POLICE BHAVAN KALABURAGI

POLICE BHAVAN KALABURAGI

17 March 2014

Gulbarga District Reported Crimes

ಅನಧೀಕೃತವಾಗಿ ಮಧ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ :
ಬ್ರಹ್ಮಪೂರ ಠಾಣೆ :  ದಿನಾಂಕ:16-03-2014  ರಂದು ಬೆಳಿಗ್ಗೆ 1030 ಗಂಟೆಯ ಸುಮಾರಿಗೆ ಬ್ರಹ್ಮಪೂರ ಪೊಲೀಸ್ ಠಾಣೆಯ ವ್ಯಾಪ್ತಿಯ ಬಾಪೂ ನಗರ ಬಡಾವಣೆಯ ವಿಠಲ ಮಂದಿರ ಹತ್ತಿರ ಅನಧೀಕೃತ ಮದ್ಯ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಬಾತ್ಮಿ ದೊರೆತ ಮೇರೆಗೆ ಮಾನ್ಯ ಬಿ.ಎಸ್.ಸವಿಶಂಕರ ನಾಯ್ಕ ಡಿ.ಎಸ್.ಪಿ 'ಉಪ-ವಿಭಾಗ ಗುಲಬರ್ಗಾ ರವರ  ಮಾರ್ಗದರ್ಶನದಲ್ಲಿ ಪಿ.ಐ ಬ್ರಹ್ಮಪೂರ ಮತ್ತು ಸಿಬ್ಬಂದಿಯವರು ಹಾಗು ಪಂಚರೊಂದಿಗೆ ಬಾಪೂ ನಗರದ ವಿಠಲ ಮಂದಿರದ ಹತ್ತಿರ ಹೋಗಿ ಮರೆಯಲ್ಲಿ ನಿಂತು ನೋಡಲು ಎರಡು ಜನರು ಅನಧೀಕೃತ ಮದ್ಯ ಮಾರಾಟ ಮಾಡುತ್ತಿರುವದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ಸಿಬ್ಬಂದಿಯ ಸಹಾಯದಿಂದ  ದಾಳಿ ಮಾಡಿ ಹಿಡಿಯಲು ಒಬ್ಬನು ಓಡಿ ಹೋಗಿದ್ದು ಒಬ್ಬನು ಸಿಕ್ಕಿಬಿದ್ದಿದ್ದು ಸಿಕ್ಕಿ ಬಿದ್ದ ವ್ಯಕ್ತಿಯ ಹೆಸರು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಕಿರಣ ತಂದೆ ಭೀಮಶ್ಯಾ ಮಾಲಗತ್ತಿ ಸಾ|| ಗಾಜೀಪೂರ ಗುಲಬರ್ಗಾ  ಅಂತಾ ಹೇಳಿದ್ದು , ಓಡಿ ಹೋದವನ ಹೆಸರು ಸಿಕ್ಕಿಬಿದ್ದವನಿಂದ ವಿಚಾರಿಸಲು ಅವನ ಹೆಸರು ಶೇರು ತಂದೆ ಕೇರುಲಾಲ ಕಾಳೆ ಸಾ: ಬಾಪು ನಗರ  ಗುಲಬರ್ಗಾ ಅಂತಾ ಗೋತ್ತಾಗಿರುತ್ತದೆ. ನಂತರ ಸದರಿಯವರ ಹತ್ತಿರ ಇದ್ದ ಪ್ಲಾಸ್ಟೀಕ್ ಚೀಲ ಮತ್ತು ಕಾಟನ್ ಬಾಕ್ಸ ಪರಿಶೀಲಿಸಿ ನೋಡಲು ಪ್ಲಾಸ್ಟೀಕ ಚೀಲದಲ್ಲಿ 1) ಕಿಂಗ್ ಫೀಶರ್ ಸ್ರ್ಟಾಂಗ್ ಬಿಯರ್ ಬಾಟಲಿಗಳು  650 ಎಮ್. ಎಲ್. ನ ಒಟ್ಟು 50  ಬಾಟಲಿಗಳು ಒಂದಕ್ಕೆ 90 ರೂಪಾಯಿಗಳಂತೆ ಒಟ್ಟು ಅ||ಕಿ|| 4500/-, 2) ನಾಕೌಟ್ ಬಿಯರ್ ಬಾಟಲಿಗಳು  650  ಎಮ್.ಎಲ್.ನ  8 ಬಾಟಲಿಗಳು ಪ್ರತಿ ಬಾಟಲಿಗೆ 90 ರೂ.ಗಳಂತೆ ಒಟ್ಟು 720/-ರೂ,  3)ಒಂದು ಕಾಟನ ಬಾಕ್ಸನಲ್ಲಿ 51 ಓರಿಜನಲ್ ಚಾಯಸ್ ಟೇಟ್ರ್ಯಾ ಪಾಕೀಟಗಳು 180 ಎಮ್.ಎಲ್.ನ ಒಂದಕ್ಕೆ 48  ರೂಪಾಯಿಗ ಳಂತೆ ಒಟ್ಟು 2448/-ರೂ ಬೆಲೆಯುಳ್ಳದ್ದುಹೀಗೆ ಒಟ್ಟು ಎಲ್ಲಾ ಸೇರಿ ಅ||ಕಿ|| 7668/- ರೂಪಾಯಿ ಬೆಲೆಬಾಳುವ ಮದ್ಯ ದೊರೆತಿದ್ದು  ಸದರಿವನೊಂದಿಗೆ ಮರಳಿ ಠಾಣೆಗೆ ಬಂದು ಸದಿರಯನ ವಿರುದ್ಧ ಬ್ರಹ್ಮಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಸ್ಟೇಷನ ಬಜಾರ ಠಾಣೆ :  ದಿನಾಂಕ 16-03-2014 ರಂದು 4 ಪಿ.ಎಮ್ ಸುಮಾರಿಗೆ ರೈಲ್ವೆ ಸ್ಟೇಷನ ಹತ್ತಿರ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ಗುಂಪಾಗಿ ಕುಳಿತುಕೊಂಡು ಇಸ್ಪೆಟ್ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಕಾಸು ಮತ್ತು ಸಿಬ್ಬಂದಿ ಜನರು ಹಾಗು ಪಂಚರೊಂದಿಗೆ ಮಾನ್ಯ ಡಿ.ಎಸ್.ಪಿ ಸಾಹೇಬರು ಉಪವಿಭಾಗ ರವರ ಮಾರ್ಗದರ್ಶನದಲ್ಲಿ ಸ್ಥಳದ ಸಮೀಪ ಹೋಗಿ ಮರೆಯಲ್ಲಿ ನಿಂತು ನೋಡಲು ರೈಲ್ವೆ ಸ್ಟೇಷನ ಹತ್ತಿರ ಖುಲ್ಲಾ ಜಾಗೆಯಲ್ಲಿ 5 ಜನರು ಗುಂಪಾಗಿ ಕುಳಿತು ಇಸ್ಪೆಟ ಎಲೆಗಳ ಸಹಾಯದಿಂದ ಪಣಕ್ಕೆ ಹಣ ಹಚ್ಚಿ ಅಂದರ ಬಹಾರ ಎಂಬ ದೈವಲಿಲೆ ಇಸ್ಪೆಟ್ ಜೂಜಾಟ ಆಡುತ್ತಿದ್ದದ್ದು ಖಚಿತಪಡಿಸಿಕೊಂಡು ಪಿ.ಐ ಸಾಹೇಬರ ನೇತೃತ್ವದಲ್ಲಿ ದಾಳಿ ಮಾಡಿ ಹಿಡಿದು ಅವರನ್ನು ವಿಚಾರಿಸಲು ತಮ್ಮ ಹೆಸರು 1) ಸಿದ್ದಪ್ಪಾ ತಂದೆ ಶಿವರಾಯ ಪೂಜಾರಿ 2) ಬಸಪ್ಪಾ ತಂದೆ ನಾಗಪ್ಪಾ ಪೂಜಾರಿ 3) ಬಂಡೆಪ್ಪಾ ತಂದೆ ಬಸ್ಸಣ್ಣ ಪೂಜಾರಿ 4) ಅಯ್ಯಪ್ಪ ತಂದೆ ಶಿವಪ್ಪ ದೊರೆ 5) ವಿಜಯ ಕುಮಾರ ತಂದೆ ಬಸವರಾಜ ಸಾಃ ಎಲ್ಲರು ಹನುಮಾನ ನಗರ ಗುಲಬರ್ಗಾ ರವರನ್ನು ದಸ್ತಗೀರ ಮಾಡಿಕೊಂಡು ಸದರಿಯವರಿಂದ 2,440/- ರೂ ಮತ್ತು 52 ಇಸ್ಪೆಟ್ ಎಲೆಗಳನ್ನು ಜಪ್ತಿಮಾಡಿಕೊಂಡು ಮೆರಳಿ ಠಾಣೆಗೆ ಬಂದು ಸದರಿಯವರ ವಿರುದ್ಧ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.  
ನಿಂಬರ್ಗಾ  ಠಾಣೆ :ದಿನಾಂಕ 16-03-2014 ರಂದು 1130 ಗಂಟೆಗೆ ಧಂಗಾಪೂರ ಗ್ರಾಮದಲ ಗ್ರಾಮದ ಶ್ರೀ ಭೀರಲಿಂಗೇಶ್ವರ ದೇವರಗುಡಿಯ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ ಜೂಜಾಟ ನಡೆಯುತ್ತಿದೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ನಿಂಬರ್ಗಾ ಮತ್ತು ಸಿಬ್ಬಂದಿಯವರು ಹಾಗು ಪಂಚರೊಂದಿಗೆ  ಬಾತ್ಮಿ ಬಂದ ಸ್ಥಳವಾದ ಶ್ರೀ ಭೀರಲಿಂಗೇಶ್ವರ ದೇವರಗುಡಿಯ ಸ್ವಲ್ಪ ದೂರದಲ್ಲಿ ಮರೆಯಾಗಿ ನಿಂತು ನೋಡಲಾಗಿ 05 ಜನ ವ್ಯಕ್ತಿಗಳು ಶ್ರೀ ಭೀರಲಿಂಗೇಶ್ವರ ದೇವರಗುಡಿಯ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಹಾರ ಇಸ್ಪೀಟ ಜೂಜಾಟ ಆಡುತ್ತಿರುವದನ್ನು ಖಚಿತಪಡಿಸಿಕೊಂಡು ದಾಳಿ ಮಾಡಿದಾಗ  ಅದರಲ್ಲಿ 03 ಆಸಾಮಿ ಜನರು ಜೂಜಾಟ ಆಡುವುದನ್ನು ಬಿಟ್ಟು ಓಡಿ ಹೋದರು ಉಳಿದ ಇಬ್ಬರನ್ನು ಹಿಡಿದು ವಿಚಾರಿಸಲು 1) ಅಮೃತ ತಂದೆ ಗುಂಡಪ್ಪ ಪೂಜಾರಿ 02] ಶರಣಬಸಪ್ಪ ತಂದೆ ಮನಗ್ಯಾನಪ್ಪ ಪೂಜಾರಿ ಸಾ : ಇಬ್ಬರು ಧಂಗಾಪೂರ ಇಬ್ಬರು ಹತ್ತಿರ ಮತ್ತು ಪಣಕ್ಕೆ ಹಚ್ಚಿದ ಹಣ ಹೀಗೆ ಒಟ್ಟು 1230/- ರೂ 52 ಇಸ್ಪೀಟ ಎಲೆಗಳನ್ನು ಜಪ್ತಮಾಡಿಕೊಂಡು ಓಡಿ ಹೋದ ವ್ಯಕ್ತಿಗಳ ಮೂರು ಜನ ವ್ಯಕ್ತಿಗಳ ಬಗ್ಗೆ ವಿಚಾರಿಸಲಾಗಿ ಆರೋಪಿತರಾದ ಶರಣಬಸಪ್ಪ ಹಾಗೂ ಅಮೃತ ಇಬ್ಬರು ತಿಳಿಸಿದ್ದೇನೆಂದರೆ ಓಡಿ ಹೋದವರು 1) ಸೋಮಣ್ಣ ತಂದೆ ಬಸಪ್ಪ ಪೂಜಾರಿ 2) ರಾಮ ತಂದೆ ಚಂದ್ರಶಾ ಚಿತಲಿ 3) ಚಂದಪ್ಪ ತಂದೆ ನಿಂಬೆಣ್ಣ ಪೂಜಾರಿ ಸಾ: ಎಲ್ಲರೂ ಧಂಗಾಪೂರ ಅಂತಾ ತಿಳಿಸಿದ್ದು ಸದರಿಯವರೊಂದಿಗೆ ಮರಳಿ ಠಾಣೆಗೆ ಬಂದು ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ವಿಶ್ವವಿದ್ಯಾಲಯ ಠಾಣೆ : ದಿನಾಂಕ 16-03-2014 ರಂದು ಠಾಣಾ ಸರಹದ್ದಿನ ಖಾಜಾ ಕೋಟನೂರ ಗ್ರಾಮದ ಖಾನಪೀರ ದರ್ಗಾದ ಹತ್ತಿರ ಬಯಲು ಜಾಗೆಯಲ್ಲಿ ಕೆಲವು ಜನರು ಇಸ್ಪೀಟ ಜೂಜಾಟ ಹಣವನ್ನು ಪಣಕ್ಕೆ ಹಚ್ಚಿ ಆಡುತ್ತಿದ್ದಾರೆ ಎಂದು ಖಚಿತವಾದ ಬಾತ್ಮಿ ಬಂದ ಮೇರೆಗೆ  ಪಿ.ಎಸ್.ಐ ವಿಶ್ವವಿದ್ಯಾಲಯ ಸಿಬ್ಬಂದಿ ಜನರು ಹಾಗು ಪಂಚರೊಂದಿಗೆ  ಖಾಜಾ ಕೋಟನೂರ ಗ್ರಾಮದ ಸರಕಾರಿ ಶಾಲೆಯ ಹತ್ತಿರ ಹೋಗಿ ಸ್ವಲ್ಪ ದೂರದಲ್ಲಿ ನಿಂತು ನೋಡಲಾಗಿ ಖಾಜಾಕೋಟನೂರ ಗ್ರಾಮದ ಖಾನಪೀರ ದರ್ಗಾದ ಹತ್ತಿರ ಬಯಲು ಜಾಗೆಯ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತುಕೊಂಡು ಅಂದರ ಬಹಾರ ಇಸ್ಪೀಟ ಜೂಜಾಟವನ್ನು  ಖಚಿತಪಡಿಸಿಕೊಂಡು ದಾಳಿ ಮಾಡಿ 04 ಜನರಿಗೆ ಹಿಡಿದು ಅವರ ಹೆಸರು ವಿಳಾಸ ವಿಚಾರಿಸಿ ಚಕ್ಕಮಾಡಲಾಗಿ 1) ಮಹಮೂದ ತಂದೆ ಹಮಿದ ಮಿಯಾ 2) ಮಹಾದೇವ ತಂದೆ ಶಾಂತಪ್ಪ ಬಿರಾದಾರ, 3) ಗುಂಡಪ್ಪ ತಂದೆ ಗುರುನಾಥ ಸುತ್ತಾರ, 4) ಅಬ್ದುಲ ತಂದೆ ಶಹಬುದ್ದಿನ ಸಾ|| ಎಲ್ಲರು ಖಾಜಾ ಕೋಟನೂರ ಇವರಿಂದ ಒಟ್ಟು 4050 ರೂ. ಮತ್ತು 52 ಇಸ್ಪೀಟ ಎಲೆಗಳನ್ನು ಜಪ್ತಿ ಮಾಡಿಕೊಂಡು ಮರಳಿ ಠಾಣೆಗೆ ಬಂದು ಸದರಿಯವರ ವಿರುದ್ಧ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ
ಅಪಘಾತ ಪ್ರಕರಣಗಳು :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀಮತಿ ಶರಣಮ್ಮ ತಂದೆ ಶರಣಪ್ಪ ಬಾಡದ   ಸಾ: ತಿಲಕ ನಗರ  ಗುಲಬರ್ಗಾ ರವರು   ದಿನಾಂಕ 16-03-20147 ರಂದು 7-15 ಪಿ.ಎಮ್. ಕ್ಕೆ ತನ್ನ ಮನೆಯಿಂದ ಎಸ್.ಬಿ.ಕಾಲೇಜ ಹಾಸ್ಟೇಲಕ್ಕೆ ಹೋಗುವ ಕುರಿತು ತನ್ನ ಮನೆಯಿಂದ ಅಟೋರೀಕ್ಷಾದಲ್ಲಿ ಬಂದು ಅನ್ನ ಪೂರ್ಣ ಕ್ರಾಸ್ ಹತ್ತಿರ ಬಂದು ಇಳಿದು ಎಸ್.ಬಿ.ಕಾಲೇಜ ಹಾಸ್ಟೇಲಕ್ಕೆ ಹೋಗುವ ಸಲುವಾಗಿ ಜಗತ ಸರ್ಕಲ್  ದಿಂದ ಎಸ್.ವಿ.ಪಿ.ಸರ್ಕಲ್ ರೋಡಿನ ಮೇಲೆ ನಡೆದುಕೊಂಡು ದಾಟುತ್ತಿದ್ದಾಗ ಯಾವುದೋ ಒಂದು ವಾಹನದ ಚಾಲಕ/ಸವಾರ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಡಿಕ್ಕಿ ಪಡಿಸಿ ಅಪಘಾತಮಾಡಿ ಗಾಯಗೊಳಿಸಿ  ವಾಹನ ಸಮೇತ ಹೊರಟು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ :  ಶ್ರೀ ಮೊಗಲಪ್ಪ ತಂದೆ ರಾಮಲು ದಾಸರ   ಸಾ: ಗೊಲ್ಲರ ಓಣಿ ಜಗತ ಗುಲಬರ್ಗಾ   ರವರು ದಿನಾಂಕ 16-03-2014 ರಂದು 7-50 ಪಿ.ಎಮ್.ಕ್ಕೆ ರಾಘವೇಂದ್ರ ಆತನ ಜೊತೆಲ್ಲಿದ್ದು ಘಟನೆ ನೋಡಿದ ಅವರ ದೊಡ್ಡಪ್ಪನು ದಿನಾಂಕ: 16-03-2014  ರಂದು ಸಾಯಂಕಾಲ 4=00 ಗಂಟೆ ಸುಮಾರಿಗೆ ಜಿ.ಜಿ.ಹೆಚ್.ಸರ್ಕಲ್ ದಿಂದ ಎಸ್.ಟಿ.ಬಿ.ಟಿ.ಕ್ರಾಸ್ ಮಧ್ಯದ ರೋಡಿನಲ್ಲಿ ಬರುವ ಮರಗಮ್ಮ ಗುಡಿ ಹತ್ತಿರ ಫಿರ್ಯಾದಿ ಮತ್ತು ಮೊಹನಕುಮಾರ ತಂದೆ ರಾಮಲು ಇಬ್ಬರು ಕೂಡಿ ಮಾತನಾಡುತ್ತಾ ಇರುವಾಗ ಫಿರ್ಯಾದಿಯ ತಮ್ಮನ ಮಗನಾದ ರಾಘವೇಂದ್ರ ವಯಾ: 10 ವರ್ಷ ಈತನು ಸುಂದರ ನಗರ ಓಣಿಯ ಕಡೆಯಿಂದ ಗೊಲ್ಲರ ಓಣಿ ಕಡೆಗೆ ಹೋಗುವ ಕುರಿತು ರೋಡ ದಾಟುತ್ತಿದ್ದಾಗ ಜಿ.ಜಿ.ಹೆಚ್.ಸರ್ಕಲ್ ಕಡೆಯಿಂದ ಕಾರ ನಂ: ಕೆಎ 32 ಎಮ್ 7236 ರ ಚಾಲಕನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಾಘವೇಂದ್ರ ಈತನಿಗೆ ಡಿಕ್ಕಿ ಪಡಿಸಿ ಅಪಘಾತಮಾಡಿ ಗಾಯಗೊಳಿಸಿ ಕಾರ ಸಮೇತ ಹೊರಟು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಯಲ್ಲಾಲಿಂಗ ತಂದೆ ಫಕೀರಪ್ಪಾ ಪೂಜಾರಿ  ಸಾ: ಬೆಳಗುಂಪ್ಪಾ ತಾ: ಚಿತ್ತಾಪೂರ ಹಾ;; ಹಿರಾಪೂರ ಗುಲಬರ್ಗಾ  ರವರು ದಿನಾಂಕ: 16-03-2014 ರಂದು ಮಧ್ಯಾಹ್ನ 3=30 ಗಂಟೆಗೆ ತಮ್ಮ ಮಾಮನಾದ ಸಿದ್ದು ಇವರ ಮೋ/ಸೈಕಲ್ ನಂ ಕೆಎ 25  ಎಕ್ಸ 4585 ನೆದ್ದರ  ಮೇಲೆ ಹಿಂದುಗಡೆ ಕುಳಿತು ಕೇಂದ್ರ ಬಸ್ ನಿಲ್ದಾಣದ ದಿಂದ ಹಿರಾಪೂರ ರಿಂಗ ರೋಡ ಕಡೆಗೆ ಹೋಗುತ್ತಿದ್ದಾಗ ನನ್ನ ಮಾಮನಿಗೆ ಮೋ.ಸೈಕಲ್ ನಿಧಾನವಾಗಿ ಚಲಾಯಿಸಲು ತಿಳಿಸಿದರೂ ಕೂಡೂ ಸಿದ್ದು ಈತನು ತನ್ನ ಮೋ/ಸೈಕಲ್ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ರೋಡ ಬಲ ಎಡಕ್ಕೆ ಕಟ್ಟ ಹೊಡೆಯುತ್ತಾ ಹೋಗಿ ಎಮ್.ಎಸ್ .ಕೆ. ಮಿಲ್ ಮೈದಾನ ಹತ್ತಿರ ಇರುವ ಡ್ರೈನೇಜಕ್ಕೆ ಹಾಯಿಸಿ ಡಿಕ್ಕಿ ಪಡಿಸಿ ಅಪಘಾತಮಾಡಿದ್ದರಿಂದ ನಾವಿಬ್ಬರೂ ಮೋ/ಸೈಕಲ್ ಸಮೇತ ಕೆಳಗೆ ಬಿದ್ದು ಗಾಯಹೊಂದಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.