POLICE BHAVAN KALABURAGI

POLICE BHAVAN KALABURAGI

24 July 2011

GULBARGA DISTRICT REPORTED CRIEMS

ಮುಂಜಾಗ್ರತೆ ಅಡಿಯಲ್ಲಿ ಪ್ರಕರಣ:
ಆಳಂದ ಠಾಣೆ :
ಬಸ್ಸಪ್ಪ ತಂದೆ ಚನ್ನಪ್ಪ ನಾಗುರೆ ಸಾ: ಪಡಸಾವಳಿ ಮತ್ತು ಕುಪೆಂದ್ರ ತಂದೆ ಶರಣಪ್ಪ ಚಾರಿ ಸಂಗಡ ಒಬ್ಬ ಸಾ:ಪಡಸಾವಳಿ ಮದ್ಯ, ಸುಮಾರು ವರ್ಷಗಳಿಂದ ಪಡಸಾವಳಿ ಗ್ರಾಮದ ಹೊಲ ಸರ್ವೆ ನಂ 269 ನೆದ್ದರ ವಿಷಯದಲ್ಲಿ ವೈಮನಸ್ಸು ಇದ್ದು, ಸದರಿಯವರು ಈ ವಿಷಯವಾಗಿ ಯಾವುದೇ ಸಮಯದಲ್ಲಿ ಜಗಳ ಮಾಡಿಕೊಂಡು ಸಾರ್ವಜನಿಕ ಶಾಂತತೆ ಭಂಗ ಉಂಟು ಮಾಡಬಹುದು, ಎಂಬ ಕಾರಣಕ್ಕೆ 2 ಪಾರ್ಟಿ ಜನರ ಮೇಲೆ ಮುಂಜಾಗೃತ ಕ್ರಮದ ಅಡಿಯಲ್ಲಿ ಪ್ರರಕಣ ದಾಖಲಿಸಲಾಗಿದೆ.

ಹಲ್ಲೆ ಪ್ರಕರಣ:
ಆಳಂದ ಠಾಣೆ :
ಕಾಶಿನಾಥ ತಂದೆ ಭಿಮಾಶಂಕರ ಪಾಟೀಲ್ ಸಾ|| ಜಮಗಾ ಜೆ ರವರು ನನ್ನ ಮತ್ತು ರಾಜಶೇಖರ ಮಧ್ಯ ನಡುವೆ ಹೊಲ ಸರ್ವೆ ನಂ 119/5 ನೆದ್ದರ ವಿಷಯದಲ್ಲಿ ವೈಮನಸ್ಸು ಇದ್ದು ದಿನಾಂಕ 22/07/2011 ರಂದು ಸಾಯಂಕಾಲ ನನ್ನ ಮನೆ ಹತ್ತಿರ ರಾಜಕುಮಾರ ತಂದೆ ಪಂಡಿತರಾವ ಪಾಟೀಲ್ ಸಂಗಡ ಒಬ್ಬ ಸಾ:ಸಾ|| ಜಮಗಾ ಜೆ ಬಂದು ಅವಾಚ್ಯ ಶಬ್ದಗಳಿಂದ ಬೈದು ಕಬ್ಬಿಣದ ಸರಪಳಿಯಿಂದ ಮತ್ತು ಕೈಯಿಂದ ಹೊಡೆದು ರಕ್ತಗಾಯ ಗೊಳಿಸಿರುತ್ತರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲ ಮಾಡಿಕೊಳ್ಳಲಾಗಿದೆ.

ವಂಚನೆ ಪ್ರಕರಣ:

ಶಹಾಬಾದ ನಗರ ಠಾಣೆ : ದಿನಾಂಕ: 01-02-2010 ರಿಂದ 31-05-20110 ರ ಅವಧಿಯಲ್ಲಿ ನಗರ ಸಭೆ ಕಾರ್ಯಲಯದ ಪೌರಾಯುಕ್ತರು ಆಗಿದ್ದ ಎಮ್‌.ಬಿ. ನಡುವಿನಮನಿ ಸಿಎಮ್‌ಸಿ ಕಮೀಷನರ ಬಸವಕಲ್ಯಾಣ ರವರು ಕುಡಿಯುವ ನೀರಿನ ಸಾಮಾಗ್ರಿ, ನೈರ್ಮಲ್ಯ ಸಾಮಾಗ್ರಿ ಹಾಗು ವಿದ್ಯುತ್ ಸಾಮಾಗ್ರಿ ಖರೀದಿಯಲ್ಲಿ ಒಟ್ಟು 20,91102-00 ರೂಪಾಯಿಗಳು ದೂರುಪಯೋಗ ಮಾಡಿಕೊಂಡಿರುತ್ತರೆ ಅಂತಾ ರಾಜಾ ಪಟೇಲ ಐ/ಸಿ ಕಮೀಶನರ ಸಿಎಮ್‌ಸಿ ಶಹಾಬಾದ ರವರು ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲ ಮಾಡಿಕೊಳ್ಳಲಾಗಿದೆ.

ಕಳವು ಪ್ರಕರಣ :
ಗ್ರಾಮೀಣ ಠಾಣೆ :
ಶ್ರೀ ಮಲ್ಲಿನಾಥ ತಂದೆ ಶ್ಯಾಮರಾವ ಪೂಜಾರಿ ಸಾ: ಶಿವಾಜಿ ನಗರ ಗುಲಬರ್ಗಾ ರವರು ನನ್ನ ಮೋಟಾರ ಸೈಕಲ ನಂ ಕೆಎ 32 ಡಬ್ಲು 2027 ನೇದ್ದು ದಿನಾಂಕ 4/5/2011 ರಂದು ಮುಂಜಾನೆ ಹುಮನಾಬಾದ ರಿಂಗ ರೋಡದ ಹತ್ತಿರ ಸಾಗರ ಧಾಬಾದ ಮುಂದೆ ನಿಲ್ಲಿಸಿ ಧಾಬಾದ ಒಳಗಡೆ ಹೋಗಿ ಊಟ ಮಾಡಿಕೊಂಡು ಹೊರಗೆ ಬಂದು ನೋಡಲಾಗಿ ಅಲ್ಲೆ ನಿಲ್ಲಿಸಿದ ನನ್ನ ಮೋಟಾರ ಸೈಕಲ್ ಅ||ಕಿ|| 35680/- ರೂಗಳದ್ದು ಯಾರು ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲ ಮಾಡಿಕೊಳ್ಳಲಾಗಿದೆ.

ಕೂಲಿ ಕೆಲಸ ಮಾಡುತ್ತಿರುವಾಗ ಮೊದಲನೆ ಮಹಡಿಯಿಂದ ಬಿದ್ದು ಮಹಿಳೆ ಸಾವು :

ವಿಶ್ವ ವಿದ್ಯಾಲಯ ಠಾಣೆ : ಶ್ರೀ ನರಸಿಂಹಲು ತಂದೆ ಶಾಂತಯ್ಯಾ ತಿಮ್ಮಾನೂರ ಸಾ|| ಗಾಜಲ ಪೇಠ ರವರು ನನ್ನ ಹೆಂಡಿತಿಯಾದ ಅಂಜಮ್ಮಾ ಇವಳು ದಿನಾಂಕ 23-07-2011 ರಂದು ಮದ್ಯಾಹ್ನ ಇವಳು ಹೊಸದಾಗಿ ಕಟ್ಟುತ್ತಿರುವ ಇ.ಎಸ್.ಐ ಆಸ್ಪತ್ರೆಯ ಮೇಡಿಕಲ್ ವಿಬಾಗದಲ್ಲಿ ಮೋದಲನೇ ಅಂತಸ್ತಿನಲ್ಲಿ ಇತರೆ ಜನರೊಂದಿಗೆ ಕೆಲಸ ಮಾಡುತ್ತಿದ್ದಾಗ, ಮೊದಲನೇ ಅಂತಸ್ತಿನಿಂದ ಕೆಳಗೆ ಬಿದ್ದು, ಭಾರಿ ಗಾಯ ಹೊಂದಿದ್ದು ಉಪಚಾರ ಕುರಿತು ಆಸ್ಪತ್ರೆ ದಾಖಲ ಮಾಡಿದ್ದು ಉಪಚಾರ ಫಲಕಾರಿಯಾಗದೇ ಮೃತಪಟ್ಟಿರುತ್ತಾಳೆ , ಈ ಘಟನೆಗೆ ಇ.ಎಸ್.ಐ ಆಸ್ಪತ್ರೆ ಕಟ್ಟಲು ಗುತ್ತೆ ಹಿಡಿದ ಗುತ್ತೆದಾರ ಮತ್ತು ಮಾಲೀಕ ಇತರೆ ಇಂಜಿನೀಯರ್, ಸುಪರ್ ವೈಜರ್ಗಳ ನಿರ್ಲಕ್ಷತನದಿಂದ ನನ್ನ ಹೆಂಡತಿ ಮೃತ ಪಟ್ಟಿರುತ್ತಾಳೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲ ಮಾಡಿಕೊಳ್ಳಲಾಗಿದೆ.