POLICE BHAVAN KALABURAGI

POLICE BHAVAN KALABURAGI

04 January 2017

Kalaburagi District Reported Crimes

ಹಲ್ಲೆ ಪ್ರಕರಣ :
ಫರತಾಬಾದ ಠಾಣೆ : ಶ್ರೀ ವಿಶ್ವನಾಥ ತಂದೆ ಪಾಂಡು ರಾಠೋಡ ಸಾ : ಖಣದಾಳ ತಾಂಡಾ ಇವರು ಕಳೆದ ಗ್ರಾ. ಪಂ. ಚುನಾವಣೆಯಲ್ಲಿ ನಮ್ಮ ಕುಟುಂಬದ ನಡುವೆ ಮತ್ತು ನಮ್ಮ ತಾಂಡಾದ ಪರ್ವತ ತಂದೆ ಮಹೇಶ ಚವ್ಹಾಣ  ಇವರ ಕುಟುಂಬದ ನಡುವೆ ವೈನಸ್ಸು ಬೆಳೆದಿದ್ದು ಅದೇ ವೈಮಸ್ಸಿನಿಂದ  ಪರ್ವತ ಚವ್ಹಾಣ ಇವರ ಕುಟುಂಬದವರು ನಮಗೆ ಬೇರೇಯವರ ಮುಂದೆ ಬೈಯ್ಯುವದು ಮತ್ತು ದ್ವೇಷ ಸಾದಿಸಬೆಕೆಂಬ ಉದ್ದೇಶದಿಂದ ಆಗಾಗ ನಮ್ಮೋಂದಿಗೆ ಬಾಯಿ ಮಾತಿನ ತಕರಾರು ಮಾಡುತ್ತಾ ಬಂದಿರುತ್ತಾರೆ. ನಿನ್ನೆ ದಿನಾಂಕ 02/01/2017 ರಂದು ಸಾಯಂಕಾಲ 6 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಅಣ್ಣನ ಮಗನಾದ ಪವನ ರಾಠೋಡ ಇಬ್ಬರೂ ನಮ್ಮ ಹೋಲದಿಂದ ನಮ್ಮ,ನಮ್ಮ ಎತ್ತೀನ ಬಂಡಿಗಳನ್ನು ಚಲಾಯಿಸಿಕೊಂಡು  ಮನೆಗೆ ಬರುತ್ತೀರುವಾಗ ಶ್ರೀಧರ ಕುಲಕರ್ಣಿಇವರ ಹೋಲದ ಹತ್ತೀರ ಹಣಾದಿಯಲ್ಲಿ ಸದರಿ ಪರ್ವತ ಚವ್ಹಾಣ ಇತನು ತನ್ನ ವಷದಲ್ಲಿರುವ ಟ್ರ್ಯಾಕ್ಟರ ಅನ್ನು ಅತೀವೇಗವಾಗಿ ಚಲಾಯಿಸಿಕೊಂಡು ಬಂದು ಒಮ್ಮೇಲೆ ಪವನ ಇತನ ಎತ್ತಿನ ಬಂಡಿಯ ಮೇಲೆ ತಂದಿದ್ದರಿಂದ ಪವನನ ಎತ್ತುಗಳು ಬೆರದಿ (ಅಂಜಿ) ಒಮ್ಮೇಲೆ  ಹಾರಿದ್ದರಿಂದ ಎತ್ತೀನ ಬಂಡಿ ಪಲ್ಟಿಯಾಗಿ ಪವನನ ಎಡಗಾಲು ಮುರಿದು ರಕ್ತಗಾಯವಾಗಿರುತ್ತದೆ. ಆಗ ನಾನು ಪರ್ವತನಿಗೆ  ಯಾಕೆ ನೀನು ಈ ರೀತಿ ಟ್ರ್ಯಾಕ್ಟರ ಒಮ್ಮೇಲೆ ಎತ್ತೀನ ಬಂಡಿಯ  ಮೇಲೆ ತಂದಿರುವಿ ಅಂತ ಕೇಳಿದ್ದಕ್ಕೆ ಅವನು ನನ್ನೊಂದಿಗೆ ತಕರಾರು ಮಾಡುತ್ತಾ ಫೋನ ಮಾಡಿ ತನ್ನ ಸಂಬಂದಿಕರಾದ  ಮೋಹನ ತಂದೆ ಮಹಾದೇವ ರಾಠೋಡ,ಮಹೇಶ ತಂದೆ ಹುನ್ನು ಚವ್ಹಾಣ, ಜಿತೇಂದ್ರ ತಂದೆ ವಿಜಯಕುಮಾರ ಚವ್ಹಾಣ, ಶಂಕರ ತಂದೆ ಹುನ್ನು ಚವ್ಹಾಣ, ವಿಜಯಕುಮಾರ ತಂದೆ ಹುನ್ನುನ ಚವ್ಹಾಣ, ಕೃಷ್ಣಾ ತಂದೆ ಶಂಕರ ಚವ್ಹಾಣ, ಸುಭಾಷ ತಂದೆ ಕಾಳು ರಾಠೋಡ ಇವರೆಲ್ಲರನ್ನು ಕರೆಯಿಸಿದವನೆ  ಇವರೆಲ್ಲರೂ ಬಂದವರೆ ಈ ರಂಡಿ ಮಕ್ಕಳದು ಬಹಳ ಸೋಕ್ಕು ಆಗಿದೆ ಇಂದು ಇವರಿಗೆ ಖಲಾಸ ಮಾಡಿಯೇ ಬಿಡೋಣ ಅಂತಾ ಜೀವದ ಬೆದರಿಕೆ ಹಾಕಿ ನಮ್ಮನ್ನು ಕೋಲೆ ಮಾಡಬೇಕೆಂಬ ಉದ್ದೇಶದಿಂದ  ಮೋಹನ ಮತ್ತು ಮಹೇಶ ಇವರಿಬ್ಬರೂ ನನಗೆ ಗಟ್ಟಿಯಾಗಿ ಹಿಡಿದುಕೊಂಡಿದ್ದು ಜಿತೇಂದ್ರ ಇತನು ನನಗೆ ಕೈಯಿಂದ ಹೋಟ್ಟೆಯ ಮೇಲೆ ಗುದ್ದಿ ಹಿಡಿಗಾತ್ರದ ಕಲ್ಲಿನಿಂದ ಬೆನ್ನಲ್ಲಿ ಹೋಡೆದು ಗುಪ್ತಗಾಯ ಮಾಡಿರುತ್ತಾನೆ ಆಗ ನಮ್ಮ ಎತ್ತೀನ ಬಂಡಿಯಲ್ಲಿರುವ ನನ್ನ ಹೆಂಡತಿ ಶರಣಬಾಯಿ ಇವಳು ಬಿಡಿಸಲು ಬಂದಾಗ ಇವಳಿಗೆ ಶಂಕರ ಇತನು ಕೈಯಿಂದ ಮತ್ತು ಕಾಲಿನಿಂದ ಎದೆಗೆ ಒದ್ದು ಗುಪ್ತ ಗಾಯ ,ಮಾಡಿರುತ್ತಾನೆ,ನನ್ನ ತಂಗಿ ಸವಿತಾ ಇವಳಿಗೆ ವಿಜಯಕುಮಾರ ಇತನು ಎಡಗೈ ರಟ್ಟೇಗೆ ಕೈಯಿಂದ ಗುದ್ದಿ ಗುಪ್ತಗಾಯ ಮಾಡಿ ಸೀರೆ ಹಿಡಿದು ಜಗ್ಗಾಡಿ ಮಾನಭಂಗ ಮಾಡಿರುತ್ತಾನೆ.ಕೃಷ್ಣಾ ಚವ್ಹಾಣ ಇತನು ಫಿಕಲಾಬಾಯಿ  ಇವಳಿಗೆ ಎಡಗಣ್ಣಿನ ಹತ್ತೀರ ಕೈಯಿಂದ ಗುದ್ದಿ ಗುಪ್ತಗಾಯ ಮಾಡಿರುತ್ತಾನೆ ,ಸುಬಾಷ ಇತನು ಸವೀತಾ ಗಂಡ ರಾಜು ಇವಳಿಗೆ ತಲೆಯ ಮೇಲಿನ ಕೂದಲು ಹಿಡಿದು ಜಗ್ಗಾಡಿ ಮಾನಭಂಗ ಮಾಡಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.     
ಕಳವು ಪ್ರಕರಣ :  
ಸ್ಟೇಷನ ಬಜಾರ ಠಾಣೆ :  ಶ್ರೀ ಬಿ.ರವೀಂದ್ರ ತಂದೆ ಲಕಪತಿ ಉ: ಎಸ್.ಬಿ.ಎಚ್ ಬ್ಯಾಂಕ ವ್ಯವಸ್ಥಾಪಕ ಸಾ: ಪ್ಲಾಟ ನಂ. 46 & 47 ಬೆಂದ್ರೆ ನಗರ ಬಿದ್ದಾಪೂರ ರಸ್ತೆ ಕಲಬುರಗಿ ರವರು ದಿನಾಂಕ 02/01/2017 ರಂದು 8-30 ಪಿ.ಎಂ ಸುಮಾರಿಗೆ ದೈನಂದಿನ ಬ್ಯಾಂಕ ವ್ಯವಹಾರ ಮುಗಿಸಿಕೊಂಡು ಬ್ಯಾಂಕ ಕೀಲಿ ಹಾಕಿಕೊಂಡು ಹೋಗಿದ್ದು ಬೆಳಿಗ್ಗೆ ದಿನಾಂಕ 03/01/2017 ರಂದು 10-10 ಎ.ಎಂ.ಕ್ಕೆ ಬ್ಯಾಂಕಿಗೆ ಬಂದು ನೋಡಲಾಗಿ ಕ್ಯಾಷ ರೂಮದ ಗೊಡೆ ಒಡೆದಿದ್ದನ್ನು ನೋಡಿ ಸಿ.ಸಿ.ಟಿ.ವಿ ಪರಿಶೀಲಿಸಿ ನೋಡಲಾಗಿ 03/01/2017 ರಂದು 1: 17 ಎ.ಎಂ.ದಿಂದ 1: 25 ಎ.ಎಂ.ದ ಅವಧಿಯಲ್ಲಿ ಯಾರೋ ಒಬ್ಬ ಕಳ್ಳ ಬ್ಯಾಂಕಿನ ಗೊಡೆ ಒಡೆದು ಒಳಗಡೆ ಬಂದು ಆಲಮಾರಿಗಳನ್ನು ತೆಗೆದು ಕಳ್ಳತನ ಮಾಡಲು ಪ್ರಯತ್ನಿಸಿದ್ದು ಕಂಡು ಬಂದಿರುತ್ತದೆ.  ಸದರಿ ಕಳ್ಳತನಕ್ಕೆ ಪ್ರಯತ್ನಿಸಿದವನನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಮಾನಭಂಗ  ಮಾಡಲು ಪ್ರಯತ್ನಿಸಿದ ಪ್ರಕರಣ :
ಮುಧೋಳ ಠಾಣೆ : ಶ್ರೀಮತಿ ಬುಗ್ಗಮ್ಮ ಗಂಡ ಚಂದ್ರಪ್ಪ ಸಂದಪೂರಂ ಸಾ : ಶಕಲಾಸಪಲ್ಲಿ ಗ್ರಾಮ. ಇವರಿಗೆ ದಿನಾಂಕ 02-01-2017 ರಂದು ಕಾಶಪ್ಪ ತಂದೆ ಮೊಗಲಪ್ಪ ಸಾ : ಇಟಕಾಲ ಗ್ರಾಮ ಇವನು ರಾತ್ರಿ ಸಮಯದಲ್ಲಿ ಫಿರ್ಯಾದಿಗೆ ಕೈ ಹಿಡಿದು ಎಳೆದಾಡಿ ಅತ್ಯಾಚಾರ ಮಾಡಲು ಪ್ರಯತ್ನಿಸಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.