POLICE BHAVAN KALABURAGI

POLICE BHAVAN KALABURAGI

27 January 2013

GULBARGA DISTRICT REPORTED CRIMES


ಕೊಲೆ ಪ್ರಕರಣ:
ಚಿಂಚೋಳಿ ಪೊಲೀಸ್ ಠಾಣೆ:ನನ್ನ ತಮ್ಮನಾದ ದೇವಿದಾಸ ಮತ್ತು ಅವನ ಮಗನಾದ ಕಮಲ ಇಬ್ಬರೂ ಕೂಡಿಕೊಂಡು ಹೋಲದಲ್ಲಿಯ ಜೋಳ ಕಾಯಲು ಹೋದಾಗ ಶಂಕರ ತಂದೆ ರಾಮಚಂದ್ರ ಚವ್ಹಾಣ, ಗೋವಿಂದ ತಂದೆ ಲಚ್ಚು ರಾಠೋಡ, ಈಶ್ವರ ತಂದೆ ಬದ್ದು ರಾಠೋಡ, ರವರು ನಮ್ಮ ಹೋಲದಲ್ಲಿದ್ದ ನನ್ನ ತಮ್ಮನಾದ ದೇವಿದಾಸನಿಗೆ, ಗೋವಿಂದ ತಂದೆ ಲಚ್ಚು ರಾಠೋಡ ಇತನು ತಮ್ಮ ಹೋಲಕ್ಕೆ ಕರೆದುಕೊಂಡು ಹೋಗಿ,ಈಶ್ವರ ತಂದೆ ಬದ್ದು ರಾಠೋಡ ಎನ್ನುವವನ ಹೆಂಡತಿಯಾದ ಮೈನಾಬಾಯಿ ಎಂಬುವವಳೊಂದಿಗೆ ಅನೈತಿಕ ಸಂಬಂಧ ಹೊಂದಿರುವುದಾಗಿ ಸಂಶಯ ಮಾಡಿಕೊಂಡು ಗೋವಿಂದನ ಹೋಲದ ಬದಿಗಿರುವ ಕರೆಂಟ್ ವೈರಿನ ಮೇಲೆ ನೂಕಿಸಿಕೊಟ್ಟು ಕೊಲೆ ಮಾಡಿರುತ್ತಾರೆ, ಶವದ ಸಾಕ್ಷಿ ನಾಶ ಮಾಡುವ ಕುರಿತು ಮೃತ ದೇಹವನ್ನು ಮಾಣಿಕೂರ ಸೀಮಾಂತರದ ಗುಡ್ಡದ ಮೇಲಿಂದ ಸುಮಾರು 150 ಪೀಟ್ ಆಳವಾದ ಕಂದಕದಲ್ಲಿ ಬಿಸಾಡಿ ಬಂದಿರುತ್ತಾರೆ. ಕಾರಣ ಸದರಿಯವರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಶ್ರೀ ಸೀತಾರಾಮ ತಂದೆ ತುಳಿಸಿರಾಮ ರಾಠೋಡ ವ:50 ವರ್ಷ, ಜಾ:ಲಂಬಾಣಿ ಉ:ಒಕ್ಕಲುತನ ಸಾ:ಕುಸರಂಪಳ್ಳಿತಾಂಡಾ  ತಾ:ಚಿಂಚೋಳಿ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ:12/2013 ಕಲಂ.302, 201, ಸಂ.34 ಐಪಿಸಿ ಪ್ರಕಾರ ಪ್ರಕರಣ ದಾಖಲ ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ:ಶ್ರೀಮತಿ ತಾಯವ್ವ ಗಂಡ ಮರೇಪ್ಪಾ ಹುರಸಗುಂಡಗಿ ವಯಾ:35 ವರ್ಷ, ಉ:ಕೂಲಿ ಕೆಲಸ  ಸಾ:ಸುಣ್ಣದ ಭಟ್ಟಿ ಶಾಹಾಬಾದ ರವರು ನಾನು ಮತ್ತು ನಮ್ಮೂರಿನ ಪಾರ್ವತಿ, ನಾದಿನಿಯಾದ ಹೇಮಾವತಿ ಎಲ್ಲರೂ ಕೂಡಿಕೊಂಡು ದಿನಾಂಕ:25-01-2013 ರಂದು  ಮಧ್ಯಾಹ್ನ 3=30 ಗಂಟೆಗೆ  ಶಾಹಾಬಾದಕ್ಕೆ ಹೋಗುವ ಕುರಿತು ಹೀರಾಪೂರ ಕ್ರಾಸ್ ದಿಂದ ಕಣ್ಣಿ ಮಾರ್ಕೆಟ ಕ್ರಾಸ್ ಕಡೆಗೆ ನಡೆದುಕೊಂಡು ಬರುತ್ತಿದ್ದಾಗ  ಹಿಂದಿನಿಂದ ಒಬ್ಬ ಮೋಟಾರ ಸೈಕಲ್  ನಂ:ಕೆಎ-32 ಇಎ-2926 ನೇದ್ದರ ಚಾಲಕನು ತನ್ನ ಮೋಟಾರ ಸೈಕಲ್ ನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನಗೆ ಡಿಕ್ಕಿ ಪಡಿಸಿ ಅಪಘಾತಮಾಡಿ  ಭಾರಿ ಗಾಯಗೊಳಿಸಿರುತ್ತಾನೆ. ಸದರಿಯವನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ದೂರು ಸಲ್ಲಿಸಿದ  ಸಾರಾಂಶದ ಮೇಲಿಂದ  ಠಾಣೆ ಗುನ್ನೆ ನಂ:06/2013 ಕಲಂ: 279, 338  ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.  
ಎರಡು ಮೋಟಾರ ಸೈಕಲಗಳು ಜಪ್ತಿ:
ಮಹಾತ್ಮ ಬಸವೇಶ್ವರ ನಗರ ಪೊಲೀಸ್ ಠಾಣೆ:ದಿನಾಂಕ:26/01/2013 ರಂದು ಸಾಯಂಕಾಲ 5.00 ಗಂಟೆಗೆ ಎಂ.ಬಿ.ನಗರ ಪೊಲೀಸ್ ಠಾಣೆಯ ಪಿಎಸ.ಐ ರವರಾದ ಶ್ರೀಮಂತ ಇಲ್ಲಾಳ ತಮ್ಮ ಸಿಬ್ಬಂದಿಯೊಂದಿಗೆ, ಗುಲಬರ್ಗಾ ನಗರದ ಸ್ವಸ್ತಿಕ ನಗರದಲ್ಲಿರುವ ಲಕ್ಷ್ಮಿ ಗುಡಿ ಹತ್ತಿರ ಮೋಟಾರ ಸೈಕಲಗಳ್ನು ಚೆಕ್ ಮಾಡುತ್ತಿರುವಾಗ ಇಬ್ಬರು ಮೋಟಾರ ಸೈಕಲ ಸವಾರರು ತಮ್ಮ ಮೋಟಾರ ಸೈಕಲಗಳನ್ನು ತೆಗೆದುಕೊಂಡು ಹೋಗುತ್ತಿರುವಾಗ, ಸದರಿಯವರನ್ನು ವಿಚಾರಣೆ ಮಾಡುತ್ತಿದ್ದಾಗ ಸದರಿ ಮೋಟಾರ ಸೈಕಲಗಳ ಬಗ್ಗೆ ಸರಿಯಾದ ಮಾಹಿತಿ ನೀಡದೇ ಇರುವದರಿಂದ ಅವರ ಬಗ್ಗೆ ಕೂಲಕೂಂಶವಾಗಿ ವಿಚಾರಿಸಲು ತಮ್ಮ ಹೆಸರು ಮಜರ ಅಲಿ ತಂದೆ ಮಹ್ಮದ ಅಬ್ದುಲ ಹಫೀಜ್ ಶೇಕ್ ವಯಃ 32 ವರ್ಷ ಜಾತಿಃ ಮುಸ್ಲಿಂ ಉಃ ಖಾಸಗಿ ಕೆಲಸ ಸಾಃ ಮನೆ ನಂ. 5-261, ರೋಜಾ (ಬಿ) ಗುಲಬರ್ಗಾ, ಮತ್ತು  ರಮೇಶ ತಂದೆ ಮಲ್ಲಪ್ಪ ಪೂಜಾರಿ ವಯಃ 22 ವರ್ಷ ಉಃ ಕ್ರೂಸರ್ ಡ್ರೈವರ ಜಾತಿಃ ಕುರುಬ ಸಾಃಸೂಗೂರ ಗ್ರಾಮ ತಾಃ ಚಿತ್ತಾಪೂರ ಜಿಃಗುಲಬರ್ಗಾ, ತಿಳಿದುಕೊಂಡು ಸದರಿಯವರ ಹತ್ತಿರವಿದ್ದ ಮೋಟಾರ ಸೈಕಲಗಳ ಕಾಗದ ಪತ್ರಗಳ ಬಗ್ಗೆ ವಿಚಾರಿಸಲು ಯಾವುದೇ ಕಾಗದ ಪತ್ರಗಳು ಹೊಂದಿರುವದಿಲ್ಲ. ನೀವು ಇವುಗಳನ್ನು ಎಲ್ಲಿಂದ ತಂದಿರುತ್ತಿರಿ, ಎಲ್ಲಿಗೆ  ತೆಗೆದುಕೊಂಡು ಹೋಗುತ್ತಿದ್ದೀರಿ ಅಂತಾ ವಿಚಾರಿಸಲು ರಮೇಶ ಇತನು ತನ್ನ ವಶದಲ್ಲಿದ್ದ ಮೋಟಾರ ಸೈಕಲ ನಂ:ಕೆಎ-33 ಕೆ-8075 ನೇದ್ದನ್ನು ಬೀದರದಿಂದ ಕಳುವು ಮಾಡಿಕೊಂಡು ತಂದಿರುವುದಾಗಿ ತಿಳಿಸಿದನು. ಮಜರಅಲಿ ಇತನು ತನ್ನ ಹತ್ತಿರವಿರುವ ಮೋಟಾರ ಸೈಕಲ ನಂ:ಕೆಎ-32 ವಿ-8971 ನೇದ್ದನ್ನು ಸುಪರ ಮಾರ್ಕೆಟ ಗುಲಬರ್ಗಾದಿಂದ ಕಳುವು ಮಾಡಿರುವದಾಗಿ ತಿಳಿಸಿದನು. ಆ ಎರಡು ಜನರನ್ನು ವಶಕ್ಕೆ ತೆಗೆದುಕೊಂಡು ಹಾಗೂ ಅವರಲ್ಲಿದ್ದ Hero Honda Splender Silver Colour M/c No. KA 33 K 8075, Chassis No. 01B20107521, Engine No. 01B18M07256 ಅಃಕಿಃ 25,000/- ರೂ. ಹಾಗು 2) Hero Honda Splender M/c No. KA 32 V 8971, Chassis No. MBLHA10EJ9HJ08596, Engine No. HA10EA9HJ57640 ಅಃಕಿಃ 20,000/- ರೂ ನೇದ್ದವುಗಳನ್ನು ಜಪ್ತಿ ಮಾಡಿಕೊಂಡಿದ್ದರಿಂದ ಸರ್ಕಾರಿ ತರ್ಪೆಯಾಗಿ ಶ್ರೀ ಶ್ರೀಮಂತ ಇಲ್ಲಾಳ ರವರು ಠಾಣೆ ಗುನ್ನೆ ನಂ: 13/2013 ಕಲಂ. 41(ಡಿ), 102 ಸಿ.ಆರ್.ಪಿ.ಸಿ ಹಾಗು 379 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕೊಲೆ ಪ್ರಕರಣ:
ಅಫಜಲಪೂರ ಪೊಲೀಸ್ ಠಾಣೆ:ಸುಮಾರು 35-40 ವರ್ಷ ವಯಸ್ಸಿನನಿಗೆ ಗಂಡು ಮನುಷ್ಯನಿಗೆ 3-4 ದಿವಸಗಳ ಹಿಂದೆ  ಯಾರೋ ಕೊಲೆ ಮಾಡಿ ಮಾಡಿ ಗೋಣಿ ಚೀಲದಲ್ಲಿ ಹಾಕಿ, ಕಲ್ಲು ಕಟ್ಟಿ ಶವ ಗೊತ್ತಾಗದಂತೆ ಸಾಕ್ಷಿ ನಾಶ ಪಡಿಸಿ ಮಣೂರ-ಅಗರಖೇಡ ಗ್ರಾಮದ ಭೀಮಾ ಬ್ರೀಡ್ಜ ಕೆಳಗಡೆ ನೀರಿನಲ್ಲಿ ಶವ ಬಿಸಾಕಿ ಹೋಗಿರುತ್ತಾರೆ ಮೃತನ ಹೆಸರು ವಿಳಾಸ ತಿಳಿದು ಬಂದಿರುವದಿಲ್ಲ. ಸದರಿಯವರ ಶವದ ಮುಂದಿನ ಕ್ರಮ ಕೈಕೊಳ್ಳಬೇಕು ಅಂತಾ ಶ್ರೀ ರಾಮ ತಂದೆ ಬೂತಾಳಿ ನಡವಿನಕೇರಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸಾ|| ಮಣೂರ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:20/2013 ಕಲಂ. 302, 201 ಐ ಪಿ ಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.