POLICE BHAVAN KALABURAGI

POLICE BHAVAN KALABURAGI

30 May 2017

Kalaburagi District Reported Crimes

ಕೊಲೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀಮತಿ. ನೀಲಮ್ಮ ಗಂಡ ಬಾಲರಾಜ ಟೈಗರ್ ಸಾ: ಫಿಲ್ಟರ್ ಬೆಡ್ ಆಶ್ರಯ ಕಾಲನಿ ಕಲಬುರಗಿ ರವರ ಗಂಡನಾದ ಬಾಲರಾಜ ತಂದೆ ಮುಗಲಪ್ಪ ಟೈಗರ ಇವರು ಮಹಾನಗರ ಪಾಲಿಕೆ ಕಲಬುರಗಿಯಲ್ಲಿ ಗುತ್ತಿಗೆ ಪೌರ ಕಾರ್ಮಿಕನೆಂದು ಕಲಬುರಗಿಯ ವಾರ್ಡ ನಂ.36 (ಪ್ಯಾಕೇಜ ನಂ.9) ರಲ್ಲಿ ದಿನಾಂಕ:28/05/2017 ರಂದು ಎಂದಿನಂತೆ ಕರ್ತವ್ಯದಲ್ಲಿದ್ದಾಗ ಬೆಳಗಿನ ಜಾವ 5:00 ಗಂಟೆಗೆ ಎಮ್.ಎಸ್.ಕೆ ಮಿಲ್ ಸೈದಾಪೂರ ಹೊಟೇಲ ಹತ್ತಿರ ಬಯೋಮೆಟ್ರಿಕ ಹೆಬ್ಬಟ್ಟಿನ ಗುರುತಿನ ಹಾಜರಾತಿಯನ್ನು ಹಾಕಿ ಕರ್ತವ್ಯದಲ್ಲಿದ್ದಾಗ ಮದ್ಯಾಹ್ನ 2:00 ಗಂಟೆಯವರೆಗೆ ಕಾರ್ಯ ನಿರ್ವಹಿಸಿ ಮತ್ತೆ ಮದ್ಯಾಹ್ನ ಕರ್ತವ್ಯ ಮುಗಿಸುವ ಹೊತ್ತಿಗೆ ಮಿರ್ಚಿ ಗೋದಾಮನ ಹತ್ತಿರ ಇರುವ ಕಾರ್ಪೊರೇಷನ ಪ್ರಾದೇಶಿಕ ಎಸ.ಐ ಆಫೀಸ್ ನಲ್ಲಿ ಬಯೊಮೆಟ್ರಿಕನಲ್ಲಿ ಹೆಬ್ಬಟ್ಟಿನ ಸಹಿ ಮಾಡುತ್ತಿರುವಾಗ ಆ ಸಮಯದಲ್ಲಿ ಕಛೇರಿಯಲ್ಲಿ ಬಯೊಮೆಟ್ರಿಕ ಮಷೀನ ಇರದ ಕಾರಣ ಬೆರೆ ಕಡೆಯಿಂದ ಅಂದರೆ ಪಿ&ಟಿ ಕಾಲನಿಯಿಂದ ಮಶೀನ ತರುವುದಿದೆ ಅಂತಾ ತಿಳಿದಾಗ ನನ್ನ ಗಂಡನು ಬಹಳಷ್ಟು ಬಿಸಿಲು ಬೇಗೆಯಿಂದ ನೆರಳಿಗೆ ಹೋಗುವ ಸಲುವಾಗ ಕಛೇರಿಯಲ್ಲಿ ನೆರಳಿನಲ್ಲಿ ಕುಳಿತಿರುವಾಗ ಕಛೇರಿಯಲ್ಲಿ ಶರಣಗೌಡ ಸೂಪರವೈಜರ ಹಾಗೂ ಅಲ್ಲಿಯ ಇನ್ನೊಂದು ಕೋಣೆಯಲ್ಲಿದ್ದ ಪರಶುರಾಮ ಸಿಪಾಯಿ ಇಬ್ಬರು ಕೂಡಿ ನನ್ನ ಗಂಡನಿಗೆ ಇಲ್ಲೆಕೆ ಒಳಗೆ ಕುಳಿತಿದ್ದಿಯಾ ಹೊರಗಡೆ ನಡಿ ಅಂತಾ ಜಗಳ ತೆಗೆದು ಹೊಡೆಬಡೆ ಮಾಡಿ ಒತ್ತಾಯಪೂರ್ವಕವಾಗಿ ಆಫೀಸನಿಂದ ಹೊರಗೆ ದಬ್ಬಿದಾಗ ನನ್ನ ಗಂಡನು ಆಗ ಕೆಳಗೆ ಬಿದ್ದು ಎದೆಗೆ ಪೆಟ್ಟಾಯಿತು. ಇದನ್ನು ನೋಡಿದ ಪೌರ ಕಾರ್ಮಿಕರಾದ ಶ್ರೀ ದೇವಿಂದ್ರಪ್ಪ ತಂದೆ ಶರಣಪ್ಪ ದೊಡ್ಡಮನಿ ಸಾ: ಡಬರಾಬಾದ ಆಶ್ರಯ ಕಾಲನಿ ಕಲಬುರಗಿ ಇವರು ನನ್ನ ಗಂಡನನ್ನು ಎಬ್ಬಿಸಿ ನೀರು ಕುಡಿಸಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಆಟೊರಿಕ್ಷಾದಲ್ಲಿ ತೆಗೆದುಕೊಂಡು ಹೋಗಿ ಸೇರಿಕೆ ಮಾಡಿರುತ್ತಾರೆ. ಇದನ್ನು ಮನಗಂಡು ಅಲ್ಲಿಯೆ ಇದ್ದ ಸಂಬಂಧಿಸಿದ ಸೂಪರವೈಜರಗಳಾದ ಶ್ರೀ ಪ್ರಮೋದ ಹಾಗೂ ಈಶ್ವರ ಕೂಡಾ ಆಸ್ಪತ್ರೆಗೆ ಬಂದಿದ್ದರು. ಆ ವೇಳೆಯಲ್ಲಿ ನನ್ನ ಗಂಡನಿಗೆ ತೀವ್ರ ಸ್ವರೂಪದ ಒಳಪೆಟ್ಟು ಆಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಚಿಕಿತ್ಸೆಯ ವೇಳೆಯಲ್ಲಿ ನನ್ನ ಗಂಡನು ಮೃತಪಟ್ಟಿರುತ್ತಾನೆ. ಆದ್ದರಿಂದ ನನ್ನ ಗಂಡನು ಕರ್ತವ್ಯದಲ್ಲಿದ್ದಾಗ ನನ್ನ ಗಂಡನ ಮೇಲೆ ವಿನಾ ಕಾರಣ ಮಿರ್ಚಿ ಗೋದಾಮದ ಹತ್ತಿರ ಇರುವ ಕಾಪೋರೇಷನ ಎಸ.ಐ ಆಫೀಸ್ನಲ್ಲಿ ನನ್ನ ಗಂಡನ ಮೇಲೆ ಹಲ್ಲೆ ಮಾಡಿದ ಶರಣಗೌಡ ಹಾಗೂ ಪರಶುರಾಮ ಇವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ ಮತ್ತು ಟ್ರ್ಯಾಕ್ಟರ ಜಪ್ತಿ :
ನರೋಣಾ ಠಾಣೆ : ದಿನಾಂಕ:29-05-2017 ರಂದು ಬೆಳಿಗ್ಗೆ ಕೊಹಿನೂರ ಕಡೆಯಿಂದ ಮರಳು ತುಂಬಿದ ಲಾರಿ ಬರುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಶ್ರೀ.ಶಿವಶಂಕ.ಎಸ್.ಸಾಹು, ಪಿ.ಎಸ್.ಐ ನರೋಣಾ ಪೊಲೀಸ್ ಠಾಣೆ,  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ವ್ಹಿ,ಕೆ.ಸಗಲರ ಗ್ರಾಮದ ಸಾಂಭಶಿವ ಸರ್ಕಲ್ ಹತ್ತಿರ ಸದರಿ ಲಾರಿ ಬರುತ್ತಿರುವುದನ್ನು ಕಾಯುತ್ತಿರುವಾಗ ವ್ಹಿ.ಕೆ.ಸಲಗರ ಗ್ರಾಮದ ಕಡೆಯಿಂದ ಒಂದು ಮರಳು ತುಂಬಿದ ಲಾರಿ ಬರುತ್ತಿರುವುದನ್ನು ಗಮನಿಸಿ ನಾನು ಹಾಗೂ ಸಿಬ್ಬಂದಿಯವರು ಕೂಡಿ ಸದರಿ ಲಾರಿಯನ್ನು ಕೈಮಾಡಿ ನಿಲ್ಲಿಸಲಾಗಿ ಚಾಲಕನು ಲಾರಿಯಿಂದ ಇಳಿದು ಓಡಿಹೋದನು. ಪಂಚರ ಸಮಕ್ಷಮದಲ್ಲಿ ಸದರಿ ಲಾರಿಯನ್ನು ಪರಿಶೀಲಿಸಲು ಸದರಿ ಲಾರಿಯು ಅಶೋಕ ಲಿಲ್ಯಾಂಡ್ ಕಂಪನಿದಾಗಿದ್ದು ಲಾರಿ ಲೋಡಿದ್ದು ತಾಡಪತ್ರಿಹಾಕಿ ಹಗ್ಗದಿಂದ ಬಿಗದಿದ್ದು ತಗೆದು ನೋಡಲಾಗಿ ಒಳಗಡೆ ಮರಳು ತುಂಬಿತ್ತು ಸದರಿ ಲಾರಿ ನಂ-ಎಪಿ31 - ಟಿಎ1283 ಅಂತಾ ಇದ್ದು ಮತ್ತು ಸದರಿ ಮರಳು ಸಾಗಣಿಕೆ ಬಗ್ಗೆ ದಾಖಲಾತಿಗಳನ್ನು ಲಾರಿಯಲ್ಲಿ ಹುಡಕಾಡಲು ಯಾವುದೇ ದಾಖಲಾತಿಗಳು ಲಭ್ಯವಾಗಿರುವುದಿಲ್ಲ. ಸದರಿ ಲಾರಿ ಚಾಲಕನು ಎಲ್ಲಿಂದಲೋ ಕಳ್ಳತನಿಂದ ಮರಳು ತುಂಬಿಕೊಂಡು ಕಳ್ಳತನಿಂದ ಮಾರಾಟ ಮಾಡಲು ಸಾಗಣೆ ಮಾಡುತ್ತಿರುವ ಬಗ್ಗೆ ಕಂಡು ಬಂದಿದ್ದರಿಂದ ಸದರಿ ಮರಳು ತುಂಬಿದ ಲಾರಿಯನ್ನು ಜಪ್ತಿ ಪಡಿಸಿಕೊಂಡು ಮರಳಿ ನರೋಣಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಶಾಹಾಬಾದ ನಗರ ಠಾಣೆ : ದಿನಾಂಕ: 29/05/2017 ರಂದು ಮುಂಜಾನೆ ಹೊನಗುಂಟಾ ಸೀಮಾಂತರದ ಕಾಗಿನಾ ನದಿಯಿಂದ ಮರಳು ಕಳ್ಳತನದಿಂದ ಟ್ರಾಕ್ಟರನಲ್ಲಿ ತುಂಬಿಕೊಂಡು ಬರುತ್ತಿದ್ದ ಬಗ್ಗೆ ಖಚಿತವಾದ ಬಾತ್ಮಿ ಬಂದ ಮೇರೆಗೆ ಶ್ರೀ ಎಸ್ ಅಸ್ಲಾಂ ಭಾಷ ಪಿ ಐ ಶಹಾಬಾದ ನಗರ ಪೊಲೀಸ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗುತ್ತಿರುವಾಗ ಹೊನಗುಂಟಾ ಗ್ರಾಮದ ಸರಕಾರಿ ಶಾಲೆಯ ಹತ್ತಿರ ಹೊನಗುಂಟಾ ಕಡೆಯಿಂದ ಕೆಂಪು ಬಣ್ಣದ ಮಹೇಂದ್ರ ಕಂಪನಿಯ ಟ್ರಾಕ್ಟರನಲ್ಲಿ ಮರಳು ತುಂಬಿಕೊಂಡು ಬರುತ್ತಿದ್ದು ಅದರ ಚಾಲಕನಾದ ಬೆಳ್ಳೆಪ್ಪ ತಂದೆ ಮಲ್ಲಪ್ಪಾ ಖಂಡ್ರಾ ಸಾ: ಹೊನಗುಂಟಾ ಇತನು ಪೊಲೀಸ ಜೀಪ ನೋಡಿ ತನ್ನ ಟ್ರಾಕ್ಟರ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಸದರಿ ಕೆಂಪು ಬಣ್ಣದ ಮಹೆಂದ್ರ ಕಂಪನಿ ಟ್ರಾಕ್ಟರ ಅ.ಕಿ 200000-00 ರೂ ಮತ್ತು ಅದರಲ್ಲಿಯ ಮರಳು ಅ.ಕಿ 1000-00 ರೂ ನೇದ್ದುವುಗಳನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಪಡಿಸಿಕೊಂಡು ಮರಳಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಮೊಸ ಮಾಡಿದ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಗುರಲಿಂಗಪ್ಪಾ ತಂದೆ ಮಡಿವಾಳಪ್ಪಾ ಬುಕ್ಕರ ಸಾ : ಬೈರಮಡಗಿ ರವರಿಗೆ  ದೇವಾಂಗ ಹಟಗಾರ ಸಮಾಜದವರು ಕರ್ನಾಟಕ ಸೊಸಾಯಿಟಿ ನೊಂದಣಿ ಕಾಯ್ದೆ 1960 ಅಯಡಿಯಲ್ಲಿ   ಜಾಫರಾಬಾದ  ಸರ್ವೆ ನಂ.30 ನೇದ್ದರಲ್ಲಿ ಒಟ್ಟು 13 ಎಕರೆ 5 ಗುಂಟೆ ಜಮೀನನ್ನು ಖರಿದಿಸಿದ್ದು, ಸದರಿ  ಜಮಿನಿನಲ್ಲಿ ಸಂಘದ ಎಲ್ಲಾ ಸದಸ್ಯರಿಗೆ ಪ್ಲಾಟಗಳನ್ನು ಹಂಚಿಕೆ ಮಾಡಿ ವಿತರಣಾ ಪತ್ರಗಳನ್ನು ಕೊಟ್ಟಿದ್ದು ಇರುತ್ತದೆ. ಸದರಿ ಸದಸ್ಯರಲ್ಲಿ ಈ ಖಾಸಗಿ ದೂರಿನ ಸಾಕ್ಷಿ ನಂ.. 1 ರಿಂದ 8 ನೇದ್ದವರಿಗೆ  ಹಂಚಿಕೆ ಮಾಡಿದ್ದ ಪ್ಲಾಟಗಳನ್ನು ಸದ್ಯ ಇದ್ದ ಸಮಾಜದ ಅದ್ಯಕ್ಷರಾದ 1) ಚಂದ್ರಶೇಖರ ತಂದೆ ತುಕಾರಾಮ ಸುಲ್ತಾನಪೂರ 2) ದತ್ತು ಸುಗುರ ಕಾರ್ಯದರ್ಶಿ ಹಟಗಾರ ದೆವಾಂಗ ಸಮಾಜ 3) ಪಿಡಿಓ ಗ್ರಾಮ ಪಂಚಾಯತ ಭಿಮಳ್ಳಿ ಇವರು ಕೂಡಿಕೊಂಡು ಖೊಟ್ಟಿ ದಾಖಲಾತಿಗಳನ್ನು ತಯಾರಿಸಿ ಒಬ್ಬರ ಹೆಸರಿಗೆ ಇದ್ದ ಪ್ಲಾಟಗಳನ್ನು ಇನ್ನೊಬ್ಬರ ಹಸರಿಗೆ ದುಡ್ಡು ತೆಗೆದುಕೊಂಡು ಹೊಸದಾಗ ಪ್ಲಾಟ ನಂಬರಗಳನ್ನು  ಕೊಟ್ಟು ಬೇರೆ ಬೇರೆಯವರಿಗೆ ಹಂಚಿಕೆ ಮಾಡಿ ಮೊಸ ಮಾಡಿದಲ್ಲದೆ ನಿಜವಾದ ಪ್ಲಾಟ ಮಾಲಿಕರು ಅದ್ಯಕ್ಷರನ್ನು ಕೇಳಲು ಹೋದರೆ ಜೀವ ಭಯ ಹಾಕಿದ್ದು ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಹಲ್ಲೆ ಪ್ರಕರಣ :
ನರೋಣಾ ಠಾಣೆ : ಶ್ರೀ.ಮಲ್ಲಿಕಾರ್ಜುನ ತಂದೆ ಸಂಬಣ್ಣಾ ಮದಲಿ ಸಾ||ನರೋಣಾ ಗ್ರಾಮ ಇವರು  ವಾಸವಾಗಿರುವ ಮನೆಯ ಪಕ್ಕದಲ್ಲಿಯೇ ತಮ್ಮ ಅಣತಮ್ಮಕಿಯವರಾದ ಬಸವರಾಜ ತಂದೆ ಶರಣಪ್ಪ ಮದಲಿ ಇವರ ಮನೆಯಿದ್ದು ಅವರ ಮನೆಯ ಬಚ್ಚಲು ನೀರು ಟೆಗ್ಗುಮಾಡಿ ಸಂಗ್ರಹಿಸದೇ ಹಾಗೆ ಬಿಟ್ಟಿದ್ದರಿಂದ ಸದರಿ ಬಚ್ಚಲು ನೀರು ನಮ್ಮ ಮನೆಯ ಕಟ್ಟಡದ ಬುನಾದಿಗೆ ಇಳಿಯುತ್ತಿದ್ದರಿಂದ ನಾನು ಸದರಿ ಬಚ್ಚಲು ನೀರು ಹೋಗಲು ಮತ್ತು ಸಂಗ್ರಹ ಮಾಡಲು ಕಾವಲಿ ಹಾಗೂ ಟೆಗ್ಗು ತೋಡುವಂತೆ ಹೇಳಿರುತ್ತೇನೆ. ಆದರೆ ಅವರು ನನ್ನ ಮಾತಿಗೆ ಬೆಲೆ ಕೊಡದೆ ಅವರ ಬಚ್ಚಲು ನೀರು ಹಾಗೆ ಬಿಡುತ್ತಿದ್ದರಿಂದ ನನ್ನ ಮನೆಯ ಗೋಡೆಗೆ ತೊಂದರೆ ಆಗುತ್ತಿದ್ದು ಇದೆ ವಿಷಯವನ್ನು ನಾನು ಹಲವಾರುಬಾರಿ ದಶರಥ ಇವರಿಗೆ ಹೇಳಿದ್ದರಿಂದ ಅವರು ಹಾಗೂ ಅವರ ಕುಟುಂಬದವರು ನನ್ನೊಂದಿಗೆ ತಕರಾರು ಮಾಡುತ್ತಾ ಬಂದಿದ್ದು ದಿನಾಂಕ:28/05/2017 ರಂದು ರಾತ್ರಿ ನಾನು ನನ್ನ ಹೆಂಡತಿಯಾದ ಅಂಬಿಕಾ ಹಾಗೂ ಹಿರಿಯ ಮಗನಾದ ಶರಣಬಸಪ್ಪಾ ರವರು ನಮ್ಮ ಮನೆಯ ಮುಂದಿನ ಅಂಗಳದಲ್ಲಿ ಮಲಗಿರುವಾಗ ನಮ್ಮ ಅಣತಮ್ಮಕಿಯ ದಶರಥ ತಂದೆ ಶರಣಪ್ಪಾ ಮದಲಿ, ವಿಜಯಕುಮಾರ ತಂದೆ ದಶರಥ ಮದಲಿ, ಲಲಿತಾಬಾಯಿ ಗಂಡ ದಶರಥ ಮದಲಿ, ಮಲ್ಲಿಕಾಜರ್ುನ ತಂದೆ ಪೀರಪ್ಪ ಮದಲಿ, ನಾಗಪ್ಪ ತಂದೆ ಪೀರಪ್ಪ ಮದಲಿ ಮತ್ತು ಪರೆಮ್ಮ ಗಂಡ ಪೀರಪ್ಪ ಮದಲಿ ರವರೆಲ್ಲರೂ ಕೂಡಿಕೊಂಡು ಬಂದು ನನ್ನ ಹೆಸರಿನಿಂದ ಚಿರಾಡುತ್ತಿರುವಾಗ ನಾನು ಮತ್ತು ನನ್ನ ಹೆಂಡತಿ ಇಷ್ಟೊತ್ತಿಗೆ ನಮ್ಮ ಮನೆಯ ಮುಂದೆ ಬಂದು ಏಕೆ ಚಿರಾಡುತ್ತಿದ್ದಿರಾ ಎಂದು ವಿಚಾರಿಸುತ್ತಿರುವಾಗ ವಿಜಯಕುಮಾರನು ಕೈಯಲ್ಲಿ ಚಾಕು ಹಿಡಿದುಕೊಂಡು ನನಗೆ ಮಗನೆ ನಿನಗೆ ಖಲಾಸಮಾಡಿ ಬಿಡುತ್ತೇನೆ ಸೂಳೆಮಗನೆ ಎಂದು ಜೀವದ ಬೇದರಿಕೆ ಹಾಕುತ್ತಾ ಅವಾಚ್ಯ ಶಬ್ದಗಳಿಂದ ಬೈಯುತ್ತಿರುವಾಗ ನನ್ನ ಹೆಂಡತಿ ಹೀಗೇಕೆ ಬೈಯುತ್ತಿದ್ದಿರಿ ಅಂತಾ ವಿಚಾರಿಸುತ್ತಿದ್ದಾಗ ದಶರಥ ಹಾಗೂ ಲಲಿತಾಬಾಯಿ ರವರು ಬಚ್ಚಲು ನೀರಿನ ಬಗ್ಗೆ ಪದೇ ಪದೇ ಯಾಕೆ ನಮ್ಮೊಂದಿಗೆ ತಕರರು ಮಾಡುತ್ತಿದ್ದಿ ಎಂದು ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದರು ಅಷ್ಟರಲ್ಲಿಯೇ ವಿಜಯಕುಮಾರ , ಮಲ್ಲಿಕಾರ್ಜುನ ನಾಗಪ್ಪ ಪರೆಮ್ಮ ರವರುಗಳು ನಮಗೆ ಕಲ್ಲಿನಿಂದ ಹೊಡೆಯುವಾಗ  ನಾವು ತಪ್ಪಿಸಿಕೊಂಡಿರುತ್ತೇವೆ. ಅಷ್ಟರಲ್ಲಿಯೇ ಓಣಿಯವರಾದ ಚಂದ್ರಕಾಂತ ತಂದೆ ಶಾಣಪ್ಪಾ ಹಾದಿಮನಿ, ಖ್ಯಾಮಲಿಂಗ ತಂದೆ ಶಾಂತಪ್ಪಾ ಇಟಿಕರ ರವರುಗಳು ಬಂದು ಜಗಳ ನೋಡಿ ಬಿಡಿಸಿರುತ್ತಾರೆ ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.