POLICE BHAVAN KALABURAGI

POLICE BHAVAN KALABURAGI

14 March 2015

Kalaburagi District Reported Crimes

ಅಪಘಾತ ಪ್ರಕರಣಗಳು :
ಜೇವರ್ಗಿ ಠಾಣೆ : ದಿನಾಂಕ: 13.03.2015 ರಂದು ಮುಂಜಾನೆ ಸಮಯದಲ್ಲಿ ಶ್ರೀ ಮಲ್ಲಣ್ಣ ತಂದೆ ಸಂಗಣ್ಣ ನಾಟೀಕಾರ್ ಸಾ|| ಮದರಿ ಮತ್ತು ನಮ್ಮೂರ  ಗೌರಮ್ಮ ಗಂಡ ರಾಮಗೊಂಡ ಅಲಗುರ, ಮಲ್ಲಪ್ಪ ತಂದೆ ರಾಮಗೊಂಡ ಅಲಗುರ, ರವಿ ತಂದೆ ರಾಮಗೊಂಡ ಅಲಗುರ, ಸುಮಿತ್ರ ಗಂಡ ಮಲ್ಲಪ್ಪ ಅಲಗುರ, ಶಿವಮ್ಮ ಗಂಡ ಜಾನಪ್ಪ ಅಲಗುರ, ಮಲ್ಲಮ್ಮ ಗಂಡ ಬಸಂತ್ರಾಯ ಅಲಗುರ, ಸಿದ್ದು ತಂದೆ ಜಾನಪ್ಪ ಅಲಗುರ, ಮಲ್ಲೇಶಿ ತಂದೆ ಈರಣ್ಣ ನಾಟಿಕಾರ್, ಜಾನಪ್ಪ ತಂದೆ ಸಂಗಣ್ಣ ಸುಬೇದಾರ್, ಖಂಡಪ್ಪ ತಂದೆ ಮಲ್ಲಪ್ಪ ವರ್ಚನಳ್ಳಿ, ಶರಣಪ್ಪ ತಂದೆ ಗುಂಡಪ್ಪ ಹಾಲಗಡ್ಲಾ, ಜಾನಪ್ಪ ತಂದೆ ಮಹಾದೇವಪ್ಪ ಹಾಲಗಡ್ಲಾ ಶರಣಪ್ಪ ತಂದೆ ಬಸವರಾಜ ಸುಬೇದಾರ್‌ ಹಾಗು ಯನಗುಂಟಿ ಗ್ರಾಮದ ಪ್ರಭು ತಂದೆ ಮಲ್ಲಪ್ಪ ಎಲ್ಲರು ಕೂಡಿಕೊಂಡು ನಮ್ಮೂರ ಶಿವಕುಮಾರ ತಂದೆ ಶಂಕರ ವಿಶ್ವಕರ್ಮ ಈತನು ನಡೆಸುವ ಕ್ರೂಸರ್ ಜೀಪ್‌ ನಂ ಕೆ.ಎ32ಎಮ್6243 ನೇದ್ದರಲ್ಲಿ ಕುಳಿತು ನಮ್ಮೂರಿನಿಂದ ಶಹಾಪುರ ತಾಲ್ಲೂಕಿನ ಸಗರ ಗ್ರಾಮಕ್ಕೆ ಮದುವೆ ನಿಶ್ಚಿತ ಕಾರ್ಯಕ್ರಮಕ್ಕೆ ಹೋಗಿದ್ದೆವು, ಕಾರ್ಯಕ್ರಮ ಮುಗಿಸಿಕೊಂಡು ಸಾಯಂಕಾಲ ಮರಳಿ ನಮ್ಮೂರಿಗೆ ಅದೆ ಕ್ರೂಜರ್ ವಾಹನದಲ್ಲಿ ಎಲ್ಲರು ಕುಳಿತುಕೊಂಡು ಬರುತ್ತಿದ್ದೆವು. ಸಾಯಂಕಾಲ ಮುದಬಾಳ ಕೆ ಕ್ರಾಸ್ ಹತ್ತಿರ ಜೇವರ್ಗಿ ಶಹಾಪುರ ರೋಡಿನಲ್ಲಿ ಬರುತ್ತಿದ್ದಾಗ, ನಮ್ಮ ಮುಂದೆ ಒಂದು ಲಾರಿ ನಂ ಎಮ್.ಹೆಚ್38ಡಿ0514 ಹೋಗುತ್ತಿದ್ದು ಅದರ ಚಾಲಕನು ಯಾವುದೆ ಸೂಚನೆ ಇಲ್ಲದೆ ಒಮ್ಮೆಲೆ ಬ್ರೇಕ್‌ ಹಾಕಿದ್ದರಿಂದ ನಮ್ಮ ಜೀಪ್‌ ಚಾಲಕ ಶಿವಕುಮಾರ ಈತನು ತನ್ನ ಜೀಪ್‌ ಅನ್ನು ಅತಿ ವೇಗ ಮತ್ತು ಅಲಕ್ಷ್ಯತನಿಂದ ನಡೆಸಿಕೊಂಡು ಲಾರಿ ಹಿಂಬದಿಗೆ ಜೋರಾಗಿ ಡಿಕ್ಕಿ ಪಡಿಸಿದ್ದರಿಂದ ಒಳಗೆ ಕುಳಿತ ನಮ್ಮೆಲ್ಲರಿಗೆ ತಲೆಗೆ ಮತ್ತು ಕೈಕಾಲುಗಳಿಗೆ ಭಾರಿ ಮತ್ತು ಸಾಧಾ ಗಾಯಗಳಾಗಿದ್ದು ಅಪಘಾತದ ನಂತರ ಲಾರಿ ಚಾಲಕ ಮತ್ತು ನಮ್ಮ ಜೀಪ ಚಾಲಕ ತಮ್ಮ ವಾಹನಗಳನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೋಗಿದ್ದು. ನಂತರ ಗಾಯಪೆಟ್ಟು ಆದವರಿಗೆ ಉಪಚಾರ ಕುರಿತು ಸರ್ಕಾರಿ ಆಸ್ಪತ್ರೆಗೆ ಜೇವರ್ಗಿಗೆ ತಂದು ಅಲ್ಲಿಂದ ಹೆಚ್ಚಿನ ಉಪಚಾರ ಕುರಿತು ಕಲಬುರಗಿಗೆ ಹೋಗುತ್ತಿದ್ದಾಗ ಗಾಯಾಳು ಮಲ್ಲಣ್ಣ ತಂದೆ ರಾಮಚಂದ್ರ ತಳವಾರ ಸಾ|| ಮದರಿ ಈತನು ಕಲಬುರಗಿ ಸಮೀಪ ಮೃತಪಟ್ಟಿದ್ದು ಉಳಿದ ಗಾಯಾಳುಗಳಿಗೆ ಕಲಬುರಗಿಯ ಕಾಮರೆಡ್ಡಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಲಾಗಿದೆ. ಅಂತಾ ಸಲ್ಲಿಸಲಾಗಿದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾಹಾಬಾದ ನಗರ ಠಾಣೆ : ದಿನಾಂಕ: 13.03.2015 ರಂದು ಬೆಳಿಗ್ಗೆ 7.00 ಎ.ಎಮ್. ಕ್ಕೆ ಜೆಪಿ ಕಂಪನಿಗೆ ಕೆಲಸ ಮಾಡಲು ಹೋಗುವಾಗ ಶಹಾಬಾಧದ ರೇಲ್ವೆ  ಓವರ ಬ್ರಿಡ್ಜ ದಾಟಿ ಜೆಪಿ ಕಂಪನಿಯ ಗೇಟ ಮಧ್ಯದ  ರೋಡಿನ  ಎಡಬಾಗದಲ್ಲಿ ಒಬ್ಬ ಮನುಷ್ಯನು ಬಿದ್ದಿದ್ದು ನಾನು ಮತ್ತು  ಶಿವಕುಮಾರ  ತೇಲಗರ್ ಇಬ್ಬರು  ಕೂಡಿ  ಹೋಗಿ ನೋಡಲಾಗಿ ಒಬ್ಬ ಮನುಷ್ಯನು ಅಪರಿಚಿತ ವ್ಯಕ್ತಿಯಿದ್ದು ಅಂದಾಜು 40 ರಿಂದ 50 ವರ್ಷದವನಿದ್ದು ಸದೃಢ ಮೈಕಟ್ಟು, ಗೋಧಿ ಬಣ್ಣ, ದುಂಡು ಮುಖಬೋಳು ಹಣೆ ಹೊಂದಿದ್ದು ಸದರಿಯವನಿಗೆ ಇಂದು  ಇಂದು ಬೆಳಗಿನ ಜಾವದಲ್ಲಿ ಯಾವುದೋ ಒಂದು ವಾಹನ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು  ನಿಷ್ಕಾಳಜಿತನದಿಂದ  ಚಲಾಯಿಸಿಕೊಂಡು ಬಂದು ಸದರಿ ಅಪರಿಚಿತ ವ್ಯಕ್ತಿಗೆ  ಡಿಕ್ಕಿ ಪಡಿಸಿ ಹೋದಂತೆ ಕಂಡು ಬರುತ್ತದೆ. ಯಾವುದೊ ಒಂದು ವಾಹನ ಅಪಘಾತ ಪಡಿಸಿದ್ದರಿಂದ ಆತನಿಗೆ ತಲೆಗೆ ಬಾರಿ ರಕ್ತಗಾಯವಾಗಿದ್ದು ಕಿವಿಯಿಂದ , ಮೋಗಿನಿಂದ, ಹಾಗೂ ಬಾಯಿಯಿಂದ  ರಕ್ತಬಂದಿದ್ದು  ಮುಖದ ಎಡ ಬಾಗಕ್ಕೆ ಬಾರಿ ಒಳಪೆಟ್ಟಾಗಿ ಬಲ ಗಣ್ಣಿನ ಗುಡ್ಡೆ ಹೊರ ಬಂದಂತೆ ಕಂಡು  ಬರುತ್ತದೆ. ಹಾಗೂ ಎಡ ಭುಜದ ಮೇಲಿಂದ  ಯಾವುದೊ ಒಂದು  ವಾಹನದ ಟೈರಿನ ಮಾರ್ಕ ಇದ್ದಂತೆ ಕಂಡುಬರುತ್ತದೆ. ಸದರಿಯ ವ್ಯಕ್ತಿಯ ಹೆಸರು ವಿಳಾಸ ಗೊತ್ತಾಗಿರುವದಿಲ್ಲಾ. ಮೃತ ಅಪರಿಚಿತ ವ್ಯಕ್ತಿ ಆಗಿದ್ದು ಇತನಿಗೆ  ಯಾವುದೋ ಒಂದು  ವಹನದ ಚಾಲಕನು ತನ್ನ ವಾಹನವನ್ನು  ಡಿಕ್ಕಿ ಪಡಿಸಿ ವಾಹನ ಸಮೇತ ಓಡಿ ಹೋಗಿರುತ್ತಾನೆ ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಲಿಗೆ ಪ್ರಕರಣಗಳು :
ಚೌಕ ಠಾಣೆ : ಶ್ರೀಮತಿ ರೇಷ್ಮಾ ಗಂಡ ರಾಜೇಂದ್ರ ಟಳೆ ಸಾಃ ಮಹಾದೇವ ನಗರ ಕಲಬುರಗಿ ದಿನಾಂಕ 12.03.15 ರಂದು ನನ್ನ ಮಗನಾದ ಕಿರಣಕುಮಾರ ಮಹಾದೇವ ಮಂದಿರ ಹತ್ತಿರ ಕುಳಿತುಕೊಂಡಾಗ ಮಹಾವೀರ ತಂದೆ ಶರಣಪ್ಪ ಅವನ ಸಂಗಡ 11 ಜನರು ಸೇರಿಕೊಂಡು ನನ್ನ ಮಗನ ಹತ್ತಿರ ಬಂದು ಕುಡಿಯಲು ಹಣ ಕೇಳಿದಾಗ ಆತನು ಹಣ ಇಲ್ಲ ಎಂದಾಗ ಅವನಿಗೆ ಜಬರದಸ್ತಿಯಿಂದ ಹಿಡಿದು ಕಿಸೆಯಲ್ಲಿಯ ಪಾಕೀಟು ತೆಗೆದುಕೊಂಡು ಕಿಸೆಯಲ್ಲಿಯ 800/- ರೂ. ಕಸಿದುಕೊಂಡು ಹೊಡೆಬಡೆ ಮಾಡಿ ಸಮಗಾರ ಸೂಳೆ ಮಕ್ಕಳೆ ನಿಮಗೆ ಏರಿಯಾ ಬಿಟ್ಟು ಓಡಿಸುತ್ತೇವೆ ಮಗನೆ ಅಂತ ಜಾತಿ ಎತ್ತಿ ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಿರುವಾಗ ನಾನು ಮತ್ತು ನನ್ನ ಮಗಳು ಅನುರಾಧಾ ಕೂಡಿ ಬಿಡಿಸಲು ಹೋದಾಗ ನನ್ನ ಮಗಳ ಮೇಲೆ ಹಲ್ಲೆ ಮಾಡಿರುತ್ತಾರೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ಚೌಕ ಠಾಣೆ : ಶ್ರೀ ಮಹಾವೀರ ತಂದೆ ಪ್ರಭಾಕರ ಚಿಂದೆ ಸಾಃ ಮಹಾದೇವ ನಗರ ಕಲಬುರಗಿ ರವರು ದಿನಾಂಕ 12.03.15 ರಂದು ರಾತ್ರಿ ತಮ್ಮ  ಮನೆಯ ಮುಂದೆ ಇರುವಾಗ ನಮ್ಮ ಬಡಾವಣೆಯ ರೇಷ್ಮಾ ಮತ್ತು ಅವಳ ಮಗನಾದ ಕಿರಣಕುಮಾರ ಹಾಗೂ ಸಂಗಡ 3-4 ಜನರು ಕೂಡಿ ಬಂದು ನಮ್ಮಗೆ ಮದ್ಯ ಕುಡಿಯುವದಕ್ಕೆ ಹಣ ಕೊಡು ಅಂತಾ ಅವಾಚ್ಯವಾದ ಶಭ್ದಗಳಿಂದ ಬೈದು ಹಣ ಕೂಡದೆ ಇರುವಾಗ ನಮ್ಮ ಮನೆಯ ಮುಂದೆ ನಿಲ್ಲಿಸಿರುವ ನಮ್ಮ ಮೋಟಾರ ಸೈಕಿಲ್‌ಗಳ ಹೆಡ್‌‌ ಲೈಟ್‌ ಮತ್ತು ಡೋಮ್‌ ಒಡೆದು ಹಾಳಮಾಡಿರುವದು ಅಲ್ಲದೆ ನನ್ನಗೆ ಎದೆಯ ಮೇಲಿನ ಅಂಗಿ ಹಿಡಿದು ಜಗ್ಗಾಡಿ ನನ ಜೇಬಿನಲ್ಲಿರುವ 710 ನಗದು ಹಣ ಕಸಿದುಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರರಕರಣ :
ನಿಂಬರ್ಗಾ ಠಾಣೆ : ಶ್ರೀಮತಿ ಪುತಳಾಬಾಯಿ ಗಂಡ ಹಸನಪ್ಪ ಗೊಂಗನ ಸಾ|| ಯಳಸಂಗಿ ಇವರು ದಿನಾಂಕ 11/03/2015 ರಂದು ಸಾಯಂಕಾಲ 0700 ಗಂಟೆಗೆ ಆರೋಪಿತಳಾದ ಸೋನಾಬಾಯಿ ಇವಳು ಫಿರ್ಯಾದಿಯ ಮನೆಗೆ ನುಗ್ಗಿ ಏ ರಂಡಿ ಮಗಳೆ ನಿನಗೆ ಬಹಳ ಸೊಕ್ಕು ಬಂದಾದ ನಿನ್ನ ಮಗಳಿಗೆ ನೀನು ಕಲಸುತ್ತಿ ಅಂತಾ ಬೈದು ಬೆನ್ನ ಮೇಲೆ ಹೊಡೆದಳು ಆಗ ಅವಳ ಮಗನಾದ ಹಣಮಂತ ತಾಯಿ ಸೋನಾಬಾಯಿ ಇವನು ಬಂದವನೆ ಈ ರಂಡಿಗಿ ಬಿಡಬ್ಯಾಡ ಅಂತ ಬೈದನು, ಸೋನಾಬಾಯಿ ಇವಳು ಅಲ್ಲಿಯೇ ಇದ್ದ ಬೆಲ್ಲೂಣಗಿಯಿಂದ ಬೆನ್ನ ಮೇಲೆ ಹೊಡೆದು ಭಾರಿ ರಕ್ತಗಾಯ ಮತ್ತು ಗುಪ್ತಗಾಯಪಡಿಸಿ ಜೀವ ಭಯ ಪಡಿಸಿ ಹೋಗಿರುತ್ತಾರೆ  ಅಂತಾಠ ಸಲ್ಲಿಸಿದ ದೂರು ಸಾರಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ವಿಶ್ವನಾಥ ತಂದೆ ಶರಣಯ್ಯ ಸಾಲಿಮಠ ಸಾ: ಮನೆ.ನಂ- 137/7 ಎಲ್..ಜಿ ಈಸ್ಟ ವಿಂಗ್ ಶ್ರೀಶೈಲ ಮಲ್ಲಿಕಾರ್ಜುನ ನಿಲಯ ಕೆ.ಹೆಚ್.ಬಿ ಅಕ್ಕಮಹಾದೇವಿ ಕಾಲೋನಿ ಹೈಕೋರ್ಟ ಎದುರುಗಡೆ ಕಲಬುರಗಿ ರವರು ದಿನಾಂಕ:  13/03/2015 ರಂದು ದಿನಾಂಕ: 12/03/15ರಂದು ರಾತ್ರಿ 11-30 ಪಿಎಮ್ ಕ್ಕೆ ಊಟ ಮುಗಿಸಿ ಮನೆಯ ಬಾಗಿಲು ಲಾಕ್ ಮಾಡಿಕೊಂಡು ಮಾಳಿಗೆಯ ಮೇಲೆ ತನ್ನ ತಂದೆ ತಾಯಿಯೊಂದಿಗೆ ಮಲಗಿಕೊಂಡಿದ್ದು ದಿನಾಂಕ: 13/03/2015ರಂದು ಬೆಳಿಗ್ಗೆ 6-30 ಎಎಮ್ ಕ್ಕೆ ಎದ್ದು ನೋಡಲು ಮನಯ ಬಾಗಿಲ ಕೀಲಿ ಮುರಿದಿದ್ದು ಗಾಬರಿಯಿಂದ ಮನೆಯೊಳಗೆ ಹೋಗಿ ನೋಡಲು ಮನೆಯ ಬೆಡರೂಮನ ಅಲಮಾರಾದ ಲಾಕರ ಮುರಿದಿದ್ದು ಸಾಮಾನುಗಳೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ಗಾಬರಿಯಿಂದ ಅಲಮಾರಾದಲ್ಲಿ ನೋಡಲು ಅಲಮಾರಾದಲ್ಲಿಟ್ಟಿದ್ದ ನಮ್ಮ ತಂಗಿಯ ಮದುವೆಯ ಸಮಯದಲ್ಲಿ ಖರೀದಿಸಿದ್ದ ಗಟ್ಟಿ ಬಂಗಾರದಿಂದ ತಯಾರಿಸಿದ್ದ ಆಭರಗಳು ಹಾಗೂ ಸುಮಾರು ವರ್ಷಗಳ ಹಿಂದೆ ಖರೀದಿಸಿದ್ದ ನಮ್ಮ ಮನೆಯ ಬಂಗರದ ಆಭರಣಗಳು ಹಾಗು ಬೆಳ್ಳಿಯ ಆಭರಣಗಳು ಮತ್ತು ನಗದು ಹಣ 18000/-ರೂ ಹೀಗೆ ಒಟ್ಟು 5,06,400/-ರೂ ಬೆಲೆಬಾಳುವ ಆಭರಣಗಳನ್ನು ಯಾರೋ ಕಳ್ಳರು ದಿನಾಂಕ: 12/03/2015ರಂದು ರಾತ್ರಿ 11-30 ಪಿಎಮ್ ಗಂಟೆಯಿಂದ ದಿನಾಂಕ: 13/03/2015 ರಂದು ಬೆಳಿಗ್ಗೆ 6-30 .ಎಮ್ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ನಮ್ಮ ಮನೆಯ ಬಾಗಿಲ ಬೀಗ ಮುರಿದು ಬೆಡರೂಮನಲ್ಲಿದ್ದ ಅಲಮಾರಾದ ಲಾಕರ ಮುರಿದು ಬಂಗಾರ ಹಾಗೂ ಬೆಳ್ಳಿಯ ಆಭರಣ ಹಾಗೂ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗುಂಡು ಹಾರಿಸಿ ಕೊಲೆ ಮಾಡಲು ಪ್ರಯತ್ನಿಸಿದವರ ಬಂಧನ :
ಅಫಜಲಪೂರ  ಠಾಣೆ : ಶ್ರೀ ದಿಲೀಪ ತಂದೆ ಶಂಕರ ಪವಾರ ಸಾ|| ಪ್ರತಾಪ ನಗರ ತಾ|| ಉತ್ತರ ಸೋಲ್ಲಾಪೂರ ಜಿ|| ಸೋಲ್ಲಾಪೂರ ಮತ್ತು ತೀರೆ ತಾಂಡಾದ ದತ್ತಾತ್ರೇಯ ತಂದೆ ಸುಭಾಷ ರಾಠೋಡ ಇಬ್ಬರು ಲೈಟ ಫಿಟಿಂಗ ಕೆಲಸ ಮಾಡಲು ಈಗ 04 ದಿವಸಗಳ ಹಿಂದೆ ದತ್ತು ರಾಠೋಡ ಎಂಬಾತನ ಮಾವನಾದ ನಾಗೇಶ ತಂದೆ ನಾಮದೇವ ಚವ್ಹಾಣ ಸಾ|| ಬಳೂರ್ಗಿ ತಾಂಡಾ ತಾ|| ಅಫಜಲಪೂರ ಇವರ ಹೊಸ ಮನೆಯ ಲೈಟ ಫಿಟಿಂಗ ಮಾಡುವ ಕೆಲಸಕ್ಕೆ ಬಂದಿರುತ್ತೇವೆ.ಹೀಗಿದ್ದು ದಿನಾಂಕ 23-02-2015 ರಂದು ರಾತ್ರಿ ನಾನು ಮತ್ತು ದತ್ತಾತ್ರೇಯ ತಂದೆ ಸುಬಾಷ  ರಾಠೋಡ, ದತ್ತು ತಂದೆ ಹರಿಶ್ಚಂದ್ರ ರಾಠೊಡ ಹಾಗೂ ಮನೆಯ ಮಾಲಿಕನಾದ ನಾಗೇಶ ತಂದೆ ನಾಮದೇವ ಚವ್ಹಾಣ ನಾಲ್ಕು ಜನರು ನಾವು ನಾಗೇಶ ಚವ್ಹಾಣ ಇವರ ಹೊಸಮನೆಯಲ್ಲಿ ಮಲಗಿಕೊಂಡಿರುತ್ತೇವೆ. ದಿನಾಂಕ 24-02-2015 ರಂದು ಮದ್ಯ ರಾತ್ರಿ 01:00 ಗಂಟೆ ಸುಮಾರಿಗೆ ನಾವು ಮಲಗಿದ ಕೋಣೆಯ ರೂಮಿನ ಬಾಗಿಲನ್ನು ಯಾರೊ ಬಡೆದ ಸಪ್ಪಳ ಕೇಳಿದ್ದರಿಂದ ನಾಗೇಶ ಚವ್ಹಾಣನು ಎದ್ದು ಕಿಡಕಿಯ ಹತ್ತಿರ ನಿಂತು ಯಾರಿದ್ದಿರಿ ಎಂದು ಕೇಳಿದನು. ಹೊರಗಡೆ ಇದ್ದವರು ಕುಡಿಯಲು ನೀರು ಕೊಡಿರಿ ಎಂದು ಕೇಳಿದರು, ಆಗ ನಾಗೇಶನು ನೀರು ಇಲ್ಲ ಅಂತಾ ಹೇಳಿದಾಗ ಹೊರಗೆ ಇದ್ದವರು ಏರು ದ್ವನಿಯಲ್ಲಿ ಬೈದರು. ಆಗ ನಾಗೇಶನು ಬಾಗಿಲು ತೆರೆದು ಹೊರಗೆ ಹೋದನು. ಹೊರಗೆ ಹೋದ ನಂತರ ಅವನ ಜೊತೆಗೆ ಕನ್ನಡದಲ್ಲಿ ಏರು ದ್ವನಿಯಲ್ಲಿತಾಡುತ್ತಾ ಒಮ್ಮೆಲೆ ಗುಂಡು ಹಾರಿಸಿದಂತೆ ಡಮ್ಮ ಡಮ್ಮ ಎನ್ನುವ ಬಾರಿ ಶಬ್ದ ಕೆಳಿಸಿತು. ಆಗ ನಾವು ಎದ್ದು ಹೊರಗೆ ಬಂದು ನೋಡಲಾಗಿ ಯಾರೊ ಇಬ್ಬರು ವ್ಯಕ್ತಿಗಳು ಕತ್ತಲಲ್ಲಿ ಓಡಿ ಹೋಗಿದ್ದು ಈ ಬಗ್ಗೆ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಕಾಲಕ್ಕೆ ಗಾಯಾಳು ನಾಗೇಶನು ತನ್ನ ಹೇಳಿಕೆಯಲ್ಲಿ ಗುಂಡು ಬಿಂಗೋಳ್ಳಿ ಎಂಬಾತನು ತನ್ನ ಚಿಕ್ಕಮ್ಮ (ಕಾಕಿ) ಮಹಾದೇವಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದು, ನಾನು ಅನೈತಿಕ ಸಂಬಂಧ ಬಿಡುವಂತೆ ಆತನೊಂದಿಗೆ ಜಗಳ ಮಾಡಿದ್ದು, ಅದೆ ವೈಮನಸ್ಸಿನಿಂದ ಮತ್ತು ನಮ್ಮ ಚಿಕ್ಕಮ್ಮ ಮಾಹಾದೇವಿಯ ಕುಮ್ಮಕ್ಕಿನಿಂದ ದಿನಾಂಕ 23-02-2015 ರಂದು ಮದ್ಯ ರಾತ್ರಿ 12:15 ಗಂಟೆ ಸುಮಾರಿಗೆ ತನ್ನ ಜೊತೆಗೆ ಮೂರು ಜನರನ್ನು ಕರೆದುಕೊಂಡು ನಮ್ಮ ಹೊಸ ಮನೆಗೆ ಬಂದು, ಹೊಸ ಮನೆಯಲ್ಲಿ ಮಲಗಿದ್ದ ನನಗೆ ನೀರು ಕೊಡುವಂತೆ ಕೇಳಿ ಬೈದಿದ್ದು, ನಾನು ಹೊರಗೆ ಬಂದಾಗ ಪಿಸ್ತೂಲಿನಿಂದ ನನ್ನ ಬಲ ಕಣ್ಣಿನ ಹತ್ತಿರ ಗುಂಡು ಹಾರಿಸಿ ನನಗೆ ಕೊಲೆ ಮಾಡಲು ಪ್ರಯತ್ನಿಸಿ ನನ್ನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುತ್ತಾನೆ ಅಂತಾ ತಿಳಿಸಿದ್ದು             ಆರೋಪಿ ಗುಂಡು @ ಗುಂಡೆರಾವ ಬಿಂಗೋಳ್ಳಿ ಈತನನ್ನು ದಿನಾಂಕ 13-03-2015 ರಂದು ಬೆಳಿಗ್ಗೆ 11:30 ಗಂಟೆಗೆ ಪಿ.ಎಸ್.ಐ ಅಫಜಲಪೂರ ರವರು ದಸ್ತಗಿರಿ ಮಾಡಿ ಆತನ ಸ್ವ ಇಚ್ಚೆ ಹೇಳಿಕೆ ಪಡೆದುಕೊಂಡಿದ್ದು, ಸದರಿಯವನು ತನ್ನ ಸ್ವ ಖುಷಿ ಹೇಳಿಕೆ ನೀಡಿದ್ದೇನೆಂದರೆ, ದಿನಾಂಕ 23-02-2015 ರಂದು ರಾತ್ರಿ ನಾನು ಮತ್ತು ನನ್ನ ಜೊತೆಗೆ ಶರಣಬುಸು ತಂದೆ ದತ್ತಪ್ಪ ಮಾತೋಳಿ, ಸಿದ್ದಾರಾಮ ತಂದೆ ನಾಗಣ್ಣ ನಿಂಬಾಳ ಹಾಗೂ ಸಿದ್ದಲಿಂಗ ತಂದೆ ಸೈಬಣ್ಣ ಜಮಾದಾರ ರವರನ್ನು ಕರೆದುಕೊಂಡು ನನ್ನ ಮೋಟಾರ ಸೈಕಲ ನಂ ಕೆಎ-32 ಯು-3649 ನೇದ್ದರ ಮೇಲೆ ನಾನು ಮತ್ತು ಸಿದ್ದಲಿಂಗ ಜಮಾದಾರ ಹಾಗೂ ನನ್ನ ಗೆಳೆಯನಾದ ಯುನುಸಖಾನ ಪಠಾಣ ಈತನ ಮೋಟಾರ ಸೈಕಲ ನಂ ಕೆಎ-32 ಇಎಫ್-6921 ನೇದ್ದರ ಮೇಲೆ ಶರಣಬಸು ಮಾತೋಳಿ, ಸಿದ್ದರಾಮ ನಿಂಬಾಳ ರವರು ಅಫಜಲಪೂರದಿಂದ ಬಳೂರ್ಗಿ ತಾಂಡಾಕ್ಕೆ ಹೋಗಿರುತ್ತೇವೆ. ನಾನು ನಾಡ ಪಿಸ್ತೂಲನ್ನು ಹಾಗೂ ಜಿವಂತ ಗುಂಡುಗಳನ್ನು ನನ್ನ ಗೆಳೆಯನಾದ ಯುನುಸಖಾನ್ ಪಠಾಣ ಇವನ ಪರಿಚಯದವನಾದ ಮಶಾಕಸಾಬ ತಂದೆ ಅಬ್ದುಲಸಾಬ ಜಾಹಾಗೀರದಾರ ಸಾ|| ಅಫಜಲಪೂರ ಇವನ ಹತ್ತಿರ 06 ತಿಂಗಳುಗಳ ಹಿಂದೆ ಖರೀದಿ ಮಾಡಿ ಮನೆಯಲ್ಲಿ ಇಟ್ಟಿರುತ್ತೆನೆ.  ನಾವು ಅಫಜಲಪೂರದಿಂದ ಬಳೂರ್ಗಿ ತಾಂಡಾಕ್ಕೆ ಹೋಗುವಾಗಲೆ ನಾಗೇಶನಿಗೆ ಹೊಡೆದು ಕೊಲೆ ಮಾಡಲು ನಾನು ನಾಡ ಪಿಸ್ತೂಲ ತಗೆದುಕೊಂಡು ಹೋಗಿರುತ್ತೇನೆ. ಶರಣಬಸು ಮಾತೋಳಿ, ಸಿದ್ದಾರಾಮ ನಿಂಬಾಳ ಇವರು ಲಾಂಗುಗಳನ್ನು ಹಾಗೂ ಸಿದ್ದಲಿಂಗ ಜಮಾದಾರ ಈತನು ಚಾಕು ತಂದಿದ್ದನು. ನಾವು ಬಳೂರ್ಗಿ ತಾಂಡಾಕ್ಕೆ ಹೋದ ನಂತರ ನಮ್ಮ ಮೋಟಾರ ಸೈಕಲಗಳು ದೂರ ನಿಲ್ಲಿಸಿ ನಡೆದುಕೊಂಡು ನಾಗೇಶನ ಹೊಸ ಮನೆ ಹತ್ತಿರ ಹೋದೆವು. ಆಗ ನಾನು ನಾಗೇಶನ ಮನೆಯ ಕಂಪೌಂಡ ಗೋಡೆಯ ಪಕ್ಕದಲ್ಲಿ ಅಡಗಿ ಕುಳಿತುಕೊಂಡಿದ್ದು, ಶರಣಬಸು ಮಾತೋಳಿ ಮತ್ತು ಸಿದ್ದರಾಮ ನಿಂಬಾಳ  ಇವರು ಬಾಗಿಲು ಬಡೆದು ಕುಡಿಯಲು ನೀರು ಕೇಳಿದರು. ಆಗ ನಾಗೇಶನು ನೀರು ಇಲ್ಲ ಅಂತಾ ಹೇಳಿದನು. ಆಗ ಶರಣಬಸು ಮತ್ತು ಸಿದ್ದಾರಾಮ ಇವರು ನೀರು ಇಲ್ಲಾ ಅಂತಾ ಹೇಳಿದಕ್ಕೆ ನಾಗೇಶನಿಗೆ ನೀರು ಇದ್ದರು ಇಲ್ಲಾ ಅಂತಾ ಹೇಳ್ತಿ ಬೋಸಡಿ ಮಗನೆ ಅಂತಾ ಬೈದಾಗ, ನಾಗೇಶನು ಬಾಗಿಲು ತರೆದು ಹೊರಗೆ ಬಂದನು. ಆಗ ನಾನು ನನ್ನಲ್ಲಿದ್ದ ನಾಡ ಪಿಸ್ತೂಲಿನಿಂದ ನಾಗೇಶನ ಕಡೆಗೆ ಎರಡು ಸುತ್ತು ಗುಂಡು ಹಾರಿಸಿರುತ್ತೇನೆ ಅಂತಾ ತಿಳಿಸಿದ್ದು ಸದರಿಯವರನ್ನು ದಸ್ತಗೀರ ಮಾಡಿಕೊಂಡು ನ್ಯಾಯಾಂಗ ಬಂದನಕ್ಕೆ ಕಳುಹಿಸಿಕೊಡಲಾಗಿದೆ