ಇತನು  ಔರಂಗಬಾದದಿಂದ ಗುಲಬರ್ಗಾಕ್ಕೆ ಬಂದು ತನ್ನ ಗೆಳೆಯನ ರೂಮಿನಲ್ಲಿ ಉಳಿದುಕೊಂಡಿದ್ದನು.ದಿನಾಂಕ:28-04-2013 ರಂದು ಸಾಯಂಕಾಲ ಗುಡುರ ಗ್ರಾಮಕ್ಕೆ ಹೋಗುತ್ತೇನೆ ಅಂತಾ ಮಾತನಾಡಿದನು. ರಾತ್ರಿ  ನಾನು ರೂಮಿನಲ್ಲಿರುವಾಗ  ನನ್ನ ಗೆಳೆಯನಾದ ಶಾಂತಪ್ಪಾ ಸಾವಳಗಿ ಇತನು ನಿಮ್ಮ ತಮ್ಮನಾದ ಅಶೋಕ ಇತನು ತನ್ನ ಗೆಳೆಯನಾದ ಭೀಮಾಶಂಕರ ರಾಂಪೂರ ಇವರ ಮೋಟಾರ ಸೈಕಲ ನಂಬರ ಕೆಎ-32 ಆರ್-9416 ನೇದ್ದರ ಮೇಲೆ ಗುಲಬರ್ಗಾದಿಂದ ಗುಡುರ ಗ್ರಾಮಕ್ಕೆ  ಹೋಗುತ್ತಿರುವಾಗ ಕೇರಿ ಬೋಸಗಾ ಕ್ರಾಸ್ ನಂತರಕೆಎ-32 ಎ-5462 ನೇದ್ದರ ಲಾರಿ ಚಾಲಕನು ತನ್ನ ಲಾರಿಯನ್ನು ಯಾವದೇ ಮುನ್ಸೂಚನೆ ಲೈಟ ಹಾಕದೆ ಲೋಡ ಲಾರಿ ರೋಡಿಗೆ ನಿಲ್ಲಿಸಿದ್ದು ಗಮನಿದ ಇವರು ಲಾರಿಯ ಹಿಂದುಗಡೆ ಡಿಕ್ಕಿ ಹೊಡೆದಿರುತ್ತಾರೆ. ಮೋಟಾರ ಸೈಕಲ್ ಚಲಾಯಿಸುತ್ತಿದ್ದ ಅಶೋಕ ತಂದೆ ಗಂಗಪ್ಪಾ ಯಳಸಂಗಿ ಉ||ಇಂಜನಿಯರ  ಸಾ; ಗುಡುರ ತಾ;ಅಫಜಲಪೂರ ಜಿ;ಗುಲಬರ್ಗಾ ಇತನಿಗೆ ತಲೆಗೆ ಭಾರಿರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದು, ಭೀಮಾಶಂಕರ ತಂದೆ  ಹಣಮಂತರಾಯ  ಸುರಪೂರ ಡಿಪ್ಲೋಮಾ ವಿದ್ಯಾರ್ಥಿ ಸಾ; ರಾಂಪೂರ ಹಳ್ಳಿ ಇತನಿಗೂ ಭಾರಿಗಾಯವಾಗಿದ್ದು, ಉಪಚಾರ ಕುರಿತು 108 ಅಂಬುಲೇನ್ಸ ವಾಹನದಲ್ಲಿ ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗುವಾಗ ಮಾರ್ಗ ಮಧ್ಯದಲ್ಲಿ ಮೃತ ಪಟ್ಟಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:219/2013  ಕಲಂ. 279 304 (ಎ),283, ಐಪಿಸಿ ಸಂಗಡ  187 ಐಎಂವಿ ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.