POLICE BHAVAN KALABURAGI

POLICE BHAVAN KALABURAGI

09 September 2015

Kalaburagi District Reported Crimes.

ಗ್ರಾಮೀಣ ಠಾಣೆ : ದಿನಾಂಕ: 08/09/2015 ರಂದು ಮಧ್ಯಾಹ್ನ 02:00 ಗಂಟೆಯ ಸುಮಾರಿಗೆ ಮೃತ ಸೈಯ್ಯದ ತಾಜ ಈತನು ಹಿರೊಹೊಂಡಾ ಸ್ಪ್ಲೇಂಡರ್ ಮೋ.ಸೈ ನಂಃ ಕೆಎ 32 ಡಬ್ಲ್ಯೂ 7996 ನೇದ್ದು ಚಲಾಯಿಸುತ್ತಿದ್ದು, ಅವನ ಹಿಂದೆ ಸೈಯ್ಯದ ಇಸ್ಮಾಯಿಲ್ ಈತನು ಕುಳಿತು ಕಲಬುರಿಗೆ ಬರುವಾಗ ಹುಮ್ನಾಬಾದ ಕಲಬುರಗಿ ರೋಡಿನ ಅವರಾದ ಸಮೀಪ ಇರುವ ಆಲಗೂಡ ಕ್ರಾಸ್ ಹತ್ತಿರ ಹಿಂದಿನಿಂದ ಒಂದು ಕ್ವಾಲೀಸ್ ವಾಹನ ಸಂಖ್ಯೇ ಎಪಿ 12 ಪಿ 1415 ನೇದ್ದರ ಚಾಲಕನು ತನ್ನ ವಾಹನವನ್ನು ಅತಿವೇಗ & ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ಜೋರಾಗಿ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದರಿಂದ ಸೈಯ್ಯದ ತಾಜ & ಸೈಯ್ಯದ ಇಸ್ಮಾಯಿಲ್ ಇವರಿಗೆ ಭಾರಿ ಗಾಯಗಳಾಗಿ ಮೃತ ಪಟ್ಟಿರುತ್ತಾರೆ. ಅಪಘಾತವಾದ ನಂತರ ಚಾಲಕ ಓಡಿ ಹೋಗಿರುತ್ತಾನೆ ಅಂತಾ ವಗೈರೆ ಫಿರ್ಯಾದಿ ಸಾರಾಂಶದ ಮೇಲಿಂದ ಮೇಲಿನಂತೆ ಪ್ರಕರಣ ದಾಖಲಾಗಿರುತ್ತದೆ.