POLICE BHAVAN KALABURAGI

POLICE BHAVAN KALABURAGI

13 December 2018

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ.11-12-2018 ರಂದು ರಾತ್ರಿ 10-00 ಪಿ.ಎಂ.ದ ಸುಮಾರಿಗೆ ಉದನೂರದಿಂದ ನಮ್ಮ ಅಳಿಯ ಚಂದ್ರಕಾಂತ ಹಡಪದ ಇತನು ಅವರ ತಾಯಿ ಅಂದರೆ ನನ್ನ ಹೆಂಡತಿಯ ತಾಯಿ ಸುಭದ್ರಬಾಯಿ ಎಂಬುವವರು ತೀರಿಕೊಂಡಿರುತ್ತಾರೆ ಅಂತಾ ಸುದ್ದಿ ತಿಳಿಸಿದ್ದು ಇಂದು ದಿನಾಂಕ.12-12-2018 ರಂದು ನಾನು ಮತ್ತು ನನ್ನ ಹೆಂಡತಿ ನೀಲಮ್ಮಾ ಹಾಗೂ ಸಣ್ಣ ಮಗ ಶರಣು ಹಡಪದ ಕೂಡಿಕೊಂಡು ಮುಂಜಾನೆ ನಾವು ಉದನೂರಕ್ಕೆ ಬಂದಿದ್ದು ಹಾಗೂ ನನ್ನ ಮಗ ಮಲ್ಲಿಕಾರ್ಜುನ @ ಮಲ್ಲು ಹಾಗೂ ಅವನ ಹೆಂಡತಿ ಶೃತಿ ಇಬ್ಬರು ಕೂಡಾ ಉದನೂರಕ್ಕೆ ಬಂದಿದ್ದರು. ಮದ್ಯಾನ 1-45 ಪಿ.ಎಂ.ಕ್ಕೆ. ನನ್ನ ಮಗ ಮಲ್ಲು @ ಮಲ್ಲಿಕಾರ್ಜುನ ಮತ್ತು ಅವನ ಗೆಳೆಯ ಶಿವಕುಮಾರ ಪೂಜಾರಿ ಇಬ್ಬರು ಕೂಡಿಕೊಂಡು ಒಂದು ಹೀರೋ ಸ್ಪ್ಲೆಂಡರ ಮೋಟಾರ ಸೈಕಲ್ ನಂ.ಕೆ.ಎ.32. ಇ.ಇ.0541 ನೆದ್ದರ ಮೇಲೆ ಕುಣಿ ನೋಡಿಕೊಂಡು ಬರಲು ಹೋಲಕ್ಕೆ  ಹೋದರು 2-00 ಗಂಟೆಯ ಸುಮಾರಿಗೆ ನಮ್ಮ ಸಂಬಂದಿ ಶಿವಕುಮಾರ ಹಡಪದ ಇತನು ನನಗೆ ಫೋನಮಾಡಿ ನನ್ನ ಮಗ ಮಲ್ಲಿಕಾರ್ಜುನ @ ಮಲ್ಲು ಇವರಿಗೆ ಟಿಪ್ಪರ ಇಕ್ಕಿ ಹೊಡೆದಿದ್ದು ಅವರಿಗೆ ಭಾರಿ ಗಾಯವಾಗಿರುತ್ತದೆ ಅಂತಾ ತಿಳಿಸಿದನು ಆಗ ಗಾಬರಿಗೊಂಡು  ನಾನು ಮತ್ತು ನನ್ನ ಹೆಂಡತಿ ನೀಲಮ್ಮಾ ಹಾಗೂ ನನ್ನ ಸಣ್ಣ ಮಗ ಶರಣು, ನಮ್ಮ ಸಡಕ್ ಮಡಿವಾಳ ಹಡಪದ ಎಲ್ಲರೂ ಕೂಡಿಕೊಂಡು ಘಟನಾ ಸ್ಥಳಕ್ಕೆ ಹೋಗಿ ನೋಡಲಾಗಿ ನನ್ನ ಮಗ ಮಲ್ಲಿಕಾರ್ಜುನ @ ಮಲ್ಲು ಇತನಿಗೆ ನೋಡಲು ಸ್ಥಳದಲ್ಲಿಯೇ ಮೃತಪಟ್ಟಿದನು. ಅವನಿಗೆ ಗದಕ್ಕೆ ರಕ್ತಗಾಯ , ಹೊಟ್ಟೆಯ ಕೆಳಭಾಗ , ಟೊಂಕದ ಮೇಲೆ ಎರಡು ತೋಡೆಗಳ ಮಲೆ  ಟಿಪ್ಪರ ಹಾಯಿದು ಹೋಗಿದ್ದರಿಂದ ಭಾರಿರಕ್ತಗಾಯವಾಗಿ ಭಾರಿ ರಕ್ತಸ್ರಾವವಾಗಿ ಟೊಂಕದ ಮೋಲೆ ಮುರಿದಂತೆ ಆಗಿರುತ್ತದೆ , ಎಡಗಾಲು ತೊಡೆಗೆ ಭಾರಿ ರಕ್ತಗಾಯವಾಗಿತ್ತು ಮತ್ತು ಆತನ ಸಂಗಡ ಇದ್ದ ಶಿವಕುಮಾರ ತಂದೆ ಲಕ್ಷ್ಮಣ ಪೂಜಾರ ಇತನಿಗೆ ಎಡಗಣ್ಣಿ ಹುಬ್ಬಿನ ಮೇಲೆ, ಮೂಗಿಗೆ ,ಎಡಗೈಗೆ ,ಎಡತೋಡೆಯ ಹತ್ತಿರ ಅಲಲ್ಲಿ ತರಚಿದ ಗಾಯಗಳಾಗಿದ್ದು, ಅಪಘಾತಪಡಿಸಿದ ಟಿಪ್ಪರ ಕೂಡಾ ಅಲ್ಲಿಯೇ ನಿಂತಿದ್ದು ನೋಡಲಾಗಿ ನಂ.ಕೆ.ಎ.32. ಬಿ.9244 ನೆದ್ದು ಇತ್ತು ಜನರು ಸೇರುವಷ್ಟರಲ್ಲಿ ಟಿಪ್ಪರ ಚಾಲಕ ಓಡಿಹೋಗಿದ್ದು ಸದರಿಯವನಿಗೆ ನೋಡಿದಲ್ಲಿ ಗುರುತಿಸುತ್ತೆವೆ, ಆಗ ಸ್ಥಳದಲ್ಲಿಯೇ ಇದ್ದ ಘಟನೆಯನ್ನು ನೋಡಿದ ಶಿವಕುಮಾರ ಹಡಪದ ಮತ್ತು ಈರಣ್ಣ ಹಡಪದ ಇವರಿಗೆ ವಿಚಾರಿಸಲು ಮಲ್ಲಿಕಾರ್ಜುನ @ ಮಲ್ಲು ಮತ್ತು ಶಿವಕುಮಾರ ಪ್ರಜಾರಿ ಇವರು ತಮ್ಮ ಮೋಟಾರ ಸೈಕಲ್ ನಂ.ಕೆ.ಎ.32ಇಇ0541 ನೆದ್ದನ್ನು ಶಿವಕುಮಾರ ನಡೆಸುತಿದ್ದು  ಮಲ್ಲಿಕಾರ್ಜುನ ಹಿಂದೆ ಕುಳಿತಿದು ರೇವಣಸಿದ್ದ ಹಡಪದ ಇವರ ಹೊಲದ  ಮುಂದೆ ಉದನೂರದಿಂದ ಹೊಲಕ್ಕೆ ಹೋಗುತ್ತಿರುವಾಗ ಅದೇ ವೇಳಗೆ ಅವರ ಎದರುಗಡೆಯಿಂದ ಮಿಣಜಗಿ ಕಡೆಯಿಗೆ ಹೋಗುವ ರಸ್ತೆ ಮೇಲೆ ಹೋಗುವಾಗ ಅದೇವೇಳಗೆ ಅವರ ಎದರುಗಡೆಯಿಂದ ಒಂದು ಟಿಪ್ಪರ ನಂ.ಕೆ.ಎ.32. ಬಿ-9244 ನೆದ್ದರ ಚಾಲಕನು ಟಿಪ್ಪರನ್ನು ಅತೀವೇಗ ಮತ್ತು ನಿಸ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ಮಲ್ಲಿಕಾರ್ಜುನ @ ಮಲ್ಲು ಇತನು ಕುಳಿತು ಹೋಗುತಿದ್ದ ಮೋಟಾರ ಸೈಕಲಗೆ ಡಿಕ್ಕಿ ಹೊಡೆದಿದ್ದರಿಂದ ಈ ಘಟನೆ ಸಂಭವಿಸಿರುತ್ತದೆ ಅಂತಾ ತಿಳಿಸಿದನು. ನಂತರ ಒಂದು ಖಾಸಗಿ ಅಂಬುಲೆನಸದಲ್ಲಿ ಮಲ್ಲು @ ಮಲ್ಲಿಕಾರ್ಜುನ ಹಾಕಿಕೊಂಡು ಮತ್ತು ಶಿವಕುಮಾರನಿಗೆ ಕೂಡಿಸಿಕೊಂಡು ಬಂದು ಶಿವಕುಮಾರನಿಗೆ ಸನರೈಜ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ನನ್ನ ಮಗನಿಗೆ ಸರಕಾರಿ ಆಸ್ಪತ್ರೆಗೆ ತಂದು ದಾಖಲ ಮಾಡಿರುತ್ತೇವೆ. ಅಂತಾ ಶ್ರೀ. ಶ್ರೀಕಾಂತ  ತಂದೆ ಕಾಶೀರಾಯ ಹಡಪದ ಸಾ; ಗೊಬ್ಬರ (ಬಿ) ತಾ;ಅಫಜಲಪೂರ ಜಿ;ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ ಮಲ್ಲಣ್ಣ ತಂದೆ ಶೇಖಪ್ಪ ನಾಟೀಕಾರ ಸಾ|| ಆಲೂರ ಗ್ರಾಮ ರವರು ತಮ್ಮೂರಿನಲ್ಲಿ ತಮ್ಮ ಸಮಾಜದ ಲಕ್ಷ್ಮೀಬಾಯಿ ಗಂಡ ಚಂದ್ರಾಮ ಹೆಡಗಿಜೋಳ ಇವರಿಗೆ ಮಕ್ಕಳು ಇಲ್ಲದ ಕಾರಣ ಮತ್ತು ಅವರು ಹೇಳಿದಂತೆ ಅವರ ಹೊಲವನ್ನು ನಮ್ಮ ಅಣ್ಣ ಹಣಮಂತ ನಾಟೀಕಾರ ಈತನು ಹರಿಜನ ಸಮಾಜದವರಿಗೆ ಮಾಡಿಸಿಕೊಟ್ಟಿದ್ದು ಇರುತ್ತದೆ. ಈ ಬಗ್ಗೆ ಲಕ್ಷ್ಮೀಬಾಯಿ ರವರ ಅಣತಮ್ಮಕಿಯವರಾದ ಅಯ್ಯಣ್ಣ ತಂದೆ ಸೋಮರಾಯ ಹೆಡಗಿಜೋಳ ಹಾಗು ಇತರರು ಸೇರಿಕೊಂಡು ನಮ್ಮೊಂದಿಗೆ ಹಗೇ ಸಾಧಿಸುತ್ತಾ ಬಂದಿರುತ್ತಾರೆ,  ದಿನಾಂಕ 12-12-2018 ರಂದು 7;30 ಪಿ.ಎಂ ಸುಮಾರಿಗೆ ನಾನು ನಮ್ಮ ಅಣ್ಣ ಹಣಮಂತ, ಸಿದ್ದಣ್ಣ ಹಾಗು ಪರಶುರಾಮ ತಂದೆ ಬಸವರಾಜ ಹೆರೂರ ರವರೆಲ್ಲರೂ ಕೂಡಿ ನಮ್ಮೂರ ಸಿದ್ದಲಿಂಗೇಶ್ವರ ಗುಡಿ ಹತ್ತಿರ ಲೈಟಿನ ಬೆಳಕಿನಲ್ಲಿ ಮಾತನಾಡುತ್ತಾ ನಿಂತಾದ ಅದೇ ಸಮಯಕ್ಕೆ 1] ಅಯ್ಯಣ್ಣ ತಂದೆ ಸೋಮರಾಯ ಹೆಡಗಿಜೋಳ, 2] ಶಿವಪ್ಪ ತಂದೆ ಚಂದ್ರಕಾಂತ ಹೆಡಗಿಜೋಳ, 3] ವಿಶ್ವನಾಥ ತಂದೆ ಶರಣಪ್ಪ ಹೆಡಗಿಜೋಳ, 4] ಹಣಮಂತ ತಂದೆ ಮಹಾಂತೇಶ ಹೆಡಗಿಜೋಳ, 5] ಭೀಮಣ್ಣ ತಂದೆ ಸಿದ್ದಣ್ಣ ಹೆಡಗಿಜೋಳ, 6] ಚಂದ್ರಕಾಂತ ತಂದೆ ಬಸಪ್ಪ ಹೆಡಗಿಜೋಳ, 7] ಮಹಾಂತೇಶ ತಂದೆ ಚಂದ್ರಕಾಂತ ಹೆಡಗಿಜೋಳ, 8] ಬಸವರಾಜ ತಂದೆ ಹಣಮಂತ ಹೆಡಗಿಜೋಳ, 9] ಯಮನೂರಪ್ಪ ತಂದೆ ಈರಣ್ಣ ಹೆಡಗಿಜೋಳ, 10] ಬಸವರಾಜ ತಂದೆ ಭೀಮರಾಯ ಹೆಡಗಿಜೋಳ, 11] ಹುಲಕಂಠ ತಂದೆ ಶಿವಶರಣಪ್ಪ ಹೆಡಗಿಜೋಳ, 12] ಶಿವರಾಯ ತಂದೆ ಶಿವಶರಣಪ್ಪ ಹೆಡಗಿಜೋಳ, 13] ಶಿವಶರಣಪ್ಪ ತಂದೆ ಗೊಲ್ಲಾಳಪ್ಪ ಹೆಡಗಿಜೋಳ, 14]  ಶಿವು ತಂದೆ ಬಸವರಾಜ ಹೆಡಗಿಜೋಳ, 15] ಸುರೇಶ ತಂದೆ ಯಮನಪ್ಪ ಹೆಡಗಿಜೋಳ, 16] ಮಲ್ಲಣ್ಣ ತಂದೆ ಯಮನಪ್ಪ ಹೆಡಗಿಜೋಳ, 17] ಬಸವರಾಜ ತಂದೆ ಶಿವರಾಯ ಹೆಡಗಿಜೋಳ, 18] ಈರಣ್ಣ ತಂದೆ ಬೀಮರಾಯ ಹೆಡಗಿಜೋಳ, 19] ಶಿವಪ್ಪ ತಂದೆ ಬಸವಂತ ಹೆಡಗಿಜೋಳ, 20] ಶಿವಪ್ಪ ತಂದೆ ಶರಣಪ್ಪ ಹೆಡಗಿಜೋಳ, 21] ರಾಜಪ್ಪ ತಂದೆ ಗೊಲ್ಲಾಳಪ್ಪ ಹೆಡಗಿಜೋಳ, 22] ಸಿದ್ದಪ್ಪ ತಂದೆ ಮಹಾದೇವಪ್ಪ ಹೆಡಗಿಜೋಳ, 23] ಮಲ್ಲಪ್ಪ ತಂದೆ ಮಹಾದೇವಪ್ಪ ಹೆಡಗಿಜೋಳ, 24] ರಾಜು ತಂದೆ ಬಸವರಾಜ ಹೆಡಗಿಜೋಳ, 25] ರಾಜು ತಂದೆ ಶಿವರಾಯ ಹೆಡಗಿಜೋಳ ಸಾ|| ಎಲ್ಲರು ಆಲೂರ ಗ್ರಾಮದ ರವರೆಲ್ಲರೂ ಗುಂಪು ಕಟ್ಟಿಕೊಂಡು ಕೈಯಲ್ಲಿ ಕಲ್ಲು ಬಡಿಗೆಗಳನ್ನು ಹಿಡಿದುಕೊಂಡು ನಮ್ಮ ಹತ್ತಿರ ಬಂದು ನಮಗೆ ಹೋಗದಂತೆ ತಡೆದು ನಿಲ್ಲಿಸಿ ಈ ಸೂಳಿ ಮಕ್ಕಳಿಗೆ ಹೊಡೆದು ಖಲಾಸೆ ಮಾಡರೋ ಅಂತಾ ಅನ್ನುತ್ತಿದ್ದರು, ಅವರಲ್ಲಿ ಅಯ್ಯಣ್ಣ ಇವನು ಏ ಸೂಳಿ ಮಕ್ಕಳ್ಯಾ ನಮ್ಮ ಆಸ್ತಿ ಮಂದಿಗಿ ಮಾರಲಾಕ ನಿವ್ಯಾರೋ ಅಂತಾ ಅಂದು ಕೊಲೆ ಮಾಡುವ ಉದ್ದೇಶದಿಂದ ನಮ್ಮ ಅಣ್ಣ ಹಣಮಂತನ ತಲೆಯ ಮೇಲೆ ಜೋರಾಗಿ ಎರಡು ಸಲ ಹೋಡೆದು ಭಾರಿ ರಕ್ತಗಾಯ ಪಡಿಸಿದನು, ಆಗ ನಮ್ಮ ಅಣ್ಣ ಹಣಮಂತ ನೆಲದಮೇಲೆ ಬಿದ್ದಾಗ ಶಿವಪ್ಪ ಮತ್ತು ವಿಶ್ವನಾಥ ರವರು ಬಡಿಗೆಗಳಿಂದ ನಮ್ಮ ಅಣ್ಣನ ಬೆನ್ನಿನ ಮೇಲೆ, ಬಲಭುಜದ ಮೇಲೆ ಮತ್ತು ಎಡಗಾಲಿಗೆ ಹಾಗು ಬಲಗೈ ಮಣಿಕಿಟ್ ಹತ್ತಿರ  ಹೊಡೆದು ಗುಪ್ತ ಪೆಟ್ಟು ಪಡಿಸಿರುತ್ತಾರೆ, ಹಣಮಂತ ತಂದೆ ಮಹಾಂತೇಶ ಮತ್ತು ಭೀಮಣ್ಣ ತಂದೆ ಸಿದ್ದಣ್ಣ ರವರು ನಮ್ಮ ಅಣ್ಣ ಸಿದ್ದಣ್ಣನಿಗೆ ಕೈಯಿಂದ ಮೈ ಕೈಗೆ ಹೊಡೆ ಬಡೆ ಮಾಡುತ್ತಿದ್ದಾಗ ಚಂದ್ರಕಾಂತ ಈತನು ಕಲ್ಲಿನಿಂದ ಸಿದ್ದಣ್ಣನ ಬಲ ತಲೆಗೆ ಹೊಡೆದು ರಕ್ತಗಾಯ ಪಡಿಸಿದನು, ಆಗ ನಮ್ಮ ಅಣ್ಣ ಸಿದ್ದಣ್ಣ ನೆಲಕ್ಕೆ ಬಿದ್ದಾಗ ಮಹಾಂತೇಶ ತಂದೆ ಚಂದ್ರಕಾಂತ ಈತನು ಕಲ್ಲಿನಿಂದ ಅವನ ಎದೆಯ ಮೇಲೆ ಹೊಡೆದು ಗುಪ್ತಪೆಟ್ಟು ಪಡಿಸಿರುತ್ತಾನೆ, ಬಸವರಾಜ ತಂದೆ ಹಣಮಂತ ಮತ್ತು ಯಮನೂರಪ್ಪ ತಂದೆ ಈರಣ್ಣ ರವರು ನನಗೆ ಎಳೆದಾಡಿ ನೆಲಕ್ಕೆ ಕೆಡವಿದರು, ಆಗ ಬಸವರಾಜ ತಂದೆ ಬೀಮರಾಯ ಹಾಗು ಹುಲಕಂಠ ತಂದೆ ಶಿವಶರಣಪ್ಪ ರವರು ಬಡಿಗೆಗಳಿಂದ ನನ್ನ ಮೊಳಕಾಲ ಕೆಳಗೆ, ಬಲಗೈ ಮೊಳಕೈ ಹತ್ತಿರ, ಬೆನ್ನಿನ ಮೇಲೆ ಭುಜದ ಮೇಲೆ ಹಾಗು ತಲೆಯ ಮೇಲೆ ಹೊಡೆದು ಗುಪ್ತಪೆಟ್ಟುಪಡಿಸಿರುತ್ತಾರೆ, ಆಗ ನಮ್ಮೋಂದಿಗೆ ಇದ್ದ ಪರಶುರಾಮ ಹೆರೋರ ಈತನಿಗೆ ಶಿವರಾಯ ತಂದೆ ಶಿವಶರಣಪ್ಪ, ಶಿವಶರಣಪ್ಪ ತಂದೆ ಗೊಲ್ಲಾಳಪ್ಪ ರವರು ಎಳೆದಾಡಿ ನೆಲಕ್ಕೆ ಕೆಡವಿದ್ದರಿಂದ ಅವನ ಬಲ ಹಣೆಯ ಹತ್ತಿರ ಒಳೆಟ್ಟಾಗಿರುತ್ತದೆ, ನಂತರ ಇನ್ನುಳಿದವರೆಲ್ಲರು ಸೇರಿಕೊಂಡು ಇವತ್ತ ಇವರಿಗೆ ಹೊಡೆದು ಖಲಾಸೆ ಮಾಡೋಣಾ ಅಂತಾ ಅನ್ನುತ್ತಾ ನಮಗೆ ಕೈಯಿಂದ ಕಾಲಿನಿಂದ ಹೊಡೆ ಬಡೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲೈಂಗಿಕ ದೌರ್ಜನ್ಯವೆಸಗಿದ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀಮತಿ ರವರು 7 ತಿಂಗಳ ಹಿಂದೆ ನಾನು ಬಾಣೆತನಕ್ಕೆ ನನ್ನ ತವರೂರಿಗೆ ಬಂದಿದ್ದು ನನಗೆ 6 ತಿಂಗಳದ ಒಂದು ಹೆಣ್ಣು ಮಗು ಇರುತ್ತದೆ. ಬಿರಾಳ ಹಿಸ್ಸಾ ಗ್ರಾಮದ ಕಾಂತಪ್ಪ ತಂದೆ ಮಲ್ಲಪ್ಪ ಬರಗುಡಿ ಈತನು ಈಗ 2-3 ತಿಂಗಳಿಂದ ನನಗೆ ನೋಡುವುದು, ನನ್ನ ಹಿಂಬಾಲಿಸುವುದು, ಹಾಗು ಚುಡಾಯಿಸುವುದು ಮಾಡುತ್ತಿದ್ದನು, ಆಗ ನಾನು ಅವನಿಗೆ ನನ್ನ ಮದುವೆಯಾಗಿದೆ, ನನಗೆ ಚುಡಾಯಿಸುವುದು ಮಾಡಬೇಡಾ ಅಂತಾ ತಿಳಿಸಿ ಹೇಳಿದರು ಕೇಳದೆ ಅದೇ ರೀತಿ ನನಗೆ ಚುಡಾಯಿಸುತ್ತಾ ಬಂದಿರುತ್ತಾನೆ. ದಿನಾಂಕ 09-11-2018 ರಂದು ರಾತ್ರಿ 11;00 ಗಂಟೆಗೆ ನಾನು ಬೈಹಿರದೇಸೆ ಹೋದಾಗ ಕಾಂತಪ್ಪ ಬರಗುಡಿ ಮತ್ತು ಅವರ ಮಾವ  ಗೋಲಗೇರಿ ಗ್ರಾಮದ ಸಿದ್ದಪ್ಪ ಇವರುಗಳು ಒಮ್ಮೇಲೆ ನನ್ನ ಎದುರುಗಡೆ ಬಂದು ನನ್ನ ಬಾಯಿಗೆ ಬಟ್ಟೆ ಒತ್ತಿ ಹಿಡಿದರು, ನೀನು ಚೀರಾಡಿದರೇ ನಿನಗೆ ಖಲಾಸೆ ಮಾಡುತ್ತೇವೆ ಅಂತಾ ಅಂದು ನನಗೆ ಎತ್ತಿಕೊಂಡು ಒಂದು ಮೋಟರ ಸೈಕಲ್ ಮೇಲೆ ಮದ್ಯದಲ್ಲಿ ಕೂಡಿಸಿಕೊಂಡು ಅಲ್ಲಿಂದ ಕಾಂತಪ್ಪ ರವರ ಕಬ್ಬಿನ ಹೊಲಕ್ಕೆ ಕರೆದುಕೊಂಡು ಹೋದರು, ನಂತರ ಸಿದ್ದಪ್ಪ ಇವನು ಕೆಲಸಾ ಇದೇ ಅಂತ ಹೇಳಿ ಅಲ್ಲಿಂದ ಹೋದಾಗ ಕಾಂತಪ್ಪ ಇವನು ನನಗೆ ಜಬರದಸ್ತಿಯಿಂದ ಸಂಬೋಗ ಮಾಡಿರುತ್ತಾನೆ, ಅಂದು ರಾತ್ರಿ ಹೊಲದಲ್ಲೆ ಇದ್ದು, ಬೆಳಗಿನ ಜಾವ ಕಾಂತಪ್ಪ ಇವನು ಅಂಜಿಸಿ ಅಲ್ಲಿಂದ ನನಗೆ ಮೇನ ರೋಡಿಗೆ ಕರೆದುಕೊಂಡು ಹೋಗಿ ಬಿಜಾಪೂರಕಡೆ ಹೋಗುವ ಯಾವುದೋ ಒಂದು ಬಸ್ಸಿನಲ್ಲಿ ಕೂಡಿಸಿಕೊಂಡು ಹೋಗಿ ನಂತರ ಮಹಾರಾಷ್ಟ್ರಾದ ಬಂಡರಕವಟೆ ಹತ್ತಿರ ಇದ್ದ ತೆಲಗಾಂವ ಗ್ರಾಮದ ಸುರೇಶ ಪಾಟೀಲ ಎಂಬುವರ ಹೊಲದಲ್ಲಿರುವ ಮನೆಯಲ್ಲಿ ಇಟ್ಟನು, ಕಾಂತಪ್ಪ ಇವನು ನಿನಗ ಕಿಡ್ನ್ಯಾಪ ಮಾಡಿದ ವಿಷಯ ಯಾರಿಗಾದರು ಹೇಳಿದರೆ ಇಲ್ಲೇ ಖಲಾಸ ಮಾಡುತ್ತೇನೆ ಅಂತಾ ಅಂದಿದ್ದಕ್ಕೆ ನಾನು ಅಂಜಿ ಸುಮ್ಮನಾಗಿದ್ದೇ, ಹೊಲದ ಮಾಲಿಕ ಸುರೇಶ ಪಾಟೀಲ ರವರು ಕೇಳಿದಾಗ ಕಾಂತಪ್ಪ ಇವನು ನಾವಿಬ್ಬರು ಗಂಡ ಹೆಂಡತಿ ಇರುತ್ತೇವೆ ಅಂತಾ ಅವರಿಗೆ ಹೇಳಿರುತ್ತಾನೆ, ನಂತರ ಕಾಂತಪ್ಪ ಇವನು ನನಗೆ ದಿನಾಲು ರಾತ್ರಿವೇಳೆಯಲ್ಲಿ ಒತ್ತಾಯಪೂರ್ವಕವಾಗಿ ಪದೆ ಪದೆ ಸಂಭೋಗ ಮಾಡಿರುತ್ತಾನೆ, ನಿನ್ನೆ ರಾತ್ರಿಯು ಸಹ ಕಾಂತಪ್ಪ ಇವನು ನನಗೆ ಅಂಜಿಸಿ ಸಂಭೊಗ ಮಾಡಿರುತ್ತಾನೆ, ಇಂದು ಪೊಲೀಸನವರು ನಾವು ಇದ್ದ ಜಾಗಕ್ಕೆ ಬಂದಾಗ ಅವರಿಗೆ ನೋಡಿ ಕಾಂತಪ್ಪ ಇವನು ಅಲ್ಲಿಂದ ಓಡಿ ಹೋದನು, ನಂತರ ನನಗೆ ನಿಮ್ಮೊಂದಿಗೆ ಠಾಣೆಗೆ ಕರೆದುಕೊಂಡು ಬಂದಿದ್ದು ಇರುತ್ತದೆ, ಕಾಂತಪ್ಪ ಮತ್ತು ಅವರ ಮಾವ ಸಿದ್ದಪ್ಪ ಸಾ|| ಗೊಲಗೇರಿ ರವರು ದಿನಾಂಕ 09-11-2018 ರಂದು 11;00 ಪಿ.ಎಂ ಕ್ಕೆ ನಮ್ಮೂರಲ್ಲಿ ನಾನು ಬೈಹಿರದೇಸೆಗೆ ಹೋದಾಗ ನನಗೆ ಅಪಹರಣಮಾಡಿಕೊಂಡು ಹೋಗಿ ಕಾಂತಪ್ಪ ಇವನು ಜೀವ ಭಯ ಹಾಕಿ ಪದೇ ಪದೇ ಲೈಂಗಿಕ ದೌರ್ಜನ್ಯವೆಸಗಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.