POLICE BHAVAN KALABURAGI

POLICE BHAVAN KALABURAGI

28 August 2017

Kalaburagi District Reported Crimes

ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ:27/08/2017 ರಂದು ರಾಘವೇಂದ್ರ ನಗರ , ಠಾಣಾ ವ್ಯಾಪ್ತಿಯ ಓಂಕಾರೇಶ್ವರ ಗುಡಿ ಹಿಂದೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತುಕೊಂಡು ಇಸ್ಪಿಟ ಎಲೆಗಳ ಸಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿದ್ದಾರೆ ಅಂತ ಬಾತ್ಮಿ ಬಂದ ಮೇರೆಗೆ ಶ್ರೀಮತಿ ಅಕ್ಕಮಹಾದೇವಿ ಪಿ.ಎಸ್.ಐ. ರಾಘವೇಂದ್ರ ನಗರ ಠಾಣೆ ಮತ್ತು ಸಿಬ್ಬಂದಿ ಮತ್ತು ಪಂಚರೊಂದಿಗೆ  ಬಾತ್ಮಿ ಸ್ಥಳಕ್ಕೆ  ಹೋಗಿ ಮರೆಯಲ್ಲಿ ನಿಂತು ನೋಡಲು ಗುಡಿಯ ಹಿಂದೆ ಸಾರ್ವಜನಿಕ ಸ್ಥಳದಲ್ಲಿ 9-10 ಜನರು ದುಂಡಾಗಿ ಕುಳಿತು ಇಸ್ಪಿಟ ಎಲೆಗಳ ಸಹಾಯದಿಂದ ಜೂಜಾಟವನ್ನು ಆಡುತ್ತಿರುವದನ್ನು ಖಾತ್ರಿ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಅವರ ಹೆಸರು ವಿಳಾಸ ಕೇಳಿ ಅಂಗ ಜಡ್ತಿ ಮಾಡಲು 1) ಮಹಾದೇವ ತಂದೆ ಶಿವರಾಯ ಕೊಗನೂರ ಸಾ:ಸಂಜೆಯ ಗಾಂದಿ ನಗರ ಕಲಬುರಗಿ 2) ಹಣಮಂತ ತಂದೆ ಶಂಕ್ರೆಪ್ಪಾ ಬೆಡಜೂರಗಿ ಸಾ:ಸಂಜೆಯ ಗಾಂಧಿ ನಗರ ಕಲಬುರಗಿ 3) ಮಡೆಪ್ಪಾ ತಂದೆ ಲಾಯಪ್ಪಾ ಉಪ್ಪಾರ ಸಾ:ದುಬೈ ಕಾಲೋನಿ ಕಲಬುರಗಿ 4) ರೆವಣಸಿದ್ದ ತಂದೆ ಹಣಮಂತಪ್ಪಾ ಜಮಾದಾರ ಸಾ:ಬಿದನೂರ ಹಾ;: ದುಬೈ ಕಾಲೋನಿ ಕಲಬುರಗಿ 5) ಮಹಾದೇವಪ್ಪಾ ತಂದೆ ಹಣಮಂತಪ್ಪಾ ಮದಲಿ ಸಾ:ಕಡಗಂಚಿ ಹಾ:: ಸಂಜಯ ನಗರ ಬಸವಣ್ಣದೆವರ ಗುಡಿ ಹತ್ತಿರ ಆಳಂದ ಕಾಲೋನಿ ಕಲಬರಗಿ 6) ಸಿದ್ದು ತಂದೆ ಅಂಬ್ರುತ ಸಂಗೊಳಗಿ ಸಾ: ದುಬೈ ಕಾಲೋನಿ ಕಲಬುರಗಿ 7) ಪರುಶುರಾಮ ತಂದೆ ಗಣಪತಿ ಬಂಕಲಗಿ ಸಾ: ದುಬೈ ಕಾಲೋನಿ ಕಲಬುರಗಿ 8) ಶರಣಬಸಪ್ಪಾ ತಂದೆ ಚಂದ್ರಶೇಖರ ಬಿರಾದಾರ ಸಾ:ಅವರಾದ (ಕೆ) ಹಾ::ಮಹಾದೇವ ನಗರ ಶೇಖ ರೋಜಾ ಕಲಬುರಗಿ 9) ಗೀರಿಶ ತಂದೆ ಶಂಕ್ರೆಪ್ಪ ಡೊಂಗರಗಾಂವ ಸಾ:ಗಂದಿಗುಡಿ ಲೇಔಟ ಶಹಾಬಜಾರ ಕಲಬುರಗಿ 10) ಸಿದ್ದಣ್ಣಾ ತಂದೆ ಶರಣಬಸಪ್ಪಾ ಹಾಗರಗಿ ಸಾ:ಆಲೂರ ಹಾ::ವಿವೇಕಾನಂದ ನಗರ ಕಲಬರಗಿ ಅಂತಾ ತಿಳಿಸಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ  ನಗದು ಹಣ 5850/- ರೂಗಳು ಮತ್ತು 52 ಇಸ್ಪಿಟ ಎಲೆಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವರೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣಗಳು :
ಸ್ಟೇಷನ ಬಜಾರ ಠಾಣೆ : ಶ್ರೀ ಮಹೇಬೂಬ ಅಹ್ಮದ   ತಂದೆ ನಜೀರ ಅಹ್ಮದ  ಸಾಃ ಲಿಮ್ರಾ ಕಾಲೋನಿ ಜಿಡಿಎ ಲೇಔಟ ಕಲಬುರಗಿ  ರವರು  ದಿನಾಂಕ 27/08/2017 ರಂದು 5 ಪಿ.ಎಂ.ಸುಮಾರಿಗೆ ನಾನು ಗಾಣದೇವತೆ ಗುಡಿಯ ಸಮೀಪ ಇರುವ ಬಾಬು ಹೊಟೇಲ ಹತ್ತಿರ ಇದ್ದ ನಮ್ಮ ತಂದೆಯವರ ಹತ್ತಿರ ಕೆಲಸ ಮಾಡಿದವರಿಗೆ ಕೂಲಿ ಹಣ ಕೊಟ್ಟು ಕಳುಹಿಸಿ ನಾನು ಅಲ್ಲೆ ನಿಂತಿದಾಗ ತಾರಫೈಲನ ಪಪ್ಪು, ಅಂಕುಶ ಹಾಗು ಮಂಜು ಇವರುಗಳು ಇನ್ನೂ 10-12 ಜನರೊಂದಿಗೆ ಕೈಯಲ್ಲಿ ಕಲ್ಲು, ಬಡಿಗೆ ಹಿಡಿದುಕೊಂಡು ಚಿರಾಡುತ್ತಾ ಬರುತ್ತಿದ್ದರು ಅವರುಗಳು ನಾನು ನಿಂತಲ್ಲಿಗೆ ಬಂದು ಅವರಲ್ಲಿಯ ಪಪ್ಪು ಇತನು ‘’ ಏ ಭೋಸಡಿ ಮಕ್ಕಳೆ ನಮ್ಮ ತಾರಫೈಲದವರ ತಂಟೆಗೆ ಬಂದರೇ ನಿಮಗೆ ಜೀವ ಸಹಿತ ಬಿಡುವುದಿಲ್ಲಾ ‘’ ಅಂತಾ ತನ್ನ ಕೈಯಲ್ಲಿದ್ದ ಬಡಿಗೆಯಿಂದ ನನ್ನ ತಲೆಯ ಹಿಂಭಾಗಕ್ಕೆ ಜೋರಾಗಿ ಹೊಡೆದನು ನಾನು ಏನು ಮಾಡಿಲ್ಲಾ ನನಗೆ ಯಾಕೆ ಹೊಡೆಯುತ್ತಿರಿ ಅಂದಾಗ ಅಂಕುಶ ಇತನು ‘’ ಲೇ ನಮಗೆ ಎದುರು ಮಾತನಾಡುತ್ತಿಯಾ ನಿನಗೆ ಕೊಲೆ ಮಾಡಿ ಬಿಡುತ್ತೇವೆ’’  ಅಂತಾ ಕಲ್ಲಿನಿಂದ ನನ್ನ ಎದೆಗೆ ಹೊಡೆದನು ಮಂಜು ಇತನು ನನ್ನ ಕುತ್ತಿಗೆ ಹಿಡಿದು ಹಿಸುಕ ಹತ್ತಿದ್ದನು ಉಳಿದ 10-12 ಜನರು ಕೈಯಿಂದ, ಬಡಿಗೆಯಿಂದ ಹೊಡೆಬಡೆ ಮಾಡುತ್ತಿರುವಾಗ ನಮ್ಮ ಓಣಿಯವರು ಬಿಡಿಸಲು ಬಂದರೇ ಅವರಿಗೂ ಸಹ ಹೊಡೆಬಡೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಟೇಷನ ಬಜಾರ ಠಾಣೆ : ಶ್ರೀ ಪಪ್ಪು @ ಶ್ರೀಧರ ತಂದೆ ಮಹಾಂತೇಶ ಸಾಃ 10 ನೇ ಕ್ರಾಸ್‌ ತಾರಪೈಲ್‌ ಕಲಬುರಗಿ ಇವರು ದಿನಾಂಕ 27/08/2017 ರಂದು ಸಾಯಂಕಾಲ ನಾನು ನನ್ನ ಸ್ನೇಹಿತನಾದ ಪ್ರಕಾಶ ವಾಘಮೋರೆ ಈತನ ಪಲ್ಸರ್ ಮೋಟಾರ ಸೈಕಲ ನಂ.ಕೆಎ 32 ಇ.ಎನ್‌ 5429 ನೇದ್ದನ್ನು ತೆಗೆದುಕೊಂಡು ರಾಮ ಮಂದಿರ ಹತ್ತೀರ ಹೋಗಿದ್ದು ಅದೆ ವೇಳೆಗೆ ನಮ್ಮ ಓಣಿಯ ವಿಜಯ ತಂದೆ ಹಾಜಪ್ಪಾ ಜಗದಾಳೆ ಈತನು ಸಹ ತನ್ನ ಹಿರೋ ಮೋಟಾರ ಸೈಕಲ ತೆಗೆದುಕೊಂಡು ರಾಮ ಮಂದಿರ ಹತ್ತೀರ ಬಂದನು. ನಾವಿಬ್ಬರು ಕೂಡಿ ಪಾನಿಪೂರಿ ತಿಂದು ನಂತರ ನಮ್ಮ ಮನೆ ಕಡೆಗೆ ಹೋಗೊಣ ಅಂತಾ ನಾವಿಬ್ಬರೂ ಕೂಡಿ ನಮ್ಮ ನಮ್ಮ ಮೋಟಾರ ಸೈಕಲ್‌ಗಳ ಮೇಲೆ ಪಿ&ಟಿ ಕ್ರಾಸ್‌ ಕಡೆಯಿಂದ ಮನೆ ಕಡೆಗೆ ಬರುತ್ತಿರುವಾಗ  ಘಾಣದೇವತೆ ಗುಡಿ ಹತ್ತೀರ ಬಹಳಷ್ಟು ಜನರ ಗುಂಪುಗಟ್ಟಿ ನಿಂತಿದ್ದರು. ನಾವು ಮೋಟಾರ ಸೈಕಲ್‌ ನಿಲ್ಲಿಸಿ ಏನಾಗಿದೆ ಅಂತಾ ನೋಡುತ್ತಿದ್ದಾಗ ಆ ಜನರುಗಳಲ್ಲಿ ಒಬ್ಬನು ಬಡಿಗೆಯಿಂದ ವಿಜಯನ ಗಾಡಿಯ ಹಿಂಬದಿಗೆ ಹೊಡೆದನು, ಮತ್ತೊಬ್ಬನು ಮುಂದಿನ ಬದಿಗೆ ಹೊಡೆದನು. ಆಗ ವಿಜಯನು ನನ್ನ ಗಾಡಿಗೆ ಏಕೆ ಹೊಡೆಯುತ್ತಿರಿಅಂದಾಗ ತೇರೆ ಮಾಕಿ ಚೂತ ತು ಉನಕೆ ಸಾತ ಆತಾಕ್ಯಾಅಂತಾ ಅವರಲ್ಲಿ ಒಬ್ಬನು ಬೈದನು ಆಗ ನಾನು ಆ ಹುಡುಗನಿಗೆ ಯಾಕೆ ಬೈತಿರಿ ಅಂತಾ ಹೇಳಿದಾಗ  ನಿಮ್ಮ ತಿಂಡಿನೆ ಬಹಳ ಆಗಿದೆ ಮಕ್ಕಳೆಅಂತಾ ನನಗೂ ಆ ಗುಂಪಿನಲ್ಲಿದ್ದ ಕೆಲವರು ಬಡಿಗೆಯಿಂದ ಹಾಗು ಕೈಯಿಂದ ಮತ್ತು ಕೊಡಲಿ ಕಾವಿನಿಂದ ನನ್ನ ತಲೆಯ ಹಿಂಭಾಗಕ್ಕೆ ಮತ್ತು ಕೆಲವರು ತಲೆಯ ಮುಂದೆ ಮೋತಿಗೆ ಒಬ್ಬರ ನಂತರ ಒಬ್ಬರು ಹೊಡೆಯ ಹತ್ತೀದರು ಅದೇ ರೀತಿ ವಿಜಯನಿಗು ಸಹ ಮೈ ಕೈಗೆ ಹೊಡೆದರು. ಆಗ ನನ್ನ ತಲೆಯಿಂದ ರಕ್ತ ಬರಹತ್ತೀತು. ಅದೇ ವೇಳೆಗೆ ಪ್ರಕಾಶ ವಾಘ್ಮೋರೆ, ಶಿವು ತಂದೆ ಹಣಮಂತ ಇವರುಗಳು ಬಂದಿದ್ದು ನಮಗೆ ಹೊಡೆಯುತ್ತಿರುವುದನ್ನು ಬಿಡಿಸಿಕೊಂಡರು. ನೀವು ತಾರಫೈಲ್‌ದವರು ನಿಮಗೆ ಇಷ್ಟಕ್ಕೆ ಬಿಡುವುದಿಲ್ಲಾ ಅಂತ ಬೈಯುತ್ತಿದ್ದನು. ನಮಗೆ ನಂತರ ಗೊತ್ತಾಗಿದ್ದೆನೆಂದರೆ, ನಮಗೆ ಹೊಡೆಬಡೆ ಮಾಡಿದವರಲ್ಲಿ ಜಾವೀದ, ಮೈನು, ಅಜರ ಎಂಬುವರು ಹಾಗು ಕಟಗಿ ಅಡ್ಡಾ ಇರುವ ಮನೆಯವರು ಮತ್ತು ಇತರೆ 8-9 ಜನ ಇರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮೀಣ ಠಾಣೆ : ಶ್ರೀ ರಾಜು ತಂದೆ ತಿಮ್ಮಣ್ಣಾ ಕುಸಾಳಕರ ಸಾ ಬೆಲೂರ (ಜೆ) ರವರು ಬೇಲೂರ (ಜೆ) ಕ್ರಾಸಿನಲ್ಲಿ ಇಳಿದು ಕ್ರಾಸಿನಲ್ಲಿ ಇರುವ ಸುರೇಶ ಪಾನ ಡಬ್ಬಿಯಲ್ಲಿ ಗುಟಕಾ ಖರೀದಿಸಿ ತನಗೆ ಪರಿಚಯದ ಪಟ್ಟಣ ಗ್ರಾಮದ ರಾಚಣ್ಣಾ ತಂದೆ ಶಿವಪುತ್ರ ತಾಳಿಕೋಟಿ ಇತನೊಂದಿಗೆ ಮಾತಾಡುತ್ತಾ ನಿಂತಾಗ ಅದೇ ಸಮಯಕ್ಕೆ ನಮ್ಮೂರಿನ ಲಿಂಗಾಯತ ಜನಾಂಗದ ಬಸವರಾಜ ತಂದೆ ವಿಶ್ವನಾಥ ಮೂಲಗೆ ಮತ್ತು ಆತನ ಅಕ್ಕ ಗಂಡನಾದ ಬಸವರಾಜ ತಂದೆ ಸುಭಾಷ ಗೋಳಾ ಇಬ್ಬರು ನನ್ನ ಹತ್ತಿರ ಬಂದು  ಬಸವರಾಜ ಮೂಲಗೆ ಇತನು ರಾಜುಗೆ ವಡ್ಡಾ  ಹೊಲಸು ಜಾತಿ  ರಾಜ್ಯಾ ಸೂಳೇ ಮಗನೇ  ಅಂತಾ ಜಾತಿ ಎತ್ತಿ ಬೈದು  ಕಪನೂರ ಕಾಶಪ್ಪನ ಎದುರು ನನ್ನ ಬಗ್ಗೆ ಇಲ್ಲ ಸಲ್ಲದು ಎನು ಹೇಳಿದ್ದೀ  ವಡ್ಡ ಸೂಳೇ ಮಗನೇ ಅಂತಾ ಬೈಯ್ಯುತ್ತಾ ನನಗೆ ಪಾನ ಡಬ್ಬಿ ಎದುರುನಿಂದ ಸ್ವಲ್ಪ ದೂರದಲ್ಲಿ ಇರುವ ವಿಶಾಲ ಪಾನಪೂರಿ ಅಂಗಡಿಯವರಿಗೆ ಬಸವರಾಜ ಮತ್ತು ಅವನ ಭಾವ ಬಸವರಾಜ ಗೋಳಾ ಇಬ್ಬರು ಫಿರ್ಯಾದಿ  ಕೈ ಹಿಡಿದು ಎಳೆದುಕೊಂಡು ಹೋಗಿ ಬಸವರಾಜ ಮೂಲಗೆ ಇತನು ಅಲ್ಲೇ ಬಿದ್ದ ಕಲ್ಲು ತೆಗೆದುಕೊಂಡು ನನ್ನ ಬಾಯಿಯ ಮೇಲೆ ಜೋರಾಗಿ ಹೊಡೆದು ರಕ್ತಗಾಯಗೊಳಿಸಿದನು. ಮತ್ತು  ಬಸವರಾಜ ಮೂಲಗೆ ಇತನು ಅಲ್ಲೇ ಟೇಬಲ ಮೇಲೆ ಇಟ್ಟ ಸೋಡಾ ಬಾಟಲಿ ತೆಗೆದುಕೊಂಡು ಫಿರ್ಯಾದಿ  ಎಡ ತಲೆಯ ಮೇಲೆ ಹೊಡೆದು ರಕ್ತಗಾಯಗೊಳಿಸಿದೆನು. ಅವನ ಭಾವ ಬಸವರಾಜ ಗೋಳಾ ಇತನು ಬಸವರಾಜ ಬಿಸಾಕಿದ ಕಲ್ಲು ತೆಗೆದುಕೊಂಡು ನನ್ನ ಎದೆಯ ಮೇಲೆ ಹೊಡೆದು ಗುಪ್ತಗಾಯಗೊಳಿಸಿದ್ದು ಇದರಿಂದ ಫಿರ್ಯಾದಿ ಬಾಯಿಯಲ್ಲಿನ  ಮೂರು ಹಲ್ಲುಗಳು ಪೂರ್ತಿ ಅಲುಗಾಡುತ್ತಿದ್ದು, ಅದರಲ್ಲಿ ಒಂದು ಹಲ್ಲು ಅರ್ಧ ಮುರಿದಿರುತ್ತದೆ. ಬಸವರಾಜ ಇತನು ನನಗೆ ಏ ವಡ್ಡ ರಾಜ್ಯಾ ಸೂಳೇ ಮಗನೇ ನಿನಗೆ ಜೀವ ಸಹಿತ ಬಿಡುವುದಿಲ್ಲಾ ಇಂದಲ್ಲಾ ನಾಳೆ ಖಲಾಷ ಮಾಡುತ್ತೇನೆ ಎಂದು ಜೀವ ಭಯ ಹಾಕಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ಕಮಲಾಪೂರ ಠಾಣೆ : ಶ್ರೀಮತಿ ಶಾಲುಬಾಯಿ ಗಂಡ ವೆಂಕಟ ರಾಠೋಡ ಸಾ:ಪಟವಾದ ತಾಂಡಾ ತಾ:ಜಿ:ಕಲಬುರಗಿ ಇವರು  2 ವರ್ಷಗಳಿಂದ ನಮಗೂ ಮತ್ತು ನನ್ನ ಮಾವನ ತಮ್ಮನಾದ ಹರಿಶ್ಚಂದ್ರ ಆತನ ಮಗ ಕೇಸು ಇವರುಗಳು ಹೋಲದಲ್ಲಿ ದನಗಳು ಬಿಟ್ಟ ವಿಷಯದಲ್ಲಿ ಆಗಾಗ ನಮ್ಮೊಂದಿಗೆ ತಕರಾರು ಮಾಡುತ್ತ ಬಂದಿರುತ್ತಾರೆ ಅಲ್ಲದೆ ಈಗ್ಗೆ ಕೆಲವು ದಿನಗಳಹಿಂದೆ ವಿನಾಕಾರಣ ನಾವುಗಳು ಅವರ ಕೋಳಿಯನ್ನು ಹಿಡಿದು ತಿಂದಿದ್ದೇವೆ ಅಂತಾ ತಾಂಡಾದ ಜನರ ಮುಂದೆ ಅಂದಾಡಿರುತ್ತಾರೆ. ನಿನ್ನೆ ದಿನಾಂಕ:26.08.2017 ರಂದು ಬೆಳಿಗ್ಗೆ 07 ಗಂಟೆಯ ಸೂಮಾರಿಗೆ ನನ್ನ ಗಂಡ ನಮ್ಮ ತಾಂಢಾದ ಪಾಂಡು ರಾಠೋಡ ಇವರ ಕಿರಾಣಿ ಅಂಗಡಿಯ ಎದರಿಗೆ ನಿಂತುಕೊಂಡಾ ನಾನು ಕೂಡಾ ಕಸಾ ಚೆಲ್ಲಲು ಹೋಗಿ ಪಾಂಡು ರಾಠೋಡ ಇವರ ಅಂಗಡಿಯ ಹತ್ತೀರ ಬರುತ್ತಿದ್ದಂತೆ 1. ಕೇಸು ತಂದೆ ಹರಿಶ್ಚಂದ್ರ ರಾಠೋಡ 2. ಹರಿಶ್ಚಂದ್ರ ತಂದೆ ಹಿರಿ ರಾಠೋಡ 3. ರಂಗಲಾಬಾಯಿ ಗಂಡ ಹರಿಶ್ಚಂದ್ರ ರಾಠೋಡ 4. ಗೌರಾಬಾಯಿ ಗಂಡ ಕೇಸು ರಾಠೋಡ 5. ಮದು ತಂದೆ ಕೇಸು ರಾಠೋಡ ಎಲ್ಲರೂ ಸಾ: ಪಟಟವಾದ ತಾಂಡಾ ಕೂಡಿಕೊಂಡು ಬಂದವರೆ ಅವರಲ್ಲಿ ಹರಿಶ್ಚಂದ್ರ ಮತ್ತು ಕೇಸು ಇವರಿಬ್ಬರೂ ನನ್ನ ಗಂಡನಿಗೆ ಏ ರಂಡಿ ಮಗನೆ ನೀನು ನಮ್ಮ ಕೋಳಿ ತಿಂದಿದ್ದಿರಿ ಬೋಸಡಿ ಮಗನೆ ಅಂತಾ ಬೈದು ನನ್ನ ಗಂಡನಿಗೆ ಅವರಿಬ್ಬರು ತಡೆದು ಹೋಡೆಯುತ್ತಿದ್ದರು. ಆಗ ನಾನು ನನ್ನ ಗಂಡನಿಗೆ ಹೋಡೆಯುತ್ತಿದ್ದನ್ನು ಬಿಡಿಸಲು ಹೋದಾಗ ನನಗೆ ರಂಗಲಾಬಾಯಿ, ಮಧು ಮತ್ತು ಗೌರಾಬಾಯಿ ಹಿಗೆಲ್ಲರೂ ಕೂಡಿಕೊಂಡು ನಾನು ಗರ್ಬಿಣಿ ಇದ್ದ ನನಗೆ ಕೈಯಿಂದ ಹೋಟ್ಟೆಯ ಮೇಲೆ ಹೋಡೆದು ಗುಪ್ತಗಾಯ ಪಡಿಸಿರುತ್ತಾರೆ. ಕೇಸು ಈತನು ನನಗೆ ಕೂದಲು ಹಿಡಿದು ಏಳೆದಾಡಿ ಕೈಯಿಂದ ಹೋಡೆಬಡೆ ಮಾಡಿರುತ್ತಾನೆ ಅಲ್ಲದೆ ಕಾಲಿನಿಂದ ಒದ್ದಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಮಲಾಪೂರ ಠಾಣೆ : ಶ್ರೀ ಕೇಸು ತಂದೆ ಹರಿಶ್ಚಂದ್ರ ರಾಠೋಡ ಸಾ:ಪಟವಾದ ತಾಂಡಾ ತಾ:ಜಿ:ಕಲಬುರಗಿ ರವರ ದೋಡ್ಡಪ್ಪನ ಮಕ್ಕಾಳಾದ ವೆಂಕಟ ಮತ್ತು ತಾರಾಸಿಂಗ ಇಬ್ಬರೂ ಈಗ್ಗೆ ಸೂಮಾರು 2 ವರ್ಷಗಳಿಂದ ನಮ್ಮ ಹೋಲದಲ್ಲಿ ದನಗಳನ್ನು ಬಿಟ್ಟು ಮೇಯಿಸಿಕೊಂಡು ಹೋಗುತ್ತಾರೆ ಅವರಿಗೆ ಹೋಲದಲ್ಲಿ ದನಗಳು ಬಿಡಬೇಡಿರಿ ಅಂತಾ ಹೇಳಿದರೆ ನಮ್ಮೊಂದಿಗೆ ಜಗಳಕ್ಕೆ ಬರುತ್ತಿದ್ದಾರೆ. ಈಗ್ಗೆ ಕೆಲವು ದಿವಸಗಳಹಿಂದೆ ನಮ್ಮ ಕೋಳಿ ಅವರ ಮನೆಗೆ ಹೋದಾಗ ಕೋಳಿಗಳನ್ನು ಹಿಡಿದು ತಿಂದಿರುತ್ತಾರೆ. ಹಿಗಿದ್ದು ನಿನ್ನೆ ದಿನಾಂಕ:26.08.2017 ರಂದು ಬೆಳಿಗ್ಗೆ 07 ಗಂಟೆಯ ಸೂಮಾರಿಗೆ ನಾಣು ನನ್ನ ತಾಂಡಾದ ಪಾಂಡು ರಾಠೋಡ ಇವರ ಅಂಗಡಿಯ ಮುಂದೆ ನಿಂತಾಗ ವೆಂಕಟ ತಂದೆ ಸಕ್ಕು ರಾಠೋಡ ತಾರಾಸಿಂಗ ತಂದೆ ಸಕ್ಕು ರಾಠೊಡ ಶಾಲುವಾಯಿ ಗಂಡ ವೆಂಕಟ ರಾಠೋಡ ಸವಿತಾ ಗಂಡ ತಾರಾಸಿಂಗ ರಾಠೋಡ ರತ್ನಾಬಾಯಿ ಗಂಡ ಸಕ್ಕು ರಾಠೋಡ ಹಿಗೆಲ್ಲರೂ ಕೂಡಿಕೊಂಡು ಬಂದವರೆ. ಅವರಲ್ಲಿ ವೆಂಕಟ ಈತನುನನಗೆ ಏ ರಂಡಿ ಮಗನೆ ನಾವು ನಿಮ್ಮ ಕೋಳಿ ಕೋಯ್ದು ತಿಂದಿದ್ದೆವೆ ಅಂತಾ ಜನರ ಮುಂದೆ ಹೇಳುತ್ತಿದ್ದಿ ನಿನಗೆ ಬಹಾಳಸೋಕ್ಕು ಬಂದಿದೆ ಅಂತಾ ಬೈತೋಡಗಿದಾಗ ನಿಣು ನಮ್ಮ ಕೋಳಿ ಕೊಯ್ದು ತಿಂದಿದ್ದಿ ಹೋಲದಲ್ಲಿ ದನಗಳು ಬಿಡುತ್ತಿದ್ದರಿ ಅಂತಾ ಅನ್ನುತ್ತಿದ್ದಾಗ ಶಾಲುಬಾಯಿ ಸವೀತಾ ರತ್ನಾಬಾಯಿ ಇವರೆಲ್ಲರು ಒತ್ತಿ ಹಿಡಿದುಕೊಂಡು ಕೈಯಿಂದ ಹೋಟ್ಟಗೆ ಬೆನ್ನಿಗೆ ಹೋಡೆಯುತ್ತಿದ್ದರು. ಆಗ ವೆಂಕಟ ಈತನು ತನ್ನ ಕೈ ಮುಷ್ಟಿ ಮಾಡಿ ನನ್ನ ತೋರಡಿನ ಹತ್ತೀರ ಹೋಟ್ಟೆಗೆ ಎದೆಗೆ ಹೋಡೆದು ಗುಪ್ತಗಾಯ ಪಡಿಸಿರುತಾನೆ. ತಾರಾಸಿಂಗ ಈತನು ನನ್ನ ಎಡಗೈ ಬೆರಳುಗಳು ಹಿಡಿದು ತಿರುವಿರುತ್ತಾನೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಿರುಕಳ ನೀಡಿ ಹೊಡೆ ಬಡೆ ಮಾಡಿದ್ದರಿಂದ  ಆತ್ಮಹತ್ಯ ಮಾಡಿಕೊಡ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀಮತಿ ಲಾಲಬಿ ಗಂಡ ರುಕ್ಕಮ್ ಪಟೇಲ್ ಸಾ : ಹಡಗೀಲ ಹಾರುತಿ ತಾ : ಜಿ : ಕಲಬುರಗಿ ರವರ ಗಂಡ ಈಗ 5 ವರ್ಷಗಳ ಹಿಂದೆ ನನ್ನ ಗಂಡನಾದ ರುಕ್ಕಮ ಪಟೇಲ್ ಇತನು ಖಾಜಾ ಮೈನೋದ್ದಿನ ತಂದೆ ಬಾಬುಮಿಯ್ಯಾ ಕಂಬಾರ  ಇತನ ಹತ್ತಿರ 10,000/-ರೂ ಸಾಲ ಪಡೆದುಕೊಂಡಿದ್ದು  ಸದರಿ ಸಾಲ ತೀರಿಸುವರೆಗೂ ಸದರಿ ಖಾಜಾ ಮೈನೋದ್ದಿನ ಮತ್ತು ಆತನ ಹೆಂಡತಿ ಶಾಹೀನ ಬೇಗಂ ಇಬ್ಬರು ನನ್ನ ಗಂಡನಿಗೆ ತಮ್ಮ ಕಟ್ಟಿಗೆ ಅಡ್ಡಾದಲ್ಲಿ ಕೆಲಸ ಮಾಡಲು ಹೇಳಿದ್ದು ಇರುತ್ತದೆ. ನನ್ನ ಗಂಡ ರುಕ್ಕಮ ಪಟೇಲ್ ಇತನಿಗೆ ದಿನಾಲು 1) ಖಾಜಾ ಮೈನೋದ್ದಿನ ತಂದೆ ಬಾಬುಮಿಯ್ಯಾ ಕಂಬಾರ 2) ಶಾಹಿನ ಬೇಗಂ ಗಂಡ ಖಾಜಾ ಮೈನೋದ್ದಿನ ಕಂಬಾರ ಇಬ್ಬರು ತಮ್ಮ ಕಟ್ಟಿಗೆ ಅಡ್ಡಾದಲ್ಲಿ  ಕೆಲಸಕ್ಕೆ ಹಚ್ಚುತ್ತಿದ್ದು ನನ್ನ ಗಂಡ ದಣಿವು ಆದಾಗ ಕುಳಿತುಕೊಂಡಾಗ ನನ್ನ ಗಂಡನಿಗೆ ಕೆಲಸ ಮಾಡದೇ ಕುಳಿತುಕೊಂಡು ದಿನಾ ಕಳೆತ್ತಿ ಅಂತಾ ಹೇಳಿ ಗಂಡ ಹೆಂಡತಿ ಇಬ್ಬರು ನನ್ನ ಗಂಡನಿಗೆ ಹೊಡೆ ಬಡೆ ಮಾಡುತ್ತಿದ್ದಾರೆ ಆದ್ದರಿಂದ್ದ ಅವರಿಗೆ ಅಂಜಿ ನನ್ನ ಗಂಡ ರುಕ್ಕಮ್ ಪಟೇಲ್ ಇತನು ಈಗ 15 ದಿವಸಗಳ ಹಿಂದೆ ಕಟ್ಟಿಗೆ ಅಡ್ಡಾ ಬಿಟ್ಟು ಯಾರಿಗೂ ಹೇಳದೇ ಕೇಳದೇ ಹೈದ್ರಾಬಾದಕ್ಕೆ ಹೋದಾಗ ಆಗ ಹೋದ ಶುಕ್ರವಾರ ದಿವಸ ಶಾಹಿನ ಬೇಗಂ ಇವಳು ನನಗೆ ಪೋನ ಮಾಡಿ ನಿನ್ನ ಗಂಡ ಎಲ್ಲಿದ್ದಾನೆ ಅವನಿಗೆ ತಂದು ಕೊಡು ಇಲ್ಲವಾದರೇ ನಾವು ಕೊಟ್ಟ 10,000/-ರೂ ಮರಳಿ ಕೊಡು ಇಲ್ಲವಾದರೇ ನಿನ್ನ ಮಗಳಾದ ತಬಸುಮ್ ಇವಳಿಗೆ ನನ್ನ ಗಂಡನಿಗೆ ಕೊಟ್ಟು ಲಗ್ನ ಮಾಡು ಅಂತಾ ಹೇಳಿ ಅವಾಚ್ಯವಾಗಿ ಬೈಯ್ಯದ್ದಿದ್ದರಿಂದ್ದ ನಾನು ಹೋದ ಶನಿವಾರ ಹೈದ್ರಾಬಾದಕ್ಕೆ ಹೋಗಿ ನನ್ನ ಗಂಡ ರುಕ್ಕಮ ಪಟೇಲ್ ಇತನಿಗೆ ಹುಡುಕಾಡಿಕೊಂಡು ಕಲಬುರಗಿಗೆ ಕರೆದುಕೊಂಡು ಬಂದೇನು. ನನ್ನ ಗಂಡನಿಗೆ ಕೆಲಸಕ್ಕೆ ಹೋಗು ಅಂತಾ ಹೇಳಿದಾಗ ಅವರು ನಾನು ಕೆಲಸಕ್ಕೆ ಹೋಗುವುದಿಲ್ಲಾ ನನಗೆ ದಣಿವು ಆದಾಗ ಕುಳಿತುಕೊಂಡಾಗ ಕೆಲಸ ಮಾಡು ಅಂತಾ ವಿನಾಕಾರಣ ಆರೋಪ ಮಾಡಿ ಹೊಡೆ ಬಡೆ ಮಾಡುತ್ತಿದ್ದಾರೆ ಆದ್ದರಿಂದ್ದ ಕೆಲಸಕ್ಕೆ ಹೋಗುವುದಿಲ್ಲಾ ಎಂದು ಅಳುತ್ತಾ ಹೇಳಿದ್ದರಿಂದ್ದ ನಾನು ನನ್ನ ಗಂಡನಿಗೆ ಅಲ್ಲಿಯೇ ನಮ್ಮ ಓಣಿಯಲ್ಲಿ ಇರುವ ನಮ್ಮ ಭಾವನ ಮಗಳಾದ ಮದಿನಾ ಇವರ ಮನೆಗೆ ನನ್ನ ಗಂಡನಿಗೆ ಕರೆದುಕೊಂಡು ಹೋಗಿ , ಅವರ ಮನೆಯಲ್ಲಿಯೇ ಇಟ್ಟಕೊಳ್ಳಲು ಮದಿನಾ ಇವಳಿಗೆ ಹೇಳಿ ನನ್ನ ಗಂಡನಿಗೆ ಅವರ ಮನೆಯಲ್ಲಿರಲು ಹೇಳಿ ಅಲ್ಲಿಯೇ ಬಿಟ್ಟೇನು. ಹೋದ ಮಂಗಳವಾರ ಮದ್ಯರಾತ್ರಿ 02:00 ಗಂಟೆಗೆ 1) ಖಾಜಾ ಮೈನೋದ್ದಿನ ತಂದೆ ಬಾಬುಮಿಯ್ಯಾ ಕಂಬಾರ 2) ಶಾಹಿನ ಬೇಗಂ ಗಂಡ ಖಾಜಾ ಮೈನೋದ್ದಿನ ಕಂಬಾರ ಇಬ್ಬರು ಕೂಡಿಕೊಂಡು ನಮ್ಮ ಭಾವನ ಮಗಳಾದ ಮದಿನಾ ಇವಳ ಮನೆಗೆ ಹೋಗಿ ನನ್ನ ಗಂಡನಿಗೆ ಏ ಭೋಸಡಿ ಮಗನೇ ಸಾಲದ ಹಣ ತೆಗೆದುಕೊಳ್ಳಲು ಬರುತ್ತೇ ಕೆಲಸದ ಮಾಡದೇ ನೀನು ಹೀಗೆ ನಮಗೇ ಹೇಳದೇ ಕೇಳದೇ ಓಡಿ ಹೋದರೇ ಹೇಗೆ ಮತ್ತು ನಾವು ಕೊಟ್ಟ  10,000/-ರೂ ಹಣ ವಾಪ್ಪಸು ಕೊಡು ಇಲ್ಲವಾದರೆ ಎಲ್ಲಿಯಾದರೂ ಹೋಗಿ ಸಾಯಿ ಅಂತಾ ನನ್ನ ಗಂಡನಿಗೆ ಪದೇ ಪದೇಯಾಗಿ ದುಷಪ್ರೇರಣೆ ಮಾಡಿ ಮತ್ತು ನನ್ನ ಗಂಡನಿಗೆ ಅವಾಚ್ಯವಾಗಿ ಬೈಯ್ದು ಕೈಯಿಂದ ಹೊಡೆ ಬಡೆ ಮಾಡುತ್ತಿದ್ದಾಗ ಆಗ ನಮ್ಮ ಓಣಿಯ ಮಹಮ್ಮದ ರಫೀಕ ತಂದೆ ನವಾಜ ಖಾನ ಡಿಗ್ಗಿವಾಲೇ, ಶಬ್ಬೀರ ಅಹೆಮ್ಮದ ತಂದೆ ಮಕಬೂಲ್ ಅಹೆಮ್ಮದ, ಅಳಿಯ ಚಾಂದಸಾಬ ತಂದೆ ಮಶಾಕಸಾಬ ಜಮಾದಾರ ಇವರೆಲ್ಲರೂ ಕೂಡಿಕೊಂಡು ಅವರಿಗೆ ಹೇಗಾದರೂ ಮಾಡಿ ನಿಮ್ಮ ಹಣ ವಾಪ್ಪಸ ಕೊಡುಸುತ್ತೇವೆ ಅಂತಾ ತಿಳುವಳಿಕೆ ಹೇಳಿ ಹೊಡೆವುದನ್ನು ಬೀಡಿಸಿಕೊಂಡರು . ನಂತರ ನನ್ನ ಗಂಡನಿಗೆ  1) ಖಾಜಾ ಮೈನೋದ್ದಿನ ತಂದೆ ಬಾಬುಮಿಯ್ಯಾ ಕಂಬಾರ 2) ಶಾಹಿನ ಬೇಗಂ ಗಂಡ ಖಾಜಾ ಮೈನೋದ್ದಿನ ಕಂಬಾರ ಇಬ್ಬರು ನಾನು ಮತ್ತು ಈ ಮೇಲಿನ ಜನರು ಎಲ್ಲರೂ ಕೂಡಿಕೊಂಡು ಮರಳಿ ಹಣ ಕೊಡುತ್ತೇವೆ ಅಂತಾ ಪರಿಪರಿಯಾಗಿ ಬೇಡಿಕೊಂಡರು ನನ್ನ ಗಂಡನಿಗೆ ಹಣ ಕೊಡುವರೆಗೆ ನಮ್ಮ ಕಟ್ಟಿಗೆ ಅಡ್ಡಾದಲ್ಲಿ ಕೆಲಸ ಮಾಡಲಿ ಅಂತಾ ಜೊತೆಯಲ್ಲಿ ಕರೆದುಕೊಂಡು ಹೋದರು. ನನ್ನ ಗಂಡ ರುಕ್ಕಮ ಪಟೇಲ್ ಇತನಿಗೆ ಮನೆಗೆ ಮತ್ತು ಊಟಕ್ಕೂ ಮನೆಗೆ ಬೀಡದೇ ಅವರಿಗೆ ಕೆಲಸ ಮಾಡು ಅಂತಾ ಆಗಾಗ್ಗೆ ಹೊಡೆ ಬಡೆ ಮಾಡುತ್ತಿದ್ದಾರೆ ಅವರಿಗೆ ಕೊಡಬೇಕಾದ 10,000/-ರೂ ಹಣ ಹೇಗಾದರೂ ಮಾಡಿ ತಂದು ಕೊಡು ಅಂತಾ ಈಗ 2 ದಿವಸಗಳ ಹಿಂದೆ ನನ್ನ ಗಂಡ ಪೋನ ಮಾಡಿ ತಿಳಿಸಿದನು ಅದಕ್ಕೆ ನನ್ನ ಗಂಡನಿಗೆ 2-3 ದಿವಸಗಳವೆಗೆ ಕೆಲಸ ಮಾಡು ನಾನು ಸಾಲ ಕೇಳುತ್ತಿದ್ದೇನೆ ಎಲ್ಲಿದಾರೂ ಹಣ ಸಿಕ್ಕರೇ ತಂದು ಕೊಡುತ್ತೇನೆ ಅಂತಾ ತಿಳುವಳಿಕೆ ಹೇಳಿ ಪೋನ್ ಕಟ್ ಮಾಡಿದೇನು. ಇಂದು ದಿನಾಂಕ:- 27/08/2017 ರಂದು ಬೆಳಿಗ್ಗೆ 07:30 ಗಂಟೆಗೆ ನಾನು ಮತ್ತು ನನ್ನ ಮಕ್ಕಳು ಮನೆಯಲ್ಲಿದ್ದಾಗ ಆಗ ನಮ್ಮ ಅಳಿಯ ಚಾಂದಸಾಬ ಜಮಾದಾರ ಇವರು ಪೋನ ಮಾಡಿ ತಿಳಿಸಿದೆನೆಂದರೆ ಮಾವ  ರುಕ್ಕಮ ಪಟೇಲ್ ಇತನು ತಾನು ಕೆಲಸ ಮಾಡುವ ಖಾಜಾ ಮೈನೋದ್ದಿನ ಕಂಬಾರ ಇವರ ಕಟ್ಟಿಗೆ ಅಡ್ಡಾದಲ್ಲಿರುವ ಪತ್ರಾ ಶೆಡ್ಡನಲ್ಲಿ ಹಗ್ಗದಿಂದ ಕುತ್ತಿಗಿಗೆ ಉರುಲು ಹಾಕಿಕೊಂಡು ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದನು. ಆಗ ಗಾಬರಿಗೊಂಡು ನಾನು ಮತ್ತು ನನ್ನ ಮಕ್ಕಳಾದ ಅತೀಫ, ಮಗದೂಮ್, ತಬಸುಮ್, ಗೌಸ ಪಟೇಲ್ ಹಾಗು ಓಣಿಯ ಮಹಮ್ಮದ ರಫೀಕ ತಂದೆ ನಾವಾಜ ಖಾನ ಡಿಗ್ಗಿವಾಲೇ, ಶಬ್ಬೀರ ಅಹೆಮ್ಮದ ತಂದೆ ಮಕಬೂಲ್ ಅಹೆಮ್ಮದ ಎಲ್ಲರೂ ಕೂಡಿಕೊಂಡು ಸ್ಥಳಕ್ಕೆ ಹೋಗಿ ನೋಡಲಾಗಿ ಹಕಿಕತ್ತ ನಿಜವಿತ್ತು. ನನ್ನ ಗಂಡನು ಖಾಜಾ ಮೈನೋದ್ದಿನ ಕಂಬಾರ ಇವರ ಕಟ್ಟಿಗೆ ಅಡ್ಡಾದಲ್ಲಿರುವ ಪತ್ರಾ ಶೆಡ್ಡನಲ್ಲಿ ಹಗ್ಗದಿಂದ ಕುತ್ತಿಗಿಗೆ ಉರುಲು ಹಾಕಿಕೊಂಡಿದ್ದು ಆತನ ಶವವು ನೇತಾಡುತ್ತಿತ್ತು. ಸದರಿ ಘಟನೆಯು ಅಂದಾಜು ನಿನ್ನೆ ದಿನಾಂಕ:- 26/08/2017 ರಂದು ಸಂಜೆ 06:00 ಗಂಟೆಯಿಂದ ಇಂದು ದಿನಾಂಕ:- 27/08/2017 ರಂದು ಬೆಳಿಗ್ಗೆ 07:30 ಗಂಟೆಯ ಮದ್ಯದ ಅವಧಿಯಲ್ಲಿ ಜರುಗಿರುತ್ತದೆ. ಕಾರಣ ಈ ಮೇಲೆ ಹೇಳಿದಂತೆ ಈ ಮೇಲ್ಕಂಡ 1) ಖಾಜಾ ಮೈನೋದ್ದಿನ ತಂದೆ ಬಾಬುಮಿಯ್ಯಾ ಕಂಬಾರ 2) ಶಾಹಿನ ಬೇಗಂ ಗಂಡ ಖಾಜಾ ಮೈನೋದ್ದಿನ ಕಂಬಾರ ಇಬ್ಬರು ನನ್ನ ಗಂಡನಿಗೆ ಸಾಲದ ಹಣ ಕೊಡುವಂತೆ ಹೇಳಿ ಈ ಹಿಂದೆ ಹೊಡೆ ಬಡೆ ಮಾಡಿ ಕೆಲಸಕ್ಕೆ ಹಚ್ಚಿದ್ದರಿಂದ್ದ ಮತ್ತು ಹಣ ಕೊಡದೇ ಆಗದೇ ಇದ್ದರೇ ಎಲ್ಲಿಯಾದರೂ ಹೋಗಿ ಸಾಯಿ ಅಂತಾ ದುಷಪ್ರೇರಣೆ ಮಾಡಿದ್ದರಿಂದ್ದ ಮತ್ತು ಅವರ ಕೊಟ್ಟ ತ್ರಾಸ ತಾಳಲಾರದೇ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ನನ್ನ ಗಂಡನು ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

26 August 2017

Kalaburagi District Reported Crimes

ಸಜಾಬಂಧಿ ಖೈದಿ ಸಾವು ಪ್ರಕರಣ :
ಫರತಾಬಾದ ಠಾಣೆ : ಶ್ರೀ ಕೃಷ್ಣಕುಮಾರ  ಮುಖ್ಯ ಅಧಿಕ್ಷಕರು  ಕೇಂದ್ರ ಕಾರಾಗೃಹ  ಕಲಬುರಗಿ ರವರು ಕಾರಾಗೃಹದ ಸಜಾ ಬಂಧಿ ಸಂಖ್ಯೆ 19992 ಪ್ರಕಾಶ ತಂದೆ ಮಲ್ಕಪ್ಪಾ ಕನ್ನಡಗಿ ಸಾ: ರಾಮನಗರ ಕಲಬುರಗಿ ಸದರಿಯವನು ಇಂದು ದಿನಾಂಕ 25/08/2017 ರಂದು ಎದೆ ನೋವು ಆಗುತ್ತಿದೆ ಎಂದು ತಿಳಿಸಿದ ಪ್ರಯುಕ್ತ  ಜೈಲಿನ ಒಳ ಆಸ್ಪತ್ರೆಯಲ್ಲಿ  ವೈದ್ಯಕೀಯ ಸಿಬ್ಬಂದಿ ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆಗಾಗಿ ತುರ್ತಾಗಿ  ಜಿಲ್ಲಾ ಆಸ್ಪತ್ರೆಗೆ ಕಳುಹಿಸಲು ಸಲಹೆ ನೀಡಿದ ಮೇರೆಗೆ ಜೈಲು ಸಿಬ್ಬಂದಿ ಬೆಂಗಾವಲು ಮೂಲಕ  ಕಲಬುರಗಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕಳುಹಿಸಲಾಗಿರುತ್ತದೆ ಸದರಿ ಬಂದಿಗೆ ತಪಾಸಣೆ  ಮಾಡಿರುವ ಕಲಬುರಗಿ ಜಿಲ್ಲಾ ಸರಕಾರಿ ಆಸ್ಪತ್ರೆಯ ವೈದ್ಯರು ಸದರಿ ಬಂಧಿಯು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ ಎಂದು ಬೆಂಗಾವಲು ಸಿಬ್ಬಂದಿಯವರು ಈ ಸಂಸ್ಥೆಯ  ಮುಖ್ಯ ದ್ವಾರಪಾಲಕರಿಗೆ ದೂರವಾಣಿ ಮೂಲಕ ತಿಳಿಸಿರುತ್ತಾರೆ. ಸದರಿ ಬಂಧಿಗೆ ಗೌರವಾನ್ವಿತ 1 ನೇ ಅಪರ ಜೆಎಮ್‌ಎಪ್‌‌ಸಿ ನ್ಯಾಯಾಲಯ ಕಲಬುರಗಿ ಇವರ ಸಿಸಿ ಸಂಖ್ಯೆ 1563/08 (ಕಮಲಾಪೂರ ಪೊಲೀಸ ಠಾಣೆಯ ಗುನ್ನೆ ಸಂಖ್ಯೆ 50/08) ರಲ್ಲಿ ದಿನಾಂಕ: 30/11/2016 ರಂದು 2 ವರ್ಷ 6 ತಿಂಗಳು ಕಠಿಣ ಶಿಕ್ಷೆ ಹಾಗೂ ದಂಡ ರೂ 10.000/- ರೂದಂಡ ಕಟ್ಟಲು ತಪ್ಪಿದಲ್ಲಿ 09 ತಿಂಗಳು 15 ದಿನ ಶಿಕ್ಷೆ ಅನುಭವಿಸುವಂತೆ ಆದೇಶವಿರುತ್ತದೆ. ಸದರಿ ಬಂಧಿಯು ಮೃತಪಟ್ಟ ವಿಷಯವನ್ನು ಮೃತ ಬಂಧಿಯ ಸಂಬಂಧಿಕರಿಗೆ ದೂರವಾಣಿ ಮೂಲಕ ತಿಳಿಸಲಾಗಿದೆ ಹಾಗೂ ಈ ವಿಷಯವನ್ನು ಕಮಲಾಪೂರ ಪೊಲೀಸ ಠಾಣೆ ಅಧಿಕಾರಿಗಳಿಗೂ ಸಹ ದೂರವಾಣಿ ಮೂಲಕ ತಿಳಿಸಲಾಗಿರುತ್ತದೆ. ಮೃತ ಬಂಧಿಯ ಶವವನ್ನು ಕಲಬುರಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿದ್ದು ಶವದ ಮರಣೊತ್ತರ ಪರೀಕ್ಷೆ, ಶವ ಪಂಚನಾಮೆ, ಮಾಡಿಸಲು ಕೋರಿದ ಸಾರಾಂಶದ ಮೇಲಿಂದ ಫರಥಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಹಲ್ಲೆ ಪ್ರಕರಣಗಳು :
ಕಮಲಾಪೂರ ಠಾಣೆ : ಶ್ರೀಮತಿ ಜೈನಾಬಾಯಿ ಗಂಡ ಶಿವಾಜಿ ಚವ್ಹಾಣ ಸಾ:ಭೀಮನಾಳ  ತಾಂಡಾ ತಾ:ಜಿ:ಕಲಬುರಗಿ ಇವರ ಗಂಡನಿಗೆ ಕುಷ್ಟರೋಗ ಆಗಿದ್ದು  ಈಗ ಸೂಮಾರು 8 ವರ್ಷಗಳ ಹಿಂದೆ ನಾವು ಮತ್ತು ನಮ್ಮ ತಾಂಢಾದ ಕಾರಬಾರಿ ಖಾಂದಾನದವರು ಕೂಡಿಕೊಂಡು ನಮ್ಮ ತಾಂಡಾದ ಎದುರಿಗೆ ಲೋಕಮಾಸಂದ ಮತ್ತು ಮಹಾಂಕಾಳಿ ಸಣ್ಣ ಗುಡಿಯು ಕಟ್ಟಿ ಪ್ರತಿ ಶ್ರಾವಣ ಮಾಸದ ಅಮವಾಸೆಯ ದಿವಸ ತಾಂಡಾದ ಎಲ್ಲರೂ ಜನರು ಕೂಡಿ ಜಾತ್ರೆ ಮಾಡುತ್ತಾ ಬಂದಿರುತ್ತೆವೆ. ಇದೆ ಸೋಮವಾರ ಖಾಂಡ ಮಾಡಿ ಮಂಗಳವಾರದ ದಿವಸ ಮಹಾಂಕಾಳಿ ದೇವಿಯ ಪೂಜೆ ಮಾಡಿ ದಿವಸ ತಾಂಢಾದ ಎಲ್ಲಾ ಜನರಿಗೆ ಊಟ ಪ್ರಸಾದ ಕೋಟ್ಟಿರುತ್ತೆವೆ. ಅಂದಿನಿಂದ ನಮ್ಮ ತಾಂಢಾದ ಸಂಜುಕುಮಾರ ತಂದೆ ತುಕಾರಾಮ ಚವ್ಹಾಣ ನಮ್ಮ ಮೇಲೆ ವೈಷಮ್ಯ ಸಾಧಿಸಿ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದನು. ಹಿಗಿದ್ದು ಇಂದು ದಿನಾಂಕ:24.08.2017 ರಂದು ಬೆಳಿಗ್ಗೆ 08.30 ಗಂಟೆಗೆ ನಾನು ನನ್ನ ಗಂಡ ಮಗನಾದ ಚಂದ್ರಕಾಂತ ಎಲ್ಲರೂ ರೇಖು ಪೂಜಾರಿ ಅಂಗಡಿಯ ಎದುರಿಗೆ ನಿಂತುಕೊಂಡಾಗ ಅಲ್ಲಿಗೆ ಬಂದ ಸಂಜುಕುಮಾರ ಈತನು ನನ್ನ ಗಂಡನಿಗೆ ನೋಡಿ ಕುಷ್ಟ ರೋಗ ಇದೆ ಅವನಿಗ್ಯಾರು ಮುಟ್ಟಿಸಿಕೋಳ್ಳಬಾರದು ಆದರು ಸಹ ಮಹಾಂಕಾಳಿ ಜಾತ್ರೆಯಲ್ಲಿ ಓಡಾಡಿರುತ್ತಾನೆ ಅಂತಾ ಬೈಯ ತೊಡಗಿದನು ಆಗ ನಾನು ಯಾಕ ನನ್ನ ಗಂಡನಿಗೆ ಬೈಯುತ್ತಿ ದೇವರು ತಂದ ವೇಳೆ ಇದೆ ಅಂದರು ಸಂಜುಕುಮಾರ ಈತನು ನನಗೆ ರಂಡಿ ನನಗೆ ಎದುರು ಮಾತನಾಡುತ್ತಾಳೆ ಅಂತಾ ಬೈದು ಅಲ್ಲೆಬಿದ್ದಿದ್ದ ಕಟ್ಟಿಗೆ ತೆಗೆದುಕೊಂಡು ನನ್ನ ಎಡಗೈ ಹಸ್ತದ ಮೇಲ್ಬಾದಲ್ಲಿ ಹೋಡೆದು ರಕ್ತಗಾಯ ಪಡಿಸಿದನು. ಅಲ್ಲದೆ ಅದೇ ಕಟ್ಟಿಗೆಯಿಂದ ನನ್ನ ಬೆನ್ನಿಗೆ ಎರಡು ಛಪ್ಪಿಯ ಮೇಲೆ ಹೋಡೆದು ಗುಪ್ತ ಪೆಟ್ಟು ಮಾಡಿರುತ್ತಾನೆ ಆಗ ನನ್ನ ಮಗ ಚಂದ್ರಕಾಂತ ಜಗಳ ಬಿಡಿಸಲು ಬಂಧಾಗ ಅವನಿಗು ಕೈಯಿಂದ ಹೋಡೆಬಡೆ ಮಾಡಿರುತ್ತಾನೆ. ಆಗ ಅಲ್ಲೆಇದ್ದ ನನ್ನ ಗಂಡ, ನನ್ನ ಭಾವ ತುಕಾರಾಮ,ಮೋನು ಚವ್ಹಾಣ ಎಲ್ಲರೂ ಕೂಡಿಕೊಂಡು ನನಗೆ ಹೋಡೆಯುವುದನ್ನು ಬಿಡಿಸಿಕೊಂಡಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಮಲಾಪೂರ ಠಾಣೆ : ಶ್ರೀ ಸಂಜುಕುಮಾರ ತಂಧೆ ತುಕಾರಾಮ ಚವ್ಹಾಣ ಸಾ:ಭೀಮನಾಳ ತಾಂಡಾ ತಾ:ಜಿ:ಕಲಬುರಗಿ ರವರು ತಾಂಡಾದಲ್ಲಿ ಲೋಕಮಸಾಂದ ಮತ್ತು ಮಹಾಂಕಾಳಿ ದೇವಿಯ ಸಲುವಾಗಿ ತಾಂಡಾದವರೆಲ್ಲರು ಕೂಡಿ 65.65 ಜಾಗವನ್ನು ಕೋಟ್ಟಿದ್ದು ಜಾಗದಲ್ಲಿ ತುಕಾರಾಮ ಮತ್ತು ಅವರ ತಮ್ಮ ಶಿವಾಜಿ ಆಜಾಗವನ್ನು ತಮ್ಮ ಕಬ್ಜೆಯಲ್ಲಿ ತೆಗೆದುಕೊಂಡಿದ್ದು. ನಮ್ಮ ತಾಂಢಾದವರೆಲ್ಲರೂ ದೇವರಿಗೆ ಕೋಟ್ಟ ಜಾಗ ಬಿಟ್ಟು ಕೋಡಿರಿ ಅಂತಾ ಹೇಳಿದಾಗ ಅವರು ಜಾಗ ಬಿಟ್ಟುಕೊಡದೆ ಅವರೆ ಬಳಸಿಕೋಳ್ಳುತ್ತಿದ್ದಾರೆ. ಹಿಗಿದ್ದು ನಿನ್ನೆ ದಿನಾಂಕ:24.08.2017 ರಂದು  ಬೆಳಿಗ್ಗೆ 08.30 ಗಂಟೆಯ ಸೂಮಾರಿಗೆ ನಾನು ರೇಖು ಪುಜಾರಿ ಅಂಗಡಿಯ ಎದುರಿಗೆ ನಿಂತಾಗ 1. ಚಂದ್ರಕಾಂತ ತಂದೆ ಶಿವಾಜಿ ಚವ್ಹಾಣ 2. ತುಕಾರಾಮ ತಂದೆ ಮೇಗು ಚವ್ಹಾಣ ಪಂಡಿತ ತಂದೆ ತುಕಾರಾಮ ಚವ್ಹಾಣ ಜೈನಾಬಾಯಿ ಗಂಡ ಶಿವಾಜಿ ಚವ್ಹಾಣ ಸಾ:ಎಲ್ಲರೂ ಭೀಮನಾಳ ತಾಂಡಾ ಇವರೆಲ್ಲರೂ ನಾನು ಇದ್ದಲ್ಲಿಗೆ ಬಂದು ಅವರಲ್ಲಿ ಚಂಧ್ರಕಾಂತ ಈತನು ನಗೆ ಭೋಸಡಿ ಮಗನೆ ದೇವಿಯ ಜಾಗ ಯಾರು ಕೇಳುತ್ತಿಲ್ಲ ನಿನೆಕೆ ಕೇಳುತ್ತಿ ಅಂತಾ ಬೈದು ತನ್ನ ಕೈಯಲ್ಲಿದ್ದ ಬಿಡಿಗೆಯಿಂದ ನನ್ನ ತಲೆಯ ಮೇಲೆ ಹೋಡೆದು ರಕ್ತಗಾಐ ಪಡಿಸಿದನು ತುಕಾರಾಮ ಈತನು ರಂಡಿ ಮಗನಿಗೆ ಬಹಾಳಸೋಕ್ಕು ಆದಾ ಅಂತಾ ಬೈದು ಚಂಧ್ರಕಾಂತನ ಕೈಯಲ್ಲಿದ್ದ ಬಡಿಗೆಯನ್ನು ಕಸಿದುಕೊಂಡು ನನ್ನ ಬಲಗೈ ಬೆರಳುಗಳ ಮೇಲೆ ಹೋಡೆದು ರಕ್ತಗಾಯ ಮಾಡಿದನು. ನನ್ನ ಹೆಬ್ಬರಳಿಗೆ, ಹೆಬ್ಬರಳಿನ ಪಕ್ಕದ ಬೆರಳಿಗೆ ಹೋಡೆದಿದ್ದರಿಂದ ಮುರಿದಂತೆ ಆಗಿದೆ ಪಂಡಿತ ಈತನು ನನಗೆ ಕೈಯಿಂದ ಹೋಟ್ಟೆಗೆ ಬೆನ್ನಿಗೆ ಹೋಡೆದು ಗುಪ್ತ ಪೆಟ್ಟು ಮಾಡಿರುತ್ತಾನೆ. ಜೈನಾಬಾಯಿ ಇವಳು ಹಾಟ್ಯಾ ಯಾವಾಗಲು ನನಗೆ ಜಾಗದ ವಿಷಯದಲ್ಲಿ ತಕರಾರು ಮಾಡುತ್ತಾನೆ. ಇವನಿಗೆ ಬಿಡಬ್ಯಾಡರಿ ಖಲಾಸ ಮಾಡರಿ ಅಂತಾ ಒದರಾಡಿರುತ್ತಾಳೆ. ಅಲ್ಲೆಇದ್ದ ಭೋಜು ತಂಧೆ ಸೋಮು ನಾಯಕ ಮಾರುತಿ ತಂದೆ ಪೋಮು ಚವ್ಹಾಣ ಗೇಮು ತಂದೆ ಶಿವರಾಮ ಚವ್ಹಾಣ ಮೋನು ತಂದೆ ಢಾಕು ಚವ್ಹಾಣ ಇವರುಗಳು ಜಗಳವನ್ನು ಬಿಡಿಸಿಕೊಂಡಿರುತ್ತಾರೆ ಕಾರಣ ನನಗೆ ಹೋಡೆಬಡೆ ಮಾಡಿದ ಚಂಧ್ರಕಾಂತ ಹಾಗೂ ಇತರರ ವಿರುದ್ದ ಕಾನೂನ ರೀತಿ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.