POLICE BHAVAN KALABURAGI

POLICE BHAVAN KALABURAGI

10 July 2017

Kalaburagi District Reported Crimes

ಹಲ್ಲೆ ಮಾಡಿ ಜಾತಿನಿಂದನೆ ಮಾಡಿದ ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀ ಶಿವಕುಮಾರ ತಂದೆ ಸಿದ್ದಪ್ಪ ಸನಾದಿ ಸಾ: ಮಿಲತ ನಗರ ಶಹಾಬಾದ ಇವರು ದಿನಾಂಕ: 08/07/2017 ರಂದು ರಾತ್ರಿ ಇವರ ಅಣ್ಣ ಶರಣು ಇತನು ದುರ್ಗಾ ಬಾರ ಹತ್ತಿರ ಹಿಟ್ಟಿನ ಗಿರಣೀ ಎದುರು ರಸ್ತೆಯಲ್ಲಿ ನನ್ನ ಅಣ್ಣನೊಂದಿಗೆ  ಅಬ್ದುಲ ರಹೀಮ ಚಿತ್ತಾಪೂರ ಹಾಗೂ ಇತರರು ಸೇರಿ ಜಗಳ ಮಾಡುತ್ತಿದ್ದಾರೆ ಅಂತಾ ವಿಷಯ ಗೊತ್ತಾಗಿ ಅಲ್ಲಿಗೆ ಹೋಗಿ ನೊಡಲಾಗಿ ನಮ್ಮ ಅಣ್ಣನೊಂದಿಗೆ ಅಬ್ದುಲ ರಹೀಮ ಮತ್ತು ರಿಯಾಜ ಪಠಾಣ ಇವರು ಗಿರಣಿಯ ಹತ್ತಿರ ರಸ್ತೆಯ ಪಕ್ಕದಲ್ಲಿ ನಿಂತಿದ್ದ ನಮ್ಮ ಅಣ್ಣನಿಗೆ ರಾಂಡಕಾ ಬೇಟಾ ರಸ್ತೆಕೊ ಗಾಡಿ ಲಗಾಲೇಕೆ ಠೈರತೆ ಭೊಸಡಿಕೆ ಅಂತಾ ತಕರಾರು ಮಾಡುತ್ತಿದರು ಅದಕ್ಕೆ ನಮ್ಮ ಅಣ್ಣ ಮೈ ಸೈಡಮೇ ಠೈರಾಹುಂ ಬಾಜುಸೆ ಜಾವು ರಸ್ತಾಹೈನಾ ಅಂತಾ ಅನ್ನುವಾಗ ಅವರಲ್ಲಿ ರಿಯಾಜ ಇತನು ನಮ್ಮ ಅಣ್ಣನಿಗೆ ಎದೆಯ ಮೇಲಿನ ಅಂಗಿ ಹಿಡಿದು ನನ್ನ ಅಣ್ಣನಿಗೆ ಕೈಯಿಂದ ಹೊಟ್ಟೆಗೆ ಮೈ ಕೈಗೆ ಹೊಡೆದು ನಮ್ಮ ಅಣ್ಣ ಎಡಕ್ಕೆ ಹಿಡಿದು ತಿರುವುತ್ತಿದದನು ಆಗ ನಮ್ಮ ಅಣ್ಣ ಸತ್ತೇನೆಪ್ಪೋ ಅಂತಾ ಚಿರಾಡುವಾಗ ಸ್ಥಳದಲ್ಲಿದ್ದ ನಾನು ಮತ್ತು ಗೊವಿಂದ ಗೊಟೆಕರ , ಶರತ ತಂದೆ ಶಿವು ಎಲ್ಲಾರೂ ಕೂಡಿ ಜಗಲ ಬಿಡಿಸುವಾಗ ಅಬ್ದುಲ ರಹಿಮ ಇತನು ನಮ್ಮ ಅಣ್ಣನಿಗೆ ಕುತ್ತಿಗೆಗೆ ಕೈ ಹಾಕಿ ನೆಲಕ್ಕೆ ದಬ್ಬಿಸಿದಾಗ  ತಲೆಯ ಹಿಂಬಾಗಕ್ಕೆ ಗುಪ್ತಪೆಟ್ಟಾಗಿ ಬಿದ್ದಾಗ ಇತರೆ 4-5 ಜನ ಬಂದು ಎಲ್ಲಾರು ಸೇರಿ ನಮ್ಮ  ಅಣ್ಣನಿಗೆ ಮಾರೋ ಅಂತಾ ಅವಾಚ್ಯವಾಗಿ ಬೈದು ಜಾತಿ ಎತ್ತಿ ಬೈಯ್ದು ಹೊಡೆಬಡೆ ಮಾಡಿ ಬಿಟ್ಟು ಹೋಗುವಾಗ ಜೀವದ ಭಯ ಹಾಕುತ್ತಾ ಹೋದರು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಜಗದೀಶ ತಂದೆ ರಾಜಶೇಖರ ಅಂಬಲಗಿ ಸಾ: ತಾಜ ಸುಲ್ತಾನಪೂರ ಗ್ರಾಮ ತಾ:ಜಿ: ಕಲಬುರಗಿ ರವರು ದಿನಾಂಕ 08/07/17 ರಂದು ಸಂಜೆ ತಾಜ ಸುಲ್ತಾನಪೂರ  ಗ್ರಾಮ ಮಲ್ಲಿನಾಥ ದೇವರ ಗುಡಿ ಕಟ್ಟೆಯ ಮೇಲೆ ಕುಳಿತಾಗ ಅಲ್ಲಿಗೆ ಆರೋಪಿ ಸಂಗಮೇಶ ತಂದೆ ರೇವಪ್ಪ ನಿಂಬರ್ಗಿ ಇತನು ಬಂದು ಫಿರ್ಯಾದಿಗೆ ಸರಾಯಿ ಕುಡಿಯಲಿಕ್ಕೆ 100 ರೂ. ಕೊಡು ಅಂತಾ ಕೇಳಿದನು. ಅದಕ್ಕೆ ನನ್ನ ಹತ್ತಿರ ಸಧ್ಯ ಅಷ್ಟೊಂದು ಹಣವಿಲ್ಲಾ ಅಂತಾ ಹೇಳಿದ್ದಕ್ಕೆ ಅದೇ ವೈಮನಸ್ಸಿನಿಂದ ಫಿರ್ಯಾದಿಗೆ ಕೊಲೆ ಮಾಡುವ ಉದ್ಧೇಶದಿಂದ ಚಾಕುದಿಂದ ಫಿರ್ಯಾದಿ  ಹೊಟ್ಟೆಗೆ ಹೊಡೆಯಲು  ಆ ಏಟು ತಪ್ಪಿಸಿಕೊಳ್ಳಲು ಅವನ ಎಡಗೈ ಅಡ್ಡ ತಂದಾಗ ಎಡಗೈ ರಟ್ಟೆಯ ಮೇಲೆ ಚಾಕು ಬಡಿದು ರಕ್ತಗಾಯವಾಯಿತು. ಫಿರ್ಯಾದಿ ಎಡಗೈ ಅಡ್ಡ ತರದಿದ್ದರೇ ಅವನ ಹೊಟ್ಟೆಗೆ ಚಾಕು ಹೊಡೆದು ಕೊಲೆ ಮಾಡಿಯೇ ಬಿಡುತ್ತಿದ್ದನು. ಮತ್ತು  ಅದೇ ಚಾಕುದಿಂದ ಫಿರ್ಯಾದಿ  ಎಡ ಕುತ್ತಿಗೆಯ ಹಿಂಭಾಗದ ಮೇಲೆ ಹೊಡೆದು ಭಾರಿ ರಕ್ತಗಾಯಗೊಳಿಸಿ ಮರಣಾಂತಿಕ ಹಲ್ಲೆ ಮಾಡಿ ಓಡಿ ಹೋದ ಸಂಗಮೇಶ ತಂದೆ ರೇವಪ್ಪ ನಿಂಬರ್ಗಿ ಸಾ: ತಾಜ ಸುಲ್ತಾನಪೂರ ಇತನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.