ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ
ಪ್ರಕರಣ :
ನರೋಣಾ ಠಾಣೆ : ಶ್ರೀ
ವಿಠಲ ತಂದೆ ಬೀಮಾಶಂಕರ ದನ್ನಿ ಸಾ: ಕಡಗಂಚಿ ಗ್ರಾಮ ಇವರ ಗ್ರಾಮದ ಸೀಮಾಂತರದ ಸರ್ವೇ ನಂ. 44
ರಲ್ಲಿ ನಮ್ಮ ಪಾಲಿಗೆ 2 ಎಕರೆ ಜಮೀನು ನಮ್ಮ ಪೂರ್ವಜರಿಗೆ ಸರಕಾರದಿಂದ
ಮಂಜೂರಾಗಿದ್ದು ಸದರಿ ಹೊಲಕ್ಕೆ ಲದ್ದಿ ಹೊಲ ಎಂದು ಕರೆಯುತ್ತೇವೆ ನಮ್ಮಂತೆ ನಮ್ಮೂರಿನ ಸುಮಾರು 70
ಜನ ದಲಿತರಿಗೆ ಸರಕಾರದಿಂದ ಬಹಳ ವರ್ಷಗಳ ಹಿಂದೆ ಜಮೀನು ಮಂಜೂರಾಗಿದ್ದು ಎಲ್ಲರು ನಮ್ಮ ನಮ್ಮ
ಪಾಲಿಗೆ ಪಹಣಿ ಪ್ರಕಾರ ಬಂದಿರುವ ಜಮೀನಿನಲ್ಲಿ ಸಾಗುವಳಿ ಮಾಡಿಕೊಂಡು ಬರುತ್ತಿದ್ದೇವೆ ಸದರಿ
ಲದ್ದಿ ಹೊಲಗಳಿಗೆ ಹೋಗಲು ನಮ್ಮುರಿನ ರಾಮಚಂದ್ರಪ್ಪ ತಂದೆ ಬಸವಣಪ್ಪ ವಾಣಿ ಇವರ ಹೊಲದಿಂದ ಹೋಗಲು
ನಮ್ಮ ಪೂರ್ವಜರಿಂದಲು 8 ಅಡಿ ಅಗಲದ ಕಾಲು ದಾರಿ ಇದ್ದು ನಾವು ಸದ್ಯ ಅದೇ
ದಾರಿಯಿಂದಲೆ ಹೋಗಿ ಬರಬೇಕಾಗುತ್ತದೆ, ಆದರೆ ರಾಮಚಂದ್ರ ವಾಣಿ ಹಾಗೂ ಅವರ ಮಕ್ಕಳು ಸದರಿ ಹೊಲದಿಂದ
ನಮ್ಮ ಹೊಲಕ್ಕೆ ಹೋಗಲು ದಾರಿ ಕೊಡುವುದಿಲ್ಲವೆಂದು ನಮ್ಮೊಂದಿಗೆ ಹಾಗೂ ನನ್ನ ತಮ್ಮ ನಿಂಗಪ್ಪ ಹಾಗೂ
ನಮ್ಮ ಚಿಕ್ಕಪ್ಪ ಮಲ್ಲಿಕಾರ್ಜುನ ರವರೊಂದಿಗೆ ತಕರಾರು ಮಾಡುತ್ತಾ ಬಂದಿರುತ್ತಾರೆ, ಆದರೇ
ನಾವು ಊರಲ್ಲಿ 2-3 ಬಾರಿ ಊರ ಪ್ರಮುಖರನ್ನು ಸೇರಿಸಿ ಪಂಚಾಯಿತಿ ಮಾಡಿದ್ದು
ಆದರೂ ಸಹ ಅವರು ದಾರಿ ವಿಷಯವಾಗಿ ಪದೇ ಪದೇ ತಕರಾರು ಮಾಡುತ್ತಾ ಬಂದಿರುತ್ತಾರೆ. ಹೀಗಿದ್ದು
ರಾಮಚಂದ್ರಪ್ಪ ವಾಣಿ ಇವರು ನಮ್ಮೂರಿನ ರೇವಣಸಿದ್ದಪ್ಪ ತಂದೆ ಮೈಲಾರಿ ಪೂಜಾರಿ ಇವರ ಹೊಲ ಖರೀದಿ
ಮಾಡಿದ್ದು ಸದರಿ ಹೊಲದ ನೊಂದಣಿ ಮಾಡಿಕೊಳ್ಳಬೇಕಾಗಿದ್ದರಿಂದ ಹೊಲದ ಸರ್ವೆಗಾಗಿ ಅರ್ಜಿ
ಹಾಕಿರುತ್ತಾರೆ, ಸರ್ವೇ ಇಲಾಖೆಯವರು ಇಂದು ದಿನಾಂಕ:- 30/01/2017
ರಂದು ಸದರಿ ಹೊಲದ ಸರ್ವೇ ನಿಗದಿಪಡಿಸಿದ್ದು ನಾನು ಪಕ್ಕದ ಹೊಲದವನಾಗಿದ್ದರಿಂದ ಸರ್ವೇ ಕಾಲಕ್ಕೆ
ನನಗೆ ಹಾಜರಿರುವಂತೆ ನೊಟೀಸ್ ನೀಡಿದ್ದರಿಂದ ನಾನು ನನ್ನ ತಮ್ಮ ನಿಂಗಪ್ಪ ಹಾಗು ನಮ್ಮ ಚಿಕ್ಕಪ್ಪ
ಮಲ್ಲಿಕಾರ್ಜುನ ತಂದೆ ಶಾಂತಪ್ಪ ದನ್ನಿ ರವರೆಲ್ಲರು ಕೂಡಿಕೊಂಡು ಮುಂಜಾನೆ 11:00
ಗಂಟೆ ಸುಮಾರಿಗೆ ನಮ್ಮ ಲದ್ದಿ ಹೊಲಕ್ಕೆ ಹೋಗಿರುತ್ತೇನೆ, ಸರ್ವೇ ಕಾರ್ಯ
ನಡೆದಿದ್ದು ಆಗ ಸದರಿ ಕಾಲು ದಾರಿಯನ್ನು ಅಳಿಯುವ ವಿಷಯವಾಗಿ ರೇವಣಸಿದ್ದ ಹಾಗೂ ರಾಮಚಂದ್ರಪ್ಪ ಇವರ
ಮದ್ಯ ವಾದವಿವಾಧ ನಡೆದಿದ್ದು ಆಗ ನಾನು ನಮ್ಮ ಹೊಲಕ್ಕೆ ಹೋಗಲು ಪೂರ್ವಜರಿಂದ ದಾರಿ ಇದ್ದು ಸದರಿ
ದಾರಿ ಲೆಕ್ಕ ಬಿಟ್ಟು ಜಮೀನು ಖರೀದಿ ಮಾಡಬೇಕೆಂದು ರಾಮಚಂದ್ರ ಇವರಿಗೆ ಹೇಳುತ್ತಿದ್ದೇನು
ಅಷ್ಟರಲ್ಲಿಯೇ ರಾಮಚಂದ್ರ ಹಾಗೂ ಅವರ ಮಕ್ಕಳಾದ ಶ್ರೀಶೈಲ ತಂದೆ ರಾಮಚಂದ್ರಪ್ಪ ವಾಣಿ, ಲಿಂಗರಾಜ
ತಂದೆ ರಾಮಚಂದ್ರಪ್ಪ ವಾಣಿ, ನಾಗರಾಜ ತಂದೆ ರಾಮಚಂದ್ರಪ್ಪ ವಾಣಿ ಮತ್ತು ಇವರ ಪರವಾಗಿ
ಅವರ ಸಂಬಂಧಿಕರಾದ ಅಶೋಕ ತಂದೆ ಲಕ್ಷ್ಮಣ ಬುಗಶೆಟ್ಟಿ,
ಹಣಮಂತರಾಯ ತಂದೆ ಶಂಕ್ರೇಪ್ಪ ಬುಗಶೆಟ್ಟಿ, ಲಕ್ಷ್ಮಣ
ತಂದೆ ಶಂಕ್ರೇಪ್ಪ ಬುಗಶೆಟ್ಟಿ ಹಾಗೂ ಶಿವಲಿಂಗಪ್ಪ ತಂದೆ ಹಣಮಂತರಾಯ ಬುಗಶೆಟ್ಟಿ ಇವರೆಲ್ಲರು ಕೂಡಿಕೊಂಡು
ನನಗೆ ಎಲ್ಲರು ಸೇರಿ ಏ ಮಗನ್ಯಾ ಹೊಲ್ಯಾ ಎಲ್ಲಿಗ್ಯಾಕ ಹತ್ತಲ್ಯಾಕ ನಿನ್ನಸಲುವಾಗಿ ಒಂದು ನಂಬರ
ಹೊಲ ಇಟ್ಟಿವಿ ನಿನಗ ಯಾವುದೇ ಕಾರಣಕ್ಕೂ ನಿನಗ ದಾರಿ ಕೊಡುವುದಿಲ್ಲ ನೀವ ಹೊಲೇರು ನಮ್ಮದೇನು
ಕಿತ್ಕೋತಿರಿ ಕಿತ್ಕೋರಿ ಎಂದು ಅವಾಚ್ಯ ಶಬ್ದಗಳಿಂದ ಎಲ್ಲರು ಬೈಯುತ್ತಾ ಶ್ರೀಶೈಲನು ಹಾಗೂ
ಲಿಂಗರಾಜ ಇವರು ಕೈಯಿಂದ ನನ್ನ ಎದೆಯ ಮೇಲೆ ಹಾಗೂ ಎಡಗಡೆ ಕಪಾಳ ಮೇಲೆ ಹೊಡೆಯುತ್ತಿರುವಾಗ ನನ್ನ
ತಮ್ಮನಾದ ನಿಂಗಪ್ಪನು ಬಿಡಿಸಲು ಬಂದಾಗ ನಾಗರಾಜ ಮತ್ತು ಅಶೋಕ ಇವರು ನನ್ನ ತಮ್ಮನಿಗೆ ಕಾಲಿನಿಂದ
ಜೋರಾಗಿ ಒದ್ದಿದ್ದರಿಂದ ನನ್ನ ತಮ್ಮನು ನೆಲಕ್ಕೆ ಬಿದ್ದಿದ್ದು ಅದರಿಂದ ಸೊಂಟಕ್ಕೆ
ಒಳಪೆಟ್ಟಾಗಿದ್ದು ಅಲ್ಲದೇ ಇಬ್ಬರು ಸೇರಿ ಕೈಯಿಂದ ಹೆಡಕಿನ ಮೇಲೆ ಹೊಡೆಯುತ್ತಿರುವಾಗ ನಮ್ಮ
ಚಿಕ್ಕಪ್ಪನಾದ ಮಲ್ಲಿಕಾರ್ಜುನ ಇವರು ಬಿಡಿಸಲು ಬಂದಾಗ ಶಿವಲಿಂಗಪ್ಪ ಮತ್ತು ಲಕ್ಷ್ಮಣ ಹಾಗೂ
ಹಣಮಂತರಾಯ ಇವರುಗಳು ನಮ್ಮ ಚಿಕ್ಕಪ್ಪನಿಗೆ ಒತ್ತಿ ಹಿಡಿದು ನೆಲಕ್ಕೆ ಕೇಡವಿ ಕಾಲಿನಿಂದ ಒದ್ದು
ಗಾಯಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಹಲ್ಲೆ ಪ್ರಕರಣ :
ನರೋಣಾ
ಠಾಣೆ : ಶ್ರೀಮತಿ ಸುಂದರಬಾಯಿ
ಗಂಡ ರಾಮಚಂದ್ರ ವಾಣಿ ಸಾ: ಕಡಗಂಚಿ ಗ್ರಾಮ ಇವರ ಗ್ರಾಮದ ಸೀಮಾಂತರದ ಸರ್ವೇ ನಂ. 7/9 ರಲ್ಲಿ ನನ್ನ
ಹೆಸರಿನಲ್ಲಿ 5 ಎಕರೆ ಜಮೀನು ಇದ್ದು
ಸದರಿ ಜಮೀನಿನ ಬಂದಾರಿಗೆ ಹೊಂದಿ ಸುಮಾರು 8 ಅಡಿಯಷ್ಟು ಅಗಲದ ಕಾಲು ದಾರಿ ಇರುತ್ತದೆ, ಇದೆ ಕಾಲು ದಾರಿಯಿಂದ
ನಮ್ಮ ಹೊಲದ ಮೇಲಿನ ಹೊಲದವರು ಮತ್ತು ನಮ್ಮೂರಿನ ಹರಿಜನ ಸಮಾಜದ ಲದ್ದಿ ಹೊಲದವರು ಹೊಲಕ್ಕೆ ಹೋಗಿ
ಬರುವುದು ಮತ್ತು ಎತ್ತುಗಳನ್ನು ಹೊಡೆದುಕೊಂಡು ಹೋಗುವುದು ಮಾಡುತ್ತಾರೆ ಆದರೆ ನಮ್ಮೂರಿನ ವಿಠಲ
ತಂದೆ ಬೀಮಾಶಂಕರ ದನ್ನಿ ಹಾಗೂ ಅವರ ತಮ್ಮ ನಿಂಗಪ್ಪ ತಂದೆ ಬೀಮಾಶಂಕರ ದನ್ನಿ ಇವರುಗಳು ಸದರಿ ಕಾಲು
ದಾರಿಯಿಂದ ಎತ್ತಿನ ಬಂಡಿ ಹೊಡೆದುಕೊಂಡು ಹೊಗುವುದು ಮತ್ತು ಟ್ರಾಕ್ಟರ ಚಲಾಯಿಸಿಕೊಂಡು ತಮ್ಮ
ಹೊಲಕ್ಕೆ ಹೋಗುವುದು ಮಾಡುತ್ತಿದ್ದುದ್ದರಿಂದ ನನ್ನ ಗಂಡ ಹಾಗೂ ನನ್ನ ಮಕ್ಕಳು ನಮ್ಮ ಹೊಲದಾಗಿನಿಂದ
ಕಾಲುದಾರಿ ಮಾತ್ರ ಇದ್ದು ಟ್ರಾಕ್ಟರ ಮತ್ತು ಬಂಡಿ ತೆಗೆದುಕೊಂಡು ಹೊಗಬೇಡಿರಿ ಇದರಿಂದ ನಮ್ಮ ಬೆಳೆ
ಹಾನಿ ಆಗುತ್ತದೆ ಎಂದು ಹೇಳಿದರು ಸಹ ವಿಠಲ ಹಾಗೂ ನಿಂಗಪ್ಪ ಇವರು ನನ್ನ ಗಂಡ ಹಾಗೂ ನನ್ನ ಮಕ್ಕಳ
ಮಾತಿಗೆ ಬೆಲೆ ಕೊಡದೆ ಹಾಗೇ ನಮ್ಮ ಹೊಲದಾಗಿನ ಕಾಲು ದಾರಿ ಮೇಲಿಂದ ಬಂಡಿ ಮತ್ತು ಟ್ರಾಕ್ಟರ
ತೆಗೆದುಕೊಂಡು ಹೋಗುತ್ತಿದ್ದು ಈ ವಿಷಯವಾಗಿ ನಾವು ಅವರಿಗೆ ಕೇಳಿದರೆ ಅವರು ನಮ್ಮೊಂದಿಗೆ ತಕರಾರು
ಮಾಡುತ್ತ ನಮ್ಮ ಮೇಲೆ ದ್ವೇಷ ಬೆಳೆಸುತ್ತಾ ಬಂದಿರುತ್ತಾರೆ. ಹೀಗಿದ್ದು ಸದರಿ ನನ್ನ
ಹೆಸರಿನಲ್ಲಿರುವ ಹೊಲದ ಹದ್ದಬಸ್ತು ಮತ್ತು ಸರ್ವೇಗಾಗಿ ಅರ್ಜಿ ಸಲ್ಲಿಸಿದ್ದು ಅದರಂತೆ ಭೂ ಮಾಪಕ
ಅಧಿಕಾರಿಗಳು ಸದರಿ ಹೊಲದ ಹದ್ದ ಬಸ್ತು ಮತ್ತು ಸರ್ವೆ ಕುರಿತು ದಿನಾಂಕ:- 30/01/2017 ರಮದು ನಿಗದಿ ಪಡಿಸಿ
ಸುತ್ತಮುತ್ತ ಹೊಲದವರಿಗೆ ನೊಟಿಸ್ ಹೊರಡಿಸಿರುತ್ತಾರೆ, ಇದೆ ರೀತಿಯಾಗಿ ಇಂದು ದಿನಾಂಕ:- 30/01/2017 ರಂದು ಮುಂಜಾನೆ 10:00 ಗಂಟೆ ಸುಮಾರಿಗೆ ಭೂ
ಮಾಪಕ ಅಧಿಕಾರಿಗಳು ನಮ್ಮ ಹೊಲಕ್ಕೆ ಬಂದು ಭೂ ಮಾಪನ ಮತ್ತು ಹದ್ದಬಸ್ತು ಕಾರ್ಯದಲ್ಲಿ ಮುಗಿಸಿ
ನಮ್ಮ ಹೊಲದ ಪಕ್ಕದಲ್ಲಿ ಇರುವ ಅಂಬಾರಾಯ ತಂದೆ ಶಾಂತಪ್ಪ ಗಡಬಳ್ಳಿ ಇವರ ಹೊಲದಲ್ಲಿ ಕುಳಿತಿದ್ದು
ಅವರೊಂದಿಗೆ ನಾನು ಹಾಗೂ ನನ್ನ ಗಂಡ ಮತ್ತು ನನ್ನ ಮಕ್ಕಳಾದ ನಾಗರಾಜ, ಲಿಂಗರಾಜ, ಶ್ರೀಶೈಲ ಹಾಗೂ ಸೊಸೆ
ಉಮಾದೇವಿ ಗಂಡ ನಾಗರಾಜ ವಾನಿ ರವರೆಲ್ಲರು ಸಹ ಮಾತನಾಡುತ್ತಾ ಸದರಿ ಅಂಬಾರಾಯ ಗಡಬಳ್ಳಿ ಇವರ
ಹೊಲದಲ್ಲಿ ಕುಳಿತಿರುವಾಗ 11:30 ಎ.ಎಮ್ ಕ್ಕೆ ವಿಠಲ
ತಂದೆ ಬೀಮಾಶಂಕರ ದನ್ನಿ ನಿಂಗಪ್ಪ ತಂದೆ ಬೀಮಾಶಂಕರ ದನ್ನಿ, ಶ್ರೀಶೈಲ ತಂದೆ ವಿಠಲ ದನ್ನಿ, ಶಶಿಕಾಂತ ತಂದೆ ವಿಠಲ
ದನ್ನಿ, ಶಿವಾನಂದ ತಂದೆ ವಿಠಲ
ದನ್ನಿ, ಸೂರ್ಯಕಾಂತ ತಂದೆ
ನಿಂಗಪ್ಪ ದನ್ನಿ, ಗುರುಶಾಂತಪ್ಪ ತಂದೆ
ನಿಂಗಪ್ಪ ದನ್ನಿ ಹಾಗೂ ಮಲ್ಲಿಕಾರ್ಜುನ ತಂದೆ ಶಾಂತಪ್ಪ ದನ್ನಿ ರವರೆಲ್ಲರು ಗುಂಪು ಕಟ್ಟಿಕೊಂಡು
ಬಂದವರೆ ನನ್ನ ಗಂಡನಿಗೆ ಏ ಭೋಸಡಿ ಮಗನೇ ನಮಗೆ ನಮ್ಮ ಹೊಲಕ್ಕೆ ಬಂಡಿ ಹಾಗೂ ಟ್ರಾಕ್ಟರ ಹೋಗಿ ಬರಲು
ದಾರಿಬಿಟ್ಟು ನಿನ್ನ ಹೊಲ ಹದ್ದಬಸ್ತು ಮಡಿಕೊ ಎಂದು ನನ್ನ ಗಂಡನಿಗೆ ಅವಾಚ್ಯ ಶಬ್ದಗಳಿಂದ
ಬಯ್ಯುತ್ತಿರುವಾಗ ನನ್ನ ಮಕ್ಕಳಾದ ಶ್ರೀಶೈಲ, ಲಿಂಗರಾಜ, ನಾಗರಾಜ ರವರುಗಳು ಜಗಳ ಬಿಡಿಸಲು ಹೋದಾಗ ವಿಠಲ, ನಿಂಗಪ್ಪ ಮತ್ತು
ಶ್ರೀಶೈಲ ರವರು ಕೂಡಿ ನನ್ನ ಮಕ್ಕಳಿಗೆ ಕೈಯಿಂದ ಹೊಡೆ ಬಡೆ ಮಾಡುತ್ತಿರುವಾಗ ನಾನು ಮತ್ತು ನನ್ನ
ಸೊಸೆಯಾದ ಉಮಾದೇವಿ ಇಬ್ಬರು ಕೂಡಿ ಜಗಳ ಬಿಡಿಸುತ್ತಿರುವಾಗ ಶಶಿಕಾಂತ ಶಿವಾನಂದ ಮತ್ತು ಸೂರ್ಯಕಾಂತ
ರವರುಗಳು ಕೂಡಿ ನನಗೆ ಹಾಗೂ ನನ್ನ ಸೊಸೆಗೆ ಕೈಯಿಂದ ಹೊಡೆಬಡೆ ಮಾಡಿ ಕೂದಲು ಹಿಡಿದು ಎಳೆದಾಡಿ
ದಂಗಾ ಮಸ್ತಿ ಮಾಡುತ್ತಿರುವಾಗ ಅಲ್ಲೆ ಇದ್ದ ನಮ್ಮ ಸಂಬಂಧಿಕನಾದ ಅಶೋಕ ತಂದೆ ಲಕ್ಷ್ಮಣ ಬುಗಶೆಟ್ಟಿ
ಇವರು ಜಗಳ ಬಿಡಿಸಲು ಬಂದಾಗ ಗುರುಶಾಂತ ಮತ್ತು ಮಲ್ಲಿಕಾರ್ಜುನ ಇವರುಗಳು ಕೂಡಿ ಅವರನ್ನು ನೆಲಕ್ಕೆ
ಕೆಡವಿ ಕಾಲಿನಿಂದ ಹೊಟ್ಟೆ ಮೇಲೆ ಮತ್ತು ಬೆನ್ನಿಗೆ ಒದ್ದಿರುತ್ತಾರೆ ಅಂತಾ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಬ್ರಹ್ಮಪೂರ ಠಾಣೆ : ಶ್ರೀ ಶರಣಬಸಪ್ಪಾ ತಂದೆ ನಾಗೆಂದ್ರಪ್ಪಾ ಪಾಟೀಲ ಸಾ|| ಮನೆ ನಂ:2-907 ಗುಬ್ಬಿ ಕಾಲನಿ ಸೇಡಂ ರೋಡ ಕಲಬುರಗಿ ರವರು, ಅನ್ನಪೂರ್ಣ ಕ್ರಾಸ ಹತ್ತಿರವಿರುವ ಪಶು ವೈದ್ಯಕೀಯ ಆಸ್ಪತ್ರೆ ಎದುರಿಗೆ ಇರುವ ಖಾಲಿ
ಜಾಗದಲ್ಲಿ ಹೊಸದಾಗಿ ಗಾಂಧಿ ಭವನ ಅಂತಾ ಕಾಂಗ್ರೆಸ್ ಕಛೇರಿ ಕಟ್ಟಡವನ್ನು ಗುತ್ತಿಗೆಯಿಂದ
ಪಡೆದುಕೊಂಡು ಈಗ ಸುಮಾರು 4 ತಿಂಗಳಿಂದ ಕಟ್ಟಡ ಪ್ರಾರಂಭ ಮಾಡಿದ್ದು ಸದರ ಕಟ್ಟಡದ
ಮೇಲುಸ್ತುವಾರಿಯನ್ನು ಗೌಸ ತಂದೆ ಮಹ್ಮದ ಗನಿ ಸಾ|| ಅಫಜಲಪೂರ, ವೀರಭದ್ರ ಸ್ವಾಮಿ ಇಂಜಿನೀಯರ ಇವರು ನೋಡಿಕೊಳ್ಳುತ್ತಾರೆ. ಪ್ರತಿ ದಿವಸ ನಾವು ಕೆಲಸ
ಮುಗಿಸಿಕೊಂಡು ನಾನು ಮತ್ತು ಕೆಲಸಗಾರರು ಕಟ್ಟಡದ ಕಾಮಗಾರಿಗೆ ಬೇಕಾಗುವ ಸಾಮಾನುಗಳನ್ನು ಅಲ್ಲೆ
ಬಿಟ್ಟು ಹೋಗುತ್ತೇವೆ. ದಿನಾಂಕ:27/01/2017 ರಂದು ಕಾಮಗಾರಿ ಕಟ್ಟಡ ಸಲುವಾಗಿ ಇಟ್ಟಿದ್ದ 169
ಶೆಟರಿಂಗ ಪ್ಲೇಟ್ಸ್ ಮತ್ತು ಸ್ಟೀಲ್ ರಿಂಗ್ಸ ಅಂದಾಜು 700 ಕೆ.ಜಿ ರಾತ್ರಿ ವೇಳೆಯಲ್ಲಿ ಯಾರೋ
ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಈ ಘಟನೆಯು ದಿನಾಂಕ:27/01/2017 ರಂದು ರಾತ್ರಿ
11:00 ಗಂಟೆಯಿಂದ ದಿನಾಂಕ:28/01/2017ರ ಬೆಳಗಿನ ಜಾವ 5:00 ಗಂಟೆಯ ಮದ್ಯದ ಅವಧಿಯಲ್ಲಿ
ಜರುಗಿರುತ್ತದೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಬ್ರಹ್ಮಪೂರ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.