POLICE BHAVAN KALABURAGI

POLICE BHAVAN KALABURAGI

14 October 2012

GULBARGA DISTRICT REPORTED CRIME


ವರದಕ್ಷಿಣೆ ಕಿರುಕುಳ ಪ್ರಕರಣ:
ಮಹಾಗಾಂವ ಪೊಲೀಸ್  ಠಾಣೆ :ಶ್ರೀಮತಿ ಅನ್ನಪೂರ್ಣ ಗಂ ಶಿವಾನಂದ ಚೂರಿ ವ||22 ವರ್ಷ ಸಾ|| ಹರಸೂರ ತಾ||ಜಿ|| ಗುಲಬರ್ಗಾ ರವರು ನನಗೆ ಎರಡು ವರ್ಷಗಳ ಹಿಂದೆ ಹರಸೂರ ಗ್ರಾಮದ ಶಿವಾನಂದ ಇತನು ಆಗಾಗ ನಮ್ಮೂರಿಗೆ ಬರುತ್ತಿರುವುದರಿಂದ ನಮ್ಮಿಬರ ಮಧ್ಯ ಪ್ರಿತಿಯಾಗಿ ಒಂದೂವರೆ ವರ್ಷದ ಹಿಂದೆ ನಾನು ಮತ್ತು ಶಿವಾನಂದ ಇಬ್ಬರೂ ಚಿತ್ತಾಪೂರ ರಜೀಸ್ಟರ ಆಫೀಸದಲ್ಲಿ ಮದುವೆಯಾಗಿದ್ದು, ಮದುವೆ ಕಾಲಕ್ಕೆ ನಾನು ತವರು ಮನೆಯವರಿಗೆ ವಿರುದ್ದವಾಗಿ ಮದುವೆಯಾಗಿದ್ದರಿಂದ ನನ್ನ ತವರು ಮನೆಯವರು ಏನು ಕೊಟ್ಟಿರುವದಿಲ್ಲ. ಮದುವೆಯಾದ ನಂತರ  ನಾಲ್ಕು-ಐದು ತಿಂಗಳ ನಂತರ ನನ್ನ ತಾಯಿಯಾದ ಶಾಂತಾಬಾಯಿ ಇವಳು ನಮ್ಮ ಮನೆಗೆ ಬಂದಳು, ನನ್ನ ಗಂಡನಾದ ಶಿವಾನಂದ ,ರೇವಣಸಿದ್ದಪ್ಪ ಚೂರಿ, ಭಾವನಾದ ಬಸವ , ಮತ್ತು ಅತ್ತೆ ಮರೇಮ್ಮ ಮಾವ ರೇವಣಸಿದ್ದಪ್ಪ  ಇವರೆಲ್ಲರೂ ನನ್ನನ್ನು ನಿನ್ನ ತವರು ಮನೆಯವರು ವರದಕ್ಷಿಣೆ  ಏನು? ವರದಕ್ಷಿಣೆ ಕೊಟ್ಟ ಹಾಗೆ ನಮ್ಮ ಮನೆಗೆ ಬರುತ್ತಾರೆ, ನಾಚಿಕೆ ಅನ್ನೊದು ಇಲ್ವಾ ಅಂತಾ ದಿನಾಲು ಅವಾಚ್ಯವಾಗಿ ನಿನ್ನ ತವರು ಮನೆಯವರು ನಮ್ಮ ಮನೆಗೆ ಬರಕೂಡದು, ನೀನು ನಿನ್ನ ತವರು ಮನೆಯಿಂದ ವರದಕ್ಷಿಣೆ  ತರಬೇಕು ಅಂತಾ ನನ್ನಗೆ ದಿನಾಲು ಹೊಡೆಬಡೆ ಮಾಡುತ್ತಾ ಮಾನಸಿಕ ಹಾಗೂ ದೈಹಿಕ  ಹಿಂಸೆ ಕೊಡುತ್ತಿದ್ದರು.  ನನಗೆ 5 ತಿಂಗಳ ಪುಷ್ಪಾ ಅಂತಾ ಮಗಳಿರುತ್ತಾಳೆ. ನನ್ನ ಗಂಡನ ಮನೆಯವರು ನನ್ನೊಂದಿಗೆ ಜಗಳ ತೆಗೆದು ಹೊಡೆಬಡೆ ಮಾಡಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 83/2012 ಕಲಂ 498 (ಎ) 504,506, ಸಂ 34 ಐ,ಪಿ,ಸಿ ಮತ್ತು 3 & 4 ಡಿ,ಪಿ, ಆಕ್ಟ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

GULBARGA DISTRICT REPORTED CRIME


ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ್ ಠಾಣೆ:ದಿನಾಂಕ:13/10/2012 ರಂದು ಸಾಯಾಕಾಂಲ 6:00 ಗಂಟೆಯಿಂದ 6:30 ಗಂಟೆಯ  ಮಧ್ಯದ ಅವಧಿಯಲ್ಲಿ ಮೃತ ಅಪರಿಚಿತ ಹೆಣ್ಣು ಹುಡಗಿ ಅಂದಾಜ 15-16  ವರ್ಷ ವಯಸ್ಸಿನವಳು ಗುಲಬರ್ಗಾ ಕಡೆಯಿಂದ ಕೆರೆಬೋಸಗಾ ಕ್ರಾಸ ಕಡೆಗೆ ರೋಡಿನ ಬದಿಯಿಂದ ನಡೆದುಕೊಂಡು  ಹೋಗುತ್ತಿದ್ದಾಗ ಹಿಂದಿನಿಂದ ಅಂದರೆ ಗುಲಬರ್ಗಾ ಕಡೆಯಿಂದ ಪ್ರಭು ತಂದೆ ಸಿದ್ದಣ್ಣಾ ಇತನು ತನ್ನ ಮೋಟಾರ ಸೈಕಲನ್ನು ಅತೀವೇಗದಿಂದ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಅಪರಿಚಿತ ಹುಡುಗಿಗೆ ಡಿಕ್ಕಿ  ಹೊಡೆದಿದ್ದರಿಂದ, ಅವಳ  ತಲೆಗೆ ಭಾರಿ ರಕ್ತಗಾಯ ಸ್ದಳದಲ್ಲಿಯೇ ಮೃತ ಪಟ್ಟಿದ್ದು ಅಪಘಾತ ಪಡಿಸಿದ ಮೋಟಾರ ಸೈಕಲ  ಸವಾರ ತನ್ನ ವಾಹನ ನಿಲ್ಲಿಸದೇ ಹಾಗೆಯೇ  ಹೋಗಿರುತ್ತಾನೆ.ಸದರಿ  ರೋಡಿಗೆ ಹೋಗಿ ಬರುವ ವಾಹನಗಳು ಮೃತಳ ತಲೆಯ ಮೇಲಿಂದ  ಹೋಗಿದ್ದರಿಂದ ಅವಳ ತಲೆ ಒಡೆದು  ಮೆದುಳು  ಚೆಲ್ಲಾಪೆಲ್ಲಿಯಾಗಿ ರೋಡಿಗೆ ಬಿದ್ದಿದ್ದು ಇರುತ್ತದೆ. ಮೋಟಾರ ಸೈಕಲ ನಂಬರ ತಿಳಿದಿರುವದಿಲ್ಲ ಅಂತಾ ಶ್ರೀ ಬ್ರಹ್ಮಾನಂದ ತಂದೆ ವಿಷ್ಟು ಕೋಥಾಳೆ ಸಾ:ಆಳಂದ ಚೆಕ್ಕಪೊಸ್ಸ ಗುಲಬರ್ಗಾರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ:328/2012 ಕಲಂ 279, 304 (ಎ) ಐಪಿಸಿ ಸಂಗಡ 187 ಐ.ಎಂ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಕೊಂಡಿರುತ್ತಾರೆ.