::
ಪತ್ರಿಕಾ ಪ್ರಕಟಣೆ ::
ಎ.ಪಿ.ಸಿ ಹುದ್ದೆಗಳ ನೇಮಕಾತಿ ಕುರಿತು ಸಿಇಟಿ ಪರೀಕ್ಷೆಯನ್ನು
ದಿನಾಂಕ: 29-11-2015 ರಂದು ಬೆಳಿಗ್ಗೆ 11-00 ಗಂಟೆಯಿಂದ 12-30 ಗಂಟೆಯವರೆಗೆ ಕಲಬುರಗಿ ನಗರದ ಈ ಕೆಳಗಿನ (05) ಪರೀಕ್ಷಾ ಕೇಂದ್ರಗಳಲ್ಲಿ ಲಿಖಿತ
ಪರೀಕ್ಷೆ ನಡೆಯಲಿರುತ್ತದೆ.
1. ವಿಜಯ ವಿದ್ಯಾಲಯ ಸಂಯುಕ್ತ ಪಿ.ಯು.
ಕಾಲೇಜ, ಐ-ವಾನ್-ಶಾಹಿ ರಸ್ತೆ, ಕಲಬುರಗಿ.
2.
ಪ್ರಜ್ಞಾ ಇಂಗ್ಲೀಷ ಮೀಡಿಯಮ್ ಹೈಯರ ಪ್ರೈಮರಿ ಸ್ಕೂಲ್,ಎಸ್.ಟಿ.ಬಿ.ಟಿ. ದರ್ಗಾ ರಸ್ತೆ, ಕಲಬುರಗಿ.
3.
ಮಿಲಿಂದ ಪಿ.ಯು. ಕಾಲೇಜ, ಎಸ್.ಟಿ.ಬಿ.ಟಿ. ಹತ್ತಿರ, ದರ್ಗಾ ರಸ್ತೆ, ಕಲಬುರಗಿ.
4.
ಸರಕಾರಿ ಮಹಿಳಾ ಪಿ.ಯು. ಕಾಲೇಜ, ಹಳೆ ಎಸ್.ಪಿ ಆಫಿಸ್ ಹತ್ತಿರ, ಕಲಬುರಗಿ.
5.
ಪೊಲೀಸ್ ತರಬೇತಿ ಕಾಲೇಜು, ನಾಗನಹಳ್ಳಿ, ಕಲಬುರಗಿ.
ಎಪಿಸಿ ಹುದ್ದೆಯ ನೇಮಕಾತಿಗೆ
ಸಂಬಂಧಿಸಿದಂತೆ,
ಇಟಿ/ಪಿಎಸ್ಟಿ ಪರೀಕ್ಷೆಯಲ್ಲಿ ಅರ್ಹ ಹೊಂದಿದ ಕಲಬುರಗಿ
ಜಿಲ್ಲೆಯಲ್ಲಿ 2200 ಅರ್ಹ ಅಭ್ಯರ್ಥಿಗಳ ಲಿಖಿತ ಪರೀಕ್ಷೆಯನ್ನು ಮೇಲಿನ ಪರೀಕ್ಷಾ ಕೇಂದ್ರಗಳಲ್ಲಿ
ಕೈಕೊಳ್ಳಲಾಗುತ್ತಿದ್ದು,
ಅಭ್ಯರ್ಥಿಗಳು ಪರೀಕ್ಷೆಯ ಮುನ್ನ ಗುರುತಿನ ಚೀಟಿ, ಹಾಗೂ ಇಂಟರನೆಟ್
ಸೆಂಟರ್ಗಳಿಂದ ಕರೆ ಪತ್ರವನ್ನು ತೆಗೆದುಕೊಂಡು ಪರೀಕ್ಷೆಗೆ ಹಾಜರಾಗುವುದು. ಪರೀಕ್ಷೆಗೆ ಕರೆ ಪತ್ರ, ಗುರುತಿನ ಚೀಟಿ, ಮತ್ತು ಪೆನ್
ಇವುಗಳನ್ನು ಹೊರತುಪಡಿಸಿ ಇನ್ನಾವುದೇ ಪೇಪರ್,
ಮೊಬೈಲ್,
ಲ್ಯಾಪಟಾಪ್,
ಕ್ಯಾಲಕುಲೇಟರ್ ಇವುಗಳನ್ನು ಪರೀಕ್ಷಾ ಕೇಂದ್ರದಲ್ಲಿ
ನಿರ್ಬಂಧಿಸಲಾಗಿದೆ.
ಪೊಲೀಸ್ ಅಧೀಕ್ಷಕರು,
ಕಲಬುರಗಿ.
No comments:
Post a Comment