POLICE BHAVAN KALABURAGI

POLICE BHAVAN KALABURAGI

02 July 2014

Gulbarga District Reported Crimes

ಹಲ್ಲೆ ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀಶೈಲ ತಂದೆ ಮಾರುತಿ ರವರು ದಿನಾಂಕಃ 30-06-2014 ರಂದು ರಾತ್ರಿ 10:30 ಪಿ.ಎಂ. ಕ್ಕೆ ನಾನು ಭನಶಂಕರಿ ಕಾಲೋನಿಯ ಸಾತಲಿಂಗಪ್ಪ ಇವರ ಮನೆಯಲ್ಲಿದ್ದೆ ನನ್ನ ಸಹೋದರ ಮಾವ ದುಂಡಪ್ಪಾ ಇವರಿಗೆ ನಾಷ್ಟಾ ಕೊಡಲು ಹೋದಾಗ ನನ್ನ ಸಹೋದರ ಮಾವ ಶಿವಪುತ್ರಪ್ಪನ ಹೆಂಡತಿ ಶಕುಂತಲಾ ಇವಳು ಬಂದು ನನಗೆ ನನ್ನ ಹಾಟ್ಯಾನ ಮಗನೆ ನನ್ನ ಮನೆಗೆ ಇಲ್ಲಿಗ್ಯಾಕೆ ಬಂದಿದ್ದೀ ಅಂತಾ ಅವಾಚ್ಯವಾಗಿ ಬೈದು ಕೈಯಲ್ಲಿದ್ದ ಬಡಿಗೆಯಿಂದ ನನ್ನ ಎಡಕಪಾಳಕ್ಕೆ ಹೊಡೆದಳು. ಆಗ ಅಲ್ಲೇ ಇದ್ದ ನನ್ನ ಸಹೋದರ ಮಾವ ಶಿವಪುತ್ರಪ್ಪಾ ಈತನು ಬಂದವನೇ ಕೈಯಿಂದ ನನಗೆ ಎದೆಯ ಮೇಲೆ ಹೊಡೆದು  ಗುಪ್ತಗಾಯಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ದಿನೇಶ ತಂದೆ ಗೊನಾಜಿ ಸುತಾರ ಸಾ: ಸಿಐಬಿ ಕಾಲೋನಿ ಕೇಂದ್ರ ಬಸ್ ನಿಲ್ದಾಣ ಹಿಂದುಗಡೆ ಗುಲಬರ್ಗಾ ಇವರು . ದಿನಾಂಕ 01-07-2014 ರಂದು ಮದ್ಯಾಹ್ನ 1-00 ಗಂಟೆ ಸುಮಾರಿಗೆ ಆರ್.ಪಿ ಸರ್ಕಲ ಕಡೆಯಿಂದ ಸಾಯಿರಾಮ ನಗರ ಕಡೆಗೆ ಮೋಟಾರ ಸೈಕಲ ನಂಬರ ಕೆಎ-32 ಇಎಫ-5032 ನೇದ್ದರ ಮೇಲೆ ಹೋಗುವಾಗ ಮೋಟಾರ ಸೈಕಲ ನಂಬರ ಕೆಎ-32 ಕೆ-9163 ನೇದ್ದರ ಸವಾರ ಬಾಬುರಾವ ಇತನು ಹಿಂದುಗಡೆ ರೇಣುಕಾ ಅನ್ನುವವರನ್ನು ಕೂಡಿಸಿಕೊಂಡು ಹಳೆ ಜೆವರ್ಗಿ ರೋಡ ಬ್ಯಾಂಕ ಕಾಲೋನಿ ಒಳಗಡೆ ರೋಡಿನಿಂದ ಬಂದು ಬಲಗಡೆ ಸೈಡಿಗೆ ರಾಂಗ ಸೈಡನಿಂದ ಮೋಟಾರ ಸೈಕಲ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಮೋಟಾರ ಸೈಕಲಕ್ಕೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಭಾರಿಗಾಯಗೊಳಿಸಿ ತಾನು ಗಾಯಹೊಂದಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ :
ಸೇಡಂ ಠಾಣೆ : ಶ್ರೀ. ಬಸವರಾಜ ತಂದೆ ಗುರುಪಾದಪ್ಪ ಅಲ್ಲೂರ, ಸಾ:ಕೊಡ್ಲಾ, ತಾ:ಸೇಡಂ. ಇವರ ಮಗಳಾದ ಪ್ರೀಯಾಂಕ, ವಯ:16 ವರ್ಷ, ಇವಳು ಮತ್ತು ನಮ್ಮೂರ ಜ್ಞಾನವ ವಾಹಿನಿ ಪ್ರೌಢ ಶಾಲೆಯಲ್ಲಿ ಶಿಕ್ಷಕ ಅಂತ ಕೆಲಸ ಮಾಡಿಕೊಂಡು ಇದ್ದ ಹಂದರಕಿ ಗ್ರಾಮದ ಶರಣಪ್ಪ ತಂದೆ ಮಲ್ಲಪ್ಪ ಮೇತ್ರಿ ಇವರು ಇಬ್ಬರೂ ಒಬ್ಬರಿಗೊಬ್ಬರು ಪ್ರೀತಿಸುವ ವಿಷಯ ನಮಗೆ ಗೊತ್ತಾಗಿದ್ದರಿಂದ ನಾವು ಬುದ್ದಿವಾದ ಹೇಳಿದ್ದು ಇತ್ತು. ದಿನಾಂಕ:28-06-2014 ರಂದು ಮುಂಜಾನೆ 09-00 ಗಂಟೆಗೆ ನನ್ನ ದೊಡ್ಡ ಮಗಳಾದ ಪ್ರೀಯಾಂಕ ಸಂಡಾಸಕ್ಕೆಂದು ಹೋದವಳು ಮತ್ತೆ ಮನೆಗೆ ವಾಪಸ್ ಬರಲಿಲ್ಲ ಅವಳು ಮತ್ತೆ ಮನೆಗೆ ಬರುತ್ತಾಳೆಂದು ನಾವು ಕಾದೇವು ಆದರೆ ಬರಲಿಲ್ಲ. ಆಮೇಲೆ ನಮಗೆ ಗೊತ್ತಾಗಿದ್ದೇನೆಂದರೆ, ನಮ್ಮ ಮಗಳಾದ ಪ್ರೀಯಾಂಕ ಇವಳಿಗೆ ಹಂದರಕಿ ಗ್ರಾಮದ ಶರಣಪ್ಪ ತಂದೆ ಮಲ್ಲಪ್ಪ ಮೇತ್ರಿ ಇತನೇ ಅಪಹರಿಸಿಕೊಂಡು ಹೋದ ಬಗ್ಗೆ ನಮಗೆ ತಿಳಿಯಿತು ಹಾಗೂ ಶರಣಪ್ಪ ಇತನು ಫೋನ ಮಾಡಿ ನಮಗೆ ಅವಾಚ್ಯ ಶಬ್ದಗಳಿಂದ ಬೈದು, ನಿಮ್ಮ ಮಗಳಿಗೆ ಓಡಿಸಿಕೊಂಡು ಹೋಗಿರುತ್ತೇನೆ ಏನ ಮಾಡ್ಕೊತಿರಿ ಮಾಡ್ಕೊರಿ ಅಂತ ಹೇಳಿ, ಜೀವದ ಬೆದರಿಕೆ ಹಾಕಿರುತ್ತಾನೆ.ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕಳವು ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಯಲ್ಲಾಲಿಂಗ ತಂದೆ ರೇವಣಸಿದ್ದಪ್ಪ ಪೂಜಾರಿ ಸಾಃ ಗುಬ್ಬಿ ಕಾಲೋನಿ ಗುಲಬರ್ಗಾ ಇವರು ದಿನಾಂಕಃ 01-07-2014 ರಂದು 07:00 .ಎಂ. ಸುಮಾರಿಗೆ ಪ್ರತಿ ದಿವಸದಂತೆ ಮನೆಗೆ ಬೀಗ ಹಾಕಿಕೊಂಡು ಕೆಲಸಕ್ಕೆ ಹೋಗಿದ್ದು ನಂತರ ಮದ್ಯಾಹ್ನ 02:00 ಗಂಟೆಗೆ ಬಂದು ಬಂದು ನೋಡಲು ಮನೆಗೆ ಹಾಕಿದ ಕೀಲಿಕೊಂಡಿ ಮುರಿದಿದ್ದು ಒಳಗಡೆ ನೋಡಲು ಬೆಡರೂಮಿನಲ್ಲಿದ್ದ ಅಲೆಮಾರಿಯಲ್ಲಿದ್ದ ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿದ್ದು ಅಲೆಮಾರಿಯಲ್ಲಿದ್ದ ಬಂಗಾರದ ಆಭರಣಗಳು  ಅಃಕಿಃ 75,000/- ರೂ. ಬೆಲೆ ಬಾಳುವುದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.