POLICE BHAVAN KALABURAGI

POLICE BHAVAN KALABURAGI

03 January 2012

GULBARGA DIST REPORTED CRIMES

ಅಪಘಾತ ಪ್ರಕರಣ:
ಫರಹತಾಬಾದ ಪೊಲೀಸ್ ಠಾಣೆ :
ಶ್ರೀ ಅಬ್ದುಲ್ ರಜಾಕ ತಂದೆ ಶಮಸೋದ್ದಿನ ಇನಾಮಾದಾರ ಸಾ: ಸರಡಗಿ(ಬಿ) ತಾ:ಜಿ: ಗುಲಬರ್ಗಾರವರು ನನ್ನ ತಮ್ಮನಾದ ರುಕ್ಮೋದ್ದಿನ್ ಇತನು ತನ್ನ ಹೊಲದಲ್ಲಿ ಬೆಳದಿದ್ದ 11 ಚೀಲ ತೊಗರಿಯನ್ನು ತೂಕ ಮಾಡುವ ಕುರಿತು ನನ್ನ ಮೋಟಾರ ಸೈಕಲ್ ನಂ. ಕೆಎ-32 ಜೆ-2435 ಕವಾಸಕಿ ಬಜಾಜ ನೇದ್ದರ ಮೇಲೆ ಸರಡಿಗಿಯಿಂದ ಫರಹತಾಬಾದಕ್ಕೆ ಹೋಗಿದ್ದು ಸರಡಗಿ (ಬಿ) ಕ್ರಾಸ್ ಹೆದ್ದಾರಿಯ ಮೇಲೆ ಒಬ್ಬ ಮನುಷ್ಯನಿಗೆ ರಸ್ತೆ ಅಪಘಾತವಾಗಿದೆ ಅಂತ ಸುದ್ದಿ ತಿಳಿದುಕೊಂಡು ಕೂಡಲೆ ನಾನು ಮತ್ತು ನನ್ನ ತಮ್ಮ ಖಲಿಲ ಹಾಗೂ ಸಿದ್ದಿಪಾಶಾ, ಪಿರುಶಾ ಪಟೇಲ್ ಇವರೊಂದಿಗೆ ಘಟನಾ ಸ್ಥಳಕ್ಕೆ ಬೇಟಿ ನೀಡಿ ನೋಡಲಾಗಿ ನನ್ನ ತಮ್ಮನು ರಸ್ತೆಯ ಮೇಲೆ ಅಪಘಾತ ಹೊಂದಿ ಮಾತನಾಡದ ಸ್ಥಿತಿಯಲ್ಲಿ ಇದ್ದನು ಪರೀಶಿಲಿಸಿ ನೋಡಲಾಗಿ ನನ್ನ ತಮ್ಮ ತನ್ನ ಮೋಟಾರ ಸೈಕಲ್ ನ್ನು ಅತೀ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ವೇಗದ ನಿಯಂತ್ರಣ ತಪ್ಪಿ ರಸ್ತಯ ಮೇಲೆ ಬಿದ್ದು ಗದ್ದಕ್ಕೆ ಹೊಟ್ಟೆಗೆ ಮತ್ತು ತಲೆಗೆ ಭಾರಿ ಒಳಪೆಟ್ಟಾಗಿ ಗಾಯಹೊಂದ್ದಿದ್ದು ಉಪಚಾರ ಕುರಿತು 108 ಅಂಲುಲೆನ್ಸದಲ್ಲಿ ಗುಲಬರ್ಗಾಕ್ಕೆ ತೆಗೆದುಕೊಂಡು ಹೋಗುತ್ತಿದ್ದಾಗ ಮಾರ್ಗ ಮದ್ಯ ಮೃತಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:03/2012 ಕಲಂ 279. 304(ಎ) ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಅಪಘಾತ ಪ್ರಕರಣ:
ಆಳಂದ ಠಾಣೆ: ಶ್ರೀಮತಿ ಸೀತಾಬಾಯಿ ಗಂಡ ನಾಗಪ್ಪ ಕುಚನ್ ಸಾ:ನರೋಣ ಹಾ.ವ ಬೀಮನಗರ ಆಳಂದ ರವರು ನನ್ನ ಗಂಡನು ಆಳಂದ ತಾಲುಕಿನ ಖಾನಾಪುರ ಗ್ರಾಮದ ಮೌಲಾ ಸರಸಂಬಿ ಇವರ ತೋಟದ ಹೊಲವನ್ನು ಆರ್ದ ಪಾಲಿನಿಂದ ಮಾಡಿರುತ್ತಾನೆ. ನನ್ನ ಗಂಡನು ಗುಲ್ಬರ್ಗಾದಿಂದ ಬಾರೆ ಹಣ್ಣ ಮಾರಿಕೊಂಡು ಮನೆಗೆ ಬಂದು ನನಗೆ ಪೋನ ಮಾಡಿ ಹೇಳಿದೆನೆಂದರೆ ನಾನು ಹೊಲಕ್ಕೆ ಬರಲಿ ಹೇಗೆ ಅಂದಾಗ ನಾನು ಒಬ್ಬಕೆ ಇದ್ದು ಜೊತೆಯಲ್ಲಿ ವಯಸ್ಸಾದ ಬಂಡಪ್ಪನವರು ಇದ್ದಾರೆ ನೀನು ಬಾ ಎಂದು ಹೇಳಿದೆನು ಅದಕ್ಕೆ ನನ್ನ ಗಂಡನು ಬರುತ್ತೆನೆಂದು ಹೇಳಿದ್ದರು, ರಾತ್ರಿಯಾದರು ಬರಲಿಲ್ಲ ಹಾಗೆನೆ ಹೊಲದಲ್ಲಿ ಮಲಗಿಕೊಂಡೆನು. ದಿನಾಂಕ 03/01/2012 ರಂದು ಬೆಳಿಗ್ಗೆ 6-7. ಗಂಟೆ ಸುಮಾರಿಗೆ ನಾವು ಮಾಡಿದ ಹೊಲದ ಪಕ್ಕದ ಹೋಲದವನಾದ ಬಂಗಾರಪ್ಪ ಸರಸಂಬಿ ರವರು ನಿನ್ನ ಗಂಡನಾದ ನಾಗಪ್ಪ ಶವವು ಖಾನಾಪುರ ಬಸ್ಸ ಸ್ಟಾಂಡದಿಂದ ಅಂದಾಜು 60 ಪೀಟ ಮೇಲೆ ವಗದರಿ –ಆಳಂದ ರೋಡಿನ ಮೇಲೆ ಬಿದ್ದಿದೆ ಎಂದು ತಿಳಿಸಿದಾಗ ನಾನು ಗಾಬಾರಿಯಾಗಿ ಹೋಗಿ ನೋಡಲಾಗಿ ನನ್ನ ಗಂಡನ ಶವವು ಅಂಗಾತಾಗಿ ಇದ್ದು ಭಾರಿ ರಕ್ತಗಾಯವಾಗಿ ಬಾಯಿಯಿಂದ ರಕ್ತ ಬಂದಿರುತ್ತದೆ ಮತ್ತು ಶವದ ಹತ್ತಿರ ವಾಹನದ ಗಾಜಿನ ಚೂರುಗಳು ಮಡಗಾರ್ಡ ಚೂರು ಬಿದ್ದಿದು ಯಾವದೋ ವಾಹನ ಅಪಘಾತಪಡಿಸಿದರಿಂದ ಭಾರಿಗಾಯವಾಗಿ ಸ್ಥಳದಲ್ಲೇ ಮೃತ ಪಟ್ಟಿರುವದು ಕಂಡುಬಂದಿರುತ್ತೆದೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 3/2012 ಕಲಂ 279, 304 (ಎ) ಐಪಿಸಿ ಸಂಗಡ 187 ಐಎಮವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DIST REPORTED CRIMES

ಕೊಲೆ ಪ್ರಕರಣ:
ಮಾಹಾಗಾಂವ ಗ್ರಾಮೀಣ ಠಾಣೆ:
ಶ್ರೀ ರಮೇಶ ತಂದೆ ರೇವಣಸಿದ್ಧಪ್ಪ ಹುಡೇದ ಸಾ: ನಾಗೂರ ಗ್ರಾಮ ತಾ:ಜಿ: ಗುಲಬರ್ಗಾರವರು ನನ್ನ ತಂದೆಗೆ ಇಬ್ಬರು ಹೆಂಡದಿರಿದ್ದು, ತಾನು ಮೊದಲನೆ ಹೆಂಡತಿಯ ಮಗನಾಗಿದ್ದು, ಎರಡನೆ ಹೆಂಡತಿಯಾದ ಕಮಲಾಬಾಯಿ ಇವಳಿಗೆ ಸೂರ್ಯಕಾಂತ, ಹಾಗೂ ನಾಗರಾಜ ಅಂತಾ ಇಬ್ಬರು ಮಕ್ಕಳಿದ್ದು, ಅವರ ಮತ್ತು ನನ್ನ ತಂದೆಯ ಮಧ್ಯೆ ಚಿತ್ತಾಪೂರ ತಾಲೂಕಿನ ಬೆಳಗುಂಪಿ ಗ್ರಾಮದಲ್ಲಿರುವ 10 ಎಕರೆ ಜಮೀನು ಸಂಬಂಧ ತಂಟೆ, ತಕರಾರು ನಡೆದಿದ್ದು, ಅಲ್ಲದೇ ಸಿವಿಲ ಕೋರ್ಟನಲ್ಲಿ ದಾವೆ ಹೂಡಿದ್ದು, ಸದರಿ 10 ಎಕರೆ ಜಮೀನು ಸಂಬಂಧ ಆಸ್ತಿ ಸಂಬಂಧ ಇಬ್ಬರು ವೈಷ್ಯಮ ಬೆಳೆದು ನನ್ನ ತಂದೆ ರೇವಣಸಿದ್ಧಪ್ಪ ಈತನಿಗೆ ದಿನಾಂಕ 30-12-2011 ರಿಂದ ದಿನಾಂಕ 01-01-2012 ರಂದು ಮಧ್ಯಾಹ್ನ 12 ಗಂಟೆಯ ಮಧ್ಯದ ಅವಧಿಯಲ್ಲಿ ಹರಸೂರ ಗ್ರಾಮದ ಸೀಮಾಂತರದಲ್ಲಿ ಬೆಣ್ಣೆ ತೋರೆ ಹತ್ತಿರ ನನ್ನ ತಂದೆಗೆ ಆಸ್ತಿಯ ವಿಷಯದಲ್ಲಿ ನನ್ನ ಮಲತಾಯಿ ಮಗ ಸೂರ್ಯಕಾಂತ ಮತ್ತು ಇತರರು ಕೂಡಿ ಕೊಲೆ ಮಾಡಿ ಅಪರಾಧವನ್ನು ಮುಚ್ಚಿ ಹಾಕುವ ಉದ್ದೇಶದಿಂದ ಅಲ್ಲದೇ ಸಾಕ್ಷಿ ನಾಶಪಡಿಸಲು ಶವವನ್ನು ಬೆಣ್ಣೆ ತೋರೆ ಹಳ್ಳದಲ್ಲಿ ಬಿಸಾಕಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 02/2012 ಕಲಂ 302, 201 ಸಂ.34 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈ ಕೊಂಡಿರುತ್ತಾರೆ.
ನಿಧಿ ಆಸೆಗಾಗಿ ಭೂಮಿ ಅಗೆದ ಪ್ರಕರಣ:
ಆಳಂದ ಪೊಲೀಸ ಠಾಣೆ:
ಶ್ರೀ ರಾಜೇಂದ್ರ ತಂದೆ ಕಾಶಿನಾಥ ದೇಶಮುಖ ಉ: ಗ್ರಾಮಪಂಚಾಯಿತಿ ಸದಸ್ಯ ಸಾ: ನೀರಗುಡಿ ರವರು ನಮ್ಮ ಗ್ರಾಮದಲ್ಲಿ ನನ್ನ ತಂದೆಯವರಿಗೆ ಸೇರಿದ ಪಿತ್ರಾರ್ಜಿತ ಆಸ್ತಿ ಹೊಲ ಸರ್ವೆ ನಂ 231 ನೇದ್ದು 5 ಎಕರೆ ಹೊಲ ಇದ್ದು ಸದರ ಹೋಲದಲ್ಲಿ ಹಿಂದಿನ ಕಾಲದಿಂದಲೂ ಘಂಟೇಪ್ಪ ಎಂಬ ದೇವರ ಗುಡಿ ಇದ್ದು ಒಂದು ಬೇವಿನ ಮರದ ಕೇಳಗೆ ಪತ್ರಾ ಸೆಡ್ಡ ಹಾಕಿ 2 ಕಲ್ಲಿನ ಮೂರ್ತಿ ಸ್ಥಾಪನೆ ಮಾಡಿ ದೇವರಿಗೆ ನಮ್ಮ ಮನೆಯವರಲ್ಲದೆ ಗ್ರಾಮಸ್ತರು ಸಹ ಮತ್ತು ಅಕ್ಕಪಕ್ಕದ ಹೊಲದವರು ಬಕ್ತಿಭಾವದಿಂದ ಮತ್ತು ಶ್ರೆದ್ದೆಯಿಂದ ಪೂಜೆಗೈಯುತ್ತಿದ್ದು ಮತ್ತು ವರ್ಷಕೊಮೆ ಸಾರ್ವಜನಿಕ ಖಾಂಡಮಾಡುತ್ತಿದ್ದು ಮತ್ತು ಹಿಂದಿನ ಕಾಲದಿಂದ ದೇವರ ಕೇಳಗೆ ಯಾವದೋ ನಿಧಿ ಇರುಬಹುದಂತಾ ಮೂಡ ನಂಬಿಕೆಯನ್ನು ಜನರು ಮತ್ತು ನಾವೂ ಸಹ ನಂಬಿಕೊಂಡು ಬಂದಿದ್ದು ಇರುತ್ತದೆ ಗ್ರಾಮದ ಸಿದ್ರಾಮ ಕೋಳಿ, ಅರುಣಕುಮಾರ ಕುಲಕರ್ಣಿ ಇವರ ಹೊಲದ ತೋಗರಿ ರಾಶಿ ಕಣದಲ್ಲಿ ಇದ್ದಾಗ ಮಧ್ಯರಾತ್ರಿ 1.00 ಎ.ಎಂ ಸುಮಾರಿಗೆ ಗ್ರಾಮದ ವಡ್ಡರ ಸುರೇಶ ಪವಾರ, ಮತ್ತು ಆತನ ಹೆಂಡತಿಯಾದ ಕಾವೇರಿ ಪವಾರ ಇವರು ಒಂದು ಬಜಾಜ ಮೋಟರ ಸೈಕಲ್ ಮೇಲೆ ರೋಡಿನ ಬ್ರಿಜ್ಡ ಹತ್ತಿರ ಬಂದು ವಾಹನ ನಿಲ್ಲಿಸಿ ಘಂಟೆಪ್ಪ ದೇವರ ಗುಡಿ ಹತ್ತಿರ ಹೋಗಿ 2 ಮೂರ್ತಿಗಳ ಎದುರಿನ ಜಾಗದಲ್ಲಿ ಅಂದಾಜು 4 ಪೀಟ ಆಳವಾಗಿ ನೆಲಕೆದರಿರುತ್ತಾರೆ. ರಾತ್ರಿ ಆ ಸ್ಥಳಕ್ಕೆ ಬರುವದಕ್ಕೆ ವಾಹನ ನಂ ಎಮ್ ಹೆಚ್ 12 ಬಿಹೆಚ್ 984 ಅಂತಾ ಗೊತ್ತಿರುತ್ತದೆ. ಇದನ್ನು ನಮ್ಮ ಗ್ರಾಮದ ಸುರೇಶ ಪವಾರ ಮತ್ತು ಆತನ ಹೆಂಡತಿ ಕಾವೇರಿ ಪವಾರ ನಮ್ಮ ಗ್ರಾಮದ ಸಾರ್ವಜನಿಕ ದೇವರ ಮತಿಯ ನಂಬಿಕೆಗಳನ್ನು ಅಪಮಾನಗೋಳಿಸಿ ಮತಿಯ ಭಾವನೆಗಳಿಗೆ ಅಘಾತವನ್ನುಂಟು ಮಾಡಿ ನಿಧಿ ಆಸೆಗಾಗಿ ದೇವರ ಸ್ಥಳದ ಜಾಗ ನಾಶೆಪಡಿಸಿರುತ್ತರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 02/2012 ಕಲಮ 295 ಸಂ 34 ಐಪಿಸಿ ಪ್ರಕರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಸಂಚಾರಿ ಪೊಲೀಸ್ ಠಾಣೆ:
ದಿನಾಂಕ: 02-01-2012 ರಂದು ಮದ್ಯಾಹ್ನ 3-15 ಗಂಟೆಯ ಸುಮಾರಿಗೆ ಮೃತ ಆಂಜನೇಯ ಅಲಿಯಾಸ್ ರಾಜು ಈತನು ಫಿಲ್ಟರ್ ಬೆಡ್ ದಿಂದ ಮುಸ್ಲೀಂ ಸಂಘದ ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ ಕೃಷ್ಟಾ ಟ್ರೇಡರ್ಸ ಎದುರಿನ ರೋಡಿನಲ್ಲಿ ಲಾರಿ ನಂ : KA 28 - 6054 ನೇದ್ದರ ಚಾಲಕನು ಅತೀವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಆಂಜನೇಯ ಈತನಿಗೆ ಡಿಕ್ಕಿ ಪಡಿಸಿದ್ದು ಡಿಕ್ಕಿ ಪಡಿಸಿದ್ದರಿಂದ ಆಂಜನೇಯ ಈತನಿಗೆ ತಲೆಗೆ ಭಾರಿ ಗಾಯ ಹೊಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಲಾರಿ ಚಾಲಕನು ತನ್ನ ಲಾರಿ ಸ್ವಲ್ಪ ಮುಂದೆ ಒಯ್ದು ಲಾರಿ ಸ್ಥಳದಲ್ಲಿಯೇ ಬಿಟ್ಟು ಓಡಿಹೋಗಿದ್ದು ಅಂತಾ ನನ್ನ ಅಳಿಯ ಸಚೀನ್ ಈತನು ಫೋನ್ ಮಾಡಿ ತಿಳಿಸಿದ್ದರಿಂದ ನಾನು ಶ್ರೀ ಶಂಕರ ತಂದೆ ರೇವಪ್ಪಾ ಬಾಳಿ ಸಾ: ಮನೆ ನಂ : 11-862/3 ಸಿ, ಅಶೋಕ ನಗರ ಗುಲಬರ್ಗಾರವರು ಲಾರಿ ಚಾಲಕನ ವಿರುದ್ದ ಕಾನೂನು ಕ್ರಮಕ್ಕಾಗಿ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 01/2012 279 , 304 (ಎ) ಐ.ಪಿ.ಸಿ ಸಂಗಡ 187 ಐ.ಎಮ.ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ,
ಕೊಲೆ ಯತ್ನ ಪ್ರಕರಣ:
ರೋಜಾ ಠಾಣೆ:
ಶ್ರೀ ಮಹ್ಮದ ಅಲಿ ತಂದೆ ಮಹ್ಮದ ಯಾಕ್ಯೂಬ ಅಲಿ ಸಾ:ಮನೆ ನಂ:7-835/ಬಿ ನಯಾ ಮೊಹಲ್ಲಾ ಗುಲಬರ್ಗಾರವರು ನಾನು ದಿನಾಂಕ: 02-01-2012 ರಂದು ಸರಕಾರಿ ಆಸ್ಪತ್ರೆಯಲ್ಲಿ ದುಖಾ:ಪತ ಹೊಂದಿ ಉಪಚಾರ ಪಡೆಯುತ್ತಿರುವ ಗಾಯಾಳು ಮಹ್ಮದ ಅಲಿ ತಂದೆ ಮಹ್ಮದ ಯಾಕ್ಯೂಬ ಅಲಿ ಸಾ: ನಯಾ ಮೊಹಲ್ಲಾ ಗುಲಬರ್ಗಾ ಇವರು ಸರಕಾರಿ ಆಸ್ಪತ್ರೆಯಿಂದ ಲೀಖೀತವಾಗಿ ಬರೆದಿರುವ ಅರ್ಜಿಯನ್ನು ಶ್ರೀ ಮಹ್ಮದ ಸೀರಾಜೋದ್ದೀನ್ ತಂದೆ ಶಮಶೋದ್ದೀನ್ ಇವರ ಕಡೆಯಿಂದ ಠಾಣೆಗೆ ಕಳುಹಿಸಿಕೊಟ್ಟಿದ್ದರ ಸಾರಾಂಶ ಏನೆಂದರೆ ದಿನಾಂಕ:02-01-2012 ರಂದು 4-30 ಗಂಟೆಗೆ ಮಹ್ಮದ ಫಯೀಮ್, ಮಹ್ಮದ ಇಬ್ರಾಹಿಮ್ , ಮಹ್ಮದ ಖಯ್ಯೂಮ್ , ಅಲೀಮ್ ಸಾ: ಎಲ್ಲರೂ ಮಿಜಗುರಿ ಇವರು ನನಗೆ 2009 ನೇ ಸಾಲೀನಲ್ಲಿ 4 ಪ್ಲಾಟಗಳು ಎಂ.ಎಸ್.ಕೆ ಮೀಲ್ಲ ಹುಸೇನಿ ಗಾರ್ಡನದಲ್ಲಿ 28 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದು ನನ್ನಿಂದ ಹಣ ಪಡೆದುಕೊಂಡು ನನಗೆ ಮಾರಾಟ ಮಾಡಿದ ಪ್ಲಾಟಗಳನ್ನು ನನ್ನ ಹೆಸರಿಗೆ ರಜೀಸ್ಟ್ರೇಷನ ಮಾಡದೆ ಬೇರೆಯವರಿಗೆ ರಜೀಸ್ಟ್ರೇಷನ ಮಾಡಿದ ವಿಷಯ ಗೋತ್ತಾಗಿ ಈ ವಿಷಯವನ್ನು ತಿಳಿದು ನಾನು ನನಗೆ ಮಾರಾಟ ಮಾಡಿದ ಮಿಜಗುರಿಯ ಮಹ್ಮದ ಫಯಿಮ್ ಇತನಿಗೆ ನೀನ್ನೆ ಈ ವಿಷಯ ಕೇಳಿದಾಗ ಅವನು ನನಗೆ ಇಂದು ಮಾತು ಕಥೆ ಆಡೂಣ ನನ್ನ ಹತ್ತಿರ ಬಾ ಅಂತಾ ಕರೆದು ನನಗೆ ಮತ್ತು ನನ್ನ ಚಿಕ್ಕಪ್ಪನ ಮಗನಿಗೆ ಅವಾಚ್ಯ ಶಬ್ದಗಳಿಂದ ಬೈದು ತಮ್ಮ ಹತ್ತಿರ ಇದ್ದ ಹತ್ಯಾರ ಮತ್ತು ಬಡಿಗೆಗಳಿಂದ ಹೊಡೆದು ರಕ್ತಗಾಯ ಮತ್ತು ಗುಪ್ತಗಾಯ ಪಡಿಸಿ ಕೊಲೆ ಮಾಡಲು ಪ್ರಯ್ನಿಸಿರುತ್ತಾರೆ ಮತ್ತು ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ:01/2012 ಕಲಂ: 323,324,504,506,307 ಸಂ: 34 ಐ.ಪಿ,ಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ನರೋಣಾ ಪೊಲೀಸ ಠಾಣೆ:
ಶ್ರೀ ರಾಜಕುಮಾರ ತಂದೆ ರೇವಣಸಿದ್ದಪ್ಪಾ ಶೀಲ್ಡ ಸಾ ಲಾಡಚಿಂಚೋಳಿ ರವರು ನಾನು ಎಂದಿನಂತೆ ನಮ್ಮ ಟಂ ಟಂ ಅಟೋವನ್ನು ಸ್ಟ್ಯಾಂಡಿನ ಹತ್ತಿರ ಪಾಳಿಯಲ್ಲಿರುವಾಗ ನಮ್ಮ ಗಾಡಿಯ ಮುಂದೆ ದುತ್ತರಗಾಂವ ಗ್ರಾಮದ ರಾಜಕುಮಾರ ಸಮರಿ ಇತನ ಗಾಡಿಯು ಮುಂದೆವಿದ್ದು ಮುಂಜಾನೆ 11-00 ಗಂಟೆಯ ಸುಮಾರಿಗೆ ನಮ್ಮೂರಿನ ಕೆಲವು ಪ್ರಯಾಣಿಕರು ಹೋಗುವವರಿದ್ದು ಅವರಿಗೆ ಆತನು ತನ್ನ ಗಾಡಿಯಲ್ಲಿ ತೆಗೆದುಕೊಂಡು ಹೋಗಬೇಕೆನ್ನುವಾಗ ನಾನು ಅವರಿಗೆ ನಮ್ಮೂರಿನ ಪ್ರಯಾಣಿಕರಿಗೆ ನಿಮ್ಮ ಗಾಡಿಯಲ್ಲಿ ತೆಗೆದುಕೊಂಡು ಹೋಗಬೇಡಿ ನಮ್ಮೂರಿನ ಪ್ರಯಾಣಿಕರಿಗೆ ನಾವು ತೆಗೆದುಕೊಂಡು ಹೋಗುತ್ತೆನೆಂದು ಅಂದಿದಕ್ಕೆ ಅವರ ಮತ್ತು ನಮ್ಮ ಮಧ್ಯದಲ್ಲಿ ಬಾಯಿ ಮಾತಿನಿಂದ ತಕರಾರು ಆಗುವ ಕಾಲಕ್ಕೆ ಅವರಲ್ಲಿ ನಾಗೇಶ ತಕರಾರು ಮಾಡಿರುತ್ತಾನೆ. ನಾನು ನನ್ನ ಕಾಕನ ಮಗನಾದ ಪ್ರದೀಫ , ಸಾತಲಿಂಗ ರವರು ಮಾತಾನಾಡುತ್ತಾ ಕುಳೀತುಕೊಂಡಾಗ ಅದೆ ವೇಳೆಗೆ ದುತ್ತರಗಾಂವ ಗ್ರಾಮದ ರೋಡಿನ ಕಡೆಯಿಂದ ರಾಜಕುಮಾರ ಕ್ರೋಜರ ಜೀಪಿನೊಂದಿಗೆ ಮತ್ತು ಇನ್ನೂ 2 ಜೀಪಿನಲ್ಲಿ ಕೆಲವು ಜನರು ಬಂದು ಹೊಡೆಯುತ್ತಿರುವಾಗ ನಮ್ಮ ತಾಯಿ ಕಸ್ತೂರಿಬಾಯಿ . ಚಿಕ್ಕಮ್ಮ ಶಿವಮ್ಮ. ಮಹಾದೇವಿ ರವರು ಓಡಿ ಬಂದು ಬಿಡಿಸಿಕೊಳ್ಳುವಾಗ ಅವರಿಗೂ ಕೂಡಾ ಹೊಡೆದು ಗಾಯವನ್ನು ಪಡಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 01/2012 ಕಲಂ 143 147 148 341 323 324 326 365 504 506 ಸಂ:149 ಐಪಿಸಿ ಮತ್ತು 3[1][10] ಎಸ್ ಸಿ ಎಸ್ ಟಿ ಎಕ್ಟ 1989 ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.