POLICE BHAVAN KALABURAGI

POLICE BHAVAN KALABURAGI

18 March 2017

Kalaburagi District Reported Crimes

ಹಲ್ಲೆ ಪ್ರಕರಣಗಳು :
ನೆಲೋಗಿ ಠಾಣೆ : ದಿನಾಂಕ: 14/03/2017 ರಂದು ನಾನು ನಮ್ಮ ಅಂಗಡಿಯ ಹತ್ತಿರ ಇದ್ದಾಗ ನಮ್ಮೂರ ರುಕುಂ ಪಟೇಲ ಇತನು ಬಂದು ನನ್ನ ಗಂಡನಿಗೆ 10 ರೂ ಖಾರಾ ಕೂಡು ಎಂದು 100/-ರೂ ಕೊಡಲು ಬಂದನು ಆಗ ನನ್ನ ಗಂಡ ಚಿಲ್ಲರ ಇಲ್ಲಾ ನಮ್ಮಲ್ಲಿ ಖಾರಾ ಇಲ್ಲ ಅಂದನು ಆಗ ರುಕುಂ ಪಟೇಲನು ಖಾರಾ ಇಲ್ಲ ಅಂದರೆ ಅಂಗಡಿಯಾಕೆ ಇಟ್ಟಿರಿ ಭೋಸಡಿ ಮಗನೆ ಎಂದು ಬೈಹತ್ತಿದ ಆಗ ನಾನು ಯಾಕೆ ರುಕುಂಪಟೇಲರೆ ಚಿಲ್ಲರ ಇಲ್ಲ ಖಾರಾ ಇಲ್ಲ ಅಂದರೂ ಹೋಗು ಅಂದರೂ ಹೋಗುತ್ತಿಲ್ಲಾ ಅಂದನು. ಆಗ ಅವನು ರಂಡಿ ಅಂಗಡಿ ಯದಕ್ಕೆ ಇಟ್ಟಿದ್ದಿ ಬಂದ ಮಾಡಿಕೊಂಡು ಹೋಗು  ರಂಡಿ ಅಂದು ನನ್ನ ಕೈ ಹಿಡಿದು ಜಗ್ಗಾಡಿ ಕಾಲಿನಿಂದ ಒದ್ದು ಕೇಳಗಡೆ ಕೆಡವಿದ ಆಗ ಅವನ ಮಕ್ಕಳಾದ ಸುಲ್ತಾನಪಟೇಲ ರಫೀಕ ಪಟೇಲ ಶಮಸುರ ಪಟೇಲ ಸಾಹೇಬ ಪಟೇಲ ಮೈಬೂಬ ಪಟೇಲ ಬೂಡೇಸಾಬ ಪಟೇಲ ಇವರೆಲ್ಲರೂ ಕೈಯಲ್ಲಿ ಕಲ್ಲು ಬಡಿಗೆ ಹಿಡಿದುಕೊಂಡು ಬಂದು ಏ ರಂಡಿ ಭೋಸಡಿ ನಮ್ಮ ಅಪ್ಪನಿಗೆ ಯಾಕೆ ಬೈಯುತ್ತಿದ್ದಿ ಅಂದು ಸಲ್ತಾನ ಪಟೇಲ ತಂದೆ ರುಕುಂ ಪಟೇಲ ಈತನು ತನ್ನ ಕೈಯಲ್ಲಿದ್ದ ಕಲ್ಲಿನಿಂದ ಬೆನ್ನ ಮೇಲೆ ಹೋಡೆದನು ರಫೀಕ ಪಟೇಲ ತಂದೆ ರುಕುಂ ಪಟೇಲ ಈತನು ಕೈಯಲ್ಲಿದ್ದ ಬಡಿಗೆಯಿಂದ ಬಲಗೈ ಮೇಲೆ ಹೋಡೆದನು ಆಗ ಶಮಶೂರ ಪಟೇಲ ತಂದೆ ರುಕುಂ ಪಟೇಲ, ಸಾಹೇಬ ಪಟೇಲ ತಂದೆ ಸಲ್ತಾನ ಪಟೇಲ ಮೈಬೂಬ ಪಟೇಲ ತಂದೆ ರುಕುಂ ಪಟೇಲ ಬೂಡ್ಯಾ ತಂದೆ ಸಾಹೇಬ ಪಟೇಲ ಇವರು ಭೋಸಡಿ ಮಕ್ಕಳೆ ನಿಮಗೆ ಇಷ್ಟಕ್ಕೆ ಬಿಡುವದಿಲ್ಲಾ ನಿಮಗೆ ಖಲಾಸ ಮಾಡಿ ಬಿಡುತ್ತೇವೆ ಅಂತ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಶ್ರೀಮತಿ ದೇವಕ್ಕಿ ಗಂಡ ಸೈಬಣ್ಣ ಜೋಗೂರ ಸಾ|| ರಂಜಣಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ನೆಲೋಗಿ ಠಾಣೆ : ದಿನಾಂಕ  14/03/2017 ರಂದು ಸಾಯಂಕಾಲ ನಾನು ಸಾಯಿಬಣ್ಣ ಜೋಗುರ ಇವರ ಅಂಗಡಿಗೆ ಹೋಗಿ ಖಾರಾ ಕೊಡು ಅಂತ ಕೇಳಲು ಹೋಗಿದ್ದೆ ಆಗ ಸಾಯಿಬಣ್ಣನು ನಮ್ಮ ಹೋಟೇಲದಲ್ಲಿ ಖಾರಾ ಇಲ್ಲ ಹೋಗು ಅಂದನು ಆದರೂ ಕೂಡಾ ನಾನು ಚಿಲ್ಲರೆ ಕೋಡುತ್ತೇನೆ ಖಾರಾ ಕೋಡು ಎಂದು ಕೇಳಿದಾಗ ಭೋಸಡಿ ಮಗನೆ ಖಾರಾ ಇಲ್ಲಾ ಅಂದರೆ ತಿಳಿಯುವದಿಲ್ಲಾ ಎಂದು ಅಂಗಡಿಯಿಂದ ಹೋರಗೆ ಬಂದು ನನ್ನ ಎದೆಯ ಮೇಲಿನ ಅಂಗಿ ಹಿಡಿದು ಕೈಯಿಂದ ಕಪಾಳ ಮೇಲೆ ಹೋಡೆದನು ಆಗ ಅಲ್ಲೆ ಇದ್ದ 2) ಮಲ್ಲಪ್ಪ ತಂದೆ ಸೈಬಣ್ಣ, 3) ಭಾಗಣ್ಣ ತಂದೆ ಶರಣಪ್ಪ 4) ಭೈಲಪ್ಪ ತಂದೆ ಸಾಯಿಬಣ್ಣ 5) ಸಂತೋಷ ತಂದೆ ಪ್ರಭು 6) ಭೀರಪ್ಪ ತಂದೆ ಶರಣಪ್ಪ 7) ಶರಣಪ್ಪ ತಂದೆ ಸಾಯಿಬಣ್ಣ ಇವರೆಲ್ಲರೂ ಗುಂಪು ಕಟ್ಟಿಕೊಂಡು ಕೈಯಲ್ಲಿ ಕಲ್ಲು ಬಡಿಗೆ ಹಿಡಿದುಕೊಂಡು ಬಂದು ಮಲ್ಲಪ್ಪನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ತಲೆಯ ಹಿಂಬಾಗಕ್ಕೆ ಹೋಡೆದನು ಆಗ ನನ್ನ ಮಕ್ಕಳಾದ ರಫೀಕ ಪಟೇಲ, ಮತ್ತು ಶಮಸೀರ ಪಟೇಲ ಬಿಡಿಸಲು ಬಂದಾಗ ರಫೀಕ ಪಟೇಲನಿಗೆ ಭಾಗಣ್ಣನು ತನ್ನ ಕೈಯಲ್ಲಿದ್ದ ಕಲ್ಲಿನಿಂದ ಬಲಗಡೆ ಭೂಜದ ಮೇಲೆ ಹೋಡೆನು ಆಗ ಶಮಸೀರ ಪಟೇಲನಿಗೆ ಬೈಲಪ್ಪನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ಎಡಗೈ ಮುಂಗೈ ಕೇಳಗಡೆ ಹೋಡೆದು ರಕ್ತಗಾಯ ಮಾಡಿದನು ಆಗ ಸಂತೋಷ ಹೂಗಾರ, ಭೀರಪ್ಪಾ ನಾಗಾವಿ ಮತ್ತು ಶರಣಪ್ಪ ಜೋಗುರ ಇವರು ಹೋಡೆಯಿರಿ ಈ ಸೋಳೆ ಮಕ್ಕಳಿಗೆ ಹೋಡೆದು ಖಲಾಸ ಮಾಡಿರಿ ಎಂದು ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ಶ್ರೀ ರುಕುಂ ಪಟೇಲ ತಂದೆ ಸುಲ್ತಾನ ಪಟೇಲ ಪೊಲೀಸ್ ಬಿರೆದಾರ ಸಾ|| ರಂಜಣಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ನೆಲೋಗಿ ಠಾಣೆ : ಶ್ರೀ ವಿಜಯಕುಮಾರ ತಂದೆ ಧೂಳಪ್ಪ ತಳವಾರ ಸಾ|| ಕೂಟನೂರ ರವರು ದಿನಾಂಕ: 16/03/2017 ರಂದು ಕೆಲಸ ವಿದ್ದ ಕಾರಣ ನೆಲೋಗಿಗೆ ಬಂದಿದೆ ನಂತರ ನಾನು ನಮ್ಮೂರಿಗೆ ಹೋಗಬೇಕೆಂದು ಅಂದಾಜು 8-45 ಎ.ಎಂ ಸುಮಾರಿಗೆ ನಾನು ನೆಲೋಗಿಯ ಕೂಟನೂರ ಕ್ರಾಸ ಹತ್ತಿರ ನಿಂತಾಗ ಅಲ್ಲಿ ನಮ್ಮೂರಿನ ಲಕ್ಕಪ್ಪ ಹಿಪ್ಪರಗಿ ಇವರ ಟಂ ಟಂ ನಂ: ಕೆ.ಎ 32 ಸಿ 1977 ನಿಂತಿತ್ತು ಅದರಲ್ಲಿ ನಮ್ಮೂರಿನ ರಮೇಶ ತಂದೆ ಭೀಮರಾಯ ನಾಗರಾಜ ತಂದೆ ಮಲ್ಲಿಕಾರ್ಜುನ ಕುಳಿತ್ತಿದ್ದರು ಸ್ವಲ್ಪ ಸಮಯದ ನಂತರ ಟಂಟಂ ಚಾಲಕನು ಟಂಟಂ ನಡೆಸುತ್ತಾ ಕೂಟನೂರ ಕಡೆ ಹೋರಟನು ಮುಂದೆ ಮರಗಮ್ಮ ದೇವಿಯ ಗುಡಿಯ ದಾಟಿ ಸ್ವಲ್ಪ ಮುಂದೆ ಹೋದಾಗ ಲಕ್ಕಪ್ಪನು ತನ್ನ ಟಂಟಂನ್ನು ಅತೀ ವೇಗ ಹಾಗೂ ನಿಷ್ಕಾಳಜೀತನದಿಂದ ನಡೆಸಹತ್ತಿದ್ದ ಆಗ ನಾವು ಸಾವಕಾಶ ನಡೆಸು ಅಂತ ಹೇಳಿದರೂ ಅವನು ತನ್ನ ಟಂಟಂನ್ನು ಅತೀ ವೇಗ ಹಾಗೂ ನಿಷ್ಕಾಳಜೀತನದಿಂದ ನಡೆಯಿಸಿ ಸಿದ್ದಯ್ಯಾ ಸ್ವಾಮಿ ಇವರ ಹೋಲದ ಹತ್ತಿರ ಇರುವ ತಿರುವಿನಲ್ಲಿ ರೋಡಿನ ಎಡ ಮಗ್ಗಲಲ್ಲಿ ಪಲ್ಟಿ ಮಾಡಿದ ಆಗ ನನಗೆ ಎಡ ತೋಡೆಯಲ್ಲಿ ಕಾಲು ಮುರಿದಂತೆ ಬಾರಿ ಗಾಯವಾಯಿತು ನಾಗರಾಜನ ಎರಡು ಮೋಳಕಾಲಿಗೆ ಭಾರಿ ರಕ್ತಗಾಯವಾಯಿತು ಮತ್ತು ಎಡಗೈ ಬೆರಳಿಗೆ ರಕ್ತಗಾಯಗಳು ಆದವು ರಮೇಶ ತಳವಾರ ಇತನಿಗೆ ಬಲ ಕಿವಿಯ ಹತ್ತಿರ ಭಾರಿ ರಕ್ತಗಾಯವಾಗಿದ್ದು ಬೆನ್ನ ಮೇಲೆ ಮತ್ತು ಎದೆಯ ಮೇಲೆ ಕೂಡಾ ಗಾಯಗಳಾಗಿದ್ದವು ಆಗ ಸಮಯ ಮುಂಜಾನೆ 9:00 ಗಂಟೆ ಆಗಿತ್ತು ನಂತರ ಯಾರೋ ಫೋನ ಮಾಡಿ ನೆಲೋಗಿಯ ಬಾಬು ಪಾಟೀಲ ಇವರ ಟವೇರಾ ಜೀಪ ತಂದು ನನಗೆ ಬಸವೇಶ್ವರ ಆಸ್ಪತ್ರೆ ಸೇರಿಕೆ ಮಾಡಿ ನಂತರ ಕಾಮರೆಡ್ಡಿ ಆಸ್ಪತ್ರೆಯಲ್ಲಿ ಉಪಚಾರಕ್ಕಾಗಿ ಸೇರಿಕೆ ಮಾಡಿರುತ್ತಾರೆ ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀಮತಿ ಗೌರಮ್ಮಾ ಗಂಡ ರೇವಣಸಿದ್ದಪ್ಪಾ ಕಾಳೆ ಸಾ:ಅಫಜಲಪೂರ ಜಿ:ಕಲಬುರಗಿ ಹಾ::ಸಿಂದಗಿ ತಾ:ಸಿಂದಗಿ ಜಿ:ವಿಜಯಪುರ ಇವರು ದಿನಾಂಕ:17/03/2017 ರಂದು ಕಲಬುರಗಿ ನಗರದ ಶ್ರೀ ಶರಣಬಸವೇಶ್ವರ ಜಾತ್ರೆ ಇದ್ದ ಪ್ರಯುಕ್ತ ಸಾಯಂಕಾಲ 6.00 ಗಂಟೆ ಸುಮಾರಿಗೆ ನಾನು ಮತ್ತು ನನ್ನ ತಾಯಿ ವೀಮಲಾಬಾಯಿ ದೇವರ ದರ್ಶನ ಮಾಡಲು ಹೋಗಿದ್ದು ಅಲ್ಲಿ ಜಾತ್ರೆಯಲ್ಲಿ ತೇರಿನ ಹತ್ತಿರ ಭಕ್ತಾದಿಗಳ ಬಹಳ ದಟ್ಟಣೆಯಿದ್ದು ನಾವು ಅಲ್ಲೆ ನಿಂತಿದ್ದು ಸಾಯಂಕಾಲ 6.30 ಗಂಟೆಗೆ ನನ್ನ ಕೊರಳಲಿದ್ದ 40 ಗ್ರಾಂ ಬಂಗಾರದ ಎರಡು ಎಳೆಯ ಮಂಗಳಸೂತ್ರ ಇರಲಿಲ್ಲ ಯಾರೋ ಕಳ್ಳರು ನನ್ನ ಕೊರಳಲಿದ್ದ 40 ಗ್ರಾಂ ಬಂಗಾರದ ಮಂಗಳಸೂತ್ರ .ಕಿ.1,19,600/-ರೂ ಬೆಲೆ ಬಾಳುವದು ನನಗೆ ಗೊತ್ತಾಗದ ಹಾಗೆ ಕಳುವು ಮಾಡಿಕೊಂಡು ಹೋಗಿರುತ್ತಾರೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :
ಫರತಾಬಾದ ಠಾಣೆ : ಶ್ರೀಮತಿ ಶರಣಮ್ಮ ಗಂಡ ಮಾಹಂತಗೌಡ ಮಾಲಿ ಪಾಟೀಲ್ ಸಾ: ಮಳನಿ ತಾ: ಜಿ: ಕಲಬುರಗಿ ಹಾ: ವ: ಗುಬ್ಬಿ ಕಾಲೊನಿ ಕಲಬುರಗಿ ಇವರಿಗೆ ಒಂದು ವರ್ಷದ ಹಿಂದೆ ನಮ್ಮ ತಂದೆ-ತಾಯಿಯವರು ನನಗೆ ಕಲಬುರಗಿ ತಾಲ್ಲೂಕಿನ ಮಳನಿ ಗ್ರಾಮದ ಮಾಹಂತಗೌ ತಂದೆ ಶರಣಗೌಡ ಮಾಲಿ ಪಾಟೀಲ ಇವರೊಂದಿಗೆ ಮದುವೆ ಮಾಡಿಕೊಟ್ಟಿದ್ದು ಮದುವೆಯ ಸಮಯದಲ್ಲಿ ವರೋಚಾರವಾಗಿ 15 ತೊಲಿ ಬಂಗಾರ 2 ಲಕ್ಷ ರೂಪಾಯಿ ಹಣ ಹಾಗೂ ಗೃಹ ಉಪಯೋಗಿ ವಸ್ತುಗಳು ಕೊಟ್ಟು ಹಿರಿಯರ ಸಮಕ್ಷಮದಲ್ಲಿ ವೀರಶೈವ ಕಲ್ಯಾಣ ಮಂಟಪ ರಿಂಗ್ ರೋಡ ಕಲಬುರಗಿಯಲ್ಲಿ ಮದುವೆ ಮಾಡಿಕೊಟ್ಟಿರುತ್ತಾರೆ. ಮದುವೆಯ ನಂತರ ನಾನು ಗಂಡನ ಮನೆಯಲ್ಲಿ ವಾಸವಾಗಿದ್ದು ನನ್ನ ಗಂಡ ಮಾಹಂತಗೌಡ ಹಾಗೂ ಅತ್ತೆ ನೀಲಮ್ಮ ಗಂಡ ಶರಣಗೌಡ ಮಾಲಿ ಪಾಟೀಲ, ಮಾವ ಶರಣಗೌಡ  ಮಾಲಿ ಪಟೀಲ್ ನಾದನಿ (ಗಂಡನ ತಂಗಿ) ಪ್ರಭಾವತಿ ತಂದೆ  ಇವರೆಲ್ಲರೂ ಸುಮಾರು ನನ್ನೊಂದಿಗೆ 1 ತಿಂಗಳು ಮಾತ್ರ ಚೆನ್ನಾಗಿದ್ದು ಇವರೆಲ್ಲರೂ ನನಗೆ ನಿನಗೆ ಸರಿಯಾಗಿ ಅಡುಗೆ ಮಾಡಲು ಬರುವದಿಲ್ಲ, ನೀನು ಮನೆ ಕೆಲಸ ಮಾಡುವದಿಲ್ಲ, ನೀನು ನೋಡಲು  ಚೆನ್ನಾಗಿಲ್ಲಾ ನೀನು ಮದುವೆ ಸಮಯದಲ್ಲಿ ವರದಕ್ಷಿ ಹಾಗೂ ಬಂಗಾರ ಬಹಳ ಕಡಿಮೆ ತಂದಿದಿ ಈಗ ನೀನು ತವರು ಮನೆಯಿಂದ ಹಣ ಬಂಗಾರ ತೆಗೆದುಕೊಂಡು ಬಾ ಅಂತಾ ಮಾನಸಿಕವಾಗಿ  ಕಿರುಕುಳ ನೀಡಿ ದೈಹಿಕವಾಗಿ ಹೊಡೆಬಡೆ ಮಾಡತೊಡಗಿದರು. ಈ ವಿಷಯ ನಾನು ನಮ್ಮ ತಂದೆ ತಾಯಿಗಳಿಗೆ ತಿಳಿಸಿದಾಗ ನನ್ನ ತಾಂದೆ- ತಾಯಿಗಳು ಹಿರಿಯರಾದ ದಿವ್ಯಾ ಗಂಡ ರಾಜೇಶ ಹಾಗರಗಿ, ವೈಜನಾಥ ತಂದೆ ಗೌರಿ ಶಂಕರ ಕುಕ್ಕಡಿ, ಕಿರಣಕುಮಾರ ಕಾಳೆ ಇವರೊಂದಿಗೆ ಒಂದೆರಡು ಸಲ ನಮ್ಮ ಮನೆಗೆ ಬಂದು ಮಳನಿ ಗ್ರಾಮದ ಪ್ರಮುಖರಾದ ಭೀಮಶಾಗೌಡ ಮಾಲಿ ಪಾಟೀಲ, ನಾಗಣ್ಣ ಮಾಲಿ ಪಟೀಲ್ ಇವರ ಸಮಕ್ಷಮದಲ್ಲಿ ನಮ್ಮ ಗಂಡ, ಅತ್ತೆಮಾವ ಹಾಗೂ ನಾದನಿ ಇವರಿಗೆ ನೀವು ಮಾಡುತ್ತಿರುವದು ಸರಿ ಅಲ್ಲ ಅವಳಿಗೆ ಸರಿಯಾಗಿ ನೋಡಿಕೊಳ್ಳಿ ನಮ್ಮ ಮಗಳು ನಿಮ್ಮ ಮಗಳು ಇದ್ದ ಹಾಗೆ ಅಂತಾ ಬುದ್ದಿವಾದ ಹೇಳಿ ಹೋಗಿರುತ್ತಾರೆ ಆದರೂ ಕೂಡ ನನ್ನ ಗಂಡ, ಅತ್ತೆ, ಮಾವ ಹಾಗೂ ನಾದನಿ ಇವರು ತಮ್ಮ ನಡುವಳಿಕೆಯಲ್ಲಿ ಬದಲಾವಣೆ ಮಾಡಿಕೊಳ್ಳದೆ ಈ ಮೇಲಿನಂತೆ ಮಾನಸಿಕವಾಗಿ ಹಿಂಸೆ ಮಾಡಿ ಹೊಡೆಬಡೆ ಮಾಡುವದು ಮುಂದುವರೆಸಿದ್ದು ಆದರೂ ಕೂಡ ನಾನು ಇಂದಲ್ಲ ನಾಳೆ ಬದಲಾಗಬಹುದು ಅಂತಾ ಭಾವಿಸಿ ಗಂಡನ ಮನೆಯಲ್ಲಿ ಜೀವನ ಮಾಡಿದ್ದು ಈಗ 4 ತಿಂಗಳ ಹಿಂದ ನನ್ನ ಗಂಡ ನಾನು ಯಾವುದಾದರೂ ಉದ್ಯೋಗ ಮಾಡುತ್ತೆನೆ ನಿನ್ನ ತವರು ಮನೆಯಿಂದ ಹಣ ತೆಗೆದುಕೊಂಡು ಬಾ ಅಂತಾ ಹಿಂಸೆ ನೀಡುತ್ತಿದ್ದರಿಂದ ನನ್ನ ತಂದೆ- ತಾಯಿಗಳು ನನ್ನ ಗಂಡನಿಗೆ 5 ಲಕ್ಷ ಹಣ ಕೊಟ್ಟಿರುತ್ತಾರೆ ಆದರೂ ಸಮದಾನಗೊಳ್ಳದ ನನ್ನ ಗಂಡನ ಮನೆಯವರು ಮೊದಲಿನಂತೆ ಕಿರುಕುಳ ನೀಡಿ ಹೊಡೆಬಡೆ ಮಾಡುವದು ಮುಂದು ವರೆಸಿದ್ದು ಎಂದಿನಂತೆ ದಿನಾಂಕ 20/01/2017 ರಂದು ಈ ಮೇಲೆ ನಮೂದಿಸಿದ ನನ್ನ ಗಂಡ, ಅತ್ತೆಮಾವ ಹಾಗೂ ನಾದನಿ ಈ ನಾಲ್ಕು ಜನರು ನನಗೆ ರಂಡಿ ನೀನು ಮನೆಯಲ್ಲಿ ಇರಬೇಡ ತವರು ಮನೆಯಿಂದ ಇನ್ನೂ ಹಣ, ಬಂಗಾರ ತೆಗೆದುಕೊಂಡು ಬಾ ಹಣ ಬಂಗಾರ ತೆಗೆದುಕೊಂಡು ಬರದಿದ್ದರೆ ನಿನಗೆ ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ ಬೆದರಿಕೆ ಹಾಕಿ ಕೈಯಿಂದ ಹೊಡೆಬಡೆ ಮಾಡಿ ಮನೆಯಿಂದ ಹೊರಗೆ ಹಾಕಿದ್ದು ನಾನು ಅಂದಿನಿಂದ ನನ್ನ ತಂದೆ- ತಾಯಿಗಳ ಹತ್ತಿರ ವಾಸವಾಗಿರುತ್ತೆನೆ ನನ್ನ ಗಂಡ ಹಾಗೂ ನನ್ನ ಗಂಡನ ಮನೆಯವರ ಈ ಕೃತ್ಯಕ್ಕೆ ನನ್ನ ಗಂಡನ ಸೋದರ ಮಾವಂದಿರಾದ ಶರಣಗೌಡ ಪಾಟೀಲ್ ಹಾಗೂ ಮಾಹಂತಗೌಡ ಪಾಟೀಲ ಸಾ: ಕೆರಕಳ್ಳಿ ತಾ: ಜೇವರ್ಗಿ ಇವರು ಪ್ರಚೋದನೆ ನೀಡುತ್ತಲೆ ಬಂದಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರಥಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ :
ಫರತಾಬಾದ ಠಾಣೆ : ದಿನಾಂಕ 13-03-2017 ರಂದು 2 ಪಿಎಮ ಸುಮಾರಿಗೆ ಪರುಶರಾಮ ತಂದೆ ಬಾಬು ವಡ್ಡರ  ಹಾಗೂ  ಇನ್ನು ಇಬ್ಬರು ಸಾ: ಖಣದಾಳ ಕುಡಿಕೊಂಡು ತನ್ನ ಮೋಟಾರ ಸೈಕಲ ಮೇಲೆ ಶ್ರೀ ಮಲ್ಲೇಶಪ್ಪಾ ತಂದೆ ಶಿವಶರಣ್ಪಪಾ ನಾಟೀಕಾರ ಸಾ: ಖಣದಾಳ ರವರ ಮಗಳನ್ನು ಪುಸಲಾಯಿಸಿ ಅಪಹರಣ ಮಾಡಿಕೊಂಡು ಹೋಗಿದ್ದು, ಸದರಿಯವನು ಅಪಹರಣ ಮಾಡಿಕೊಂಡು ಹೋಗಲು ಅವನ ತಂದೆ ತಾಯಿ ಪ್ರಚೋದನೆಯನ್ನು ನೀಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.