POLICE BHAVAN KALABURAGI

POLICE BHAVAN KALABURAGI

18 September 2018

KALABURAGI DISTRICT REPORTED CRIMES

ಹಲ್ಲೆ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ ಶರಣಗೌಡ ತಂದೆ ಮಡಿವಾಳಪ್ಪಗೌಡ ಪಾಟೀಲ ಜಾ; ಬೇಡರ ಸಾ|| ಚಟ್ನಳ್ಳಿ ತಾ|| ಸಿಂದಗಿ ಇವರು 2017 ನೇ ಸಾಲಿನಲ್ಲಿ ನಮ್ಮುರಲ್ಲಿ ಕೆ.ಬಿ,ಜೆ.ಎನ್.ಎಲ್ ಇಲಾಖೆಯಿಂದ ಒಂದು ವಾಲ್ಮಿಕಿ ಭವನ ಮಂಜುರಾಗಿದ್ದು ಇರುತ್ತದೆ, ಇದರ ಸಲುವಾಗಿ ನಮ್ಮ ಊರಿನ ನಮ್ಮ ಸಮಾಜದವರಾಗಿದ್ದ ದೇವಿಂದ್ರಪ್ಪಗೌಡ ತಂದೆ ಚನ್ನಪ್ಪಗೌಡ ಪಾಟೀಲ ಹಾಗು ಇನ್ನಿತರರು ಸೇರಿಕೊಂಡು ವಾಲ್ಮಿಕಿ ಭವನಕ್ಕೆ ಮಂಜುರಾದ ಹಣವನ್ನು ವಾಲ್ಮಿಕಿ ಭವನ ಮಾಡದೆ ಬಸವಣದೇವರ ಗುಡಿ ಕಟ್ಟುತ್ತೇವೆ ಅಂತಾ ಹೇಳುತ್ತಿದ್ದರಿಂದ ಅದಕ್ಕೆ ನಾನು ಅಪೋಜ ಮಾಡಿರುತ್ತೇನೆ, ಅದಕ್ಕೆ ದೇವಿಂದ್ರಪ್ಪಗೌಡ ಮತ್ತು ಇನ್ನಿತರರು ನನ್ನ ವಿರುದ್ದ ಹಗೆ ಸಾಧಿಸುತ್ತಾ ಬರುತ್ತಿದ್ದರು,  ದಿನಾಂಕ 16-09-2018 ರಂದು ರಾತ್ರಿ 9;30 ಸುಮಾರಿಗೆ ನಮ್ಮ ಊರಲ್ಲಿ ದೇವಿಂದ್ರಪ್ಪಗೌಡ ಹಾಗು ಇತರರು ಕೂಡಿಕೊಂಡು ಸೇದಿ ಬಾವಿ ಹತ್ತಿರ ತಕರಾರು ಮಾಡಿರುತ್ತಾರೆ, ಅಲ್ಲಿಂದ ನಾವಿಬ್ಬರು ನನ್ನ ಮೋಟರ ಸೈಕಲ್ ಮೇಲೆ ನನ್ನ ಹೆಂಡತಿ ಊರಾದ ಕುಳಗೇರಿಗೆ ಹೋಗುತ್ತಿದ್ದಾಗ 11;30 ಪಿ.ಎಂ ಕ್ಕೆ ಕುಳಗೇರಿ ಇನ್ನು 3 ಕಿ.ಮಿ ಸಮೀಪ ಕೆನಾಲ ಹತ್ತಿರ ಕೆಲವರು ಮೋಟರ ಸೈಕಲ್ ಮೇಲೆ ಬಂದು ನಮಗೆ ಅಡ್ಡಗಟ್ಟಿ ನಿಲ್ಲಿಸಿದರು, ಆಗ ಮೋಟರ ಸೈಕಲ್ ಮೇಲೆ 1] ದೇವಿಂದ್ರಪ್ಪಗೌಡ ಪಾಟೀಲ, 2] ಪ್ರಬುಗೌಡ ತಂದೆ ಸಾಹೇಬಗೌಡ ಬಿರಾದಾರ, 3] ಲಕ್ಷ್ಮೀಕಾಂತ ತಂದೆ ಬಸಪ್ಪಗೌಡ ಬಿರಾದಾರ, 4] ಅಂಬ್ರೀಷ ತಂದೆ ಅಪ್ಪಾಸಾಹೇಬಗೌಡ ಬಿರಾದಾರ, 5] ಶಂಕರಗೌಡ ತಂದೆ ಬಸವಂತ್ರಾಯಗೌಡ ಬಿರಾದಾರ, 6] ಮಹಾಂತಗೌಡ ತಂದೆ ಬಸವಂತ್ರಾಯಗೌಡ ಬಿರಾದಾರ, 7] ತಿಪ್ಪಣ್ಣ ಪೂಜರಿ ಜಾ; ಹಿಂದು ಕುರುಬರ ಸಾ|| ಕಾಶಿನಕುಂಟಿ ತಾ|| ಮುದ್ದೇಬಿಹಾಳ ಇವರು ನಮ್ಮ ಹತ್ತಿರ ಬಂದರು, ದೇವಿಂದ್ರಪ್ಪಗೌಡ ಪಾಟೀಲ ಮತ್ತು ಪ್ರಭುಗೌಡ ಬಿರಾದಾರ ಇವರಿಬ್ಬರು ನನ್ನ ಕೈ ಹಿಡಿದು ಎಳೆದಾಡಿ ಕಾಲಿನಿಂದ ಬೆನ್ನಿನ ಮೇಲೆ ಒದ್ದರು, ಲಕ್ಷ್ಮೀಕಾಂತಗೌಡ ಬಿರಾದಾರ ಇವನು ಕಲ್ಲು ತೆಗೆದುಕೊಂಡು ನಮ್ಮ ಅಣ್ಣನ ಬಲಹಣೆಗೆ ಹೊಡೆದನು, ಅಂಬ್ರೀಷ ಬಿರಾದಾರ ಹಾಗು ಶಂಕರಗೌಡ ಬಿರಾದಾರ ಇವರು ಇಬ್ಬರು ಕೂಡಿಕೊಂಡು ಬಡಿಗೆಯಿಂದ ಬೆನ್ನಿನ ಮೇಲೆ ಹೊಡೆದರು, ಮಹಾಂತಗೌಡ ಬಿರಾದಾರ ಇವನು ನನಗೆ ಬಂದು ಕೊಲೆ ಮಾಡಬೇಕು ಅಂತಾ ಉದ್ದೇಶ ಇಟ್ಟುಕೊಂಡು ನನ್ನ ತೊಡ್ಡಿನ ಹತ್ತಿರ ಒದ್ದನು, ತಿಪ್ಪನ್ಣ ಪೂಜಾರಿ ಇವನು ಈ ಬ್ಯಾಡ ಸುಳಿಮಗನಿಗೆ ಹೊಡೆದು ಖಲಾಸ ಮಾಡರಿ ಅಂತಾ ಜೋರಾಗಿ ಹೇಳುತ್ತಿದ್ದಾಗ ಅಲ್ಲಿಯ ಬಾಜು ಹೊಲದವರು ಬಂದು ಏ ನಿವು ಯಾರು, ಇಲ್ಲಿಯಾಕ ಜಗಳಾ ಮಾಡುತ್ತಿದ್ದರಿ ಅಂತಾ ಅಂದಾಗ ಅಲ್ಲಿಂದ ಎಲ್ಲರು ಓಡಿ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ಆಳಂದ ಠಾಣೆ : ಶ್ರೀ ರಾಘವೇಂದ್ರ ತಂದೆ ರಾಜೇಂದ್ರ ಸಾಲೇಗಾಂವ ಸಾ: ಕೋತನ ಹಿಪ್ಪರಗಾ ಹಾ:ವ: ಕಲಬುರಗಿ ರವರದೊಂದು ಸ್ಪೆಂಡರ ಪ್ಲಸ್‌ ಸಿಲವರ್‌ ಬಣ್ಣದ ನಂಬರ ಕೆಎ-32 ಇಬಿ 4591 ಇದ್ದು ದಾಖಲಾತಿಗಳು ನನ್ನ ತಮ್ಮ ಉಮೇಶ ಸಾಲೆಗಾಂವ ರವರ ಹೆಸರಿನಲ್ಲಿ ಇರುತ್ತದೆ.  ದಿನಾಂಕ 10/07/2018 ರಂದು ನಮ್ಮ ಹೊಲಕ್ಕೆ ನಮ್ಮ ತಮ್ಮ ರಮೇಶ ಹಾಗು ನಮ್ಮ ತಂದೆ ರಾಜೇಂದ್ರ ಇಬ್ಬರು ಕೂಡಿಕೊಂಡು ನಮ್ಮ ಹೊಲಕ್ಕೆ ಹೋಗಿ ಹೊಲದ ಬಂದಾರಿ ಹತ್ತಿರ ಮೋಟರ ಸೈಕಲ ನಿಲ್ಲಿಸಿ ಹೊಲದಲ್ಲಿ ಕೆಲಸ ಮಾಡಿ ಮರಳಿ ಮದ್ಯಾಹ್ನ 01:00 ಗಂಟೆ ಸುಮಾರಿಗೆ ಮರಳಿ ಬಂದು ನೋಡುವಷ್ಟರಲ್ಲಿ ಅಲ್ಲಿ ಮೋಟರ ಸೈಕಲ ಇರಲಿಲ್ಲಾ ನಂತರ ಇಲ್ಲೆ ಯಾರಾದರೂ ತೆಗೆದುಕೊಂಡು ಹೋಗಿರಬಹುದು ಅಂತಾ ಗ್ರಾಮದಲ್ಲಿ ಎಲ್ಲಾ ಕಡೆಗೆ ಬಂದೂ ಹುಡುಕಾಡಿದರೂ ಮೋಟರ ಸೈಕಲ ಸಿಕ್ಕಿರುವುದಿಲ್ಲಾ. ಮೋಟರ ಸೈಕಲನ್ನು ದಿನಾಂಕ 10/07/2018 ರ ಬೆಳಿಗ್ಗೆ 11:00 ಗಂಟೆಯಿಂದ ಮದ್ಯಾಹ್ನ 01:00 ಗಂಟೆಯ ಮದ್ಯದಲ್ಲಿ ಯಾರೂ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.