POLICE BHAVAN KALABURAGI

POLICE BHAVAN KALABURAGI

19 December 2015

Kalaburagi District Reported Crimes

ವರದಕ್ಷಣೆ ಕಿರುಕಳ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ಬಿಬಿ ಫಾತೀಮಾ ಗಂಡ ಇಕ್ಬಾಲ್ ಅಹ್ಮದ ಸಾ: ಮುಸ್ತಫಾ ಮಜೀದ ಮೀಜಗೊರಿ  ಗಂಜ ರೋಡ ಕಲಬುರಗಿ  ರವರ ಮದುವೆಯು ದಿನಾಂಕ 26-06-2013 ರಂದು ಹುಸೇನ ಫಂಕ್ಷನ ಹಾಲ್ ಮುಸ್ಲಿಂ ಸಂಪ್ರದಾಯದಂತೆ ಮಾಡಿದ್ದು, ಇರುತ್ತದೆ. ಮದುವೆಯ ಕಾಲಕ್ಕೆ ಮೂರು ತೊಲೆ ಬಂಗಾರ 21051 ರೂ. ಹಣ ಹಾಗೂ ಗೃಹ ಬಳಕೆ ಸಾಮಾನುಗಳನ್ನು ಕೊಟ್ಟು ಮದುವೆ ಮಾಡಿಕೊಟ್ಟಿದ್ದು, ಒಟ್ಟು 3 ಲಕ್ಷ ರೂ, ಮದುವೆಯಲ್ಲಿ ಖರ್ಚಾಗಿದ್ದು, ಇರುತ್ತದೆ. ಮದುವೆಯಾದ ಎರಡು ದಿವಸದಲ್ಲೇ 1} ಇಕ್ಬಾಲ್  ಅಹ್ಮದ ತಂದೆ ಮೆಹಬೂಬ ಅಲಿ 2} ಮಹ್ಮದ ಅಲಿ  3} ಸುರೈಯ್ಯಾ  ಗಂಡ ಮೇಹಮೂದ ಅಲಿ 4} ಇರಶಾದ ತಂದೆ ಮೇಹಮೂದ ಅಲಿ  ಸಾ: ಎಲ್ಲರೂ  ಸಾಬೀರ ಕ್ಲಾಸ್ ಸೇಂಟರ್ ಮುಸ್ಲಿಂ ಚೌಕ ಕಲಬುರಗಿ 5} ಝೇನತ  ಗಂಡ ಮುಜಾಹೀದ ಸಾ: ಸೋಲಾಪೂರ ಮಹಾರಾಷ್ಟ್ರ ಇವರು ಫಿರ್ಯಾದಿಯೊಂದಿಗೆ ಜಗಳ ತೆಗೆದು ನಿನ್ನ ತವರು ಮನೆಗೆ ಹೋಗಿ ಇನ್ನೂ 3 ಲಕ್ಷ ರೂಪಾಯಿ ತೆಗೆದುಕೊಂಡು ಬಾ ಅಂತಾ ಅವಾಚ್ಯ ಶಬ್ದಗಳಿಂದ ಬೈದು ವರದಕ್ಷಣೆ ಬೇಡಿಕೆ ಇಟ್ಟಿದ್ದರಿಂದ ನಮ್ಮ ಸಮಾಜದಲ್ಲಿ ನ್ಯಾಯಾ ಪಂಚಾಯತಿ ಮಾಡಿದರೂ ಸಹ ಪಂಚಾಯತಿಯಲ್ಲಿ ನಮಗೆ 3 ಲಕ್ಷ ರೂಪಾಯಿ ವರದಕ್ಷಣೆ ಬೇಕು ನೀವು ವರದಕ್ಷಣೆ ಕೊಡದೇ ಇದ್ದರೇ ನಾನು ಇನ್ನೊಂದು ಮದುವೆ ಮಾಡಿಕೊಳ್ಳುತ್ತೇನೆ ನನಗೆ ಅವರು 5 ಲಕ್ಷ ರೂಪಾಯಿ ಕೊಡುತ್ತಾರೆ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಫಿರ್ಯಾದಿದಾರಳಿಗೆ ಆರೋಪಿತನು ಮನೆಯಿಂದ ಹೊರಗೆ  ಹಾಕಿದ್ದು, ಇರುತ್ತದೆ. ದಿನಾಂಕ 01-10-2013 ರಂದು ಫಿರ್ಯಾದಿದಾರಳು ತನ್ನ ಸೋದರನೋಂದಿಗೆ  ಹಾಗೂ ಶಾಹಾಜಾದಿ ಬೇಗಂ ಆರೊಪಿತರ ಮನರಗೆ ಹೋದಾಗ ಆರೋಪಿ 1 ನೇದ್ದವನ್ನು ಫಿರ್ಯಾದಿಗೆ ಕೈಯಿಂದ ಹೋಡೆದು ಕುದಲು ಹಿಡಿದು ಎಳದಾಡಿದ್ದು ಆರೋಪಿ 1 ರಿಂದ 5 ನೇದ್ದವರು ಫೀರ್ಯಾದಿಗೆ ತವರು ಮನೆಯಿಂದ 3 ಲಕ್ಷ ರೂಪಾಯಿ ವರದಕ್ಷೆಣೆ ಹಣ ತೆಗೆದುಕೋಂಡು ಬಾ ಅಂತಾ ಎಂದು ಮಾನಸಿಕ ದೈಹಿಕ ಕಿರುಕುಳ ಕೊಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಸಂತೋಷ ತಂದೆ ಅರ್ಜುನ ಬಿರಾದಾರ ಸಾ|| ಕರಜಗಿ ರವರು ಉಡಚಾಣ ಗ್ರಾಮದ ವೇಟನರಿ ಆಪೀಸನಲ್ಲಿ ಸಹಾಯಕ ಕೆಲಸ ಮಾಡಿಕೊಂಡು ಜಿವನ ಸಾಗಿಸುತ್ತಿರುತ್ತೇನೆ. ನಮ್ಮ ಅಣ್ಣ ತಮ್ಮಕಿಯ ಮಲ್ಲಿಕಾರ್ಜುನ @ಪಿಂಟು ತಂದೆ ಶಂಕರ ಬಿರಾದಾರ ಈತನು ದಿನಾಂಕ 15-12-2015 ರಂದು ರಾತ್ರಿ ನಮ್ಮೂರಿನ ಪ್ರದೀಪ ಸುದಾಮ ಈತನ ಅಂಗಡಿಯ ಮುಂದೆ ಸದರಿ ಪ್ರದೀಪನೊಂದಿಗೆ ಮಾತಾಡುತ್ತಾ ತಮಾಸೆ ಮಾಡುತ್ತಾ ನಗುತ್ತಾ ನಿಂತಿದ್ದಾಗ ನಮ್ಮೂರಿನ ಶ್ರೀಶೈಲ @ ಮುದಕು ತಂದೆ ಭೀಮಶಾ ಲಾಳಸಂಗಿ ಈತನು ನಮ್ಮ ಮಲ್ಲಿಕಾರ್ಜುನನಿಗೆ ಏನೊ ಬೋಸಡಿ ಮಗನೆ ನನ್ನ ನೋಡೆ ನಗ್ತಿ ಅಂತಾ ಜಗಳ ತಗೆದು ಹೊಡೆ ಬಡೆ ಮಾಡಿರುತ್ತಾನೆ ಅಂತಾ ಮಲ್ಲಿಕಾರ್ಜುನನು ನನಗೆ ತಿಳಿಸಿರುತ್ತಾನೆ. ನಿನ್ನೆ ದಿನಾಂಕ 16-12-2015 ರಂದು ರಾತ್ರಿ 8:00 ಗಂಟೆ ಸುಮಾರಿಗೆ ನಾನು ಮತ್ತು ನಮ್ಮ ಅಣ್ಣ ತಮ್ಮಕಿಯ ಮಲ್ಲಿಕಾರ್ಜುನ ಇಬ್ಬರು ನಮ್ಮೂರಿನ ಅಂಬಿಗರ ಚೌಡಯ್ಯ ಸರ್ಕಲ ಹತ್ತಿರ ಮಾತಾಡುತ್ತಾ ನಿಂತಿದ್ದಾಗ,ನಮ್ಮ ಅಣ್ಣ ತಮ್ಮಕಿಯ ಮಲ್ಲಿಕಾರ್ಜುನನ ಜೋತೆಗೆ ಜಗಳ ತಗೆದ ಶ್ರೀಶೈಲ ಲಾಳಸಂಗಿ ಮತ್ತು ಸಿದ್ದಪ್ಪ ಲಾಳಸಂಗಿ, ಪರಶುರಾಮ ಲಾಳಸಂಗಿ, ಪುಂಡಲಿಕ ಲಾಳಸಂಗಿ, ಶರಣಪ್ಪ ಲಾಳಸಂಗಿ, ಕೃಷ್ಣಪ್ಪ ಲಾಳಸಂಗಿ, ಹಾಗೂ ಅವರ ತಂದೆ ಭೀಮಶಾ ಲಾಳಸಂಗಿ ಇವರೆಲ್ಲರೂ ಕೂಡಿ ನಮ್ಮ ಹತ್ತಿರ ಬಂದು ನಮಗೆ ಏನ್ರೋ ಬೋಸಡಿ ಮಕ್ಕಳ್ಯಾ ನಮ್ಮ ನೋಡೆ ನಗೊವಷ್ಟು ದೈರ್ಯ ಬಂದಾದ ನಿಮಗೆ ಅಂತಾ ಅಂದವರೆ ಎಲ್ಲರೂ ಕೂಡಿ ನನಗೆ ಮತ್ತು ಮಲ್ಲಿಕಾರ್ಜುನನಿಗೆ ಕೈಯಿಂದ ಹೊಡೆಯುವುದು ಕಾಲಿನಿಂದ ಒದೆಯುವುದು ಮಾಡುತ್ತಿದ್ದರು, ಆಗ ನಾನು ಅವರಿಂದ ತಪ್ಪಿಸಿಕೊಂಡು ಓಡಿ ಹೋಗುತ್ತಿದ್ದಾಗ ಸಿದ್ದಪ್ಪ ಲಾಳಸಂಗಿ ಮತ್ತು ಶ್ರೀಶೈಲ ಲಾಳಸಂಗಿ ಇಬ್ಬರು ಕೂಡಿ ನನ್ನನ್ನು ಬೆನ್ನು ಹತ್ತಿ ಹಿಡಿದು ನನ್ನನ್ನು ಹೋಗದಂತೆ ತಡೆದು ನಿಲ್ಲಿಸಿ ಹೊಡೆ ಬಡೆಮಾಡುತ್ತಿದ್ದರು, ಸದರಿಯವರು ನಮಗೆ ಹೊಡೆಯುತ್ತಿದ್ದಾಗ ಅಲ್ಲೆ ಇದ್ದ ಅಂಬಣ್ಣ ನರಗೋದಿ,ಶ್ರೀಶೈಲ ಸುಲ್ತಾನಪೂರ,ಸಿದ್ದು ಕೋಳಿ ಇವರು ನಮಗೆ ಹೊಡೆಯುವುದನ್ನು ಬಿಡಿಸಿದರು.ಆಗ ಸದರಿಯವರು ಮಕ್ಕಳೆ ಇವರು ಬಂದು ಬಿಡಿಸಿದ್ದಕ್ಕೆ ನೀನು ಉಳಿದುಕೊಂಡಿರಿ ಮುಂದೆ ನಿಮಗೆ ಜೀವ ಸಹಿತ ಬಿಡುವುದಿಲ್ಲ ಅಂತ ಜೀವ ಬೆದರಿಕೆ ಹಾಕಿ ಹೊದರು. ಸದರಿಯವರು ನಮಗೆ ಹೊಡೆದರಿಂದ ನನ್ನ ಬೆನ್ನಿಗೆ ಮತ್ತು ಏರಡು ಕೈಗಳ ರಟ್ಟೆಗೆ ಒಳಪೆಟ್ಟುಗಳು ಆಗಿರುತ್ತವೆ.ಮಲ್ಲಿಕಾರ್ಜುನನಿಗೆ ಅವನ ಬಲ ಕಪಾಳಿನ ಮೇಲೆ ಒಳಪೆಟ್ಟು ಹಾಗೂ ಮೈ ಕೈಗೆ ಗುಪ್ತಗಾಯಗಳು ಆಗಿರುತ್ತವೆ.ಸದರಿ ಘಟನೆಯ ಮನೆಯಲ್ಲಿ ವಿಚಾರಿಸಿಕೊಂಡು ಈಗ ತಡವಾಗಿ ಠಾಣೆಗೆ ಬಂದಿರುತ್ತೇವೆ.  ಕಾರಣ 1) ಶ್ರೀಶೈಲ ತಂದೆ ಭೀಮಶಾ ಲಾಳಸಂಗಿ 2) ಸಿದ್ದಪ್ಪ ತಂದೆ ಭೀಮಶಾ ಲಾಳಸಂಗಿ 3) ಪರಶುರಾಮ ತಂದೆ ಭೀಮಶಾ ಲಾಳಸಂಗಿ, 4) ಪುಂಡಲಿಕ ತಂದೆ ಭೀಮಶಾ ಲಾಳಸಂಗಿ, 5) ಶರಣಪ್ಪ ತಂದೆ ಭೀಮಶಾ ಲಾಳಸಂಗಿ, 6) ಕೃಷ್ಣಪ್ಪ ತಂದೆ ಭೀಮಶಾ ಲಾಳಸಂಗಿ 7) ಭೀಮಶಾ ತಂದೆ ಶಂಕರಲಿಂಗ ಲಾಳಸಂಗಿ ಸಾ|| ಎಲ್ಲರೂ ಕರಜಗಿ ಗ್ರಾಮ ಇವರೆಲ್ಲರೂ ನನ್ನ ಅಣ್ಣ ತಮ್ಮಕಿಯ ಮಲ್ಲಿಕಾರ್ಜುನನು ಶ್ರೀಶೈಲನಿಗೆ ನೋಡಿ ನಕ್ಕಿದ್ದಾನೆ ಅಂತಾ,ಸದರಿಯವರೆಲ್ಲರೂ ಏಕೊದ್ದೇಶದಿಂದ ಅಕ್ರಮವಾಗಿ ಗುಂಪುಕಟ್ಟಿಕೊಂಡು ಬಂದು ನನಗೆ ಮತ್ತು ನನ್ನ ಅಣ್ಣ ತಮ್ಮಕಿಯ ಮಲ್ಲಿಕಾರ್ಜುನ @ಪಿಂಟು ಇಬ್ಬರಿಗೂ ಅವಾಚ್ಯ ಶಬ್ದಗಳಿಂದ ಬೈದು, ತಡೆದು ನಿಲ್ಲಿಸಿ, ಕೈಯಿಂದ ಹೊಡೆದು, ಕಾಲಿನಿಂದ ಒದ್ದು ದುಖಾಪತ ಪಡಿಸಿ ಜೀವ ಬೇದರಿಕೆ ಹಾಕಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.