POLICE BHAVAN KALABURAGI

POLICE BHAVAN KALABURAGI

25 November 2015

Kalaburagi District Press Note

:: ಪತ್ರಿಕಾ ಪ್ರಕಟಣೆ ::
ಎ.ಪಿ.ಸಿ ಹುದ್ದೆಗಳ ನೇಮಕಾತಿ ಕುರಿತು ಸಿಇಟಿ ಪರೀಕ್ಷೆಯನ್ನು ದಿನಾಂಕ: 29-11-2015 ರಂದು ಬೆಳಿಗ್ಗೆ 11-00 ಗಂಟೆಯಿಂದ 12-30 ಗಂಟೆಯವರೆಗೆ ಕಲಬುರಗಿ ನಗರದ ಈ ಕೆಳಗಿನ (05) ಪರೀಕ್ಷಾ ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆ ನಡೆಯಲಿರುತ್ತದೆ.

1.  ವಿಜಯ ವಿದ್ಯಾಲಯ ಸಂಯುಕ್ತ ಪಿ.ಯು. ಕಾಲೇಜ, ಐ-ವಾನ್-ಶಾಹಿ ರಸ್ತೆ, ಕಲಬುರಗಿ.
2. ಪ್ರಜ್ಞಾ ಇಂಗ್ಲೀಷ ಮೀಡಿಯಮ್ ಹೈಯರ ಪ್ರೈಮರಿ ಸ್ಕೂಲ್,ಎಸ್.ಟಿ.ಬಿ.ಟಿ. ದರ್ಗಾ ರಸ್ತೆ, ಕಲಬುರಗಿ.
3. ಮಿಲಿಂದ ಪಿ.ಯು. ಕಾಲೇಜ, ಎಸ್.ಟಿ.ಬಿ.ಟಿ. ಹತ್ತಿರ, ದರ್ಗಾ ರಸ್ತೆ, ಕಲಬುರಗಿ.
4. ಸರಕಾರಿ ಮಹಿಳಾ ಪಿ.ಯು. ಕಾಲೇಜ, ಹಳೆ ಎಸ್.ಪಿ ಆಫಿಸ್ ಹತ್ತಿರ, ಕಲಬುರಗಿ.
5. ಪೊಲೀಸ್ ತರಬೇತಿ ಕಾಲೇಜು, ನಾಗನಹಳ್ಳಿ, ಕಲಬುರಗಿ.

      ಎಪಿಸಿ ಹುದ್ದೆಯ ನೇಮಕಾತಿಗೆ ಸಂಬಂಧಿಸಿದಂತೆ, ಇಟಿ/ಪಿಎಸ್ಟಿ ಪರೀಕ್ಷೆಯಲ್ಲಿ ಅರ್ಹ ಹೊಂದಿದ ಕಲಬುರಗಿ ಜಿಲ್ಲೆಯಲ್ಲಿ 2200 ಅರ್ಹ ಅಭ್ಯರ್ಥಿಗಳ ಲಿಖಿತ ಪರೀಕ್ಷೆಯನ್ನು ಮೇಲಿನ ಪರೀಕ್ಷಾ ಕೇಂದ್ರಗಳಲ್ಲಿ ಕೈಕೊಳ್ಳಲಾಗುತ್ತಿದ್ದು, ಅಭ್ಯರ್ಥಿಗಳು ಪರೀಕ್ಷೆಯ ಮುನ್ನ ಗುರುತಿನ ಚೀಟಿ, ಹಾಗೂ ಇಂಟರನೆಟ್ ಸೆಂಟರ್ಗಳಿಂದ ಕರೆ ಪತ್ರವನ್ನು ತೆಗೆದುಕೊಂಡು ಪರೀಕ್ಷೆಗೆ ಹಾಜರಾಗುವುದು.  ಪರೀಕ್ಷೆಗೆ ಕರೆ ಪತ್ರ, ಗುರುತಿನ ಚೀಟಿ, ಮತ್ತು ಪೆನ್ ಇವುಗಳನ್ನು ಹೊರತುಪಡಿಸಿ ಇನ್ನಾವುದೇ ಪೇಪರ್, ಮೊಬೈಲ್, ಲ್ಯಾಪಟಾಪ್, ಕ್ಯಾಲಕುಲೇಟರ್ ಇವುಗಳನ್ನು ಪರೀಕ್ಷಾ ಕೇಂದ್ರದಲ್ಲಿ ನಿರ್ಬಂಧಿಸಲಾಗಿದೆ.
                                                                                               ಪೊಲೀಸ್ ಅಧೀಕ್ಷಕರು,
                                 ಕಲಬುರಗಿ.

Kalaburagi District Press Note

                            ಪತ್ರಿಕಾ ಪ್ರಕಟಣೆ                         ದಿನಾಂಕ : 25/11/2015

          ಹೈದ್ರಾಬಾದ ಕರ್ನಾಟಕ ಪ್ರದೇಶದ ಕಲಬುರಗಿ ಮತ್ತು ಯಾದಗೀರಿ ಜಿಲ್ಲೆಗಳಲ್ಲಿ ನಡೆಯುತ್ತಿರುವ ದಲಿತರ ಸಮಸ್ಯಗಳ ಬಗ್ಗೆ ಚರ್ಚಿಸುವ ಸಲುವಾಗಿ ಈಶಾನ್ಯ ವಲಯದ ಐಜಿಪಿ ಯವರಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕರಾದ ಡಾಃ ಮಲ್ಲೇಶಿ ಸಜ್ಜನ ಹಾಗು ಸಂಘಟನಾ ಸಂಚಾಲಕರಾದ ಶ್ರೀ ಅರ್ಜುನ ಭದ್ರೆ ಇವರು ಭೇಟಿ ಮಾಡಲು ಬಂದಾಗ ಸಂಪರ್ಕ ಕೊರತೆಯಿಂದಾಗಿ ಮತ್ತು ಕೆಲಸದ ಒತ್ತಡದಿಂದಾಗಿ ಭೇಟಿಯಾಗಲು ಸಾದ್ಯವಾಗಿರದ ಕಾರಣ ಸದರಿಯವರನ್ನು, ಸಮಸ್ಯಗಳ ಬಗ್ಗೆ ಚರ್ಚಿಸಲು ದಿನಾಂಕ 27-11-2015 ರಂದು ಬೆಳಿಗ್ಗೆ 11-00 ಗಂಟೆಗೆ ಐಜಿಪಿ ಈಶಾನ್ಯ ವಲಯ ಕಛೇರಿಯಲ್ಲಿ ಸಮಯ ನಿಗಧಿ ಪಡಿಸಿದ್ದರಿಂದ ಈ ಬಗ್ಗೆ ದಿನಾಂಕ 27-11-2015 ರಂದು ನಡೆಸಲು ಉದ್ದೇಶಿಸಿದ ಪ್ರತಿಭಟನೆಯನ್ನು ಹಿಂಪಡೆಯಲು ಕೋರಿಕೊಂಡ ಮೇರೆಗೆ ಪ್ರತಿಭಟನೆಯನ್ನು ಹಿಂಪಡೆದುಕೊಂಡಿರುತ್ತಾರೆಂದು ತಿಳಿದುಬಂದಿರುತ್ತದೆ.

                                                               ಪೊಲೀಸ ಮಹಾನಿರೀಕ್ಷಕರು,
                                                                   (ಈ.ವ.) ಕಲಬುರಗಿ.

Kalaburagi District Reported Crimes


ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಅಫಜಲಪೋರ ಠಾಣೆ : ದಿನಾಂಕ 24-11-2015 ರಂದು  ಅಫಜಲಪೂರ ಪಟ್ಟಣದ  ಡಿಗ್ರಿ ಕಾಲೇಜ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ, ಜನರನ್ನು ವಂಚಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಟ್ಟು, ಮೋಸದಿಂದ ಮಟಕಾ ಬರೆದುಕೊಳ್ಳುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ, ಶ್ರೀಮಂತ ಇಲ್ಲಾಳ ಪಿ.ಎಸ್.ಐ ಡಿ.ಸಿ.ಬಿ ಘಟಕ ಹಾಗೂ ಸಿಬ್ಬಂದಿ ಜನರಾದ 1) ಪ್ರದೀಪ ಕುಲಕರ್ಣಿ ಹೆಚ್ ಸಿ 420 2) ನಾಗೇಂದ್ರ ಸಿಪಿಸಿ 386 ಮತ್ತು ಪಂಚರೊಂದಿಗೆ  ಮತ್ತು ಅಫಜಲಪೂರ ಠಾಣೆಯ ಶ್ರೀ ಸುರೇಶ ಸಿಪಿಸಿ-801  ಕೂಡಿಕೊಂಡು ಸ್ಥಳಕ್ಕೆ ಹೋಗಿ, ಅಫಜಲಪೂರ ಪಟ್ಟಣದ ಡಿಗ್ರಿ ಕಾಲೇಜಿನಿಂದ  ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ಡಿಗ್ರಿ ಕಾಲೇಜಿನ ಹತ್ತಿರ ಇರುವ ಒಂದು ಹೋಟೆಲಿನ ಮುಂದಿನ  ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ವ್ಯಕ್ತಿಗಳು ನಿಂತುಕೊಂಡು ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಕೊಡುತ್ತೆನೆ ಅಂತಾ ಕರೆದು, ಜನರಿಗೆ ವಂಚಿಸಿ ಅವರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯ ಬರೆದುಕೊಟ್ಟು, ಮೋಸದಿಂದ ಮಟಕಾ ಬರೆದುಕೊಳ್ಳುತ್ತಿದ್ದುದನ್ನು ಖಚಿತಪಡಿಸಿಕೊಂಡು ದಾಳಿ ಮಾಡಿದಾಗ ಒಬ್ಬ ಸಿಕ್ಕಿದ್ದು  ಕತ್ತಲಲ್ಲಿ ಮೂರು ಜನರು ಓಡಿ ಹೋದರು ಸಿಕ್ಕವನ  ಹೆಸರು ವಿಳಾಸ ವಿಚಾರಿಸಲಾಗಿ  ಚಂದ್ರಕಾಂತ ತಂದೆ ಸಿದರಾಯ ಅಳ್ಳಗಿ ಸಾ : ಅಳ್ಳಗಿ ಹಾ:: ಅಫಜಲಪೂರ  ಅಂತಾ ತಿಳಿಸಿದನು. ಸದರಿಯವನನ್ನು ಮಟಕಾ ಬರೆದುಕೊಂಡು ಎಲ್ಲಿ ಕೊಡುತ್ತಿರಿ, ಯಾರಿಗೆ ಕೊಡುತ್ತಿ ಎಂಬುದರ ಬಗ್ಗೆ ವಿಚಾರಿಸಿದ್ದು, ಸದರಿಯವನು ಇಲ್ಲಿ ಜನರಿಂದ ಹಣ ಪಡೆದು ಮಟಕಾ ಬರೆದುಕೊಂಡು ಮಹಾರಾಷ್ಟ್ರದ ದುದನಿಗೆ ಹೋಗಿ ಬಸ್ಸ ನಿಲ್ದಾಣದಲ್ಲಿ ತಿರುಗಾಡಿ ಮಟಕಾ ಬುಕ್ಕಿಗಳಿಗೆ ಕೋಡುತ್ತೇನೆ ಅವರ ಹೇಸರು ನಮಗೆ ಗೊತ್ತಿರುವುದಿಲ್ಲ ಅಂತಾ ತಿಳಿಸಿದನು. ನಂತರ ಓಡಿ ಹೋದ ಮೂರು ಜನರ ಹೆಸರು ವಿಳಾಸ ವಿಚಾರಿಸಲಾಗಿ 1) ಚಂದ್ರು ತಂದೆ ಅಪ್ಪಾಸಾಬ ಅವರಾದಿ ಸಾ : ಮಡ್ಡಿ ಏರಿಯಾ ಅಫಜಲಪೂರ ಇತನು ಕೂಡ ಮಟಕಾ ಬರೆದುಕೊಳ್ಳುತ್ತಾನೆ ನಾನು ಇವನ ಸಹಾಯಕನಾಗಿ ಕೆಲಸ ಮಾಡುತ್ತೇನೆ ಅಂತ ತಿಳಿಸಿದ್ದು ಇನ್ನೂ ಇಬ್ಬರ ಹೆಸರು  2) ರಮೇಶ  ಸಾ:ಅಫಜಲಪೂರ 2) ಸೂರ್ಯಕಾಂತ ಕೋಳಿಗೇರಿ ಸಾ :ಅಫಜಲಪೂರ ಅಂತ ತಿಳಿಸಿದ್ದು ಇವರು ಮಟಕಾ ಬರೆಸುತಿದ್ದರು ಅಂತ ತಿಳಿಸಿದನು   ನಂತರ ಸದರಿಯವನ ಅಂಗ ಶೋದನೆ ಮಾಡಲಾಗಿ ಮಟಕಾ ಜೂಜಾಟಕ್ಕೆ ಸಂಬಂದ ಪಟ್ಟ 1120/- ರೂ ನಗದು ಹಣ, ಎರಡು ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳು, ಒಂದು ಪೇನ್ನ ಕಾರ್ಬನ ಕಂಪನಿಯ ಹಳೆಯ ಸಾದಾ ಮೋಬೈಲ ಪೋನ ಅಕಿ-500/- ರೂ ಇವುಗಳನ್ನು ವಶಪಡಿಸಿಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ
ಕಮಲಾಪೋರ ಠಾಣೆ : ಶ್ರೀ ದೇವಿದಾಸ ತಂದೆ ಭದ್ದು ಜಾಧವ ಇವರು ದಿನಾಂಕ 23.11.2015 ರಂದು ಸಾಯಂಕಾಲ 4 ಗಂಟೆಯ ಸುಮಾರಿಗೆ ನಮ್ಮ ಗ್ರಾಮಕ್ಕೆ ಟ್ಯಾಕ್ಟರ ನಂ ಕೆಎ 28 ಟಿಬಿ 7805 ನೇದ್ದನು ಚಾಲಕನಾದ ಮಂಜು ಇತನೊಂದಿಗೆ ನಮ್ಮೂರಿಗೆ ಕಳುಹಿಸಿರುತ್ತಾನೆ. ನಿನ್ನೆ ದಿನಾಂಕ:23/11/2015 ಸಾಯಂಕಾಲ 6:00 ಗಂಟೆಯ ಸುಮಾರಿಗೆ ನಾನು ನನ್ನ ಹೆಂಡತಿ 1) ಲಕ್ಷ್ಮಿಬಾಯಿ ಗಂಡ ದೇವಿದಾಸ ಜಾದವ ಮತ್ತು ನಮ್ಮೂರಿನ 2) ಲಲೀತಾಬಾಯಿ ತಂದೆ ದೇವಿದಾಸ ಜಾದವ 3) ವಸಂತ ತಂದೆ ಉಮಾಶಿಂಗ್ ಜಾದವ 4) ಸೇವುಬಾಯಿ ಗಂಡ ವಸಂತ ಜಾದವ 5) ಕ್ರೀಷ್ಣಾ ತಂದೆ ವಸಂತ ಜಾದವ 6) ಜೈಸಿಂಗ್ ತಂದೆ ಶಿತ್ಯಾನಾಯಕ ರಾಠೋಡ 7) ಕೃಷ್ಣಾ ತಂದೆ ರಾಮದಾಸ 8) ಕಲಾವತಿ ಗಂಡ ಮೊಗಲಪ್ಪ ನಡುವಿನದೊಡ್ಡಿ, 9) ಮೊಗಲಪ್ಪ ನಡುವಿನದೊಡ್ಡಿ, 10) ಸವೀತಾಬಾಯಿ ಗಂಡ ಬಜರಂಗ ಜಾದವ 11) ಮೀರಾಬಾಯಿ ಗಂಡ ರಾಮದಾಸ 12) ಜಗುಬಾಯಿ ಗಂ ಜೈಸಿಂಗ್ ರಾಠೋಡ 13) ರವಿ ತಂದೆ ಜೈಸಿಂಗ್ ರಾಠೋಡ ಹಾಗೂ ಇತರರು ಕೂಡಿಕೊಂಡು ನಮ್ಮೂರಿನಿಂದ ಘತ್ತರಗಿಯ ಸಕ್ಕರೆ ಪ್ಯಾಕ್ಟರಿಯ ವ್ಯಾಪ್ತಿಯಲ್ಲಿ ಕಬ್ಬು ಕಡಿಯುವದಕ್ಕಾಗಿ ಕೂಲಿ ಕೇಲಸಕ್ಕೆ ಹೋಗುತ್ತಿದ್ದಾಗ ದಿನಾಂಕ 24.11.2015 ರಂದು ಬೆಳ್ಳಿಗ್ಗಿನ ಜಾವ 5 ಗಂಟೆಯ ಸುಮಾರಿಗೆ ಹುಮನಾಬಾದ ಕಲಬುರಗಿ ರೋಡಿನಲ್ಲಿರುವ ರೋಡ ಕಿಣ್ಣಿ ಬ್ರೀಜ್ಡ್ ಮೇಲೆ ನಮ್ಮ ಟ್ಯಾಕ್ಟರ ಚಾಲಕುನು ಟ್ರ್ಯಾಕ್ಟರ ಚಲಾಯಿಸಿಕೊಂಡು ಬ್ರೀಜ್ಡ್ ಹೆಚ್ಚಿನ ಭಾಗ ದಾಟಿ ಕಲಬುರಗಿ ಕೆಡೆಗೆ ಇನ್ನೂ 4-5 ಫೀಟ್ ಬ್ರಿಜ್ಡ್ ಇರುವಾಗ ಎದರುಗಡೆಯಿಂದ ಅಂದರೆ ಕಲಬುರಗಿ ಕೆಡೆಯಿಂದ ಒಂದು ಲಾರಿ ಚಾಲಕ ತನ್ನ ಲಾರಿಯನ್ನು ಅತೀವೇಗದಿಂದ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಟ್ರ್ಯಾಕ್ಟರ ಬ್ರಿಜ್ಡ್ ದಾಟುವರೆಗೆ ನಿಲ್ಲದೆ ಬ್ರಿಜ್ಡ್ ಒಳಗಡೆ ಬಂದು ನಮ್ಮ ಟ್ರಾಕ್ಟರ ಡಿಕ್ಕಿ ಹೊಡೆದು ಅಪಘಾತ ಪಡಿಸಿರುತ್ತಾನೆ ಸದರಿ ಅಪಘಾತದಿಂದಾಗಿ ನಾವೇಲ್ಲರು ಚೆಲ್ಲಾ ಪಿಲ್ಲಿಯಾಗಿ ರೋಡಿ ಮೇಲೆ ಬಿದ್ದಿರುತ್ತೆವೆ.ನಂತರ ಸಾವರಿಸಿಕೊಂಡು ನಾನು ಎದ್ದು ನೋಡಲಾಗಿ 1) ಸೇವುಬಾಯಿ ಗಂಡ ವಸಂತ ಜಾದವ ಸಾ: ಇರಕಪಲ್ಲಿ 2) ಕೃಷ್ಣಾ ತಂದೆ ವಸಂತ ಜಾದವ 3) ಜೈಸಿಂಗ್ ತಂದೆ ಸಿತ್ಯಾನಾಯಕ ರಾಠೋಡ ಸಾ: ಡವೂರ 4) ಕೃಷ್ಣಾ ತಂದೆ ರಾಮದಾಸ ಸಾ: ಇರಕಪಲ್ಲಿ ಇವರುಗಳು ಅಪಘಾತದಿಂದಾದ ಗಾಯಗಳಿಂದಾಗಿ ಸ್ಥಳಲ್ಲಿ ಮೃತ ಪಟ್ಟಿದ್ದು ಇರುತ್ತದೆ.1.ಕಲಾವತಿ ಗಂಡ ಮೊಗಲಪ್ಪ ನಡಿವಿನದೊಡ್ಡಿ 2. ಸವೀತಾಬಾಯಿ ಗಂಡ ಬಜರಂಗ ಜಾದವ 3. ಮೀರಾಬಾಯಿ ಗಂಡ ರಾಮದಾಸ ರಾಠೋಡ ಸಾ:ಖರಜಗುತ್ತಿ 4. ಲಲಿತಾಬಾಯಿ ತಂದೆ ದೇವಿದಾಸ 5.ಜಗುಬಾಯಿ ಗಂ ಜೈಸಿಂಗ್ ರಾಠೋಡ 6 ರವಿ ತಂದೆ ಜೈಸಿಂಗ್ ರಾಠೋಡ ಇವರುಗಳಿಗೆ ಸಾದಾ ಮತ್ತು ಭಾರಿಗಾಯಗಳಾಗಿದ್ದು ನನಗೆ ಯಾವುದೆ ಗಾಯಗಳಾಗಿರುವದಿಲ್ಲ. ನಂತರ ನಮಗೆ ಅಪಘಾತ ಪಡಿಸಿದ ಚಾಲಕ ಜನರು ಜಮಾಯಿಸಿದ್ದರಿಂದ ತನ್ನ ಲಾರಿ ಅಲ್ಲೆ ಬಿಟ್ಟು ಓಡಿ ಹೋಗಿರುತ್ತಾನೆ. ಸದರಿ ಲಾರಿ ನಂಬರ ನೋಡಲಾಗಿ ಕೆಎ 28 ಬಿ 4599 ಇರುತ್ತದೆ. ನಂತರ ಯಾರೊ 108 ಅಂಬುಲೇನ್ಸಕ್ಕೆ ಪೋನ ಮಾಡಿದ್ದು ಅಂಬುಲೇನ್ಸ ಬಂದ ನಂತರ ಗಾಯಾಳುಗಳನ್ನು ಅಂಬುಲೇನ್ಸದಲ್ಲಿ ಹಾಕಿಕೊಂಡು ಉಪಚಾರ ಕುರಿತು ತೆಗೆದುಕೊಂಡು ಹೋಗಿರುತ್ತಾರೆ. ಗಾಯಾಳು ಸವೀತಾಬಾಯಿ ಗಂಡ ಬಜರಂಗ ಜಾಧವ ಇವಳು ಉಪಚಾರ ಪಡೆಯುತ್ತಾ ಉಪಚಾರ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾಳೆ ಅಂತ ಗೋತ್ತಾಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.