POLICE BHAVAN KALABURAGI

POLICE BHAVAN KALABURAGI

28 November 2014

Kalaburagi District Reported Crimes

ಅಪಹರಣ ಪ್ರಕರಣ :
ಮಳಖೇಡ ಠಾಣೆ : ಶ್ರೀ ಅಶೋಕ ತಂದೆ ಪಾಂಡುರಂಗ ತಳವಾರ ಸಾ: ಕಾಚೂರ ತಾ: ಸೇಡಂ ಇವರು ದಿನಾಂಕ: 09-11-2014 ರಂದು ರವಿವಾರ ಇದ್ದುದ್ದರಿಂದ ನನ್ನ ಮಗನಾದ ಜಗನ್ನಾಥ ಇತನು ಮುಂಜಾನೆ ಮನೆಯಿಂದ ಊಟ ಮಾಡಿಕೊಂಡು ಊರಲ್ಲಿ ಆಟವಾಡಲು ಹೋದನು. ಮುಂಜಾನೆ 10:00 ಗಂಟೆಯವರೆಗೆ ಆಟವಾಡುತ್ತಿದ್ದು ನಂತರ, ಸಾಯಂಕಾಲ 15:00 ಗಂಟೆಯವರೆಗೆ ಊರಲ್ಲಿ ಕ್ರಿಕೇಟ ಆಟವಾಡುತ್ತಿದ್ದನು. ಆಗ ನಾನು ಕೆಲಸದ ನಿಮಿತ್ಯಾ ಹೊಲಕ್ಕೆ ಹೊದೇನು. ನಂತರ ರಾತ್ರಿ ನನ್ನ ಮಗ ಜಗನ್ನಾಥ ಇತನು ಮನೆಗೆ ಬರಲಿಲ್ಲಾ. ನಾನು ಮತ್ತು ನನ್ನ ಹೆಂಡತಿ ಊರಲ್ಲಿ ವಿಚಾರಿಸಲು ನನ್ನ ಮಗನ ಬಗ್ಗೆ ಪತ್ತೆಯಾಗಲಿಲ್ಲಾ. ನನ್ನ ಅಪ್ರಾಪ್ತ ವಯಸ್ಸಿನ ಮಗನಿಗೆ ನಾನು ಇಲ್ಲಿಯವರೆಗೆ ಎಲ್ಲಾ ಬೀಗರು ನೆಂಟ್ಟರಲ್ಲಿ ವಿಚಾರಣೆ ಮಾಡಲು ನನ್ನ ಮಗನ ಬಗ್ಗೆ ಯಾವುದೆ ಮಾಹಿತಿ ಸಿಗಲಿಲ್ಲಾ. ನನ್ನ ಅಪ್ರಾಪ್ತ ವಯಸ್ಸಿನ ಮಗನಾದ ಜಗನ್ನಾಥ ಇತನು ಕಾಣೆಯಾಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಅಶೋಕ ತಂದೆ ರೇವಪ್ಪ ಶೆಟ್ಟಿ ಸಾ : ಅಫಜಲಪೂರ ರವರು ದಿನಾಂಕ 08-11-2014 ರಂದು ರಾತ್ರಿ 11:30 ಗಂಟೆ ಸುಮಾರಿಗೆ ನಾನು ಅಂಗಡಿಯಿಂದ ನನ್ನ ಮೋ/ಸೈ ನಂಬರ ಕೆಎ-32 ಕೆ-4567 ಅಂತಾ ಇದ್ದು, ಚೆಸ್ಸಿ ನಂಬರ:- 8B536160H  ಇಂಜೆನ ನಂಬರ:- 8B536160H  MOdel No- 1998, ಅಂತಾ ಇದ್ದು, ಕಪ್ಪು ಬಣ್ಣದ್ದು ಇರುತ್ತದೆ. ಅದರ ಅಂದಾಜು 30,000/- ರೂ ಕಿಮ್ಮತ್ತಿನದರ ಮೇಲೆ ನಮ್ಮ ಮನೆಗೆ ಬಂದು ನಮ್ಮ ಅಣ್ಣನ ಮನೆಯ ಮುಂದೆ ಮೋ/ಸೈ ನಿಲ್ಲಿಸಿ ಮನೆಗೆ ಹೊಗಿರುತ್ತೆನೆ, ಸದರಿ ಮೋ/ಸೈ ನಿಲ್ಲಿಸಿದ್ದು ನಮ್ಮ ಮನೆಯ ಮುಂದಿನಿಂದ ಹಾಗೂ ಕಿಡಕಿಯಿಂದ ನೊಡಿದರೆ ಕಾಣುತ್ತದೆ, ಅಂದಾಜು ರಾತ್ರಿ 12:30 ಗಂಟೆ ಸುಮಾರಿಗೆ ನಾನು ಮೂತ್ರ ಮಾಡಲು ಎದ್ದಾಗ ನನ್ನ ಮೋ/ಸೈ ನಾನು ನಿಲ್ಲಿಸಿದ ಸ್ಥಳದಲ್ಲೆ ಇದ್ದು ನಂತರ ಬೆಳಗಿನ ಜಾವ ಸುಮಾರು 05:00 ಗಂಟೆ ಎದ್ದು ಮನೆಯಿಂದ ಹೊರಗೆ ಬಂದು ನೋಡಲಾಗಿ ನನ್ನ ಮೋ/ಸೈ ಇರಲಿಲ್ಲ, ಸದರಿ ನನ್ನ ಮೋ/ಸೈ ನ್ನು ಯಾರೊ ಕಳ್ಳರು ಕಳ್ಳತನ ಮಾಡಿಕೊಂಡು ಹೊಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.