POLICE BHAVAN KALABURAGI

POLICE BHAVAN KALABURAGI

03 August 2014

Gulbarga District Reported Crimes

ಅಪಹರಣ ಮಾಡಿಕೊಂಡು ಹೋಗಿ ಹಲ್ಲೆ ಮಾಡಿದ ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀಮತಿ ಮಮತಾಜ ಗಂಡ ಮಹಿಬೂಬಸಾಬ ಗೊಬ್ಬೂರ  ಸಾ|| ಕವಲಗಾ ಇವರ ಮಗಳಾದ ಅಫ್ರೀನ್ ಇವಳಿಗೆ ದಿನಾಂಕ 18-06-2014 ರಂದು ಕವಲಗಿ ಗ್ರಾಮದ ನಿಜಲಿಂಗಪ್ಪ ತಂದೆ ಸಿದ್ರಾಮಪ್ಪ ಹಾಗು ಇತರರು ಕುಡಿಕೊಂಡು ಕಿಡ್ನಾಪ್ ಮಾಡಿಕೊಂಡು ಹೋಗಿರುತ್ತಾನೆ ಇಲ್ಲಿಯವರೆಗೆ ಅವರು ಎಲ್ಲಿ ಹೋಗಿದ್ದಾರೆ ಎಂಬ ಸುಳಿವು ಇಲ್ಲ ನಿಜಲಿಂಗಪ್ಪ ಇವರ ಮನೆಯವರಾದ ಶಿವನಿಂಗಪ್ಪ ತಂದೆ ರಾಮಚಂದ್ರಪ್ಪ, ಶರಣಬಸಪ್ಪ ತಂದೆ ಬಾಬಾಶಾ, ಗುರುನಾಥ ತಂದೆ ಸಿದ್ರಾಮಪ್ಪ ಅಮರೇ ಇವರೆಲ್ಲರೂ ಅಫ್ರಿನ್ ಇವಳಿಗೆ ಮನಬಂದಂತೆ ತಳಿಸಿ ಮದುವೆ ಮಾಡಿಕೊಳ್ಳಲು ಒಪ್ಪಬೇಡ ಹಾಗೂ ನಿಮ್ಮ ಮನೆಗೆ ನೀವು ಹೋಗು ಎಂದು ಅಫ್ರೀನ್ ಇವಳು ದೂರವಾಣಿ ಮುಖಾಂತರ ತಿಳಿಸಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರು ಕಳವು ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಮಲ್ಲಪ್ಪ ತಂದೆ ವೀರಸಂಗಪ್ಪ ಭೀಮನಳ್ಳಿ ಸಾ: ರೇವಣಸಿದ್ದೇಶ್ವರ ಕಾಲೋನಿ ಹುಮನಾಬಾದ ರೋಡ ಗುಲ್ಬರ್ಗಾ ಇವರು ದಿನಾಂಕ: 30/07/2014 ರಂದು ರಾತ್ರಿ 9-00 ಗಂಟೆಯಿಂದ ದಿನಾಂಕ: 31/07/2014 ರಂದು 3-00 ಎ.ಎಮ್ ದ ಮಧ್ಯದ ಅವಧಿಯಲ್ಲಿ ತಮ್ಮ ಮನೆಯ ಎದುರುಗಡೆ ಬಯಲು ಜಾಗೆಯಲ್ಲಿ ನಿಲ್ಲಿಸಿದ ಗ್ರೇ ಕಲರನ ಟಾಟಾ ಇಂಡಿಕಾ ಕಾರ ನಂ ಕೆಎ-32 ಎಮ್-5797  ಅ.ಕಿ= 150000/- ರೂ ಬೆಲೆಬಾಳುವದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅತ್ಯಾಚಾರ ಪ್ರಕರಣ :
ಕಮಲಾಪೂರ ಠಾಣೆ : ಶ್ರೀ. ಸಾ: ಕಮಲಾಪೂರ ಇವರ ಮಗಳು ದಿನಾಂಕ: 07-07-2014 ರಂದು ಬೆಳೆಗ್ಗೆ 8 ಗಂಟೆಗೆ ಕಮಲಾಪೂರದಲ್ಲಿರುವ ಸರಕಾರಿ ಬಾಲಕಿಯರ ಪಿ.ಯು.ಸಿ ಕಾಲೇಜಿಗೆ ಹೋಗುತ್ತೇನೆ ಅಂತಾ ಹೇಳಿ ಹೋದವಳು ಇನ್ನು ವರೆಗೆ ಮರಳಿ ಮನೆಗೆ ಬಂದಿರುವುದಿಲ್ಲ. ಅವಳನ್ನು ಯಾರೋ ಅಪಹರಣ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ನೀಡಿದ ದೂರಿನ ಮೇರೆಗೆ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದು ಸದರಿ ಪ್ರಕರಣದ ಪತ್ತೆ ಕಾರ್ಯದಲ್ಲಿದ್ದಾಗ ದಿನಾಂಕ: 31-07-2014 ರಂದು ಸದರಿ ಅಪಹರಣವಾದ ಹುಡುಗಿಯು ತುಮಕೂರ ಜಿಲ್ಲೆಯ ಕುಣಿಗಲ ತಾಲೂಕಿನ ಪಂಚವಟಿ ತಾಂಡಾದಲ್ಲಿರುವ ಮಾಹಿತಿ ತಿಳಿದುಕೊಂಡು ಸಿಬ್ಬಂದಿಯರೊಂದಿಗೆ ಹೋಗಿ ಸದರಿ ಅಪಹರಣಗೊಂಡ ಮಗಳು ಇವಳನ್ನು ಕರೆದುಕೊಂಡು ದಿನಾಂಕ: 01-08-2014 ರಂದು ಮರಳಿ ಕಮಲಾಪೂರ ಪೊಲೀಸ್ ಠಾಣೆಗೆ  ಬಂದಿದ್ದು ಇರುತ್ತದೆ. ಸದರಿ ಮಗಳಿಗೆಮಹಿಳಾ ಸಿಬ್ಬಂದಿಯಿಂದ ವಿಚಾರಿಸಲಾಗಿ ಅದರಲ್ಲಿ ಅವಳು ಈಗ ಸುಮಾರು ಒಂದು ವರ್ಷದಿಂದ ತಾನು  ಕುಣಿಗಲ ತಾಲೂಕಿನ ಪಂಚವಟಿ ತಾಂಡಾದ ರಘುನಾಯಕ ತಂದೆ ಕೃಷ್ಣಾ ನಾಯಕ ಎಂಬ ಹುಡುಗನನ್ನು ಪ್ರೀತಿಸುತ್ತಿದ್ದು, ಅವನು ನನ್ನನ್ನು ಪ್ರೀತಿಸುತ್ತಿದ್ದನು. ನಾವಿಬ್ಬರು ಮದುವೆ ಮಾಡಿಕೊಳ್ಳಲು ನಿರ್ಧರಿಸಿ ದಿನಾಂಕ: 07-07-2014 ರಂದು ನಾವಿಬ್ಬರೂ ಮೊದಲೇ ಮಾತನಾಡಿಕೊಂಡಂತೆ   ನಾನು ನನ್ನ ಮನೆಯಲ್ಲಿ ಕಾಲೇಜಿಗೆ ಹೋಗುತ್ತೇನೆ ಅಂತಾ ಹೇಳಿ ಮನೆಯಿಂದ ಬಂದಿದ್ದು, ರಘುನಾಯಕನು ಕಮಲಾಪೂರ ಬಸ್ ನಿಲ್ದಾಣದಲ್ಲಿ ಬಂದು ನಿಂತುಕೊಂಡಿದ್ದನು.  ನಾನು ಕಮಲಾಪೂರ ಬಸ್ ನಿಲ್ದಾಣಕ್ಕೆ ಬಂದು ಈ ಮೊದಲೇ ಮಾತನಾಡಿಕೊಂಡಂತೆ ನನ್ನನ್ನು ರಘು ನಾಯಕ ಈತನು ತಮ್ಮ ಊರಾದ ಪಂಚವಟಿ ತಾಂಡಾಕ್ಕೆ ಕರೆದುಕೊಂಡು ಹೋಗಿದ್ದು, ಅಲ್ಲಿ ಹೋದ ನಂತರ ದಿನಾಂಕ: 20-07-2014 ರಂದು ನಾವಿಬ್ಬರು ದೇವಸ್ಥಾನದಲ್ಲಿ ಮದುವೆ ಆಗಿರುತ್ತೇವೆ.  ಮದುವೆ ಆದ ನಂತರ ಪಂಚವಟಿ ತಾಂಡಾದ ರಘುನಾಯಕನ ಮನೆಯಲ್ಲಿ ನಾನು ಮತ್ತು ರಘುನಾಯಕ ಇಬ್ಬರೂ ದೈಹಿಕ ಸಂಪರ್ಕ ಮಾಡಿರುತ್ತೇವೆ ಅಂತಾ ಹೇಳಿದ್ದು  ದುಃಖಾಪತಳು ಮನೆಯಿಂದ ಹೋಗುವಾಗ ಮತ್ತು ಅವಳ ಮದುವೆ ಆಗಿರುತ್ತದೆ ಎಂದು ಹೇಳಿಕೆ ಕೊಟ್ಟ ದಿನಾಂಕದಂದು ಇನ್ನೂ ಅಪ್ರಾಪ್ತಳಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.