POLICE BHAVAN KALABURAGI

POLICE BHAVAN KALABURAGI

19 February 2014

Gulbarga Dist Reported Crimes

ನರೋಣಾ ಪೊಲೀಸ್ ಠಾಣೆ:
ಅಪಘಾತ ಪ್ರಕರಣ: ದಿ:17/02/2014 ರಂದು ಶ್ರೀ ಕೃಷ್ಣ ತಂ. ನರಸಿಂಗ್ರಾವ ಖೇಮಜಿ ಸಾ: ನಾಡೇಪಲ್ಲಿ ಸಾ: ಸೇಡಂ ರವರು ಅವರ  ತಂದೆ ನರಸಿಂಗರಾವ,  ಹೆಂಡತಿ ಅಂಜನಾಬಾಯಿ , ಅಕ್ಕ ಲಕ್ಷ್ಮಿಬಾಯಿ ಮತ್ತು ಮಕ್ಕಳಾದ ನಿಖಿತಾ, ಕಾರ್ತಿಕ, ಮತ್ತು ಸೌಮ್ಯಾ ರವರೊಂದಿಗೆ ಬಾಲಪ್ಪಾ ಇವರ ಟಾಟಾ ಇಂಡಿಕಾ ಕಾರ ನಂ: ಕೆ.ಎ33 5399 ರಲ್ಲಿ ಕಾರನಲ್ಲಿ ಚಾಲಕ ಶೇಖ ಮಹೇಬೂಬ ತಂದೆ ಶೇಖ ಚಾಂದಪಾಶಾ ಸಾ: ಗುರುವಿಠಕಲ್ ರವರೊಂದಿಗೆ ತುಳಜಾಪೂರಕ್ಕೆ ಹೋಗುತ್ತಿರುವಾಗ  ಕಡಗಂಚಿ ದಾಟಿ ಆಳಂದ ಕಡೆಗೆ ಹೋಗುವಾಗ ಕಾರ ಚಾಲಕ ಶೇಖ ಮಹೇಬೂಬ ತಂದೆ ಶೇಖ ಚಾಂದಪಾಶಾ ಕಾರನ್ನು ಅತೀ ವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸುತ್ತಾ ಲಾಡ ಚಿಂಚೊಳ್ಳಿ ಕ್ರಾಸ ಇನ್ನೂ ಸ್ವಲ್ಪ ದೂರದಲ್ಲಿರುವಾಗ ಮುಂದೆ ಹೋಗುತ್ತಿದ್ದ ಒಂದು ಕಬ್ಬಿನ ಲೋಡ ಇದ್ದ ಲಾರಿಗೆ ಕಾರನ್ನು ಹಿಂದಿನಿಂದ ಅಪಘಾರ ಪಡಿಸಿದನು. ಇದರಿಂದ ಕಾರ ಪೂರ್ತಿ ಡ್ಯಾಮೇಜ್ ಆಗಿ ಒಳಗಡೆ ಕುಳುತ್ತಿದ್ದ ನರಸಿಂಗರಾವರವರಿಗೆ ಬಾಯಿಗೆ ಭಾರಿ ಪೆಟ್ಟಾಗಿ ಮುಂದಿನ ಹಲ್ಲುಗಳು ಬಿದ್ದಿದ್ದು, ಮತ್ತು ಮುಖಕ್ಕೆ ಅಲ್ಲಲ್ಲಿ ತರಚಿದ ಗಾಯಗಳಾಗಿರುತ್ತವೆ ಹಾಗೂ ತಲೆಗೆ ಒಳಪೆಟ್ಟಾಗಿ ಕಿವಿಯಿಂದಾ ರಕ್ತ ಸ್ರಾವವಾಗಿರುತ್ತದೆ. ಮತ್ತು ಮಗಳಾದ ನಿಖಿತಾಳಿಗೆ ಬಲಗಡೆ ಹುಬ್ಬಿನ ಹತ್ತಿರ ರಕ್ತಗಾಯವಾಗಿದೆ. ಎದೆಗೆ ಒಳಪೆಟ್ಟಾಗಿದ್ದು ನನಗೆ ಮತ್ತು ಉಳಿದವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು.  ಅಪಘತದ ನಂತರ ಕಾರ ಚಾಲಕನು ಕಾರನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು. ನಂತರ ನಾನು 108 ವಾಹನದಲ್ಲಿ ನಮ್ಮ ತಂದೆಗೆ ಹಾಗೂ ನಮ್ಮ ಮಗಳಾದ ನಿಖಿತಾಗೆ ಗುಲಬರ್ಗಾ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು. ನಮ್ಮ ತಂದೆಯವರಿಗೆ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ: 18/02/2014 ರಂದು ನಸುಕಿನ ಜಾವ 4:30 ಗಂಟೆಗೆ ಮೃತಪಟ್ಟಿರುತ್ತಾರೆ. ಕಾರಣ ಅಪಘಾತಪಡಿಸಿದ  ಕಾರ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ಸಲ್ಲಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಸ್ಟೇಷನ್ ಬಜಾರ ಪೊಲೀಸ್ ಠಾಣೆ:
ಕಳವು ಪ್ರಕರಣ: ದಿನಾಂಕ. 18.02.2014 ರಂದು ಶ್ರೀ ಮಹ್ಮದ ರಫೀಕ ತಂದೆ ನವಾಬಮಿಯಾ ಸಾ: ಮಂಜೂರ ಮಜ್ಜಿದ ಇಸ್ಲಾಮಬಾದ ಕಾಲೂನಿ ಗುಲಬರ್ಗಾ ಇವರು ಠಾಣೆಗೆ ಹಾಜರಾಗಿ ದಿನಾಂಕ. 15.02.2014 ರಂದು ತನ್ನ ಹೊಂಡಾ ಶೈನ್ ನಂ. ಕೆಎ32/ಯು4651 ಅ.ಕಿ. 30,000/- ರೂ ನೆದ್ದನ್ನು ಜಿಲ್ಲಾ ನ್ಯಾಯಾಲಯದ ಗೇಟ ಮುಂದಿ ನಿಲ್ಲಿಸಿ ನ್ಯಾಯಾಲಯದಲ್ಲಿ ಹೋಗಿ ಮರಳಿ ಬಂದು ನೋಡಲಾಗಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಇಂದಿನ ವೆರೆಗೆ ಹುಡುಕಾಡಿದರು ಸಿಕ್ಕಿರುವುದಿಲ್ಲ ಅಂತಾ ಸಲ್ಲಿಸಿದ ದೂರಿನ ಸಾರಾಂಶದ ಮೇರೆಗೆ ಸ್ಟೇಷನ್ ಬಜಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಬ್ರಹ್ಮಪೂರ ಪೊಲೀಸ್ ಠಾಣೆ:
ಸುಲಿಗೆ ಪ್ರಕರಣ: ದಿನಾಂಕ: 18/02/2014 ರಂದು  ಶ್ರೀ.ಐನೋದ್ದಿನ್ ತಂದೆ ಮಹ್ಮದ್ ಪೀರಅಹೆಮದ್ ಘರವಾಲೆ ಸಾ|| ಗುಲ್ಲಾ ಜಕ್ಕಲ ಮಂಡಲ ತಾ|| ಮದನೂರ್ ಜಿ|| ನಿಜಾಮಬಾದ ಹಾಲವಸ್ತಿ ಕುಸನೂರ ತಾಂಡಾ ಗುಲಬರ್ಗಾ.ರವರು ಠಾಣೆಗೆ ಹಾಜರಾಗಿ ದಿನಾಂಕ 17/02/14 ರಂದು ರಾತ್ರಿ 10 ಗಂಟೆಯ ಸುಮಾರಿಗೆ ತಮ್ಮ ಗೆಳೆಯ ಊರಿಗೆ ಹೋಗುವುದು ಇದ್ದ ಕಾರಣಾ ಅವರಿಗೆ ಬಸ್ಸ್ಟ್ಯಾಂಡಿಗೆ ಬಿಟ್ಟು ಮರಳಿ ತನ್ನ ಹೀರೊ ಹೊಂಡಾ ಮೋಟಾರ ಸೈಕಲ್ ಮೇಲೆ ಮತಳಿ ಬರುತ್ತಿರುವಾಗ ರಾತ್ರಿ 1230 ಗಂಟೆಯ ಸುಮಾರಿಗೆ ಎಮ್.ಆರ್.ಎಮ್.ಸಿ. ಮೆಡಿಕಲ್ ಕಾಲೇಜು ಎದುರುಗಡೆ ಹೋಗುತ್ತಿರುವಾಗ ಎದುರಿನಿಂದ ಒಬ್ಬ ಅಂದಾಜು 20 ರಿಂದ 25 ವಯಸ್ಸಿನವನು ಮೈ ಮೇಲೆ ಹಸಿರು ಬಣ್ಣದ ತೋಳಿನ ಶರ್ಟ ಜೀನ್ಸ ಪ್ಯಾಂಟ್ ಉಟ್ಟವನು ನನ್ನ ಮೋಟಾರ ಸೈಕಲ್ಲಿಗೆ ಅಡ್ಡಗಟ್ಟಿ ನಿಂತು ಕುತ್ತಿಗೆಗೆ ಚಾಕು ಹಚ್ಚಿ ಹೆದರಿಸಿ ತನ್ನ ಹತ್ತಿರ ಇದ್ದ ನಗದು ಹಣ 600/- ರೂ. ಮತ್ತು ಒಂದು ಕಾರ್ಬನ ಮೋಬಾಯಿಲ್ 1600/- ಬೆಲೆಯುಳ್ಳದು ಹೀಗೆ ಒಟ್ಟು 2200/- ಬೆಲೆಯ ಮಾಲನ್ನು ಕಸಿದುಕೊಂಡು ಓಡಿ ಹೋದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಬ್ರಹ್ಮಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.