POLICE BHAVAN KALABURAGI

POLICE BHAVAN KALABURAGI

21 November 2016

Kalaburagi District Reported Crimes

ವರದಕ್ಷಣೆ ಕಿರುಕಳ ಪ್ರಕರಣ :
ರೇವೂರ ಠಾಣೆ : ಶ್ರೀಮತಿ ಹೀರಾಬಾಯಿ ಗಂಡ ಜಗದೇವಪ್ಪ ಬಿರಾದಾರ ಸಾ|| ಅತನೂರ ತಾ|| ಅಫಜಲಪೂರ ಇವರ ಗಂಡನಾದ ಜಗದೇವಪ್ಪ ಬಿರಾದಾರ ಈತನು ಸುಮಾರು 10 ವರ್ಷಗಳ ಹಿಂದೆ ಮೃತಪಟ್ಟಿದ್ದು ನನಗೆ 1) ರೇಷ್ಮಾ 2) ಭಾಗ್ಯಶ್ರೀ 3) ಸಾವಿತ್ರಿ 4) ಸಂಗೀತಾ 5) ಗೌಡಪ್ಪಗೌಡ ಅಂತಾ ಹೀಗೆ ಒಟ್ಟು 05 ಜನರು ಮಕ್ಕಳಿದ್ದು ನನ್ನ ಎರಡನೆಯ ಮಗಳಾದ ಭಾಗ್ಯಶ್ರೀ ಇವಳಿಗೆ ದಿನಾಂಕ 17-02-2016 ರಂದು ಯಾದಗಿರಿ ಜಿಲ್ಲೆಯ ಸುರಪೂರ ತಾಲೂಕಿನ ಕೂಡಲಗಿ ಗ್ರಾಮದ ಪ್ರಭುಲಿಂಗ ಸಾಹು ಕೊ‍ಣ್ಣೂರ ಇವರ ಮಗನಾದ ಶಶಿಕುಮಾರ ಎಂಬಾತನೊಂದಿಗೆ ಮದುವೆ ಮಾಡಿಕೊಟ್ಟಿರುತ್ತೇವೆ. ಶಶಿಕುಮಾರನು ಬೆಂಗಳೂರಿನ ಕೋರಮಂಗಲ ಕೆ.ಎಸ್.ಆರ್.ಪಿ ಯಲ್ಲಿ ಪೊಲೀಸ್ ಪೇದೆ ಅಂತಾ ಕೆಲಸ ಮಾಡುತ್ತಾನೆ. ನನ್ನ ಮಗಳ ಮದುವೆಗಿಂತ ಮುಂಚೆ ಮಾತುಕತೆ ವರನ ಮನೆಯಲ್ಲಿ ನಡೆದಿದ್ದು ನಿಶ್ಚೀತಾರ್ತ ಕಾರ್ಯಕ್ರಮವು ಮದುವೆಗಿಂತ 4-5 ತಿಂಗಳ ಮೊದಲು ಅತನೂರ ಗ್ರಾಮದಲ್ಲಿಯೆ ಆಗಿರುತ್ತದೆ. ಆ ಸಮಯದಲ್ಲಿ ವರನಿಗೆ ನಾವು ಹಾಕುವ ಬಂಗಾರ, ಬಟ್ಟೆ ಮತ್ತು ಗೃಹ ಬಳಕೆಯ ವಸ್ತುಗಳಿಗೆ ವರ ಮತ್ತು ವರನ ಮನೆಯವರು ಒಪ್ಪಿಕೊಂಡಿರುತ್ತಾರೆ. ನಮ್ಮ ಮಗಳ ಮೈ ಮೇಲೆ ವರನ ಮನೆಯವರು ಹಾಕುವ ಆಬರಣಗಳಿಗೆ ನಾವು ನಮ್ಮ ಒಪ್ಪಿಗೆ ನೀಡಿರುತ್ತೇವೆ. ದಿನಾಂಕ 17-02-2016 ರಂದು ಸುರಪೂರ ತಾಲೂಕಿನ ಕೂಡಲಗಿ ಗ್ರಾಮದ ಶ್ರೀ ಸದ್ಗುರು ಶಾಂತಾನಂದ ಸರಸ್ವತಿಸ್ವಾಮಿ ಬಾಬಾ ಮಾಹಾರಾಜರ ಶ್ರೀ ಮಠದಲ್ಲಿ ನಮ್ಮ ಹಿಂದೂ ಸಂಪ್ರದಾಯದಂತೆ ಮದುವೆ ಆಗಿರುತ್ತದೆ. ಮದುವೆಯಾದ ಒಂದು ತಿಂಗಳ ವರೆಗೆ ನನ್ನ ಮಗಳ ಗಂಡನಾದ 1) ಶಶಿಕಾಂತ ತಂದೆ ಪ್ರಭುಲಿಂಗ ಸಾಹು ಕೊಣ್ಣೂರ, ಅತ್ತೆಯಾದ 2) ವಿಜಯಲಕ್ಷ್ಮೀ ಗಂಡ ಪ್ರಭುಲಿಂಗ ಸಾಹು ಕೊಣ್ಣೂರ, ಮಾವನಾದ 3) ಪ್ರಭುಲಿಂಗ ಸಾಹು ಕೊಣ್ಣೂರ, ನಾದನಿಯಾದ 4) ಶೃತಿ ಗಂಡ ಶಂಕರಗೌಡ ಹಾಗೂ ನಾದನಿಯ ಗಂಡನಾದ 5) ಶಂಕರಗೌಡ ಇವರೆಲ್ಲರೂ ನನ್ನ ಮಗಳಿಗೆ, ಅವಳ ಗಂಡನಾದ ಶಶಿಕಾಂತನ ಪಿ.ಎಸ್.ಐ ಮತ್ತು ಪಿ,ಡಿ,ಒ ನೌಕರಿ ಸಲುವಾಗಿ ತವರು ಮನೆಯಿಂದ 50,00,000/- ರೂ (ಐವತ್ತು ಲಕ್ಷ ರೂಪಾಯಿ) ಹಣ ತರುವಂತೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ಕೊಟ್ಟಿರುತ್ತಾರೆ. ಈ ವಿಷಯ ನಮ್ಮ ಮಗಳು ನನಗೆ ತಿಳಿಸಿದ್ದರಿಂದ ಈಗ ಒಂದು ತಿಂಗಳ ಹಿಂದೆ ನಾನು ಸಿದ್ದಾರಾಮ ಹೇರೂರ ಮತ್ತು ಸಿದ್ದಮ್ಮ ಚನ್ನೂರ ಇವರ ಸಮ್ಮುಖದಲ್ಲಿ ನನ್ನ ಮಗಳ ಗಂಡನಿಗೆ ಹತ್ತು ಲಕ್ಷ ರೂಪಾಯಿ ಹಣ ಕೊಟ್ಟಿರುತ್ತೇನೆ. ಆದರೂ ನನ್ನ ಮಗಳ ಗಂಡ ಹಾಗೂ ಗಂಡನ ಮನೆಯವರು ಇನ್ನು 40 ಲಕ್ಷ ರೂಪಾಯಿ ಹಣ ತರುವಂತೆ ಕಿರುಕುಳ ಕೊಡುವುದು ನಿಲ್ಲಿಸದ ಮತ್ತೆ ನನ್ನ ಮಗಳನ್ನು ಕಳುಹಿಸಿದ್ದರು ಆಗ ನಾನು ಮತ್ತು ಸಿದ್ದಾರಾಮ ಹೇರೂರ, ವಿಠಲ ಜಾಮಗೊಂಡ ಹಾಗು ನನ್ನ ಅಕ್ಕ ಚನ್ನಮ್ಮಾ ಅತನೂರ ರವರೆಲ್ಲರೂ ನನ್ನ ಮಗಳ ಗಂಡನಾದ ಶಶಿಕಾಂತನಿಗೆ ಕರೆಯಿಸಿ ನನ್ನ ಮಗಳಿಗೆ ಕಿರುಕುಳ ಕೊಡದೆ ಸರಿಯಾಗಿ ಇಟ್ಟಿಕೊಳ್ಳುವಂತೆ ತಿಳುವಳಿಕೆ ಹೆಳಿ ಕಳುಹಿಸಿಕೊಟ್ಟಿರುತ್ತೆವೆ. ಸುಮಾರು 15 ದಿವಸಗಳ ಹಿಂದೆ ನನ್ನ ಮಗಳ ಗಂಡ, ಅತ್ತೆ, ಮಾವ, ನಾದಿನಿ, ಮತ್ತು ನಾದಿನಿ ಗಂಡ ಇವರೆಲ್ಲರೂ ನನ್ನ ಮಗಳಿಗೆ ನಿನ್ನ ತವರು ಮನೆಯಿಂದ 40 ಲಕ್ಷ ರೂಪಾಯಿ ಹಣ ತೆಗೆದುಕೊಂಡು ಬಂದರೆ ನಿನಗೆ ನಮ್ಮ ಮನೆಯಲ್ಲಿ ಜೀವನ ಮಾಡಲು ಅವಕಾಶ ಇರುತ್ತದೆ. ಇಲ್ಲದಿದ್ದರೆ ನಿನ್ನ ಕೊಲೆ ಮಾಡಿ ಮತ್ತೊಂದು ಮದುವೆ ಮಾಡುತ್ತೆವೆ ಅಂತಾ ಹೊಡೆ ಬಡೆ ಮಾಡಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ಕೊಡುತ್ತಿದ್ದಾರೆ ಅಂತಾ ನನ್ನ ಮಗಳು ನನಗೆ ಫೋನ ಮೂಲಕ ತಿಳಿಸಿದ್ದರಿಂದ ದಿನಾಂಕ;06/11/2016 ರಂದು ನನ್ನ ಹಿರಿಯ ಮಗಳ ಗಂಡನಾದ ಗುರುರಾಜ ದ್ಯಾಮಾ ಈತನಿಗೆ ನನ್ನ ಮಗಳನ್ನು ಕರೆದುಕೊಂಡು ಬರಲು ಕೂಡಲಗಿಗೆ ಕಳುಹಿಸಿದ್ದು ಅವನು ದಿನಾಂಕ;07/11/2016 ರಂದು ನನ್ನ ಮಗಳು ಭಾಗ್ಯಶ್ರಿ ಇವಳನ್ನು ನಮ್ಮ ಮನೆಗೆ ಕರೆದುಕೊಂಡು ಬಂದಿರುತ್ತಾನೆ. ದಿನಾಂಕ;12/11/2016 ರಂದು ಬೆಳಗ್ಗೆ ನನ್ನ ಮಗಳ ಗಂಡ ಶಶಿಕುಮಾರ ನಮ್ಮ ಮನೆಗೆ ಬಂದು ದಿನಾಂಕ;16/11/2016 ರವರೆಗೆ ನಮ್ಮ ಮನೆಯಲ್ಲಿ ಇದ್ದು ನನ್ನ ಮಗಳಿಗೆ ರಂಡಿ ಎಷ್ಟು ದಿವಸಗಳ ವರೆಗೆ ನೀನು ನಿನ್ನ ತವರು ಮನೆಯಲ್ಲಿಯೆ ಇರುವಿ ನನಗೆ ಪಿ,ಎಸ್,ಐ ಪಿ,ಡಿ.ಒ ನೌಕರಿ ಸಲುವಾಗಿ 40 ಲಕ್ಷ ರೂಪಾಯಿ ಹಣ ಬೇಕು. ನಿನ್ನ ತಾಯಿಗೆ ಹೇಳಿ ಹಣ ತೆಗೆದುಕೊಂಡು ಈಗಲೆ ನನ್ನೊಂದಿಗೆ ನಡೆ ಅಂತಾ ದಿನಾಂಕ;16/11/2016 ರಂದು ಕೈಯಿಂದ ಹೊಡೆದು ಚಿನ್ನದ ಮಂಗಳ ಸೂತ್ರ ಹರಿದುಕೊಂಡು ಹೊಗಿರುತ್ತಾನೆ. ಇಲ್ಲಿಂದ ಹೊದಾಗಿನಿಂದಲು ದಿನಾಲು ನನ್ನ ಮಗಳಿಗೆ ಫೊನ ಮಾಡಿ ಫೋನಿನಲ್ಲಿ ಹಣದ ಸಲುವಾಗಿ ಅಶ್ಲೀಲ ಶಬ್ದಗಳಿಂದ ಬೈಯ್ದು ಮಾನಶೀಕವಾಗಿ ಮತ್ತು ದೈಹಿಕವಾಗಿ ಕಿರುಕುಳ ಕೊಟ್ಟಿದ್ದರಿಂದ ತನ್ನ ಮನಸಿನ ಮೇಲೆ ಪರಿಣಾಮ ಮಾಡಿಕೊಂಡು ದಿನಾಂಕ;18/11/2016 ರಂದು ಸಾಯಂಕಾಲ 05.00 ಗಂಟೆ ಸುಮಾರಿಗೆ ನನ್ನ ಮಗಳು ನಮ್ಮ ಮನೆಯಲ್ಲಿಯೆ ತಾನು ಧರಿಸುವ ಓಡ್ನಿ ಬಟ್ಟೆಯಿಂದ ಮನೇಯ ಮೇಲ್ಚಾವಣಿಯ ಕಬ್ಬಿಣದ ರಾಡಿಗೆ ನೇಣು ಹಾಕಿಕೊಂಡು ಮೃತ ಪಟ್ಟಿರುತ್ತಾಳೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೇವೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ರೇವೂರ ಠಾಣೆ : ಶ್ರೀಮತಿ ಬಾಗಿರತಿ ಗಂಡ ರಾಜಶೇಖರ ಉಡಗೇನವರ ರವರು   ದಿನಾಂಕ;19/11/2016 ರಂದು ನಾನು ಮತ್ತು ನನ್ನ ಮಕ್ಕಳಾದ ಸವಿತಾ ಪ್ರಿಯಾಂಕಾ ಹಾಗು ಶಿವಕುಮಾರ ಮನೆಯಲ್ಲಿದ್ದೇವೂ ನಾನು ಮುಂಜಾನೆ 07.00 ಗಂಟೆ ಸುಮಾರಿಗೆ ಸ್ನಾನ ಮಾಡಲು ಒತ್ತಲದಲ್ಲಿ ನೀರು ಕಾಯಿಸುತ್ತಿರುವಾಗ ನನ್ನ ಮೈದುನನಾದ ಉಲ್ಲಾಸ ಈತನ ಹೆಂಡತಿಯಾದ ಜಗದೇವಿ ಇವಳು ನಾನು ಕಾಯಿಸುತಿದ್ದ ಒತ್ತಲು ಸಮೀಪ ನೀರು ಚೆಲ್ಲಿದರು ಆಗ ನಾನು ನೀನು ನೀರು ನಮ್ಮ ಜಾಗದಲ್ಲಿ ಚೆಲ್ಲಬೇಡಾ ಅಂತಾ ಅಂದಿದ್ದಕ್ಕೆ ಜಗದೇವಿಯ ಗಂಡನಾದ ಉಲ್ಲಾಸ ಇವರು ಅಲ್ಲೆ ಇದ್ದ ಒಂದು ಬಡಿಗೆಯಿಂದ ಎಡಗೈ ಬೆರಳುಗಳಮೇಲೆ, ಕೈಮೇಲೆ, ಬಲಗಾಲ ಮೇಲೆ, ಹಾಗು ಎಡಗಾಲ ತೊಡೆಯ ಮೇಲೆ ಹೊಡದನು ಹಾಗು ಕೈಯಿಂದ ಬೆನ್ನ ಮೇಲೆ ಹೊಡೆಯುತಿದ್ದಾಗ ನನ್ನ ಇನ್ನೊಬ್ಬ ಮೈದುನನಾದ ಮಹಾಂತೇಶ ಇವನು ಬಂದವನೆ ಈ ರಂಡಿಗ ಬಿಡಬ್ಯಾಡ ಹೊಡಿ ಇಕಿದು ಬಹಳ ಆಗ್ಯಾದ ಸುಮ್ಮನೆ ಸುಮ್ಮನೆ ಜಗಳ ತೆಗಿತಾಳ ಅಂತಾ ಅಂದು ಕೈಯಿಂದ ಬೆನ್ನ ಮೇಲೆ ಹಾಗು ಪಕ್ಕಲೆಬ ಮೇಲೆ ಹೊಡದನು. ಉಲ್ಲಾಸ ಹಾಗು ಮಲ್ಲಿಕಾರ್ಜನ ಹೊಡೆದು ಗಾಯಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೇವೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರೇವೂರ ಠಾಣೆ : ಶ್ರೀ ಉಲ್ಲಾಸ ತಂದೆ ಮಲ್ಲಿಕಾರ್ಜುನ ಉಡಗೇನವರ ರವರು ಒಕ್ಕಲುತನ ಕೆಸಲ ಮಾಡಿಕೊಂಡು ಕುಟುಂಬ ಪರಿವಾರದೊಂದಿಗೆ ವಾಸಿಸುತ್ತಿದ್ದೆನೆ. ನಮ್ಮ ತಂದೆಗೆ ನಾವೂ ಮೂರು ಜನ ಗಂಡು ಮಕ್ಕಳು ಇರುತ್ತೆವೆ. ಮನೆಯ ಜಾಗದ ಹಂಚಿಕೇಯ ಸಲುವಾಗಿ ನನಗು ಹಾಗು ಅಣ್ಣನಾದ ರಾಜಶೇಕರ ಹಾಗು ತಮ್ಮನಾದ ಊಲ್ಲಾಸ ರವರ ಮದ್ಯ ಮೊದಲಿನಿಂದ ವೈಮನಸ್ಸು ಇರುತ್ತದೆ. ರಾಜಶೇಖರ ಈತನು ಹುಚ್ಚನಂತೆ ಇದ್ದು ಇವನ ಹೆಂಡತಿಯಾದ ಭಾಗಿರಥಿ ನಮ್ಮ ಜೊತೆ ಹಗೆತನ ಸಾಗಿಸುತ್ತಾ ಬಂದಿದ್ದು  ದಿನಾಂಕ;19/11/2016 ರಂದು ಮುಂಜಾನೆ ನಾನು ನಮ್ಮ ತಮ್ಮನಾದ ಮಹಾಂತೇಶ ಹಾಗು ನನ್ನ ಹೆಂಡತಿಯಾದ ಜಗದೆವಿ ಮನೆಯಲ್ಲಿ ಇದ್ದೆವೂ. ನನ್ನ ಹೆಂಡತಿಯಾದ ಜಗದೇವಿ ಇವಳು ಮನೇಯ ಬಾಂಡ್ಯಾ ತಿಕ್ಕಿ ನಮ್ಮ ಜಾಗದಲ್ಲಿ ನೀರು ಹಾಕಿರುತ್ತಾಳೆ. ಆಗ ನಮ್ಮ ಅಣ್ಣ ರಾಜಶೇಖರನ ಹೆಂಡತಿಯಾದ ಭಾಗಿರಥಿ ಇವಳು ಇಲ್ಲಿ ಯಾಕ ನೀರು ಚೆಲ್ಲುತ್ತಿ ನಿಮ್ಮ ಜಾಗನಾಗ ಚೆಲ್ಲಿದರೆ ನಮ್ಮ ಜಾಗದಾಗ ನೀರು ಬರ್ತಾವ ರಂಡಿ ಇಲ್ಲಿ ಚೆಲ್ಲಬ್ಯಾಡ ಅಂತಾ ಅವಾಚ್ಯವಾಗಿ ಬೈಯುತ್ತಿದ್ದಾಗ ನಾನು ಹಾಗೆ ಅವಾಚ್ಯವಾಗಿ ಬೈಬೇಡಾ ಅಂತಾ ನಾನು ಹೇಳಿದಾಗ ನನಗೆನು ಹೇಳತಿ ನನ್ನ ಹಾಟ್ಯಾ ಅಂತಾ ನನಗೆ ಕೈಯಿಂದ ಕಪಾಳ ಮೇಲೆ ಹೊಡೆದಳು. ಆಗ ನನ್ನ ತಮ್ಮನಾದ ಮಹಾಂತೇಶ ಈತನು ಹೊಡೆಯಬೇಡಾ ಅಂತಾ ಜಗಳ ಬಿಡಿಸಲು ಬಂದಾಗ ಆತನನ್ನು ಕೈಯಿಂದ ಎಡಗೈ ಮೇಲೆ ಹೊಡೆದು ನುಗಿಸಿದಳು ಆಗ ನನ್ನ ತಮ್ಮನ ಕೈಗೆ ತೇರಚಿದ ಗಾಯ ಹಾಗು ಗುಪ್ತ ಗಾಯ ವಾಗಿರುತ್ತದೆ. ಆಗ ನಾನು ನನ್ನ ತಮ್ಮ ನನ್ನು ಎಬ್ಬಿಸಲು ಹೊಗುತ್ತಿದ್ದಾಗ ನನ್ನನ್ನು ತಡೆದು ನಿಲ್ಲಿಸಿ ನನ್ನ ಬಲಗೈ ಮೇಲೆ ಹೊಡೆದು ನನ್ನ ಕಣ್ಣಿನ ಮೇಲೆ ಚೂರಿ ಗಾಯಮಾಡಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೇವೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.