ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ಅಫಜಲಪೂರ ಠಾಣೆ : ದಿನಾಂಕ 16-07-2018 ರಂದು ಮಲ್ಲಾಬಾದ ಗ್ರಾಮದ ಕನಕದಾಸ
ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಮಟಕಾ ಜೂಜಾಟ ಆಡುತ್ತಿದ್ದಾನೆ ಅಂತಾ ಮಾಹಿತಿ ಬಂದ
ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಲ್ಲಾಬಾದ ಗ್ರಾಮಕ್ಕೆ ಹೋಗಿ
ಕನಕದಾಸ ಸರ್ಕಲದಿಂದ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ಕನಕದಾಸ ಸರ್ಕಲ ಹತ್ತಿರ ರಸ್ತೆಯ
ಮೇಲೆ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಸಾರ್ವಜನಿಕರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕರೆದು, ಜನರಿಂದ ಹಣ ಪಡೆದು ಅವರಿಗೆ ಅಂಕಿ
ಸಂಖ್ಯೆ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದನು. ದಾಳಿ ಮಾಡಿ ಹಿಡಿದು ಸದರಿಯವನ
ಹೆಸರು ವಿಳಾಸ ವಿಚಾರಿಸಲಾಗಿ ಗಣಪತಿ ತಂದೆ ಬಸಣ್ಣ ಕಟ್ಟೋಳಿ ಸಾ|| ಮಲ್ಲಾಬಾದ ಗ್ರಾಮ ತಾ|| ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ
ಸಂಬಂಧ ಪಟ್ಟ 3410/- ರೂಪಾಯಿ ನಗದು ಹಣ ಹಾಗೂ ಅಂಕಿ
ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ವಶಪಡಿಸಿಕೊಂಡು ಸದರಿಯವನೊಂದಿಗೆ
ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಫರತಾಬಾದ ಠಾಣೆ : ದಿನಾಂಕ 16-07-2018 ರಂದು ಹೊಣ್ಣಕಿರಣಗಿ ಗ್ರಾಮದ ಶ್ರೀ ವೀರಭದ್ರೇಶ್ವರ ಗುಡಿಯ ಹತ್ತಿರ ಸಾರ್ವಜನಿಕ
ಸ್ಥಳದಲ್ಲಿ ಒಬ್ಬ ವ್ಯಕ್ತಿ ಮಟಕಾ ಜೂಜಾಟ ಆಡುತ್ತಿದ್ದಾನೆ ಅಂತಾ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ.
ಫರತಾಬಾದ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಹೊಣ್ಣಕಿರಣಗಿ
ಗ್ರಾಮದ ಶ್ರೀ ವೀರಭದ್ರೇಶ್ವರ ಗುಡಿಯ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು, ಹೊಣ್ಣಕಿರಣಗಿ ಗ್ರಾಮದ ಶ್ರೀ ವೀರಭದ್ರೇಶ್ವರ ಗುಡಿಯ ಹತ್ತಿರ ರಸ್ತೆಯ ಮೇಲೆ
ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಸಾರ್ವಜನಿಕರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕರೆದು, ಜನರಿಂದ ಹಣ ಪಡೆದು ಅವರಿಗೆ ಅಂಕಿ
ಸಂಖ್ಯೆ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದನು. ದಾಳಿ ಮಾಡಿ ಹಿಡಿದು ಸದರಿಯವನ
ಹೆಸರು ವಿಳಾಸ ವಿಚಾರಿಸಲಾಗಿ ಸುಭಾಷ ತಂದೆ ಸಿದ್ದಪ್ಪಾ ಕೊಣಿನ ಸಾಃ ಹೊನ್ನಕಿರಣಗಿ ಗ್ರಾಮ ತಾ.ಜಿಃ
ಕಲಬುರಗಿ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 2130/- ರೂಪಾಯಿ ನಗದು ಹಣ ಹಾಗೂ ಅಂಕಿ
ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ವಶಪಡಿಸಿಕೊಂಡು ಸದರಿಯವನೊಂದಿಗೆ ಫರತಾಬಾದ
ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ಅಫಜಲಪೂರ ಠಾಣೆ : ದಿನಾಂಕ 15-07-2018 ರಂದು ಅಫಜಲಪೂರ ಪೊಲೀಸ್ ಠಾಣಾ
ವ್ಯಾಪ್ತಿಯ ಚಿಂಚೋಳಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆ ಪಕ್ಕದ
ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಪಣಕ್ಕೆ ಹಣ ಹಚ್ಚಿ ಇಸ್ಪೆಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ
ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು
ಸಿಬ್ಬಂದಿ ಮತ್ತು ಪಂಚರೊಂದಿಗೆ ಚಿಂಚೋಳಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆ ಹತ್ತಿರ ಹೊಗಿ ಮರೆಯಾಗಿ ನಿಂತು ನೋಡಲು ಸಾರ್ವಜನಿಕ
ಖುಲ್ಲಾ ಸ್ಥಳದಲ್ಲಿ 04 ಜನರು ದುಂಡಾಗಿ ಕುಳಿತುಕೊಂಡು
ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿದಾಗ
ಜಾಜಾಡುತಿದ್ದ ಎಲ್ಲಾ 04 ಜನರನ್ನು ಹಿಡಿದು ಅವರ ಹೆಸರು ವಿಳಾಸ ವಿಚಾರಿಸಿ ಅಂಗ ಶೋಧನೆ ಮಾಡಲಾಗಿ 1) ಮಲ್ಲಿಕಾರ್ಜುನ ತಂದೆ ಬಸಣ್ಣ
ತಡಲಗಿ ಸಾ||ಚಿಂಚೋಳಿ 2) ಶಂಭೂಲಿಂಗ ತಂದೆ ತುಳಜಪ್ಪ ಜಗದಿ 3) ಚಿದಾನಂದ ತಂದೆ ಈರಣ್ಣ ಸುತಾರ
4) ಶ್ರೀಶೈಲ ತಂದೆ ಸಂಗಣ್ಣ ರೆಡ್ಡಿ
ಸಾ|| ಎಲ್ಲರು ಚಿಂಚೋಳಿ ಗ್ರಾಮ ಅಂತ
ತಿಳಿಸಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ 3600/- ರೂ ಮತ್ತು 52 ಇಸ್ಪೆಟ ಎಲೆಗಳನ್ನು ವಶಕ್ಕೆ
ತೆಗೆದುಕೊಂಡು ಸದರಿಯವರೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 15-07-2018 ರಂದು ಅಫಜಲಪೂರ ಪೊಲೀಸ್ ಠಾಣಾ
ವ್ಯಾಪ್ತಿಯ ಆನೂರ ಗ್ರಾಮದ ಚಂದ್ರಗಿರಿ ದೇವಿ ದೇವಸ್ಥಾನದ
ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಪಣಕ್ಕೆ ಹಣ ಹಚ್ಚಿ ಇಸ್ಪೆಟ ಎಲೆಗಳ ಸಹಾಯದಿಂದ ಅಂದರ
ಬಾಹರ ಎಂಬ ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಶ್ರೀ ಮಾರುತಿ ಎಎಸ್ಐ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ಅಲ್ಲೆ ಸ್ವಲ್ಪ ದೂರ ನಮ್ಮ ಜೀಪನ್ನು ನಿಲ್ಲಿಸಿ
ನಡೆದುಕೊಂಡು ಹೋಗಿ, ಮರೆಯಾಗಿ ನಿಂತು ನೊಡಲು
ಆನೂರ ಗ್ರಾಮದ ಚಂದ್ರಗಿರಿ ದೇವಿ ದೇವಸ್ಥಾನದ ಹತ್ತಿರ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ 08 ಜನರು ದುಂಡಾಗಿ ಕುಳಿತುಕೊಂಡು
ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ
ಜಾಜಾಡುತಿದ್ದ ಎಲ್ಲಾ 08 ಜನರನ್ನು ಹಿಡಿದು ಅವರ ಹೆಸರು ವಿಳಾಸ ವಿಚಾರಿಸಿ ಅಂಗ ಶೋಧನೆ ಮಾಡಲಾಗಿ 1) ಮನೋಹರ ತಂದೆ ಕಲ್ಲಪ್ಪ ಹಿಪ್ಪರಗಿ
2) ಪೀರಪ್ಪ ತಂದೆ ಸಿದ್ದಪ್ಪ ಭಾಸಗಿ
ಸಾ|| ಇಬ್ಬರು ಆನೂರ ಗ್ರಾಮ 3) ಸಿದ್ದಪ್ಪ ತಂದೆ ಭೋಜರಾವ ಪಾಟೀಲ
ಸಾ||ಬಿಲ್ವಾಡ(ಕೆ) 4) ರಾಣಪ್ಪ ತಂದೆ ಶಿವಲಿಂಗಪ್ಪ ಮಾಂಗ
ಸಾ||ಆನೂರ 5) ಶಾಮರಾವ ತಂದೆ ಶರಣಪ್ಪ ಬಳೂಂಡಗಿ
6) ಗುಂಡುರಾವ ತಂದೆ ಶಂಕರ ಮಾಳಗೆ 7) ಸಿದ್ರಾಮಪ್ಪ ತಂದೆ ರೇವಣಸಿದ್ದಪ್ಪ
ಪ್ಯಾಟಿ ಸಾ|| ಆನೂರ 8) ಸೈಫನಸಾಬ ತಂದೆ ಮೈಹಿಬೂಬಸಾಬ
ಮಲಘಾಣ ಸಾ||ಬಿಲ್ವಾಡ(ಕೆ) ಅಂತ ತಿಳಿಸಿದ್ದು ಸದರಿಯವರಿಂದ
ಜೂಜಾಟಕ್ಕೆ ಬಳಸಿದ ನಗದು ಹಣ 11, 52 ಇಸ್ಪೆಟ ಎಲೆಗಳನ್ನು ಮತ್ತು 11360/- ರೂ ನಗದು ಹಣ ವಶಕ್ಕೆ
ತೆಗೆದುಕೊಂಡು ಸದರಿಯವರೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ :
ಶ್ರೀ ಗುರುಬಸಯ್ಯಾ ತಂದೆ ರುದ್ರಯ್ಯಾ ಮಠಪತಿ ಸಾ: ವಾಗಧರಿ ತಾ;ಆಳಂದ ಜಿ;ಕಲಬುರಗಿ
ರವರ ಅಣ್ಣನ ಮಗನಾದ ಅಣವಿರಯ್ಯಾ ತಂದೆ ರೇವಣಯ್ಯಾ ಮಠಪತಿ ಇತನು ಸಂಗೀತಗಾರನಾಗಿದ್ದು ಅಲ್ಲದೆ ಕೂಲಿ
(ಕ.ನಿ.ಸಹಾಯಕ) ಕೆಲಸ ಮಾಡಿಕೊಂಡಿದ್ದು ಅಕ್ಕ ಪಕ್ಕದ ಮನೆಯಲ್ಲಿ ಇರುತ್ತವೆ. ದಿನಾಂಕ.11-7-2018 ರಂದು ಮುಂಜಾನೆ. ನನ್ನ ಅಣ್ಣನಮಗ ಅಣವೀರಯ್ಯಾ ಮಠಪತಿ ಇತನು ತನ್ನ ಹೆಂಡತಿ ನಿರ್ಮಲಾ
ಮಠಪತಿ ಇವಳಿಗೆ ಆಸ್ಪತ್ರೆಗೆ ತೋರಿಸುವ ಕುರಿತು ಮತ್ತು ತನ್ನ ಮಗಳು ಪೂಜಾ ಎಂಬುವವಳನ್ನು
ಆಸ್ಪತ್ರೆಗೆ ತೋರಿಸುವ ಕುರಿತು ತನ್ನ ಮೋಟಾರ ಸೈಕಲ್ ಮೇಲೆ ಕಲಬುರಗಿಗೆ ಬಂದಿದ್ದರು , ರಾತ್ರಿ.8-00 ಗಂಟೆ ಸುಮಾರಿಗೆ ನಿರ್ಮಲಾ ಮಠಪತಿ ಹಾಗೂ
ಪೂಜಾ ಇವರಿಬ್ಬರು ಆಸ್ಪತ್ರೆಗೆ ತೋರಿಸಿಕೊಂಡು
ಕಲಬುರಗಿಯಿಂದ ವಾಗ್ದರಿಗೆ ಕ್ರೋಸರದಲ್ಲಿ ಬಂದರು ಆಗ ಇವರಿಗೆ ವಿಚಾರಿಸಲು ಅಣವೀರಯ್ಯಾ ಇತನು ಹಿಂದುಗಡೆ
ತಮ್ಮ ಮೋಟಾರ ಸೈಕಲ್ ಮೇಲೆ ಬರುತ್ತೇನೆ ಎಂದು ತಿಳಿಸಿರುತ್ತಾರೆ ಎಂದು ನನಗೆ ಹೇಳಿದರು.
ರಾತ್ರಿ.11-00 ಗಂಟೆಯ ಸುಮಾರಿಗೆ ನನ್ನ ಮಗ ಸಂತೋಷ ಮಠಪತಿ ಇತನು ಪೋನ
ಮಾಡಿ ತಿಳಿಸಿದ್ದೇನೆಂದರೆ ನನ್ನ ಅಣ್ಣನ ಮಗ ಅಣವೀರಯ್ಯಾ ಮಠಪತಿ ಇತನು ಹುಮನಾಬಾದ ರಿಂಗರೋಡ
ಹತ್ತಿರ ರಾತ್ರಿ. 10-30 ಗಂಟೆಗೆ ತನ್ನ ಮೋಟಾರ ಸೈಕಲ್ ಮೇಲೆ ಹೋಗುವಾಗ
ಮೋಟಾರ ಸೈಕಲ್ ಸ್ಕೀಡಾಗಿ ಬಿದ್ದು ತಲೆಗೆ ಕಾಲಿಗೆ ಭಾರಿ ಪೆಟ್ಟಾಗಿರುವದರಿಂದ ಉಪಚಾರ ಕುರಿತು
ಕಲಬುರಗಿಯ ಗಂಗಾ ಆಸ್ಪತ್ರೆಯತಲ್ಲಿ ಸೇರಿಕೆ ಮಾಡಿರುತ್ತೇವೆ ಬೇಗನೆ ಬರುವಂತಗೆ ತಿಳಿಸಿದನು ಆಗ
ಗಾಬರಿಗೊಂಡು ನಾನು ಮತ್ತು ಅಣವೀರಯ್ಯಾನ ಹೆಂಡತಿ
ನಿರ್ಮಲಾ ಮಠಪತಿ , ಅವರ ಮಗ ಚನ್ನಯ್ಯಾ ಹಾಗೂ ನಮ್ಮ
ಗ್ರಾಮದವರಾದ ಹಣಮಂತರಾಯ ಗುತ್ತಗೊಂಡ ಮತ್ತು ಬಸವರಾಜ ಪಾಟೀಲ್ ಎಲ್ಲರೂ ಕೂಡಿಕೊಂಡು ಒಂದು
ಜೀಪನಲ್ಲಿ ಕಲಬುರಗಿಯ ಗಂಗಾ ಆಸ್ಪತ್ರೆಗೆ ಬಂದು
ನೋಡಲಾಗಿ ಅಣವೀರಯ್ಯಾ ಮಠಪತಿ ಇತನಿಗೆ ನೋಡಲಾಗಿ ತಲೆಗೆ ಭಾರಿ ಪೆಟ್ಟಾಗಿ ,ಮೂಗಿನಿಂದ ಬಾಯಿಯಿಂದ ಹಾಗೂ ಕಿವಿಯಿಂದ ರಕ್ತಸ್ರಾವ ಆಗಿದ್ದು ಮತ್ತು ಬಲಗಾಲು ಛಪ್ಪೆಗೆ
ಮೊಳಕಾಲಿಗೆ ತರುದ ಗಾಯಗಳಾಗಿದ್ದು ಹಾಗೂ ಎಡಗೈ ಅಂಗೈಗೆ ತರಚಿದ ಗಾಯಗಳಾಗಿರುತ್ತವೆ. ಆತನು ಮಾತನಾಡುವ ಸ್ಥಿತಿಯಲ್ಲಿರಲಿಲ್ಲಾ . ಆಗ ಅಲ್ಲಿ ಇದ್ದು
ನನ್ನ ಮಗ ಸಂತೋಷ ಮಠಪತಿ ಇತನಿಗೆ ವಿಚಾರಿಸಲು ತಾನು ಕಮಲನಗರ ಕಾಲೂನಿಯಲ್ಲಿರುವಾಗ ಒಬ್ಬರು
ಅಣವೀರಯ್ಯಾ ಮಠಪತಿ ಇತನ ಮೋಬಾಯಿಲದಿಂದ ನನಗೆ ಫೋನ
ಮಾಡಿ ತಿಳಸಿದ್ದೆನೆಂದರೆ ಹುಮನಾಬಾದ ರಿಂಗರೋಡ ಹತ್ತಿರ
ಅಣವೀರಯ್ಯಾ ಮಠಪತಿ ಇತನು ತನ್ನ ಮೋಟಾರ ಸೈಕಲ್ ಸ್ಕೀಡಾಗಿ ಬಿದ್ದರುತ್ತಾನೆ ಬೇಗನೆ
ಬರುವಂತೆ ತಿಳಿಸಿದ ಮೇರೆಗೆ ಕೂಡಲೆ ನಾನು ಸ್ಥಳಕ್ಕೆ ಹೋಗಿ ನೋಡಲು ನಮ್ಮ ಅಣ್ಣ ಅಣವೀರಯ್ಯಾ ಮಠಪತಿ ಇತನು ಸೈಡಿಗೆ ಕೂಡಿಸಿದ್ದು ಬೇಹೋಸ
ಸ್ಥಿತಿಯಲ್ಲಿ ಇದ್ದನು ಆತನು ನಡೆಯಿಸುತಿದ್ದ ಮೋಟಾರಸೈಕಲ್ ಸೈಡಿಗೆ ಬಿದ್ದು ನೋಡಲಾಗಿ ಕೆ.ಎ.56 ಹೆಚ. 5447 ನೆದ್ದು ಇತ್ತು ನಂತರ ನಾನು ಇನ್ನೊಬ್ಬರು
ಕೂಡಿಕೊಂಡು ಒಂದು ಅಂಬುಲೆನ್ಸನಲ್ಲಿ ಅಣವೀರಯ್ಯಾ ಮಠಪತಿ ಹಾಕಿಕೊಂಡು ಉಪಚಾರ ಕುರಿತು ಗಂಗಾ
ಆಸ್ಪತ್ರೆಯಲ್ಲಿ ಸೇರಿಕೆ ಮಾಡಿರುತ್ತೇವೆ ಎಂದು ತಿಳಿಸಿರುತ್ತಾನೆ. ನಂತರ ಅಣವೀರಯ್ಯಾನಿಗೆ
ಹೆಚ್ಚಿನ ಉಪಚಾರ ಕುರಿತು ದಿನಾಂಕ. 12-7-2018 ರಂದು
ಸೇರಿಕೆ ಮಾಡಿರುತ್ತೇವೆ. ಉಪಚಾರದಲ್ಲಿ ಗುಣ ಮುಖನಾಗದೆ ಇಂದು ದಿನಾಂಕ. 14-7-2018 ರಂದು ಬೆಳೆಗ್ಗೆ ಮೃತ ಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ರಮೇಶ ತಂದೆ ಈರಣ್ಣ ಹುಣಸಗಿ ಸಾ: ಕೂಡಿಗನೂರ ರವರು ದಿನಾಂಕ 14-07-2018 ರಂದು ಸಾಯಂಕಾಲ ತಮ್ಮ ಹೊಲದಲ್ಲಿ
ಕಬ್ಬಿಗೆ ನೀರು ಬಿಡುತ್ತಿದ್ದಾಗ ಸಂತೋಷ ತಂದೆ ಮಲ್ಲಪ್ಪ ಬಿರಾದಾರ, ಮಾಹಾದೇವಪ್ಪ ತಂದೆ ಸಿದ್ದಣ್ಣ
ಬಿರಾದಾರ, ಅಂದಣ್ಣ ತಂದೆ ಗಡ್ಡೇಪ್ಪ ಬಿರಾದಾರ
ಇವರೆಲ್ಲರೂ ಕೂಡಿ ಡಸ್ಟರ ಗಾಡಿಯಲ್ಲಿ ಬಂದು ಇಳಿದು ಗ್ರಾಮದ ಒಂದು ರೋಡ ಸಿ.ಸಿ ನಡೆದಿದ್ದು ಆ ರೋಡಿನ ಮೇಲೆ ಕರಿ ಮಣ್ಣು ಹಾಕಿದ್ದು ನಡೆಯಲಿಕ್ಕೆ ಓಡಾಡುವದಕ್ಕೆ ಬರುವುದಿಲ್ಲ ವೆಂದು ನಾನು ಜೈ ಉಮೇಶ ಎಂಬುವವನಿಗೆ
ನಾನು ಫೋನ್ ಮಾಡಿ ಕೇಳಿದಕ್ಕೆ ಈ ಮೇಲಿನ ಮೂರು ಜನರು ಕೂಡಿ ಆ ರೋಡಿಗೆ ನಿನಗೆ ಏನು ಸಂಬಂಧ ಬಾಹಾಳ ಸೊಕ್ಕು
ಬಂದಿದೆ ಭೋಸಡಿ ಮಗನೇ ಅಂತಾ ಹೊಟ್ಟೆಗೆ ಕಾಲಿಗೆ, ಕಾಲಿಗೆ, ಬೆನ್ನಿಗೆ, ರಾಡಿನಿಂದ ಹೊಡೆದಿರುತ್ತಾರೆ ಮುಂದೆ ನಮ್ಮ ತಂಟೆಗೆ ಬಂದರೆ ನಿನಗೆ ಜೀವ ಹೊಡೆಯುತ್ತೇನೆ
ಎಂದು ಅಂಜಿಕೆ ಹಾಕಿರುತ್ತಾರೆ ಆ ಮೇಲೆ ಫೂನ್ ಮಾಡಿ ನನ್ನ ತಂದೆಗೆ ಫೋನ್ ಮಾಡಿ ತಿಳಿಸಿರುತ್ತೇನೆ. ಈರಣ್ಣ ತಂದೆ ನಾಗಪ್ಪ ಹುಣಸಗಿ, ಕಾಕನವರಾದ ಶರಣಬಸಪ್ಪ ತಂದೆ ನಾಗಪ್ಪ
ಹುಣಸಗಿ ಇವರಿಗೆ ತಿಳಿಸಿರುತ್ತೇನೆ. ಅಂತಾ ಸಲ್ಲಿಸಿದ
ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.