POLICE BHAVAN KALABURAGI

POLICE BHAVAN KALABURAGI

26 October 2013

Gulbarga District Reported Crimes

ಕಳವು ಪ್ರಕರಣ :
ರೋಜಾ ಠಾಣೆ : ಶ್ರೀ ಮಹ್ಮದ ಅಲಿ ತಂದೆ ಮಹಿಮೂದ ಅಲಿ ಬಾಗವಾನ ಸಾ: ಅಮೀನಾ ಮಜ್ಜೀದ ಹತ್ತಿರ ಇಸ್ಲಾಮಾಬಾದ ಕಾಲೋನಿ ಗುಲಬರ್ಗಾ ರವರು ಕಳೆದ 4-5 ದಿವಸದಿಂದ ನನ್ನ ಅಣ್ಣನ ಮಗಳ ಮಧುವೆಯಾಗಿದ್ದು ಸಮಾರಂಭ ನಡೆಯುತ್ತಾ ಇದ್ದು ನಮ್ಮ ಮನೆಯವರು ಎಲ್ಲಾ ಕಡೆ ಸಮಾರಂಬಗಳಲ್ಲಿ ತಿರುಗಾಡುತ್ತಾ ಇರುತ್ತಾರೆ. ನಿನ್ನೆ ದಿನಾಂಕ: 25-10-2013 ರಂದು ಬೆಳಿಗ್ಗೆ ನಾನು ಕೆಲಸಕ್ಕೆ ಹೋಗಿ ಬಂದು ಮರಳಿ ಮದ್ಯಾನ 12:00 ಗಂಟೆಗೆ ಮನೆಗೆ ಬಂದಿರುತ್ತೇನೆ ನನ್ನ ಅಣ್ಣನ ಮಗಳ ಮಧುವೆಯಾಗಿದ್ದು ಚಿಟುಗುಪ್ಪಾದಲ್ಲಿ ನಮ್ಮ ಸಂಬಂದಿಕರು ವಲಿಮಾ ಇಟ್ಟುಕೊಂಡಿದ್ದರಿಂದ ಸಾಯಂಕಾಲ 6:00 ಗಂಟೆಗೆ ನಾನು ವಾಸವಾಗಿರುವ ಇಸ್ಲಾಮಾಬಾದ ಕಾಲೋನಿಯ ಮನೆಗೆ ಕೀಲಿಹಾಕಿಕೊಂಡು ನನ್ನ ಹೆಂಡತಿ ಮಕ್ಕಳು ಚಿಟಗುಪ್ಪಾಕ್ಕೆ ಹೋಗುವವರು ಇರುವದರಿಂದ ನಾನು ನನ್ನ ತಂದೆ ತಾಯಿಯವರು ವಾಸವಾಗಿರುವ ಖುನಿ ಅಲವಾ ಮೋಮಿನಪೂರಕ್ಕೆ ಬಂದಿದ್ದು ನನ್ನ ಹೆಂಡತಿಯವರಿಗೆ ಕಳುಹಿಸಿಕೊಟ್ಟು ನಾನು ಕೂಡಾ ಹೋಗಬೇಕಾಗಿದ್ದು ಆದರೆ ಇಲ್ಲಿಯೇ ಹೆಚ್ಚಿಗೆ ಸಮಯ ಕಳೆದಿದ್ದರಿಂದ ಮರಳಿ ಬರಲು ನನಗೆ ಸಮಯ ಆಗುತ್ತದೆ ಅಂತಾ ನಾನು ಹೋಗದೇ ನನ್ನ ಅಂಗಡಿಯಲ್ಲಿಯೇ ವ್ಯಾಪಾರ ಮಾಡುತ್ತಾ ಕುಳಿತುಕೊಂಡೆನು ವ್ಯಾಪಾರ ಮುಗಿಸಿಕೊಂಡು ಮರಳಿ ರಾತ್ರಿ 11:00 ಗಂಟೆಗೆ ನನ್ನ ಇಸ್ಲಾಮಾಬಾದ ಕಾಲೋನಿ ಮನೆಗೆ ಬಂದು ಚಾವಿ ತೆರೆದು ಒಳಗೆ ಹೋಗಿ ನೋಡಿದಾಗ ಒಳಗಡೆ ಬೆಡರೂಮ ಮತ್ತು ಹಾಲ ನೋಡಿದಾಗ ಬೆಡರೂಮದಲ್ಲಿ ಅಲಮಾರಿ ತೆರೆದು ಸಾಮಾನುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದು ಅಲ್ಲದೇ ಪಕ್ಕದ ಬೆಂಡರೂಮ ನಲ್ಲಿಯೂ ಸಹ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ನೋಡಿ ನನಗೆ ಒಮ್ಮಲೆ ಗಾಬರಿಯಾಗಿ ಪಕ್ಕದ ಬಾಗಿಲಿಗೆ ನೀಡಿದಾಗ ಪಕ್ಕದ ರೂಮಿಗೆ ಹಾಕಿದ ಕೀಲಿ ಮುರಿದಿದ್ದು ಕಂಡುಬಂದಿರುತ್ತದ್ದೆ. ನಾವು ಮನೆಯಲ್ಲಿ ಯಾರೂ ಇಲ್ಲದ ವೇಳೆಯನ್ನು ಗಮನಿಸಿದ ಕಳ್ಳರು ಮನೆಯಲ್ಲಿ ಪ್ರವೇಶ ಮಾಡಿ ಮನೆಯ ಕೀಲಿಮುರಿದು ಮನೆಯ ಅಲಮಾರಿಯ ಚಾವಿ ಮುರಿದು 1] ಅಲಮಾರಿಯಲ್ಲಿ ಇಟ್ಟಂತಹ ನಗದು ಹಣ ಹಾಗು ಬಂಗಾರದ ಆಭರಣಗಳು ಒಟ್ಟು ಅಂದಾಜು 8,60,500/-ರೂಪಾಯಿ  ಬೆಲೆಯುಳ್ಳ ಸಾಮಾನುಗಳು ಯಾರೋ ಕಳ್ಳರು ದಿನಾಂಕ: 25/10/2013 ರಂದು ಸಾಯಂಕಾಲ 6:00 ಪಿಎಮ್ ದಿಂದ 11:00 ಪಿಎಮ್ ಅವಧಿಯಲ್ಲಿ ನಮ್ಮ ಮನೆಯಲ್ಲಿ ಪ್ರವೇಶ ಮಾಡಿ ಅಲಮಾರದಲ್ಲಿ ಇಟ್ಟಿದ್ದ ವಸ್ತುಗಳನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ ಕಳುಮಾಡಿಕೊಂಡು ಹೋದ ಬಗ್ಗೆ ಸಲ್ಲಿಸಿದ ದುರು ಸಾರಾಂಶದ ಮೇಲಿಂದ ರೋಜಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ನಜೀರ ಅಹ್ಮದ ಖಾನ ರವರು ದಿನಾಂಕ 26-10-2013 ರಂದು ಬೆಳಿಗ್ಗೆ 10-30 ಗಂಟೆಗೆ ಕೇಂದ್ರ ಬಸ್ ನಿಲ್ದಾಣ ಹತ್ತಿರ ನ್ಯೂಸ ಪೇಪರ ತೆಗೆದುಕೊಂಡು ವಿದ್ಯಾನಗರ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಕೇಂದ್ರ ಬಸ್ ನಿಲ್ದಾಣದ ಎದುರುಗಡೆ ರೋಡಿನ ಮೇಲೆ ಎಮ್.ಎಸ್.ಕೆ.ಮೀಲ ಕಡೆಯಿಂದ ಮೋಟಾರ ಸೈಕಲ ನಂಬರ ಕೆಎ-32 -8638 ರ ಸವಾರನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಭಾರಿಗಾಯಗೊಳಿಸಿ ಮೋಟಾರ ಸೈಕಲ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Gulbarga District Reported Crimes

ಪಡಿತರ ಅಕ್ಕಿ ಜಪ್ತಿ :
ಗ್ರಾಮೀಣ ಠಾಣೆ : ದಿನಾಂಕ 25-10-13 ರಂದು  ಸಾಯಂಕಾಲ  ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ ವ್ಯಾಪ್ತಿಯ ಪೈಕಿ ರೇವಣಸಿದ್ದೇಶ್ವರ ಕಾಲನಿಯಲ್ಲಿ ರತ್ನಮ್ಮ ನಿಲಯ ಎಂಬ ಮನೆಯಲ್ಲಿ  ಸರಕಾರದಿಂದ ನ್ಯಾಯ ಬೆಲೆ ಅಂಗಡಿ ಮುಖಾಂತರ ಪಡಿತರ ಚೀಟಿಯ ಮೇಲೆ ವಿತರಣೆಯಾಗುವ ಅಕ್ಕಿ ಚೀಲಗಳನ್ನು  ದಾಸ್ತಾನು ಮಾಡಿರುತ್ತಾರೆಂದು ಖಚಿತ ಬಾತ್ಮಿ ಬಂದ ಮೇರೆಗೆ  ಮಾನ್ಯ ಎಸ್.ಪಿ. ಗುಲಬರ್ಗಾ, ಮಾನ್ಯ ಅಪರ ಎಸ್.ಪಿ. ಗುಲಬರ್ಗಾ, ಮಾನ್ಯ ಎ.ಎಸ್.ಪಿ. (ಗ್ರಾ) ಉಪವಿಭಾಗ ಗುಲಬರ್ಗಾ  ರವರ ಮಾರ್ಗದರ್ಶನದಲ್ಲಿ  ಮಾನ್ಯ ಡಿ.ಎಸ್.ಪಿ. (ಪ್ರೋ) ರವರ ನೇತೃತ್ವದಲ್ಲಿ ಮಾನ್ಯ ಸಿಪಿಐ ಗ್ರಾಮೀಣ ವೃತ್ತ , ಗ್ರಾಮೀಣ ಪೊಲೀಸ ಠಾಣೆಯ ಶ್ರೀ ಸುಭಾಶ್ಚಂದ್ರ ಎ.ಎಸ್.ಐ. ಮತ್ತು ಸಿಬ್ಬಂದಿಯವರಾದ ಸಿಪಿಸಿ 1061 ನರಸಿಂಹ ಚಾರಿ, ಸಿಪಿಸಿ 678 ಹುಸೇನಬಾಷಾ, ಸಿಪಿಸಿ 550 ರಾಜಕುಮಾರ, ಸಿಪಿಸಿ 261 ಹಣಮಂತ ರವರೊಂದಿಗೆ ಬಾತ್ಮಿಯಂತೆ ಸ್ಥಳಕ್ಕೆ ಹೋಗಿ ಅಕ್ರಮವಾಗಿ ಅಕ್ಕಿ ದಾಸ್ತಾನು ಮಾಡಿದ  ರೇವಣಸಿದ್ಧಪ್ಪ @ ಸಿದ್ಧು ತಂದೆ ರವೀಂದ್ರ ಮಾಹಾಜನ ಸಾ: ರೇವಣಸಿದ್ದೇಶ್ವರ ಕಾಲನಿ ಗುಲಬರ್ಗಾ ಈತನನ್ನು ದಸ್ತಗಿರಿ ಮಾಡಿ ಅವನ ವಶದಿಂದ  50 ಕೆ.ಜಿ.ಯ 92 ಅಕ್ಕಿ ಚೀಲಗಳು ಅ:ಕಿ: 59,800/- ರೂ. ಮತ್ತು ಟಂಟಂ ಕೆಎ 32 ಎ 3292 ಅ:ಕಿ: 80,000/- ರೂ. ನೇದ್ದವುಗಳನ್ನು  ಜಪ್ತ ಮಾಡಿಕೊಂಡು ಠಾಣೆಗೆ ಬಂದು ಸದರಿಯವನ ವಿರುದ್ಧ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಆಕ್ರಮ ಮರಳು ಸಾಗಾಣೆ ಮಾಡುವವರ ಬಂಧನ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಆಸೀಫವುಲ್ಲಾ ಭೂ ವಿಜ್ಞಾನಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಗುಲಬರ್ಗಾ ರವರು ಠಾಣೆಗೆ ಹಾಜರಾಗಿ 02 ಜನ ಆರೋಪಿತರು ಮತ್ತು ಜಪ್ತಿ ಪಂಚನಾಮೆ, ಒಂದು ವರದಿಯನ್ನು ಸಲ್ಲಿಸಿದ್ದು ಅದರ ಸಾರಾಂಶವೆನೆಂದರೇ, ದಿನಾಂಕ 25-10-2013 ರಂದು 03:30 ಎ.ಎಂ ಕ್ಕೆ ಪದ್ಮನಾಭಚಾರ ಉಪ ನಿರ್ದೇಶಕರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಗುಲಬರ್ಗಾ ಇವರು ಫೋನ್ ಮುಖಾಂತರ ನನಗೆ ತಿಳಿಸಿದ್ದೇನೆಂದರೇ, ಸೇಡಂ ರೋಡ್ ಕಡೆಯಿಂದ ಕೆಲವು ಟ್ರಾಕ್ಟರ ಚಾಲಕರು ಅನಧಿಕೃತವಾಗಿ ಮರಳು ಸಾಗಾಣಿಕೆ ಮಾಡುತ್ತಿದ್ದಾರೆ ಅಂತಾ ಖಚಿತವಾದ ಬಾತ್ಮಿ ಬಂದಿರುತ್ತದೆ. ಆದ್ದರಿಂದ ನೀವು ಎಂ.ಬಿ ನಗರ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರ ಸಹಕಾರ ಪಡೆದುಕೊಂಡು ಪಂಚರನ್ನು ಕರೆಯಿಸಿಕೊಂಡು ತಪಾಸಣೆ ಮಾಡಲು ತಿಳಿಸಿದ ಮೇರೆಗೆ ಮಾನ್ಯರವರ ಆದೇಶದ ಮೇರೆಗೆ ನಾನು ಇಬ್ಬರು ಪಂಚರು ಮತ್ತು ಎಂ.ಬಿ ನಗರ ಪೊಲೀಸ್ ಠಾಣೆ ಪಿ.ಎಸ್.ಐ (ಅ.ವಿ) ಹಾಗೂ ಅವರ ಸಿಬ್ಬಂದಿಜನರೊಂದಿಗೆ  ಸೇಡಂ ರಿಂಗ್ ರೋಡ ಹತ್ತಿರ ನಿಂತು ಹೋಗಿ ಸೇಡಂ ರೋಡ್ ಕಡೆಯಿಂದ ಅನಧಿಕೃತ ಮರಳನ್ನು ಕಳ್ಳತನ ಮಾಡಿಕೊಂಡು 02 ಟ್ರಾಕ್ಟರಗಳು ಮರಳನ್ನು ತುಂಬಿಕೊಂಡು ಸೇಡಂ ರೋಡ್ ಕಡೆಯಿಂದ ಹುಮನಾಬಾದ ರಿಂಗ್ ರೋಡ್ ಕಡೆಗೆ ಹೋಗುತ್ತಿರುವಾಗ ಸೇಡಂ ರಿಂಗ್ ರೋಡ್ ಹತ್ತಿರ ನಿಲ್ಲಿಸಲು ತಿಳಿಸಿದ ಮೇರೆಗೆ ಸದರಿ ಟ್ರಾಕ್ಟರ ಚಾಲಕರಿಗೆ ತಮ್ಮ ದಾಖಲಾತಿಗಳು ಕೇಳಿದಾಗ ಟ್ರಾಕ್ಟರ ಚಾಲಕರು ಮರಳು ತುಂಬಿಕೊಂಡು ಹೊಗುತ್ತಿರುವುದಾಗಲಿ ಹಾಗೂ ಮರಳಿನದಾಗಲಿ ಯಾವುದೆ ಕಾಗದ ಪತ್ರಗಳು ಹಾಜರು ಪಡಿಸಿರುವುದಿಲ್ಲಾ. ನಂತರ ಸದರಿ ಮರಳನ್ನು ಎಲ್ಲಿಂದ ತರುತ್ತೀರಿ ಅಂತಾ ಕೇಳಿದಕ್ಕೆ ಚಿತ್ತಾಪೂರ ತಾಲ್ಲೂಕಿನ ಭಾಗೋಡಿಯಿಂದ ತರುತ್ತಿರುತ್ತೇವೆ ಅಂತಾ ತಿಳಿಸಿದ್ದು ನಂತರ 1) Tractor engine No. KA 32 TA 6158 & Trolley No. KA 32 TA 6159 ನೇದ್ದರ ಚಾಲಕನಿಗೆ ಹೆಸರು ವಿಚಾರಿಸಲು ತನ್ನ ಹೆಸರು ರಿಯಾಜ್ ತಂದೆ ಗಫೂರ ಮಿಯಾ ಮಕಾನ್ದಾರ ವಯಃ 23 ವರ್ಷ ಜಾತಿಃ ಮುಸ್ಲಿಂ ಉಃ ಟ್ರಾಕ್ಟರ ಚಾಲಕ ಸಾಃ ಬೆಳಗುಂಪಾ ತಾಃ ಚಿತ್ತಾಪೂರ ಜಿಃ ಗುಲಬರ್ಗಾ ಅಂತಾ ತಿಳಿಸಿದ್ದು ನಂತರ 2) Tractor engine No. KA 32 TA 3254 & Trolley No. KA 32 TA 3255 ನೇದ್ದವನಿಗೆ ವಿಚಾರಿಸಲು ತನ್ನ ಹೆಸರು ಯಲ್ಲಾಲಿಂಗ ತಂದೆ ಶಂಕರ ಪೂಜಾರಿ ವಯಃ 23 ವರ್ಷ ಜಾತಿಃ ಕುರುಬ ಸಾಃ ಬೆಳಗುಂಪಾ ತಾಃ ಚಿತ್ತಾಪೂರ ಜಿಃ ಗುಲಬರ್ಗಾ ಅಂತಾ ತಿಳಿಸಿದ್ದು ನಂತರ ಸದರಿ 02 ಟ್ರಾಕ್ಟರಗಳ ಹಿಂದುಗಡೆ ಇನ್ನೂ 06 ಟ್ರಾಕ್ಟರಗಳು ಬಂದಿದ್ದು ನಾವು ವಿಚಾರಣೆ ಮಾಡುತ್ತಿರುವುದನ್ನು ನೋಡಿ ಸದರಿ 06 ಟ್ರಾಕ್ಟರ ಚಾಲಕರು ತಮ್ಮ ಟ್ರಾಕ್ಟರಗಳನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾರೆ. ಸದರಿ 06 ಟ್ರಾಕ್ಟರಗಳ ನಂಬರ ನೋಡಲಾಗಿ 3) Tractor engine No. KA 32 T 7138 & Trolley No. KA 32 T 7139, 4) Tractor engine No. KA 32 T 1866 & Trolley No. KA 32 T 1867 5) Tractor engine No. KA 32 T 1530 & Trolley No. KA 32 T 1531 6) Tractor engine No. MYP 4954 & Trolley No. MYP 4955 7) Tractor engine No. KA 32 TA 6004 & Trolley No. KA 32 TA 6005 8) Tractor engine No. KA 32 T 319 & Trolley No. KA 32 T 320 ಅಂತಾ ಇರುತ್ತದೆ. ಸದರಿ 08 ಟ್ರಾಕ್ಟರಗಳ ಅಃಕಿಃ 32,00,000/- ರೂ ಹಾಗು 08 ಟ್ರಾಕ್ಟರಗಳಲ್ಲಿ ಅನಧಿಕೃತವಾಗಿ ಸಾಗಿಸುತ್ತಿದ್ದ ಮರಳಿನ ಅಃಕಿಃ 24000/- ರೂ. ನೇದ್ದನ್ನು ಅನಧಿಕೃತವಾಗಿ ಯಾವುದೇ ಪರವಾನಿಗೆ ಹೊಂದದೆ ತಮ್ಮ ಟ್ರಾಕ್ಟರ ಟ್ರ್ಯಾಲಿಯಲ್ಲಿ ಮರಳನ್ನು ತುಂಬಿಕೊಂಡು ಸರಕಾರದ ಬೊಕ್ಕಸಕ್ಕೆ ಮೋಸ ಮಾಡುವ ಉದ್ದೇಶದಿಂದ ಮರಳನ್ನು ಕಳುವು ಮಾಡಿಕೊಂಡು ಸಾಗಿಸುತ್ತಿರುವ 08 ಟ್ರಾಕ್ಟರಗಳನ್ನು ಹಾಗು 02 ಜನ ಆರೋಪಿತರನ್ನು ಜಪ್ತಿ ಪಂಚನಾಮೆ ಹಾಜರ ಪಡಿಸಿದರ ಮೇರೆಗೆ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕಳವು ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ ಈಶ್ವರಪ್ಪ ತಂದೆ ಮರೆಪ್ಪ ಸಾ|| ಯನಗುಂಟಾ ತಾ|| ಜೇವರ್ಗಿ  ಇವರು ಠಾಣೆಗೆ ಬಂದು ಪಿರ್ಯಾದಿ ಅರ್ಜಿ ಹಾಜರ ಪಡಿಸಿದ್ದು ಅದರ ಸಂಕ್ಷಿಪ್ತ ಸಾರಾಂಶವೆನೆಂದರೆ ದಿನಾಂಕ 25/10/2013 ರಂದು ನನ್ನ ವ್ಯಯಕ್ತಿಕ ಕೆಲಸಕ್ಕಾಗಿ ನನ್ನ ಊರಾದ ಯನಗುಂಟಾದಿಂದ ಗುಲಬರ್ಗಾಕ್ಕೆ ಮುಂಜಾನೆ 8 ಗಂಟೆಗೆ ಬಂದು ಬಸ್ ನಿಲ್ದಾಣದಲ್ಲಿ ಬಸ್ಸದಿಂದ ಇಳಿಯುವಾಗ ನುಕುನುಗ್ಗಲು ಉಂಟಾಗಿದ್ದು ಆ ವೇಳೆಯಲ್ಲಿ ಯಾರೋ ಕಳ್ಳರು ನನ್ನ ಪ್ಯಾಂಟ ಜೇಬಿನಲ್ಲಿ ಕೈಹಾಕಿ ಜೇಬುಗಳ್ಳತನ ಮಾಡಿಕೊಂಡು ಹೋಗಿದ್ದು ಅದರಲ್ಲಿ  6500/- ರೂ ನಗದು ಹಣ ಮತ್ತು ಎ.ಟಿ.ಎಮ್. ಕಾರ್ಡ, ಪಾನ್ ಕಾರ್ಡ, ಐ.ಡಿ ಕಾರ್ಡ  ಇರುತ್ತವೆ ಅಂತಾ ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.