POLICE BHAVAN KALABURAGI

POLICE BHAVAN KALABURAGI

14 December 2018

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 23-11-2018 ಸಾಯಂಕಾಲ 6-40 ಗಂಟೆ ಸುಮಾರಿಗೆ ನನ್ನ ತಾಯಿ ಪಾರ್ವತಿ @ ಮಹಾದೇವಿ ಇವರು ಅವರು ಕೆಲಸ ಮಾಡುವ ಉದನೂರ ರೋಡ ಹತ್ತೀರ ಇರುವ ಹಾಸ್ಟೆಲನಿಂದ ಎನ್.ಈ ಕೆ.ಆರ.ಟಿ.ಸಿ ಬಸ್ಸ ನಂಬರ ಕೆಎ-32/ಎಫ್-2183 ನೇದ್ದರಲ್ಲಿ ಕುಳಿತು  ಬರುವಾಗ ಆರ.ಪಿ ಸರ್ಕಲ ಹತ್ತೀರ ಬರುವ ಅಯ್ಯಾಂಗಾರ ಬೇಕರಿ ಎದುರು ರೋಡ ಮೇಲೆ ಬಸ್ಸ ಚಾಲಕನು ಪ್ರಯಾಣಿಕರು ಇಳಿಯುವ ಸಂಬಂದ ಬಸ್ಸ ನಿಲ್ಲಿಸಿದಾಗ ನನ್ನ ತಾಯಿ ಬಸ್ಸಿನಿಂದ ಇಳಿಯುತ್ತಿದ್ದಾಗ ಬಸ್ಸ ಚಾಲಕ ವೀರಭದ್ರಯ್ಯಾ ಇತನು ನನ್ನ ತಾಯಿ ಬಸ್ಸಿನಿಂದ ಇಳಿಯುತ್ತೀರುವದನ್ನು ನೋಡದೆ ಮತ್ತು ಬಸ್ಸ ಕಂಡೆಕ್ಟರ್ ಸಿಟಿ ಹೊಡೆಯದೆ ಇದ್ದರು ಕೂಡಾ ಬಸ್ಸನ್ನು ಒಮ್ಮಲೆ ಅತಿವೇಗವಾಗಿ ಮತ್ತು ನಿಷ್ಕಾಳಿಜಿತನದಿಂದ ಚಲಾಯಿಸಿ ನನ್ನ ತಾಯಿಯವರಗೆ ಬಸ್ಸಿನ ಬಾಗಿಲಿನಿಂದ ಬಿಳಿಸಿ ಅಪಘಾತ ಪಡಿಸಿದ್ದು ದಿನಾಂಕ 24-12-2018 ರಂದು ನನ್ನ ತಾಯಿಗೆ ಹೆಚ್ಚಿನ ಉಪಚಾರ ಕುರಿತು ಸೊಲಾಪೂರ ಸಿ.ಎನ್.ಎಸ್ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿ ಉಪಚಾರ ಮಾಡಿಸಿದ್ದು ಖಾಸಗಿ ಆಸ್ಪತ್ರೆಯ ಖರ್ಚು ವೆಚ್ಚ ಹೆಚ್ಚಿಗೆ ಬರುತ್ತಿದ್ದರಿಂದ ದಿನಾಂಕ 12-12-2018 ರಂದು ನನ್ನ ತಾಯಿಗೆ ಕಲಬುರಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಉಪಚಾರ ಕುರಿತು ಕರೆದುಕೊಂಡು ಬಂದು ಸೇರಿಕೆ ಮಾಡಿದ್ದು ನನ್ನ ತಾಯಿ ಪಾರ್ವತಿ @ ಮಹಾದೇವಿ ಇವಳು ರಸ್ತೆ ಅಪಘಾತದಲ್ಲಿ ಆದ ಭಾರಿ ಗಾಯದ ಉಪಚಾರ ಪಡೆಯುತ್ತಾ ಸರ್ಕಾರಿ ಆಸ್ಪತ್ರೆಯಲ್ಲಿ ದಿನಾಂಕ 13.12.2018 ರಂದು ಸಾಯಂಕಾಲ 6-25 ಗಂಟೆ ಸುಮಾರಿಗೆ ಅಪಘಾತದಲ್ಲಿ ಆದ ಗಾಯದ ಉಪಚಾರ ಫಲಕಾರಿಯಾಗದೆ ಮೃತಪಟ್ಟಿರುತ್ತಾಳೆ. ಅಂತಾ ಶ್ರೀ ಕೃಷ್ಣಾ ತಂದೆ ಸಿದ್ರಾಮಪ್ಪಾ ಹೊಸ್ಮನಿ ಸಾ: ಮಾಹಾದೇವ ನಗರ ಶಾಹಾಬಜಾರ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 13-12-2018 ರಂದು  ಸೋನ್ನ  ಗ್ರಾಮದ ಭೀಮಾ ನದಿಯಿಂದ ಟ್ರಾಕ್ಟರದಲ್ಲಿ ಅಕ್ರಮವಾಗಿ ಮರಳು ತುಂಬಿ ಕೊಂಡು ಮರಳು ಸಾಗಾಣಿಕೆ ಮಾಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ/ಎಸ್/ಐ/ ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸೊನ್ನ ಕ್ರಾಸ ಹತ್ತಿರ ಇದ್ದಾಗ  ನಮ್ಮ ಎದುರಿನಿಂದ ಒಂದು ಟ್ಯಾಕ್ಟರ ಬರುತ್ತಿತ್ತು, ಸದರಿ ಟ್ರಾಕ್ಟರ ಚಾಲಕನು ನಮ್ಮ ಪೊಲೀಸ್  ಜೀಪ ನೋಡಿ ತನ್ನ ಟ್ರಾಕ್ಟರ  ಸ್ಥಳದಲ್ಲಿಯೇ ನಿಲ್ಲಿಸಿ ಓಡಿ ಹೋದನು. ನಂತರ ನಾವು ಪಂಚರ ಸಮಕ್ಷಮ ಸದರಿ ಟ್ಯಾಕ್ಟರ ಹತ್ತಿರ ಹೋಗಿ ಚೆಕ್ ಮಾಡಿ ನೋಡಲು ಸ್ವರಾಜ ಕಂಪನಿಯ ಟ್ಯಾಕ್ಟರ ಇದ್ದು ಅದರ ಟ್ರೈಲಿಯಲ್ಲಿ ಮರಳು ತುಂಬಿದ್ದು ಇತ್ತು ಟ್ರ್ಯಾಕ್ಟರ ನಂಬರ ನೋಡಲಾಗಿ ನೊಂದಣಿ ಸಂಖ್ಯೆ ಸ್ಪಷ್ಟವಾಗಿ ಇರಲಿಲ್ಲ, ಅದರ ಇಂಜಿನ ನಂ 39.1308/99A0619 ಚೆಸ್ಸಿ ನಂ 99A036700609 ಅಂತ ಇರುತ್ತದೆ. ಟ್ರ್ಯಾಕ್ಟರ ಅಂದಾಜು ಕಿಮ್ಮತ್ತು 500000/- ರೂ ಮತ್ತು ಸದರಿ ಟ್ರ್ಯಾಕ್ಟರ ಟ್ರೈಲಿಯಲಿದ್ದ ಮರಳಿನ ಒಟ್ಟು ಅಂದಾಜು ಕಿಮ್ಮತ್ತು 3000/- ರೂ ಆಗಬಹುದು. ಮರಳು ತುಂಬಿದ ಟ್ರ್ಯಾಕ್ಟರನ್ನು ಜಪ್ತಿಮಾಡಿಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ  ನೀಲಕಂಠ ತಂದೆ ಶಾಂತಪ್ಪ ದೋಡಮನಿ ಸಾ: ಗೌರ (ಬಿ) ರವರು ಊರಲ್ಲಿ ಶ್ರೀ ಹುಚ್ಚಲಿಂಗೇಶ್ವರ ದೇವಸ್ಥಾನ ಇರುತ್ತದೆ. ಊರಿನ ಗುರು ಹಿರಿಯರು ಕೂಡಿಕೊಂಡು ಸದರಿ ದೇವಸ್ಥಾನದಲ್ಲಿ ದಿನಾಂಕ 03-03-2019 ರಂದು ಕಳಸಾರೋಹಣ ಹಾಗೂ ಮೂರ್ತಿ ಪ್ರತಿಷ್ಟಾಪನೆ ಮತ್ತು ಸಾಮೋಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಂಡಿದ್ದು ಇರುತ್ತದೆ. ಸದರಿ ಕಾರ್ಯಕ್ರಮಕ್ಕೆ ಸಂಭಂದಿಸಿದ ಪೋಸ್ಟರಗಳನ್ನು ಗ್ರಾಮದಲ್ಲಿ ಹಚ್ಚಿಲಾಗಿದ್ದು ಸುಮಾರು 3-4 ದಿನಗಳಿಂದ ನಮ್ಮೂರಿನ ಪ್ರಕಾಶ ತಂದೆ ಮಹಾದೇವಪ್ಪ ದೋಡ್ಡಮನಿ ಎಂಬಾತನು ಸದರಿ ಪೋಷ್ಟರಗಳನ್ನು ಹರಿದು ಹಾಕುವುದು ಹಾಗೂ ಪೋಸ್ಟರದಲ್ಲಿನ ದೇವರ ಚಿತ್ರಕ್ಕೆ ಮತ್ತು ಗಣ್ಯ ವ್ಯಕ್ತಿಗಳ ಭಾವ ಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ಅವಮಾನ ಮಾಡುತ್ತಿರುತ್ತಾನೆ. ನಿನ್ನೆ ದಿನಾಂಕ 12-12-2018 ರಂದು ರಾತ್ರಿ 8:00 ಗಂಟೆ ಸುಮಾರಿಗೆ ನಾನು ಮತ್ತು ನಮ್ಮೂರಿನವರಾದ 1) ಹುಚ್ಚಪ್ಪ ತಂದೆ ಶಂಕರ ಸಿಂಗೆ 2) ಮಡೇಪ್ಪ ತಂದೆ ದವಲಪ್ಪ ಅಂಗಡಿ 3) ಶಿವರಾಯ ತಂದೆ ಮಲಕಪ್ಪ ವಠಾರ ಇನ್ನಿತರರೂ ಕೂಡಿಕೊಂಡು ಶ್ರೀ ಹುಚ್ಚಲಿಂಗೇಶ್ವರ ದೇವಸ್ಥಾನಕ್ಕೆ ಹೋದಾಗ ದೇವಸ್ಥಾನದಲ್ಲಿ ಪ್ರಕಾಶ ದೋಡ್ಡಮನಿ ಈತನು ಗುಡಿಯಲ್ಲಿ ಹೋಗಿ ಸರಾಯಿ ಕುಡಿಯುತ್ತಾ ಕುಳಿತಿದ್ದಾದ್ದನು, ಆಗ ನಾವು ಸದರಿ ಪ್ರಕಾಶನಿಗೆ ನಾವು ಪೂಜೆ ಮಾಡುವ ಗುಡಿ ಇದು, ನೀನು ಈ ರೀತಿ ಗುಡಿಯಲ್ಲಿ ಸರಾಯಿ ಕುಡಿಯುತ್ತಾ ಕುಳಿತರೆ ಹೇಗೆ ಎಂದು ಕೇಳಿದಾಗ ಬೋಸಡಿ ಮಕ್ಕಳ್ಯಾ ದೇವರ ಗುಡಿ ಇದ್ರ ನಿಮಗ ಇದ್ದರಬೇಕು ನನಗಲ್ಲ ಎಂದು ನಮಗೆ ಕೆಟ್ಟ ಕೆಟ್ಟ ಶಬ್ದಗಳಿಂದ ಬೈದು ಏನ ಮಾಡ್ಕೋತಿರಿ ಮಾಡ್ಕೊರಿ ಎಂದು ಅಲ್ಲೆ ಎದುರುಗಡೆ ಮೂತ್ರ ವಿಸರ್ಜನೆ ಮಾಡಿ ನನಗೆ ಮಗನೆ ನಿಂದೆ ಜಾಸ್ತಿ ನಡದಾದ ನನ್ನ ವಿಷಯಕ್ಕೆ ಬಂದರೆ ನಿನಗ ಜೀವ ಸಹಿತ ಬಿಡುವುದಿಲ್ಲ. ನಿನ್ನಷ್ಟಕ್ಕೆ ನೀನಿರಬೇಕು ಎಂದು ಬೆದರಿಕೆ ಹಾಕಿ ಹೋಗಿರುತ್ತಾನೆ.   ಸದರಿ ಪ್ರಕಾಶ ತಂದೆ ಮಹಾದೇವಪ್ಪ ದೋಡ್ಡಮನಿ ಸಾ|| ಗೌರ (ಬಿ) ಈತನು ನಮ್ಮ ಮತಕ್ಕೆ ಅಪಮಾನ ಮಾಡುವ ಉದ್ದೇಶದಿಂದ ನಮ್ಮ ಪವಿತ್ರ ಸ್ಥಾನವಾದ ಪೂಜಾ ಸ್ಥಳವೆಂದು ಬಾವಿಸಿ ಪೂಜೆ ಪುನಸ್ಕಾರಗಳನ್ನು ಮಾಡುವ ಶ್ರೀ ಹುಚ್ಚಲಿಂಗೇಶ್ವರ ಗುಡಿಯಲ್ಲಿ ಸರಾಯಿ ಕುಡಿದು, ಮೂತ್ರ  ವಿಸರ್ಜನೆ ಮಾಡಿ ನಮ್ಮ ಮತಕ್ಕೆ ಅಪಮಾನ ಮಾಡಿರುತ್ತಾನೆ ಹಾಗೂ ಕೇಳಲು ಹೋದ ನನಗೆ ಮತ್ತು ನನ್ನ ಜೋತೆಗೆ ಇದ್ದ1) ಹುಚ್ಚಪ್ಪ ತಂದೆ ಶಂಕರ ಸಿಂಗೆ 2) ಮಡೇಪ್ಪ ತಂದೆ ದವಲಪ್ಪ ಅಂಗಡಿ 3) ಶಿವರಾಯ ತಂದೆ ಮಲಕಪ್ಪ ವಠಾರ ಎಲ್ಲರಿಗೂ ಅವಾಚ್ಯ ಶಬ್ದಗಳಿಂದ ಬೈದು ನನಗೆ ಜಿವ ಬೆದರಿಕೆ ಹಾಕಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.