POLICE BHAVAN KALABURAGI

POLICE BHAVAN KALABURAGI

29 March 2015

Kalaburagi District Reported Crimes

ಅಪಘಾತ ಪ್ರಕರಣ :
ಜೇವರ್ಗಿ ಠಾಣೆ : ದಿನಾಂಕ 27.03.2015 ರಂದು ಮಧ್ಯಾಹ್ನ ರಾಜು ಪತಂಗೆ ಈತನು ನಡೆಸುತ್ತಿದ್ದ ಮೋಟಾರು ಸೈಕಲ್‌ ನಂ ಕೆ.ಎ32ಎಕ್ಸ್2817 ನೇದ್ದರ ಮೇಲೆ ಶ್ರೀ. ಗುರುರಾಜ ತಂದೆ ಚಂದ್ರಶೇಖರ ದೇವತಕಲ್ ಸಾ|| ಬಸವೇಶ್ವರ ನಗರ ಜೇವರಗಿ ರವರು  ಕುಳಿತುಕೊಂಡು ಜೇವರ್ಗಿಯಿಂದ ಮಹಾಲಕ್ಷ್ಮಿ ಗುಡಿಯ ತಳಕ್ಕೆ ಹೋಗುತ್ತಿದ್ದಾಗ  ಕೋಳಕೂರ ಕ್ರಾಸ್ ಹತ್ತಿರ ಜೇವರ್ಗಿ ಕಲಬುರಗಿ ರಾಷ್ಟ್ರೀಯ ಹೆದ್ದಾರಿ ಹೋಗುತ್ತಿದ್ದಾಗ ಅದೇ ವೇಳೆಗೆ ಕಲಬುರಗಿ ಕಡೆಯಿಂದ ಬಂದ ಟಿಪ್ಪರ್ ನಂ ಕೆ.ಎ332451 ನೇದ್ದರ ಚಾಲಕನು ತನ್ನ ಟಿಪ್ಪರ್ ಅನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ಎದುರುಗಡೆಯಿಂದ ನಡೆಸಿಕೊಂಡು ಬಂದು ನಮ್ಮ ಮೋಟಾರು ಸೈಕಲ್‌ಗೆ ಬಂದು ಡಿಕ್ಕಿ ಪಡಿಸಿ ನಮಗೆ ಗಾಯಗೊಳಿಸಿ ತನ್ನ ಟಿಪ್ಪರ್ ಅನ್ನು ಅಲ್ಲೆ ಸ್ಥಳದಲ್ಲಿ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೊಸ ಮಾಡಿದ ಪ್ರಕರಣ :
ಜೇವರ್ಗಿ ಠಾಣೆ : ಶ್ರೀ. ನಿಂಗನಗೌಡ ಸಿಪಿಸಿ 1238 ಜೇವರ್ಗಿ ಠಾಣೆ ರವರು ಮಾನ್ಯ  ಜೆ.ಎಮ್.ಎಫ್.ಸಿ ನ್ಯಾಯಾಲಯ ಜೇವರ್ಗಿ ಯಿಂದ ಮಾನ್ಯ ನ್ಯಾಯಾಲಯದ ಖಾಸಗಿ ದೂರು ಹಾಜರುಪಡಿಸಿದ್ದು ಸದರ್ ಖಾಸಗಿ ದೂರಿನ ಸಾರಾಂಶವೇನೆಂದರೆ  ಶ್ರೀಕಾರ ಬೈಯೊಟೆಕ್ ಪ್ರೈವೇಟ್ ಲಿಮಿಟೆಡ್ ಶಹಾಪುರ ತಾ|| ಶಹಾಪುರ ಜಿ|| ಯಾದಗಿರ ರವರಿಗೆ  ಮಲ್ಕಪ್ಪ. ಲಕ್ಷ್ಮಿ ಕೃಷಿ ಕೇಂದ್ರ ಬುಟ್ನಾಳ ರೋಡ ಜೇವರ್ಗಿ  ರವರು ಮೋಸಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..