POLICE BHAVAN KALABURAGI

POLICE BHAVAN KALABURAGI

16 May 2017

Kalaburagi District Reported Crimes

ಅಪಘಾತ ಪ್ರಕರಣ :
ಜೇವರಗಿ ಠಾಣೆ : ಶ್ರೀ ತಾಹೀರೋದ್ದೀನ್ ತಂದೆ ಇಮಾಮ್ ಸಾಬ ನಾಯಿಕೊಡಿ ಸಾ: ನೆಲೋಗಿ ತಾ: ಜೇವರಗಿ ರವರು ದಿನಾಂಕ:- 14-5-2017 ರಂದು ಮುಂಜಾನೆ ನನ್ನ ಮಗನಾದ ಹಮ್ಮೀದ್ ಇತನು ತನ್ನ ಹೆಂಡತಿ ನೌಸೀನ್ ಬೇಗಂ ಮತ್ತು ಮಕ್ಕಳಾದ ಫಿರೋಜ, ಅಪ್ರೊಜ ಇವರೆಲ್ಲರು ಕೂಡಿ ನಮ್ಮೂರಿನಿಂದ ನಮ್ಮ ಮೋಟಾರ ಸೈಕ್ಲಲ್ ನಂಬರ ಕೆ.ಎ-25-ಎನ್-8796 ನೆದರ ಮೇಲೆ ಕುಳಿತುಕೊಂಡು ಅಣಬಿ ರೋಜಾ ಗ್ರಾಮಕ್ಕೆ ಸಂಬಂಧಿಕರ ಮದುವೆ ಕಾರ್ಯಕ್ರಮಕ್ಕೆ ಹೊಗಿದ್ದರು. ಇಂದು ದಿನಾಂಕ:- 15-05-2017 ರಂದು ಮಧ್ಯಹ್ನ ವೇಳೆಗೆ ನಾನು ನೇಲೋಗಿಯಲ್ಲಿ ಇದ್ದಾಗ ಜೇವರಗಿಯಿಂದ ಚಾಂದಸಾಬ ಜಮಾದಾರ ಇವರು ಪೋನ್ ಮಾಡಿ ನಿಮ್ಮ ಮಗನಿಗೆ ಮತ್ತು ಅವನ ಹೆಂಡತಿ ಮಕ್ಕಳಿಗೆ ಜೇವರಗಿ ಪಟ್ಟಣದ ಬೂತಪೂರ ಕಲ್ಯಾಣ ಮಂಟಪ ಹತ್ತಿರ ಜೇವರಗಿ-ಶಹಾಪೂರ ರೊಡಿನಲ್ಲಿ ಎಕ್ಸಿಡೆಂಟ್ ಆಗಿರುತ್ತದೆ. ಅಫಘಾತದಲ್ಲಿ ನಿಮ್ಮ ಮಗ ಹಮ್ಮೀದ್ ಮತ್ತು ಅವನ ಮಗ ಫಿರೋಜ ಇಬ್ಬರೂ ಸ್ಥಳದಲ್ಲಿಯೆ ಮೃತಪಟ್ಟಿದ್ದಾರೆ  ಎಂದು ಹೇಳಿದ ಕೂಡಲೆ ನಾನು ಮತ್ತು ನಮ್ಮ ಸಂಭಂದಿಕರು ಕೂಡಿಕೊಂಡು ಜೇವರಗಿ ಸರಕಾರಿ ದವಾಖಾನೆಗೆ ಬಂದು ನೊಡಲು ನನ್ನ ಮಗ ಹಮ್ಮೀದ್ ವಯಾಃ 30 ವರ್ಷ, ಇತನಿಗೆ ಬಲಗಣ್ಣಿನ ಹತ್ತಿರ ಬಲಕಾಲಿನ ಹತ್ತಿರ ಗದ್ದಕ್ಕೆ ಬಲಕೈ ಅಂಗೈ ಮುಂಗೈ ಹತ್ತಿರ ರಕ್ತಗಾಯ ಮತ್ತು ಬಲಕಾಲಿನ ತೋಡೆಗೆ ಭಾರಿ ಗಾಯವಾಗಿದ್ದು ಅವನು ಮೃತಪಟ್ಟಿದ್ದು. ಮತ್ತು  ಅವನ ಮಗೆ ಫಿರೋಜ ವಯ:5 ವರ್ಷ ಇತನಿಗೆ ಎಡಕೈಮುರಿದಿದ್ದು ಹೊಟ್ಟೆಯ ಮೇಲೆ ಭಾರಿ ಗಾಯ ಬಲಕಾಲಿನ ತೊಡೆಯ ಹತ್ತಿರ ಭಾರಿ ರಕ್ತ ಗಾಯವಾಗಿ ಅವನು ಸಹ ಮೃತಪಟ್ಟಿದ್ದನು. ಮತ್ತು ಅಲ್ಲಿಯೆ ಇನ್ನೊಬ್ಬ ಮನುಷ್ಯನ ಹೆಣ ಇತ್ತು. ಅವನು ಯಲ್ಲಪ್ಪ ತಂದೆ ಅಯ್ಯಪ್ಪ ಪೂಜಾರಿ ಸಾ: ಮಲ್ಲಾ(ಬಿ) ಅಂತ ಗೊತ್ತಾಯಿತು ಅಲ್ಲಿಯೆ ಚಾಂದಾಸಾಬ ಜಮಾದಾರ, ಮಾಳಪ್ಪ ತಂದೆ ಶರಣಪ್ಪ ಪೂಜಾರಿ ಇದ್ದರು ಅವರಿಗೆ ನಾನು ಕೇಳಲಾಗಿ ಮಾಳಪ್ಪ ಪೂಜಾರಿ ಇತನು ಹೇಳಿದ್ದೆನೆಂದರೆ ನಾನು ಇಂದು ದಿನಾಂಕ:- 15-05-2017 ರಂದು ಮಧ್ಯಾಹ್ನ 12=00 ಗಂಟೆಯ ಸುಮಾರಿಗೆ ಜೇವರಗಿ-ಶಹಾಪೂರ ಮುಖ್ಯ ರಸ್ತೆ ಭುತಪೂರ ಕಲ್ಯಾಣ ಮಂಟಪ ಹತ್ತಿರ ರೊಡಿನಲ್ಲಿ ಬರುತ್ತಿದ್ದೇನು ನನ್ನ ಮುಂದೆ ನಮ್ಮೂರ ಕರೇಪ್ಪ ತಂದೆ ಬಸಣ್ಣ ಪೂಜಾರಿ ಇತನು ತನ್ನ ಮೊಟಾರ ಸೈಕಲ್ ಮೇಲೆ ನಮ್ಮ ಅಣ್ಣನ ಮಗ ಯಲ್ಲಪ್ಪ ಇತನಿಗೆ ಕೂಡಿಸಿಕೊಂಡು  ಹೊಗುತ್ತಿದ್ದನು ಅವನ ಮುಂದೆ ಒಂದು ಮೊಟಾರ ಸೈಕಲ್ ಸಹ ಹೊಗುತ್ತಿತು ಅದೇ ವೇಳೆಗೆ ಜೇವರಗಿ ಕಡೆಯಿಂದ ಒಂದು ಕಾರನ್ನು ಅದರ ಚಾಲಕನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನನ್ನ ಎದುರಿಗೆ ಹೊಗುತ್ತಿದ್ದ ಮೊಟಾರ ಸೈಕಲಕ್ಕೆ ಡಿಕ್ಕಿ ಪಡಿಸಿ ನಂತರ ನಮ್ಮೂರ ಕರೆಪ್ಪನ ಮೊಟಾರ ಸೈಕಲ್ ಕ್ಕೆ ಡಿಕ್ಕಿ ಪಡಿಸಿದನು ಆಗ  ಎರಡು  ಮೊಟಾರ ಸೈಕಲ್ ಗಳ ಮೇಲೆ ಕುಳಿತವರು ಮೊಟಾರ ಸೈಕಲದೊಂದಿಗೆ ಬಿದ್ದರು. ಮುಂದೆ ಹೊಗಿ ಕಾರ ಪಲ್ಟಿ ಆಗಿ ರೊಡಿನ ಸೈಡಿನಲ್ಲಿ ಬಿದ್ದಿರುತ್ತದೆ. ನಾನು ಮತ್ತು ರೊಡಿನಲ್ಲಿ ಬರುತ್ತಿದ್ದ ಚಾಂದಸಾಬ ಜಮಾದಾರ ಇನ್ನಿತರರು ನೊಡಿ ಸಮೀಪ್ ಹೊಗಿ ನೊಡಲು  ನನ್ನ ಅಣ್ಣನ ಮಗ ಯಲ್ಲಪ್ಪ ತಂದೆ ಅಯ್ಯಪ್ಪ ಪೂಜಾರಿ ಇತನಿಗೆ ಹಣೆಗೆ ರಕ್ತಗಾಯ ಬಲಕೈ ಮತ್ತು ಎಡಕಾಲ ಮುರಿದು ಭಾರಿ ಗಾಯವಾಗಿ ಸ್ಥಳದಲ್ಲಿಯೆ ಸತ್ತಿದ್ದನು. ಮೊಟಾರ ಸೈಕಲ್ ನಡೆಸುತ್ತಿದ್ದ ಕರೆಪ್ಪನಿಗೂ  ಸಹ ಬಾರಿ ಗಾಯಗಳಾಗಿದ್ದವು ಅವರ ಮೊಟಾರ್ ಸೈಕಲ್ಲ ಜಜ್ಜಿ ಹೋಗಿದ್ದರಿಂದ ನಂಬರ ಕಂಡಿರುವುದಿಲ್ಲಾ ಅದರ ಚೆಸ್ಸಿ ನಂಬರ MD2DSJZZZUWGO6240 ನೇದ್ದು ಇತ್ತು. ಇನ್ನೋಂದು ಮೋಟಾರ ಸೈಕಲ್ ಮೇಲೆ ಬರುತ್ತಿದ್ದವರಿಗೆ ನೊಡಲು ನಿಮ್ಮ ಮಗ ಹಮ್ಮೀದ ಇತನಿಗೆ ಬಲಗಣಿನ ಹುಬ್ಬಿನ ಹತ್ತಿರ ಬಲಗಲ್ಲಕ್ಕೆ ಬಲಕೈಗೆ ಮತ್ತು ಬಲಕಾಲಿನ ತೊಡೆಗೆ ಭಾರಿ ರಕ್ತ ಗಾಯವಾಗಿ ಸ್ಥಳದಲ್ಲಿಯೆ  ಸತ್ತಿದ್ದನು. ಮತ್ತು ಅವನ ಮಗ ಅಫ್ರೋಜ ಇತನಿಗೆ ಎಡಕೈ ಮುರಿದು ಹೊಟ್ಟೆಯ ಮೇಲೆ ಮತ್ತು ಬಲಕಾಲಿನ ತೊಡೆಯ ಹತ್ತಿರ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೆ ಮೃತಪಟ್ಟಿದ್ದು ಮತ್ತು ಅವನ ಹೆಂಡತಿಗೂ ಮತ್ತು ಇನ್ನೋಬ್ಬಮಗನಿಗೆ ಕುಡಾ ಬಾರಿ ಗಾಯಗಳಾಗಿದ್ದವು ನೀಮ್ಮ ಮಗನ ಮೊಟಾರ್ ಸೈಕಲ್ ನಂ ಕೆಎ-02-ಹೆಚ್.ಎಕ್ಸ್-4265 ನೇದ್ದು ಇತ್ತು. ಮತ್ತು ಕಾರಿನಲ್ಲಿ ಇದ್ದವರಿಗೂ ಸಣ್ಣ ಪುಟ್ಟ ಗಾಯಗಳಾಗಿದ್ದವು ಕಾರಿನಲ್ಲಿ ಇದ್ದವರು ಜೆವರಗಿ ಪಟ್ಟಣದ ಕಲಾವತಿ ಗಂಡ ಮಾಹಾದೇವಪ್ಪ ತಳಕೇರಿ ರೇಣುಕಾ ಗಂಡ ನೂರಂದಪ್ಪ ದೇವರಮನಿ ನೂರಂದಪ್ಪ ತಂದೆ ಮುರಗೇಣ್ಣ ದೇವರಮನಿ ಗಣೇಶ @ ರವಿಕುಮಾರ ತಂದೆ ನಾಗಣ್ಣ ಅಂಗಡಿ ಮತ್ತು ಮಾಹಾಂತೇಶ ಇವರು ಇದ್ದು ಅವರಿಗೂ ಗಾಯಗಳಾಗಿದ್ದವು. ಗಾಯ ಆದ ಎಲ್ಲರಿಗೂ  ಉಪಚಾರ ಕುರಿತು ರೋಡಿನಲ್ಲಿ ಬರುತ್ತಿದ್ದ ಅಪರಿಚಿತ ವಾಹನದಲ್ಲಿ ಜೇವರಗಿ ಸರಕಾರಿ ಆಸ್ಪತ್ರೆಗೆ ಕೊಟ್ಟು ಕಳುಹಿಸಿದ್ದೇವು. ನಂತರ ಕಾರ ನೊಡಲು ಮಾರುತಿ ಕಂಪನಿಯ ಸ್ವೀಪ್ಟ್ ಕಾರ ಇದ್ದು ಅದರ ನಂಬರ ಕೆಎ-25ಎನ್ -8796 ನೆದ್ದು ಇರುತ್ತದೆ ಅದರ ಚಾಲಕ ವಿಶ್ವನಾಥ ಸಾ: ಜೆವರ್ಗಿ ಅಂತ ಗೊತ್ತಾಗಿದ್ದು ಅವನು ಅಪಘಾತದ ನಂತರ ಓಡಿ ಹೊಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಜೇವರಗಿ ಠಾಣೆ : ಷಣ್ಮುಖಪ್ಪಗೌಡ ತಂದೆ ವೀರಪ್ಪಗೌಡ ಹಿರೇಗೌಡ ಸಾ|| ಜೇವರಗಿ ರವರು ಶಾಂತಲಿಂಗ ಮಾಹಾಸ್ವಾಮಿಗಳ ವಿರಕ್ತಿಮಠ ಟ್ರಸ್ಟ ಕಮೀಟಿ  ಜೇವರಗಿ ಅಂತಾ ಟ್ರಸ್ಟ ಮಾಡಿದ್ದು ಅದರ ಸದಸ್ಯರಿದ್ದು 2002 ರಲ್ಲಿ ನೊಂದಣಿ ಮಾಡಿದ್ದು  ಅಲ್ಲಿಂದ  ಹಿಂದಿನ ಪೀಠಾಧಿಪತಿಗಳು ಶ್ರೀ ಮಠದ ಧಾರ್ಮಿಕ ಕಾರ್ಯಕ್ರಮಗಳನ್ನು ಈ ಟ್ರಸ್ಟ ಅಡಿಯಲ್ಲಿ  ನಡೆಸುತ್ತಾ ಬಂದಿದ್ದು ಹಿಂದಿನ ಪೀಠಧಿಪತಿಗಳು ಲಿಂಗೈಕ್ಯರಾದ ನಂತರ ಅಲ್ಲಿಂದ ಇಲ್ಲಿಯವವರೆಗೆ ಪ್ರತಿ ವರ್ಷದಂತೆ ಕೂಡ ಈ ವರ್ಷವು ಮೇ 15, 16 ನೇತಾರಿಖಿನಂದು  ಶ್ರೀ ಮಠದ ಜಾತ್ರೆಯನ್ನು ನಡೆಸಿಕೊಂಡು ಹೋಗಿರುವಾಗ  ನಮ್ಮ ಟ್ರಸ್ಟ ಕಮೀಟಿಗೆ ಮಾಹಾರಾಷ್ಟ್ರದ ಕಾಸರಶಿರಸಗಿ  ಮಠದ ಪೀಠಾಶಿಪತಿಗಳಾದ  ಶ್ರೀ ಮುರುಘರಾಜೇಂದ್ರ ಸ್ವಾಮೀಜಿ @ ವಿಜಯಕುಮಾರ ಕಲ್ಮಠ ಎನ್ನುವ ಕ್ರಿಮಿನಲ್ ಇತಿಹಾಸವಿರುವ ಸ್ವಾಮೀಜಿ ಮಠವನ್ನು ತನ್ನದಾಗಿಸುವ ದುರುದ್ದೇಶ ಹೊಂದಿ ಭಕ್ತ ಬಳಗ ಎನ್ನುವ ಅಕ್ರಮ ಕೂಟ ರಚಿಸಿಕೊಂಡು ಸಮಾಜದಲ್ಲಿ ಶಾಂತಿ ಭಂಗ ಮಾಡಲು ಪ್ರಯತ್ಮಿಸುತ್ತ  ಈ ಹಿಂದೆ ಕೂಡ ಆಳಮದ ತಾಲೂಕಿನ ಖಜೂರಿ ಮಠದಲ್ಲಿಯು  ಇದೆ ತರಹ ಮಾಡಿದ್ದು ಪ್ರತಿ ವರ್ಷ ಜಾತ್ರಯ ಸಮಯದಲ್ಲಿ ಶ್ರೀ ಮಠಕ್ಕೆ ಅತಿಕ್ರಮಣ ಮಾಡಲು ಪ್ರಯತ್ನಿಸುತ್ತಿದ್ದು ಇದಕ್ಕೆ ಊರಿನವರು ಹಾಗು ಟ್ರಸ್ಟ  ಸಮೀತಿ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದು  ಈ ಬಗ್ಗೆ ದೂರು ಸಲ್ಲಿಸಿದ್ದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಇಂದು ಮತ್ತೆ ಸ್ವಾಮಿಯ ಮೇರವಣಿಗೆ ಮಾಡಲು ಇಲಾಖೆಯ ಯಾವುದೆ ಪರವಾಣಿಗೆ ಪಡೆಯದೆ ಮುಂದುವರೆದಿದ್ದನ್ನು ನಾನು ಹಾಗು ಮಠದ ಟ್ರಸ್ಟ ಸದದ್ಯರು ಹಾಗು ಗ್ರಾಮಸ್ಥರು ತಿಳಿಹೆಳಲು ಹೋದಾಗ  ಜೇವರಗಿ ಪಟ್ಟಣದ ಮುಖ್ಯ ರಸ್ತೆಯ  ಮೇಲೆ ಅಕ್ರಮ ಕೂಟ ರಚಿಸಿಕೊಂಡು 1) ಶೋಕ ಸಾಹು ಗೋಗಿ 2) ಸಾಹೇಗೌಡ ಕಲ್ಲಾ 3) ಸಿದ್ದು ತಂದೆ ಅಶೋಕ ಸಾಹು ಗೋಗಿ 4) ಮಲಶೇಟ್ಟೆಪ್ಪ ಹಿರೇಗೌಡ 5) ಅಖಂಡಪ್ಪ ಹಿರೆಗೌಡ 6) ವಿಜಯಕುಮಾರ ಹೈಯ್ಯಾಳ 7) ಗುರಣ್ಣ ಹೈಯಾಳ 8) ಬಸವರಾಜ ತಂದೆ ಗುರಣ್ಣ ಹೈಯಾಳ 9) ಎಸ್. ಕೆ. ಬಿರಾದಾರ ಶಿಕ್ಷಕರು ೧೦) ಪಿಂಟು ತಂದೆ ಶಿವಲಿಂಗಯ್ಯ ಹಾಗು ಇತರರು.  ಸಾ|| ಎಲ್ಲರು ಜೇವರಗಿ ಕೂಡಿಕೊಂಡು ಬಂದು ನನಗೆ ಎಲೇ ಬೋಸಡಿ ಮಗನೆ ಟ್ರಸ್ಟ ಕಮೀಟಿಯಲ್ಲಿ ನಿನ್ನೋಬ್ಬನಿಂದಾಗಿ ನಮಗೆ ತೊಂದರೆಯಾಗುತ್ತಿದೆ ನಿಮಗೆ ಇವತ್ತು ಖಲಾಸ್ ಮಾಡಿಯೇ ಬಿಡುತ್ತೆವೆ ಎಂದು ಕೊಲೆ ಮಾಡುವ ಉದ್ದೇಶ ಹೋಂದಿ ವಿಜಯಕುಮಾರ ತಂದೆ ಗುರಣ್ಣ  ಹೈಯ್ಯಾಳ ಈತನು ಕಲ್ಲಿನಿಂದ  ನನ್ನ ತಲೆಗೆ ಹೊಡೆದು ಭಾರಿ ರಕ್ತ ಗಾಯ ಮಾಡಿದ್ದು, ಸಿದ್ದು ತಂದೆ ಅಶೋಕ ಸಾಹು ಗೋಗಿ ಈತನು ಬಡಿಗೆಯಿಂದ ನನ್ನ ಬೆನ್ನು ಹಾಗು ತಲೆಯ ಮೇಲೆ ಹೊಡೆದು ಕೊಲೆಗೆ ಪ್ರಯತ್ನ ಮಾಡಿದ್ದು ಇವರ ಸಂಗಡಿಗರು ಈ ಬೋಸಡಿ ಮಗ ಈಗ ಸಿಕ್ಕಿದ್ದಾನೆ ಕೊಲೆ ಮಾಡಿ ಬಿಡ್ರಿ ಎಂದು ಅವರೆಲ್ಲರು ನನ್ನನ್ನು ಕೇಳಗೆ ಹಾಕಿ ಹೊಡೆಯುತ್ತಿರುವಾಗ ನಮ್ಮ ಕಮೀಟಿಯ ಎಲ್ಲಾ ಸದಸ್ಯರು, ರಾಜಶೇಖರ ಶೀರಿ, ಸಂಗನಗೌಡ ಪಾಟೀಲ,  ಶರಣಬಸವ ಕಲ್ಲಾ, ನೀಲಕಂಠ ಅವಂಟಿ, ದೇವಿಂದ್ರ ಶೀರಿ,ಯಶವಂತ್ರಾಯಕೊಳಕುರ ಇವರೆಲ್ಲರುಸೇರಿ ಬಿಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಆಕ್ರಮ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ ಜಪ್ತಿ :
ಶಾಹಾಬಾದ ನಗರ ಠಾಣೆ : ದಿನಾಂಕ : 15-05-2017 ರಂದು ಮುಂಜಾನೆ ಗೊಳಾ ಸೀಮಾಂತರದ ಕಾಗಿನಾ ನದಿಯಿಂದ ಮರಳು ಕಳ್ಳತನದಿಂದ ಟ್ರಾಕ್ಟರನಲ್ಲಿ ತುಂಬಿಕೊಂಡು ಸಾಗಿಸುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಪಿ ಐ ಶಹಾಬಾದ ರವರು ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗುತ್ತಿರುವಾಗ ಗೊಳಾ (ಕೆ) ಗ್ರಾಮದ ಕಡೆಯಿಂದ ಒಂದು ಮರಳು ತುಂಬಿದ ಟ್ರಾಕ್ಟರ ಬರುತ್ತಿದ್ದು  ಸದರಿ ಟ್ರಾಕ್ಟರ ಚಾಲಕ ಪೊಲೀಸ ಜೀಪ ನೋಡಿ ಸ್ಥಳದಲ್ಲಿಯೇ ಟ್ರಾಕ್ಟರ ನಿಲ್ಲಿಸಿ ಓಡಿ ಹೋಗಿದ್ದು  ನಾವು ಹೋಗಿ ನೋಡಲು ಸದರ ಟ್ರ್ಯಾಕ್ಟರ ನಂಬರ  ಕೆ.ಎ. 32 ಟಿಎ 8074 ಟ್ರಾಲಿ ನಂ ಕೆ.ಎ. 32 ಟಿ 6238 ಅ.ಕಿ 2,00,000/- ರೂ ಮರಳಿನ ಅ.ಕಿ 1000/- ರೂ ನೇದ್ದನ್ನು ಪಂಚರ ಸಮಕ್ಷಮ ಜಪ್ತಿಮಾಡಿಕೊಂಡು ಶಾಹಾಬಾದ ನಗರ ಠಾಣೆಗೆ ಬಂದು ಟ್ರಾಕ್ಟರನ ಚಾಲಕ ಮತ್ತು ಮಾಲಿಕ ಇಬ್ಬರೂ ಕೂಡಿಕೊಂಡು ಸರಕಾರಕ್ಕೆ ಯಾವುದೆ ರಾಜಧನ ತುಂಬದೆ ಗೊಳಾ (ಕ) ಗ್ರಾಮದ ಸೀಮಾಂತರದ ಕಾಗಿಣಾ ನದಿಯಿಂದ ಕಳ್ಳತನದಿಂದ ಮರಳು ತುಂಬಿಕೊಂಡು ಸಾಗಾಣಿಕೆ ಮಾಡುತ್ತಿದ್ದು ಸದರಿಯವರ ವಿರುದ್ದ  ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ದರೋಡೆಗೆ ಹೊಂಚು ಹಾಕಿ ಕುಳೀತವರ ಬಂಧನ :
ಚೌಕ ಠಾಣೆ : ದಿನಾಂಕ 15-05-2017 ರಂದು ನಸುಕಿನ ಜಾವ ಚೌಕ ಠಾಣಾ ವ್ಯಾಪ್ತಿಯ ಹುಮನಾಬಾದ ರಿಂಗ್‌ ರೋಡ್‌ ಹತ್ತಿರ ಇರುವ ರೇಣುಕಾ ನಗರದ ಹತ್ತಿರದ ಮುಖ್ಯ ರಸ್ತೆಯ ಮೇಲೆ 7-8 ಜನರು ದರೋಡೆ ಮತ್ತು ಸುಲಿಗೆ ಮಾಡುವ ಉದ್ದೇಶದಿಂದ ಡಕಾಯಿತಿದಾರರು, ಗುಂಪು ಕಟ್ಟಿಕೊಂಡು ಕೈಯಲ್ಲಿ ತಲವಾರ, ಮಚ್ಚು, ಲಾಂಗ, ಜಂಬ್ಯಾವನ್ನು ಹಿಡಿದುಕೊಂಡು ಮೋಟಾರ ಸೈಕಲ್ ಇಟ್ಟುಕೊಂಡು ದರೋಡ ಮಾಡುವ ಕುರಿತು ಹೊಂಚು ರೂಪಿಸಿಸುತ್ತಿದ್ದಾರೆಂದು ಖಚಿತವಾದ ಬಾತ್ಮಿ ಬಂದ ಮೇರೆಗೆ ಶ್ರೀ ರಾಜಶೇಖರ .ವಿ. ಹಳಗೋದಿ ಪಿ.ಐ ಚೌಕ ಪೊಲೀಸ್ ಠಾಣೆ ಃಆಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಎಸ್.ಪಿ. ಸಾಹೇಬರು ಕಲಬುರಗಿ, ಮಾನ್ಯ ಅಪರ ಎಸ್.ಪಿ. ಸಾಹೇಬರು ಕಲಬುರಗಿ, ಮಾನ್ಯ ಡಿ.ಎಸ್.ಪಿ. ಸಾಹೇಬರು, ಎ ಉಪವಿಭಾಗ ಕಲಬುರಗಿ ರವರ ಮಾರ್ಗದರ್ಶನದಲ್ಲಿ, ಹುಮನಾಬಾದ ರಿಂಗ್‌ ರೋಡ್‌ ಹತ್ತಿರ ಇರುವ ರೇಣುಕಾ ನಗರದ ರಸ್ತೆಯ ಪಕ್ಕದಲ್ಲಿ ಮರೆಯಾಗಿ ಹೊಗಿ ಜಾಡು ಹಿಡಿದು ನೋಡಲು  ಹುಮನಾಬಾದ ರಿಂಗ್‌ ರೋಡ್‌ ಹತ್ತಿರ ಇರುವ ರೇಣುಕಾ ನಗರದ ಹತ್ತಿರ ಇರುವ ಮುಳ್ಳು ಕಂಟಿಯಲ್ಲಿ ದರೋಡೆಕೊರರು ಗುಜುಗುಜು ಮಾತಾಡುವ ಶಬ್ದ ಕೇಳಿಸಿಕೊಂಡು ನಾವೇಲ್ಲರೂ ಎಲ್ಲಾ ಕಡೆಗಳಿಂದ ಸುತ್ತುವೆರೆದು ಅವರಿಗೆ ಹಿಡಿಯಲು ಹೋದಾಗ ನಾವು ಬರುತ್ತಿದ್ದನ್ನು ಗಮನಿಸಿ, ಅವರೆಲ್ಲರುಓಡರೋ ಓಡರೋ ಭಾಗೋ ಭಾಗೋ ಅನ್ನುತ್ತಾ ಒಂದೇ ಸವನೆ ಓಡುತ್ತಿದ್ದ ವೇಳೆಯಲ್ಲಿ ನಾವೆಲ್ಲರು ಒಮ್ಮಲೆ ಎಲ್ಲರೂ ಎಲ್ಲಾ ಕಡೆಗಳಿಂದ ಸುತ್ತುವರಿದು ದಾಳಿ ಮಾಡಿ ಹಿಡಿಯುವಷ್ಟರಲ್ಲಿ 05 ಜನರು ಕತ್ತಲಲ್ಲಿ ಮುಳ್ಳು ಕಟ್ಟೆಯಲ್ಲಿ ಓಡಿಹೋಗಿ ತಪ್ಪಿಸಿಕೊಂಡಿದ್ದು, ಮುಳ್ಳು ಕಂಟಿಯಲ್ಲಿ  ಅವಿತು ಕುತಿಳಿದ್ದ 03 ಜನರಿಗೆ ಹಿಡಿದುಕೊಂಡಿದ್ದು, ಸದರಿ 03 ಜನರನ್ನು ರೋಡಿನ ಮೇಲೆ ಕರೆದುಕೊಂಡು ಬಂದು ಅವರ ಹೆಸರು ಮತ್ತು ವಿಳಾಸವನ್ನು ವಿಚಾರಿಸಲಾಗಿ, ಒಬ್ಬನು ತನ್ನ ಹೆಸರು 1) ಶಿವು @ ಶಿವಪ್ಪ ತಂದೆ ಬಸವರಾಜ ಜಾಧವ ಸಾಃ ಆರಾಧನ ಶಾಲೆ ಹತ್ತಿರ ವಡ್ಡರ ಗಲ್ಲಿ ಶಹಾಬಜಾರ ಕಲಬುರಗಿ,  2) ಅನೀಲ ತಂದೆ ಭೀಮಶಂಕರ ಮಾನೆ ಸಾಃ ಆರಾಧನ ಶಾಲೆ ಹತ್ತಿರ ವಡ್ಡರ ಗಲ್ಲಿ ಶಹಾಬಜಾರ ಕಲಬುರಗಿ,  3) ಗುರು @ ಗುರಲಿಂಗಪ್ಪ ತಂದೆ ನಾರಾಯಣ್ಣ ಜಮಾದಾರ ಸಾಃ ಗೌಡಗಾಂವ ತಾಃ ಅಫಜಲಪೂರ ಹಾಃವಃ  ಜಿಡಿಎ ಲೇಔಟ ಕಲಬುರಗಿ ಅಂತಾ ತಿಳಿಸಿದ್ದು, ಓಡಿ ಹೋದ 05 ಆರೋಪಿತರ ಬಗ್ಗೆ ಶಿವು @ ಶಿವಪ್ಪ ಇತನಿಗೆ ವಿಚಾರಿಸಲು ಓಡಿ ಹೋದವರು 1] ನಾಗು @ ನಾಗ್ಯಾ ತಂದೆ ಮರೆಪ್ಪ ವಡ್ಡರ ಸಾಃ ಶಹಾಬಜಾರ 2)  ಈಶ್ವರ ಸಾಃ ಸಂಜೀವ ನಗರ 3) ಗಿರಿ ಸಾಃ ಸಂಜೀವ ನಗರ 4) ಶಬ್ಬೀರ ಅಹ್ಮದ @ ತಾಂಡಾ ಶಬ್ಬೀರ ಸಾಃ ತಾಜ ನಗರ ಮುಸ್ಲಿಂ ಸಂಘ 5) ಶಾದಾಬ ಅಹ್ಮದ ಸಾಃ ತಾಜ ನಗರ  ಮುಸ್ಲಿಂ ಸಂಘ ಅಂತಾ  ಓಡಿಹೋದವರೇಲ್ಲರ ಹೆಸರುಗಳನ್ನು ಶಿವು @ ಶಿವಪ್ಪ ಇತನು ತಿಳಿಸಿದ್ದು ಸೆರೆಹಿಡಿದ 03 ಜನ ದರೊಡೆ ಮಾಡಲು ಸಂಚುರೂಪಿಸಿ ಪ್ರಯತ್ನಿಸಿದವರ ಅಂಗ ಶೋಧನೆಯನ್ನು ಪ್ರತ್ಯೇಕವಾಗಿ ಪಂಚರ ಸಮಕ್ಷಮ ಮಾಡಲಾಗಿ 1]  ಶಿವು @ ಶಿವಪ್ಪ ತಂದೆ ಬಸವರಾಜ ಜಾಧವ ಇವನಿಂದ ಒಂದು ತಲವಾರ ಅಃಕಿಃ 20 ರೂ ಮತ್ತು ಮುಖಕ್ಕೆ ಕಟ್ಟಿಕೊಳ್ಳುವ ಕರಿ ಬಣ್ಣದ ಬಟ್ಟೆ ನಗದು ಹಣ 150/- 2] ಅನೀಲ ತಂದೆ ಭೀಮಶಂಕರ ಮಾನೆ ಎಂಬುವವನ ಹತ್ತಿರ ಒಂದು ಜಂಬ್ಯಾ ಮತ್ತು ಜೇಬಿನಲ್ಲಿ ಮುಖಕ್ಕೆ ಕಟ್ಟಿಕೊಳ್ಳುವ  ಕರಿ ಬಣ್ಣದ ಬಟ್ಟೆ 3] ಗುರು @ ಗುರಲಿಂಗಪ್ಪ ತಂದೆ ನಾರಾಯಣ್ಣ ಜಮಾದಾರ ಎಂಬುವವನ ಹತ್ತಿರ ಒಂದು ಲಾಂಗ ಮತ್ತು ಜೇಬಿನಲ್ಲಿ ಮುಖಕ್ಕೆ ಕಟ್ಟಿಕೊಳ್ಳುವ ಕರಿ ಬಣ್ಣದ ಬಟ್ಟೆ ಹಾಗು ಖಾರದ ಪುಡಿ ಪ್ಯಾಕೇಟ, ಹಾಗೂ ನಗದು ಹಣ 200/- ಹಾಗೂ ಒಂದು ಮೋಬೈಲ್‌ ದೊರೆತಿದ್ದು, ಸ್ಥಳದಲ್ಲಿ ಎರಡು ಹಗ್ಗಗಳು ಅಂದಾಜು 3 ಮೀಟರ ಉದ್ದ ಉಳ್ಳವುಗಳು ಮತ್ತು  ನಾಲ್ಕು ಖಾರದ ಪುಡಿಗಳು ದೊರೆತಿದ್ದು ಹೀಗೆ ದರೊಡೆ ಮಾಡಲು ಸಂಚು ರೂಪಿಸಿ ಸಿದ್ದತೆ ಮಾಡಿಕೊಂಡವರಿಂದ ಆರೋಪಿತರಿಂದ ಒಟ್ಟು ಅಂದಾಜು 910/- ರೂ ಬೆಲೆ ಬಾಳುವದನ್ನು ಔಶಪಡಿಸಿಕೊಂಡು ಸದರಿಯವರೊಂದಿಗೆ ಚೌಕ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.