POLICE BHAVAN KALABURAGI

POLICE BHAVAN KALABURAGI

26 April 2015

Kalaburagi District Reported Crimes

ಅಪಘಾತ ಪ್ರಕರಣಗಳು :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ವಿಜಯಕುಮಾರ ತಂದೆ ಲಕ್ಷ್ಮಣರಾವ ಜಮಾದಾರ ಸಾ: ಕಮಲನಗರ ಕಲಬುರಗಿ ಇವರು ದಿನಂಕ 25-04-2015 ರಂದು ಸಾಯಂಕಾಲ ತಾನು ಚಲಾಯಿಸಿಸುತ್ತೀರುವ ಆಟೋರಿಕ್ಷಾ ನಂ ಕೆಎ-32-ಬಿ-3921 ನೇದ್ದರಲ್ಲಿ 3 ಜನ ಪ್ರಯಾಣಿಕ ಹೆಣ್ಣು ಮಕ್ಕಳನ್ನು ಕೂಡಿಸಿಕೊಂಡು ಸುಪರ ಮಾರ್ಕೆಟನಿಂದ ಕೆಂದ್ರ ಬಸ ನಿಲ್ದಾಣ ಕಡೆಗೆ ಹೋಗುವ ಕುರಿತು ಜಗತ ಸರ್ಕಲ ಮುಖಾಂತರ ಹೊಗುವಾಗ ದಾರಿ ಮದ್ಯ ಸಿದ್ದಿಪಾಶಾ ದರ್ಗಾ ಕ್ರಾಸ ಹತ್ತಿರ ಬರುವ ಹಲ್ಲಿನ ಆಸ್ಪತ್ರೆಯ ಎದುರಿನ ರೋಡ ಮೇಲೆ ಹಿಂದಿನಿಂದ   ಮೋಟಾರ ಸೈಕಲ ನಂ ಕೆಎ-05-ಹೆಚ್.ಎ-4085 ನೇದ್ದರ ಸವಾರ ಚಂದ್ರಕಾಂತ ಇತನು ಹಿಂದುಗಡೆ ಈರಪ್ಪಾ ರವರನ್ನು ಕೂಡಿಸಿಕೊಂಡು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಆಟೋರಿಕ್ಷಾ ವಾಹನಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ಆಟೋರಿಕ್ಷಾ ಡ್ಯಾಮೆಜ ಮಾಡಿ ಈರಪ್ಪಾ ಇವರಿಗೆ ಭಾರಿ ಗಾಯಗೊಳಿಸಿ ತಾನೂ ಗಾಯ ಹೊಂದಿದ್ದು  ಇರುತ್ತದೆಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ದಿನಾಂಕ 24-04-2015 ರಂದು ಮದ್ಯಾಹ್ನ ನನ್ನ ಗಂಡ ಸಿದ್ದರಾಮ ಇತನು ತಾನು ಚಲಾಯಿಸುತ್ತಿರುವ ಮೋಟಾರ ಸೈಕಲ ನಂಬರ ಕೆಎ-32 ಇಸಿ- 1754 ನೇದ್ದನ್ನು ಶಹಾಬಜಾರ ನಾಕಾ ಕಡೆಯಿಂದ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಖಾದ್ರಿಚೌಕ ಹತ್ತಿರ ನಡೆದುಕೊಂಡು ಹೋಗುತ್ತಿರುವ ಯಾವುದೊ ಒಬ್ಬ ಮನುಷ್ಯನಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ಆತನಿಗೆ ಸಣ್ಣಪುಟ್ಟ ಗಾಯಗೊಳಿಸಿ ತಾನೇ ಮೋಟಾರ ಸೈಕಲ ಮೇಲಿಂದ ಬಿದ್ದು ತಲೆಯ ಹಿಂದುಗಡೆ ಗುಪ್ತಪೆಟ್ಟು, ಬಾಯಿಗೆಪೆಟ್ಟು ಬಿದ್ದು ಮೇಲಿನ ಹಲ್ಲು ಕಟ್ಟಾಗಿರುತ್ತದೆ ಬಲ ಮೆಲಕಿನ ಹತ್ತಿರ ತರಚಿದಗಾಯ ಹಾಗು ಬಲಗಾಲು ಪಾದದ ಮೇಲ್ಬಾಗದಲ್ಲಿ ರಕ್ತಗಾಯ ಹೊಂದಿರುತ್ತಾರೆ ಅಂತಾ ಶ್ರೀಮತಿ ಮಹಾದೇವಿ ಗಂಡ ಸಿದ್ದರಾಮ ಶ್ರೀಗಣಿ ಸಾ: ನಿಂಬಾಳ ತಾ: ಆಳಂದ ಜಿ: ಕಲಬುರಗಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನವಜಾತ ಹೆಣ್ಣು ಶಿಶುವನ್ನು ಕಂಟಿಯಲ್ಲಿ ಬಿಸಾಕಿ ಹೋದ ಪ್ರಕರಣ :
ಮಾದನ ಹಿಪ್ಪರಗಾ ಠಾಣೆ : ಶ್ರೀ ಬಸವರಾಜ ತಂದೆ ಶಾಂತಪ್ಪ ಫುಲಾರಿ ಸಾ:ಮಾದನಹಿಪ್ಪಗಾ ತಾ:ಆಳಂದ ಇವರು ದಿನಾಂಕ:25/04/2015 ರಂದು ನಾನು ಬೆಳಗ್ಗೆ ತಮ್ಮ ಮನೇಯ ಪಕ್ಕಕ್ಕೆ ಇರುವ ಸರ್ಕಾರಿ ನಾಲಾ (ಹಳ್ಳ) ದಲ್ಲಿ ಸಂಡಾಸಕ್ಕೆ ಹೊದಾಗ ನಮ್ಮೂರಿನ ಶಿವಲಿಂಗಪ್ಪಾ ಹೇಲಿಕೇರಿ ಇವರ ಹಳೇಯ ಮನೆ ಹಿಂದುಗಡೆಯ ನಾಲಾದಲ್ಲಿನ ಜಾಲಿ ಕಂಟೆಯಲ್ಲಿ ಮಗು ಅಳುವ ಶಬ್ದ ಕೇಳಿ ನಾನು ವಾಪಾಸ ಮನೆಗೆ ಬಂದು ಬ್ಯಾಟರಿ ತೆಗೆದುಕೊಂಡು ಹೊಗುವಾಗ ರಸ್ತೇಯ ಮೇಲೆ ಹೊಗುತಿದ್ದ ನಮ್ಮೂರಿನ ಇಸಾಕ ಬಳಿಗಾರ, ವೈಜುನಾಥ ಎಳಮೇಲಿ ಇವರಿಗೆ ನಾನು ಮಗು ಅಳುವ ವಿಷಯ ತಿಳಿಸಿ ನಡೇಯಿರಿ ಅಲ್ಲಿ ಮಗುವಿನ ಅಳುವ ಸಬ್ದ ಬರುತ್ತಿದೆ ಹೊಗೊಣಾ ಅಂತ ಕರೆದುಕೊಂಡು ಶಿವಲಿಂಗಪ್ಪಾ ಹೇಲಿಕೇರಿ ಅವರ ಹಳೇಯ ಮನೆಯ ಹಿಂದಿನ ನಾಲಾದಲ್ಲಿ ಹೊಗಿ ಜಾಲಿ ಕಂಟಿಯಲ್ಲಿ ಬ್ಯಾಟರಿ ಹಾಕಿ ನೋಡಿದಾಗ ಮಗು ಇದ್ದುದ್ದು ಕಂಡು ಬಂದಿದ್ದರಿಂದ ನಾವೂ ಮೂರು ಜನರು ಸೇರಿ ಆ ಮಗುವನ್ನು ಎತ್ತಿಕೊಂಡು ಹೊರಗೆ ಬಂದು ಬ್ಯಾಟರಿ ಹಾಕಿ ಪರಿಶಿಲಿಸಿ ನೊಡಲಾಗಿ ಒಂದು ದಿವಸದ ನವಜಾತ ಹೆಣ್ಣು ಶಿಶು ಇದ್ದು ಅದರ ತಲೇಯಲ್ಲಿ ಒಂದು ಇಂಚುದಷ್ಟು ಕಪ್ಪು ಕೂದಲು ಮಗುವಿನ ಬಣ್ಣ ಬೆಳ್ಳನೆಯ ಬಣ್ಣ ಇದ್ದು ಹೊಂಕುಳದ ಹೂರಿ ಜನಿಸಿದಾಗ ಇದ್ದ ಹಾಗೆ ಇದ್ದು ಈ ಮಗುವನ್ನು ಇಂದು ಬೇಳಗಿನ ಜಾವದಲ್ಲಿ ಯಾರೊ ಬಿಸಾಕಿರುತ್ತಾರೆ. ಮಗುವಿನ ಜೀವಕ್ಕೆ ಎನಾದರು ಅಪಾಯ ವಾಗಬಹುದು ಅಂತಾ ತಿಳಿದು ನಾವೂ ಮೂರು ಜನರು ನಮ್ಮೂರಿನ ಸರ್ಕಾರಿ ಆಸ್ಪತ್ರೆಗೆ ಮಗುವನ್ನು ತೆಗೆದುಕೊಂಡು ಹೊಗಿ ಆ ಮಗುವಿನ ಆರೈಕೆ ಮಾಡಿಸಿರುತ್ತೆವೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.