ದೇವಸ್ಥನದಲ್ಲಿ ನಿಧಿ ಅಗೆಯಲು
ಪ್ರಯತ್ತಿಸುತ್ತಿದ್ದ ಆರೋಪಿತರ ಬಂಧನ:
ಫರಹತಾಬಾದ ಪೊಲೀಸ್ ಠಾಣೆ: ದಿನಾಂಕ
12/09/2017 ರಂದು ಶ್ರೀ ಮುತ್ತಣ್ಣ ತಂದೆ ರಾಮಚಂದ್ರ ಸಾಃ ಬಸವಪಟ್ಟಣ್ಣ ಇವರು ಠಾಣೆಗೆ
ಹಾಜರಾಗಿ ದೂರು ಗ್ರಾಮದಿಂದ ಅಂದಾಜು 3 ಕಿಲೊಮಿಟರ ದೂರದ ಭೀಮಾ ನದಿಯ ದಡದಲ್ಲಿರುವ ಶ್ರೀ ಕೌಂಟಗಿ ಮರಿಯಮ್ಮ ದೇವಾಸ್ಥಾನ ಇದ್ದು, ನಾನು
ಸುಮಾರು ವರ್ಷಗಳಿಂದ ಆ ದೇವಸ್ಥಾನದ ಪೂಜಾರಿಕೆ
ಕೆಲಸ ಮಾಡುತ್ತಿದ್ದು ತ್ತೇನೆ. ಸದರಿ ದೇವಾಸ್ಥಾನ
ಹಳೆಯ ಕಾಲದಿಂದಲೂ ಇದ್ದು, ದೇವಾಸ್ಥಾನದ ಮುಖ್ಯ ದ್ವಾರದ ಬಲಗಡೆ ಒಂದು ಹಳೆ ಕಲ್ಲು ನೆಟ್ಟಿದ್ದು
ಅದರ ಮೇಲೆ ಹಳೆಯ ಲಿಪಿ ಬರೆದಿದ್ದು ಅದರ ಮಗ್ಗಲಿಗೆ ಒಂದು ಹಳೆಯ ಕಾಲದ ಕಲ್ಲಿನ ಶಿವಲಿಂಗ ಇದ್ದು, ಭಕ್ತರು
ಹಾಗೂ ಊರಿನ ಜನರು ಇಲ್ಲಿ ನಿಧಿ ಇರಬಹುದು ಅಂತಾ ಮಾತನಾಡುತ್ತಿದ್ದರು. ದೇವಾಸ್ಥಾನದ ಬಾಗಿಲಿಗೆ
ನಾವು ಕೀಲಿ ಹಾಕುವುದಿಲ್ಲ. ದಿನಾಂಕ 11/09/2017 ರಂದು ಬೆಳಿಗ್ಗೆ ಎಂದಿನಂತೆ ನಾನು
ದೇವಾಸ್ಥಾನಕ್ಕೆ ಹೋಗಿ ಪೂಜಾ ಮುಗಿಸಿಕೊಂಡು ಮರಳಿ ಮನೆಗೆ ಬಂದಿದ್ದು, ನಮ್ಮೂರಿನ ಬಾಬು ತಂದೆ ಶರಣಪ್ಪಾ ಕಂದಾರಿ ಈತನು ನನಗೆ
ತಿಳಿಸಿದೆನೆಂದರೆ, ಮದ್ಯಾಹ್ನ 1-2 ಗಂಟೆಯ ಸುಮಾರಿಗೆ ಒಂದು ಕಾರಿನಲ್ಲಿ 5 ಜನರು ಬಂದು ದೇವರಿಗೆ
ಕಾಯಿ ಕರ್ಪೂರ ಮಾಡಿ ಅಭಿಷೇಕ ಮಾಡಿಸಿ ಅಲ್ಲಿಯೆ ಉಳಿದಿದ್ದು, ರಾತ್ರಿ 8.00 ಗಂಟೆಯ ಸುಮಾರಿಗೆ ಇನ್ನೊಂದು ಕಾರು ಗುಡಿಯ
ಕಡೆಗೆಹೋಗಿದ್ದು , ಮದ್ಯಾಹ್ನ ಕಾರಿನಲ್ಲಿ ಬಂದವರು ಗುಡಿಯ ಸುತ್ತಲೂ ಅನುಮಾನಾಸ್ಪದವಾಗಿ ತಿರುಗಾಡಿ
ನೋಡುತ್ತಿದ್ದು, ಈಗ ಈ ಇನ್ನೊಂದು ಕಾರು ಗುಡಿಯ ಕಡೆಗೆ ಹೊಗಿರುವುದ್ದನ್ನು ನೋಡಿ ಯಾಕೋ ನನಗೆ
ಸಂಶಯ ಬಂದಿರುತ್ತದೆ ಅಂತಾ ತಿಳಿಸಿದ್ದರಿಂದ ನಾನು ಹಾಗೂ ನಮ್ಮೂರಿನವರಾದ 1) ಬಸವರಾಜ 2) ಬಸವರಾಜ
ತಂದೆ ಶಂಕರ 3) ಲಿಂಗಪ್ಪ 4) ದತ್ತಪ್ಪ 5) ಬಸಣ್ಣ ಕಾಟನೂರ 6) ಬಾಬುರಾಯ 7) ಮಹೇಶ 8) ಭೀಮಾಶಂಕರ ಕುಂಬಾರ
9) ಮಂಜುನಾಥ ಭರ್ಮಾ 10) ಶಿವಮೂರ್ತಿ ಎಲ್ಲರೂ ಕೂಡಿಕೊಂಡು ದೇವಾಸ್ಥಾನಕ್ಕೆ ರಾತ್ರಿ 10.30
ಪಿ.ಎಮಕ್ಕೆ ಹೋದಾಗ, ದೇವಾಸ್ಥಾನದ ಬಲಭಾಗದಲ್ಲಿರುವ ಲಿಪಿಯ ಮಗ್ಗದಲ್ಲಿರುವ ಲಿಂಗವನ್ನು ಬೇರೆ ಕಡೆ
ಎತ್ತಿ ಇಟ್ಟು ಲಿಂಗ ಇರುವ ಸ್ಥಳವನ್ನು ಇಬ್ಬರೂ ಅಗಿಯುತ್ತಿದ್ದು, ಉಳಿದವರು ಕತ್ತಲಲ್ಲಿ ಗಿಡದ
ಕೆಳಗೆ ನಿಂತಿದ್ದು, ನಾವು ಬರುವುದ್ದನ್ನು ನೋಡಿ ಅಲ್ಲಿದ್ದ ಕೇಲವು ಜನರು ಓಡಿ ಹೊಗುತ್ತಿರುವಾಗ
ನಾವೇಲ್ಲರೂ ಬೆನ್ನು ಹತ್ತಿ ಇಬ್ಬರನ್ನು ಹಿಡಿದು ಅವರ ಹೆಸರು ವಿಚಾರಿಸಲಾಗಿ 1) ಶಿವಕುಮಾರ ತಂದೆ
ನೀಲಕಂಠರಾವ ಪಾಟೀಲ ಸಾಃ ತಿಲಕ ನಗರ ಕಲಬುರಗಿ 2) ಖಾಜಪ್ಪ ತಂದೆ ಮಹಾದೇವಪ್ಪ ಮಾದರ ಸಾಃ ಕೆ.ಎಸ್,ಆರ್.ಟಿ.ಸಿ ಕ್ವಾಟರ್ಸ ಕಲಬುರಗಿ ತಿಳಿಸಿದ್ದು,
ಉಳಿದವರು ಓಡಿ ಹೊಗಿದ್ದು, ಕೃತ್ಯವೆಸಗಲು ತಂದಿದ ಎರಡು ಕಾರ ಮತ್ತು ಇತರೆ ವಸ್ತುಗಳನ್ನು ಸ್ಥಳದಲ್ಲಿಯೇ
ಬಿಟ್ಟಿದ್ದು. ನಮ್ಮೂರಿನ ಮರೆಯಮ್ಮ ದೇವಾಸ್ಥಾನದ ಮುಂಭಾಗದಲ್ಲಿ ನೆಟ್ಟ ಕಲ್ಲಿನ ಲಿಪಿಯ
ಮಗ್ಗಲಲ್ಲಿ ಇರುವ ಲಿಂಗವನ್ನು ನಿಧಿಯ ಆಸೆಗಾಗಿ ಸರಿಸಿ, ಲಿಂಗ ಇದ್ದ ಸ್ಥಳವನ್ನು ಅಗೆದು ನಿಧಿ
ತೆಗೆಯುವ ಪ್ರಯತ್ನ ಮಾಟಿದವರ ವಿರುದ್ದ ಸೂಕ್ತ ಕಾನೂನು ಕ್ರಮ ಜರೂಗಿಸುವಂತೆ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಫರಹತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಜೂಜುಕೋರರ ಬಂಧನ: -
ನರೋಣಾ ಪೊಲೀಸ್ ಠಾಣೆ : ದಿನಾಂಕ:12/09/2017 ರಂದು ಶ್ರೀ.ಗಜಾನನ.ಕೆ ನಾಯಕ,
ಪಿ.ಎಸ್.ಐ ನರೋಣಾ ಪೊಲೀಸ್ ಠಾಣೆ
ರವರು, ಖಚಿತ ಬಾತ್ಮಿ ಮೇರೆಗೆ ವ್ಹಿ ಕೆ ಸಲಗರ ಗ್ರಾಮದ ಗ್ರಾಮ ಪಂಚಾಯಿತಿ ಎದುರಿನ ಸಂತೆ
ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಅಂದರ ಬಾಹರ ಎಂಬ ಇಸ್ಪಿಟ ಜೂಜಾಟಕ್ಕೆ ಹಣ ಪಣಕಿಟ್ಟು
ಆಡುತ್ತಿರುವ ಬಗ್ಗೆ ದಾಳಿ ಕುರಿತು ಮಾನ್ಯ ಹೆಚ್ಚುವರಿ ಜೆ.ಎಂ.ಎಫ್.ಸಿ. ನ್ಯಾಯಾಲಯ
ನ್ಯಾಯಾಧೀಶರು, ಆಳಂದ ರವರ ಅನುಮತಿ ಪಡೆದುಕೊಂಡು ಮಾನ್ಯ ಡಿ.ಎಸ್.ಪಿ ಸಾಹೇಬ ಆಳಂದ ಹಾಗೂ ಮಾನ್ಯ
ಸಿಪಿಐ ಆಳಂದ ರವರ ಮಾರ್ಗದರ್ಶನದಂತೆ ಪಂಚರಾದ ಶ್ರೀ.ಬಂಡಪ್ಪ ತಂದೆ ದೂಳಪ್ಪ ನಾಟೀಕಾರ ಸಾ:ನರೋಣಾ ಗ್ರಾಮ ಮತ್ತು ಚಂದ್ರಕಾಂತ ತಂದೆ ಭೀಮಶಾ
ಮಡಿವಾಳ, ಸಾ:ನರೋಣಾ ಇವರನ್ನು ಬರಮಾಡಿಕೊಂಡು ನಾನು
ಮತ್ತು ಸಿಬ್ಬಂದಿಯವರಾದ 1) ಕಲ್ಲಿನಾಥ ಎ.ಎಸ್.ಐ
2) ಶಿವಾಜಿ ಸಿಪಿಸಿ-860 3) ಆನಂದ ಸಿಪಿಸಿ-1258 4) ಶರಣಪ್ಪ ಸಿಪಿಸಿ-90 ರವರೆಲ್ಲರೂ
ಕೂಡಿ ಖಾಸಗಿ ಜೀಪಿನಲ್ಲಿ ಹೊರಟು ವ್ಹಿ ಕೆ ಸಲಗರ ಗ್ರಾಮದ ಗ್ರಾಮ ಪಂಚಾಯಿತಿ ಎದುರಿನ ಸಂತೆ
ಕಟ್ಟೆಯ ಹತ್ತಿರ ಹೋಗಿ ನಾನು ಹಾಗೂ
ಸಿಬ್ಬಂದಿಯವರು ಕೂಡಿ ಸದರಿ ಜೂಜುಕೋರರ ಮೇಲೆ ದಾಳಿ ಮಾಡಿ ಅವರನ್ನು ಹಿಡಿದು ಅವರ ಹೆಸರು
ವಿಳಾಸ ವಿಚಾರಿಸಲಾಗಿ 1]ರಾಜು ಸಾ||ವ್ಹಿ.ಕೆ
ಸಗಲರ ತಾಂಡಾ. 2)ಪ್ರೇಪಸಿಂಗ ತಂದೆ ಗಣು ಜಾದವ್, ಸಾ|| ವ್ಹಿ ಕೆ ಸಲಗರ ತಾಂಡಾ 3)ಅಮೃತ ತಂದೆ
ಭೀಮಶ್ಯಾ ಮರಾಠ, ಸಾ||ವ್ಹಿ ಕೆ ಸಲಗರ, 4]ಅಪ್ಪರಾಯ ತಂದೆ ಗುಂಡಪ್ಪ ಗೂಗಳೆ, ಸಾ|| ವ್ಹಿ ಕೆ
ಸಲಗರ, 5]ಗುರುದೇವ ತಂದೆ ಸಿದ್ದಪ್ಪ ಪಟ್ನೆ, ಸಾ||ವ್ಹಿ ಕೆ ಸಲಗರ, ಎಂದು ತಿಳಿಸಿದ್ದು ಅವರನ್ನು
ದಸ್ತಗೇರ ಮಾಡಿಕೊಂಡು ಇಸ್ಪಿಟ ಪಣಕ್ಕೆ ಹಚ್ಚಿದ ಮತ್ತು ಇಸ್ಪಿಟ ಪಣಕ್ಕೆ ಉಪಯೋಗಿಸಿದ ನಗದು ಒಟ್ಟು
ಹಣ 1920 ರೂಪಾಯಿ ಮತ್ತು 52 ಇಸ್ಪಿಟ ಎಲೆಗಳನ್ನು
ಪಂಚರ ಸಮಕ್ಷಮದಲ್ಲಿ ವಶಕ್ಕೆ ತೆಗೆದುಕೊಂಡು ಆರೋಪಿತರರ ವಿರುದ್ಧ ನರೋಣಾ ಪೊಲೀಸ್
ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣ:
ಕಮಲಾಪೂರ ಪೊಲೀಸ್ ಠಾಣೆ: ದಿನಾಂಕ:12.09.2017 ರಂದು ಶ್ರೀ ಗುಂಡಪ್ಪ ತಂದೆ ಚಂದ್ರಶೇಖರ
ಗೋಣಿ ಮು:ಕಮಲಾಪೂರ ಇವರು ಠಾಣೆಗೆ ಹಾಜರಾಗಿ ಇಂದು ದಿನಾಂಕ:12.09.2017
ರಂದು ಮುಂಜಾನೆ ನಾನು ಕಲಬುರಗಿ ಹುಮನಾಬಾದ ಹೆದ್ದಾರಿಯ ರೇಲ್ವೆ ಬ್ರೀಡ್ಜ ಹತ್ತೀರ ವಾಕಿಂಗ ಮಾಡಲು
ಹೋಗಿ ವಾಪಸ್ಸ ಮನೆಯ ಕಡೆಗೆ ಬರುವಾಗ ರಾಜನಾಳ ಕ್ರಾಸ ಸಮೀಪ ನನ್ನ ಮಾವನವರಾದ ಗಂಗಾಧರ ತಂದೆ ಚಂದ್ರಾಮ
ರಾಂಪೂರೆ ಹಾಗೂ ನನ್ನ ಚಿಕ್ಕಪ್ಪನವರಾದ ಬಸವರಾಜ ತಂದೆ ಗುಂಡಪ್ಪ ಗೋಣಿ ಮು:ಕಮಲಾಪೂರ ಇವರು ಸಹ ಕೂಡಾ
ವಾಕಿಂಗ ಮಾಡುತ್ತ ನಮ್ಮ ಎದುರಿನಿಂದ ರಾಜನಾಳ ಕ್ರಾಸ ಹತ್ತೀರ ಬರುತ್ತಿದ್ದರು. ಅದೇ ವೇಳೆಗೆ ಕಲಬುರಗಿ
ಕಡೆಯಿಂದ ಬರುತ್ತಿದ್ದ ಟೋಯೋಟೋ ಕಾರ ಚಾಲಕನು ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸುತ್ತ
ಬಂದು ವಾಕಿಂಗ ಮಾಡುತ್ತ ಹೋರಟಿದ್ದ ನನ್ನ ಮಾವ ಗಂಗಾಧರ ಹಾಗೂ ಕಾಕನವರಾದ ಬಸವರಾಜ ಇವರಿಗೆ ಹಿಂದಿನಿಂದ
ಡಿಕ್ಕಿ ಪಡಿಸಿದ್ದರಿಂದ ನನ್ನ ಕಾಕನವರು ರೋಡಿನ ಎಡಬದಿಗೆ ಬಿದ್ದಿದ್ದು. ನನ್ನ ಮಾವ ಗಂಗಾಧರ ಇವರಿಗೆ
ಕಾರ ಮುಂದೆ ಒತ್ತಿಕೊಂಡು ಹೋಗಿ ಸ್ವಲ್ಪ ದೂರದಲ್ಲಿ ನಿಂತಿದ್ದು. ನಂತರ ಅಪಘಾತವಾದದನ್ನು ನೋಡಿ ನಾನು
ಮತ್ತು ಅಲ್ಲೆ ರೊಡಿನ ಮೇಲೆ ವಾಕಿಂಗ ಮಾಡುತ್ತ ಬರುತ್ತಿದ್ದ ಶ್ರೀಶೈಲ ತಂದೆ ಗುರುಸಿದ್ದಪ್ಪ ದೋಶೇಟ್ಟಿ
ಹಾಗೂ ಗುರುಪಾದಪ್ಪ ತಂದೆ ಮಡಿವಾಳಪ್ಪ ಗೋಣಿ ಇವರೆಲ್ಲರೂ ಕೂಡಿ ನಮ್ಮ ಕಾಕ ಬಸವರಾಜ ಇವರಿಗೆ ಎಬ್ಬಿಸಿ
ನೋಡಲು ಅವರ ಹಣೆಗೆ ತಲೆಯ ಮುಂಭಾಗದಲ್ಲಿ ರಕ್ತಗಾಯಗಾಯವಾಗಿದ್ದು. ಹಾಗೂ ಅಲ್ಲಲ್ಲಿ ತರಚಿದ ರಕ್ತಗಾಯಗಳಾಗಿದ್ದವು.
ನಂತರ ನನ್ನ ಮಾವನವರಾದ ಗಂಗಾಧರ ಇವರ ಹತ್ತೀರ ಹೋಗಿ ನೋಡಲು ಅವರಿಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲೆ
ಮೃತ ಪಟ್ಟಿದ್ದರು. ನಂತರ 108 ಅಂಬುಲೆನ್ಸಗೆ ಫೊನ ಮಾಡಿ ಕರೆಯಿಸಿ ನನ್ನ
ಕಾಕ ಬಸವರಾಜ ಇವರಿಗೆ ಉಪಚಾರ ಕುರಿತು ಕಲಬುರಗಿಗೆ ಕಳುಹಿಸಿಕೊಟ್ಟಿದ್ದು. ನಂತರ ಅಪಘಾತ ಪಡಿಸಿದ ವಾಹನದ
ಹತ್ತೀರ ನಾವುಗಳು ಹೋಗುತ್ತಿದ್ದಂತೆ ಅದರ ಚಾಲಕನು ನಮಗೆ ನೋಡಿ ಅವಸರದಲ್ಲಿ ಕಾರನನ್ನು ತೆಗೆದುಕೊಂಡು ಓಡಿ ಹೋಗಿದ್ದು. ಅದರ ನಂಬರ ನೋಡಲು ಟೋಯೋಟೋ ಕಂಪನಿಯ ಕಾರ
ಇದ್ದು. ಅದು ಹಳದಿ ಬೋರ್ಡನ ಕಾರ ನಂ.ಸಿ.2461 ಇದ್ದು. ಅದು ಯಾವ ರಾಜ್ಯದ್ದು
ಅಂತಾ ಗೋತ್ತಾಗಿರುವುದಿಲ್ಲ ಆ ಕಾರ ಮತ್ತು ಅದರ ಚಾಲಕನಿಗೆ ನೋಡಿದರೆ ಗುರುತಿಸುತ್ತೇನೆ. ಕಾರಣ ನನ್ನ
ಮಾವ ಗಂಗಾಧರ ಹಾಗೂ ಕಾಕ ಬಸವರಾಜ ಇವರಿಗೆ ಹಿಂದಿನಿಂದ ಡಿಕ್ಕಿ ಪಡಿಸಿ ಗಂಗಾಧರ ಇವರಿಗೆ ಸ್ಥ್ಥಳದಲ್ಲೆ
ಮೃತ ಪಡಿಸಿದ ಕಾರನಂ. ಸಿ.2461 ನೇದ್ದರ ಚಾಲಕನ ವಿರುದ್ದ ಕಾನೂನ ಕ್ರಮ ಜರುಗಿಸುವಂತೆ
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ
ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.