POLICE BHAVAN KALABURAGI

POLICE BHAVAN KALABURAGI

19 October 2015

Kalaburagi District Reported Crimes

ಕಳವು ಪ್ರಕರಣ
ಜೇವರ್ಗಿ ಠಾಣೆ : ದಿನಾಂಕ: 17.10.2015 ರ ರಾತ್ರಿ 11.30 ಗಂಟೆಯಿಂದ 18-10-2015 ರ ರಾತ್ರಿ  2.೦೦ ಗಂಟೆಯ ಮದ್ಯದ ಅವದಿಯಲ್ಲಿ  ಯಾರೋ ಕಳ್ಳರು ನಮ್ಮಮನೆಯ ಬಾಗಿಲ ಕೀಲಿ ಮುರಿದು, ಓಳಗೆ ಹೋಗಿ ಮನೆಯಲ್ಲಿ ಅಲಮಾರದಲ್ಲಿ ಇಟ್ಟಿದ್ದ 1] 4 ಗ್ರಾಂ ಬಂಗಾರದ ಕಿವಿ ಟಿಪ್ಸಗಳು ಅ.ಕಿ. 8.000/-ರೂ 2]  ಬೆಳ್ಳಿಯ ಕಾಲು ಚೈನ್, ಬೆಳ್ಳಿಯ ಲಿಂಗದಕಾಯಿ ಸೇರಿ ಒಟ್ಟು 11 ತೊಲಿ ಬೆಳ್ಳಿಯ ಆಭರಣ ಅ.ಕಿ. 3500/- ರೂ 3] ನಗದು ಹಣ 12,500/-ರೂ ಹೀಗೆ ಎಲ್ಲಾ ಸೇರಿ ಒಟ್ಟು 24,000/-ರೂ  ಕೀಮ್ಮತ್ತಿನ ಆಭರಣ ಹಾಗು ನಗದು ಕಳುವು ಮಾಡಿಕೊಂಡು  ಹೋಗಿರುತ್ತಾರೆ ಅಂತಾ ಶ್ರೀಮತಿ ಭುವನೇಶ್ವರಿ ಗಂಡ ಧರ್ಮರಾವ ಹೀರೆಗೌಡರ ಸಾಃ ಜೇವರ್ಗಿ [ಕೆ]  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ಜೇವರ್ಗಿ ಠಾಣೆ : ದಿನಾಂಕ 17-10-2015 ರಂದು ಸಂಜೆ 09.30 ಗಂಟೆಯ ಸುಮಾರಿಗೆ ಆಂದೊಲಾ ಗ್ರಾಮದ ಕರುಣೇಶ್ವರ ಮಠದ ಮುಂದಿನ ಕಟ್ಟೆಯಲ್ಲಿ ಶ್ರೀ ಮಲ್ಲಿಕಾರ್ಜುನ ತಂದೆ ಸಿದ್ರಾಮಪ್ಪ ಲಕ್ಕಾಣಿ ಸಾ|| ಆಂದೋಲಾ ರವರು ತಮ್ಮ ಊರಿನವರೊಂದಿಗೆ ಕುಳಿತುಕೊಂಡು  ಮಾತನಾಡುತ್ತಿದ್ದಾಗ ಅದೇ ವೇಳೆಗೆ 1) ಬಿಲ್ಲಮರಾಜ ದಮೇತಿ 2) ಸಂಗಣ್ಣ ದಮೇತಿ  3) ಮಲ್ಲಣ್ಣ ದಮೇತಿ 4) ಬಸವಂತಪ್ಪ ರದ್ದೆವಾಡಗಿ 5) ಗುರಪ್ಪ ರದ್ದೆವಾಡಗಿ  6) ಮಹಾದೇವಿ ದಮೇತಿ  7) ಪಾರ್ವತಿ ರದ್ದೆವಾಡಗಿ ಸಾಃ ಎಲ್ಲರು ಆಂದೊಲಾ ರವರು ಗುಂಪು ಕಟ್ಟಿಕೊಂಡು ಬಂದು ಹಳೇಯ ವೈಶಮ್ಯದಿಂದ ನನ್ನೊಂದಿಗೆ ಜಗಳ ತೆಗೆದು ಅವಾಚ್ಯವಾಗಿ ಬೈದು ನನಗೆ ಬಡಿಗೆಯಿಂದ ಮತ್ತು ಚಪ್ಪಲಿಯಿಂದ ಹೊಡೆ ಬಡೆ ಮಾಡಿ ಗುಪ್ತ ಗಾಯಪಡಿಸಿ ನನ್ನನ್ನು ನೆಲಕ್ಕೆ ಕೆಡವಿ ನನ್ನ ಕುತ್ತಿಗೆಯನ್ನು ಒತ್ತಿ ಹಿಡಿದು ನನಗೆ ಕೊಲೆ ಮಾಡುವ ಉದ್ದೇಶದಿಂದ ನನ್ನ ತೊರಡು ಒತ್ತಿ ಹಿಚುಕಿದ್ದು ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ನಿಮಗೆ ಜೀವ ಸಹೀತ ಬಿಡುವದಿಲ್ಲ ಅಂತ ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರ್ಗಿ ಠಾಣೆ : ದಿನಾಂಕ .17-10-2015 ರಂದು ಸಂಜೆ 09.00 ಗಂಟೆಯ ಸುಮಾರಿಗೆ 1. ಮಲ್ಲಿಕಾರ್ಜುನ ತಂದೆ ಸಿದ್ರಾಮಪ್ಪ ಲಕ್ಕಾಣಿ  2. ಶಿವಕುಮಾರ ತಂದೆ ಶರಣಪ್ಪ ಜೇವರಗಿ 3.  ದೇವಿಂದ್ರಪ್ಪ ತಂದೆ ಬಸವರಾಜ ಪತ್ತಾರ  ಸಾಃ ಎಲ್ಲರೂ ರವರು  ಸಾಃ ಆಂದೊಲಾ ಕೂಡಿಕೊಂಡು ಶ್ರೀಮತಿ ಮಹಾದೇವಿ ಗಂಡ ಬಿಲ್ಲಮರಾಜ ದಮೇತಿ ಸಾಃ ಆಂದೊಲಾ  ರವರ ಮನೆಯೊಳಗೆ ಅಕ್ರಮವಾಗಿ ಪ್ರವೇಶ ಮಾಡಿ ನನ್ನ ಗಂಡನು ಆರೋಪಿತರ ಮುಂದೆ ಹೋಗಿ ಅವನ ಮೋಟಾರು ಸೈಕಲ್‌ ಅನ್ನು ಹೆಚ್ಚಾಗಿ ರೇಸ್‌ ಮಾಡಿದ್ದಾನೆ ಅಂತ  ಹಿಂದಿನ ಹಳೇಯ ದ್ವೇಷದಿಂದ ನನ್ನ ಗಂಡನಿಗೆ ಅವಾಚ್ಯವಾಗಿ ಬೈದು ಕೈಯಿಂದ ಹೊಡೆ ಬಡೆ ಮಾಡಿದ್ದು ಮತ್ತು ಬಿಡಿಸಲು ಹೋದ ನನಗೆ ಕೈಯಿಂದ ಮತ್ತು ಬಡಿಗೆಯಿಂದ ಹೊಡೆ ಬಡೆ ಮಾಡಿ ನನ್ನ ಮೈ ಮೇಲಿನ ಸೀರೆ ಹಿಡಿದು ಎಳೆದಾಡಿ ಮಾನಭಂಗ ಮಾಡಿ ನನಗೆ ಕೊಲೆ ಮಾಡುವ ಉದ್ದೆಶದಿಂದ ಕುತ್ತಿಗೆ ಒತ್ತಿದ್ದು ಅಲ್ಲದೆ ಬಿಡಿಸಲು ಬಂದ ನನ್ನ ಸಂಭಂಧಿಯಾದ ಮಲ್ಲಿನಾಥನಿಗೂ ಅವಾಚ್ಯವಾಗಿ ಬೈದು ಹೊಡೆ ಬಡೆ ಮಾಡಿ ನೀವು ಊರಲ್ಲಿ ಹೇಗೆ ಜೀವನ ಮಾಡುತ್ತಿರಿ ನಿಮಗೆ ಸುಟ್ಟು ಬಿಡುತ್ತೆವೆ ಅಂತ ಜೀವದ ಬೇದರಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.