POLICE BHAVAN KALABURAGI

POLICE BHAVAN KALABURAGI

16 May 2013

GULBARGA DISTRICT REPORTED CRIME


ಕೊಲೆ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ್ ಠಾಣೆ:ಶ್ರೀಮತಿ, ಸುಶೀಲಬಾಯಿ ಗಂಡ ಬಸವಂತರಾಯ ಬಿಸಗೊಂಡ ವಯಾ||75 ಸಾ||ಪಟ್ಟಣ ತಾ||ಜಿ|| ಗುಲಬರ್ಗಾ ರವರು ನಮ್ಮ ಮಕ್ಕಳಾದ ಸತೀಶಕುಮಾರ ಮತ್ತು ಶಶಿಧರ ಇವರು 10-12 ವರ್ಷಗಳ ಹಿಂದೆ ತಮ್ಮ ಹೆಂಡತಿ ಮಕ್ಕಳೊಂದಿಗೆ ಬೇರೆ ಬೇರೆಯಾಗಿ ವಾಸವಾಗಿರುತ್ತಾರೆ. ನನ್ನ ಗಂಡ ಬಸವಂತರಾಯನ ಹೆಸರಿನಲ್ಲಿದ್ದ 40 ಎಕರೆ ಜಮೀನು ಇದ್ದು, ನಮ್ಮ ಮಕ್ಕಳು ನಮಗೆ ನೋಡಿಕೊಳ್ಳಲಾರದಕ್ಕೆ 4 ಎಕರೆ ಜಮೀನು ನಾವು ಗಂಡ ಹೆಂಡತಿ ಇಟ್ಟುಕೊಂಡು ಹೊಲದಲ್ಲಿಯ ಕೊಂಪಿಯಲ್ಲಿ ವಾಸವಾಗಿರುತ್ತವೆ. ಉಳಿದ 36 ಎಕರೆ ಹೊಲದಲ್ಲಿ ಇಬ್ಬರು ಮಕ್ಕಳಿಗೆ ಸಮನಾಗಿ ತಲಾ 18 ಎಕರೆಯಂತೆ ಅವರಿಗೆ ಪಾಲು ಮಾಡಿ ಕೊಟ್ಟಿರುತ್ತೆವೆ. ಸತೀಶಕುಮಾರ ಇತನು ಕುಡಿತದ ಚಟದವನಾಗಿದ್ದರಿಂದ ಮತ್ತು ಸಾಲ ಮಾಡುತ್ತಾ ಬಂದಿದ್ದರಿಂದ ಅವನ ಪಾಲಿಗೆ ಹೊಲವನ್ನು  ಅವನ ಹೆಸರಿನಿಂದ ಮಾಡಿದರೆ ಮಾರಾಟ ಮಾಡುತ್ತಾನೆ ಅಂತಾ ತಿಳಿದು ಆತನ  ಹೆಸರಿಗೆ ಹೊಲ ನೊಂದಣಿ ಮಾಡಿಸಿರುವುದಿಲ್ಲಾ. ಸತೀಶಕುಮಾರ ಇತನು ತನ್ನ ಪಾಲಿಗೆ ಬಂದ ಹೊಲ ನನ್ನ ಹೆಸರಿಗೆ ಮಾಡಬೇಕು ಅಂತಾ ಹಲವು ಸಲ ಜಗಳಾವಾಡುತ್ತಾ ಬರುತ್ತಿದ್ದನು.ದಿನಾಂಕ 15-05-2013 ರಂದು ಸಾಯಂಕಾಲ 5-00 ಗಂಟೆ ಸುಮಾರಿಗೆ ಹೊಲದಲ್ಲಿಯ ಕೊಂಪಿಯಲ್ಲಿ ವಾಸವಾಗಿರುವ ನನ್ನ ಗಂಡನ ಜೋತೆಗೆ ಜಗಳಾ ತೆಗೆದು ಬಡಿಗೆಯಿಂದ ತಲೆಯ ಮೇಲೆ ಜೋರಾಗಿ ಹೊಡೆದು ಭಾರಿ ರಕ್ತಗಾಯ ಪಡಿಸಿ ಕೊಲೆ ಮಾಡಿರುತ್ತಾನೆ ಅಂತಾ ಸುಶೀಲಬಾಯಿ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:242/2013 ಕಲಂ,302 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.