POLICE BHAVAN KALABURAGI

POLICE BHAVAN KALABURAGI

16 August 2015

Kalaburagi District Reported Crimes

ಅಪಘಾತ ಪ್ರಕರಣ :
ಜೇವರ್ಗಿ ಠಾಣೆ : ದಿನಾಂಕ  14.08.2015 ರಂದು ಮುಂಜಾನೆ ಶ್ರೀ ಕಲ್ಲಣ್ಣಗೌಡ ತಂದೆ ಬಸವರಾಜಗೌಡ ಪೊಲೀಸ್ ಗೌಡ ಸಾ : ಕೆಲ್ಲೂರ  ರವರ ತಾಯಿಯಾದ ದೇವಮ್ಮ @ ದೇವಕ್ಕಿ ಗಂಡ ಬಸವರಾಜಗೌಡ ಪೊಲೀಸ್ ಗೌಡ ಸಾ : ಕೆಲ್ಲೂರ ಇವರೊಂದಿಗೆ ನಮ್ಮ ಹೋಲಕ್ಕೆ ಹೋಗುವ ಕುರಿತು ರಾಜುಗೌಡ ಇವರ ಹೊಲದ ಹತ್ತಿರ ಜೇವರಗಿ- ಶಹಾಪೂರ ರಸ್ತೆ ಮೇಲೆ ರಸ್ತೆಯ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಜೇವರಗಿ ಕಡೆಯಿಂದ ಮೋಟಾರು ಸೈಕಲ್ ನಂ ಕೆ.ಎ32 ಡಬ್ಲ್ಯೂ2261 ನೇದ್ದರ ಚಾಲಕನು ತನ್ನ ಮೋಟಾರು ಸೈಕಲ್‌ ಅನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ನನ್ನ ತಾಯಿಗೆ ಹಿಂದಿನಿಂದ ಡಿಕ್ಕಿ ಪಡಿಸಿ ಅಪಘಾತ ಮಾಡಿ ನನ್ನ ತಾಯಿಯ ತಲೆಗೆಭಾರಿ ರಕ್ತ ಗಾಯ ಪಡಿಸಿ ತನ್ನ ಮೋಟಾರು ಸೈಕಲ್‌ ನೊಂದಿಗೆ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಮಾದನಹಿಪ್ಪರಗಾ ಠಾಣೆ : ಶ್ರೀ ನಾಗೇಶ ತಂದೆ ಮಲಕಣ್ಣ ನಡಗೇರಿ ಇವರು ದಿನಾಂಕ : 13-08-2015 ರಂದು ರಾತ್ರಿ ತಮ್ಮೂರಿನ ನಿರಂಜಪ್ಪಾ ಹಡಪದ ಹೇರ ಕಟ್ಟಿಂಗ ಅಂಗಡಿಯ ಪಕ್ಕದಲ್ಲಿ ನಾನು ಮತ್ತು ನನ್ನ ಸಂಬಂಧಿಕ ಮಾಹಾದೇವ ತಂದೆ ಮುತ್ತಣ್ಣಾ ಹಡಲಗಿ ಕೂಡಿಕೊಂಡು ಮಾತನಾಡುತ್ತಾ ಕುಳಿತುಕೊಂಡಾಗ ನೀರಂಜಪ್ಪಾ ಹಡಪದ ಇವರ ಅಂಗಡಿಯಲ್ಲಿ ನಮ್ಮ ಒಣಿಯ ಭಿಮಪ್ಪಾ ಪಂಡರಿ ಈತನು ಹೇರ ಕಟ್ಟಿಂಗ ಸಲುವಾಗಿ ಕುಳಿತುಕೊಂಡಿದ್ದು ಅದೆ ಪ್ರಕಾರ ಸಂತೊಷ ಜಮಾದಾರ ನು ಕಟ್ಟಿಂಗ ಸಲುವಾಗಿ ಕುಳಿತುಕೊಂಡಿದ್ದಾಗ ನಿರಂಜಪ್ಪಾ ಈತನಿಗೆ ಭಿಮಪ್ಪಾ ಈತನು ನನಗೆ ಕಟ್ಟಿಂಗ ಮೊದಲು ಮಾಡು ಅಂದಿದ್ದಕ್ಕೆ ಸಂತೊಷ ಈತನು ನಾನು ಮೊದಲು ಬಂದಿದ್ದೆನೆ ನನಗೆ ಮಾಡು ಅಂತಾ ವಾದ ವೀವಾದ ನಡೆಯುತ್ತರುವಾಗ ನಾನು ಮತ್ತು ಮಹಾದೇವ ಹಡಲಗಿ ಜಗಳ ಬಿಡಿಸಲು ನಡುವೆ ಹೋದಾಗ ಸಂತೊಷ ಜಮಾದಾರ ಈನತು ತನ್ನ ತಂದೆ ಹಾಗು ಸಂಬಂಧಿಕರಿಗೆ ಹೊಲೆಯರು ಬಂದು ಜಗಳ ತೆಗೆದು ಹೊಡೆಯುವವರಿದ್ದಾರೆ ಎಂದು ಫೊನ ಮೂಲಕ ತಿಳಿಸಿದ್ದು ಆಗ ನಾನು ಮತ್ತು ಮಹಾದೇವ ಕೂಡಿ ಮನೆಗೆ ಹೊಗುವ ಸಂಗಣ್ಣಾ ಹಜೇರಿ ಇವರ ಮನೇಯ ಮುಂದೆ ರಸ್ತೇಯ ಮೇಲೆ ಇದ್ದಾಗ ಒಮ್ಮಿಂದೊಮ್ಮೆಲೆ ಸಂತೊಷ ಜಮಾದಾರ ಹಾಗು ಅವನ ಪರವಾಗಿ 1) ಸಿದ್ದಪ್ಪಾ ತಂದೆ ಹಣಮಂತ ಜಮಾದಾರ 2) ತಿಪ್ಪಣ್ಣಾ ತಂದೆ ಹಣಮಂತ ಜಮಾದಾರ 3) ಗಣಪತಿ ತಂದೆ ಹಣಮಂತ ಜಮಾದಾರ 4) ಶಿವಲಿಂಗ ತಂದೆ ಭಿಮಾಶ್ಯಾ ಜಮಾದಾರ 5) ಶ್ರೀಶೈಲ ತಂದೆ ಬಸಣ್ಣ ಜಮಾದಾರ ವಯಾ:45 ಸಾ:ಎಲ್ಲರೂ ಚಲಗೇರಾ ಇವರು ಅಕ್ರಮ ಕೂಟ ರಚಿಸಿಕೊಂಡು ನಮಗೆ ತಡೆ ಮಾಡಿ ನಿಲ್ಲಿಸಿ ಬೊಸ್ಡಿ ಮಕ್ಕಳ್ಯಾ ಹೊಲೇಯ ಸೂಳೆ ಮಕ್ಕಳ್ಯಾ ಹೊಲೇಯರಿಗೆ ಸೊಕ್ಕು ಜಾಸ್ತಿಯಾಗಿದೆ ಇವರ ಕೈ ಕಾಲು ಮುರಿದು ಬಿಸಾಕಿರಿ ಎಂದು ಅವಾಚ್ಯ ಶಬ್ದಗಳಿಂದ ಬೈಯ್ಯತ್ತಿರುವಾಗ ಎಲ್ಲರು ಸೇರಿ ಬಡಿಗೆ, ಕಲ್ಲು ಮತ್ತು ಕಾಲು ಕೈ ಗಳಿಂದ ಹೊಡೆದು ಗಾಯಗೋಳಿಸಿಒರುತ್ತರ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಹಣ ನೀಡಿ ಕಿರುಕಳ ನೀಡುತ್ತಿರುವ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ವಿಠ್ಠಲ ತಂದೆ ಕಾಳಪ್ಪ ಪತ್ತಾರ ಸಾ||ಶೇಷಗಿರಿ ತಾ||ಅಫಜಲಪೂರ ಇವರ ಸ್ವಂತ ಹೆಸರಿನ ಮೇಲೆ ಇರುವ ಶೇಶಗಿರಿ ಗ್ರಾಮದಲ್ಲಿರುವ ಜಮೀನು ಸರ್ವೇ ನಂ 61 ವಿಸ್ತೀರ್ಣ 04-ಎಕರೆ 04-ಗುಂಟೆ ಜಮೀನು ಭೀಮಾನದಿ ಪಕ್ಕದಲ್ಲಿ ಇದ್ದು ಸದರಿ ಜಮೀನಿಗೆ ನಿರಾವರಿ ಸೌಲಭ್ಯ ಪಡೆದುಕೊಂಡಿರುತ್ತೇನೆ. ಆದರೆ 2013 ನೇ ಸಾಲಿನಲ್ಲಿ ದಿ.26/06/2013 ರಂದು ಒಟ್ಟು ರೂ 2,30,000/- ಚಂದ್ರಕಾಂತ ಅರಳಿಮಠ ಸಾ||ಶೇಷಗಿರಿ ತಾ||ಅಫಜಲಪೂರ ಇವರ ಹತ್ತಿರ ನಗದು ಹಣ ಪಡೆದುಕೊಂಡಿರುತ್ತೇನೆ ಸದರಿ ಹಣದ ಬಡ್ಡಿ 2014 ರಂದು ರೂ- 82,800-00 ಬಡ್ಡಿ ಅಸಲು ಕೂಡಿ 26-06-2014 ರಂದು ಒಟ್ಟು ರೂ-3,12,800-00 ಇದರಲ್ಲಿ ರೂ 1,70,000-00 ರೂ ಗಳು ನಮ್ಮ ಕುಟುಂಬದ ಸದಸ್ಯರ ಎದುರುಗಡೆ ನಗದು ಹಣ ಕೊಟ್ಟಿರುತ್ತೇನೆ ಒಟ್ಟು ರೂ 1,42,800-00 ಮರು ಪಾವತಿ ಮಾಡುವದು ಉಳಿದಿರುತ್ತದೆ. ಉಳಿದ ಹಣಕ್ಕೆ ಚಿಲ್ಲರೆ ಹಣ ಕೊಟ್ಟು ಒಟ್ಟು ರೂ 1,44,000-00 ಕರರು ಪತ್ರ  ಮಾಡಿಕೊಂಡಿರುತ್ತಾನೆ ಆದರೆ ಮಳೆ ಇಲ್ಲದ ಕಾರಣ ಸದರಿ ನದಿಯಲ್ಲಿ ನೀರು ಇರುವುದಿಲ್ಲ ಮತ್ತು ಮಳೆ ಕೂಡ ಬಂದಿರುವುದಿಲ್ಲ ನಾನು ಮುಂದಿನ ವರ್ಷ ಬೆಳೆಗೆ ಪೂರ್ತಿಯಾಗಿ ಕೊಡುತ್ತೇನೆಂದು ಎಷ್ಟು ಪರಿ ಬೇಡಿಕೊಂಡರು ನನಗೆ ಸಿಕ್ಕಾಪಟ್ಟೆ ಮಾತನಾಡಿರುತ್ತಾನೆ ಇದರಿಂದ ನನಗೆ ಮಾನಸಿಕ ದೈಹಿಕದಿಂದ ಬಳಲುತಿದ್ದೇನೆ ನಮ್ಮ ಕುಟುಂಬವು ಸದರಿ ಜಮೀನಿನಲ್ಲಿ ವಾಸ ಮಾಡುತಿದ್ದೇವೆ. ಕಾರಣ ಸದರಿಯವರ ಮೇಲೆ ಸೂಕ್ತವಾದ ಕಾನೂನು ಕ್ರಮ ಜರುಗಿಸಿ ನನಗೆ ಮತ್ತು ಕುಟುಂಬದ ಸದಸ್ಯರಿಗೆ ರಕ್ಷಣೆ ನೀಡಬೇಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ನಿಂಬರ್ಗಾ ಠಾಣೆ : ಶ್ರೀ ಭಾಗ್ಯವಂತ ತಂದೆ ಬಲವಂತ ತಳವಾರ ಸಾ|| ಬೆಣ್ಣೆಶಿರೂರ ಇವರು ತನಗೆ ಮೊಬೈಲ ಮಾರಾಟ ಮಾಡಿದ ಹಣ ಕೇಳಿದ್ದಕ್ಕೆ ಮಹಾದೇವ ತಂದೆ ಕಾಂಶಪ್ಪ ಸಾಹುಕಾರ ಮತ್ತು ಇತರೆ 3 ಜನರು ಕೂಡಿಕೊಂಡು ದಿನಾಂಕ 15-082015  ಬೆಣ್ಣೆಶಿರೂರ ಗ್ರಾಮದಲ್ಲಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಮುಖಕ್ಕೆ ಹೊಡೆದು ಜೀವ ಭಯಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 14-08-2015 ರಂದು ರಾತ್ರಿ ಶ್ರೀ ಸಿದ್ದು @ ಸಿದ್ದಪ್ಪ ತಂದೆ ಪ್ರಕಾಶ ಅಳ್ಳಗಿ ಸಾ : ಲಿಂಬಿ ತೋಟ ಅಫಜಲಪೂರ ಮತ್ತು ನನ್ನ ಗೆಳೆಯರಾದ ಶರಣು ಬಂದರವಾಡ ಹಾಗೂ ಶಿವಪ್ಪ ಮೂರು ಜನರು ಕೂಡಿ ಅಫಜಲಪೂರ ಪಟ್ಟಣದ ಕೆ.ಇ.ಬಿ ಮುಂದುಗಡೆ ರೋಡಿನ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ಸಾಯಬಣ್ಣ ಮ್ಯಾಕೇರಿ ಮತ್ತು ಸಾಯಬಣ್ಣ ಸಿನ್ನೂರ ಇಬ್ಬರು ನಮ್ಮ ಎದುರಿಗೆ ನಡೆದುಕೊಂಡು ಬರುತ್ತಿದ್ದು ನನ್ನ ಕಾಲು ಜಾರಿ ಸಾಯಬಣ್ಣ ಮ್ಯಾಕೇರಿ ಇವರಿಗೆ ನನ್ನ ಕೈ ತಾಗಿತು, ಆಗ ಸಾಯಬಣ್ಣ ಇವರು ಏನೊ ಸೂಳೆ ಮಗನೆ ಕಣ್ಣು ನೆತ್ತಿಯ ಮೇಲೆ ಇಟ್ಟುಕೊಂಡು ಹೋಗುತ್ತಿದ್ದಿ ಏನು ಅಂತಾ ಬೈದರು, ಆಗ ನಾನು ಕಾಲು ಜಾರಿದೆರಿ ನೋಡಿಲ್ಲಾ ಅಂತಾ ಅಂದೆನು, ಅದಕ್ಕೆ ಬೋಸಡಿ ಮಗನೆ ನಮಗೆ ಕಣ್ಣು ಕಿಸಿದು ಮಾತಾಡ್ತಿ ಅಂತಾ ಎದೆಯ ಮೆಲಿನ ಅಂಗಿ ಹಿಡಿದರು, ಆಗ ನಾನು ಯಾಕ್ರಿ ನನ್ನ ಜೋತೆ ಯಾಕ ಜಗಳ ಮಾಡ್ತಿರಿ ಅಂತಾ ಕೇಳಿದಾಗ, ಸೂಳೆ ಮಗನೆ ನಿನ್ನ ಸೋಕ್ಕ ಜಾಸ್ತಿ ಆಗಿದೆ ಎಂದು ಸಾಯಬಣ್ಣ ಮ್ಯಾಕೇರಿ ಮತ್ತು ಸಾಯಬಣ್ಣ ಸಿನ್ನೂರ ಇಬ್ಬರು ನನ್ನ ಜೋತೆಗೆ ಜಗಳ ತಗೆದು ನನಗೆ ಸಾಯಬಣ್ಣ ಮ್ಯಾಕೇರಿ ಈತನು ಅಲ್ಲಿಯೆ ಬಿದ್ದ ಒಂದು ಬಡಿಗೆಯಿಂದ ನನ್ನ ಹೊಟ್ಟೆಯ ಮೇಲೆ ಹಾಗೂ ಬೆನ್ನಿನ ಮೇಲೆ ಹೊಡೆದನು ಮತ್ತು ಸಾಯಬಣ್ಣ ಸಿನ್ನೂರ ಈತನು ಬೆಲ್ಟಿನಿಂದ ಹೊಡೆಯುತ್ತಿದ್ದರು, ಸದರಿಯವರು ನನಗೆ ಹೊಡೆಯುತ್ತಿದ್ದಾಗ ನಾನು ಕೆಳಗೆ ಬಿದ್ದಾಗ ಇಬ್ಬರು ಕೂಡಿ ಕಾಲಿನಿಂದ ನನ್ನ ಹೊಟ್ಟೆಯ ಮೇಲೆ ಒದ್ದು ಗಾಯಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.