POLICE BHAVAN KALABURAGI

POLICE BHAVAN KALABURAGI

09 December 2015

kalaburagi District Reported Crimes

ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ಜೇವರ್ಗಿ ಠಾಣೆ : ದಿನಾಂಕ 08.12.2015 ರಂದು ಜೇವರಗಿ ಪಟ್ಟಣದ ರಿಲಾಯನ್ಸ ಪೆಟ್ರೋಲ್ ಪಂಪ್ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಆರೋಪಿತನು ಒಂದು ರುಪಾಯಿಗೆ 80 ರೂಪಾಯಿ ಕೊಡುತ್ತೆವೆ ಅಂತ ಹೋಗಿ ಬರುವ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಅಂಕಿ ಬರೆದುಕೊಳ್ಳುತ್ತಿದ್ದ ಬಗ್ಗೆ ಬಾತ್ಮಿ ಮೆರೇಗೆ ಶ್ರೀ. ವಿಧ್ಯಾಸಾಗರ ಎ.ಎಸ್.ಐ ಜೇವರಗಿ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ ದನ್ನು ಖಚಿತ ಪಡಿಸಿಕೊಂಡು ಅವನ ಮೇಲೆ ಸಿಬ್ಬಂದಿ ಜನರ ಸಹಾಯದಿಂದ ಪಂಚರ ಸಮಕ್ಷಮ ದಾಳಿ ಮಾಡಿ ಇಬ್ಬರನ್ನು ವಶಕ್ಕೆ ತೆಗೆದುಕೊಂಡು ಅವರ ಹೆಸರು ವಿಚಾರಿಸಲು 1) ಬಾಬುಮಿಯಾ ತಂದೆ ಬಾಷುಮೀಯಾ ನೆಲೋಗಿ ಸಾ : ಕೋಳಕೂರ 2) ಸಾಹೇಬಗೌಡ ಸಾ : ಫಿರೋಜಾಬಾದ್  ಅಂತಾ ತಿಳಿಸಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ  520/- ರೂ ಗಳು ನಗದು ಹಣ ಮತ್ತು 1 ಬಾಲ್‌ ಪೆನ್ ಮತ್ತು ಒಂದು ಮಟಕಾ ಚೀಟಿ ಗಳನ್ನು ಜಪ್ತಿ ಮಾಡಿಕೊಂಡು ಸದರಿಯವರೊಂದಿಗೆ  ಜೇವರ್ಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :
ಮುಧೋಳ ಠಾಣೆ : ಶ್ರೀಮತಿ ಜೋತಿ ಗಂಡ ಸಂತೋಷ ಚವ್ಹಾಣ ಸಾ: ಬಂದೆಂಪಲ್ಲಿ ವೆಂಕಟಾಪೂರ ತಾಂಡಾ ಇವರ ತವರು ಮನೆ ಬಂದೆಂಪಲ್ಲಿ ಗೋಪ್ಯಾನಾಯಕ ತಾಂಡಾ ಇದ್ದು, ಈಗ 2 ವರ್ಷಗಳ ಹಿಂದೆ ದಿನಾಂಕ: 08-05-2013 ರಂದು ನಮ್ಮ ತಂದೆ ವಿಠಲ್, ತಾಯಿ ಶಾಂತಿಬಾಯಿ ಮತ್ತು ಚಿಕ್ಕಪ್ಪನಾದ ಹರಿಶ್ಚಂದ್ರ ಹಾಗು ಇತರರು ಕೂಡಿ ನನಗೆ ಬಮದೆಂಪಲ್ಲಿ ವೆಂಕಟಾಪೂರ ತಾಂಡಾ ಸಂತೋಷ ತಂದೆ ಗೋಪಾಲ ಚವ್ಹಾಣ ಇವರೊಂದಿಗೆ ಮದುವೆ ಮಾಡಿಕೊಟ್ಟಿದ್ದು ಮದುವೆ ಕಾಲಕ್ಕೆ ವರೋಉಪಚಾರ ಅಂತಾ 3 ತೊಲೆ ಬಂಗಾರ ಹಾಗು 50,000/-ರೂ(ಐವತ್ತು ಸಾವಿರ) ಕೊಟ್ಟು ನನ್ನ ಗಂಡನ ಮನೆಯ ಮುಂದೆ ಮದುವೆ ಮಾಡಿರುತ್ತಾರೆ. ಮದುವೆಯಾದ ಮೇಲೆ 5-6 ತಿಂಗಳವರೆಗೆ ನನ್ನ ಗಂಡನ ಮನೆಯವರು ಸರಿಯಾಗಿ ನೋಡಿಕೊಂಡರು, ನಂತರ ನನ್ನ ಗಂಡ ಸಂತೋಷ ಇತನು ಮದ್ಯ ಕುಡಿದು ಬಂದು ನನಗೆ ದಿನಾಲು ಹೊಡೆ ಬಡೆ ಮಾಡಿ ತೊಂದರೆ ಕೊಡುತ್ತಿದ್ದನು. ಅತ್ತೆಯಾದ ಜಮಲಿಬಾಯಿ ಗಂಡ ಗೋಪಾಲ ಹಾಗು ಮಾವನಾದ ಗೋಪಾಲ ತಂದೆ ಹಿರ್ಯಾನಾಯಕ ಮೈದುನನಾದ ಚನ್ಯಾ @ ಚನ್ನಪ್ಪ ತಂದೆ ಗೋಪಾಲ ಇವರು 3 ಜನ ನನಗೆ ರಂಡಿ ಬೊಸಡಿ ನೀನು ಮನೆಯಲ್ಲಿ ಯಾಕೆ ಇದ್ದಿ ನಿನ್ನ ಗಂಡನಿಗೆ ಕರೆದುಕೊಂಡು ಹೈದ್ರಾಬಾಕ್ಕೆ ಹೊಗಿ ಹಣ ಗಳಿಸಿಕೊಂಡು ಬಾ ನಮಗೆ ಸಾಲ ಆಗಿದೆ ಅಂತಾ ದಿನಾಲು ಮಾನಸಿಕ ಕಿರುಕುಳ ಕೊಡುತ್ತಿದ್ದರಿಂದ ನಾನು ನನ್ನ  ಗಂಡ ಹೈದ್ರಾಬಾದಕ್ಕೆ ಕೂಲಿ ಕೆಲಸಕ್ಕೆ ಹೊಗಿದ್ದು, ಈಗ 2 ತಿಂಗಳ ಹಿಂದೆ, ಹೈದ್ರಾಬಾದನಿಂದ ಇಬ್ಬರು ನನ್ನ ಗಂಡನ ಮನೆಗೆ ಬಂದಿದ್ದು, ಗಂಡನ ಮನೆಯಲ್ಲಿ, ಹೊಲದಲ್ಲಿ ಕೆಲಸ ಮಾಡಿಕೊಂಡಿದ್ದೇವು. ಈಗ 4-5 ದಿವಸಗಳಿಂದ ನನ್ನ ಗಂಡ ಸಂತೋಷ ಅತ್ತೆ ಜಮಲಿಬಾಯಿ ಮಾವ ಗೋಪಾಲ ಮೈದುನನಾದ ಚಿನ್ಯಾ @ ಚಿನ್ನಪ್ಪ ಇವರು ನನಗೆ ರಂಡಿ ನೀನು ಮನೆಯಲ್ಲಿ ಇರಬೇಡಾ ಹೈದ್ರಾಬಾದಕ್ಕೆ ಹೊಗಿ ಹಣ ಗಳಿಸಿಕೊಂಡು ಬಾ ಇಲ್ಲದಿದ್ದರೆ ನಿನಗೆ ಊಟಕ್ಕೆ ಹಾಕುವದಿಲ್ಲಾ ಅಂತಾ ಹೇಳಿ, ಹೊಟ್ಟೆಗೆ ಸರಿಯಾಗಿ ಅನ್ನ ನೀರು ಕೊಡದೆ ಉಪವಾಸ ಹಾಕಿದ್ದು, ನಾನು ನನ್ನ ಗಂಡನಿಗೆ ಹೈದ್ರಾಬಾದಕ್ಕೆ ಹೊಗೋಣ ಅಂತಾ ಕರೆದರೆ ನಾನು ಬರುವದಿಲ್ಲಾ ನೀನು ಒಬ್ಬಳೆ ಹೋಗು ಅಂತಾ ಜಗಳಾ ಮಾಡುತ್ತಿದ್ದು, ಇದರಿಂದ ನಮ್ಮ ಅತ್ತೆ ಜಮಲಿಬಾಯಿ, ನೀನು ಮನೆಯಲ್ಲಿದ್ದರೆ, ನಾನು ಮನೆಯಲ್ಲಿರುವದಿಲ್ಲಾ. ಅಂತಾ ಹೇಳಿ ಮನೆ ಬಿಟ್ಟು ಹೋಗಿರುತ್ತಾಳೆ. ನಿನ್ನೆ ದಿನಾಂಕ: 07.12.2015 ರಂದು ರಾತ್ರಿ 11:00 ಗಂಟೆಯ ಸುಮಾರಿಗೆ ನನ್ನ ಗಂಡನ ಮನೆಯಲ್ಲಿ ನನ್ನ ಗಂಡ ಸಂತೋಷ ಮಾವ ಗೋಪಾಲ ಹಾಗು ಮೈದುನ ಚಿನ್ಯಾ @ ಚಿನ್ನಪ್ಪ ಈ 3 ಜನರು ಕೂಡಿ, ರಂಡಿ ಬೊಸಡಿ ನಿನ್ನಿಂದಲೆ ನಮ್ಮ ತಾಯಿ ಮನೆ ಬಿಟ್ಟು ಹೋಗಿದ್ದಾಳೆ. ನೀನು ನಮ್ಮ ಮನೆಗೆ ಬಂದ ಮೇಲೆ ನಮ್ಮ ಮನೆಯಲ್ಲಿ ಜಗಳಾ ಚಾಲು ಆಗಿದೆ, ನಿನ್ನಿಂದಲೆ ನಮ್ಮ ಸಂಸಾರ ಹಾಳಾಗುತ್ತಿದೆ ನೀನು ಬದುಕಿರಬಾರದು, ನೀನಗೆ ಸಾಯಿಸುತ್ತೇವೆ ಅಂತಾ ಹೇಳಿ, ನನಗೆ ಕೊಲೆ ಮಾಡುವ ಉದ್ದೇಶದಿಂದ ನನ್ನ ಗಂಡ ಸಂತೋಷ ಇತನು ಮನೆಯಲ್ಲಿದ್ದ ಸಿಮೇ ಏಣ್ಣೆಯನ್ನು ತಂದು ನನ್ನ ಮೈಮೇಲೆ ಹಾಕಿ ಕಡ್ಡಿ ಪೆಟ್ಟಿಗೆಯಿಂದ ಕಡ್ಡಿ ಕೊರೆದು, ಬೆಂಕಿ ಹಚ್ಚಿರುತ್ತಾನೆ. ನಮ್ಮ ಮಾವ ಗೋಪಾಲ ಮೈದುನ ಚನ್ಯಾ @ ಚನ್ನಪ್ಪ ನಾನು ಮನೆಯಿಂದ ಹೊರಗೆ ಬರದಂತೆ ಬಾಗಿಲು ಮುಚ್ಚಿ ಕೊಂಡಿ ಹಾಕಿದ್ದು, ಆಗ ನಮ್ಮ ಮಾವನ ತಂದೆಯಾದ ಹಿರ್ಯಾ ನಾಯಕ ತಂದೆ ಜಮ್ಲಾ ನಾಯಕ ಇತನು ಬಾಗಿಲು ತೆಗೆದುಕೊಂಡು ನೀರು ಹಾಕಿ ನನ್ನ ಮೈಗೆ ಹತ್ತಿದ ಬೆಂಕಿ ಆರಿಸಿದ್ದು, ಇದರಿಂದ ನನಗೆ ಕುತ್ತಿಗೆ, ಎದೆ, ಬೆನ್ನಿಗೆ, ಹಾಗು ಬಲ ಮಗ್ಗಲಿಗೆ ಬಲಗೈ ರಟ್ಟೆಯಿಂದ ಹಸ್ತದವರೆಗೆ ಎರಡು ಕಾಲುಗಳ ಮೊಳಕಾಲ ಕೆಳಭಾಗದಲ್ಲಿ ಸುಟ್ಟು ಭಾರಿಗಾಯಗಾಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.