POLICE BHAVAN KALABURAGI

POLICE BHAVAN KALABURAGI

24 March 2013

GULBARGA DISTRICT


:: ಗುಲಬರ್ಗಾ ಜಿಲ್ಲಾ ಪೊಲೀಸ್ ರ ಕಾರ್ಯಚರಣೆ ::
:: ಒಂದು ವಾರದ ಹಿಂದೆ ಕೊಲೆ ಮಾಡಿದ ಆರೋಪಿತರ ಬಂಧನ::
       ಗುಲಬರ್ಗಾ ನಗರದ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಉದನೂರ ಸಮೀಪ ದಿನಾಂಕ:17-03-2013 ರಂದು ಸುರೇಶ ತಂದೆ ಜನಕರಾಜ ಮೂಲಗೆ ಇತನನ್ನು ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಆರೋಪಿಗಳ ಪತ್ತೆ ಕುರಿತು ಮಾನ್ಯ ಶ್ರೀ ಎನ್. ಸತೀಶಕುಮಾರ್. ಐ.ಪಿ.ಎಸ್.. ಪೊಲೀಸ್ ಅಧೀಕ್ಷಕರು ಗುಲಬರ್ಗಾ, ಮಾನ್ಯ ಶ್ರೀ ಕಾಶಿನಾಥ ತಳಕೇರಿ ಅಪರ ಪೊಲೀಸ್ ಅಧೀಕ್ಷಕರು, ಗುಲಬರ್ಗಾ, ಹಾಗೂ ಶ್ರೀ ತಿಮ್ಮಪ್ಪಾ ಡಿ.ಎಸ್.ಪಿ ಗ್ರಾಮೀಣ ಉಪ-ವಿಭಾಗ ಗುಲಬರ್ಗಾರವರ ಮಾರ್ಗದರ್ಶನದಲ್ಲಿ ಶ್ರೀ,ಕೆ.ಎಮ್.ಸತೀಷ ಗ್ರಾಮೀಣ ವೃತ್ತ ರವರ ನೇತ್ರತ್ವದಲ್ಲಿ ಪಿ.ಎಸ.ಐ ರವರ ಆನಂದರಾವ ಎಸ್.ಎನ್., ಗಜಾನನ ಪಿ.ಎಸ.ಐ (ಪ್ರೋ) ಹಾಗೂ ಸಿಬ್ಬಂದಿಯವರಾದ ಸಂಜೀವರೆಡ್ಡಿ, ಹಣಮಂತ, ಕೇಶವ ಬಿರಾದಾರ, ನರಸಿಂಹ, ರಾಜಕುಮಾರ, ಹಾಗೂ ಮಲ್ಲಿಕಾರ್ಜುನ ರವರು ಕೂಡಿಕೊಂಡು ಕೊಲೆ ಮಾಡಿದ ಆರೋಪಿಗಳಾದ 1) ಅಮಿತ ತಂದೆ ವಿಜಯಕುಮಾರ ಕೊರಳ್ಳಿ, 2) ಜೈ ಭೀಮ @ ಬಿಲ್ಲಾ ತಂದೆ ಶಿವಲಿಂಗಪ್ಪಾ ಕೊರಳ್ಳಿ, 3) ಪ್ರಕಾಶ ತಂದೆ ಬಾಬುರಾವ ಕೊರಳ್ಳಿ, 4) ಪವನ ತಂದೆ ಶಿವಲಿಂಗಪ್ಪಾ ಸಾವಳಗಿ ಸಾ|| ಎಲ್ಲರೂ ತಾ||ಜಿ|| ಗುಲಬರ್ಗಾ,  5) ಮಲ್ಲಿಕಾರ್ಜುನ ತಂದೆ ಹಾಜಪ್ಪಾ ರದ್ದೋಡಗಿ ಸಾ|| ಶಹಾಬಾದ ರವರನ್ನು ಶಹಾಬಾದ ರೋಡಿಗೆ ಇರುವ ಶಹಾಬಾದ ಪಟ್ಟಣದ ವಾಡಿ ಕ್ರಾಸ ಹತ್ತಿರ  5 ಜನ ಕೊಲೆ  ಮಾಡಿದ ಆರೋಪಿತರನ್ನು ಬಂಧಿಸಿರುತ್ತಾರೆ.
ಕೊಲೆ ಮಾಡಿದ ಈ ಐದು (5) ಜನ ಆರೋಪಿತರನ್ನು ಪತ್ತೆ ಮಾಡಿದ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಯವರಿಗೆ ಮಾನ್ಯ ಶ್ರೀ ಎನ್. ಸತೀಷಕುಮಾರ  ಐ.ಪಿ.ಎಸ್,. ಪೊಲೀಸ್ ಅಧೀಕ್ಷಕರು ಗುಲಬರ್ಗಾರವರು ಶ್ಲಾಘಿಸಿರುತ್ತಾರೆ.


GULBARGA DISTRICT REPORTED CRIMES


ಮಂಗಳಸೂತ್ರ ದರೋಡೆ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ:ದಿನಾಂಕ:23-03-2013 ರಂದು ರಾತ್ರಿ 8-00 ಗಂಟೆ ಸುಮಾರಿಗೆ ನಾನು  ಮತ್ತು ಶ್ರೀದೇವಿ ಪಾಟೀಲ ಅನ್ನುವವರು ಕೂಡಿಕೊಂಡು ಪಿ & ಟಿ ಕಾಲೋನಿಯಿಂದ ಸ್ಪೋಕನ್ ಇಂಗ್ಲೀಷ ಕ್ಲಾಸ್ ಮುಗಿಸಿಕೊಂಡು ವರ್ಗಿಸ್ ಪ್ಲಾಟ ಹಿಂದೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ, ಎದುರುಗಡೆಯಿಂದ ಒಬ್ಬ ಕಪ್ಪು ಬಣ್ಣದ ಪಲ್ಸರ ಗಾಡಿಯ ಸವಾರನು ಬಂದವನೇ ನನ್ನ  ಕೊರಳಲ್ಲಿದ್ದ 3.5 ತೊಲೆಯ ಬಂಗಾರದ ಮಂಗಳಸೂತ್ರ  ಕಿತ್ತುಕೊಂಡು ಹೋದನು. ಪಲ್ಸರ ಗಾಡಿ ನಂಬರ ಕಾಣಲಿಲ್ಲಾ. ಅವನು ದಪ್ಪಗಿದ್ದು ಕಪ್ಪು ನೀಲಿ ಬಣ್ಣದ ಚೆಕ್ಸ  ಶರ್ಟ ಧರಿಸಿರುತ್ತಾನೆ.ಅಂತಾ ಶ್ರೀಮತಿ ನಿರ್ಮಲಾ ಗಂಡ ಈರಣ್ಣಗೌಡ ಪಾಟೀಲ  ಸಾ:ಟೋಣ್ಣೂರ ತಾ:ಶಹಾಪುರ ಹಾ||ವ||ಸಂತೋಷ ಕಾಲೋನಿ ಉದನೂರ ಗುಲಬರ್ಗಾರವರು  ದೂರು ಸಲ್ಲಿಸಿದ್ದರಿಂದ ಠಾಣೆ ಗುನ್ನೆ ನಂ:42/2013 ಕಲಂ, 392 ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.
ದರೋಡೆಗೆ ಪ್ರಯತ್ನ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ: ದಿನಾಂಕ:23-03-2013 ರಂದು ಬೆಳಗಿನ 3-  ಗಂಟೆ ಸುಮಾರಿಗೆ ಹುಮನಬಾದ ಮುಖ್ಯ ರಸ್ತೆಯ ತಾವರಗೇರಾ ಬಸ್ಸ ಸ್ಟಾಂಡ್ ಹತ್ತಿರ ಕೆಲವು ಜನರು ಮುಖಕ್ಕೆ ಕಪ್ಪು ಬಟ್ಟೆ ಕಟ್ಟಿಕೊಂಡು ಮಾರಕ ಅಸ್ತ್ರಗಳು ಹಿಡಿದುಕೊಂಡು ಹೋಗಿ ಬರುವ ವಾಹನಗಳಿಗೆ ನಿಲ್ಲಿಸಿ ದರೋಡೆ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ ಅಂತಾ ಭಾತ್ಮಿ ಮೇರೆಗೆ ಪಿ.ಎಸ.ಐ ಆನಂದರಾವ ಮತ್ತು ಸಿಬ್ಬಂದಿಯವರು ದಾಳಿ ಮಾ ದರೋಡೆಗೆ ಪ್ರಯತ್ನ ಮಾಡುತ್ತಿರುವವರಾದ ನಾಗರಾಜ ತಂದೆ ಚೆನ್ನವೀರಪ್ಪಾ ಬೆಡಪಲ್ಲಿ ಸಾ|| ರಾಮನಗರ ಗುಲಬರ್ಗಾ, ಮಲ್ಲಿಕಾರ್ಜುನ @  ಮಲ್ಲು ತಂದೆ ಕಾಶಿನಾಥ ಅಲ್ಲಾಪೂರ ಸಾ|| ರಾಮ ನಗರ ಗುಲಬರ್ಗಾ, ರವಿ ತಂದೆ ನಾಗೇಂದ್ರಪ್ಪಾ ಹಲಚೇರಿಕರ ಸಾ|| ಸುಲ್ತಾನಪೂರ , ಸುಭಾಶ ತಂದೆ ಬಾಬುರಾವ ಜಮಾದಾರ ಸಾ|| ಪಿಲ್ಟರ ಬೇಡ್ ಗುಲಬರ್ಗಾ, ವೆಂಕಟೇಶ  @ ವೆಂಕಟ ಗೌಳಿ ಸಾ|| ಉಪಳಾಂವ ಮತ್ತು ಅಶೋಕ ತಂದೆ ಬಾಬುರಾವ ಸಾ|| ಬಾಪೂ ನಗರ ಗುಲಬರ್ಗಾ ರವರನ್ನು ವಶಕ್ಕೆ ತೆಗೆದುಕೊಂಡು ಅವರಿಂದ ಮಾರಕ ಅಸ್ತ್ರಗಳು, ಹಗ್ಗ, ಮಚ್ಚುಗಳು, ಇಂಡಿಕಾ ಕಾರ ನಂ: ಕೆಎ-32 ಎಮ್-8620 ನೇದ್ದವುಗಳುಡಿ ಜಪ್ತಿ ಮಾಡಿಕೊಂಡು ಠಾಣೆ ಗುನ್ನೆ  ನಂ:149/2013 ಕಲಂ, 399, 402 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.