POLICE BHAVAN KALABURAGI

POLICE BHAVAN KALABURAGI

05 November 2014

Kalaburagi District Reported Crimes

ಅಪಘಾತ ಪ್ರಕರಣಗಳು :
ಸಂಚಾರಿ ಠಾಣೆ : ದಿನಾಂಕ 02-11-2014 ರಂದು 11.00ಎ.ಎಮ್.ಕ್ಕೆ ಶ್ರೀಮತಿ ಜಗದೇವಿ ಗಂಡ ಸಂತೋಷ ಹಿತ್ತಲದವರ, ಸಾಃ ರಾಜೀವಗಾಂಧಿ ನಗರ ಫಿಲ್ಟರಬೆಡ್ ಕಲಬುರಗಿ ರವರು  ಹುಮನಾಬಾದ ರೋಡಿನಲ್ಲಿರುವ ಬಬಲಾದ ಜ್ಯೋತಿ ಖಾನಾವಳಿ ಎದುರುಗಡೆ ರೊಡಿನ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿ ತನ್ನ ಮೋ,ಸೈಕಲ ನಂಬರ ಕೆಎ 32 ಈಜಿ 7946 ನೆದ್ದನ್ನು  ಹುಮನಾಬಾದ ರಿಂಗರೊಡಿನ ಕಡೆಯಿಮದ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ಡಿಕ್ಕಿಪಡಿಸಿ ಅಪಘಾತ ಮಾಡಿ ತನ್ನ ಮೋ,ಸೈಕಲ ಸಮೇತ ಓಡಿಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀಮತಿ ಶರಣಮ್ಮಾ ಗಂಡ ತಮ್ಮಣ್ಣ ದೋಡ್ಡಮನಿ ಸಾ: ನಂದೂರ (ಕೆ) ಗ್ರಾಮ ತಾ:ಜಿ: ಕಲಬುರಗಿ  ಇವರು ದಿನಾಂಕ 03-11-2014 ರಂದು ಬೆಳಿಗ್ಗೆ 11-30 ಗಂಟೆ ಸುಮಾರಿಗೆ ಇಂದಿರಾ ಆಸ್ಪತ್ರೆಗೆ ಹೋಗುವ ಕುರಿತು ನಾನು ನನ್ನ ಗಂಡ ತಮ್ಮಣ್ಣ ಹಾಗೂ ನನ್ನ ಮಗಳು ಅಂಬಿಕಾ ಮಹಾನಗರ ಪಾಲಿಕೆ ಎದುರು ರೋಡ ಮೇಲೆ ನಡೆದುಕೊಂಡು ಹೋಗುವಾಗ ಜಗತ ಸರ್ಕಲ್ ಕಡೆಯಿಂದ ಒಬ್ಬ ಟಾಟಾ ಎಸಿ ವಾಹನ ನಂ ಕೆಎ-32-ಬಿ-1314 ರ ಚಾಲಕನು  ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ರಸ್ತೆ ದಾಟುತ್ತಿದ್ದ ನನಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ನನ್ನ ಎಡಗೈ ಮುಂಗೈಗೆ ರಕ್ತಗಾಯ ಎಡಗೈ ರಿಸ್ಟ ಹತ್ತೀರ ಗುಪ್ತಪೆಟ್ಟು ಬಲಗೈ ರಿಸ್ಟ ಹತ್ತೀರ ಗುಪ್ತಎಟ್ಟು ಬಲಗಾಲ ಮೊಳಕಾಲಿಗೆ ರಕ್ತಗಾಯ ಎಡಗಾಲ ಕಿರುಬೆರಳಿಗೆ ತರಚಿದ ಗಾಯ ಗೊಳಿಸಿ ತನ್ನ ಟಾಟಾ ಎಸಿ ವಾಹನ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹುಡುಗ ಕಾಣೆಯಾದ ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಶಾಂತಗೌಡ ತಂದೆ ಕಾಶಿರಾಯ ಪಾಟೀಲ ಸಾಃ ಜಯನಗರ ರವರು ದಿನಾಂಕ: 03/11/2014 ರಂದು ಬೆಳಗ್ಗೆ 09:00 ಗಂಟೆ ಸುಮಾರಿಗೆ ಫೀರ್ಯಾದಿಯ ಹೆಂಡತಿಯಾದ ಶೈಲಜಾ ಇವಳು ಮಕ್ಕಳಿಗೆ ನೀವು ಬೇಗ ಏಳುವುದಿಲ್ಲಾ, ಓದುವುದು, ಬರೆಯುವುದು ಮಾಡುತ್ತಿಲ್ಲಾ, ಬೇಗ ಏಳಬೇಕು ಎಷ್ಟು ಸಲ ಹೇಳಿದರೂ ಕೇಳುವುದಿಲ್ಲಾ, ನಾನು ಸಹ ಕೆಲಸಕ್ಕೆ ಹೋಗಬೇಕು ಅಂತಾ ಬೈದಿದಕ್ಕೆ ನನ್ನ ಮಗನಾದ ವಿಶಾಲ @ ಚೇತನ ವಯಃ 18 ವರ್ಷ ಈತನು ಯಾರಿಗೂ ಹೇಳದೆ ಕೇಳದೆ ಮನೆಯಿಂದ ಹೋದವನು ಮರಳಿ ಮನೆಗೆ ಬಂದಿರುವುದಿಲ್ಲಾ ಕಾಣೆಯಾಗಿರುತ್ತಾನೆ. ನಮ್ಮ ಸಂಬಂಧಿಕರಲ್ಲಿ ಹಾಗು ಎಲ್ಲಾ ಕಡೆಗೂ ಹುಡುಕಾಡಿದರೂ ಸಿಕ್ಕಿರುವುದಿಲ್ಲಾ. ಕಾಣೆಯಾದ ನನ್ನ ಮಗನಾದ ವಿಶಾಲ @ ಚೇತನ ವಯಃ 18 ವರ್ಷ ಈತನನ್ನು ಪತ್ತೆ ಹಚ್ಚಿ ಕೊಡಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.