POLICE BHAVAN KALABURAGI

POLICE BHAVAN KALABURAGI

29 August 2013

ಅನಧಿಕೃತ ಆಯುಧ ಹೊಂದಿದ ಆರೋಪಿತರ ಬಂಧನ :

ಗ್ರಾಮೀಣ ಠಾಣೆ : ದಿನಾಂಕ 28/8/2013 ರಂದು ಮದ್ಯಾಹ್ನ 2 ಗಂಟೆಗೆ ನಮ್ಮ ಠಾಣೆಯ ಡಾ: ರಾಮ.ಎಲ್.ಅರಸಿದ್ಧಿ ಡಿವೈಎಸ್‌ಪಿ ಪ್ರೋಬೆಶನರಿ ರವರು ದಿನಾಂಕ.28-8-2013 ರಂದು 11-45 ಎ.ಎಂ.ಕ್ಕೆ ನನಗೆ ಖಚಿತ ಬಾತ್ಮಿ ಬಂದಿದ್ದು ಏನೆಂದರೆ ಡಬರಾಬಾದ ಕ್ರಾಸ ರಿಂಗರೋಡ ಹತ್ತಿರ  ಮಹಮ್ಮದ ಇಸ್ಮಾಯಿಲ್ @ ಜಗ್ಗು ದಾದಾ ಹಾಗೂ ಇತರರು ಅಕ್ರಮವಾಗಿ ನಾಡ ಪಿಸ್ತೂಲಗಳನ್ನು ಹೊಂದಿ ಯಾವುದೋ ಅಪರಾಧ ವೆಸಗುವ ಕುರಿತು ಯಾವುದೋ ಕೆಲಸಕ್ಕಾಗಿ ಹೋಗುತ್ತಿರುವ ಬಗ್ಗೆ ಬಾತ್ಮಿ ಬಂದಿದಕ್ಕೆ ಅಧಿಕಾರಿ, ಸಿಬ್ಬಂದಿ ಹಾಗೂ ಪಂಚರನ್ನು ಬರಮಾಡಿಕೊಂಡು  ಸ್ಥಳಕ್ಕೆ ಹೋದಾಗ ಒಂದು ಮೋಟಾರ ಸೈಕಲ  ಮೇಲೆ ಇಬ್ಬರು ಜನರು ಬಂದಿದ್ದು ಹಿಡಿದು ಚಕ್ಕ ಮಾಡಲಾಗಿ ಮಹಮ್ಮದ ಇಸ್ಮಾಯಿಲ್ @ ಜಗ್ಗು ದಾದಾ  ತಂದೆ  ತಂದೆ ಅಬ್ದುಲ ಖಾದರ ಸಾ;ಎಂ.ಎಸ್.ಕೆ. ಮಿಲ್ಲ ಗುಲಬರ್ಗಾ  ಇತನ ಕಡೆಯಿಂದ ಒಂದು ನಾಡ ಪಿಸ್ತೂಲ ಮತ್ತು ಇನ್ನೊಬ್ಬ ಇಲಿಯಾಜೊದ್ದಿನ  ತಂದೆ ಖುರ್ಷಿದ ಪಟೇಲ ಸಾ;ಎಂ.ಎಸ್.ಕೆ. ಮಿಲ್ಲ ಗುಲಬರ್ಗಾ ಇತನ ಹತ್ತಿರ ಒಂದು ಹರಿತವಾದ ಚಾಕು ಸಿಕ್ಕಿದ್ದು, ಈ ನಾಡ ಪಿಸ್ತೂಲನ್ನು ಪೈಯೂಮ ಶಾಹಾಪೂರ ಎಂಬುವನು ಮಾರಾಟ ಮಾಡುವದಕ್ಕೆ ಅನಧಿಕೃತವಾಗಿ ಕೊಟ್ಟಿದ್ದಕ್ಕೆ ತಾನು  ಅಕ್ರಮವಾಗಿ ಇಟ್ಟುಕೊಂಡಿರುವದಾಗಿ ತಿಳಿಸಿದನು , ಇಂದು ದಿನಾಂಕ.28-08-2013 ರಂದು 12-30 ಪಿ.ಎಂ.ದಿಂದ 1-30 ಪಿ.ಎಂ.ದವರೆಗೆ ಜಪ್ತಿ ಪಂಚನಾಮೆ ಪ್ರಕಾರ ಜಪ್ತಿ ವಪಡಿಸಿಕೊಂಡಿದ್ದು , ಒಂದು ನಾಡ ಪಿಸ್ತೂಲು, 2 ಜೀವಂತ ಗುಂಡುಗಳು , ಒಂದು ಚಾಕು, ಒಂದು ಬಜಾಜ ಪಲ್ಸರ ಮೋಟಾರ ಸೈಕಲ ಮತ್ತು ಜ್ಞಾಪನಾ ಪತ್ರದೋಂದಿಗೆ ಜೋತೆಗೆ ಠಾಣೆಗೆ ತಂದು ಹಾಜರ ಪಡಿಸಿದ್ದರ ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.